ಹೊಸ ತಾಜಾ ಅನುಭವಕ್ಕಾಗಿ- ಇಲ್ಲಿ ಕ್ಲಿಕ್ಕಿಸಿ
ದೆಹಲಿಯಲ್ಲಿ ರಹಮತ್
18 ಫೆಬ್ರ 2011 3 ಟಿಪ್ಪಣಿಗಳು
in 1, ಫ್ರೆಂಡ್ಸ್ ಕಾಲೊನಿ, ಬ್ಲಾಗ್ ಮಂಡಲ
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು!
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. ಅವನೀಂದ್ರನಾಥ್ ರಾವ್ ಅವರು ತರೀಕೆರೆಯವರ ಬೆನ್ನು ಬಿದ್ದರು.
ಮೊನ್ನೆ ಈದ್ ಮಿಲಾದ್ ಹಬ್ಬದ ಶುಭ ಘಳಿಗೆಯಲ್ಲಿ ಮುಂಜಾನೆ ಎರಡು ಕನಸು ಕಂಡಿದ್ದೆ.
ಒಂದು ಮಾಜಿ ರಾಷ್ಟ್ರಪತಿ, ಕವಿ, ತಂತ್ರಜ್ಞ, ಮಹಾನ್ ನಾಯಕ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಶ್ರೇಷ್ಠ ಮಾನವತಾವಾದಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಮ್ ಅವರ ‘ಸಂವತ್ಸರ ಉಪಾನ್ಯಾಸ’ ಆಲಿಸುವುದು.
ಎರಡನೆಯದು ಹಿಂದಿನ ದಿನ ಸಾಧ್ಯವಾಗದ ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ, ಕನ್ನಡದ ಪ್ರಸಿದ್ಧ ಬರಹಗಾರ ರಹಮತ್ ತರೀಕೆರೆ ಅವರನ್ನು ಕಂಡು ಮಾತನಾಡಿಸುವುದು.
ಪ್ರಶಸ್ತಿ ಪ್ರಧಾನ ಸಮಾರಂಭದ ದಿನ ಸಂಜೆಯ ಚಹಾ ಕೂಟದಲ್ಲಿ ತರೀಕೆರೆ ಅವರು ಕಾಣಿಸಲಿಲ್ಲ.
ಬಳಿಕ ಸಭಾಂಗಣದಲ್ಲಿ ಮೇಲೆ ವೇದಿಕೆಯ ಎಡ ಭಾಗದಲ್ಲಿ ಅವರನ್ನು ಕಂಡೆ.
ದೇಶದ 24 ಮಂದಿ ಪ್ರಶಸ್ತಿ ವಿಜೇತರನ್ನು ಸ್ವಾಗತಿಸುತ್ತಾ ಈಗಿನ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಕನ್ನಡಿಗ ಅಗ್ರಹಾರ ಕೃಷ್ಣಮೂರ್ತಿ ಅವರು ‘ನನ್ನ ಭಾಷೆಯ , ಕನ್ನಡದ ರಹಮತ್ ತರೀಕೆರೆ ಈ ಬಾರಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು’ ಎಂದಾಗ ಸಭಾಂಗಣ ಹರ್ಷೋದ್ಗಾರದಿಂದ ಚಪ್ಪಾಳೆ ತಟ್ಟಿತು.
ಮೊನ್ನೆ ಸಾಹಿತ್ಯ ಅಕಾಡೆಮಿಯು ‘ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್’ ನಲ್ಲಿ ‘ಸಂವತ್ಸರ ಉಪಾನ್ಯಾಸ’ ಏರ್ಪಡಿಸಿತ್ತು.
ದೇಶದ ಶ್ರೇಷ್ಠ ಸಾಹಿತಿ ಅಥವಾ ಓರ್ವ ಚಿಂತಕರಿಂದ ಉಪಾನ್ಯಾಸವನ್ನು ಕೊಡಿಸುವುದು ಇದರ ಉದ್ದೇಶ. ರಹಮತ್ ತರೀಕೆರೆ ಅವರು ಖಂಡಿತವಾಗಿ ಅಲ್ಲಿಗೆ ಬರುತ್ತಾರೆ ಎಂಬ ನಂಬಿಕೆ ನನಗಿತ್ತು. ಆದರೆ ತರೀಕೆರೆ ಕಾಣಿಸಲಿಲ್ಲ. ಹಿರಿಯ ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ ಹಾಗೂ ಎಲ್.ಹನುಮಂತಯ್ಯ ಅವರ ಭೇಟಿ ಆತ್ಮೀಯವಾಗಿತ್ತು. ಅವರಿಬ್ಬರ ನಡುವೆ ಕುಳಿತು ಡಾ. ಕಲಾಮ್ ಅವರ ಉಪಾನ್ಯಾಸ ಕೇಳಿದೆ. ಪಕ್ಕದಲ್ಲಿ ಒರಿಯಾದ ಶ್ರೇಷ್ಠ ಸಾಹಿತಿ ಸೀತಾಕಾಂತ ಮಹಾಪಾತ್ರ ಕುಳಿತಿದ್ದರು.
ಸೂಜಿಗಲ್ಲಿನಂತೆ ಸೆಳೆದ, ಮುಗ್ದ, ಆದರೆ ಪ್ರಖರ ಚಿಂತನೆಯ ಡಾ ಕಲಾಮ್ ಉಪಾನ್ಯಾಸ ಎಲ್ಲರನ್ನು ಮೈಮರೆಯುವಂತೆ ಮಾಡಿತು. ತಿರುವಳ್ಳುವರ್ ಅವರ ‘ತಿರುಕ್ಕುರಲ್’ ನನ್ನನ್ನು ಗಾಢವಾಗಿ ಪ್ರಭಾವಿಸಿದೆ ಎಂದು ಡಾ. ಕಲಾಮ್ ನುಡಿದರು. ಪ್ರತಿಯೊಬ್ಬರೂ ‘ಮನೆ ಗ್ರಂಥಾಲಯ’ ಹೊಂದಲು ನೆರೆದವರನ್ನು ಅವರು ಪ್ರಮಾಣ ಮಾಡಿಸಿದರು. ಡಾ. ಕಲಾಮ್ ಉಪಾನ್ಯಾಸ ಮುಗಿಸಿ ಹೊರಡುತ್ತಿದ್ದಂತೆ ಅಬಾಲ ವೃದ್ದರಾಗಿ ಜನರು ಅವರನ್ನು ಸ್ಪರ್ಶಿಸಲು ಮುಗಿಬೀಳುತ್ತಿದ್ದರು. ಹೊರಗೆ ಪತ್ನಿಯೊಡನೆ ತರೀಕೆರೆ ನಿಂತಿರುವುದನ್ನು ಕಂಡೆ. ನನ್ನ ಊಹೆ ನಿಜವಾಗಿತ್ತು.ನನ್ನ ಪರಿಚಯ ಮಾಡಿಕೊಂಡೆ. ‘ಅವನೀಂದ್ರನಾಥ್ ನೀವು ಗ್ರಂಥಪಾಲಕರಲ್ಲವೆ, ನಿಮ್ಮ ಬಗೆಗೆ ತಿಳಿದಿದ್ದೇನೆ ‘ಎಂದವರು ಹೇಳಿದಾಗ ನನಗೆ ಅಚ್ಚರಿಯಾಯಿತು.
ರಹಮತ್ ತರೀಕೆರೆ ಅವರು ಅಕಾಡೆಮಿ ಅಧ್ಯಕ್ಷ ಸುನೀಲ್ ಗಂಗೋಪಾಧ್ಯಾಯ ಅವರಿಂದ ಪ್ರಶಸ್ತಿ ಸ್ವೀಕರಿಸುವುದು
ನಿಮ್ಮ ಪ್ರಶಸ್ತಿವಿಜೇತ ‘ಕತ್ತಿಯಂಚಿನ ದಾರಿ’ ಕೃತಿಯ ಪ್ರಕಾಶಕ ನ.ರವಿ ಕುಮಾರ್ ನನಗೆ ಗೊತ್ತು. ನನ್ನ ಮೊದಲ ಪುಸ್ತಕ ‘ಸಮಯ ಸಂದರ್ಭ’ ವನ್ನು ಅವರೇ ಪ್ರಕಟಿಸಿದ್ದರು ಎಂದು ಹೇಳಿದೆ. ಅದಾಗಲೇ ಡಾ. ಅಬ್ದುಲ್ ಕಲಾಮ್ ಅವರ ಉಪಾನ್ಯಾಸ ಮತ್ತು ಆಕರ್ಷಣೆಯಿಂದ ಹೊರ ಬಂದಿರದ ತರೀಕೆರೆ ‘ಓರ್ವ ಮಾಜಿ ರಾಷ್ಟ್ರಪತಿ ಈ ಬಗೆಯಲ್ಲಿ ಜನಪ್ರಿಯತೆಯನ್ನು ಉಳಿಸಿಕೊಂಡಿರುವುದು ಅಚ್ಚರಿಯ ಸಂಗತಿ’ ಎಂದು ಉದ್ಗರಿಸಿದರು.
ಬೆಳಿಗ್ಗೆ ಅಕಾಡೆಮಿ ಹಮ್ಮಿಕೊಂಡಿದ್ದ ‘ರೈಟರ್ಸ್ ಮೀಟ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತರೀಕೆರೆ ಸಂಜೆ ವಿಶ್ರಾಂತಿ ಪಡೆಯಲು ಬಯಸಿದ್ದರಂತೆ. ಪತ್ನಿಯ ಒತ್ತಾಯದ ಮೇರೆಗೆ ಕಲಾಮ್ ಉಪಾನ್ಯಾಸ ಕೇಳಲು ಬಂದಿದ್ದಾಗಿ ನನ್ನಲ್ಲಿ ಹೇಳಿದರು. ಹಾಗಿಲ್ಲದೆ ಹೋಗಿದ್ದರೆ ಈ ಅವಕಾಶ ತಪ್ಪಿಹೋಗುತ್ತಿತ್ತು ಎಂದು ತರೀಕೆರೆ ಪತ್ನಿಯ ಸ್ಪೂರ್ತಿಯನ್ನು ನೆನೆದರು. ನಂತರ ರಾತ್ರಿ ‘ಪ್ರೆಸ್ ಕ್ಲಬ್’ನವರು ಆಯೋಜಿಸಿದ್ದ ಭೋಜನ ಕೂಟದಲ್ಲಿ ಭಾಗವಹಿಸಲು ತರೀಕೆರೆ ಪತ್ನಿಯೊಡನೆ ಹೆಜ್ಜೆ ಹಾಕಿದರು.
ತರೀಕೆರೆ ಅವರಿಗೆ ಬೀಳ್ಕೊಟ್ಟ ಬಳಿಕ ಒಂದು ದೃಶ್ಯ ಮನದಲ್ಲಿ ಮರುಕಳಿಸುತಿತ್ತು. ಉಪಾನ್ಯಾಸದ ಬಳಿಕ ಯುವಕನೋರ್ವ ‘ಭಾರತ 2020ರ ವೇಳೆಗೆ ಸೂಪರ್ ಪವರ್’ ರಾಷ್ಟ್ರ ಆಗುವ ಬಗೆ ಹೇಗೆ ಎಂದು ಡಾ. ಕಲಾಮ್ ಅವರಿಗೆ ಸವಾಲು ಹಾಕಿದ್ದ. ಆಶಾವಾದಿಯಾದ ಡಾ. ಕಲಾಮ್ ನೆರೆದವರಿಗೆ ಪ್ರಮಾಣ ಮಾಡಲು ಹೇಳಿದರು. ಅದು ಹೀಗಿತ್ತು.
‘ಐ ಕ್ಯಾನ್ ಡು ಇಟ್
ಯು ಕ್ಯಾನ್ ಡು ಇಟ್
ಇಂಡಿಯಾ ಕ್ಯಾನ್ ಡು ಇಟ್ ‘
ಮುಂಜಾನೆ ಕಂಡಿದ್ದ ನನ್ನೆರಡೂ ಕನಸುಗಳು ಸಾಕಾರಗೊಂಡಿದ್ದವು.
ನಾನು, ಗುಜರಿ ಆಯುವ ಹುಡುಗ..
17 ಫೆಬ್ರ 2011 22 ಟಿಪ್ಪಣಿಗಳು
in ಫ್ರೆಂಡ್ಸ್ ಕಾಲೊನಿ, ಬ್ಲಾಗ್ ಮಂಡಲ
ಮೌನದ ಮನೆಯ ಹಿತ್ತಲಲ್ಲಿ….
…ನಾನು ಅವನ ಮಗ
ಅವನ ಮೌನದ ಮನೆಯ
ಹಿತ್ತಲಲ್ಲಿ ನಿಂತ
ಗುಜರಿ ಆಯುವ ಹುಡುಗ!
-ಗುಜರಿ ಆಯುವ ಹುಡುಗ(ನನ್ನದೇ ಪದ್ಯವೊಂದರ ಸಾಲು)
***
ನೀವು ಯಾವತ್ತಾದರೂ ನಿಮ್ಮ ಮನೆಯ ಹಳೇ ಸಾಮಾನುಗಳನ್ನು ಗೋಣಿಯೊಳಗೆ ತುಂಬಿಸಿ ಯಾವುದಾದರೊಂದು ಗುಜರಿ ಅಂಗಡಿಯ ಮೆಟ್ಟಿಲನ್ನು ಹತ್ತಿದ್ದೀರಾ? ನೀವು ತಕ್ಕಡಿಯಲ್ಲಿ ತೂಗಿ ಕೊಟ್ಟ ಗುಜರಿ ವಸ್ತುಗಳು ನಿಮ್ಮ ಒಂದು ಕಾಲದ ‘ಸರ್ವಸ್ವ ಸತ್ಯ’ಗಳಾಗಿದ್ದವು ಎನ್ನುವುದು ಆ ಕ್ಷಣದಲ್ಲಿ ನಿಮಗೆ ಹೊಳೆದದ್ದಿದೆಯೆ? ನೀವು ನಿಮ್ಮ ಸಂಸಾರದೊಂದಿಗೆ ನಗು ನಗುತ್ತಾ ಜೊತೆಯಾಗಿ ಉಂಡ ಊಟದ ಬಟ್ಟಲನ್ನು, ಮದುಮಗನಿಗೆಂದು ಇಡೀ ದಿನ ಕೂತು, ‘ಅದಲ್ಲ ಇದು, ಇದಲ್ಲ ಅದು’ ಎಂದು ಆರಿಸಿದ್ದ ಚಪ್ಪಲಿಗಳನ್ನು ಗುಜರಿ ಅಂಗಡಿಯ ಯಜಮಾನ ನಿಷ್ಕರುಣೆಯಿಂದ ಹರಿದು, ಜಜ್ಜಿ ನಿರ್ಭಾವುಕನಾಗಿ ತಕ್ಕಡಿಯಲ್ಲಿಟ್ಟು ತೂಗಿ ಬೆಲೆ ಕಟ್ಟುತ್ತಿರುವಾಗ ನಿವ್ಮೊಳಗಿನ ಜೀವತಂತಿಯನ್ನು ಒಳಗೇ ಯಾರೋ ಮೀಟಿದಂತಾಗಿರಲಿಲ್ಲವೆ?
ನೀವು ಗುಜರಿ ಅಂಗಡಿಯೊಳಗೆ ಕಣ್ಣಾಯಿಸಿ…ಅಲ್ಲಿ ಹರಿದು ಬಿದ್ದಿರುವ ಪಾದಗಳು ಬೆಟ್ಟದಷ್ಟು ಎತ್ತರ! ಮುರಿದ ಬಕೀಟುಗಳು, ವಿರೂಪಗೊಂಡಿರುವ ಪಾತ್ರೆಗಳು, ತುಕ್ಕು ಹಿಡಿದಿರುವ ಡಬ್ಬಗಳು…ಬದುಕೇ ಅಲ್ಲಿ ರೆಕ್ಕೆ ಮುರಿದು ಬಿದ್ದಿದೆ. ಅವುಗಳ ಯೋಗ್ಯತೆಯೆಷ್ಟು ಎನ್ನುವುದನ್ನು ತಕ್ಕಡಿಯಲ್ಲಿ ತೂಗಿ ಬೆಲೆ ಕಟ್ಟಿ ಮೂಲೆಗೆ ಎಸೆದು ಬಿಟ್ಟಿರುವ ಗುಜರಿ ಅಂಗಡಿಯ ಯಜಮಾನ…ಹಳೆಯ ಮುರಿದ ಕಬ್ಬಿಣದ ಕುರ್ಚಿಯೊಂದರಲ್ಲಿ ‘ಕಾಲ’ನಂತೆ ರಾಜಮಾನನಾಗಿದ್ದಾನೆ!
ಇದೊಂಥರಾ ವ್ಯಾಲೆಂಟೈನ್ ಲವ್ ಸ್ಟೋರಿ
16 ಫೆಬ್ರ 2011 2 ಟಿಪ್ಪಣಿಗಳು
in ಫ್ರೆಂಡ್ಸ್ ಕಾಲೊನಿ, ಬ್ಲಾಗ್ ಮಂಡಲ
ಸಾರಿ ಕಣಯ್ಯ ನಾನು ನಿನ್ನ ಮರ್ತೆ ಬಿಟ್ಟಿದ್ದೆ..!
ನಾನು ಆಗತಾನೆ ಒಂದನೇ ತರಗತಿಗೆ ಕಾಲಿಟ್ಟದ್ದ ಸಮಯ. ನಮ್ಮ ಮನೆಗೆ ಅಕ್ಕರೆಯ ಸ್ನೇಹಿತನ ಆಗಮನವಾಯಿತು. ಅವನೋ ಮಹಾ ಮಾತುಗಾರ, ಸಂಗೀತಗಾರ, ವಾರ್ತಾವಾಚಕ, ಒಟ್ಟಿನಲ್ಲಿ ನಮ್ಮ ಮನೆಗೆ ವಿಶ್ವದ ದ್ವನಿಯಾಗಿದ್ದ. ಹಳ್ಳಿಯಲ್ಲಿ ಬಾಲ್ಯದ ಬದುಕು ಶುರುಮಾಡಿದ್ದ ನನಗೆ ಬಾಲ್ಯದ ಗೆಳೆಯನಾಗಿ ಬಂದಿದ್ದ . ನಾನು ನನ್ನ ಜೀವನದಲ್ಲಿ ನೋಡಿದ್ದ ಅಚ್ಚರಿಯ ನೋಟದ ಸ್ನೇಹಿತ ಇವನಾಗಿದ್ದ.
ಬಾಲ್ಯದಲ್ಲಿ ದೊಡ್ಡವರು ಹಾಕಿದ್ದನ್ನಷ್ಟೇ ಕೇಳುವ ಸುಯೋಗ ನಮಗೆ. ಹಾಸಿಗೆ ಬಿಟ್ಟು ಏಳುವ ಮುನ್ನ ಬೆಂಗಳೂರು ಆಕಾಶವಾಣಿಯ ಬೆಳಗಿನ ಗೀತಾರಾಧನ, ನಂತರ ಚಿಂತನ, ಓದುವ ಸಮಯದಲ್ಲಿ ಬರುತಿದ್ದ ಕನ್ನಡ ವಾರ್ತೆಗಳು. ನಂತರ ಕನ್ನಡ ಚಿತ್ರಗೀತೆಗಳು . ಅದರಲ್ಲಿ ಎಲ್.ಆರ್. ಈಶ್ವರಿಯ ಕ್ಯಾಬರೆ ಹಾಡುಗಳು ಬಂದರೆ ನಮ್ಮಪ್ಪ ಎಲ್ಲೇ ಇದ್ದರೂ ಓಡಿಬಂದು ರೇಡಿಯೋ ಸ್ವಿಚ್ ಆಫ್ ಮಾಡುತ್ತಿದ್ದರು. ಬಹುಷಃ ಮಕ್ಕಳಿಗೆ ಒಳ್ಳೆಯ ಮಾತುಗಳು ಮಾತ್ರ ಕಿವಿಗೆ ಬೀಳಲಿ ಎಂಬ ಉದ್ದೇಶವಿರಬಹುದು. ಹೀಗೆ ಬಂದ ಇವನು ನಿಧಾನವಾಗಿ ಮನೆಯ ಸದಸ್ಯರ ನೆಚ್ಚಿನ ಗೆಳೆಯನಾದ. ನಾನು ಪ್ರಾಥಮಿಕ ಶಾಲೆ ಯಿಂದ ನಾಲ್ಕನೇ ತರಗತಿ ಮುಗಿಸಿ ಮಳವಳ್ಳಿ ಪಟ್ಟಣಕ್ಕೆ ಮಿಡಲ್ ಸ್ಕೂಲ್ ಗೆ ಐದನೇ ಕ್ಲಾಸಿಗೆ ಸೇರಿದ ಮೇಲೆ ಇವನ ಸ್ನೇಹ ಬಲವಾಗಿ ನಾನು ಇವನ ಸನಿಹ ಕೂರತೊಡಗಿದೆ. ಇವನ ಆಕಾರ ನನಗೆ ಮೆಚ್ಚುಗೆ ಯಾಗಿ ನಾನು ಇವನ ಸೇವೆಗೆ ತೊಡಗಿ ಇವನ ಮಾಲಿಶ್ ಮಾಡುವಷ್ಟು ಆತ್ಮಿಯನಾದೆ
ಇವನೋ ನನಗೆ ತನ್ನ ವಿಶ್ವ ರೂಪದ ದರುಶನ ಹಂತ ಹಂತವಾಗಿ ಮಾಡಿಸತೊಡಗಿದ. ಇವನೇ ಸ್ವಾಮೀ ನನ್ನ ನೆಚ್ಚಿನ ಗೆಳೆಯ ಫಿಲಿಪ್ಸ್ ಪ್ರೆಸ್ಟೀಜ್ ರೇಡಿಯೋ. ಪಟ್ಟಣದ ಶಾಲೆಯ ಹುಡುಗನಾದ ನಾನು ಹೊಸ ಹೊಸ ವಿಚಾರಗಳ ಬಗ್ಗೆ ಮಾಹಿತಿ ತಿಳಿಯುವ ಹಾಗೆ ಮಾಡಿದವರು ನಮ್ಮ ಪುಷ್ಪಾವತಿ ಮೇಡಂ, ಹೌದು ಅವರು ಮಕ್ಕಳಾದ ನಮಗೆ ರೇಡಿಯೋ ಬಗ್ಗೆ ಅನೇಕ ಕುತೂಹಲಕಾರಿ ವಿಚಾರ ತಿಳಿಸಿ ನನಗೆ ಆಸಕ್ತಿ ಕೆರಳಲು ಕಾರಣವಾದರು
ಡೊಳ್ಳಿನ ತಾಳಕ್ಕೆ ಬಣ್ಣದ ಹೆಜ್ಜೆ …
12 ಫೆಬ್ರ 2011 ನಿಮ್ಮ ಟಿಪ್ಪಣಿ ಬರೆಯಿರಿ
in ಫ್ರೆಂಡ್ಸ್ ಕಾಲೊನಿ, ಬ್ಲಾಗ್ ಮಂಡಲ
-ಭೀಮಣ್ಣ ಗಜಾಪುರ
(ಪುರುಷರು ಮಾತ್ರವೇ ಭಾಗವಹಿಸುತ್ತಿದ್ದ ಜನಪದ ಕಲೆಗಳಿಗೆ ಮಹಿಳೆಯರ ಪ್ರವೇಶವಾಗುತ್ತಿದೆ. ಇದನ್ನು ಹೇಗೆ ಗ್ರಹಿಸಬೇಕು ಎನ್ನುವ ಬಗ್ಗೆ ತಾತ್ವಿಕವಾಗಿ ಇನ್ನು ಆಲೋಚಿಸಬೇಕಿದೆ. ಆದರೆ ಈ ಬದಲಾವಣೆಯ ಚಹರೆಗಳನ್ನು ಹಿಡಿಯಲು ಸೂಕ್ಷ್ಮವಾಗಿ ಅವುಗಳ ಬೆಳವಣಿಗೆಯನ್ನು ಗಮನಿಸಬೇಕಿದೆ. ವಿರುಪಾಪುರದ ಮಹಿಳೆಯರ ಡೊಳ್ಳು ಕಲೆಯ ಕಥಾನಕವನ್ನು ಕೂಡ್ಲಿಗಿಯ ಕ್ರಿಯಾಶೀಲ ಪತ್ರಕರ್ತ ಭೀಮಣ್ಣ ಗಜಾಪುರ ಅವರು ಇಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ. –ಸಂ)
ಬಣ್ಣ ಹಚ್ಚಿ ರಂಗಸಜ್ಜಿಕೆಯ ಮೇಲೆ 25ವಷ೯ಗಳಿಗಿಂತಲೂ ಹೆಚ್ಚು ಕಾಲ ನಟನೆ ಮತ್ತು ನಾಟ್ಯದ ಮೂಲಕ ರಂಗಾಸಕ್ತರನ್ನು ಸೆಳೆದ ಕೂಡ್ಲಿಗಿ ತಾ.ವಿರುಪಾಪುರ ಎಂಬ ಪುಟ್ಟ ಹಳ್ಳಿಯ ಹತ್ತಾರು ಕಲಾವಿದೆಯರು ಈಗ ಇಳಿವಯಸ್ಸಿನಲ್ಲಿಯೂ ತಮ್ಮ ಕ್ರಿಯಾಶೀಲತೆಯಿಂದ ಈಗ ಡೊಳ್ಳುಕುಣಿತ ಕಲಿಯಲು ಮುಂದಾಗಿದ್ದು ಈ ಮೂಲಕ ಹಿರಿಯ ರಂಗಕಲಾವಿದೆಯರು ತಮ್ಮ ಹಳ್ಳಿಯ ಇತರೆ ಕಿರಿಯ ರಂಗನಟಿಯರಿಗೂ ಮರೆಯಾಗುತ್ತಿರುವ ಭಜನೆ,ಕೋಲಾಟ,ಬಯಲಾಟ, ಜಾನಪದ ಸಣ್ಣಾಟ,ಡೊಳ್ಳುಕುಣಿತ ಕಲಿಸುವುದರ ಮೂಲಕ ಇಡೀ ಹಳ್ಳಿಯಲ್ಲಿಯೇ ಸಾಂಸ್ಕ್ರುತಿಕ ವಾತಾವರಣ ಮೂಡಿಸಿರುವುದು ಇಲ್ಲಿಯ ರಂಗನಟಿಯರ ಸಾಧನೆಯಾಗಿದೆ.
ಬಣ್ಣ ಹಚ್ಚಿ ಹಳ್ಳಿಗಳಲ್ಲಿ ಪೌರಾಣಿಕ,ಐತಿಹಾಸಿಕ,ಸಾಮಾಜಿಕ ನಾಟಕಗಳಲ್ಲಿ ನಿರಂತರ 35-40ವಷ೯ಗಳ ಕಾಲ ರಂಗಭೂಮಿಯಲ್ಲಿಯೇ ಬದುಕನ್ನು ಕಂಡ ವಿರುಪಾಪುರದ ಹತ್ತಾರು ಮಹಿಳೆಯರು ಇನ್ನೇನು ನಮ್ಮ ವಯಸ್ಸು ಇಳಿಮುಖವಾಗ್ತಿದೆ ಸಾಕಾಪ್ಪಾ ಈ ನಟನೆ ಸಹವಾಸ ಎಂದು ಮನೆಯಲ್ಲಿ ಇರಬಹುದಾಗಿತ್ತು.
ಆದರೆ ವಿರುಪಾಪುರದ ಈ ಹಿರಿಯ ರಂಗನಟಿಯರು ತಮ್ಮ ಹಳ್ಳಿಯ ಈಗಿನ ಯುವ ವಯಸ್ಸಿನ ರಂಗನಟಿಯರಿಗೆ ಈಗ ಮಾಗ೯ದಶ೯ಕರಾಗಿ ರಂಗಕಲೆಯ ಜೊತೆಗೆ ಅವರಿಗೆ ನಮ್ಮ ಹಳ್ಳಿಗಳಿಂದ ಮರೆಯಾಗುತ್ತಿರುವ ಗ್ರಾಮೀಣ ಕಲೆಗಳನ್ನು ಕಲಿಸುತ್ತಾ ಇದರ ಜೊತೆಗೆ ತಾವು ಅಭಿನಯಿಸುತ್ತಾ ಇಡೀ ಗ್ರಾಮವನ್ನೇ ಕಲೆಯ ತವರೂರಾಗಿ ಮಾಡಿರುವ ಇಲ್ಲಿಯ ಹಿರಿಯ ರಂಗನಟಿಯರ ಕಾಯ೯ ಮಾತ್ರ ಮಾದರಿಯಾಗಿದೆ.
ಆ ಹುಡುಗಿ..
10 ಫೆಬ್ರ 2011 6 ಟಿಪ್ಪಣಿಗಳು
in ಫ್ರೆಂಡ್ಸ್ ಕಾಲೊನಿ, ಬ್ಲಾಗ್ ಮಂಡಲ
ಫ್ರಾನ್ಸ್ ದೇಶದ ಈ 80+ ವರ್ಷದ ಹುಡುಗಿ , ಇತಿಹಾಸ ಹುಡುಕಿಕೊಂಡು ನಮ್ಮ ಮನೆಗೆ ಬಂದಿತ್ತು !!
ಕಾಡಿನ ನೆನಪುಗಳ ಅಂತಿಮ ಸಂಚಿಕೆ ಬರೆಯುತ್ತಿದ್ದೆ. ಗೆಳೆಯ ಸುನಿಲ್ ಫೋನ್ ಮಾಡಿ “ಹಾಯ್ ಬಾಲು, ಎಲ್ಲಿದ್ದೀಯ ಪಾಯಿ” ಅಂದಾ ನಾನು “ಯಾಕೋ ಏನ್ ಸಮಾಚಾರ ಅಂದೇ ” ಅದಕ್ಕೆ ಸುನಿಲ್ “ಅದೇ ಕಣೋ ಐವಾಕ್ ನಲ್ಲಿ ನನ್ನ ಒಬ್ಬ ಹೆಂಗಸು ತುಂಬಾ ಪರಿಚಯವಾಗಿದ್ದಾರೆ , ಆಯಮ್ಮ ಶ್ರೀ ರಂಗ ಪಟ್ಟಣ ದ ಬಗ್ಗೆ ಕೇಳ್ತಿದಾರೆ ಕಣೋ ಅದಕ್ಕೆ ಅವರನ್ನ ನಿಮ್ಮ ಮನೆಗೆ ಕಳಿಸುತ್ತಿದ್ದೇನೆ ಅವರಿಗೆ ಮಾಹಿತಿ ಕೊಡು ಗುರು” ಅಂದ, “ಸರಿಯಪ್ಪಾ ಬರೋಕೆ ಹೇಳು” ಅಂದು ಫೋನ್ ಇಟ್ಟೆ. ಭಾನುವಾರ ವನ್ನು ಸೋಮಾರಿ ಹಾಗೆ ಕಳೆಯಬೇಕೆಂಬ ಆಸೆಗೆ ತಡೆಯಾಯಿತು.
ಸ್ವಲ್ಪ ಹೊತ್ತಿಗೆ ನನ್ನ ಮೊಬೈಲ್ ಗೆ ಒಂದು ಕರೆ ಬಂತು mr. balu [ಬಲು !!! ] ” i am miichele from FRANCE ,YOUR FRIEND SUNNY TOLD ME TO MEET YOU , ARE YOU FREE NOW , “ಅಂತಾ ಒಬ್ಬ ಹೆಂಗಸಿನ ಧ್ವನಿ ಮಾತಾಡ್ತು. ನಾನು “o.k.o.k. please come to my house ” ಅಂತಾ ಹೇಳಿ ಮನೆ ವಿಳಾಸ ಅವರ ಕಾರಿನ ಚಾಲಕನಿಗೆ ತಿಳಿಸಿ ಫೋನ್ ಇಟ್ಟೆ.
ಮುಂದಿನ ಹತ್ತು ನಿಮಿಷಕ್ಕೆ ಫ್ರಾಸ್ ದೇಶದ 80+ ವರ್ಷದ ಈ ಹುಡುಗಿ ನಮ್ಮ ಮನೆಯಲ್ಲಿ ಹಾಜರ್. ಮನೆಗೆ ಬಂದ ವಿದೇಶಿ ಅತಿಥಿಗೆ ಮನೆಯವರ ಪರಿಚಯ ಆಗಿ ಉಪಚಾರ ಆದ ನಂತರ ಮಾತುಕತೆ ಆರಂಭ ವಾಯಿತು. “ಅಲ್ಲಮ್ಮ ನಿನಗೆ ನಮ್ದೇಶದ ಯಾವ ವಿಷಯ ಬೇಕು ಅಂತಾ ನನಗೆ ಗೊತ್ತಾಗ್ತಿಲ್ಲ” ಅಂತಾ ನಾನೇ ಮಾತಿಗೆ ಶುರುಮಾಡಿದೆ. ಅದಕ್ಕೆ ಆ ಹುಡುಗಿ ನೋಡು “ನಮ್ಮ ಫ್ರಾನ್ಸ್ ದೇಶಕ್ಕೂ ಶ್ರೀ ರಂಗ ಪಟ್ಟಣ ಕ್ಕೂ ಸಂಬಂಧವಿತ್ತು ಅಂತಾ ಭಾರತಕ್ಕೆ ಬರುವ ಮೊದಲು ನನಗೆ ತಿಳಿಯಿತು ಅದರ ಬಗ್ಗೆ ನನಗೆ ಮಾಹಿತಿ ಬೇಕೂ , ಹಲವರನ್ನು ವಿಚಾರಿಸಿದೆ ನಮಗೆ ಗೊತ್ತಿಲ್ಲಾ ಅಂತಾರೆ ಹೀಗಾಗಿ ನನ್ನ ಬಹಳಷ್ಟು ಸಮಯ ಕಳೆದು ಹೋಯ್ತು. ನಂತರ ಪರಿಚಯವಾದ ಸುನಿಲ್ ನಿನ್ನ ಬಗ್ಗೆ ಹಿಳಿದ ಅದಕ್ಕೆ ನಿನ್ನ ಬಳಿ ಬಂದೆ” ಅಂದರು.
‘ಬೊಳುವಾರು’ ದಾರಿಯಲ್ಲೊಂದು ಇಣುಕು…
29 ಜನ 2011 ನಿಮ್ಮ ಟಿಪ್ಪಣಿ ಬರೆಯಿರಿ
in ಫ್ರೆಂಡ್ಸ್ ಕಾಲೊನಿ, ಬುಕ್ ಬಝಾರ್, ಬ್ಲಾಗ್ ಮಂಡಲ
ನಾಲ್ಕು ದಿನಗಳ ಹಿಂದೆ ಇದ್ದಕ್ಕಿದ್ದಂತೆಯೇ ನನ್ನ ಮೆಚ್ಚಿನ ಕತೆಗಾರ ಬೊಳುವಾರು ಮೊಹಮ್ಮದ್ ಕುಂಞಯವರು ಮೊಬೈಲ್ ಕರೆ ಮಾಡಿದ್ದರು. ‘ನಿಮಗೆ ಥ್ಯಾಂಕ್ಸ್ ಹೇಳಲು ಫೋನ್ ಮಾಡುತ್ತಿದ್ದೇನೆ’ ಎಂದು ಬಿಟ್ಟರು. ‘ಯಾಕೆ’ ಎನ್ನುವುದು ಅರ್ಥವಾಗಲಿಲ್ಲ. ಅವರೇ ಮುಂದುವರಿಸಿದರು ‘‘ನಾನು ಬರೆಯುತ್ತಿರುವ ಕಾದಂಬರಿ 500 ಪುಟದಲ್ಲೇ ನಿಂತಿತ್ತು. ನೀವು ನನ್ನ ಬಗ್ಗೆ ಪತ್ರಿಕೆಯಲ್ಲಿ ಬರೆದಿದ್ದ ಲೇಖನವನ್ನು ಮೊನ್ನೆ ಓದಿದ ಬಳಿಕ ಮತ್ತೆ ಬರೆಯುವುದಕ್ಕೆ ಸ್ಫೂರ್ತಿ ಬಂತು. ಈಗ ಮತ್ತೆ ಬರಹ ಮುಂದುವರಿಸುತ್ತಿದ್ದೇನೆ. ಅದಕ್ಕಾಗಿ ನಿಮಗೆ ಥ್ಯಾಂಕ್ಸ್ ಹೇಳುತ್ತಿದ್ದೇನೆ’’ ಎಂದು ಬಿಟ್ಟರು. ಯಾವ ಲೇಖಕ ನಮ್ಮ ಬಾಲ್ಯವನ್ನು ತನ್ನ ಕತೆ,ಕಾದಂಬರಿಗಳ ಮೂಲಕ ಶ್ರೀಮಂತಗೊಳಿಸಿದ್ದನೋ, ಯಾವ ಲೇಖಕ ನಮ್ಮ ಚಿಂತನೆಗಳನ್ನು, ವಿಚಾರಗಳನ್ನು ತಿದ್ದಿ ತೀಡಿದ್ದನೋ, ಯಾವ ಲೇಖಕ ಅಕ್ಷರಗಳನ್ನು ಉಣಿಸಿ ನಮ್ಮನ್ನು ಬೆಳೆಸಿದ್ದನೋ ಆ ಲೇಖಕ ಏಕಾಏಕಿ ಹೀಗಂದು ಬಿಟ್ಚರೆ, ನಮ್ಮಂತಹ ತರುಣರ ಸ್ಥಿತಿಯೇನಾಗಬೇಕು? ಅಲ್ಲವೆ!? ‘‘ನಿಮ್ಮದು ದೊಡ್ಡ ಮಾತು…ಸಾರ್…’’ ಎಂದು ಬಿಟ್ಟೆ. ಆದರೆ ಅವರು ತುಸು ಭಾವುಕರಾಗಿದ್ದರು ಎಂದು ಕಾಣುತ್ತದೆ ‘‘ಇಲ್ಲ ಬಶೀರ್…ಇದು ನನ್ನ ಹೃದಯದಿಂದ ಬಂದ ಮಾತು…’’ ಎಂದರು.‘‘ಬರೆಯುವುದು ನಿಂತಾಗೆಲ್ಲ ನೀವು ನನ್ನ ಬಗ್ಗೆ ಬರೆದ ಲೇಖನವನ್ನು ಓದುತ್ತಾ…ಮತ್ತೆ ಬರೆಯಲು ಸ್ಫೂರ್ತಿ ಪಡೆಯುತ್ತೇನೆ’’ ಎಂದರು. ಈಗ ಭಾವುಕನಾಗುವ ಕ್ಷಣ ನನ್ನದು. ಬೊಳುವಾರರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಆ ಲೇಖನವನ್ನು ಬರೆದಿದ್ದೆ. ತುಸು ಅವಸರದಿಂದಲೇ ಗೀಚಿದ್ದೆ. ಅವರ ಬರಹಕ್ಕೆ ಸ್ಫೂರ್ತಿ ಕೊಡುವಷ್ಟು ಸುಂದರವಾಗಿದೆಯೇ ಅದು? ಅಥವಾ ತಮ್ಮ ಮಾತುಗಳ ಮೂಲಕ ನನಗೇ ಬರೆಯುವುದಕ್ಕೆ ಸ್ಫೂರ್ತಿ ಕೊಡುತ್ತಿದ್ದಾರೆಯೆ? ಆ ಕ್ಷಣಕ್ಕೆ ನನಗೆ ಅರ್ಥವಾಗಲಿಲ್ಲ. ಆದರೆ, ಅವರ ಮಾತುಗಳ ‘ಹ್ಯಾಂಗೋವರ್’ನಿಂದ ಇನ್ನೂ ನಾನು ಹೊರ ಬಂದಿಲ್ಲ. ಬೊಳುವಾರರ ಕುರಿತಂತೆ ನಾನು ಪತ್ರಿಕೆಯಲ್ಲಿ ಬರೆದ ಆ ಲೇಖನವನ್ನು ಇಲ್ಲಿ ನಿಮ್ಮ ಮುಂದೆ ಇಟ್ಟಿದ್ದೇನೆ.
ಬೊಳುವಾರು!
ಅದು ಎಂಬತ್ತರ ದಶಕದ ದಿನಗಳು.
ಪುತ್ತೂರು, ಉಪ್ಪಿನಂಗಡಿ ಆಸುಪಾಸಿನಲ್ಲಿ ಮಾತ್ರವಲ್ಲ, ದಕ್ಷಿಣ ಕನ್ನಡಾದ್ಯಂತ ಬೊಳುವಾರು ಎನ್ನುವ ಪುಟ್ಟ ಊರಿನ ಕುಖ್ಯಾತಿ ಹರಡಿತ್ತು. ದಕ್ಷಿಣಕನ್ನಡದ ಸಂಘಪರಿವಾರದ ಬೀಜ ಮೊಳಕೆ ಯೊಡೆದು ಹಬ್ಬಿದ್ದು ಇದೇ ಬೊಳುವಾರಿನಲ್ಲಿ. ಪುತ್ತೂರು ಆಗ ಸಂಪೂರ್ಣ ಬಿಜೆಪಿ ಮತ್ತು ಆರೆಸ್ಸೆಸ್ ಕೈ ವಶವಾಗಿತ್ತು. ಉರಿಮಜಲು ರಾಮಭಟ್ಟರು ಪುತ್ತೂರಿನ ಶಾಸಕರಾಗಿದ್ದ ಕಾಲ ಅದು. ಬೊಳುವಾರಿನ ಸಂಘಪರಿವಾರದ ಹುಡುಗರ ‘ಗ್ಯಾಂಗ್‌ವಾರ್’ಗಳು ಸುತ್ತಲಿನ ಪರಿಸರದಲ್ಲಿ ಕುಖ್ಯಾತಿಯನ್ನು ಪಡೆದಿದ್ದವು. ಉಪ್ಪಿನಂಗಡಿ ಆಸುಪಾಸಿನ ಮುಸ್ಲಿಮರು ಪುತ್ತೂರಿಗೆ ಕಾಲಿಡಲು ಅಂಜುತ್ತಿದ ದಿನಗಳದು. ಇಂತಹ ಸಂದರ್ಭದಲ್ಲೇ ಮುತ್ತಪ್ಪ ರೈ ಮತ್ತು ಆತನ ಹುಡುಗರ ಪ್ರವೇಶ ವಾಯಿತು. ವಿನಯಕುಮಾರ್ ಸೊರಕೆ ಎಂಬ ಯುವ ತರುಣ ರಾಜಕೀಯಕ್ಕೆ ಕಾಲಿಟ್ಟರು. ಉರಿಮಜಲು ರಾಮಭಟ್ಟರಿಂದ ಪುತ್ತೂರು ತಾಲೂಕಿನ ಜನ ಅದೆಷ್ಟು ಬೇಸತ್ತು ಹೋಗಿದ್ದ ರೆಂದರೆ, ಸೊರಕೆ ಹೆಸರು ಅಂದಿನ ವಿಧಾನಸಭಾ ಚುನಾವಣೆಯಲ್ಲಿ ಮಿಂಚಿನ ಸಂಚಾರವನ್ನೇ ಮಾಡಿತು. ಆ ಚುನಾವಣೆಯಲ್ಲಿ ಭಾರೀ ಬಹು ಮತದಿಂದ ವಿನಯಕುಮಾರ್ ಎನ್ನುವ ಅಮುಲ್ ಬೇಬಿ ಆಯ್ಕೆಯಾದರು. ಈ ಗೆಲುವು ಪುತ್ತೂರಿನ ಮೇಲೆ ಅದೆಷ್ಟು ಪರಿಣಾಮ ಬೀರಿ ತೆಂದರೆ, ನಿಧಾನಕ್ಕೆ ಕೋಮುಗಲಭೆ, ಗ್ಯಾಂಗ್ ವಾರ್‌ಗಳ ಸದ್ದಡಗಿತು. ಆರೆಸ್ಸೆಸ್‌ನ ಅಧಿನಾಯಕ ಕಲ್ಲಡ್ಕ ಪ್ರಭಾಕರ ಭಟ್ಟರ ಬಾವ ಉರಿಮಜಲು ರಾಮಭಟ್ಟರು ಶಾಶ್ವತ ಮೂಲೆ ಸೇರಿದರು. ನಿಧಾನಕ್ಕೆ ‘ಬೊಳವಾರ’ನ್ನು ಜನ ಮರೆಯತೊಡಗಿ ದರು.
ಭೀಮಸೇನ ಜೋಷಿ ಜೋಡಿ ಕ್ರಿಕೆಟ್..
28 ಜನ 2011 ನಿಮ್ಮ ಟಿಪ್ಪಣಿ ಬರೆಯಿರಿ
in ಫ್ರೆಂಡ್ಸ್ ಕಾಲೊನಿ, ಬ್ಲಾಗ್ ಮಂಡಲ
ಭೀಮಸೇನ್ ಜೋಶಿ ಅವರ ಎರಡು ಓವರ್ ಬ್ಯಾಟಿಂಗ್
-ಡಿ ಗರುಡ
ನಮ್ಮೂರಿನ ಮಹಾ ಗಾಯಕಾ ಭೀಮಸೇನ್ ಜೋಶಿ ಅವರು ನಮ್ಮನ್ನ ಬಿಟ್ಟು ಹೋದ್ರು. ಅದಕ್ಕ ಭಾಳ ಧುಕ್ಕಾ ಆತು. ನಮ್ಮೂರಿನ ಇಬ್ಬರು ಮಹಾ ಗಾಯಕರು ಒಬ್ಬರಾದಮ್ಯಾಗ ಒಬ್ರು ಹ್ವಾದ್ರು. ಅದಕ್ಕ ಭಾರಿ ಧುಕ್ಕಾ ಆಗ್ಯದ. ಪಂಡಿತ್ ಪುಟ್ಟರಾಜ ಗವಾಯಿಗೋಳು ಹ್ವಾದ್ರು; ಆಮ್ಯಾಗ ಪಂಡಿತ್ ಭೀಮಸೇನ್ ಜೋಶಿಯವ್ರು ಹ್ವಾದ್ರು. ಇಬ್ರೂ ದೊಡ್ಡ ಗಾಯಕ್ರು. ದೇಶಾ ಮಾತ್ರ ಅಲ್ಲ ವಿದೇಶಾನೂ ಮೆಚ್ಚಿಕೊಂಡಿದ್ದ ಗಾಯಕ್ರು ಅವ್ರು. ಅಂಥಾ ಗಾಯಕ್ರು ನಮ್ಮೂರಿನವ್ರು ಅಂತ ಹೇಳಿಕೊಳ್ಳಾಕ ಹೆಮ್ಮೆ ಆಗ್ತತ.
ಗವಾಯಿಗಳನ್ನ ಮಠದಾಗ ಪಾದ ಮುಟ್ಟಿ ನಮಸ್ಕಾರಾ ಮಾಡಿ ಆಶಿರ್ವಾದಾ ಪಡೀತಿದ್ವಿ. ಅವ್ರಿಗೆ ನಮ್ಮ ಊರಿನ್ಯಾಗ ದೇವ್ರ ಸ್ಥಾನ. ಭೀಮಸೇನ್ ಜೋಶಿ ಅವರೂ ಹಾಂಗ ಇದ್ರು. ದೇವರಹಾಂಗ ಇದ್ದ ಮನುಷಾರು ಅವರು. ಯಾರಿಗೂ ಕೆಟ್ಟದ್ದು ಮಾತಡಿದ್ದು ನಾವಂತೂ ಊರಾಗಿದ್ದವ್ರು ಕೇಳಿಲ್ಲಾ. ಹಾಡಿಕೊಂಡು, ಹಾಡು ಕೇಳಿಸಿ ಸಂತೋಷಾ ಪಡತಿದ್ರು.
ನಾನು ಸಣ್ಣವಾಗಿದ್ದಾಗ ಅವರನ್ನ ಮೂರು-ನಾಕ್ ಬಾರಿ ನೋಡಿದ್ದೆ. ಹತ್ತಿರದಾಗಿಂದ ಮಾತಾಡಿಸಿದ್ದೆ, ಮಜಾ ಅಂದ್ರ ಒಮ್ಮೆ ಅವರ ಜೊತಿಗೆ ಕ್ರಿಕೆಟ್ ಆಟಾನೂ ನಮ್ಮ ಗೆಳೆಯಾರ ಆಡಿದ್ದೆ. ಆಮ್ಯಾಗ ನೋಡಿದ್ದು ಒಮ್ಮೆ ಪುಣೆನ್ಯಾಗ ನಮ್ಮ ಗೆಳಿಯಾ ಸುನಿಲ್ ಮರಾಠೆ ಹೋಟೆಲಿನ್ಯಾಗ. ಆವಾಗ ಅವರ ಜೊತಿಗೆ ಮಾತಾಡಿ, ಗದಗಿನ ನಮ್ಮ ಓಣ್ಯಾಗ ಒಮ್ಮೆ ಕ್ರಿಕೆಟ್ ಆಡಿದ್ದನ್ನ ನಾನು ಮತ್ತ ಸುನಿಲ್ ಮರಾಠೆ ನೆನಪಿಸಿದ್ವಿ. ಆವಾಗ ಅವ್ರು “ಭಾಳ ದೊಡ್ಡವ್ರ ಆಗಿರಲ್ಲಾ” ಅಂತ ಹೇಳಿದ್ದು ಇನ್ನು ನನ್ನ ನೆನಪಿನ್ಯಾಗ ಐತಿ.
ಸುನಿಲ್ ಮರಾಠೆ ಗದಗಿನಿಂದ ಹ್ವಾದಮ್ಯಾಗ, ಪುಣೆನ್ಯಾಗ ಹೋಟೆಲ್ ಮಾಡಿಕೊಂಡು ದೊಡ್ಡ ಹೋಟೆಲ್ ಉದ್ಯಮಿ ಆದಾವ. ಭಿಮಸೇನ್ ಜೋಶಿ ಅವರು ಆಗಾಗ ಅವನ ಹೋಟೆಲಿಗೆ ಬರತಿದ್ರು. ನಾನೂ ಒಮ್ಮೆ ಹಿಂಗ ಹೋಗಿದ್ದಾಗ ಅಲ್ಲೆ ಸಿಕ್ಕಿದ್ರು. ಗರುಡರ ಮನಿ ಹುಡುಗಾ ಅಂತ ಹೇಳಿ ನೆನಪು ಮಾಡಿಕೊಟ್ಟಾಗ “ವಲ್ಲಭನ ಮಗಾ ಏನು…?” ಅಂತ ಕೇಳಿದ್ರು. ನಾನು “ಹೌದ್ರಿ; ಅವತ್ತ ನಾವು ಸಣ್ಣವ್ರು ಇದ್ದಾಗ ನಿಮ್ಮನಿ ಹಿಂದಿನ ಓಣಿನ್ಯಾಗ ಕ್ರಿಕೆಟ್ ಆಡಿತಿದ್ವಿ. ಅವತ್ತೊಮ್ಮೆ ನೀವು ನಮ್ಮ ಜೊತಿಗೆ ಆಟಾ ಆಡಿದ್ರ್ಯಲ್ಲಾ…!” ಅಂತ ಹೇಳಿ ನೆನಪು ಮಾಡಿಕೊಟ್ಟಿದ್ದೆ. ಆವಾಗ ಅವರು ಸಣ್ಣ ಮಕ್ಕಳಹಾಂಗ ನಕ್ಕಿದ್ದು ಇನ್ನೂ ಕಣ್ಣಮುಂದ ಕಟ್ಟಿಧಾಂಗ ಅದ.
ಅವರೆ ಕಾಳು ಸೀಸನ್ ಮುಗಿಯುವ ಮುನ್ನ
27 ಜನ 2011 3 ಟಿಪ್ಪಣಿಗಳು
in ಫ್ರೆಂಡ್ಸ್ ಕಾಲೊನಿ, ಬ್ಲಾಗ್ ಮಂಡಲ
ಬೆಂಗಳೂರಿಗೆ ಬಂದ ಮೊದಲ ಎರಡು ವರ್ಷ ನಾನು ಅವರೆ ಕಾಳಿನ ಸುದ್ದಿಗೆ ಹೋಗ್ಲೇ ಇಲ್ಲ. ಮುಂಬೈನಲ್ಲಿ ಅದು ಸಿಗುತ್ತಿರಲಿಲ್ಲ.ನಮ್ಮ ಆಫಿಸ್ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ನ ಏಳನೆ ಮಹಡಿಯಲ್ಲಿತ್ತು. ಕೆಲವೊಮ್ಮೆ break ತೆಗೊಂಡು ಕಿಟಕಿಯಿಂದ ಕೆಳಗೆ ನೋಡಿದ್ರೆ, ಕೆಳಗಡೆ ತರಕಾರಿ ಮಾರುವವರು ರಾಶಿ ರಾಶಿ ಅವರೆಕಾಳನ್ನು ಬಿಡಿಸಿ ನೀರಿನಲ್ಲಿ ಹಾಕಿಡತಿದ್ರು. ನಮ್ಮ ಆಫಿಸ್ ನವರು ಯಾರಿಗೂ ಅವರೆಕಾಳಿನ ಬಗ್ಗೆ ತಿಳಿದಿರಲಿಲ್ಲ. ಜನರು ಮುಗಿಬಿದ್ದು ತೆಗೆದುಕೊಂಡು ಹೋಗುವುದನ್ನು ನೋಡುತ್ತಿದ್ದೆ ವಿನ: ನಾನಂತು ಅದರ ತಂಟೆಗೆ ಹೋಗಿರಲಿಲ್ಲ.
ಆಮೇಲೆ ನಿಧಾನವಾಗಿ ವಿಜಯಕರ್ನಾಟಕದ ಅಂಕಣಕಾರರಾದ ಶ್ರೀವತ್ಸ ಜೋಶಿಯವರ ಪರಿಚಯವಾಯ್ತು. ಅವರ ಮೂಲಕ thatskannada ಡಾಟ್ ಕಾಮ್ websiteನ ಪರಿಚಯವಾಯ್ತು. ಅಲ್ಲಿ ಅವರೆಕಾಳಿನ ಉಪ್ಪಿಟ್ಟಿನ ವಿವರಣೆ ಹಾಗೂ ಕಮೆಂಟ್ ಗಳನ್ನು ಓದಿ ಬಾಯಲ್ಲಿ ನೀರೂರಿತು. ನಾನು ಯಾವಗಾದರೊಮ್ಮೆ try ಮಾಡಬೇಕೆಂದು ಅಂದುಕೊಂಡಿದ್ದೆ ಅಷ್ಟೆ. ಶ್ರೀಕಾಂತ್ ಹತ್ತಿರ mention ಮಾಡಿದಾಗ, ಅವರು ಹಿಂದೊಮ್ಮೆ ಅವರ ಫ್ರೆಂಡ್ ಮನೆಯಲ್ಲಿ ಅವರೆಕಾಳು ಉಪ್ಪಿಟ್ಟು ಮತ್ತು ಚಟ್ನಿ ತಿಂದಿದ್ದು ನೆನಸಿಕೊಂಡು, ಸ್ವಲ್ಪ extra fittings (ಮಕ್ಕಳ term) ಇಟ್ಟು ಅದನ್ನು ರಸವತ್ತಾಗಿ ಬಣ್ಣಿಸಿದಾಗ, ಸ್ವಲ್ಪ ಹೊಟ್ಟೆಕಿಚ್ಚಾಗಿದ್ದು ನಿಜ. but ಪುನಃ ಅದು ನನ್ನ ಮನಸ್ಸಿನಿಂದ ಆಚೆ ಹೋಯ್ತು. ಮತ್ತು ಅಷ್ಟರಲ್ಲೇ ನಮ್ಮ ಹೊಸ ಆಫಿಸ್ ರಾಜಾಜಿನಗರ ಎರಡನೇ ಬ್ಲಾಕ್ ನಲ್ಲಿ ಶುರು ಮಾಡಿದ್ವಿ. ನನ್ನನ್ನು ಅಲ್ಲಿಗೆ ವರ್ಗಾಯಿಸಿದರು.
ಹೊಸ ಆಫಿಸಿಗೆ ಹೋದ ಕೆಲವೆ ದಿನದಲ್ಲಿ ನಮ್ಮ ಆಫಿಸ್ ಗೆ ಗೋವಿಂದರಾಜನ್ ಅನ್ನುವವರು ನಮ್ಮನ್ನು join ಆದರು. ಅವರು ಕೆಲವೊಮ್ಮೆ ಬೆಳಿಗ್ಗೆ ಅಲ್ಲಿ ಹತ್ತಿರದ ಹೋಟಲ್ ನಿಂದ ಅವರ favorite ಪಡ್ಡು (hoppers) ತರಿಸುತ್ತಿದ್ದರು. ಒಂದು ಸಲ ಪಡ್ಡು ಇರಲಿಲ್ಲ ಅದಕ್ಕೆ ಅವರೆಕಾಳಿನ ಅಕ್ಕಿ ರೊಟ್ಟಿ ತರಿಸಿ ತಿನ್ನುವಾಗ ನನಗೆ ಅದರ ಪರಿಮಳ ಬಂದು ನಾಚಿಕೆ ಬಿಟ್ಟು ಅವರ ಹತ್ತಿರ ಒಂದು piece ತೆಗೊಂಡು ತಿಂದೆ. ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ ಪರಮಾನಂದಂ..ಪರಮಸುಖದಂ…. ಆಮೇಲೆ ಅವರು ಹೋಟಲ್ ನಿಂದ ಏನಾದ್ರೂ ತರಿಸುವಾಗ ನಾನು ನನಗೋಸ್ಕರ ಅಕ್ಕಿ ರೊಟ್ಟಿ ತರಿಸ್ತಿದ್ದೆ. ಬೆಳಿಗ್ಗೆ ಒಂದು ರೊಟ್ಟಿ ತಿಂದ್ರೆ ಆಮೇಲೆ ಇಡೀ ದಿನ ಹಸಿವೆ ಆಗ್ತಿರಲಿಲ್ಲ. ನನ್ನ ಊಟದ ಡಬ್ಬಿ ಉಳಿದವರು ಹಂಚಿಕೊಳ್ಳುತ್ತಿದ್ದರು.ಮತ್ತೆ ಮನೇಯಲ್ಲೇ ಮಾಡಬೇಕೆನ್ನುವ ಹುಮ್ಮಸ್ಸು ಬಂತು. ಯಾಕೆಂದ್ರೆ ಅಕ್ಕಿ ರೊಟ್ಟಿ ಸಿಗುವ ಅಶೋಕಾ ಹೋಟಲ್ ಮುಚ್ಚಿ ಬಿಟ್ಟು ಅಲ್ಲಿ ರಾಗಿ ಮುದ್ದೆ ಹೋಟಲ್ ಬಂತು 😦
ಲೈಫು ಚಿತ್ರಾನ್ನ
26 ಜನ 2011 4 ಟಿಪ್ಪಣಿಗಳು
in ಫ್ರೆಂಡ್ಸ್ ಕಾಲೊನಿ, ಬ್ಲಾಗ್ ಮಂಡಲ
This article was first published in Swarnasetu 2004, an annual magazine brought out by Kannada Koota of Northern California. Later it was also published in thatskannada web portal.
ಏನ್ ಗುರು ಸಮಾಚಾರ? ಸಪ್ಪೆ ಮುಖ ಹಾಕಿಕೊಂಡಿದ್ದ ಆಪ್ತ ಗೆಳೆಯನ್ನ ಈ ರೀತಿ ನಾನು ಕೇಳಿದಾಗ ಬಂದ ಉತ್ತರ ’ಲೈಫು ಚಿತ್ರಾನ್ನ ಆಗೋಗಿದೆ ಗುರು’ ಎಂದು. ಮನಸ್ಸಿಗೆ ಬಹಳ ವ್ಯಥೆಯಾಯಿತು. ಪಾಪ! ಹೀಗೇಕಾಯಿತು? ಚಿತ್ರಾನ್ನಕ್ಕೆ ಈ ಗತಿ ಏಕೆ ಬಂತು? ಜೀವನದ ಅರಾಜಕತೆಯನ್ನು ಹಾಗು ನೀರಸತೆಯನ್ನು ವರ್ಣಿಸಲು ಚಿತ್ರಾನ್ನವೇ ಆಗಬೇಕೆ? ಹಾಗೆ ನೋಡಿದರೆ ಚಿತ್ರಾನ್ನ ತಿನ್ನಲು ಬಹಳಾ ರುಚಿ ಅಗಿರುತ್ತೆ. ಜೊತೆಗೆ ನೋಡಲು ಅಂದವಾಗಿರುತ್ತೆ ಕೂಡ.
14 ವರುಷದ ಹಿಂದೆ ಚನ್ನರಾಯಪಟ್ಟಣದ ನನ್ನ ಚಿಕ್ಕಮ್ಮ ಮಾಡಿದ್ದ ಚಿತ್ರಾನ್ನವನ್ನು ಜ್ಞಾಪಿಸಿ ಕೊಂಡರೆ ಇಂದಿಗೂ ನನ್ನ ಬಾಯಲ್ಲಿ ನೀರೂರುತ್ತೆ. ಮಲ್ಲಿಗೆ ಹೂವಿನಂತ ಹಳದಿ ಬಣ್ಣದ ಅನ್ನ, ಎಣ್ಣೆಯಲ್ಲಿ ಹುರಿಯಲ್ಪಟ್ಟ ಕಂದು ಬಣ್ಣದ ಕಡ್ಲೆ ಬೀಜ, ಅಲ್ಲಲ್ಲಿ ಮೆರಗು ನೀಡುವ ಹಸಿ ಮೆಣಸಿನ ಕಾಯಿ, ಕರಿಬೇವು ಮತ್ತು ಕರಿ ಸಾಸಿವೆ! ಇಂತಹ ಚಿತ್ರಾನ್ನವನ್ನು ಇವನ ಗೋಳಿನ ಜೀವನಕ್ಕೆ ಹೋಲಿಸುವುದೆ? ಅವನಿಗೆ ಹೇಳಿದೆ ‘ತಪ್ಪು! ದೊಡ್ಡ ತಪ್ಪು! ಇನ್ನೂ ಬೇಕಾದರೆ ಸಾರನ್ನಕ್ಕೆ ಹೋಲಿಸ್ಕೊ.’ ಇದನ್ನು ಕೇಳಿದ ಸ್ನೇಹಿತ ನಿಬ್ಬೆರಗಾಗಿ ನನ್ನನ್ನೇ ನೋಡುತ್ತಾ ನಿಂತ. ಸಾರನ್ನದ ಈ ಮಹತ್ವ ತನಗೆ ತಿಳಿದಿರಲಿಲ್ಲವಲ್ಲ ಎಂದು ಅವನಿಗೆ ತನ್ನ ಬಗ್ಗೆಯೇ ಸ್ವಲ್ಪ ನಿರಾಶೆಯಾಗಿರಬೇಕು. ಅದಕ್ಕೆ ಇರಬೇಕು ಅದಾದ ನಂತರ ಅವನು ನನ್ನ ಬಳಿ ಆ ವಿಷಯ ಮಾತಾಡಿಲ್ಲ.
ನಿಜ ಹೇಳ್ಬೇಕು ಅಂದ್ರೆ ನನಗೂ ಸಾರನ್ನಕ್ಕು ಸ್ವಲ್ಪ ಅಷ್ಟಕ್ಕಷ್ಟೆ ! . ಒಂದು ಮನೇಲಿ ಇವತ್ತು ಅಡಿಗೆ ಮಾಡಲಾಗಿದೆ ಅನ್ನೋದಕ್ಕೆ ಅನ್ನ ಸಾರು ಒಂದು ಸುಳ್ಳು ಸಾಕ್ಷಿಯೇ ಹೊರತು ಅದಂರಿಂದಲೇ ಹೊಟ್ಟೆ ತುಂಬಿಸ್ಕೋಬೇಕಾದ್ರೆ ಬಹಳ ಕಷ್ಟ ಸ್ವಾಮಿ. ಜೊತೆಗೆ ಹಪ್ಪಳ ಸಂಡಿಗೆ ಕರಿದಿದ್ರೆ ಚೆನ್ನಾಗಿರುತ್ತೆ. ಆದ್ರೆ ಇಲ್ಲಿ ಅಮೇರಿಕಾದಲ್ಲಿ ಅದನ್ನೆಲ್ಲ ಕರಿಯೋದೊ ಂದು ದೊಡ್ಡ ತಲೇನೋವು. ಕರಿಯೋದು ಸುಲಭ. ಆದ್ರೆ ಆ ಕರಿದ ಎಣ್ಣೆ ಎಸಿಯೋದು ಒಂದು ರಂಪ? ಅಂಗಡಿ ಸಮೋಸ ಇರೋದ್ರಿಂದ, ಏನೋ ಒಂದಷ್ಟು ಸಾರನ್ನವನ್ನ ಗಂಟಲಲ್ಲಿ ಇಳಿಸ್ಬೋದು.
ಇತ್ತೀಚಿನ ಟಿಪ್ಪಣಿಗಳು