ವೈದೇಹಿ ಯಾಕೆ ಆಪ್ತರಾಗುತ್ತಾರೆ..?
ಭಾನುವಾರ ಸಂಜೆ ೫-೩೦ ಕ್ಕೆ ವೈದೇಹಿ ಲೋಕಕ್ಕೆ ಭೇಟಿ ಕೊಡುವ ಕಾರ್ಯಕ್ರಮವಿದೆ. ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಜರುಗುವ ಕಾರ್ಯಕ್ರಮದಲ್ಲಿ ವೈದೇಹಿ ಜೊತೆ ಸಂವಾದವೂ ಇದೆ.
ಈ ನೆಪದಲ್ಲಿ ವೈದೇಹಿ ಯಾಕೆ ಆಪ್ತರಾಗುತ್ತಾರೆ ಎಂದು ಒರೆಗೆ ಹಚ್ಚುವ ಲೇಖನ ಇಲ್ಲಿದೆ.
ವೈದೇಹಿ ಕಥೆಗಳನ್ನು ಇಂಗ್ಲಿಷ್ ಅಂಗಳಕ್ಕೆ ನಡೆಸಿಕೊಂಡು ಹೋಗಿರುವ ಬಾಗೇಶ್ರೀ ಬರೆದಿದ್ದಾರೆ. ಓದಿ-
ವೈದೇಹಿಗೆ ಪ್ರಶಸ್ತಿ ಸಿಕ್ಕ ಸುದ್ದಿ ಕೇಳಿ ತುಂಬಾ ಖುಶಿ. ಅವರು ನಮ್ಮೂರವರು ಅಂತ ಸ್ವಲ್ಪ extra ಖುಶಿ. ಅವರ best ಕಥೆಗಳಲ್ಲಿ ಗಾಢವಾಗಿರುವುದು ದ.ಕ.ದ ಮಣ್ಣಿನ ವಾಸನೆಯೇ ಆದರೂ ಅವರು ಸುಮಾರು ವರ್ಷ ಶಿವಮೊಗ್ಗದಲ್ಲಿ ಇದ್ದದ್ದರಿಂದ ನಮ್ಮೂರವರು ಅಂತಲೂ ಅಂದುಕೊಂಡರೆ factually incorrect ಅಂತೂ ಅಲ್ಲ. (ಈಗ ನಾವು ಸುನಿತಾ ವಿಲಿಯಮ್ಸ್ ನಮ್ಮ ದೇಶದವಳು ಅಂತ ಜಂಬ ಪಟ್ಟುಕೊಳ್ಳುವುದಿಲ್ಲವಾ, ಹಾಗೆ!)
ಮುಂಚಿನಿಂದಲೂ ವೈದೇಹಿ ಕತೆಗಳ ಬಗ್ಗೆ ನನಗೆ ವಿಶೇಷ ಆಕರ್ಷಣೆ. ಮ್ಯಾಗಜೀನುಗಳ ದೀಪಾವಳಿ, ಯುಗಾದಿ ವಿಶೇಷಾಂಕಗಳಲ್ಲಿ, ಲಂಕೇಶ್ ಪತ್ರಿಕೆಯಲ್ಲಿ ಪ್ರಕಟ ಆಗುತ್ತಿದ್ದ ಕತೆಗಳನ್ನು ಕಾದು ಓದುತ್ತಿದ್ದೆ. ಪ್ರತಿ ಓದುಗನಿ/ಳಿಗೂ ಇಷ್ಟ ಅನ್ನಿಸುವ ಹತ್ತಿಪ್ಪತ್ತು ಬರಹಗಾರರಿರಬಹುದು. ಆದರೆ ತುಂಬ ಆಪ್ತ ಅನ್ನಿಸುವ, ಮನಸ್ಸನ್ನು ತಟ್ಟುವ ಅಥವಾ ‘ವಾವ್’ ಅನ್ನಿಸಿ ಮೈ ನಿಮಿರೇಳಿಸುವ ಬರಹಗಾರರು ಕೆಲವರೇ. ನನ್ನ ಮಟ್ಟಿಗೆ ವೈದೇಹಿ ಆಪ್ತ ಅನ್ನಿಸುವ categoryಗೆ ಸೇರಿದವರು. ನೆರುಡಾನ “I want to do with you what spring does with the cherry trees” ಥರದ ಸಾಲುಗಳು, ಜಯಂತ್ ಕಾಯ್ಕಿಣಿಯ ಗದ್ಯದ ಕೆಲ ಪದ್ಯದಂತ turns of phrase, ದೇವನೂರರ magical ಅನ್ನಿಸುವ ಭಾಷೆಯ ಓಘ ‘ವಾವ್’ ಅನ್ನಿಸುವ categoryಯವು.
ಹೀಗೆ ಕೆಲವರು ಮಾತ್ರ ಯಾಕೆ ಆಪ್ತ ಆಗುತ್ತಾರೆ ಅಥವ ಯಾಕೆ ನಮ್ಮಲ್ಲಿ ‘ವಾವ್’ ಅನ್ನುವ ಉದ್ಗಾರ ಹುಟ್ಟಿಸುತ್ತಾರೆ? ಈ ಬಗೆಯ ಜಿಜ್ನಾಸೆಯೇ ಒಂದು ಅರ್ಥದಲ್ಲಿ ಆಪ್ತತೆ ಅನ್ನುವ conceptಗೆ, ಮೈ ನಿಮಿರೇಳುವ ಅನುಭವಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ಹೊರಡುವ ಪಯಣ ಅನ್ನಿಸಬಹುದು. ಆದರೆ “ಇಷ್ಟ “, “ಆಪ್ತ” ಹೀಗೆ ಸುಮ್ಮ ಸುಮ್ಮನೆ ಒಂದೊಂದು ಪದಗಳನ್ನು ಹಾಗೆ ಒಗೆದು ಸುಮ್ಮನಿದ್ದುಬಿಡುವುದು ಪದ್ಯ, ಗದ್ಯ ಯಾವುದನ್ನೂ ಬಗೆವ ಬಗೆಯೇ ಅಲ್ಲ ಅಂತ ಮೊದಲ ಸಾಹಿತ್ಯದ ಪಾಠ ಹೇಳಿಕೊಟ್ಟ ನಮ್ಮ ಮನು ಚಕ್ರವರ್ತಿ ಮೇಷ್ಟ್ರನ್ನು ನೆನೆದು ವೈದೇಹಿ ಯಾಕೆ ನನಗೆ ಆಪ್ತ ಅನ್ನುವ ಪ್ರಶ್ನೆಯನ್ನು ಬಹಳ belated ಆಗಿ ಕೇಳಿಕೊಳ್ಳುತ್ತಿದ್ದೇನೆ.
ಪೂರ್ಣ ಓದಿಗೆ : ಬಾಗೇಶ್ರೀ
Read Full Post | Make a Comment ( None so far )
ಅಂತೂ ಇಂತೂ..ಉತ್ತರ ಬಂತು
ಈ ಬಾರಿ ಸಾಕಷ್ಟು ಉತ್ತರಗಳು ಬಂತು. ಒಂದು ರೀತಿಯಲ್ಲಿ ಹಗ್ಗ ಜಗ್ಗಾಟವೇ ಆಯಿತು.
ಆದರೂ ಗೊಂದಲ, ಗೊಂದಲ..
ಹೋಗ್ಲಿ ಬಿಡಿ . ನಿಮಗಂತೂ ಡಿಸೈಡ್ ಮಾಡ್ಲಿಕ್ಕೆ ಆಗಲಿಲ್ಲ.
ಇವರು ಖಂಡಿತಾ ಕೆ ಎಸ್ ಅಶ್ವಥ್ ಅಲ್ಲ.
ಇವರು ‘ಜೋಗದ ಸಿರಿ ಬೆಳಕಿನ’ ಕವಿ ಕೆ ಎಸ್ ನಿಸಾರ್ ಅಹ್ಮದ್
ಮೊದಲು ಸರಿ ಉತ್ತರ ಕೊಟ್ಟವರು ರಾಘವೇಂದ್ರ ಮಹಾಬಲೇಶ್ವರ
ನಂತರ ದೆಹಲಿಯಿಂದ ಡಿ ಪಿ ಸತೀಶ್, ಆ ನಂತರ ರವೀಂದ್ರ ಮಾವಖಂಡ
ಮೊದಲು ಸರಿ ಉತ್ತರ ನೀಡಿದ ರಾಘವೇಂದ್ರ ಅವರಿಗೆ ಅವಧಿ ವತಿಯಿಂದ ಬಹುಮಾನವಿದೆ. ವಿಳಾಸ ಕಳಿಸಿದಲ್ಲಿ ಬಹುಮಾನ ನಿಮ್ಮನ್ನು ಮುಟ್ಟಲಿದೆ.
Read Full Post | Make a Comment ( 39 so far )
‘ಓದುಬಜಾರ್’ ನಲ್ಲಿ ಓದಲೇಬೇಕಾದ್ದು..
Read Full Post | Make a Comment ( None so far )
ಮಣಿಕಾಂತ್ ಬರೆದಿದ್ದಾರೆ: ಈ ಹಾಡಿನ ಮಹತ್ವವನ್ನು ಇನ್ನೂ ವಿವರಿಸಬೇಕೆ
ನಿಷ್ಠುರ ಸತ್ಯ ಹೇಳುವ ಈ ಹಾಡಿನಲ್ಲಿ ನಮ್ಮೆಲ್ಲರ ದನಿಯೂ ಇದೆ !
ಚಿತ್ರ: ಗಜೇಂದ್ರ. ಗೀತೆರಚನೆ: ಚಿ. ಉದಯಶಂಕರ್
ಸಂಗೀತ: ಜಿ.ಕೆ. ವೆಂಕಟೇಶ್ ಗಾಯನ : ಎಸ್.ಪಿ.ಬಿ
ರಾಮಕೃಷ್ಣ ಗಾಂಧಿ ಬುದ್ಧ
ಹುಟ್ಟಿದಂಥ ದೇಶವೆಂದು ಸಂತೋಷದಿ ಹೇಳುವೆ
ಬಾಯಲ್ಲಿ ರಾಮನಾಮ ನಂಬಿದಾಗ ಪಂಗನಾಮ
ಹಾಕುತ್ತ ನೀ ಬಾಳುವೆ
ನ್ಯಾಯವು ಎಲ್ಲಿದೆ ಧರ್ಮವು ಎಲ್ಲಿದೆ? ||ಪ||
ಅಕ್ಕಿ ಇಲ್ಲ ಬೇಳೆ ಇಲ್ಲ ಎಣ್ಣೆ ಇಲ್ಲ ಬೆಣ್ಣೆ ಇಲ್ಲ
ನೀ ಏನೇ ಬೇಕೆಂದರೂ ಸಿಕ್ಕೋದಿಲ್ಲ ಅಂತಾರಲ್ಲ
ಜನರ ಕಷ್ಟ ಕೇಳೋರಿಲ್ಲ ಸ್ವಾತಂತ್ರ್ಯ ಬಂದಾದರೂ
ಕಾರಣ ಬಲ್ಲೆಯ ಹೇಳಲೆ ನಾನು ||ಅ.ಪ||
ಹಣವನ್ನು ಗುಡ್ಡೆ ಹಾಕಿ ಹಣವನ್ನು ಬೆಳೆಸೋರ
ಗುಂಪೊಂದು ನಮ್ಮಲ್ಲಿದೇ
ಬೆಳೆದಿದ್ದ ದೋಚಿಕೊಂಡು ಬೆಲೆ ಏರೋ ಹಾಗೆ ಮಾಡೋ
ಚಂಡಾಲ ಬುದ್ಧಿ ಇದೇ
ಹಸಿದವರಲ್ಲಿ ಕನಿಕರವಿಲ್ಲ, ಮಾನವ ಹೃದಯ ಅವರಲಿ ಇಲ್ಲ
ಇವರನ್ನು ಮುಗಿಸೋತನಕ
ಈ ಅನ್ನದ ಕೂಗು ನಿಲ್ಲದು ||1||
ಆಳೋರು ಯಾರೇ ಇರಲಿ ಹೇಳೋರು ಯಾರೇ ಬರಲಿ
ಈ ಕಷ್ಟ ಕೊನೆಯಾಗದು
ಹಸಿದೋರ ಹೊಟ್ಟೆ ಬೆಂಕಿ ಉರಿಯಾಗಿ ನುಗ್ಗೋತನಕ
ಕಣ್ಣೀರ ಹನಿ ಇಂಗದು
ಸ್ವಾರ್ಥಿಗಳನ್ನು ದ್ರೋಹಿಗಳನ್ನು
ಬಡವರ ಹಿಂಡಿ ದೋಚೋರನ್ನು
ಗುಂಡಿಟ್ಟು ಕೊಲ್ಲೋತನಕ ಈ ದೇಶ ಉದ್ಧಾರವಾಗದು ||2||
ಆಕ್ಷನ್, ಥ್ರಿಲ್ಲರ್ನ ಎಳೆ ಹೊಂದಿದ ಕಥೆಗೆ ಸೆಂಟಿಮೆಂಟ್ನ ಸ್ಪರ್ಶ ನೀಡಿ ಒಂದರ ಹಿಂದೊಂದು ಹಿಟ್ ಸಿನಿಮಾ ನೀಡಿದವರು ನಿರ್ದೇಶಕ ವಿ. ಸೋಮಶೇಖರ್. ಶಂಕರ್ ಗುರು, ಪ್ರೇಮದ ಕಾಣಿಕೆ, ಬಹದ್ದೂರ್ ಗಂಡು, ಹಾವಿನ ಹೆಡೆ, ಚಂಡಿಚಾಮುಂಡಿ, ಬೇಟೆ, ಪರಶುರಾಮ್…. ಈ ಎಲ್ಲ ಚಿತ್ರಗಳ ಹಿಂದಿದ್ದವರು ವಿ. ಶೋಮಶೇಖರ್. 80 ಹಾಗೂ 90ರ ದಶಕದಲ್ಲಿ ಸೋಮಶೇಖರ್ ನಿರ್ದೇಶನದ ಚಿತ್ರಗಳು ಎಂದರೆ ಭರ್ತಿ ಮನರಂಜನೆಯ ಸಿನಿಮಾಗಳೆಂದೇ ಹೆಸರು ಮಾಡಿದ್ದವು. ಒಂದು ಸಿನಿಮಾ ಅಂದಮೇಲೆ ಒಂದಿಷ್ಟು ಪಾಲಿಟಿಕ್ಸ್, ನಾಲ್ಕು ಫೈಟು, ನಾಲ್ಕು ಹಾಡು, ಒಂದೆರಡು ಕೊಲೆ, ಮಧ್ಯೆ ಮಧ್ಯೆ ಹಾಸ್ಯ, ಖಳನಾಯಕರ ಅಟ್ಟಹಾಸ, ನಾಯಕನ ಮೆರೆದಾಟ, ಪೋಷಕ ನಟರ ಪಾತ್ರಗಳ ಪರದಾಟ… ಈ ಎಲ್ಲ ಅಂಶಗಳೂ ಸೋಮಶೇಖರ್ ಅವರ ಸಿನಿಮಾಗಳಲ್ಲಿ ಇರುತ್ತಿದ್ದವು.
ಒಂದು ವಿಶೇಷವೆಂದರೆ, ಡಿಶುಂಡಿಶುಂ ಚಿತ್ರಗಳ ನಿರ್ದೇಶಕರಾಗಿದ್ದರೂ ಕೂಡ ಸೋಮಶೇಖರ್ ಅವರು ಎಂದಿಗೂ ಹೀರೋಗಾಗಿ ಕಥೆ ಮಾಡಲಿಲ್ಲ. ಬದಲಿಗೆ ತಮ್ಮ ಕಥೆಗಳಿಗೆ ಹೊಂದುವಂಥ ಹೀರೋಗಳನ್ನು ಹಾಕಿಕೊಂಡರು. ಚಿತ್ರದಲ್ಲಿ ನಾಯಕ ಸ್ವಲ್ಪ ಒರಟೊರಟು ಮಾತಿನ, ಬಿಡುಬೀಸು ಸ್ವಭಾವದವನಾಗಿದ್ದರೆ ಅಂಥ ಪಾತ್ರಗಳು ಅಂಬರೀಷ್ ಅವರಿಗೇ ಮೀಸಲಾಗಿರುತ್ತಿದ್ದವು. ಅಂಬರೀಷ್ ಆ ದಿನಗಳಲ್ಲಿ ರೆಬಲ್ ಸ್ಟಾರ್ ಎಂದು ಹೆಸರಾಗಿದ್ದುದರಿಂದ ಬೆಂಕಿ ಚೆಂಡಿನಂಥ ಮಾತಿನ ಪಾತ್ರಗಳು ಅವರಿಗೆ ಖಡಕ್ಕಾಗಿ ಹೊಂದಿಕೆಯಾಗುತ್ತಿದ್ದವು. ಹೀರೋ ಪತ್ತೆದಾರಿ ಸ್ವಭಾವದವನೂ, ಖಳನಟರೊಂದಿಗೆ ಹೋರಾಡುವಾಗ ಕರಾಟೆ ತೆಗೆಯುವವನೂ ಆಗಿದ್ದರೆ ಅಂಥ ಪಾತ್ರಗಳು ಶಂಕರ್ ನಾಗ್ ಮಡಿಲಿಗೆ ಬಂದು ಬೀಳುತ್ತಿದ್ದವು. ಹಾಗೆಯೇ ಹೀರೋ ಒಂಥರಾ ಫ್ಯಾಂಟಮ್ ಇದ್ದ ಹಾಗೆ. ಆತ ಹತ್ತು ಮಂದಿ ಖಳನಾಯಕರನ್ನೂ ಒಂದೊಂದೇ ಏಟಿಗೆ ಹೊಡೆದು ಬಿಸಾಕುತ್ತಾನೆ ಎಂಬಂಥ ಪಾತ್ರವಾದರೆ ಆಗ ಪ್ರಭಾಕರ್ ಅವರನ್ನೇ ಕರೆಯುತ್ತಿದ್ದರು ಸೋಮಶೇಖರ್. ಒಂದು ಸಂತೋಷವೆಂದರೆ ಈ ಎಲ್ಲ ಡಿಶುಂಡಿಶುಂ ಕಥೆಯ ಮಧ್ಯೆಯೂ ಚಿತ್ರದಲ್ಲಿ ಮಧುರ ಹಾಡುಗಳಿರುವಂತೆ ಅವರು ಎಚ್ಚರ ವಹಿಸುತ್ತಿದ್ದರು.
Read Full Post | Make a Comment ( None so far )
‘ನುಡಿನಮನ’- ಈ ದಿನದ ಬಿಸಿ ಬಿಸಿ
ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ‘ಅವಧಿ’ ಮತ್ತು ‘ಆಲೆಮನೆ’
ಜಂಟಿಯಾಗಿ ರೂಪಿಸಿರುವ ‘ನುಡಿನಮನ’ದ ಈ ದಿನದ ಸ್ಪೆಷಲ್-
ಶಶಿಧರ್ ಭಟ್ – ಕನ್ನಡ ಪತ್ರಿಕೋದ್ಯಮದ ಹಿರಿ ತಲೆ. ಸುವರ್ಣ ನ್ಯೂಸ್ ನಲ್ಲಿದ್ದು ಈಗ ಜುಪಿಟರ್ ನೆಟ್ ವರ್ಕ್ ನಲ್ಲಿದ್ದಾರೆ.
ಅವರ ಅನುಭವ ಅಪಾರ. 80 ರ ದಶಕದಿಂದೀಚೆಗಿನ ಸಾಹಿತ್ಯ ಸಮ್ಮೇಳನಗಳ ಹಿನ್ನಲೆಯಲ್ಲಿ
ಅವರು ಸಾಹಿತ್ಯ ಮತ್ತು ರಾಜಕೀಯದ ಸೂಕ್ಷ್ಮ ಸಂಬಂಧದ ಕುರಿತು ಮನೋಜ್ಞವಾಗಿ ಚರ್ಚಿಸಿದ್ದಾರೆ.
ಕೊನೆಯದಾಗಿ ಇನ್ನೊಂದು ಮಾತು; ಅದು ಹಾಸನ ಸಾಹಿತ್ಯ ಸಮ್ಮೇಳನದ ಸಂದರ್ಭ. ಅಲ್ಲಿ ಬಹುತೇಕ ಮಠಾಧಿಪತಿಗಳೇ ವೇದಿಕಯ ಮೇಲೆ ವಿರಾಜಮಾನರಾಗಿದ್ದರು. ಅವರು ನಡುವೆ ಸಿಕ್ಕಿಕೊಂಡ ಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲರು. ಅವರು ವೇದಿಕೆಯಿಂದ ಕೆಳಕ್ಕೆ ಇಳಿದು ಬಂದ ಮೇಲೆ ಮಠಾಧಿಪತಿಗಳ ಸಾಂಗತ್ಯ ಹೇಗಿತ್ತು? ಎಂದು ಅವರನ್ನು ವ್ಯಂಗ್ಯವಾಗಿ ಪ್ರಶ್ನಿಸಿದೆ. ಅವರು ಸುಮ್ಮನೆ ನಕ್ಕರು.
ಈ ಸಾಹಿತ್ಯ ಸಮ್ಮೇಳನ ಮಠ ಮಾನ್ಯಗಳನ್ನು ವಿರೋಧಿಸುತ್ತಲೇ ಬಂದ ಪಾಟೀಲರನ್ನು ಮಠಾಧಿಪತಿಗಳ ಹತ್ತಿರ ತಂದಿತ್ತು ! ಇಂದಿನ ಸಾಹಿತ್ಯ ಜಾತ್ರೆ ಎಂತಹ ಕೆಲಸ ಮಾಡುತ್ತದೆ ಎಂಬುದಕ್ಕೆ ಇದೊಂದು ನೈಜ ಉದಾಹರಣೆ ಎಂದು ನಾನು ಅಂದುಕೊಂಡಿದ್ದೇನೆ.
ಪೂರ್ಣ ಓದಿಗೆ - ನುಡಿನಮನ
Read Full Post | Make a Comment ( None so far )
ಎಚ್ ಎಸ್ ವಿ ಹಬ್ಬ
Read Full Post | Make a Comment ( None so far )
ಕಡಮೆಯವರ ಕಥೆ ಮತ್ತು ಪತ್ರೊಡೆ …
ಇದ್ದಕ್ಕಿದ್ದಂತೆ ಪತ್ರೊಡೆ ತಿನ್ನಬೇಕು ಅನ್ನಿಸಿತು … ಘಟ್ಟದ ಕಡೆಯೋರು ಪತ್ರೊಡೆ ಸಕತ್ತಾಗಿ ಮಾಡ್ತಾರೆ ಅಂತ ಕೇಳಿದ್ದೆ ..ನನ್ನ ಗೆಳತಿಯೊಬ್ಬಳಿಗೆ ಫೋನ್ ಮಾಡಿ ಪತ್ರೊಡೆ ಬೇಕು ಕಣೆ ಅಂದೇ …ಆದ್ರೆ ನನಗೆ ಗೊತ್ತಿರಲಿಲ್ಲ ಅದಕ್ಕೆ ಕೆಸುವಿನ ಎಲೆ ಬೇಕು ಅಂತ .. ಅದು ಮಳೆಗಾಲದಲ್ಲಿ ಮಾತ್ರ ಸಿಗುವಂತದ್ದು..!!ಇದ್ದಕ್ಕಿದ್ದ ಹಾಗೆ ನನಗೆ ಪತ್ರೊಡೆಯ ನೆನಪಾಗಲಿಕ್ಕೆ ಕಾರಣವು ಇದೆ .
ನಿಜ ಅದಕ್ಕೆ ಕಾರಣ ಸುನಂದಾ ಕಡಮೆ …ಅವರ ಗಾಂದಿ ಚಿತ್ರದ ನೋಟುಗಳು ಎಬ ಕಥಾ ಸಂಕಲನದಲ್ಲಿರುವ 13 ಕಥೆಗಳಲ್ಲಿ ಪತ್ರೊಡೆ ಎಂಬ ಕಥೆ ಮೊದಲಿಗೆನೆ ಕಾಣಿಸುತ್ತದೆ . ಶಾಲಿನಿ ,ಮತ್ತು ಯಮುನಜ್ಜಿ ಪಾತ್ರಗಳು ಗಮನ ಸೆಳೆಯುವಂತಿದೆ … ಎಂದೋ ತೀರಿ ಹೋದ ಯಮುನಜ್ಜಿ ಅಕ್ಕ ಗಂಗಜ್ಜಿಯ ಇಷ್ಟದ ತಿನಿಸಾದ ಪತ್ರೊಡೆಯನ್ನ ಆಕೆಯ ಶ್ರಾದ್ದದ ದಿನವಾದ ಅಂದು ಮಾಡಿ ಬಡಿಸ ಬೇಕು ಎಂಬ ಆಸೆ ಯಮುನಜ್ಜಿಗೆ ….. ಒಟ್ಟಿನಲ್ಲಿ ಶಾಲಿನಿಯ ಗೊಣಗಾಟದ ನಡುವೆಯೇ ಪತ್ರೊಡೆ ಮಾಡಿ ಪಿಂಡಕ್ಕೆ ಬಡಿಸುತ್ತಾಳೆ, ನಂತರ ಸೊಸೆ ಮಾಡಿದ ಪತ್ರೊಡೆ ರುಚಿಗೆ ಮನಸೋತು ಗಬ ಗಬನೆ ತಿನ್ನುವ ಯಮುನಜ್ಜಿ ಕಾ ಕಾ ಎನ್ನುವ ಕಾಗೆಯನ್ನ ಎಡ ಕೈನಿಂದ ಹಚ ಹಚ ಎಂದು ಓಡಿಸುತ್ತ ಪತ್ರೊಡೆಯ ಒಗರು ಒಗರು ರುಚಿಗೆ ಮರುಳಾಗಿ ಅದನ್ನ ತಿನ್ನೋದು …
ಕಥೆಯ ಬಗ್ಗೆ ಇನ್ನೊಮ್ಮೆ ಮಾತಾಡೋಣ ..ನಂಗೆ ಈ ಕಥೆ ಓದಿ ಮುಗಿಸಿದ ಮೇಲೆ ಪತ್ರೊಡೆ ತಿನ್ನ ಬೇಕು ಅಂತ ಆಸೆಯಾಗ್ತಾ ಇದೆ ..ಅಂದ ಹಾಗೆ ಅದೇ ಸಂಕಲನದಲ್ಲಿ ಇನ್ನು ಹಲವಾರು ಚಂದದ ಕಥೆಗಳಿವೆ ಅದು ಕಡಮೆಯವರ ೨ನೆ ಕಥಾ ಸಂಕಲನ ಪ್ರಥಮ ಮುದ್ರಣ ೨೦೦೮ ರಲ್ಲಾಗಿದೆ ಸಿಕ್ಕರೆ ಅಕ್ಕರೆಯಿಂದ ಕೈಗೆತ್ತಿಕೊಳ್ಳಿ
Read Full Post | Make a Comment ( None so far )
ಅವರು ಸಂಪಿಗೆಯ ಶ್ರೀಕಂಠಯ್ಯ
ಮೂರ್ತಿ ಪೂಜೆ- ೨
ಪೂಜಾರಿಗಳು ಎಂಬ ಹೆಸರು ಹೊತ್ತ ಮೇಲ್ ಒಂದು ‘ಅವಧಿ’ ಇನ್ ಬಾಕ್ಸ್ ಗೆ ಬಂದು ಬಿದ್ದಾಗ ಆಶ್ಚರ್ಯವಾಯಿತು. ನಾವು ಮೂರ್ತಿ ಪೂಜೆ ಮಾಡಲು ಸಜ್ಜಾಗಿರುವ ಪೂಜಾರಿಗಳು ಎಂದು ಅದರಲ್ಲಿ ಘೋಷಿಸಲಾಗಿತ್ತು. ಮತ್ತೆ ತಡಕಾಡಿ ನೋಡಿದರೆ ಅರೆ..! ಇವರು ನಮ್ಮ ಗುರು ಮತ್ತು ದತ್ತು.
ಇಂದಿನಿಂದ ಪ್ರತೀ ಸೋಮವಾರ ಮೂರ್ತಿ ಪೂಜೆ ಕಾಣಿಸಿಕೊಳ್ಳುತ್ತದೆ. ನಾರಾಯಾಣ ಮೂರ್ತಿ , ವಿಪ್ರೋ ಮೂರ್ತಿಗಳನ್ನೇ ಆದರ್ಶವಾಗಿಸಿಕೊಂಡುಬಿಟ್ಟಿರುವ ಈ ದಿನಗಳಲ್ಲಿ ಗುರು ಮತ್ತು ದತ್ತು ನಾವು ನೆನಪಿಡಬೇಕಾದವರನ್ನು ಇಲ್ಲಿ ನೆನಪಿಸಿಕೊಡಲಿದ್ದಾರೆ.
ಇನ್ನೂ ಹೆಚ್ಚಿಗೆ ಬೇಕಾದಲ್ಲಿ ಭೇಟಿ ಕೊಡಿ- ಮೂರ್ತಿ ಪೂಜೆ
(ಮೂರ್ತಿ ಇರುವ ಸ್ಥಳ: ನ್ಯಾಷನಲ್ ಕಾಲೇಜು ವೃತ್ತ, ಬಸವನಗುಡಿ, ಬೆಂಗಳೂರು)
ಶ್ರೀಯವರು ಹುಟ್ಟಿದ್ದು, ೧೮೮೧ ನೆ ಇಸವಿಯ ಜನೇವರಿ ಮೂರರಂದು ಮಂಡ್ಯ ಜಿಲ್ಲೆಯ ನಾಗಮಂಡಲ ತಾಲ್ಲೂಕಿನ ಸಂಪಿಗೆ ಎಂಬ ಹಳ್ಳಿಯಲ್ಲಿ. ಹೌದು ಇಂದು ಅವರ ಜನುಮದಿನ. ಅವರ ತಂದೆ ಮೈಲಾರಯ್ಯನವರು, ತಾಯಿ ಭಾಗೀರಥಮ್ಮ. ಶ್ರೀಯವರು ಬಾಲ್ಯದ ಶಿಕ್ಷಣವನ್ನು ಶ್ರೀರಂಗಪಟ್ಟಣ ಮತ್ತು ಮೈಸೂರಿನಲ್ಲಿ, ತಮ್ಮ ಬಿ. ಎ. ಡಿಗ್ರಿಯನ್ನು ಬೆಂಗಳೂರಿನಲ್ಲಿ ಮುಗಿಸಿ, ಎಮ್. ಎ. ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಮಾಡಿದರು. ತಮ್ಮ ೨೫ ನೆಯ ವಯಸ್ಸಿನಲ್ಲಿ ಮಹಾರಾಜ ಕಾಲೇಜ್ ನಲ್ಲಿ ಉಪನ್ಯಾಸಕರಾಗಿ ನೇಮಕಗೊಂಡರು. ಅವರಿಗೆ ೧೯೩೦ ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ವರ್ಗವಾಯಿತು. ಮುಂದೆ ಅವರು ಮೈಸೂರ್ ವಿಶ್ವವಿದ್ಯಾನಿಲಯದಲ್ಲಿ ಕನ್ನಡವಿಭಾಗದ ಗೌರವ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದರು. ೧೯೪೪ ರಲ್ಲಿ ಧಾರವಾಡದ ಕೆ.ಇ. ಬೋರ್ಡ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಕೆಲಸಮಾಡಿದರು. ಅದೇ ಸಂಸ್ಥೆ ನಡೆಸಿಕೊಂಡು ಬರುತ್ತಿರುವ ವಿದ್ಯಾರಣ್ಯ ಆರ್ಟ್ಸ್ ಕಾಲೇಜಿನ ಪ್ರಾಂಶುಪಾಲರಾಗಿ ಸೇರಿದ ಅವರು ತಮ್ಮ ಕೊನೆಯತನಕ ಅಲ್ಲೇ ಸೇವಾನಿರತರಾಗಿ ಅಲ್ಲಿಯೇ ನಿಧನರಾದರು.
ಸುಮಾರು ೭ ದಶಕಗಳ ಹಿಂದೆ ಕನ್ನಡದ ಸ್ಥಿತಿ ಬಹಳ ಶೋಚನೀಯವಾಗಿತ್ತು. ಅಂತಹ ಕಾಲದಲ್ಲಿ ಒಬ್ಬ ಇಂಗ್ಲೀಷ್ ಪ್ರಾಧ್ಯಾಪಕರಾದ ಶ್ರೀಯವರು, ಇದನ್ನು ತೀವ್ರವಾಗಿ ಮನಗಂಡು, ಕನ್ನಡದ ಏಳಿಗೆಗೆ ಅವಿಶ್ರಾಂತವಾಗಿ ದುಡಿದು ಸಹಸ್ರಾರು ಕನ್ನಡಿಗರ ಹೃದಯದಲ್ಲಿ ಮನೆಮಾಡಿ ’ಕನ್ನಡದ ಕಣ್ವ’ರೆಂದೇ ಕರೆಯಲ್ಪಟ್ಟದ್ದು ನಮಗೆ ಗೊತ್ತೇ ಇದೆ. ಅಂದಿನದು ವಿದ್ವಾಂಸ ಶಿಖಾಮಣಿಗಳಿಗೆ ಮಾತ್ರ ಸೀಮಿತವಾದ ಸಾಹಿತ್ಯ ರಚನೆ. ಛಂದಸ್ಸು ಹಾಗೂ ಕಾವ್ಯ ರಚನೆಯ ಪ್ರಾಕಾರಗಳು, ಬಹಳ ಮಡಿವಂತಿಕೆಗೆ ಹೆಸರಾಗಿದ್ದು ಕಾವ್ಯ ರಚಿಸುವವರಿಗೆ, ನವ ಯುವಕರಿಗೆ ಅದು ಕಬ್ಬಿಣದ ಕಡಲೆಯಾಗಿತ್ತು. ಇಂತಹ ಸನ್ನಿವೇಶದಲ್ಲಿ ಶ್ರೀಯವರು ಸರಳ, ಜನಸಾಮಾನ್ಯರ ಹೃದಯವನ್ನು ತಟ್ಟುವ, ಮೀಟುವ ಕಾವ್ಯರಚನೆಗೆ ಮುಂದುವರಿದು, ಕನ್ನಡ ಸಾಹಿತ್ಯಕ್ಕೆ ಹೊಸಮಾರ್ಗ ಕಲ್ಪಿಸಿಕೊಟ್ಟದ್ದು ಶ್ರೀಯವರ ಬಹುದೊಡ್ಡ ಕೊಡುಗೆ. ಕನ್ನಡದ ಏಳಿಗೆಯ ಬಗ್ಗೆ ಶ್ರೀಯವರ ಚಿಂತನೆಗಳು ಇಂದಿಗೂ ಮಹತ್ವ ಉಳಿಸಿಕೊಂಡಿವೆ.
ಅಂದ ಹಾಗೆ ಶ್ರೀಯವರ ಇನ್ನೊಂದು ಬಹುದೊಡ್ಡ ಕೊಡುಗೆ ಅವರ ಶಿಷ್ಯಕೋಟಿ – ಸರ್ವಶ್ರೀ ಕುವೆಂಪು, ಮಾಸ್ತಿ, ಎಸ್.ವಿ.ರಂಗಣ್ಣನವರು, ತೀ ನಂ ಶ್ರೀ, ಜಿ.ಪಿ.ರಾಜರತ್ನಂ. ಡಿ. ಎಲ್. ನರಸಿಂಹಾಚಾರ್, ಎ. ಎನ್. ಮೂರ್ತಿರಾಯರು, ಎಲ್.ಎಸ್. ಶೇಷಗಿರಿರಾಯರು ಮುಂತಾದವರು.

ಶ್ರೀಯವರ ಇನ್ನೊಂದು ಮೂರ್ತಿ ಬಿಎಂಶ್ರೀ ಪ್ರತಿಷ್ಠಾನ, ನರಸಿಂಹರಾಜ ಕಾಲೋನಿ, ಬೆಂಗಳೂರಿನಲ್ಲಿದೆ
Read Full Post | Make a Comment ( None so far )

















