ಅದೊಂದು ಅವಿಭಕ್ತ ಕುಟುಂಬ. ಊರು ತುಂಬ ತುಂಬಿದ ಸಾಗುವಳಿ ಕುಟುಂಬ. ಊರಿಗೇ ತುಂಬಿದ ಮನೆ. ಮನೆಯ ಮಕ್ಕಳ ಆಧುನಿಕ ರೀತಿ ಕಂಡು ತಾಯಿಯಾದವಳಿಗೆ ಬೊಡಿದು ಹೋಯಿತು. ಒಂದು ಮಾತಿಲ್ಲ, ನಗುವಿಲ್ಲ. ಮಕ್ಕಳಿಗೆ ಮದುವೆಯಾದ ಮೇಲೆ ಓಟ್ಟಿಗೆ ಊಟಕ್ಕೆ ಕೂರುವುದೂ ನಿಂತುಹೋಗಿದೆ. ಅವರವರಿಗೆ ಅವರವರ ಹೆಂಡಿರು, ಮಕ್ಕಳು. ಅಲ್ಲಿಗೆ ಮುಗಿಯಿತು. ಸೊಸೆಯಂದಿರೊ ಒಟ್ಟಿಗೆ ಕುಳಿತು ಅರೆದವರಲ್ಲ- ಗ್ರೈಂಡರ್ ಇದೆ. ಒಟ್ಟಿಗೆ ನಿಂತು ಒಗೆದವರಲ್ಲ- ಮೆಷಿನ್ ಇದೆ. ಬಾವಿಕಟ್ಟೆಯಲ್ಲಿ ಸೇರಿದವರಲ್ಲ- ಮೋಟರ್ ಇದೆ. ಗಂಡುಮಕ್ಕಳು ಅಲ್ಲಿರಲಿ, ಸೊಸೆಯಂದಿರ ಈ ರೀತಿ ಅತ್ತೆಗೆ ಸಹಿಸಲಾಗಲಿಲ್ಲ. ಮೊದಮೊದಲು ಟಿವಿ ನೋಡಲು ನಡುಕೋಣೆಗೆ ಬರುತ್ತಿದ್ದರು. ಈಗ ಪ್ರತಿ ಕೋಣೆಗೂ ಟಿವಿ ಬಂದಿದೆ.
ಆಕೆ ಒಂದು ಉಪಾಯ ಹುಡುಕಿದಳು.
ಒಂದು ದಿನ ಸೀದಾ ನಾಲ್ಕು ಮನೆಯಾಚೆಯ ದೇವಿ ಮನೆಗೆ ನಡೆದಳು. ಮಕ್ಕಳ ತಲೆಯಿಂದ ಹೇನು ಹೆಕ್ಕಿ ತೆಗೆದಳು. ರಾತ್ರಿ ಸೊಸೆಯಂದಿರ ತಲೆಗೆ ಹಂಚಿ ಹಾಕಿದಳು. ಮರುದಿನ ಬೆಳಗ್ಗೆ ವಾತಾವರಣವೇ ಬದಲಾಯಿತು. ಒಬ್ಬಳು ತಲೆ ತುರಿಸುತ್ತಾ ಆಚೆ ಓಡುತ್ತಿದ್ದರೆ, ಇನ್ನೊಬ್ಬಳು ಈಚೆಗೆ. ಒಬ್ಬಳು ಅಕ್ಕಾ ಹೇನು ಹೇನು ಅಂತಾ ಓಡುತ್ತಿದ್ದರೆ, ಇನ್ನೊಬ್ಬಳು ತಂಗೀ ಬಾಚಣಿಗೆ ಬಾಚಣಿಗೆ ಅಂತಾ ಓಡುತ್ತಿದ್ದಾಳೆ.
ಹಾಗೆ ಆ ಮನೆಗೆ ಸದ್ದು ಗದ್ದಲ ಬಂತು.
ಜುಲೈ 09, 2008 @ 12:24:36
“ಅಂತು-ಇಂತು ಹೇನಿಂದ ಮನೆಯಲ್ಲಿ ಸದ್ದು ಗದ್ದಲ ಬಂತು.” ಚೆನ್ನಾಗಿದೆ. ಮನುಷ್ಯ ಸಂಬಂಧಗಳು ಯಾವತ್ತೂ ಗಲ ಗಲ ಅಂತ ಸದ್ದು ಮಾಡುತ್ತಲೇ ಇರಬೇಕು.
ಆಕ್ಟೋ 19, 2007 @ 10:18:26
ಚಿಕ್ಕ ನಿರೂಪಣೆಯಲ್ಲೆ ಹೇನು ಕಥೆಯನ್ನು ಸೊಗಸಾಗಿ ಚಿತ್ರಿಸಿದ ಭಾಟಿಯಾ ಅವರ ಶೈಲಿ ಮೆಚ್ಚುವಂತಾದ್ದು.
ನಾಗೇಂದ್ರ ತ್ರಾಸಿ
ಚೆನ್ನೈ-14
ಆಕ್ಟೋ 18, 2007 @ 18:11:42
ತುಂಬಾಚೆನ್ನಾಗಿದೆ. ಇನ್ನೂ ಪೂರ್ತಿ ಓದಕ್ಕೆ ಆಗಿಲ್ಲ. ನಿಮಗೆ ಗೊತ್ತಲ್ಲ. ನನ್ನ ಹೆಸರು, ವೆಂಕಟೇಶ್, ಅಂತ- ’ಸಂಪದ,’ದಲ್ಲಿ ಹಗಲೆಲ್ಲ ಗೀಚೊ ಅಭ್ಯಾಸ- ಅಥವಾ ಹುಚ್ಚು ಅನ್ನಿ.
ವೆಂಕಟೇಶ್
ಮುಂಬೈ-೮೪
ದೂರಧ್ವನಿ : ೨೫೧೦೬೦೬೮
ಆಕ್ಟೋ 15, 2007 @ 19:11:42
🙂
ಆಕ್ಟೋ 15, 2007 @ 11:35:07
very nice
ಆಕ್ಟೋ 14, 2007 @ 17:05:09
HENU – Shashi Bhatiya putta kTe odi khushiyaytu. ondu sanna vichara, kthe roopa padedide. Kathegara Divakar avar sanna katheglannu idu nenpisuttade.
Thanks
Ganadhalu Srikanta