ಮೆಟ್ಟಿಲು ಹತ್ತಿದ ಸೂತ್ರಧಾರ ರಾಮಯ್ಯ

-ಸೂತ್ರಧಾರ ರಾಮಯ್ಯ
ನನ್ನುಡಿ

ಹತ್ತು ಕಟ್ಟೋ ಬದಲು ಒಂದು ಮುತ್ತು ಕಟ್ಟಿದಂತೆ ’ಹನ್ನೊಂದನ್ನು’ ಬಳಸುವ ಬದಲು ನೆರವಾಗಿ ’ಪನ್ ಒಂದನ್ನು’ (ಶ್ಲೇಷೆ) ಬಳಸುವ ಮಾರ್ಗ ಕನ್ನಡದ ಕವಿ, ಲೇಖಕ, ಕನ್ನಡಾಂಗ್ಲ ಪನ್ ಡಿತರಿಗೆ ಹೊಸದೇನು ಅಲ್ಲ. ರನ್ನ, ಕುಮಾರವ್ಯಾಸ, ಕೈಲಾಸಂ, ಬೇಂದ್ರೆ, ನಾ.ಕಸ್ತೂರಿ, ವೈಯನ್ಕೆ, ಲಂಕೇಶ್, ಚಂಪಾ ಇದೀಗ ವಿಶ್ವೇಶ್ವರ ಭಟ್, ದುಂಡಿರಾಜ್, ನಾರಾಯಣ ರಾಯಚೂರು ಹೀಗೆ ಪುಂಖಾನುಪುಂSವಾಗಿ ಹೆಸರುಗಳು ಕೇಳಿಬರುತ್ತವೆ. ಇವರಲ್ಲಿ ಕೆಲವರು ಚದುರಿದಂತೆ ಪನ್ ಬಳಕೆ ಮಾಡಿದರೆ, ಕೆಲವರಂತೂ ವ್ಯಾಪಕವಾದ ವಿಶ್ಲೇಷಣೆಯ ಪನ್‌ಥಕ್ಕೆ ಸೇರಿದವರಾಗಿದ್ದಾರೆ.

ಹಲವು ಅರ್ಥಗಳುಳ್ಳ ಒಂದೇ ಪದವನ್ನು ಹಿಡಿದೋ, ಪದದ ಉಚ್ಚಾರಣೆ ಒಂದೆ ಆದರೂ, ಸಂದರ್ಭಕ್ಕೆ ತಕ್ಕಂತೆ ನಾನಾ ಅರ್ಥಗಳನ್ನು ಆರೋಪಿಸಿವ, ವಿವಿಧಾರ್ಥಗಳಿಂದ ಹೊಳೆಯಿಸುವ, ವಿಪರೀತ ಅರ್ಥಗಳನ್ನು ಪದಕ್ಕೆ ತಳುಕು ಹಾಕಿ, ಸಾಮಾನ್ಯ ಅರ್ಥವನ್ನು ತಳಕ್ಕೆ ಹಾಕಿ ಆಯಾ ಸಂದರ್ಭವನ್ನು ವಿಡಂಬಿಸುತ್ತಾ ಬೇರೊಂದು ಅರ್ಥವನ್ನು ತಳ ತಳಿಸುವಂತೆ ಮಾಡುವುದೆ- ಮಾಡಬೇಕಾದುದೇ ಶ್ಲೇಷೆಯ ಗುಣ-ಧರ್ಮ.

ಯಾವುದೇ ಪದವನ್ನು ಹಿಡಿದು ಪನ್ ಮಾಡಲು ಪ್ರಯತ್ನಿಸುವುದು ಪ್ರಾರಂಭಕ್ಕೆ ಹ್ಯಾ-ಬಿಟ್ ಆದರೂ, ಕ್ರಮೇಣ ಅರೆಕ್ಷಣ ಬಿಟ್ ಇರಲಾರದ ’ಸರ್ಚ್-ರೀಸರ್ಚ್’ ಕಸುಬೇ ಆಗಿ, ಪನ್‌ಸ್ಟರ್ ತನಗೆ ತಾನೇ ಪನ್‌ಜ(ಜ್ವ)ರದ ಪಕ್ಷಿಯಾಗಿ ಹೋಗುವುದು ಸಾಮಾನ್ಯ. ಅವನ ತಲೆಯಲ್ಲಿ ’ಇಟ್ ಕೀಪ್ಸ್ ಹ್ಯಾ-ಪನ್ನಿಂಗ್’ ಅಂದರೆ ಅಚ್ಚರಿಯಿಲ್ಲ. ಹಾಗೆಯೇ ಪನ್‌ಸ್ಟರ‍್ಗಳು ಇರುವ ಕಡೆ ’ಪನ್ಯೂಷನ್-ಫ್ರೀ’ ವಾತಾವರಣವೂ ಅಲಭ್ಯವೇ- ಅಹುದಾದರಹುದೆನ್ನಿ.

ಇನ್ನಷ್ಟು

‘ಅಪಾರ’ ಬ್ಲಾಗೂ ಬದಲಾಗಿದೆ..

ಹೊಸ ತಾಜಾ ಅನುಭವಕ್ಕಾಗಿ- ಇಲ್ಲಿ ಕ್ಲಿಕ್ಕಿಸಿ

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು!

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. ಅವನೀಂದ್ರನಾಥ್ ರಾವ್ ಅವರು ತರೀಕೆರೆಯವರ ಬೆನ್ನು ಬಿದ್ದರು.

ಮೊನ್ನೆ ಈದ್ ಮಿಲಾದ್ ಹಬ್ಬದ ಶುಭ ಘಳಿಗೆಯಲ್ಲಿ ಮುಂಜಾನೆ ಎರಡು ಕನಸು ಕಂಡಿದ್ದೆ.

ಒಂದು ಮಾಜಿ ರಾಷ್ಟ್ರಪತಿ, ಕವಿ, ತಂತ್ರಜ್ಞ, ಮಹಾನ್ ನಾಯಕ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಶ್ರೇಷ್ಠ ಮಾನವತಾವಾದಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಮ್ ಅವರ ‘ಸಂವತ್ಸರ ಉಪಾನ್ಯಾಸ’ ಆಲಿಸುವುದು.

ಎರಡನೆಯದು ಹಿಂದಿನ ದಿನ ಸಾಧ್ಯವಾಗದ ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ, ಕನ್ನಡದ ಪ್ರಸಿದ್ಧ ಬರಹಗಾರ ರಹಮತ್ ತರೀಕೆರೆ ಅವರನ್ನು ಕಂಡು ಮಾತನಾಡಿಸುವುದು.

ಪ್ರಶಸ್ತಿ ಪ್ರಧಾನ ಸಮಾರಂಭದ ದಿನ ಸಂಜೆಯ ಚಹಾ ಕೂಟದಲ್ಲಿ ತರೀಕೆರೆ ಅವರು ಕಾಣಿಸಲಿಲ್ಲ.

ಬಳಿಕ ಸಭಾಂಗಣದಲ್ಲಿ ಮೇಲೆ ವೇದಿಕೆಯ ಎಡ ಭಾಗದಲ್ಲಿ ಅವರನ್ನು ಕಂಡೆ.

ದೇಶದ 24 ಮಂದಿ ಪ್ರಶಸ್ತಿ ವಿಜೇತರನ್ನು ಸ್ವಾಗತಿಸುತ್ತಾ ಈಗಿನ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಕನ್ನಡಿಗ ಅಗ್ರಹಾರ ಕೃಷ್ಣಮೂರ್ತಿ ಅವರು ‘ನನ್ನ ಭಾಷೆಯ , ಕನ್ನಡದ ರಹಮತ್ ತರೀಕೆರೆ ಈ ಬಾರಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು’ ಎಂದಾಗ ಸಭಾಂಗಣ ಹರ್ಷೋದ್ಗಾರದಿಂದ ಚಪ್ಪಾಳೆ ತಟ್ಟಿತು.

ಮೊನ್ನೆ ಸಾಹಿತ್ಯ ಅಕಾಡೆಮಿಯು ‘ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್’ ನಲ್ಲಿ ‘ಸಂವತ್ಸರ ಉಪಾನ್ಯಾಸ’ ಏರ್ಪಡಿಸಿತ್ತು.

ದೇಶದ ಶ್ರೇಷ್ಠ ಸಾಹಿತಿ ಅಥವಾ ಓರ್ವ ಚಿಂತಕರಿಂದ ಉಪಾನ್ಯಾಸವನ್ನು ಕೊಡಿಸುವುದು ಇದರ ಉದ್ದೇಶ. ರಹಮತ್ ತರೀಕೆರೆ ಅವರು ಖಂಡಿತವಾಗಿ ಅಲ್ಲಿಗೆ ಬರುತ್ತಾರೆ ಎಂಬ ನಂಬಿಕೆ ನನಗಿತ್ತು. ಆದರೆ ತರೀಕೆರೆ ಕಾಣಿಸಲಿಲ್ಲ. ಹಿರಿಯ ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ ಹಾಗೂ ಎಲ್.ಹನುಮಂತಯ್ಯ ಅವರ ಭೇಟಿ ಆತ್ಮೀಯವಾಗಿತ್ತು. ಅವರಿಬ್ಬರ ನಡುವೆ ಕುಳಿತು ಡಾ. ಕಲಾಮ್ ಅವರ ಉಪಾನ್ಯಾಸ ಕೇಳಿದೆ. ಪಕ್ಕದಲ್ಲಿ ಒರಿಯಾದ ಶ್ರೇಷ್ಠ ಸಾಹಿತಿ ಸೀತಾಕಾಂತ ಮಹಾಪಾತ್ರ ಕುಳಿತಿದ್ದರು.

ಸೂಜಿಗಲ್ಲಿನಂತೆ ಸೆಳೆದ, ಮುಗ್ದ, ಆದರೆ ಪ್ರಖರ ಚಿಂತನೆಯ ಡಾ ಕಲಾಮ್ ಉಪಾನ್ಯಾಸ ಎಲ್ಲರನ್ನು ಮೈಮರೆಯುವಂತೆ ಮಾಡಿತು. ತಿರುವಳ್ಳುವರ್ ಅವರ ‘ತಿರುಕ್ಕುರಲ್’ ನನ್ನನ್ನು ಗಾಢವಾಗಿ ಪ್ರಭಾವಿಸಿದೆ ಎಂದು ಡಾ. ಕಲಾಮ್ ನುಡಿದರು. ಪ್ರತಿಯೊಬ್ಬರೂ ‘ಮನೆ ಗ್ರಂಥಾಲಯ’ ಹೊಂದಲು ನೆರೆದವರನ್ನು ಅವರು ಪ್ರಮಾಣ ಮಾಡಿಸಿದರು. ಡಾ. ಕಲಾಮ್ ಉಪಾನ್ಯಾಸ ಮುಗಿಸಿ ಹೊರಡುತ್ತಿದ್ದಂತೆ ಅಬಾಲ ವೃದ್ದರಾಗಿ ಜನರು ಅವರನ್ನು ಸ್ಪರ್ಶಿಸಲು ಮುಗಿಬೀಳುತ್ತಿದ್ದರು. ಹೊರಗೆ ಪತ್ನಿಯೊಡನೆ ತರೀಕೆರೆ ನಿಂತಿರುವುದನ್ನು ಕಂಡೆ. ನನ್ನ ಊಹೆ ನಿಜವಾಗಿತ್ತು.ನನ್ನ ಪರಿಚಯ ಮಾಡಿಕೊಂಡೆ. ‘ಅವನೀಂದ್ರನಾಥ್ ನೀವು ಗ್ರಂಥಪಾಲಕರಲ್ಲವೆ, ನಿಮ್ಮ ಬಗೆಗೆ ತಿಳಿದಿದ್ದೇನೆ ‘ಎಂದವರು ಹೇಳಿದಾಗ ನನಗೆ ಅಚ್ಚರಿಯಾಯಿತು.

ರಹಮತ್ ತರೀಕೆರೆ ಅವರು ಅಕಾಡೆಮಿ ಅಧ್ಯಕ್ಷ ಸುನೀಲ್ ಗಂಗೋಪಾಧ್ಯಾಯ ಅವರಿಂದ ಪ್ರಶಸ್ತಿ ಸ್ವೀಕರಿಸುವುದು

ನಿಮ್ಮ ಪ್ರಶಸ್ತಿವಿಜೇತ ‘ಕತ್ತಿಯಂಚಿನ ದಾರಿ’ ಕೃತಿಯ ಪ್ರಕಾಶಕ ನ.ರವಿ ಕುಮಾರ್ ನನಗೆ ಗೊತ್ತು. ನನ್ನ ಮೊದಲ ಪುಸ್ತಕ ‘ಸಮಯ ಸಂದರ್ಭ’ ವನ್ನು ಅವರೇ ಪ್ರಕಟಿಸಿದ್ದರು ಎಂದು ಹೇಳಿದೆ. ಅದಾಗಲೇ ಡಾ. ಅಬ್ದುಲ್ ಕಲಾಮ್ ಅವರ ಉಪಾನ್ಯಾಸ ಮತ್ತು ಆಕರ್ಷಣೆಯಿಂದ ಹೊರ ಬಂದಿರದ ತರೀಕೆರೆ ‘ಓರ್ವ ಮಾಜಿ ರಾಷ್ಟ್ರಪತಿ ಈ ಬಗೆಯಲ್ಲಿ ಜನಪ್ರಿಯತೆಯನ್ನು ಉಳಿಸಿಕೊಂಡಿರುವುದು ಅಚ್ಚರಿಯ ಸಂಗತಿ’ ಎಂದು ಉದ್ಗರಿಸಿದರು.

ಬೆಳಿಗ್ಗೆ ಅಕಾಡೆಮಿ ಹಮ್ಮಿಕೊಂಡಿದ್ದ ‘ರೈಟರ್ಸ್ ಮೀಟ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತರೀಕೆರೆ ಸಂಜೆ ವಿಶ್ರಾಂತಿ ಪಡೆಯಲು ಬಯಸಿದ್ದರಂತೆ. ಪತ್ನಿಯ ಒತ್ತಾಯದ ಮೇರೆಗೆ ಕಲಾಮ್ ಉಪಾನ್ಯಾಸ ಕೇಳಲು ಬಂದಿದ್ದಾಗಿ ನನ್ನಲ್ಲಿ ಹೇಳಿದರು. ಹಾಗಿಲ್ಲದೆ ಹೋಗಿದ್ದರೆ ಈ ಅವಕಾಶ ತಪ್ಪಿಹೋಗುತ್ತಿತ್ತು ಎಂದು ತರೀಕೆರೆ ಪತ್ನಿಯ ಸ್ಪೂರ್ತಿಯನ್ನು ನೆನೆದರು. ನಂತರ ರಾತ್ರಿ ‘ಪ್ರೆಸ್ ಕ್ಲಬ್’ನವರು ಆಯೋಜಿಸಿದ್ದ ಭೋಜನ ಕೂಟದಲ್ಲಿ ಭಾಗವಹಿಸಲು ತರೀಕೆರೆ ಪತ್ನಿಯೊಡನೆ ಹೆಜ್ಜೆ ಹಾಕಿದರು.

ತರೀಕೆರೆ ಅವರಿಗೆ ಬೀಳ್ಕೊಟ್ಟ ಬಳಿಕ ಒಂದು ದೃಶ್ಯ ಮನದಲ್ಲಿ ಮರುಕಳಿಸುತಿತ್ತು. ಉಪಾನ್ಯಾಸದ ಬಳಿಕ ಯುವಕನೋರ್ವ ‘ಭಾರತ 2020ರ ವೇಳೆಗೆ ಸೂಪರ್ ಪವರ್’ ರಾಷ್ಟ್ರ ಆಗುವ ಬಗೆ ಹೇಗೆ ಎಂದು ಡಾ. ಕಲಾಮ್ ಅವರಿಗೆ ಸವಾಲು ಹಾಕಿದ್ದ. ಆಶಾವಾದಿಯಾದ ಡಾ. ಕಲಾಮ್ ನೆರೆದವರಿಗೆ ಪ್ರಮಾಣ ಮಾಡಲು ಹೇಳಿದರು. ಅದು ಹೀಗಿತ್ತು.

‘ಐ ಕ್ಯಾನ್ ಡು ಇಟ್

ಯು ಕ್ಯಾನ್ ಡು ಇಟ್

ಇಂಡಿಯಾ ಕ್ಯಾನ್ ಡು ಇಟ್ ‘

ಮುಂಜಾನೆ ಕಂಡಿದ್ದ ನನ್ನೆರಡೂ ಕನಸುಗಳು ಸಾಕಾರಗೊಂಡಿದ್ದವು.

ನಾನು, ಗುಜರಿ ಆಯುವ ಹುಡುಗ..

-ಬಿ ಎಂ ಬಷೀರ್

 

ಮೌನದ ಮನೆಯ ಹಿತ್ತಲಲ್ಲಿ….

…ನಾನು ಅವನ ಮಗ

ಅವನ ಮೌನದ ಮನೆಯ

ಹಿತ್ತಲಲ್ಲಿ ನಿಂತ

ಗುಜರಿ ಆಯುವ ಹುಡುಗ!

-ಗುಜರಿ ಆಯುವ ಹುಡುಗ(ನನ್ನದೇ ಪದ್ಯವೊಂದರ ಸಾಲು)

***

 

ನೀವು ಯಾವತ್ತಾದರೂ ನಿಮ್ಮ ಮನೆಯ ಹಳೇ ಸಾಮಾನುಗಳನ್ನು ಗೋಣಿಯೊಳಗೆ ತುಂಬಿಸಿ ಯಾವುದಾದರೊಂದು ಗುಜರಿ ಅಂಗಡಿಯ ಮೆಟ್ಟಿಲನ್ನು ಹತ್ತಿದ್ದೀರಾ? ನೀವು ತಕ್ಕಡಿಯಲ್ಲಿ ತೂಗಿ ಕೊಟ್ಟ ಗುಜರಿ ವಸ್ತುಗಳು ನಿಮ್ಮ ಒಂದು ಕಾಲದ ‘ಸರ್ವಸ್ವ ಸತ್ಯ’ಗಳಾಗಿದ್ದವು ಎನ್ನುವುದು ಆ ಕ್ಷಣದಲ್ಲಿ ನಿಮಗೆ ಹೊಳೆದದ್ದಿದೆಯೆ? ನೀವು ನಿಮ್ಮ ಸಂಸಾರದೊಂದಿಗೆ ನಗು ನಗುತ್ತಾ ಜೊತೆಯಾಗಿ ಉಂಡ ಊಟದ ಬಟ್ಟಲನ್ನು, ಮದುಮಗನಿಗೆಂದು ಇಡೀ ದಿನ ಕೂತು, ‘ಅದಲ್ಲ ಇದು, ಇದಲ್ಲ ಅದು’ ಎಂದು ಆರಿಸಿದ್ದ ಚಪ್ಪಲಿಗಳನ್ನು ಗುಜರಿ ಅಂಗಡಿಯ ಯಜಮಾನ ನಿಷ್ಕರುಣೆಯಿಂದ ಹರಿದು, ಜಜ್ಜಿ ನಿರ್ಭಾವುಕನಾಗಿ ತಕ್ಕಡಿಯಲ್ಲಿಟ್ಟು ತೂಗಿ ಬೆಲೆ ಕಟ್ಟುತ್ತಿರುವಾಗ ನಿವ್ಮೊಳಗಿನ ಜೀವತಂತಿಯನ್ನು ಒಳಗೇ ಯಾರೋ ಮೀಟಿದಂತಾಗಿರಲಿಲ್ಲವೆ?

ನೀವು ಗುಜರಿ ಅಂಗಡಿಯೊಳಗೆ ಕಣ್ಣಾಯಿಸಿ…ಅಲ್ಲಿ ಹರಿದು ಬಿದ್ದಿರುವ ಪಾದಗಳು ಬೆಟ್ಟದಷ್ಟು ಎತ್ತರ! ಮುರಿದ ಬಕೀಟುಗಳು, ವಿರೂಪಗೊಂಡಿರುವ ಪಾತ್ರೆಗಳು, ತುಕ್ಕು ಹಿಡಿದಿರುವ ಡಬ್ಬಗಳು…ಬದುಕೇ ಅಲ್ಲಿ ರೆಕ್ಕೆ ಮುರಿದು ಬಿದ್ದಿದೆ. ಅವುಗಳ ಯೋಗ್ಯತೆಯೆಷ್ಟು ಎನ್ನುವುದನ್ನು ತಕ್ಕಡಿಯಲ್ಲಿ ತೂಗಿ ಬೆಲೆ ಕಟ್ಟಿ ಮೂಲೆಗೆ ಎಸೆದು ಬಿಟ್ಟಿರುವ ಗುಜರಿ ಅಂಗಡಿಯ ಯಜಮಾನ…ಹಳೆಯ ಮುರಿದ ಕಬ್ಬಿಣದ ಕುರ್ಚಿಯೊಂದರಲ್ಲಿ ‘ಕಾಲ’ನಂತೆ ರಾಜಮಾನನಾಗಿದ್ದಾನೆ!

ಇನ್ನಷ್ಟು

ಇದ್ದಾರೆ ತೇಜಸ್ವಿ ಇನ್ನೂ..

ಪತ್ರಕರ್ತರಾದ ನಾಗರಾಜ ಮತ್ತಿಗಾರ್, ಆನಂದತೀರ್ಥ ಪ್ಯಾಟಿ ಸೇರಿದಂತೆ ಕೃಷಿ ಆಸಕ್ತಿಯ ಲೇಖಕರು ತೇಜಸ್ವಿಯನ್ನು ಹುಡುಕುತ್ತಾ ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ಗೆ ಹೋದಾಗ ಕಂಡದ್ದು..

ಇದೊಂಥರಾ ವ್ಯಾಲೆಂಟೈನ್ ಲವ್ ಸ್ಟೋರಿ

ಸಾರಿ ಕಣಯ್ಯ ನಾನು ನಿನ್ನ ಮರ್ತೆ ಬಿಟ್ಟಿದ್ದೆ..!

-ಬಾಲಸುಬ್ರಮಣ್ಯ ಕೆ ಎಸ್

ಕನ್ನಡ ಬ್ಲಾಗರ್ಸ್

ನಾನು ಆಗತಾನೆ ಒಂದನೇ ತರಗತಿಗೆ ಕಾಲಿಟ್ಟದ್ದ ಸಮಯ. ನಮ್ಮ ಮನೆಗೆ ಅಕ್ಕರೆಯ ಸ್ನೇಹಿತನ ಆಗಮನವಾಯಿತು. ಅವನೋ ಮಹಾ ಮಾತುಗಾರ, ಸಂಗೀತಗಾರ, ವಾರ್ತಾವಾಚಕ, ಒಟ್ಟಿನಲ್ಲಿ ನಮ್ಮ ಮನೆಗೆ ವಿಶ್ವದ ದ್ವನಿಯಾಗಿದ್ದ. ಹಳ್ಳಿಯಲ್ಲಿ ಬಾಲ್ಯದ ಬದುಕು ಶುರುಮಾಡಿದ್ದ ನನಗೆ ಬಾಲ್ಯದ ಗೆಳೆಯನಾಗಿ ಬಂದಿದ್ದ . ನಾನು ನನ್ನ ಜೀವನದಲ್ಲಿ ನೋಡಿದ್ದ ಅಚ್ಚರಿಯ ನೋಟದ ಸ್ನೇಹಿತ ಇವನಾಗಿದ್ದ.

ಬಾಲ್ಯದಲ್ಲಿ ದೊಡ್ಡವರು ಹಾಕಿದ್ದನ್ನಷ್ಟೇ ಕೇಳುವ ಸುಯೋಗ ನಮಗೆ. ಹಾಸಿಗೆ ಬಿಟ್ಟು ಏಳುವ ಮುನ್ನ ಬೆಂಗಳೂರು ಆಕಾಶವಾಣಿಯ ಬೆಳಗಿನ ಗೀತಾರಾಧನ, ನಂತರ ಚಿಂತನ, ಓದುವ ಸಮಯದಲ್ಲಿ ಬರುತಿದ್ದ ಕನ್ನಡ ವಾರ್ತೆಗಳು. ನಂತರ ಕನ್ನಡ ಚಿತ್ರಗೀತೆಗಳು . ಅದರಲ್ಲಿ ಎಲ್.ಆರ್. ಈಶ್ವರಿಯ ಕ್ಯಾಬರೆ ಹಾಡುಗಳು ಬಂದರೆ ನಮ್ಮಪ್ಪ ಎಲ್ಲೇ ಇದ್ದರೂ ಓಡಿಬಂದು ರೇಡಿಯೋ ಸ್ವಿಚ್ ಆಫ್ ಮಾಡುತ್ತಿದ್ದರು. ಬಹುಷಃ ಮಕ್ಕಳಿಗೆ ಒಳ್ಳೆಯ ಮಾತುಗಳು ಮಾತ್ರ ಕಿವಿಗೆ ಬೀಳಲಿ ಎಂಬ ಉದ್ದೇಶವಿರಬಹುದು. ಹೀಗೆ ಬಂದ ಇವನು ನಿಧಾನವಾಗಿ ಮನೆಯ ಸದಸ್ಯರ ನೆಚ್ಚಿನ ಗೆಳೆಯನಾದ. ನಾನು ಪ್ರಾಥಮಿಕ ಶಾಲೆ ಯಿಂದ ನಾಲ್ಕನೇ ತರಗತಿ ಮುಗಿಸಿ ಮಳವಳ್ಳಿ ಪಟ್ಟಣಕ್ಕೆ ಮಿಡಲ್ ಸ್ಕೂಲ್ ಗೆ ಐದನೇ ಕ್ಲಾಸಿಗೆ ಸೇರಿದ ಮೇಲೆ ಇವನ ಸ್ನೇಹ ಬಲವಾಗಿ ನಾನು ಇವನ ಸನಿಹ ಕೂರತೊಡಗಿದೆ. ಇವನ ಆಕಾರ ನನಗೆ ಮೆಚ್ಚುಗೆ ಯಾಗಿ ನಾನು ಇವನ ಸೇವೆಗೆ ತೊಡಗಿ ಇವನ ಮಾಲಿಶ್ ಮಾಡುವಷ್ಟು ಆತ್ಮಿಯನಾದೆ

ಇವನೋ ನನಗೆ ತನ್ನ ವಿಶ್ವ ರೂಪದ ದರುಶನ ಹಂತ ಹಂತವಾಗಿ ಮಾಡಿಸತೊಡಗಿದ. ಇವನೇ ಸ್ವಾಮೀ ನನ್ನ ನೆಚ್ಚಿನ ಗೆಳೆಯ ಫಿಲಿಪ್ಸ್ ಪ್ರೆಸ್ಟೀಜ್ ರೇಡಿಯೋ. ಪಟ್ಟಣದ ಶಾಲೆಯ ಹುಡುಗನಾದ ನಾನು ಹೊಸ ಹೊಸ ವಿಚಾರಗಳ ಬಗ್ಗೆ ಮಾಹಿತಿ ತಿಳಿಯುವ ಹಾಗೆ ಮಾಡಿದವರು ನಮ್ಮ ಪುಷ್ಪಾವತಿ ಮೇಡಂ, ಹೌದು ಅವರು ಮಕ್ಕಳಾದ ನಮಗೆ ರೇಡಿಯೋ ಬಗ್ಗೆ ಅನೇಕ ಕುತೂಹಲಕಾರಿ ವಿಚಾರ ತಿಳಿಸಿ ನನಗೆ ಆಸಕ್ತಿ ಕೆರಳಲು ಕಾರಣವಾದರು

ಇನ್ನಷ್ಟು

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ

ಮುನ್ ನಗೆ ನುಡಿ

ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ ನೋಡಿದರೆ, ನನ್ನೂರು ದೊಡ್ದಾಲ ಹಳ್ಳಿಯ  ಪರಿಸರದ ತೆರೆ ಏಳುತ್ತದೆ , ಸ್ಯಾಂಪಲ್ ನೋಡಿ.

ರೈತ:  ಯಾಕೆ ಶೆಟ್ಟರೆ ನರಳ್ತಾ ಇದ್ದೀರಾ?
ಪಾಪಯ್ಯ ಶೆಟ್ರು : ಸುಮ್ನೆ ಕುತ್ಕೊಂಡು ಎನ್ಕೆಲಸ.
ಗಿರಾಕಿ: ಬಟ್ಟೆ , ಬಣ್ಣ  ಒಗಾಕಿಲ್ವ ಸೋಮಿ ಒಗುದ್ರೆ ?
ಜವಳಿ ಅಂಗಡಿ ನಂಜುಂಡಸ್ವಾಮಿ: ಬಟ್ಟೆನಾ ಕಾಲುವೇಲಿ ಒಗಿಬೇಡ .ನಿಂಗೇಗೌಡನ  ಕೊಳದಲ್ಲಿ ಒಗಿ. ಬಣ್ಣ ಎಲ್ಲೂ ಹೋಗಲ್ಲ ; ಅಲ್ಲೇ ಇರ್ತದೆ .
ಮೊಮ್ಮಗ : ತಾತ, ವೆಂಕಟೇಶ ತಲೆ ಮೇಲೆ ಹೊಡೆದುಬಿಟ್ಟ …
ತಾತ : ಏನು ನಿನಗೆ ಹೊಡೆದ್ನೆ? ಅವನ ಬಾಯ್ಗೆ ಬೆಂದನ್ನ ಹಾಕ, ಅವನ ಮನೇಲಿ ಎಂಟೆಮ್ಮೆ  ಕರೆಯಾ .., ಸಿಗಲಿ ಅವ್ನು …
ಹರಿಕಥೆ ಚೌಡಪ್ಪ : ಮನೆ ಮಗಳೆಸರು ಭಾಗ್ಯ , ಹೊಲ ಮನೆ ಎಲ್ಲ ಭೋಗ್ಯ . ಹೆಂಡ್ತಿ  ಹೆಸರು ಶಾರದೆ ಪಾಪ! ಮಕ್ಕಳಿಗೆ ಅ , ಆ, ಇ, ಈ ಹೇಳಿಕೊಡೋಕು ಬಾರದೆ?
“ಅವನು ಬುಡಪ್ಪಾ, ಅರೆ ಮೇಲೋದ್ರು (ಬೆಟ್ಟ)ಅನ್ನ ಉಟ್ಟುಸ್ಕೋತಾನೆ .
ಸ್ವಗತ: ಬುತ್ತಿ ಕಟ್ಕೊಂಡೋದ್ರೆ
” ಏನು , ಆ ನಸ್ಗುನ್ನಿ ಕಾಯ್ನ ನೆಂಬ್ತಿಯಾ ? ನೋಡ್ಲಾ ‘ಅಲಲಾ’ ಅನ್ನೋ ಅಳ್ಳಿಮರ  ನಂಬೋದು; ಮೆತ್ಗಿರೋ  ಕಳ್ಳಿ ಮರ ನಂಬಾರ್ದು ಜ್ವಾಕೆ .
” ಅವ್ನು ನಿನ್ಕೆಲಸ ಮಾಡಿಕೊಟ್ಟಾನ..? ನಿನಗೆಲ್ಲೋ  ಹುಚ್ಹು ಅದೇನೋ ಹೇಳ್ತಾರಲ್ಲಾ ‘ ಓಡೋಗೋ  ಬಡ್ಡಿಗೆ ಹಾಲ್ಗೆ ಹೆಪ್ಪಾಕ್ಬುಟ್ಟು ಹೋಗು ಅಂದರಂತೆ ಕೆಲಸ ನೋಡು ಮೂದೇವಿ
ಈ ಕೆಲಸ ನನ್ನ ಕೈಲಾಗಾಕಿಲ್ಲ ನಿನಾದ್ರೆ ವಯಸ್ನುಡುಗಾ ನೆಲ ಗುದ್ದುದರೆ ನೀರು   ಬತ್ತದೆ ಕಣ್ಣಲ್ಲಿ
ಬೊಮ್ಮ : (ಕುಡಿದ ಮತ್ತಿನಲ್ಲಿ ) ನಾಳೆಯೇ ನಿಮ್ಮ ದುಡ್ಡು ಕೊಟ್ ಬುಡ್ತೀನಿ . ಈ ಬೊಮ್ಮ ತಾಯಾಣೆ ಸುಳ್ಳೇಳಾಕಿಲ್ಲ  ಸತ್ಯವೇ ತಾಯಿ (ಪಕ್ಕಕ್ಕೆ ತಿರುಗಿ) ತಾಯೆ  ನಮಪ್ಪನ ಹೆಂಡ್ರು  ಮೊದಲಂಗೆ  ಮೋಸ ಮಾಡಾಕಿಲ್ಲ ಬುದ್ದಿ

ಡೊಳ್ಳಿನ ತಾಳಕ್ಕೆ ಬಣ್ಣದ ಹೆಜ್ಜೆ …

-ಭೀಮಣ್ಣ ಗಜಾಪುರ

ಕನ್ನಡ ಜಾನಪದ

(ಪುರುಷರು ಮಾತ್ರವೇ ಭಾಗವಹಿಸುತ್ತಿದ್ದ ಜನಪದ ಕಲೆಗಳಿಗೆ ಮಹಿಳೆಯರ ಪ್ರವೇಶವಾಗುತ್ತಿದೆ. ಇದನ್ನು ಹೇಗೆ ಗ್ರಹಿಸಬೇಕು ಎನ್ನುವ ಬಗ್ಗೆ ತಾತ್ವಿಕವಾಗಿ ಇನ್ನು ಆಲೋಚಿಸಬೇಕಿದೆ. ಆದರೆ ಈ ಬದಲಾವಣೆಯ ಚಹರೆಗಳನ್ನು ಹಿಡಿಯಲು ಸೂಕ್ಷ್ಮವಾಗಿ ಅವುಗಳ ಬೆಳವಣಿಗೆಯನ್ನು ಗಮನಿಸಬೇಕಿದೆ. ವಿರುಪಾಪುರದ ಮಹಿಳೆಯರ ಡೊಳ್ಳು ಕಲೆಯ ಕಥಾನಕವನ್ನು ಕೂಡ್ಲಿಗಿಯ ಕ್ರಿಯಾಶೀಲ ಪತ್ರಕರ್ತ ಭೀಮಣ್ಣ ಗಜಾಪುರ ಅವರು ಇಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ. –ಸಂ)

ಬಣ್ಣ ಹಚ್ಚಿ ರಂಗಸಜ್ಜಿಕೆಯ ಮೇಲೆ 25ವಷ೯ಗಳಿಗಿಂತಲೂ ಹೆಚ್ಚು ಕಾಲ ನಟನೆ ಮತ್ತು ನಾಟ್ಯದ ಮೂಲಕ ರಂಗಾಸಕ್ತರನ್ನು ಸೆಳೆದ ಕೂಡ್ಲಿಗಿ ತಾ.ವಿರುಪಾಪುರ ಎಂಬ ಪುಟ್ಟ ಹಳ್ಳಿಯ ಹತ್ತಾರು ಕಲಾವಿದೆಯರು ಈಗ ಇಳಿವಯಸ್ಸಿನಲ್ಲಿಯೂ ತಮ್ಮ ಕ್ರಿಯಾಶೀಲತೆಯಿಂದ ಈಗ ಡೊಳ್ಳುಕುಣಿತ ಕಲಿಯಲು ಮುಂದಾಗಿದ್ದು ಈ ಮೂಲಕ ಹಿರಿಯ ರಂಗಕಲಾವಿದೆಯರು ತಮ್ಮ ಹಳ್ಳಿಯ ಇತರೆ ಕಿರಿಯ ರಂಗನಟಿಯರಿಗೂ ಮರೆಯಾಗುತ್ತಿರುವ ಭಜನೆ,ಕೋಲಾಟ,ಬಯಲಾಟ, ಜಾನಪದ ಸಣ್ಣಾಟ,ಡೊಳ್ಳುಕುಣಿತ ಕಲಿಸುವುದರ ಮೂಲಕ ಇಡೀ ಹಳ್ಳಿಯಲ್ಲಿಯೇ ಸಾಂಸ್ಕ್ರುತಿಕ ವಾತಾವರಣ ಮೂಡಿಸಿರುವುದು ಇಲ್ಲಿಯ ರಂಗನಟಿಯರ ಸಾಧನೆಯಾಗಿದೆ.

ಬಣ್ಣ ಹಚ್ಚಿ ಹಳ್ಳಿಗಳಲ್ಲಿ ಪೌರಾಣಿಕ,ಐತಿಹಾಸಿಕ,ಸಾಮಾಜಿಕ ನಾಟಕಗಳಲ್ಲಿ ನಿರಂತರ 35-40ವಷ೯ಗಳ ಕಾಲ ರಂಗಭೂಮಿಯಲ್ಲಿಯೇ ಬದುಕನ್ನು ಕಂಡ ವಿರುಪಾಪುರದ ಹತ್ತಾರು ಮಹಿಳೆಯರು ಇನ್ನೇನು ನಮ್ಮ ವಯಸ್ಸು ಇಳಿಮುಖವಾಗ್ತಿದೆ ಸಾಕಾಪ್ಪಾ ಈ ನಟನೆ ಸಹವಾಸ ಎಂದು ಮನೆಯಲ್ಲಿ ಇರಬಹುದಾಗಿತ್ತು.

ಆದರೆ ವಿರುಪಾಪುರದ ಈ ಹಿರಿಯ ರಂಗನಟಿಯರು ತಮ್ಮ ಹಳ್ಳಿಯ ಈಗಿನ ಯುವ ವಯಸ್ಸಿನ ರಂಗನಟಿಯರಿಗೆ ಈಗ ಮಾಗ೯ದಶ೯ಕರಾಗಿ ರಂಗಕಲೆಯ ಜೊತೆಗೆ ಅವರಿಗೆ ನಮ್ಮ ಹಳ್ಳಿಗಳಿಂದ ಮರೆಯಾಗುತ್ತಿರುವ ಗ್ರಾಮೀಣ ಕಲೆಗಳನ್ನು ಕಲಿಸುತ್ತಾ ಇದರ ಜೊತೆಗೆ ತಾವು ಅಭಿನಯಿಸುತ್ತಾ ಇಡೀ ಗ್ರಾಮವನ್ನೇ ಕಲೆಯ ತವರೂರಾಗಿ ಮಾಡಿರುವ ಇಲ್ಲಿಯ ಹಿರಿಯ ರಂಗನಟಿಯರ ಕಾಯ೯ ಮಾತ್ರ ಮಾದರಿಯಾಗಿದೆ.

ಇನ್ನಷ್ಟು

ಆ ಹುಡುಗಿ..

ಫ್ರಾನ್ಸ್ ದೇಶದ ಈ 80+ ವರ್ಷದ ಹುಡುಗಿ , ಇತಿಹಾಸ ಹುಡುಕಿಕೊಂಡು ನಮ್ಮ ಮನೆಗೆ ಬಂದಿತ್ತು !!

-ಕೆ ಎಸ್ ಬಾಲಸುಬ್ರಮಣ್ಯ

ಕನ್ನಡ ಬ್ಲಾಗರ್ಸ್

ಕಾಡಿನ ನೆನಪುಗಳ ಅಂತಿಮ ಸಂಚಿಕೆ ಬರೆಯುತ್ತಿದ್ದೆ. ಗೆಳೆಯ ಸುನಿಲ್ ಫೋನ್ ಮಾಡಿ “ಹಾಯ್ ಬಾಲು, ಎಲ್ಲಿದ್ದೀಯ ಪಾಯಿ” ಅಂದಾ ನಾನು “ಯಾಕೋ ಏನ್ ಸಮಾಚಾರ ಅಂದೇ ” ಅದಕ್ಕೆ ಸುನಿಲ್  “ಅದೇ ಕಣೋ ಐವಾಕ್ ನಲ್ಲಿ ನನ್ನ ಒಬ್ಬ ಹೆಂಗಸು ತುಂಬಾ ಪರಿಚಯವಾಗಿದ್ದಾರೆ , ಆಯಮ್ಮ ಶ್ರೀ ರಂಗ ಪಟ್ಟಣ ದ ಬಗ್ಗೆ ಕೇಳ್ತಿದಾರೆ ಕಣೋ ಅದಕ್ಕೆ ಅವರನ್ನ ನಿಮ್ಮ ಮನೆಗೆ ಕಳಿಸುತ್ತಿದ್ದೇನೆ ಅವರಿಗೆ ಮಾಹಿತಿ ಕೊಡು ಗುರು” ಅಂದ, “ಸರಿಯಪ್ಪಾ ಬರೋಕೆ ಹೇಳು” ಅಂದು ಫೋನ್ ಇಟ್ಟೆ. ಭಾನುವಾರ ವನ್ನು ಸೋಮಾರಿ ಹಾಗೆ ಕಳೆಯಬೇಕೆಂಬ ಆಸೆಗೆ ತಡೆಯಾಯಿತು.

ಸ್ವಲ್ಪ ಹೊತ್ತಿಗೆ ನನ್ನ ಮೊಬೈಲ್ ಗೆ ಒಂದು ಕರೆ ಬಂತು mr. balu [ಬಲು !!! ] ” i am miichele from FRANCE ,YOUR FRIEND SUNNY TOLD ME TO MEET YOU , ARE YOU FREE NOW , “ಅಂತಾ ಒಬ್ಬ ಹೆಂಗಸಿನ ಧ್ವನಿ ಮಾತಾಡ್ತು. ನಾನು “o.k.o.k. please come to my house ” ಅಂತಾ ಹೇಳಿ ಮನೆ ವಿಳಾಸ ಅವರ ಕಾರಿನ ಚಾಲಕನಿಗೆ ತಿಳಿಸಿ ಫೋನ್ ಇಟ್ಟೆ.

ಮುಂದಿನ ಹತ್ತು ನಿಮಿಷಕ್ಕೆ ಫ್ರಾಸ್ ದೇಶದ 80+ ವರ್ಷದ ಈ ಹುಡುಗಿ ನಮ್ಮ ಮನೆಯಲ್ಲಿ ಹಾಜರ್. ಮನೆಗೆ ಬಂದ ವಿದೇಶಿ ಅತಿಥಿಗೆ ಮನೆಯವರ ಪರಿಚಯ ಆಗಿ ಉಪಚಾರ ಆದ ನಂತರ ಮಾತುಕತೆ ಆರಂಭ ವಾಯಿತು. “ಅಲ್ಲಮ್ಮ ನಿನಗೆ ನಮ್ದೇಶದ ಯಾವ ವಿಷಯ ಬೇಕು ಅಂತಾ ನನಗೆ ಗೊತ್ತಾಗ್ತಿಲ್ಲ” ಅಂತಾ ನಾನೇ ಮಾತಿಗೆ ಶುರುಮಾಡಿದೆ. ಅದಕ್ಕೆ ಆ ಹುಡುಗಿ ನೋಡು “ನಮ್ಮ ಫ್ರಾನ್ಸ್ ದೇಶಕ್ಕೂ ಶ್ರೀ ರಂಗ ಪಟ್ಟಣ ಕ್ಕೂ ಸಂಬಂಧವಿತ್ತು ಅಂತಾ ಭಾರತಕ್ಕೆ ಬರುವ ಮೊದಲು ನನಗೆ ತಿಳಿಯಿತು ಅದರ ಬಗ್ಗೆ ನನಗೆ ಮಾಹಿತಿ ಬೇಕೂ , ಹಲವರನ್ನು ವಿಚಾರಿಸಿದೆ ನಮಗೆ ಗೊತ್ತಿಲ್ಲಾ ಅಂತಾರೆ ಹೀಗಾಗಿ ನನ್ನ ಬಹಳಷ್ಟು ಸಮಯ ಕಳೆದು ಹೋಯ್ತು. ನಂತರ ಪರಿಚಯವಾದ ಸುನಿಲ್ ನಿನ್ನ ಬಗ್ಗೆ ಹಿಳಿದ ಅದಕ್ಕೆ ನಿನ್ನ ಬಳಿ ಬಂದೆ” ಅಂದರು.

ಇನ್ನಷ್ಟು

‘ಗುಣ’ ಓದಿ ಮುಗಿಯಿತು

ಸೂಕ್ಷ್ಮ ಸಂವೇದನೆಯ ವೈದ್ಯರೊಬ್ಬರು ಬರೆದಾಗ ಅದು ‘ಗುಣ’ವಾಗಬಹುದು. ‘ಗುಣ’ದಂಥ ಕಾದಂಬರಿ ಸಿಗಬಹುದು.

‘ಗುಣ’ ಓದಿ ಮುಗಿಯಿತು, ಮುಗಿಯಬಾರದಿತ್ತು ಎನ್ನಿಸಿತು

ಶಾಂತಲಾ ಭಂಡಿ

Previous Older Entries

%d bloggers like this: