ಅರ್ಧ ಸತ್ಯ

ಶ್ರೀನಿಧಿ ಡಿ ಎಸ್

ತುಂತುರು ಹನಿಗಳು


ಟೌನ್ ಹಾಲ್ ಎದುರು

ಬಸ್ಸಲ್ಲಿ ಕೂತವಳ

ಕಣ್ಣಲ್ಲಿ ಕಿತ್ತೂರು ಚೆನ್ನಮ್ಮನ ಖಡ್ಗ

ಬೆನ್ನಲ್ಲಿ

ಸುಟ್ಟ ಸಿಗರೇಟಿನ ಉರಿ

ಸಾವಿರ ವಾಹನಗಳ

ಕೈ ಸನ್ನೆಯಲ್ಲೇ

ನಿಲ್ಲಿಸುವ ಟ್ರಾಫಿಕ್ ಪೇದೆ;

ವರ್ಷ ನಾಲ್ಕಾಯ್ತು

ಪ್ರಮೋಷನ್ ಸಿಗದೆ

ಇನ್ನಷ್ಟು

ಕಿ ರಂ ನಿಮ್ಮ ಚಿತ್ರ

ಅಕ್ಷತಾ.ಕೆ

ಚಿತ್ತಜ್ಞಾನಿಗಳ ಸಭೆಯಲ್ಲಿ

ಆಸನವು ಇವರಿಗಾಗಿ ಸಜ್ಜಾಗುವ ಹೊತ್ತಲ್ಲಿ

ಕಿರಂ ಅದೇ ಸಭಾಂಗಣದ

ಪಕ್ಕದ ಗಲ್ಲಿಯ ಪುಟ್ಟ ಹೊಟೇಲಿನಲ್ಲಿ

ಶಿಷ್ಯರಿಗೆ ಒತ್ತಾಯ ಮಾಡುತ್ತಾ

ದೋಸೆ ತಿನ್ನಿಸುತಿದ್ದರು

.

ದೋಸೆಯ ಜೊತೆ ಕ್ರಿಕೆಟ್,

ರಾಜಕೀಯ, ಬಂಡಾಯ ಎಲ್ಲವನ್ನು ನೂತು

ಕೆಲವೊಮ್ಮೆ ಜೋತು,

ಹಲವೊಮ್ಮೆ ಸೋತು,

ಕೊನೆಗೊಮ್ಮೆ ಕಾವ್ಯಕ್ಕೇ ಆತು

ಮರೆಯದೇ ಮಾಣಿಯ

ಜೇಬಿಗೆ ಹಸಿರು ನೋಟು ತುರುಕಿ

ಧನ್ಯತೆಯ ನಗೆ ಪಡೆದು

ವೇದಿಕೆಗೆ ನಡೆದು ಬಂದರೆ ನಿಗದಿತ ಅವಧಿಗೆ

ಐದ್ಹತ್ತು ನಿಮಿಷ ಉಳಿದಿರುತಿತ್ತು.

ಇನ್ನಷ್ಟು

ಮಾಹೆ ಕವಿತೆಗಳು

‘ಕಡಲ ಹುಬ್ಬು’ ಎಂದೇ ಕರೆಯಲ್ಪಡುವ ಅರಬ್ಬೀ ಸಮುದ್ರದಿಂದ ಸುತ್ತುವರಿದ ಮಾಹೆ ಅಥವಾ ಮಯ್ಯಾಳಿಯಲ್ಲಿ ಇತ್ತೀಚಿಗೆ ಪ್ರತಿಷ್ಟಿತ ಕಾವ್ಯ ಉತ್ಸವ ಜರುಗಿತು. ಬಹುಭಾಷಾ ಕವಿಗೋಷ್ಠಿಯಲ್ಲಿ ಕನ್ನಡವನ್ನು ಹಿರಿಯ ಕವಿ ಕೆ ಬಿ ಸಿದ್ಧಯ್ಯ, ಮಮತಾ ಜಿ ಸಾಗರ್, ಎಚ್ ಎನ್ ಆರತಿ ಪ್ರತಿನಿಧಿಸಿದ್ದರು.

ಮಮತಾ ಜಿ ಸಾಗರ್ ಅವರ ಕ್ಯಾಮೆರಾ ಮೂಲಕ ಕಂಡ ಮಾಹೆ ಸಂಭ್ರಮ ಇಲ್ಲಿದೆ.

 

This slideshow requires JavaScript.

ಈಗ ರಾಯರ ಕವಿತೆಗೆ ಪದುಮಳ ಟ್ವೀಟು

ರಾಯರು ಮತ್ತು ಪದುಮ

-ಸುಶ್ರುತ ದೊಡ್ಡೇರಿ

ಮೌನಗಾಳ

ಜರ್ಮನ್ ಗ್ರಾಸ್ ಎಂಬುದು ಹಸಿರಲ್ಲ
ಎಂದರೆ ಒಪ್ಪುವದೇ ಇಲ್ಲ ಇವಳು..
ಹಸಿರು ಎಂದರೆ ಕಳೆ, ಲಂಟಾನ, ಚದುರಂಗ,
ಹೂಗಿಡ, ತಬ್ಬುಬಳ್ಳಿ, ಅಡ್ಡಮರ,
ಪೊಟರೆಯಿಂದಿಣುಕುವ ಹಕ್ಕಿಮರಿ,
ಬೆಟ್ಟದ ಮೇಲೆ ಮೇಯುತ್ತಿರುವ ಗಿಡ್ಡ ದನ,
ತರಗೆಲೆಗಳ ಜೊತೆ ಕೊಳೆಯುತ್ತಿರುವ
ಯಾರೂ ತಿನ್ನದ ಹಣ್ಣು, ಅದರೊಡಲ
ಬೀಜದ ಕನಸು ಎಂದೆಲ್ಲ ಹೇಳಿದರೆ
ಹೋಗೆಲೋ ಎನ್ನುತ್ತಾಳೆ;
ಹೆಸರು ಮರೆತು ಮೊರೆತೆದ್ದದ್ದೇ ಹಸಿರು
ಎಂದರೆ ವಾದ ಮಾಡುತ್ತಾಳೆ.
ಕನಸು ಕಾಣದ ನೀನೊಂದು ಪುತ್ಥಳಿ
ಎಂದರೆ ಮೂಗು ಮುರಿಯುವಷ್ಟು ಮುನಿಸು.


ಅಂಚು ಒದ್ದೆಯಾದ ಲಂಗ ಹಿಂಡುತ್ತ ಲೋಭಾನದ
ಹೊಗೆ ಹರಿಸುತ್ತಿರುವ ತಾಯಿಯ ಬಳೆಯ ಕಿಂಕಿಣಿ
ಸದ್ದಿಗೇ ಮಗು ನಿದ್ದೆ ಹೋದ ಕತೆ ಹೇಳಿದರೆ
ಸಿಲ್ಲಿ ಅನ್ನುತ್ತಾಳೆ.
ಹಗ್ಗ ಬಿಗಿಯಲು ಮರೆತ ದಡಕ್ಕೆಳೆದಿಟ್ಟ ದೋಣಿ
ಅಲೆಯೊಂದಿಗೆ ತೇಲಿ ಹೋಯಿತು ಎಂದರೆ
ನಿರ್ಭಾವುಕವಾಗಿ ಆಕಳಿಸುತ್ತಾಳೆ.

ಇನ್ನಷ್ಟು

ಕೈಲಾಸಂ ‘ಕೋಳೀಕೇ ರಂಗ’

ಇಲ್ಲಿವೆ ಕೊಂಕಣಿ ಕವಿತೆಗಳು

ಕೊಂಕಣಿಯು ಭಾರತದ ಪಶ್ಚಿಮ ಕರಾವಳಿಯ ಮಹಾರಾಷ್ಟ್ರದ ಒಂದು ಭಾಗ, ಗೋವಾ ರಾಜ್ಯ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ಮತ್ತು ಕೇರಳದ ಕಾಸರಗೋಡು, ಕಣ್ಣನ್ನೂರು, ಆಳಪುಯ, ಕೊಟ್ಟಾಯಂ, ಎರ್ನಾಕುಲಂ, ತಿರುವನಂತಪುರಂ ನ ಕೆಲವು ಭಾಗಗಳಲ್ಲಿ ಮನೆಮಾತಾಗಿದೆ. ಕೊಂಕಣಿಗರು ಇಂದು ಜಗತ್ತಿನಾದ್ಯಂತ ಹಬ್ಬಿಕೊಂಡಿರುವುದರಿಂದ ಅವರು ನೆಲೆಸಿರುವೆಡೆಯೆಲ್ಲ ಕೊಂಕಣಿ ಇದೆ ಎನ್ನಬಹುದು. ಮಂಗಳೂರಿನ ವರ್ಲ್ಡ್ ಕೊಂಕಣಿ ಸೆಂಟರ್  ನಲ್ಲಿರುವ, ಕೆಲ ವರ್ಷ ದೆಹಲಿ ನಿವಾಸಿಯಾಗಿದ್ದ ಕ್ರಿಯಾಶೀಲ ಪ್ರತಿಭಾವಂತ ಗುರು ಬಾಳಿಗ ಅವರು ಕೆಲವು ಕೊಂಕಣಿ ಕವನಗಳನ್ನು ಕನ್ನಡಕ್ಕೆ ತಂದಿದ್ದಾರೆ.  ‘ಕೆಂಪು ಕೋಟೆ’ ಬ್ಲಾಗ್ ಮೂಲಕ ಈ ಕವಿತೆಗಳು ಇಲ್ಲಿಗೆ ಬಂದಿವೆ 

ಸೆಗಣಿ

ಊರೊಳಗೆ ಕಾಲಿಡಲು ಜಾಗವಿಲ್ಲ

ಎಲ್ಲಿ ನೋಡಿದರಲ್ಲಿ ಸೆಗಣಿ.

ಗಲ್ಲಿಗಲ್ಲಿಯಲ್ಲಿ,
ಹೆಜ್ಜೆ ಹೆಜ್ಜೆಗೂ,
ಬೀದಿಯಲ್ಲಿ, ಬಾಗಿಲಲ್ಲಿ,

ಚಪ್ಪಲಿ ಕೊಳೆಯಾದೀತೆಂದು
ಬರಿಗಾಲಲ್ಲಿ ನಡೆಯುತ್ತಿದ್ದರು ಜನರು
ನಾನೂ ಮೊದಲ ಬಾರಿಗೆ
ಬರಿಗಾಲಲ್ಲಿ, ಭಿಕಾರಿಯೆಂದಲ್ಲ.
ಕೊನೆಗೊಮ್ಮೆ ತುಳಿದೇ ಬಿಟ್ಟೆ!

ಎಷ್ಟೆಂದು ಹಾರಿ ಎಗರಲಿ ನಾನು,
ಎಷ್ಟೆಂದು ಟೊಂಕ ಹಾಕಲಿ,
ಎಷ್ಟೆಂದು ಆಡಲಿ ಕುಂಟಾಬಿಲ್ಲೆ,
ನೀರರಸಿ ನಡೆದಾಗ
ಬಳಿಯಲ್ಲೇ ಇತ್ತು ಇಗರ್ಜಿ

ಅಲ್ಲಿ, ಅಂತಿಮ
ಗುರುವಾರದ ಪೂಜೆ,

ಇನ್ನಷ್ಟು

ತಂಗಿ ಬರೆದಿದ್ದಾಳೆ..

ಗೆಳೆಯರೇ, ನಾನು ಮುಂಬಯಿಯಲ್ಲಿ ಎಂ.ಎ. ಮಾಡುತ್ತಿದ್ದ ಸಂದರ್ಭದಲ್ಲಿ ಬರೆದ ಕವಿತೆ ಇದು. ಬಳಿಕ ನನ್ನ ಮೊದಲ ಕವನ ಸಂಕಲನ ‘ಪ್ರವಾದಿಯ ಕನಸು’ ಕೃತಿಯಲ್ಲಿ ಈ ಕವನ ಪ್ರಕಟಗೊಂಡಿತು. 1996ರಲ್ಲಿ ಈ ಕೃತಿಗೆ ‘ಮುದ್ದಣ ಕಾವ್ಯ ಪ್ರಶಸ್ತಿ’ಯೂ ದೊರಕಿತ್ತು.

ನನ್ನ ತೀರಾ ಹಳೆಯ ಈ ಕವಿತೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿತು. ಹಂಚಿಕೊಂಡಿದ್ದೇನೆ.

-ಬಿ ಎಂ ಬಷೀರ್

ಗುಜರಿ ಅಂಗಡಿ

ನನ್ನ ಪುಟ್ಟ ತಂಗಿಗೀಗ ತಿಳಿದು ಹೋಗಿದೆ

ನಾ ಕೊಟ್ಟ ನವಿಲು ಗರಿಗೆ ಎಂದೂ

ಜೀವ ಬರುವುದಿಲ್ಲ ಎಂದು

ಪತ್ರದಲ್ಲಿ ತಿಳಿಸಿದ್ದಾಳೆ

ನಾನೀಗ ಬೆಳೆದಿದ್ದೇನೆ!

ಹಾರಿ ಬಿಟ್ಟ ಗಾಳಿಪಟ

ದೈತ್ಯ ವೃಕ್ಷದ ಎದೆಗೂಡೊಳಗೆ ಸಿಕ್ಕಿ

ಹರಿದು ಚೆಲ್ಲಾಪಿಲ್ಲಿಯಾದ ಬಗೆ;

ನಿನ್ನೆಯ ಮುಂಗಾರು ಮಳೆ ತಿಳಿಸಿ ಹೋಗಿದೆ…

ನೀ ಕೊಟ್ಟ ಕಾಗದದ ದೋಣಿ

ಅದರೊಳಗೇ ಕರಗಿ ಕಡಲ ಸೇರಿದೆ!

ಇನ್ನಷ್ಟು

ರಾಜು ಅನಂತಸ್ವಾಮಿ ಹಾಡಿದ ‘ಮುಚ್ಚು ಮರೆ ಇಲ್ಲದೆಯೆ..’

ಹಾಲ್ಕುರಿಕೆಯ ‘ಮೊನ್ನೆ ತಾನೆ’

‘ದೇಶ ಕಾಲ’ದ ಹೊಸ ಸಂಚಿಕೆ ಬಂದಿದೆ..

ದೇಶ ಕಾಲದ ಹೊಸ ಸಂಚಿಕೆ ಬಂದಿದೆ. ಈ ಸಲದ ದೇಶ ಕಾಲದ ಥೀಮ್  “ಸಮಕಾಲೀನ ಮರಾಠಿ ಸಾಹಿತ್ಯ”.

ಇಡೀ ಸಂಚಿಕೆಯ ತುಂಬಾ ಮರಾಠಿಯ ಸಮೃದ್ಧ ಸುಗಂಧ. ಎರಡು ಮರಾಠಿ ಕತೆಗಳು, ಎರಡು ಮರಾಠಿ ಕಾದಂಬರಿಯ ಆಯ್ದ ಪುಟಗಳು, ಜಯಂತ ಕಾಯ್ಕಿಣಿ, ಚಂದ್ರಕಾಂತ ಪೋಕಳೆ, ಸರಜೂ ಕಾಟ್ಕರ್ ಅವರೂ ಸೇರಿದಂತೆ ಅನೇಕರು ಅನುವಾದಿಸಿರುವ ಕವಿತೆಗಳಿವೆ.

ಕೆ.ವಿ.ಅಕ್ಷರ ನಿರ್ವಹಿಸುವ ಸಮಯ ಪರೀಕ್ಷೆಯಲ್ಲಿ “ಕನ್ನಡ ಕಣ್ಣಿನಲ್ಲಿ ಮರಾಠಿ ಮನಸ್ಸು” ಕುರಿತು ಡಾ.ಜಿ.ಎಸ್.ಆಮೂರ, ಎಂ.ಪ್ರಭಾಕರ್ ಜೋಷಿ, ಮಿತ್ರಾ ವೆಂಕಟ್ರಾಜ ಅವರ ಲೇಖನಗಳ ಜತೆಗೆ, ಮರಾಠಿಮಯ ವಾತಾವರಣದ ಮುಂಬೈನಲ್ಲಿ ಎರಡು ದಶಕಗಳ ಕಾಲ ವಾಸವಾಗಿದ್ದ ಕಥೆಗಾರ ಜಯಂತ ಕಾಯ್ಕಿಣಿ ಅವರ ವಿಶಿಷ್ಟ ಲೇಖನವೂ ಇದೆ. ಕತೆಗಾರ, ಕಲಾವಿದ ಡಿ.ಎಸ್.ಚೌಗಲೆ ಅನುವಾದಿಸಿರುವ “ಚದುರಂಗ ಮತ್ತು ಕತ್ತೆ” ನಾಟಕ ಈ ಸಂಚಿಕೆಯ ಮತ್ತೊಂದು ವಿಶೇಷ. ಮರಾಠಿ ರಂಗಭೂಮಿಯ ಪ್ರಸಿದ್ಧ ನಾಟಕಕಾರ ವಿಜಯ್ ತೇಂಡೂಲ್ಕರ್ ಅವರ ನಾಟಕಗಳನ್ನು ಇನ್ನೊಬ್ಬ ಪ್ರಸಿದ್ಧ ನಾಟಕಕಾರ ಗಿರೀಶ ಕಾರ್ನಾಡ ವಿಶ್ಲೇಷಿಸಿದ್ದಾರೆ.

ಚನ್ನಕೇಶವ ಅದ್ಭುತ ಮುಖಪುಟವನ್ನು ರಚಿಸಿದ್ದಾರೆ. ಏಕಾಂತದಲ್ಲಿ ಆರಾಮವಾಗಿ ಓದಬಹುದಾದ ಈ ಸಂಚಿಕೆ, ತನ್ನ ಓರಣ ಮತ್ತು ಹೂರಣ ಎರಡರಿಂದಲೂ ಮನ ಸೆಳೆಯುತ್ತದೆ. ಬಿಡಿ ಸಂಚಿಕೆಯ ಬೆಲೆ ರೂ.100. ನಾಲ್ಕು ಸಂಚಿಕೆಗಳ ವಾರ್ಷಿಕ ಸದಸ್ಯತ್ವಕ್ಕೆ ಚಂದಾ ರೂ.300. ವಿವರಗಳಿಗಾಗಿ ಸಂಪರ್ಕ: ದೂರವಾಣಿ: 09243136256, ಈ ಮೇಲ್ – deshakaala@gmail.com

ಈ ಸಂಚಿಕೆಯಿಂದ ಆಯ್ದ ಕವಿತೆ ‘ಹೆಣ ಸಾಗಿಸುವುದು ಕಠಿಣ’ ನಿಮ್ಮ ಓದಿಗಾಗಿ

ಹೆಣ ಸಾಗಿಸುವುದು ಕಠಿಣ

-ಅರುಣ ಕಾಳೆ

ಪ್ರೀತ್ಯಾಗ ಬಿದ್ದಾಗ,

ಹಾಕ್ಕೊಂಡ ಅರಿವಿ ರೇಟು

ತೊಟ್ಟ ವಡವಿ ವಸ್ತಾ

ಅಸಲಿನೋ, ನಕಲಿನೋ ಗೊತ್ತಾಗೋದಿಲ್ಲ.

ಇನ್ನಷ್ಟು

Previous Older Entries

%d bloggers like this: