ಎಸ್ ಪಿ ವರದರಾಜು ಪ್ರಶಸ್ತಿ

ಪ್ರಮೋದ್ ನೋಡಿದ ಸಿನೆಮಾ

Kim Ki duk’ s
“Spring, Summer, Fall, Winter… and Spring” is fantastic movie. Pure ಅವೆಸೋಮೆ

‘ಅತ್ರಿ’ ಅಶೋಕವರ್ಧನ್ recommends.. 127 hours

-ಜಿ ಎನ್ ಅಶೋಕ ವರ್ಧನ

ಅತ್ರಿ ಬುಕ್ ಸೆಂಟರ್

ಪರ್ವತಾರೋಹಿ ಸಾಹಸಿಯೊಬ್ಬ ಏಕಾಂಗಿಯಾಗಿ ವಿರಳ ಜನಸಂಚಾರ ವಲಯದ ಭಾರೀ ಪ್ರಾಕೃತಿಕ ಕೊರಕಲುಗಳ ಶೋಧಕ್ಕೆ ಹೋಗುತ್ತಾನೆ. ಅಲ್ಲಿ ಅಕಸ್ಮಾತಾಗಿ ಈತ ಕೊರಕಲೊಂದರ ಆಳಕ್ಕೆ ಉರುಳುತ್ತಾನೆ. ಆಗ ಜೊತೆಗುರುಳಿದ ಭಾರೀ ಬಂಡೆಯೊಂದು ಈತನ ಬಲ ಮುಂಗೈಯನ್ನು ಜಜ್ಜಿ ಹಿಡಿದು, ಪಾರುಗಾಣಲಾಗದ ಬಂಧನಕ್ಕೇ ಸಿಕ್ಕಿಸುತ್ತದೆ. ಮುಂದೆ ಒಂದೆರಡು ದಿನವಲ್ಲ, ಹೆಚ್ಚು ಕಡಿಮೆ ಐದೂಕಾಲು ದಿನ ಅಥವಾ ೧೨೭ ಗಂಟೆಗಳ ಕಾಲ ಈತ ಏಕಾಂಗಿಯಾಗಿಯೇ ನಡೆಸಿದ ಅಸಾಧಾರಣ ದೇಹ-ಮನಸ್ಸುಗಳ ಸಾಹಸದ ಫಲವಾಗಿ ಬದುಕಿ ಬರುತ್ತಾನೆ. ಇದು ಒಂದು ಸತ್ಯ ಘಟನೆ. ಇಂದೂ ತನ್ನ ಮೊಂಡುಗೈಯೊಡನೆ ಈ ಅಮೆರಿಕನ್ ಪ್ರಜೆ ಸಾಹಸಾನ್ವೇಷಣೆಯನ್ನು ಮುಂದುವರಿಸಿದ್ದಾನೆ! ಅದರ ಕಥಾ ಸಿನಿಮಾ ರೂಪವೇ ‘127 Hours’.

ಅಭಯ ಹತ್ತಿಪ್ಪತ್ತು ದಿನಗಳ ಹಿಂದೆಯೇ ಈ ಚಿತ್ರವನ್ನು ಬೆಂಗಳೂರಿನಲ್ಲಿ ನೋಡಿದ ಮೇಲೆ ಹೇಳಿದ್ದ. ಗೆಳೆಯ ನಿರೇನ್ ಎಂದೂ ಕರೆಯದವರು “ಸಂಜೆ ಏಳೂಮುಕ್ಕಾಲರ ಶೋಗೆ ನಮ್ಮೊಡನೆ ಬನ್ನಿಯಪ್ಪಾ” ಎಂದು ಒತ್ತಾಯಿಸಿದರು. ಅಂಗಡಿಯನ್ನು ದಿಢೀರ್ ಬಿಡಲಾಗದ ಕಷ್ಟಕ್ಕೆ ನಾನು ಹೋಗಲಿಲ್ಲ. ಅಡ್ಲ್ಯಾಬ್ಸಿನ ಬಿಗ್ ಸಿನಿಮಾದಲ್ಲಿ (ಮಲ್ಟಿಪ್ಲೆಕ್ಸ್) ಮೊನ್ನೆಯವರೆಗೆ ಅದು ದಿನಕ್ಕೆ ಮೂರು ಪ್ರದರ್ಶನ ಕಾಣುತ್ತಿದ್ದದ್ದು ಇಂದು ಒಂದೇ ಎಂದು ಕಂಡಾಗ ನಾನು ಯೋಚನೆಗೆ ಬಿದ್ದೆ. ಮೂಡಬಿದ್ರೆಯಿಂದ ಇನ್ನೋರ್ವ ಗೆಳೆಯ ಕೃಶಿ ದೂರವಾಣಿಸಿ ಒತ್ತಾಯಿಸಿದಾಗ ಸೋತೆ. ದೇವಕಿಯನ್ನು ಅಂಗಡಿಗೆ ಮಾಡಿ ಮಧ್ಯಾಹ್ನ ಒಂದೂವರೆಯ ಪ್ರದರ್ಶನಕ್ಕೆ ಹಾಜರಾದೆ.

ಇನ್ನಷ್ಟು

Film Days

Aspiring Film Maker?

ನನ್ನ ಕಣ್ಣು ಹನಿಗೂಡಿದೆ, ಇನ್ನು ನಾನು ನಾನಾಗಿರಲಾರೆ

ಉಷಾ ಕಟ್ಟೆಮನೆ

ಇವತ್ತು ನಾನು lasse hollstorm ನಿರ್ದೇಶನದ hachiko ಸಿನಿಮಾ ನೋಡಿದೆ. ಸತ್ತ ತನ್ನೊಡೆಯ ಮತ್ತೆ ಬರುವನೆಂದು ೧೧ ವರ್ಷ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಾ ಕೊನೆಯುಸಿರೆಳದ ನಾಯಿಯ ಸತ್ಯ ಕಥೆಯಿದು.

ನನ್ನ ಕಣ್ಣು ಹನಿಗೂಡಿದೆ. ನನ್ನ ಅಂಗೈಯಲ್ಲಿ ಬೆಳೆದ ’ಚುಕ್ಕಿ’ ಮಕ್ಕಳು ನೆನಪಾದವು.

ಇನ್ನು ೨ ದಿನ ನಾನು ನಾನಾಗಿರಲಾರೆ

HBO ಚಾನಲ್ ನಲ್ಲಿ. hachiko ನಾಯಿ ೧೯೨೩ರಲ್ಲಿ ಹುಟ್ಟಿ ೧೯೩೫ರಲ್ಲಿ ಇಹಲೋಕ ತ್ಯಜಿಸಿತ್ತು. ಅದು ಕಾಯುತ್ತಿದ್ದ ರೈಲ್ವೆ ನಿಲ್ದಾಣದಲ್ಲಿ ಅದು ಬದುಕಿರುವಾಗಲೇ ಸ್ಥಾಪಿಸಿದ್ದ ಅದರ ಮೂರ್ತಿ ೨ನೇ ಮಹಾಯುದ್ಧದಲ್ಲಿ ದ್ವಂಸಗೊಂಡಿತ್ತು. ಅದನ್ನು ನಿರ್ಮಿಸಿದ ಶಿಲ್ಪಿಯ ಮಗನೇ ೧೯೪೮ರಲ್ಲಿ ಕಂಚಿನ ಮೂರ್ತಿಯನ್ನು ಸ್ಥಾಪಿಸಿದ. ಇಂದಿಗೂ ನೂರಾರು ಜನ ಅದರ ಜನ್ಮದಿನದಂದು ಜಪಾನಿನ ಆ ನಿಲ್ದಾಣಕ್ಕೆ ಬಂದು ಅದರ ಮೂರ್ತಿಯ ಮುಂದೆ ಅದಕ್ಕೆ ಇಷ್ಟವಾದ ತಿಂಡಿಯನ್ನಿಟ್ಟು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ

 

ಹಂಗಾಮ ಕಾರ್ನರ್: ಸ್ವರ್ಗದ ಬಣ್ಣ ನೋಡಿದಿರಾ?-ಎ.ಎನ್. ಪ್ರಸನ್ನ

ಅದೊಂದು ಮಕ್ಕಳ ಸಿನಿಮಾ ಎಂದರೆ ನಾವು ಕಣ್ಣಿದ್ದೂ ಕುರುಡರ ಹಾಗೆ. ಸುಮಾರು ಹನ್ನೆರಡು ವರ್ಷದ ಕುರುಡು ಹುಡುಗನ್ನು “ಹೀರೋ” ಮಾಡಿ ಪ್ರತಿ ಸೀನಿನಲ್ಲುಳ ಅವನ ಸುತ್ತಲೇ ಗಿರಕಿ ಹೊಡೆಯುತ್ತ ಕಥೆ ಹೆಣೆದಿದೆಯೆಂದ ಮೇಲೆ ಅಂಥದೊಂದು ಹಣೆಪಟ್ಟಿ ಹಚ್ಚಿದರೆ ಇರಾನಿನ ಮಜಿದ್ ಮಜಿದಿ ನಿರ್ದೇಶನದ “ಸ್ವರ್ಗ ಬಣ್ಣ”(ಕಲರ್ ಅಫ್ ಪ್ಯಾರಾಡೈಸ್) ಚಲನಚಿತ್ರ ಎಲ್ಲ ವಯಸ್ಸಿನವರಲ್ಲಿ ಮೆಲ್ಲಮೆಲ್ನೆ ಉಂಗುಷ್ಠದಿಂದ ನೆತ್ತಿಯ ತನಕ, ಕೆಲವೊಮ್ಮೆ ನಮ್ಮ ಎದೆಯ ಸದ್ದು ತಡೆಯಲಾಗದೆ ಎದ್ದು ಅಲ್ಲಿರಲಾಗದೆ ಹೆಜ್ಜೆ ಇಟ್ಟು ಪಕ್ಕದವನಿಗೂ ಅದೇ ಗತಿಯಾದದ್ದೂ ಕಂಡು ಸಮಾಧಾನಪಡುವಷ್ಟು ಬೆರಗು ಭಾವಗಳ ಬಣ್ಣದ ಬುಗ್ಗೆಯ ಚಿತ್ರ.

ಸುಮಾರು ಕಳೆದೆರಡು ದಶಕದ ಇರಾನಿನ ಪ್ರಮುಖ ನಿರ್ದೇಶಕ(ಉದಾ: ಮಕ್‌ಬಲ್ ಬಫ್, ಸಮೀರ್ ಮಕ್‌ಬಲ್ ಬಫ್, ಅಬ್ಬಾಸ್ ಕಿಯಾರೋಸ್ತಮಿ ಇತ್ಯಾದಿ) ಚಿತ್ರಗಳನ್ನು ನೋಡುತ್ತಿದ್ದರೆ ಆಗಸ್ಟ ಹದಿನೈದರ ಆಸುಪಾಸಿನಲ್ಲಿ ಲಾಲ್ಬಾಗ್ ಹೊಕ್ಕ ಹಾಗೆ. ಹೂಗಳು ಎಷ್ಟೊಂದು ಎಳೆ, ಮನಸ್ಸಿನ ಸದರಿನೊಳಗಿನ ಪದರು-ಇವುಗಳಿಗೆಲ್ಲೂ ಕೃತ್ರಿಮದ ಸೋಂಕಿರದ ಭಾಷ್ಯ. ಹೀಗಾಗಿ ನೋಟಕನ ಕಣ್ಣು, ಕಿವಿ, ಅಂತರಂಗಕ್ಕೆ ಸಹಜ ಸಾವಯವ ಸಂಬಂಭ ಉಂಟಾಗುತ್ತದೆ.

“ಸ್ವರ್ಗ ಬಣ್ಣ”ದಲ್ಲಿ ಆದುದ್ದೆ ಅದೇ. ಸುಮ್ಮನೆ ಕಥೆಯ ಚೌಕಟ್ಟು ಹೇಳಿದರೆ ಕನ್ನಡ ಸಾಹಿತ್ಯದಲ್ಲಿ ಪ್ರಗತಿಶೀಲ ಕಾಲದಲ್ಲಿ ಇಂಥ ಕಥೆಗಳನ್ನು ಸಾಕಷ್ಟು ಪೇರಿಸಿಟ್ಟಾಗಿದೆ ಎಂದು ಯಾರಾದರೂ ಹೇಳಿಬಿಡಬಹುದು.ಅಮ್ಮನಿಲ್ಲದ ಕುರುಡು ಹುಡುಗ ಮಹಮ್ಮದ್‌ಗೆ ಓದಬೇಕೆಂಬಾಸೆ. ಹಳ್ಳಿಯಲ್ಲಿ ಬಡತನದಲ್ಲಿರುವ ಅಪ್ಪ ಇಬ್ಬರು ತಂಗಿಯರು ಹಾಗೂ ಅಜ್ಜಿಯ ಬಗ್ಗೆ ಇನ್ನಿಲ್ಲದಷ್ಟು ಅಕ್ಕರೆ. ಬ್ರೈಲ್ ಲಿಪಿಯಲ್ಲಿ ಅಕ್ಷರಗಳನ್ನು ಪೋಣಿಸಿ ಓದುವ ಸಲೀಸಿನಷ್ಟೇ ಗಾಳಿಯ ಬೆನ್ನೇರಿ ಬರುವ ಹಕ್ಕಿಗಳ ಉಲಿಗೆ ಹಠಾತ್ ಕಿವಿಗೊಟ್ಟು ಅವುಗಳ ಪದರದಲ್ಲಿನ ಅಕ್ಷರಗಳನ್ನು ಬಿಡಿಸಿ ಹೇಳುವ, ನೋಡುವವರ ರೆಪ್ಪೆಗಳನ್ನು ಕಟ್ಟಿಹಾಕುವ ಏಕಾಗ್ರತೆ ಮಹಮದ್‌ನದ್ದು. ಚಿತ್ರದ ಪ್ರಾರಂಭದಲ್ಲೇ ಸ್ಕೂಲಿನ ರಜಾ ದಿನಗಳಲ್ಲಿ ಮಗ ಒಂದು ರೀತಿಯಲ್ಲಿ ಭಾರವಾಗುತ್ತಾನೆಂದು ಅಲ್ಲೇ ಇಟ್ಟುಕೊಳ್ಳಲು ಅಧ್ಯಾಪಕರನ್ನು ಕೇಳಿಕೊಳ್ಳುವ ಅಪ್ಪನ ಕಠೋರ ಧೋರಣೆ ಮತ್ತು ಅದರ ಜೊತೆಗೆ ಆ ಸಂದರ್ಭವನ್ನು ನಿಭಾಯಿಸಬೇಕಾ ಹೆಂಡತಿ ಇಲ್ಲದಿರುವುದರಿಂದ ಅವನ ಅಸಹಾಯಕತೆಯೂ ಬೆರೆತು ವಿಚಿತ್ರ ಭಾವನೆ ಹುಟ್ಟಿಸುತ್ತಲೇ ಅದರಿಂದ ಹೊರಳಿ ಮಗನನ್ಲ್ಲಿ ನಿರ್ದೇಶಕರ ಒತ್ತು ಮೂಡುತ್ತದೆ. ಅವನಿಗೆ ಅಲ್ಲಿ ಮರದ ಮೇಲಿನ ಗೂಡಿನಿಂದ ಕೆಳಗೆ ಬಿದ್ದು, ಅಮ್ಮನಿಂದ ಬೇರೆಯಾದ ಮರಿಹಕ್ಕಿಯ ಅಳಲು ಮತ್ತಿ ಜೀವಾಪಾಯ ಮರಿಗಲ್ಲ, ತನಗೇ ಎನ್ನುವಂತೆ ಸಂಪೂರ್ಣ ಏಕಾಗ್ರತೆಯಿಂದ ಆ ಅಳಲಿನ ಜಾಡು ಹಿಡಿಯುತ್ತಾನೆ. ಅವನ ಅಂತರಂಗವನ್ನು ಬಿಂಬಿಸುವಂತೆ ಕ್ಯಾಮೆರಾ ಅವನ ಕೈ, ಕಾಲು, ಮರಿಹಕ್ಕಿ ಬಿದ್ದಿರುವ ಒಂಗಿದೆಲೆಗಳ ಹರುಹು-ಹರಿದಾಡುತ್ತದೆ.ಅವನ ಹುಡುಕಾಟದ ಕೈಗಳನ್ನು ಕೊಂಚ ಅದರುವಂತೆ ಮಾಡುತ್ತ ಸಾವಿನ ರೂಪದ ಬೆಕ್ಕು ಮರಿಹಕ್ಕಿಗಾಗಿ ಹೊಂಚು ಹಾಕುವಾಗ ನಮ್ಮ ಕಣ್ಣು ಅವನ ಕುರುಡುಗಣ್ಣಲ್ಲಿ ಮತ್ತಷ್ಟು ನೆಡುತ್ತದೆ.

ಇನ್ನಷ್ಟು

ಸಾಂಗತ್ಯ ಚಲನಚಿತ್ರ ಶಿಬಿರ

ಸಾಂಗತ್ಯ ಕುಪ್ಪಳಿಯಲ್ಲಿ ಚಲನಚಿತ್ರ ಶಿಬಿರ ಹಮ್ಮಿಕೊಂಡಿತ್ತು. ಶಿಬಿರವನ್ನು ಹಿರಿಯ ಚಲನಚಿತ್ರ ತಜ್ಞ ಪರಮೇಶ್ವರ ಗುರುಸ್ವಾಮಿ ನಿರ್ದೇಶಿಸಿದರು.  ಸತತ ಉತ್ಸಾಹದಿಂದಾಗಿ ಸಾಂಗತ್ಯ ಒಂದು ಮಹತ್ವದ ಶಿಬಿರವಾಗಿ ಬದಲಾಗಿದೆ.

ಕಲ್ಲರೆ ಮಹೇಶ್ ಕ್ಯಾಮೆರಾದಲ್ಲಿ ಈ ಶಿಬಿರ ಕಂಡಿದ್ದು ಹೀಗೆ

ಸಾಂಗತ್ಯ 5 ನೆ ಚಿತ್ರ ಶಿಬಿರ …

ಸಾಂಗತ್ಯ

ಸಾಂಗತ್ಯ ಸಂಯೋಜಿಸುವ ಐದನೇ ಚಿತ್ರ ಶಿಬಿರ ಜನವರಿ 22 ಮತ್ತು 23 ರಂದು ಎಂದಿನಂತೆ ಕುಪ್ಪಳಿಯಲ್ಲಿ ನಡೆಯಲಿದೆ.

45 ಮಂದಿಗೆ ಪ್ರವೇಶಾವಕಾಶವಿದೆ. ಊಟ, ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. 400 ರೂ. ಪ್ರವೇಶ ಶುಲ್ಕ. ಜನವರಿ 22 ರಂದು ಬೆಳಗ್ಗೆ 9. 30 ಕ್ಕೆ ಆರಂಭವಾಗುವ ಚಿತ್ರ ಶಿಬಿರದಲ್ಲಿ ಒಟ್ಟೂ ಎರಡೂ ದಿನ ಕೇವಲ ಸಿನಿಮಾಗಳನ್ನು ವೀಕ್ಷಿಸುವುದು, ಚರ್ಚಿಸುವುದಷ್ಟೆ ಕೆಲಸ.

ಪ್ರತಿ ಚಿತ್ರ ವೀಕ್ಷಣೆಯ ನಂತರವೂ ಸಂವಾದವಿರುತ್ತದೆ. ಅದರಲ್ಲಿ ತಮ್ಮ ತಮ್ಮ ಅಭಿಪ್ರಾಯವನ್ನು ಮಂಡಿಸಬಹುದು. ತಾಂತ್ರಿಕ ಸಂಗತಿಗಳ ವಿವರ ಕೊಡಲು ನಮ್ಮೊಂದಿಗೆ ತಜ್ಞರು ಹಾಗೂ ಸಾಂಗತ್ಯ ಟ್ರಸ್ಟ್ ನ ಅಧ್ಯಕ್ಷರಾದ ಪರಮೇಶ್ ಗುರುಸ್ವಾಮಿಯವರು ಇರುತ್ತಾರೆ. ಇವರೊಂದಿಗೆ ಇನ್ನೂ ಕೆಲವು ಸಿನಿತಜ್ಞರು ಭಾಗವಹಿಸುವರು.

ಈ ಹಿಂದೆಯೂ ನಾಲ್ಕು ಶಿಬಿರಗಳನ್ನು ನಡೆಸಿದ್ದು, ಬಹಳ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾಗಳನ್ನು ಚರ್ಚಿಸುವ ಮೂಲಕವೇ ದೃಶ್ಯ ಸಾಧ್ಯತೆಗಳನ್ನು ಅರಿಯುವ ಶೈಕ್ಷಣಿಕ ಉದ್ದೇಶದಿಂದಲೇ ಬಹುತೇಕ ವಿಶ್ವ ಸಿನಿಮಾಗಳ ಪ್ರದರ್ಶನವಿರುತ್ತದೆ. ಪ್ರತಿ ವರ್ಷ ಜನವರಿ ಮತ್ತು ಆಗಸ್ಟ್ ನಲ್ಲಿ ಶಿಬಿರಗಳನ್ನು ನಡೆಸಲಾಗುತ್ತದೆ.

ಆಸಕ್ತರು ಹೆಸರನ್ನು ನೋಂದಾಯಿಸಬಹುದು. ತಮ್ಮ ಬರುವಿಕೆ ಕುರಿತು saangatya@gmail.com ಗೆ ಇಮೇಲ್ ಮಾಡಬಹುದು. ಮತ್ತಿತರ ಮಾಹಿತಿಗೆ ಮತ್ತು ಹೆಸರು ನೋಂದಣಿಗೆ 94805 82027, 94807 97113, 94482 45172

ಸಿನಿಮಾ ಮತ್ತು ರಂಗಭೂಮಿಯಲ್ಲಿ ದೃಶ್ಯವಿನ್ಯಾಸ

-ವಿ.ಎನ್.ಲಕ್ಷ್ಮೀನಾರಾಯಣ

ವಿಶುಅಲ್ ಡಿಸೈನ್ ಇನ್ ಸಿನೆಮಾ ಅಂಡ್ ಥಿಯೇಟರ್ ( ಸಿನಿಮಾ ಮತ್ತು ರಂಗಭೂಮಿಯಲ್ಲಿ ದೃಶ್ಯವಿನ್ಯಾಸ) ಎಂಬ ವಿಷಯವನ್ನಿಟ್ಟುಕೊಂಡು, ಮೈಸೂರು ಫಿಲ್ಮ್ ಸೊಸೈಟಿ  ಮತ್ತು ಬೆಂಗಳೂರಿನ ಲೇಸ್ ಫಿಲ್ಮ್ ಸೊಸೈಟಿ ಸಂಯುಕ್ತವಾಗಿ ಆಯೋಜಿಸಿರುವ, ಕಾರ್ಯಾಗಾರ 24/12/2010ರಿಂದ ಮೈಸೂರಿನ ಧ್ವನ್ಯಾಲೋಕದಲ್ಲಿ ನಡೆಯುತ್ತಿದೆ.ಕಾರ್ಯಾಗಾರವನ್ನು ನಡೆಸಿಕೊಡುತ್ತಿರುವವರು ಪದ್ಮಶ್ರೀ ಎಮ್ ಎಸ್ ಸತ್ಯು ಮತ್ತು ಶ್ರೀ ಜಿ ಎಸ್ ಭಾಸ್ಕರ್. ಸತ್ಯುರವರ ಮೊದಲ ಮುಖ್ಯ ಚಿತ್ರ ಗರಂಹವಾ ಮತ್ತು ಇತ್ತೀಚಿನ ಚಿತ್ರ ಇಜ್ಜೋಡು  ಅವರ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳೊಂದಿಗೆ ಪ್ರದರ್ಶಿತವಾಗುತ್ತಿವೆ. ಕಾರ್ಯಾಗಾರ ಇಂದು ಮುಕ್ತಾಯವಾಗಲಿದೆ.

Previous Older Entries

%d bloggers like this: