ಹಕ್ಕಿ ಹಾರುತಿದೆ ನೋಡಿದಿರಾ?..

-ಜಿ ಎನ್ ಮೋಹನ್

‘ಓ ಬಿ ವ್ಯಾನ್ ಬೇಕು’ ಅಂದೆ. ರಾಮೋಜಿ ಫಿಲಂ ಸಿಟಿಯ ಮೀಟಿಂಗ್ ಹಾಲ್ ನಲ್ಲಿದ್ದವರು ಏನೋ ಟೆರರಿಸ್ಟ್ ಅಟ್ಯಾಕ್ ಆಗಿದೆ ಅಂತ ಗಾಬರಿಯಾದರು. ಅಂತದ್ದೇನೂ ಇಲ್ಲ ಅಂದೆ. ಹಾಗಿದ್ರೆ ಸೋನಿಯಾ ಗಾಂಧಿ ಬರ್ತಾ ಇದ್ದಾರಾ ಅಂದ್ರು. ‘ ನೋ’ ಅಂತ ತಲೆ ಆಡಿಸಿದೆ. ಮತ್ತೆ ಓ ಬಿ ವ್ಯಾನ್ ಯಾಕೆ ಅಂತ ಪ್ರಶ್ನಿಸಿದರು. ಶಿವಮೊಗ್ಗದಲ್ಲಿ ಸಾಹಿತ್ಯ ಸಮ್ಮೇಳನ ಕವರೇಜ್ ಗೆ ಅಂದೆ. ಒಂದು ಕ್ಷಣ ಎಲ್ಲರೂ ಮುಖ ಮುಖ ನೋಡಿಕೊಂಡರು. ಓ ಬಿ ವ್ಯಾನ್ ಗೂ ಸಾಹಿತ್ಯಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಬೆಟ್ಟದ ಮೇಲಿನ ನೆಲ್ಲೀಕಾಯಿ, ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯ..?

ಇಂತದ್ದೇ ಗಾಬರಿ ನೇರಾ ನೇರಾ ರಾಮೋಜಿರಾಯರಿಗೇ ಆಗಿತ್ತು. ತೇಜಸ್ವಿ ಇಲ್ಲವಾದಾಗ ಈಟಿವಿಯ ಬುಲೆಟಿನ್ ಗಳೆಲ್ಲವೂ ಶೋಕ ಹೊದ್ದು ಕೂತಿತು. ಗಂಟೆಗೊಮ್ಮೆ ಪ್ರಸಾರವಾಗುವ ಬುಲೆಟಿನ್ ಗಳು ಹಾಂ, ಹ್ಞೂ ಎನ್ನುವುದರೊಳಗೆ ಮುಗಿದು ಹೋಗಿರುತ್ತವೆ. ಹಾಗಾಗಿ ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಪ್ರೈಮ್ ಬುಲೆಟಿನ್ ಮಾತ್ರ ಎಲ್ಲರ ಗರುಡಗಣ್ಣನ್ನೂ ದಾಟಿಯೇ ಬರಬೇಕು. ಸಂಸ್ಥೆಯ ಮುಖ್ಯಸ್ಥರಿಂದ ಹಿಡಿದು ಮ್ಯಾನೇಜರ್ ವರೆಗೆ ಎಲ್ಲರೂ ‘ನೈಟ್ ವಾಚ್ ಮನ್’ ಗಳೇ..ಹಾಗಿರುವಾಗ ತೇಜಸ್ವಿ ಇಲ್ಲವಾದ ದಿನ ಇಡೀ ಬುಲೆಟಿನ್ ಅನ್ನು ತೇಜಸ್ವಿಗೆ ಮೀಸಲಿಟ್ಟಿದ್ದು ಎಲ್ಲರಿಗೂ ಷಾಕ್ ನೀಡಿತ್ತು. ತೇಜಸ್ವಿ ಇಲ್ಲ ಎನ್ನುವ ಸುದ್ದಿಯ ಮುಂದೆ ಇನ್ನೊಂದು ಸುದ್ದಿಯಾದರೂ ಎಲ್ಲಿ ಅನ್ನೋದು ನನ್ನ ನಿಲುವು. ಚೇರ್ಮನ್ ರಿಂದ ಬುಲಾವ್ ಬಂತು. ಅಲ್ಲ, ಇಡೀ ಬುಲೆಟಿನ್ ಅನ್ನು ಒಬ್ಬರಿಗೇ ಮೀಸಲಿಡೋದು ಎಷ್ಟು ಸರಿ? ಜಗತ್ತಿನ ಎಲ್ಲೂ ಇವತ್ತು ಏನೂ ಘಟಿಸಿಲ್ವ? ಅದೂ ಪ್ರೈಮ್ ಬುಲೆಟಿನ್ ನಲ್ಲಿ’ ಅಂದ್ರು. ನನಗಂತೂ ಅವತ್ತಿನ ಮೆಗಾ ನ್ಯೂಸ್ ತೇಜಸ್ವಿಯೇ ಅನ್ನೋದು ಖಚಿತವಾಗಿ ಹೋಗಿತ್ತು. ‘ತೇಜಸ್ವಿ ವಿನಾ ಬುಲೆಟಿನ್ ನ ಚಲತಿ’ ಅಂತ ನಿರ್ಧರಿಸಿಬಿಟ್ಟಿದ್ದೆ.

ಸಾರ್, ನಮ್ಮ ನ್ಯೂಸ್ ಗೆ ಟಿ ಆರ್ ಪಿ ಬರೋದೇ ಮೊದಲ ಆದ್ಯತೆ ಆದ್ರೆ ನನ್ನನ್ನ ಬಿಟ್ಬಿಡಿ. ನನ್ನ ಮನಸ್ಸು ಹೇಳ್ತಿದೆ. ತೇಜಸ್ವಿ ಇಲ್ಲ ಅನ್ನೋ ಸುದ್ದಿ ಮಾತ್ರಾನೇ ಇವತ್ತು ಜನರಿಗೆ ಮುಖ್ಯ. ಅಕಸ್ಮಾತ್ ಟಿ ಆರ್ ಪಿ ಬರಲಿಲ್ಲ ಅಂದ್ರೆ ಇನ್ನು ಮುಂದೆ ನೀವು ಹೇಳಿದ ಹಾಗೆ ಕೇಳ್ತೀನಿ. ನೀವೇ ಹೇಳಿದ್ದೀರಲ್ಲಾ ಮೊದಲ ತಪ್ಪು ಮಾಡೋದಿಕ್ಕೆ ಎಲ್ಲರಿಗೂ ಅವಕಾಶವಿದೆ ಅಂತ ಅವರು ಹೇಳಿದ್ದ ಮಾತನ್ನೇ ರಕ್ಷಣೆಗೆ ಗುರಾಣಿಯಾಗಿ ಬಳಸಿದೆ. ರಾಮೋಜಿರಾಯರು ನನ್ನನ್ನ ಒಂದು ಕ್ಷಣ ನೋಡಿದವರೇ ‘ಗೋ ಅಹೆಡ್’ ಅಂದ್ರು. ತೇಜಸ್ವಿ ತೇಜಸ್ವಿಯೇ. ಸತತ ಮೂರು ದಿನ ಈಟಿವಿ ಚಾನಲ್ ತೇಜಸ್ವಿ ಎನ್ನುವ ‘ನಿಗೂಢ ಮನುಷ್ಯ’ ನನ್ನು ಸಾಧ್ಯವಿದ್ದ ದಿಕ್ಕಿನಿಂದೆಲ್ಲಾ ಸ್ಪರ್ಶಿಸಲು ಯತ್ನಿಸಿತು.

ಇನ್ನಷ್ಟು

‘ಇನ್ನಿನಿಸು ದಿನ ಮಹಾತ್ಮ ನೀ ಬದುಕಬೇಕಿತ್ತು..’

-ಜಿ ಎನ್ ಮೋಹನ್

‘ಒಂದ್ನಿಮಿಷ ಬರ್ತೀನಿ ಇರಿ’ ಎಂದು ಟೆಡ್ ಟರ್ನರ್ ತಮ್ಮ ಖಾಸಗಿ ಕೋಣೆ ಹೊಕ್ಕರು. ಜಗತ್ತಿಗೆ ಜಗತ್ತೇ ನಿಬ್ಬೆರಗಾಗುವಂತೆ ಟೆಡ್ ಟರ್ನರ್ ಬೆಳೆದು ನಿಂತು ಬಿಟ್ಟಿದ್ದರು. ಮನೆಯ ಮೂಲೆಯಲ್ಲಿ ಕಣ್ಣೀರು ಉಕ್ಕಿಸುವ , ಹ ಹ ಹಾ ಎಂದು ಲಾಫರ್ ಕ್ಲಬ್ ಗಳಂತೆ ನಗಿಸುವ ವಸ್ತುವಾಗಿದ್ದ ದೂರದರ್ಶನ ಈಗ ಅಫೀಮಿನಂತೆ ಆಗಿ ಹೋಗಿತ್ತು. ಟೆಡ್ ಟರ್ನರ್ ಕೊಲ್ಲಿ ಯುದ್ಧಕ್ಕೆ ಆಂಟೆನಾ ಜೋಡಿಸಿದ್ದೇ ತಡ ಜಗತ್ತು ಟೆಲಿವಿಷನ್ ಎಂಬ ಮಾಯಾ ಜಿಂಕೆಯ ಬೆನ್ನ ಹಿಂದೆ ಬಿತ್ತು.  ಮತ್ತೆ ಬಾಗಿಲು ತೆರೆದು ಟೆಡ್ ಟರ್ನರ್ ನಮ್ಮ ಮುಂದೆ ನಿಂತಾಗ ಅವರ ಕೈಯಲ್ಲಿ ಒಂದು ಪುಟ್ಟ ಪ್ರತಿಮೆ. ಟೆಡ್ ಜೊತೆ ಲೋಕಾಭಿರಾಮವಾಗಿ ಹರಟೆ ಕೊಚ್ಚುತ್ತಾ ‘ನಿಮಗೆ ತೀರಾ ಇಷ್ಟವಾದವರು ಯಾರು? ಜೇನ್ ಫಾಂಡಾಳನ್ನು ಬಿಟ್ಟರೆ..’ ಅಂತ ಕೇಳಿದ್ದೆ. ಅದಕ್ಕೆ ಉತ್ತರವಾಗಿ ಟೆಡ್ ಈ ಪ್ರತಿಮೆ ಹಿಡಿದು ನಿಂತಿದ್ದರು. ‘ವಾಹ್, ಗಾಂಧಿ!’ ಅಂತ ಆಶ್ಚರ್ಯದ ಉದ್ಘಾರ ಹೊರಟಿದ್ದು ನನ್ನಿಂದ ಮಾತ್ರವಲ್ಲ ಪಕ್ಕದಲ್ಲಿಯೇ ಚಿಲಿ, ದಕ್ಷಿಣ ಆಫ್ರಿಕಾ, ಸ್ಲೊವೇನಿಯಾ. ಜೆಕ್, ಜರ್ಮನಿ, ಕೀನ್ಯಾ, ಕೊರಿಯಾ, ಜಪಾನ್, ಆಸ್ಟ್ರೇಲಿಯಾ ದೇಶದ ಎಲ್ಲರ ಬಾಯಿಂದಲೂ ಈ ಉದ್ಘಾರ ಹೊರಬಿತ್ತು.

gn oct1 (1)

ಇನ್ನೇನು ಸಿ ಎನ್ ಎನ್ ಕಚೇರಿಯಿಂದ ಬೀಳ್ಗೋಳ್ಳಲು ಎರಡೇ ಎರಡು ದಿನ ಬಾಕಿ ಇತ್ತು. ಅಟ್ಲಾಂಟಾದ ಮೂಲೆ ಮೂಲೆಯನ್ನೆಲ್ಲಾ ಜಾಲಾಡಿಬಿಡೋಣಾ ಎಂದು ದಂಡು ಕಟ್ಟಿ ಹೊರಟಿದ್ದು ಮಾರ್ಟಿನ್ ಲೂಥರ್ ಕಿಂಗ್ ನೆನಪಿನ ಮನೆಗೆ. ಇನ್ನೂ ಕಾಂಪೌಂಡ್  ಒಳಗೆ ಕಾಲಿಟ್ಟಿರಲಿಲ್ಲ. ಅಲ್ಲಿ ಆಳೆತ್ತರದ ಪ್ರತಿಮೆ– ಅದು ಗಾಂಧಿ. ನನ್ನ ಜೊತೆಯಲ್ಲಿಯೇ ಹೆಜ್ಜೆ ಹಾಕುತ್ತಿದ್ದ ದಕ್ಷಿಣ ಆಫ್ರಿಕಾದ ನೋಕ್ವಾಸಿ ಶಬಲಾಲ ಓಡಿಹೋಗಿ ಆ ಗಾಂಧಿಯ ಕೆನ್ನೆಗೊಂದು ಮುತ್ತು ತೂರಿದಳು. ನನ್ನ ಕ್ಯಾಮೆರಾ ‘ಕ್ಲಿಕ್’ ಎಂದಿತು.

ಶಾಪ್ ಹಾಪಿಂಗ್ ಮಾಡುತ್ತಾ ಮಾಡುತ್ತಾ ಸಮಯ ರಾತ್ರಿ ಮೂರರ ಗಡಿ ದಾಟಿತ್ತು. ಗೆಳೆಯರ ಜೊತೆ ಇನ್ನೂ ಸುತ್ತುವುದಕ್ಕೆ ನಾನು ಸಿದ್ದನಿರಲಿಲ್ಲ. ಎಲ್ಲರಿಗೂ ಒಳ್ಳೆಯ ಹಗ್ ಕೊಟ್ಟು ‘ಗುಡ್ ಬೈ’ ಹೇಳಿದೆ.  ’ಹುಷಾರು, ಇದು ಆಮೇರಿಕಾ, ಒಬ್ಬನೇ ಹೋಗುತ್ತಿದ್ದೀಯಾ’ ಎಂದು ಜೆಕ್ ಗೆಳೆಯ ಮೆರೆಕ್ ಬ್ರಾಡ್ಸ್ಕಿ ಪಿಸುಗಟ್ಟಿದ. ಭಾರತದಿಂದ ಹೊರಡುವಾಗಲೂ ಎಲ್ಲರದ್ದೂ ಇದೇ ಕಿವಿಮಾತು ಟ್ಯಾಕ್ಸಿ ಏರಿದೆ. ಜೇಬಿನಲ್ಲಿದ್ದ ಪಾಸ್ ಪೋರ್ಟ್, ಡಾಲರ ಗಳ ಮೇಲೆ ಎರಡಲ್ಲ, ಹತ್ತು ಕಣ್ಣಿಟ್ಟಿದ್ದೆ. ರೊಯ್ರಂನೆ ಬೀದಿ ಬೀದಿ ಸುತ್ತಿದ ಟ್ಯಾಕ್ಸಿ ನನ್ನ ಹೋಟಲ್ ಮುಂದೆ ನಿಂತಿತ್ತು. ಟ್ಯಾಕ್ಸಿ ಮೀಟರ್, ಅದಕ್ಕೆ ಹತ್ತು ಪರ್ಸೆಂಟ್ ಟಿಪ್ಸ್ ಸೇರಿಸಿ ಡ್ರೈವರ್ ಕೈಗಿಟ್ಟೆ. ನಾನು ಟಿಪ್ಸ್ ಎಂದು ಕೊಟ್ಟ ಹತ್ತು ಡಾಲರ್ ನೋಟನ್ನು ಆತ ನನ್ನ ಕೈಗೇ ತುರುಕಿದ. ಯಾಕೆ ಎಂದು ಕೇಳಿದೆ. ‘ಗಾಂಧಿ?’ ಅಂತ ಕೇಳಿದ . ನಾನು ‘ಯಸ್, ಇಂಡಿಯಾ’ ಎಂದೆ. ಕೈ ಬೀಸುತ್ತಾ ಹೊರಟೇ ಬಿಟ್ಟ.

ಇನ್ನಷ್ಟು

ಬಂದಿದೆ ಹೊಸ ಮೀಡಿಯಾ ಮಿರ್ಚಿ

ಸಾರ್ ಯಾಕೆ ನೀವು ಆಟೋಬಯಾಗ್ರಫಿ ಬರೆಯಬಾರದು ? ಅನ್ನುವ ಪ್ರಶ್ನೆಯನ್ನು ನಾನು ಮುಂದಿಟ್ಟದ್ದು ರಾಮೋಜಿ ರಾವ್ ಅವರಿಗೆ. ಹಾಗೆ ಕೇಳಲು ನನಗೆ ಸಾಕಷ್ಟು ಕಾರಣಗಳಿತ್ತು. ರಾಮೋಜಿರಾಯರ ಜೊತೆ ಮಾತಿಗೆ ಕೂತಾಗಲೆಲ್ಲ ಅವರ ನೆನಪುಗಳು ಪ್ರವಾಹದಂತೆ ನುಗ್ಗಿ ಬರುತ್ತಿದ್ದವು.

ಅಲ್ಲಿ ಉಪ್ಪಿನಕಾಯಿಯೂ ಇತ್ತು. ಪತ್ರಿಕೋದ್ಯಮವೂ ಇತ್ತು. ಚಿಟ್ ಫಂಡ್ ಇತ್ತು, ಹೋಟೆಲ್ ಗಳಿದ್ದವು, ವಿಶಾಖಪಟ್ಟಣ, ಕೃಷ್ಣಾ, ತೆಲಂಗಾಣಗಳಿದ್ದವು. ಎನ್ ಟಿ ರಾಮರಾವ್, ಚಂದ್ರಬಾಬು ನಾಯ್ಡು, ವೈ ಎಸ್ ರಾಜಶೇಖರ ರೆಡ್ಡಿಯೂ ಇದ್ದರು.ಅವರ ಜೊತೆಗೆ ಮಾತಿಗೆ ಕುಳಿತಾಗೆಲ್ಲ ನನಗೆ ಒಂದು ಹೊಸ ಜಗತ್ತು ಬಿಚ್ಚಿಕೊಳ್ಳುತ್ತಾ ಹೋಗುತ್ತಿತ್ತು. ನಾನು ಆ ದಿನ ಚರ್ಚಿಸಬೇಕಾಗಿದ್ದದ್ದನ್ನೆಲ್ಲ ಪಟ್ಟಿ ಮಾಡಿ ಅವರ ಚೇಂಬರ್ ಹೊಕ್ಕರೆ ಹೊರಬರುತ್ತಿದ್ದುದು ಒಂದು ದೊಡ್ಡ ಅನುಭವದೊಂದಿಗೆ. ಎಷ್ಟೋ ದಿನಗಳಿಂದ ಅವರು ತಮ್ಮೊಳಗೆ ಬಚ್ಚಿಟ್ಟುಕೊಂಡಿದ್ದಾರೇನೋ ಎನ್ನುವ ಅನುಭವ ಆಗ ಹೊರಗೆ ಇಣುಕುತ್ತಿತ್ತು.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ…

‘ಇದೆಲ್ಲಾ ನಿಮಗೆ ಹೇಗೆ ಗೊತ್ತಾಗುತ್ತೆ? -ಅನ್ನೋ ಪ್ರಶ್ನೆ ನನಗೆ ಮೇಲಿಂದ ಮೇಲೆ ಎದುರಾಗಿದೆ. ನನಗೆ ಮಾತ್ರ ಅಲ್ಲ ಯಾವುದೇ ಜರ್ನಲಿಸ್ಟ್ ಎಲ್ಲಿ, ಯಾರಿಗೇ ಸಿಗಲಿ ಬರುವ ಮೊತ್ತ ಮೊದಲ ಪ್ರಶ್ನೆಯೇ ಈ ವಿಷಯ ನಿಮಗೆ ಹೇಗೆ ಗೊತ್ತಾಯ್ತು ಅಂತ.

ಎಲ್ಲಾ ಪತ್ರಿಕೆ, ಚಾನಲ್ ಗಳು ಘಂಟಾಘೋಷವಾಗಿ ಕುಮಾರಸ್ವಾಮಿ ಅಧಿಕಾರವನ್ನ ಬಿ.ಎಸ್.ಯಡಿಯೂರಪ್ಪ ನವರಿಗೆ ಹಸ್ತಾಂತರಿಸುತ್ತಾರೆ ಅಂತ ಘೋಷಿಸುತ್ತಿದ್ದಾಗ ನಮ್ಮ ಸೀನಿಯರ್ ಕರೆಸ್ಪಾನ್ಡೆಂಟ್ ಸೋಮಶೇಖರ್ ಕವಚೂರು ‘ಖಂಡಿತಾ ಹಸ್ತಾಂತರ ಇಲ್ಲ’ ಅನ್ನುವ ಸುದ್ದಿ ಹೊತ್ತು ತಂದಿದ್ದರು. ಈ ನ್ಯೂಸ್ ಬ್ರೇಕ್ ಮಾಡುವುದಕ್ಕೆ ಹಿಂದೆ ಮುಂದೆ ನೋಡಬೇಕಾದ ಸ್ಥಿತಿ ಇತ್ತು

ಪೂರ್ಣ ಓದಿಗೆ : ಮೀಡಿಯಾ ಮೈಂಡ್

 

ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ…

ಮುಂದೆ ಏನಾಗಬೇಕು ಅಂತಿದ್ದೀರಿ’ ಅನ್ನುವ ಪ್ರಶ್ನೆ ಒಗೆದಾಗ ಮದುವೆ ಆಗ್ಬೇಕು ಅಂತಿದ್ದೀನಿ ಅಂತ ಉತ್ತರ ಕೊಟ್ಟಿದ್ದು ದಾವಣಗೆರೆಯ ಚೇತನಾ ಮಾತ್ರ. ಬಹುಷಃ ಆಕೆಯನ್ನೊಬ್ಬಳನ್ನ ಬಿಟ್ಟರೆ ಇನ್ನೆಲ್ಲರ ಉತ್ತರ ಒಂದೇ- ರಿಪೋರ್ಟರ್.
ಬೆಂಗಳೂರು ವಿಶ್ವವಿದ್ಯಾಲಯದ ಎಂ ಸಿ ಜೆ ವಿಭಾಗದಲ್ಲಿ, ಎಲೆಕ್ಟ್ರಾನಿಕ್ ಮೀಡಿಯಾ ವಿಭಾಗದಲ್ಲಿ ಹುಬ್ಬಳ್ಳಿಯ ಐ ಎಂ ಆರ್ ಬಿ ಯಲ್ಲಿ, ಬೆಂಗಳೂರಿನ ಆಚಾರ್ಯ ಇನ್ಸ್ಟಿಟ್ಯೂಟ್ ನಲ್ಲಿ, ತುಮಕೂರಿನ ಸಿದ್ದಾರ್ಥ ಕಾಲೇಜಿನಲ್ಲಿ, ಮೈಸೂರಿನ ಮುಕ್ತ ವಿಶ್ವ ವಿದ್ಯಾಲಯದ ಕಾಂಟ್ಯಾಕ್ಟ್ ಕ್ಲಾಸ್ ಗಳಲ್ಲಿ, ವಿಜಾಪುರದ ಮಹಿಳಾ ವಿಶ್ವವಿದ್ಯಾಲಯದಲ್ಲಿ, ಹೀಗೆ ಹೋದಲ್ಲೆಲ್ಲಾ ಪ್ರಶ್ನೆ ಕೇಳಿದ್ದೇನೆ ಬಂದ ಉತ್ತರ -ರಿಪೋರ್ಟರ್.
ಈ ಅನುಭವ ಬರೀ ಯೂನಿವರ್ಸಿಟಿ ಕ್ಲಾಸ್ ರೂಮ್ ಗಳಲ್ಲಿ ಮಾತ್ರವಲ್ಲ ಗುಲ್ಬರ್ಗದ ಪತ್ರಿಕೋದ್ಯಮ ದಿನಾಚರಣೆಯಲ್ಲಿ ಸ್ತ್ರೀ ಜಾಗೃತಿ ನಡೆಸಿದ ಮೀಡಿಯಾ ವರ್ಕ್ ಶಾಪ್ ನಲ್ಲಿ, ನಮ್ಮ ನಮ್ಮ ನಡುವೆಯೇ ಜರುಗುವ ಖಾಸ್ ಬಾತ್ ಗಳಲ್ಲಿ
ಈ ಪ್ರಶ್ನೆ ಕೇಳಿದ್ದೇನೆ. ಬರುವ ಉತ್ತರ ಎಗೇನ್ ಅದೇ -ರಿಪೋರ್ಟರ್
ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ…

ವೀರಭದ್ರಪ್ಪ ಬಿಸ್ಲಳ್ಳಿ ಅವರ ಎರಡು ಮೂರು ಮೇಲ್ ಗಳು ಒಂದರ ಹಿಂದೆ ಒಂದರಂತೆ ನನ್ನ ಇನ್ ಬಾಕ್ಸ್ ಗೆ ಬಂದು ಬಿತ್ತು. ಓದಿ ನೋಡಿದಾಗ ಅರೆ! ಹೌದಲ್ಲಾ..? ಅನಿಸಿತು. ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ನಮ್ಮ ಮೀಡಿಯಾಗಳು ಮಿಸ್ ಮಾಡಿಕೊಂಡ ಸುದ್ದಿಯನ್ನು ಬಿಸ್ಲಳ್ಳಿಯವರ ಮೇಲ್ ಬಿಚ್ಚಿಟ್ಟಿತ್ತು.

ಒಬಾಮ ಭೇಟಿ ನೀಡುವುದಕ್ಕೆ ತಿಂಗಳುಗಳ ಮುನ್ನ ಅದೇ ಅಮೆರಿಕಾದಿಂದ ಇನ್ನೊಂದು ಭೇಟಿ ನಡೆದು ಹೋಗಿತ್ತು. ಅಮೆರಿಕಾದ ಆ ಭೇಟಿ ಮುಂಬೈ, ದೆಹಲಿಗೆ ಮಾತ್ರ ಸೀಮಿತವಾಗಿರಲಿಲ್ಲ. ಅದರಾಚೆಗೆ ಬೆಂಗಳೂರಿಗೆ, ಜಿಕೆವಿಕೆ ಕ್ಯಾಂಪಸ್ ಗೆ, ದೊಡ್ಡಬಳ್ಳಾಪುರದ ಗದ್ದೆಗೂ ಭೇಟಿ ನೀಡಿತ್ತು. ಅದು ಅಮೆರಿಕಾದ ಬಿ ಟಿ ಭತ್ತ. ಆದರೆ ಅದು ನಮ್ಮ ಮಾಧ್ಯಮಗಳ ಕಣ್ಣಿಗೆ ಬೀಳಲಿಲ್ಲ. ಬರಾಕ್ ಒಬಾಮಾ ಬಂದಂತೆ ಅವು 34 ಯುದ್ಧ ನೌಕೆಗಳನ್ನು, ಹಲವಾರು ಹೆಲಿಕಾಪ್ಟರ್ ಗಳನ್ನು, ಎರಡು ಜೆಟ್ ವಿಮಾನಗಳನ್ನು, 40 ಕಾರುಗಳನ್ನು, ಸೆಕ್ಯುರಿಟಿ ಗಾರ್ಡ್ ಗಳನ್ನು, ಮೂಸಿ ನೋಡುವ ನಾಯಿಗಳನ್ನು ಬಗಲಿಗಿಟ್ಟುಕೊಂಡು ಬರಲಿಲ್ಲ. ಬದಲಿಗೆ ಸದ್ದಿಲ್ಲದೆ, ಗುಪ್ತ್ ಗುಪ್ತ್ ಆಗಿ, ಹಿಂಬಾಗಿಲಿನಿಂದ ಬಂದು ಕೃಷಿ ವಿವಿ ಗಳನ್ನು, ಅಧ್ಯಯನ ಕೇಂದ್ರಗಳನ್ನು, ವಿಜ್ಞಾನಿಗಳನ್ನು ಭೇಟಿ ಮಾಡಿ, ದೊಡ್ಡಬಳ್ಳಾಪುರದ ಗದ್ದೆಯಲ್ಲಿ ಬೇರು ಬಿಟ್ಟಿತು.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ…

ಅದು ಆಗಿದ್ದು ಹೀಗೆ- ಫೇಸ್ ಬುಕ್ ನಲ್ಲಿ ಸಾಕಷ್ಟು ಕಾಲ ಕಳೆಯುವ ನಾನು ಅದೂ ಇದು ಜಾಲಾಡು ತ್ತಿದ್ದಾಗ ಒಂದು ವಿಡಿಯೋ ಕಣ್ಣಿಗೆ ಬಿತ್ತು . ಅದು  ಹೋಳಿ ಸಂಭ್ರಮದ ವಿಡಿಯೋ, ಹೋಳಿ ಬಗ್ಗೆ ತಲೆ ಚಿಟ್ಟಾಗುವಷ್ಟು ಫೋಟೋ, ಜಾಹೀರಾತು, ವಿಡಿಯೋ ನೋಡಿ ಸಾಕಾಗಿರುವ ನಾನು ಹಾಗೇ ಸುಮ್ಮನೆ ಮುಂದೆ ಹೋಗಿಬಿಡುತ್ತಿದ್ದೆನೇನೋ?  ಆದರೆ ಆ ವಿಡಿಯೋ ಮೇಲೆ ‘ಇದು ನೀವು ನೋಡಲೇ ಬೇಕಾದ ವಿಡಿಯೋ ಇದು’ ಅನ್ನುವ ಸ್ಪೆಷಲ್ ಶಿಫಾರಸ್ ಇತ್ತು . ಹಾಗಾಗಿ ಬಟನ್ ಒತ್ತಿದೆ.

ಅದು ಖಂಡಿತಾ ಹೋಳಿ ಸಂಭ್ರಮವನ್ನು ಬಣ್ಣಿಸುವ ವಿಡಿಯೋ. ಆದರೆ ಅಲ್ಲೊಂದು ವಿಶೇಷ ಇತ್ತು ಹುಡುಗರು ಗದ್ದಲ ಎಬ್ಬಿಸುವ, ಬಣ್ಣ ಎರಚಿಕೊಂಡು ಸಂಭ್ರಮಿಸುವ, ಆಕಾಶದಲ್ಲಿ ಹಾರುವ ವಿಮಾನಕ್ಕೂ ಬಣ್ಣ ಎರಚಲು ಹೋಗುವ, ಮನೆಗೆ ಬಂದ ಹಾಲಿನವ, ಇರುವ ರೇಡಿಯೋ ಎಲ್ಲಕ್ಕೂ ಬಣ್ಣ ಹಚ್ಹುವ ಹೋಳಿ ಉತ್ಸಾಹವನ್ನು ಆ ವಿಡಿಯೋ ಹಿಡಿದಿಟ್ಟಿತ್ತು.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ…

ಮೊನ್ನೆ ‘ಎಚ್ ಎಸ್ ವಿ ಅನಾತ್ಮ ಕಥನ’ ಬಿಡುಗಡೆ ಸಮಾರಂಭದಲ್ಲಿ ಮಾತನಾಡಬೇಕಾಗಿ ಬಂತು. ಎಚ್ ಎಸ್ ವೆಂಕಟೇಶ ಮೂರ್ತಿಯವರು ನನಗೇನು? ಎನ್ನುವ ಪ್ರಶ್ನೆಯೇ ನನ್ನ ಮುಂದಿರಲಿಲ್ಲ. ಏಕೆಂದರೆ ಎಚ್ ಎಸ್ ವಿ ಯನ್ನು ಓದುವುದು ಎಂದರೆ ಅದು ನನ್ನ ಯೌವ್ವನಕ್ಕೆ ಮರು ಭೇಟಿ ನೀಡಿದಂತೆ. ಎಚ್ ಎಸ್ ವಿ ರೂಪಿಸಿದ ಕಥೆ, ಕವಿತೆ, ಕಾದಂಬರಿಯನ್ನು ಹೀರಿಕೊಂಡೇ ನನ್ನ ಯೌವ್ವನ ಅರಳಿದ್ದು. ಹಾಗಾಗಿ ಎಚ್ ಎಸ್ ವಿ ಎಂದರೆ ನನ್ನ ಯೌವ್ವನ.

ಹಾಗೆ ಮಾತಾಡುತ್ತಿರುವಾಗಲೇ ನನಗೆ ಥಟ್ಟನೆ ಹೊಳೆದದ್ದು ‘ಔಟ್ ಲುಕ್’. ಈಗ 15 ವರ್ಷದ ಸಂಭ್ರಮದಲ್ಲಿರುವ, ದೇಶದ ಇಂಗ್ಲಿಷ್ ಮ್ಯಾಗಜಿನ್ ಜರ್ನಲಿಸಂಗೆ ಹೊಸ ಆಯಾಮ ಕೊಟ್ಟ, ಇಂಗ್ಲಿಷ್ ಮ್ಯಾಗಜಿನ್ ನ ವ್ಯಾಕರಣವನ್ನು ಮುರಿದು ಕಟ್ಟಿದ ‘ಔಟ್ ಲುಕ್’. ಔಟ್ ಲುಕ್ ನ ಅಸೋಸಿಯೇಟ್ ಎಡಿಟರ್, ಗೆಳೆಯ ಸುಗತ ಶ್ರೀನಿವಾಸರಾಜು ಬೆಂಗಳೂರಿನಲ್ಲಿ ಔಟ್ ಲುಕ್  ಹಮ್ಮಿಕೊಂಡಿದ್ದ ಸಂವಾದಕ್ಕೆ ಆಹ್ವಾನ ಕಳಿಸಿದಾಗ ನಾನು ನನ್ನ ಬೆರಳುಗಳನ್ನು ಎಣಿಸುತ್ತಾ ಹೋದೆ. ಹೇಗೆ ಒಂದು ಯೌವ್ವನ ನಮ್ಮಿಂದ ಗೊತ್ತಿಲ್ಲದೆ ಸರಿದುಹೋಗುತ್ತಿರುತ್ತದೆಯೋ ಹಾಗೆ ನಮಗೆ ಗೊತ್ತಿಲ್ಲದೇ ಔಟ್ ಲುಕ್ ಗೆ 15 ವರ್ಷ ಆಗಿಹೋಗಿತ್ತು.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ…

ರೈಲು ಸೊಲ್ಲಾಪುರ ದಾಟಿ ದಢ್ ದಢಿಲ್ ಸದ್ದು ಮಾಡುತ್ತ ಬಿಜಾಪುರದ ಕಡೆ ಓಡುತ್ತಿತ್ತು. ನಾನು ಕಿಟಕಿಯಾಚೆ ಕಣ್ಣು ನೆಟ್ಟು ಕೂತಿದ್ದೆ. ಎಲ್ಲಿ ನೋಡಿದರೂ ಬಯಲು. ಒಂದಿಷ್ಟು ಮಳೆ ಬಿದ್ದಿತ್ತು. ಎಂಬುವುದಕ್ಕೆ ಕುರುಹೆಂಬತೆ ಹಸಿರು ಕಾಣಿಸುತ್ತಿತ್ತು . ಒಂದೇ ಸಮ ಓಡಿದರೂ ಸುಸ್ತಾಗದ ‘ಬಸವ ಎಕ್ಸ್ ಪ್ರೆಸ್’ ಬಿಜಾಪುರ ಮುಟ್ಟಿಬಿಡುವ ಅವಸರದಲ್ಲಿ ಓಡುತ್ತಾ ಓಡುತ್ತಾ  ಒಂದು ಸೇತುವೆಗೆ ನುಗ್ಗಿತು.

ಸೇತುವೆಯ ಎರಡೂ ಕಡೆ ಕಣ್ಣು ಹಾಯಿಸಿದಷ್ಟೂ ನೀರು. ಆ ನೀರಿನ ಮಧ್ಯೆ ಮುಳಗಲೋ ಬೇಡವೋ ಎಂದು ಲೆಕ್ಕಾಚಾರ ಹಾಕುತ್ತಾ ಉಳಿದ ಒಂದು ಪುಟ್ಟ ದೇಗುಲ. ಕಣ್ಣಿಗೆ ಹಾಯ್ ಎನಿಸಿದ್ದೇ ತಡ ಅದು ಯಾವ ನದಿ ಅಂತ   ಹುಡುಕಲು ಆರಂಭಿಸಿದೆ. ನೇಮ್ ಪ್ಲೇಟ್ ಕಣ್ಣಿಗೆ ಬಿತ್ತು- ‘ಭೀಮಾ’. ಒಂದು ಕ್ಷಣ ಎದೆ ಝಲ್ ಎಂದಿತು.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ…

ಅದು ಹೀಗಾಯ್ತು-

ಮಧ್ಯಾಹ್ನ  ನನ್ನ ಚೇಂಬರಿಗೆ ‘ ಓವರ್ ಎ ಕಪ್ ಆಫ್ ಕಾಫಿ ‘ಗೆ ಬಂದ  ಜಯಪ್ರಕಾಶ್ ಶೆಟ್ಟಿ ಸಿಕ್ಕಾಪಟ್ಟೆ ಖುಷ್ ಮೂಡ್ ನಲ್ಲಿದ್ದರು. ಜಯಪ್ರಕಾಶ್ ಶೆಟ್ಟಿ ಇದ್ದಲ್ಲಿ ಒಂದಷ್ಟು ತರಲೆ, ಜೋಕ್, ಮಿಮಿಕ್ರಿ, ಮೈಮ್, ಸಿಕ್ಕಾಪಟ್ಟೆ ನಗು ಇರಲೇಬೇಕು. ಹಾಗೇ ಆ ದಿನವೂ ಒಂದಿಷ್ಟು ಜೋಕ್ ಕಟ್ ಮಾಡಲು ಸಿದ್ಧರಾಗಿ ಬಂದಂತಿತ್ತು.

ನನಗೆ ಆ ನಿಮಿಷ ಹೇಳತೀರದ ಕೆಲಸಗಳು. ನಾನು ಶೆಟ್ಟಿ ಜೋಕ್ ಗಳಿಗೆ ಖಂಡಿತಾ ಸಿದ್ಧನಿರಲಿಲ್ಲ. ಆದರೆ ಜಯಪ್ರಕಾಶ್ ಶೆಟ್ಟಿ ಬಿಡಲಿಲ್ಲ . ‘ನೀನೇ ಸಾಕಿದಾ ಗಿಣಿ, ನಿನ್ನ ಮುದ್ದಿನಾ ಮಣಿ, ಹದ್ದಾಗಿ ಕುಕ್ಕಿತಲ್ಲೋ..’ ಅಂತ ಹಾಡಲು ಶುರು ಮಾಡೇ ಬಿಟ್ಟರು. ಶೆಟ್ಟಿಗೆ ಯಾವಾಗಪ್ಪಾ  ಈ ಹಾಡಿನ ಖಯಾಲಿ ಶುರುವಾಯ್ತು ಅಂತ ನಾನೂ ಮುಖ ಬಿಗಿ  ಮಾಡಿ ಕುಳಿತೆ. ನನ್ನ ಬಿಗಿ ಮುಖಕ್ಕೆ ‘ಗೋಲಿ ಮಾರೋ’ ಎಂಬಂತೆ ‘ಡೋಂಟ್ ವರಿ ಚಿನ್ನ, ನಮಗೂ ಒಳ್ಳೆ ಟೈಂ ಬಂದೇ ಬರುತೈತೆ’ ಅಂತ ಇನ್ನೊಂದು ಹಾಡು ಶುರುವಿಟ್ಟುಕೊಂಡರು . ಶೆಟ್ಟಿ ಅಲ್ಲಿಗೇ ನಿಲ್ಲಿಸಲಿಲ್ಲ ‘ಇನ್ನು ಹತ್ತಿರ ಹತ್ತಿರ ಬರುವೆಯಾ …’ ಅಂತ ‘ಚಿತ್ರ’ ಹಿಂಸೆ ನೀಡತೊಡಗಿದರು. ಹಾಡು ಎಲ್ಲ ಖಾಲಿಯಾಯ್ತೇನೋ …’ಹೆಂಗೆ’ ಅನ್ನುವ ಹಾಗೆ ಮುಖ ನೋಡಿದರು.

ಪೂರ್ಣ ಓದಿಗೆ: ಮೀಡಿಯಾ ಮೈಂಡ್

 

Previous Older Entries

%d bloggers like this: