ಎ ಎನ್ ಮುಕುಂದ್ ಕಂಡ ಎಂ ಪಿ ಪ್ರಕಾಶ್

ಚಿತ್ರಗಳು: ಎ ಎನ್ ಮುಕುಂದ್

‘ಅವಧಿ’ ಕಂಬನಿ

ಚಿತ್ರಗಳು: ಚಂದ್ರಕೀರ್ತಿ

Sadashiva Khandige ತುಂಬಾ ದುಃಖದ ವಿಚಾರ.  ಇದ್ದ ರಾಜಕಾರಣಿಗಳಲ್ಲಿ ಅವರು ಸಜ್ಜನ ರಾಜಕಾರಣಿ

Kala Acharya ಒಬ್ಬ ಪ್ರಾಮಾಣಿಕ ರಾಜಕಾರಣಿ.

Sunil Rao ಕ್ಯಾನ್ಸರ್  ವಿರುದ್ಧ ಬಹಳ ಹೋರಾಟ ಮಾಡಿ ಗೆದ್ದ  ವ್ಯಕ್ತಿ

Sunil Rao ರವಿ ಬೆಳೆಗೆರೆ  ಅವರ ಬುಕ್  ಬಿಡುಗಡೆಗೆ  ಬಂದಿದ್ದ ಎಂ ಪಿ ಪ್ರಕಾಶ್ ಸ್ವಸ್ತ್ಯವಾಗೇ ಕಂಡರು..ಮನದಾಳದ ಮಾತು ಆಡಿದ್ದರು!! ರಾಜಕಾರಣದ ಬಗ್ಗೆ ಅಸಹ್ಯ ವ್ಯಕ್ತಪಡಿಸಿದ್ದರು

Padmaraj Saptasagar ಇತ್ತೀಚಿಗೆ ಬುಕ್ ರಿಲೀಸ್ ನಲ್ಲಿ ನೋಡಿದ್ದು, ತುಂಬಾ ಶಾಕ್. he is from my ನತಿವೆ. great loss to all of us

Mythri Sunder ಒಬ್ಬ ಒಳ್ಳೆಯ ಸಮಾಜವಾಧಿ ರಾಜಕಾರಣಿ, ಅವರಿಗೆ ನನ್ನ ಶ್ರದ್ಧಾಂಜಲಿ.

++

Vasanth

Very sad. May his sour rest in peace.

SATHYAPRASAD BV

ಅಪರೂಪದ ರಾಜಕಾರಣಿ, ಸಭ್ಯತೆ, ನೇರನುಡಿಗೆ ಹೆಸರಾಗಿದ್ದವರು ಎಂ.ಪಿ.ಪ್ರಕಾಶ್. ಜನರಿಗೆ ರಾಜಕಾರಣಿಗಳೆಂದರೆ ವಾಕರಿಕೆ ಹುಟ್ಟಿಸುತ್ತಿರುವ ಈ ದಿನಗಳಲ್ಲಿ ಇಂತಹ ಚಿಂತನಶೀಲ ವ್ಯಕ್ತಿಯನ್ನು ಕಳೆದುಕೊಂಡದ್ದು ನಿಜಕ್ಕೂ ನಾಡಿಗೆ ತುಂಬಲಾರದ ನಷ್ಟ.

prakashchandra

ರಾಜಕಾರಣದಲ್ಲಿ ತತ್ವ, ಸಿದ್ಧಾಂತ ಉಳಿಸಿಕೊಂಡ ಅಪರೂಪದ ನಾಯಕ ಎಂ. ಪಿ . ಪ್ರಕಾಶ್.  ಸದಾ ಮೌಲ್ಯಾಧಾರಿತ ರಾಜಕಾರಣ ನಡೆಸಿದವರು. ಅವರ ನಿಧನದಿಂದ ಕರ್ನಾಟಕ ಬಡವಾಗಿದೆ, ಸಜ್ಜನ ರಾಜಕಾರಣಿಯ ಆತ್ಮಕ್ಕೆ ದೇವರು ಸದ್ಗತಿ ದಯಪಾಲಿಸಲಿ.

SUBRAHMANYA ADIGA

ಸಜ್ಜನರನ್ನು ಕಳೆದು ಕೊಂಡಾಗಲೆಲ್ಲಾ  ಇಂಥವರು ಮುಂದೆ ಸಿಗಲಾರರು ಎನ್ನುವ ಭಾವನೆ ಸಹಜವಾಗಿ ಬರುತ್ತದೆ, ಮುಂದೆ ಹೇಗೋ ಏನೋ ಎಂಬ ತೊಳಲಾಟ, ದುಗುಡ, ಕೆಲ ದಿನ ಕಾಡುತ್ತದೆ. ನಂತರ…!! ದುಗುಡ ದುಮ್ಮಾನಗಳು ಮತ್ತೊಬ್ಬ ಸಜ್ಜನರ …??

Ganesh Shenoy

Among the rarest of politicians, Shri M.P. Prakash was known for his modestly, simplicity, and magnanimity. My final tributes to this eminent politician.

ಕುಮಾರ ರೈತ

ಸಾತ್ವಿಕ-ತಾತ್ವಿಕ ಬದ್ಧತೆ ರಾಜಕಾರಣಿ ಕಳೆದುಕೊಂಡಿದ್ದೇವೆ. ಇದು ವರ್ತಮಾನದ ರಾಜಕಾರಣಕ್ಕೆ ದೊಡ್ಡ ನಷ್ಟ. ಎಂ.ಪಿ. ಪ್ರಕಾಶ್, ರಾಜಕಾರಣವನ್ನೇ ವೃತ್ತಿಯಾಗಿರಿಸಿಕೊಂಡಿರಲಿಲ್ಲ. ಇದಕ್ಕೂ ಹೊರತಾಗಿ ಅವರು ಸಾಂಸ್ಕೃತಿಕ ಕಾಳಜಿ ಹೊಂದಿದ್ದರು. ಸಿನಿಮಾ-ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಅತ್ಯುತ್ತಮ ಎನ್ನಬಹುದಾದ ನಾಟಕಗಳನ್ನೂ ಅನುವಾದಿಸಿದರು. ಮೇರು ನಾಟಕಕಾರ ಉತ್ಪಲ್ ದತ್ ಅವರ ಸೂರ್ಯಶಿಕಾರಿಯ ಇವರ ಅನುವಾದ ಅನೇಕ ಕಾರಣಗಳಿಗೆ ಅನನ್ಯ. ಆಲ್ಲಿ ಕನ್ನಡ ಭಾಷೆಯ ಕಾವ್ಯ-ಚಿತ್ರಕ ಶಕ್ತಿಯನ್ನು ಸಶಕ್ತವಾಗಿ ದುಡಿಸಿಕೊಂಡಿದ್ದಾರೆ. ಕಾಡಿನ ಬೆಂಕಿ ಸಿನಿಮಾದಲ್ಲಿನ ಅವರ ನಟನೆ ನೋಡಿದರೆ ನಟನೆಯೆಂದು ಭಾಸವಾಗುವುದಿಲ್ಲ. ಅತ್ಯಂತ ಸಹಜವಾಗಿ ನಟಿಸುವ, ಸಂಭಾಷಣೆ ಒಪ್ಪಿಸುವ ಕಾರ್ಯ ಅವರಿಂದ ನಡೆಯುತ್ತಿತ್ತು. ನಾಟಕ-ಸಿನಿಮಾಗಳಲ್ಲದೇ ವರ್ತಮಾನಕ್ಕೆ ಸ್ಪಂದಿಸುವ ಲೇಖನಗಳನ್ನೂ ಅವರು ಬರೆದರು.

ತಾವು ಅಪ್ಪಿಕೊಂಡ ಸಿದ್ಧಾಂತಕ್ಕೆ ವಿರುದ್ಧವಾಗಿ ಬಿಜೆಪಿಯೊಡಗೂಡಿ ಸರ್ಕಾರ ರಚಿಸಿದ್ದು ಅವರನ್ನು ಕಾಡುತ್ತಲೇ ಇತ್ತು. ಆದರೆ ಇದರ ಹಿಂದೆ ಬಲವಂತವಿತ್ತು. ಬಳ್ಳಾರಿಗೆ ಬಂದಾಗಲೆಲ್ಲಾ ಪತ್ರಿಕಾಗೋಷ್ಠಿ ನಂತರ ನಾನಾ ರಂಗಗಳ ಕುರಿತು ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದರು. ಕನ್ನಡ ಪತ್ರಿಕೋದ್ಯಮ ಸಾಗುತ್ತಿರುವ ಹಾದಿ ಬಗ್ಗೆ ಮಾತನಾಡುತ್ತಾ ಕೆಲವು ಬೆಳವಣಿಗೆಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದರು. ಅವರ ಆತಂಕಗಳು ಆಧಾರ ಸಹಿತ. ಇಂಥ ವಿಶಿಷ್ಟ ವ್ಯಕ್ತಿ ಭೌತಿಕ ಕಣ್ಮರೆ ನಾಡಿಗೆ ನಷ್ಟ. ಅವರ ಸಾಂಸ್ಕೃತಿಕ ಛಾಪು ಸದಾ ಇರುತ್ತದೆ

ಬ್ರೆಕಿಂಗ್ ನ್ಯೂಸ್: ಎಂ ಪಿ ಪ್ರಕಾಶ್ ಇನ್ನಿಲ್ಲ..

ಒಂದು ನೆನಪು: ಈ ಕಥೆ ಈಗ ಯಾಕೆ ?

-ಕೋ  ಚೆನ್ನಬಸಪ್ಪ

೧೯೩೧ನೆ ಆಗಸ್ಟ್ ೨೧ ರಂದು ಸ್ಥಾಪನೆ ಆದ ನಾನು ಓದಿದ ಹೈಯರ್ ಎಲಿಮೆಂಟರಿ ಶಾಲೆ ಇದೀಗ ತನ್ನ ವಜ್ರ ಮಹೋತ್ಸವ ವರ್ಷವನ್ನು ದಾಟಿದೆ. ಅದಕ್ಕೆ ೨೫ ವರ್ಷ ತುಂಬಿದಾಗ ೧೯೫೬ ರಲ್ಲಿ ಬೆಳ್ಳಿ ಹಬ್ಬವನ್ನೂ ಆಚರಿಸಲಿಲ್ಲ .೧೯೮೧ ರಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಲಿಲ್ಲ. ಅದನ್ನು ಕುರಿತು ಯಾರೂ ಏನೂ ಬರೆಯಲಿಲ್ಲ. ಈಗ ಅದರ ಹುಟ್ಟು ಬೆಳವಣಿಗೆಯ ಕತೆ ಯಾಕೆ ನೆನಪಾಯಿತು? ೨೦೧೧ ನಮ್ಮ ಸಂಘ ಸ್ಥಾಪನೆ ಆದ ಅಷ್ಟದಶಮಾನೋತ್ಸವ!!.

೨೦೦೫ ಜೂನ್ ೨೯ ರಂದು ನಾನು ನಮ್ಮೂರಿಗೆ ಹೋದ ಸಂಗತಿಯನ್ನು ಈ ಹಿಂದೆ ಪ್ರಸ್ತಾಪಿಸಿದ್ದೇನೆ. ಆಲೂರಿನಿಂದ ಹೊರಟು ಬೆಂಗಳೂರಿಗೆ ಬರಲು ರಾಷ್ಟ್ರೀಯ ಹೆದ್ದಾರಿ ೧೩ ಕ್ಕೆ ಬಂದಾಗ , ನನ್ನ ಮಗ ಪ್ರಭುದೇವ ‘ನೀವು ಓದಿದ ಶಾಲೆ ಎಲ್ಲಿದೆ?’ ಎಂದು ಕೇಳಿದ. ‘ಇಲ್ಲೇ ರಸ್ತೆ ಆಚೆ ಬದಿಗೆ ಅರ್ಧ ಕಿ.ಮೀಟರ್ ದೂರದಲ್ಲಿ ಕಾನಾಮಡುವು ಇದೆ.ಆಗ ಊರಲ್ಲಿದ್ದ ಆ ಶಾಲೆ ಈಗ ಊರಾಚೆಗೆ ಸ್ಥಳಾಂತರವಾಗಿದೆ. ನೋಡುತ್ತಿಯಾ ? ‘ ನೋಡೋಣ’ ಎಂದ . ಗಾಡಿಯನ್ನು ಆ ಕಡೆಗೆ ಹೊರಳಿಸಿ ಅಲ್ಲಿಗೆ ಹೊರಟೆವು. ಐದಾರು ನಿಮಿಷಗಳಲ್ಲಿ ಹುಲಿಕೆರೆ ದಾರಿಯಲ್ಲಿರುವ ಆ ಶಾಲೆಯ ಕಾಂಪೌಂಡಿನ ಹೆಬ್ಬಾಗಿಲ ಮುಂದೆ ನಿಂತೆವು. ಉಕ್ಕಿನ ಅಕ್ಷರಗಳಲ್ಲಿ ಬರೆದಿದ್ದ ಯಾರದೋ ಒಂದು ಹೆಸರು ಎದ್ದು ಕಾಣುತ್ತಿತ್ತು . ನನ್ನ ಮಗ ಆ ಹೆಸರು ಓದಿ:

‘ಇವರೇನಾ ಈ ಶಾಲೆ ಕಟ್ಟಿಸಿದವರು?’ ಎಂದ

‘ಅಲ್ಲ ಅವರ್ಯಾರೋ ನನಗೆ ಗೊತ್ತಿಲ್ಲ

‘ಮತ್ತೆ ಅವರ ಹೆಸರನ್ನು ಯಾಕೆ ಹಾಕಿದ್ದಾರೆ?

ಗೊತ್ತಿಲ್ಲ ಬಹುಷಃ ಆ ಕಬ್ಬಿಣದ ಗೇಟ್ ಮಾಡಿಸಿ ಕೊಟ್ಟವರಿರಬೇಕು ಅದೂ ಸರಿಯಾಗಿ ತಿಳಿಯದು

ಕಟ್ಟಿಸಿ ಕೊಟ್ಟವರು ಯಾರು ಮತ್ತೆ?

ಈ ಕಟ್ಟಡ ನಿಂತಿರುವ ಈ ನಿವೇಶನ ಆರೂವರೆ ಎಕರೆ ದಾನ ಮಾಡಿದವರು ನನ್ನ ಸೋದರ ಮಾವ . ಅವರ ತಾಯಿ -ನನ್ನ ಅಜ್ಜಿಯ ಹೆಸರಿನಲ್ಲಿ…..

ಅಂದು ಭಾನುವಾರ. ಗೇಟಿಗೆ ಬೀಗ ಹಾಕಿತ್ತು . ಒಳಗೆ ಹೋಗುವುದು ಹೇಗೆಂದು ನಾನು ಅತ್ತಿತ್ತ ನೋಡುತ್ತಿದ್ದಾಗ ನನ್ನ ಮಾವನ ಮೊಮ್ಮಗ ಮಲ್ಲಿಕಾರ್ಜುನ ಎಲ್ಲಿಂದಲೋ ಬಂದ . ಗೇಟಿನ ಪಕ್ಕದಲ್ಲಿ ಸೊಂಟ ಮಟ್ಟ ಕಲ್ಲು ಬಂಡೆಗಳನ್ನು ಹೂಳಿ ಸಂದಿನ ದಾರಿ ತೋರಿಸಿದ. ಒಳಗೆ ಹೋದೆವು. ಬುನಾದಿಗೆ ಪಾಯ ಅಗೆದ ದಿನವೇ ಶಾಲಾ ಕಟ್ಟಡದ ಮುಂಭಾಗದಲ್ಲಿ ನೆಟ್ಟಿದ್ದ ಮರಗಳು ಬೆಳೆದಿದ್ದವು.ಎಡಬಲಕ್ಕೆ ವಿಸ್ತಾರವಾದ ಆಟದ ಮೈದಾನ. ಇತ್ತೀಚಿಗೆ ಹೈಸ್ಕೂಲು , ಪದವಿ ಪೂರ್ವ ಕಾಲೇಜು , ಐ.ಟಿ.ಐ. ಇತ್ಯಾದಿ ಶಾಲೆಯ ಕಟ್ಟಡಗಳು ಕಾಣಿಸಿದವು. ಅಲ್ಲೊಂದು ಸಣ್ಣ ಸಭಾ ಭವನವು ತಲೆ ಎತ್ತಿತ್ತು.

ಇನ್ನಷ್ಟು

ಗಾಂಧೀಜಿಯ ಕನ್ನಡಕದೊಳಗಿಂದ…

-ನಾ ದಿವಾಕರ

ಆಧುನಿಕ ಭಾರತದ ಇತಿಹಾಸವನ್ನು ಕೆದಕಿದಾಗ ಕಣ್ಣೆದುರು ನಿಲ್ಲುವುದು ಬರೇ ದ್ವಂದ್ವಗಳೇ. ಒಂದೆಡೆ ವಸಾಹತುಶಾಹಿಯನ್ನು ಸ್ವೀಕರಿಸಿ ತಮ್ಮ ಪಾಳಯಗಳನ್ನು ರಕ್ಷಿಸಿಕೊಳ್ಳಲು ಹೆಣಗಾಡಿದ ರಾಜಮಹಾರಾಜರುಗಳ ಕಥೆಯಾದರೆ ಮತ್ತೊಂದೆಡೆ ಸ್ವದೇಶದ ವಿಮೋಚನೆಗಾಗಿ ಬಲಿದಾನ ಮಾಡಿದ ವೀರ ಯೋಧರ ಕಥನಗಳು ರಾರಾಜಿಸುತ್ತವೆ. ಮತ್ತೊಂದೆಡೆ ರಾಷ್ಟ್ರ ವಿಮೋಚನೆಯೊಂದಿಗೇ ದೇಶದ ಆಂತರ್ಯವನ್ನು ದಹಿಸುತ್ತಿದ್ದ ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸಲು ಪಣ ತೊಟ್ಟ ನಿದರ್ಶನಗಳು ಅನಾವರಣಗೊಳ್ಳುತ್ತವೆ. ಫುಲೆ, ಅಂಬೇಡ್ಕರ್, ಮಹಾತ್ಮ ಗಾಂಧೀಜಿಯವರ ಸಂಕಥನಗಳು ನವ ಭಾರತದ ಇತಿಹಾಸವನ್ನು ಅಲಂಕರಿಸುತ್ತವೆ. ಗಾಂಧೀಜಿಯವರ ಶಾಂತಿ ಅಹಿಂಸೆಯ ಮಂತ್ರದೊಂದಿಗೇ ಭಗತ್ ಸಿಂಗ್ ಮತ್ತು ಸಂಗಡಿಗರ ಕ್ರಾಂತಿಕಾರಿ ಚಿಂತನೆಗಳೂ ಕಂಗೊಳಿಸುತ್ತವೆ. ಭಾರತದ ಚರಿತ್ರೆಯ ಈ ವೈರುಧ್ಯಗಳ ಹಿನ್ನೆಲೆಯಲ್ಲೇ ಪ್ರಸ್ತುತ ಸಂದಿಗ್ಧಮಯ ಸನ್ನಿವೇಶದಲ್ಲಿ ಗಾಂಧಿ ಏಕೋ ನೆನಪಾಗುತ್ತಾರೆ. ತನ್ನ ನೆಚ್ಚಿನ ರಾಷ್ಟ್ರವನ್ನು ವೀಕ್ಷಿಸಲು ಬರುವ ಗಾಂಧೀಜಿಯವರ ಕಂಗಳ ಮೂಲಕ ಅವರ ಕನ್ನಡಕದೊಳಗಿಂದಲೇ ಪ್ರಸಕ್ತ ಭಾರತವನ್ನು ನೋಡುವ ಒಂದು ಕಲ್ಪನೆ ಇಲ್ಲಿದೆ :

ಯುವ ಭಾರತ : ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ ಯುವಪೀಳಿಗೆಯನ್ನು ಸೆಳೆದಿದ್ದು ಗಾಂಧೀಜಿಯ ಅಹಿಂಸಾತ್ಮಕ ಧೋರಣೆ ಮತ್ತು ವಸಾಹತುಶಾಹಿ ವಿರೋಧಿ ನಿಲುವು. ಗಾಂಧೀಜಿಯ ದೃಷ್ಟಿಯಲ್ಲಿ ದೇಶದ ಭವಿಷ್ಯವನ್ನು ನಿರ್ಧರಿಸುವಲ್ಲಿ ಯುವಜನತೆಯ ಪಾತ್ರ ಹೆಚ್ಚು ಮಹತ್ತರವಾಗಿತ್ತು. ಆದರೆ ಇಂದು ಭಾರತ ಕಾಣುತ್ತಿರುವ ಯುವ ಪೀಳಿಗೆ ಎತ್ತ ಸಾಗುತ್ತಿದೆ ? ಈ ಪೀಳಿಗೆಗೆ ಸ್ಫೂತರ್ಿಯಾಗಬಲ್ಲ ಮಾದರಿಗಳೇ ಕಾಣುತ್ತಿಲ್ಲ. ಇವರಿಗೆ ಮಾರ್ಗದರ್ಶನ ನೀಡಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸುವಂತೆ ಮಾಡುವ ನಾಯಕತ್ವವೇ ಇಲ್ಲ. ಭ್ರಷ್ಟ ರಾಜಕಾರಣದಲ್ಲಿ ಮುಳುಗಿಹೋಗಿರುವ ಸಮಾಜದಲ್ಲಿ, ಹೊಸ ಸಮಾಜಕ್ಕೆ ಕಣ್ಣು ತೆರೆಯುವ ಯುವ ಸಮುದಾಯ ಎತ್ತ ನೋಡಿದರೂ ಕಾಣುವುದು ಕೇವಲ ಭ್ರಷ್ಟತೆ, ಹಿಂಸೆ, ದಬ್ಬಾಳಿಕೆ, ಶೋಷಣೆ. ಶಿಕ್ಷಣವನ್ನೂ ಒಳಗೊಂಡಂತೆ ಎಲ್ಲ ಕ್ಷೇತ್ರಗಳ ವಾಣಿಜ್ಯೀಕರಣ. ಶಿಥಿಲವಾಗುತ್ತಿರುವ, ಕ್ಷೀಣಿಸುತ್ತಿರುವ ಮಾನವೀಯ ಮೌಲ್ಯ ಮತ್ತು ಸಂಸ್ಕೃತಿ. ನಾವಿಕನಿಲ್ಲದ ಹಡಗಿನಲ್ಲಿ ಸಾಗುತ್ತಿರುವ ಯುವಪೀಳಿಗೆ ಈ ಹಡಗಿಗೆ ಲಂಗರು ಹಾಕಿರುವ ಭ್ರಷ್ಟ ವ್ಯವಸ್ಥೆ. ಗಾಂಧೀಜಿಯ ದೃಷ್ಟಿ ಮಸುಕಾಗುತ್ತಿದೆ.

ಇನ್ನಷ್ಟು

ಮೀನುಗಳು ಗರಿಗೆದರಿ ಓಡಾಡತೊಡಗಿದ್ದವು

ಏನೆಂದು ಹೇಳಲಿ ನೀರಿನ ಮಹಿಮೆಯ…

-ಸಾವಿತ್ರಿ ವಿ ಎಚ್

ಅವತ್ತು ತೋಟಕ್ಕೆ ಹೋದಾಗ ಅದು ತೋಟ ಅನ್ನುವ ಲಕ್ಷಣವನ್ನು ಉಳಿಸಿಕೊಂಡಿರಲಿಲ್ಲ. ತೋಟಗಾರಿಕಾ ಇಲಾಖೆಯಿಂದ ಉಚಿತವಾಗಿ ತಂದು ನೆಟ್ಟಿದ್ದ ಸೀಬೆ, ಮಾವು, ತೆಂಗು, ಲಿಂಬಿಯ ಸಸಿಗಳು ಹತ್ತಿದ್ದೇ ತಡ, ನೀರಿನ ಕೊರತೆಯಿಂದಾಗಿ ಹಾಗೆ ಬೇರು ಸಹಿತ ಒಣಗಿಹೋಗಿದ್ದವು. ಪುಟ್ಟ ತಮ್ಮನೊಂದಿಗೆ ತಲೆ ಮೇಲೆ ಸಸಿಗಳನ್ನು ಹೊತ್ತುಕೊಂಡು ಲಾರಿ ಏರಿ ಮನೆಗೆ ಬಂದಿದ್ದ ನೆನಪು ನೋವಾಗಿ ಉಳಿಯಿತು. ಮೊದಲಿದ್ದ ತೆಂಗಿನ ಗಿಡಗಳಲ್ಲಿ ಅದೇ ತಾನೇ ಇಣುಕಿ ಹಾಕುತ್ತಿದ್ದ ಕಾಯಿಗಳು ಉದುರಿ ಬೀಳತೊಡಗಿದ್ದವು. ಏಕೈಕ ಚಿಕ್ಕು(ಸಪೋಟ) ಹಣ್ಣಿನ ಗಿಡ ಹೂ ಕಾಯಿಗಳಿಂದ ಕೂಡಿದ್ದರೂ, ಅದೇಕೋ ಮಿಡಿಗಾಯಿ ಹಂತಕ್ಕೆ ತಲುಪಿದಾಗ ಕಾಯಿಗಳು ಉದುರಿ ಹೋಗುತ್ತಿದ್ದವು. ಭೂಮಿಯೆಲ್ಲ ಹಸಿರಾಗಿರಬೇಕಾಗಿದ್ದ ಮಳೆಗಾಲದಲ್ಲಿಯೂ ಬಿಕೋ ಎನ್ನತೊಡಗಿತ್ತು. ಮಳೆಗಾಲವಾದರೂ ಮಳೆಯ ದರ್ಶನವೇ ಇರಲಿಲ್ಲವಲ್ಲ ಅದಕ್ಕೆ! ಹೊಲದ ದಕ್ಷಿಣ ಭಾಗದ ಬದುವಿನಲ್ಲಿದ್ದ ಜಾಲಿಗಿಡದಲ್ಲಿ ಜೀರುಂಡೆಗಳು ಜೀಂಯ್ ಅಂತ ಸ್ವರ ತೆಗೆದು ಹಾಡುತ್ತಿದ್ದವು. ಉತ್ತರ ಭಾಗದ ಬೇವಿನ ಮರಗಳಲ್ಲಿ ಗಿಳಿ, ಗೊರವಂಕ ಇತ್ಯಾದಿ ಪಕ್ಷಿಗಳು ಬರಲಿರುವ ಹಸಿರು ಕಾಲಕ್ಕಾಗಿ ನಿರೀಕ್ಷಿಸುತ್ತಿವೆಯೇನೋ ಎಂಬಂತೆ ಆಗೀಗ ಹಾಡುತ್ತಿದ್ದವು.

ಅವ್ವ(ಅಮ್ಮ) ಹೊಲ ಸೇರಿದ್ದೇ ತಡ, ಸೀರೆಯ ನೆರಿಗೆಯನ್ನು ಎತ್ತಿಕಟ್ಟಿ, ಸೆರಗಿನಿಂದ ತಲೆಸುತ್ತ ಹೊದ್ದುಕೊಂಡು ಕಾಯಕನಿರತಳಾಗಿಯೇ ಬಿಟ್ಟಳು. ಆಕೆಗೆ ಮಾತ್ರ ಅದೆಷ್ಟು ಪ್ರೀತಿ ಈ ಭೂಮಿ ಎಂದರೆ! ಹಸಿರಿನಿಂದ ತುಂಬಿ ಸಂಭ್ರಮವನ್ನು ಸೂಸುತ್ತಿದ್ದ ಕಾಲದಲ್ಲಿಯೂ, ನೀರು ಕಾಣದೇ ಬಿಸಿ ಉಸಿರು ಚೆಲ್ಲುತ್ತಿದ್ದ ಕಾಲದಲ್ಲಿಯೂ ಅವ್ವ ಈ ಭೂಮಿಯನ್ನು ಒಂದೇ ಪ್ರೀತಿಯಿಂದ ಕಾಣುತ್ತಾಳಲ್ಲವೇ ಎಂದುಕೊಂಡವಳಿಗೆ ಕಣ್ಣುಗಳಲ್ಲಿ ನೀರು ತುಂಬಿ, ಪಟಕ್ಕನೇ ತೊಟ್ಟಿಕ್ಕಿತ್ತು. ಅವ್ವ ಮಾತ್ರ ಬಾಹ್ಯವನ್ನು ಮರೆತು, ಅಲ್ಲಲ್ಲಿ ಬಿದ್ದಿದ್ದ ಮುಳ್ಳು, ಕಸ ಕಡ್ಡಿಗಳನ್ನು ಆಯ್ದು ಒಂದೆಡೆ ಗುಂಪಿ ಹಾಕತೊಡಗಿದ್ದಳು.

ಇನ್ನಷ್ಟು

‘ಶೂದ್ರ’ ಕಂಡ ಕಮಲಾದಾಸ್

ಕನಸಿಗೊಂದು ಕಣ್ಣು

ಅಲೆಮಾರಿಯ ಮಾತು – 147

ಕಮಲಾದಾಸ್: ಜೀವನಪ್ರೀತಿಯ ಲೇಖಕಿ

-ಶೂದ್ರ ಶ್ರೀನಿವಾಸ್

ನಾನು ವರ್ಣರಂಜಿತ ಯೌವನವನ್ನು ಕಳೆದಿದ್ದೇನೆ. ಪ್ರಾಯಶಃ ನನ್ನ ಮಧ್ಯವನ್ನು ಬೆರೆಸಿಕೊಂಡಂತೆ, ನನ್ನ ಸುಖಗಳನ್ನು ಎಚ್ಚರವಿಲ್ಲದೆ ಬೆರೆಸಿದೆ.

ಬಹುಶಃ ನಾನು ಸಾಯಬಹುದು. ವಧುವಿನಂತೆ ಕಾಣಲು ದೇಹವನ್ನು ಅಲಂಕರಿಸುತ್ತಿದ್ದ ನನ್ನ ಆಭರಣಗಳು ನಾನು ಸತ್ತ ನಂತರವೂ ಇರುತ್ತವೆ. ನಾನು ಸಂಗ್ರಹಿಸಿದ ಪುಸ್ತಕಗಳು, ಹೂಗಳಿಂದ ನಾನು ಪೂಜಿಸಿದ ಕಂಚಿನ ವಿಗ್ರಹಗಳು, ನಾನು ಅಳಿದ ಮೇಲೂ ಇರುತ್ತವೆ. ಆದರೆ ನಾನು ಇರೆನು. ನನ್ನ ಚಿತೆಯಿಂದ ನನ್ನ ಶೋಕಿತ ಮಕ್ಕಳು ಎಲುಬು ಮತ್ತು ಬೂದಿಯನ್ನು ತೆಗೆಯುವರು. ಆದರೂ ಪ್ರಪಂಚ ಮುಂದುವರಿಯುತ್ತದೆ. ನನ್ನ ಮಕ್ಕಳ ಕೆನ್ನೆಯ ಮೇಲಿನ ನೀರು ಬತ್ತುತ್ತದೆ. ಇವರ ಹೆಂಡಂದಿರು ಈ ಲೋಕಕ್ಕೆ ಪ್ರತಿಭಾವಂತ ಮಕ್ಕಳನ್ನು ನೀಡುವರು. ನನ್ನ ವಂಶೀಯರು ಭೂಮಿಯಲ್ಲಿ ತುಂಬುವರು. ನನಗಿಷ್ಟೇ ಸಾಕು. ಈ ಸಾಲುಗಳು ಕಮಲಾದಾಸ್ ರವರ ನನ್ನ ಕಥೆ ಎಂಬ ಅವರ ಜೀವನಗಾಥೆಯಿಂದ ತೆಗೆದುಕೊಂಡಿರುತವಂಥದ್ದು. ಇದೇ ನನ್ನ ಕಥೆಯು ‘ನೀರ್ಮಾದಳ ಹೂ ಬಿಟ್ಟ ಕಾಲ’ ಎಂಬ ಶೀರ್ಷಿಕೆಯಲ್ಲಿಯೂ ಬಂದಿದೆ.

1994ರಲ್ಲಿ ಅಂದರೆ ಇಪ್ಪತ್ತನೆಯ ಶತಮಾನದ ಕೊನೆಯ ಭಾಗ. ಕೇರಳದ ಪೆರಿಯಾರ್ ನದಿಯ ದಡದಲ್ಲಿ ಉದ್ದಕ್ಕೂ ಎರಡೂ ಕಡೆ ಹರಡಿಕೊಂಡಿದ್ದ ಬೆಳ್ಳನೆಯ ಮರಳು. ಎಷ್ಟು ದೂರ ನೋಡಿದರೂ ರೇಷ್ಮೆಯ ಸೆರಗನ್ನು ಬೀಸಿ ಎಸೆದಂತೆ ಕಂಗೊಳಿಸುವ ಮರಳು. ಅದರ ಪಕ್ಕದಲ್ಲಿಯೇ ನೂರಾರು ಮಂದಿ ತಂಗುವಷ್ಟು ಅದ್ಭುತ ಅರಮನೆ ರೀತಿಯ ಬಂಗಲೆಗಳು. ಒಂದಂತೂ ಅರಮನೆಯೇ ಆಗಿತ್ತೇನೋ ಗೊತ್ತಿಲ್ಲ. ಅಷ್ಟು ಮನಮೋಹಕವಾಗಿತ್ತು. ಇಂಥ ಕಡೆ ಬಯಲಿನಲ್ಲಿ ವಿವಿಧ ಬಣ್ಣಗಳ ಷಾಮಿಯಾನ. ಅಲ್ಲಿಯೇ ಬೃಹತ್ತಾದ ವೇದಿಕೆ. ವೇದಿಕೆಯ ಮಧ್ಯಭಾಗದಲ್ಲಿ ಒಂದು ಪಂಜರ. ಅದರೊಳಗೊಂದು ಗಿಳಿ. ಅದು ಒಂದೇ ಸಮನೆ ಒದ್ದಾಡುತ್ತಿತ್ತು. ಇದು ಕೇರಳದ ಮಂದಿಗೆ ಸ್ವಾಭಾವಿಕವಿರಬಹುದು. ಯಾಕೆಂದರೆ ಈ ಮೊದಲೇ ನಾನು ಕೇರಳದ ಬಹಳಷ್ಟು ಮನೆಗಳಲ್ಲಿ ಪಂಜರದಲ್ಲಿ ಗಿಳಿಯನ್ನು ಸಾಕಿರುವುದು ಕಂಡಿದ್ದೇನೆ. ಆದರೆ ಒಂದು ವಿಚಾರ ಸಂಕಿರಣದ ವೇದಿಕೆಯ ಮೇಲೆ ಈ ಪಂಜರವೇಕೆ? ಎಂದು ನಾವು ತುಂಬ ಗುಸುಗುಸು ಮಾತಾಡಿಕೊಂಡಿದ್ದೆವು.

ವೇದಿಕೆಯಲ್ಲಿ ವಾಸುದೇವನ್ ನಾಯರ್ ರವರು ಇದ್ದರು. ಮಲಯಾಳದ ಅಪೂರ್ವ ಲೇಖಕ. ಅವರು ತಮ್ಮ ಸಾಹಿತ್ಯಕ ಒಲವುಗಳನ್ನು ಕುರಿತು ಮಾತಾಡಲು ಪ್ರಾರಂಭಿಸಿದ್ದರು. ಅಷ್ಟರಲ್ಲಿ ಗಿಳಿಯ ಹಿಂಸೆಯನ್ನು ತಾಳಲಾರದೆ ಅಥವಾ ಅದು ನನ್ನ ಮನಸ್ಸಿನಲ್ಲಿ ಹಿಂಸೆಯನ್ನು ಕೆದಕುತ್ತಿತ್ತೇನೋ ಕಾಣೆ. ಪಕ್ಕದಲ್ಲಿ ಕೂತಿದ್ದ ಕೇರಳದ ಮಹಾನ್ ಸಾಹಿತಿಗಳಾದ ತಕಳಿ ಶಿವಶಂಕರ ಪಿಳ್ಳೆ ಮತ್ತು ಕಮಲಾದಾಸ್ರವರ ಬಳಿ ಇಟ್ ಈಸ್ ವೆರಿ ಡಿಫಿಕಲ್ಟ್ ಟು ಟಾಲರೇಟ್ ಎಂದೆ.

ಅದಕ್ಕೆ ಕಮಲಾದಾಸ್ ನಗುತ್ತ ನಾವು ಕೇರಳದಲ್ಲಿ ಸಹಿಸಿಕೊಳ್ಳುವುದಿಲ್ಲ. ಅದನ್ನು ಮತ್ತಷ್ಟು ಕಲ್ಟಿವೇಟ್ ಮಾಡುತ್ತಲೇ ಹೋಗುತ್ತಿದ್ದೇವೆ. ಇನ್ನೊಂದು ಅರ್ಥದಲ್ಲಿ ನಾವು ಹೆಣ್ಣುಮಕ್ಕಳು ಪಂಜರದ ಗಿಳಿಗಳೇ ಎಂದಾಗ ಅತ್ಯಂತ ವಯೋವೃದ್ಧರಾಗಿದ್ದ ತಕಳಿಯವರು ಇದು ನಿಜವೆನ್ನುವಂತೆ ತಲೆದೂಗಿದರು. ಸಾಮಾನ್ಯವಾದ ಬಿಳಿಯ ಪಂಚೆಯನ್ನು ಧರಿಸಿದ್ದ ತಕಳಿಯವರು ಅಷ್ಟೇ ಸಾಮಾನ್ಯವಾದ ವಸ್ತ್ರವನ್ನು ತಮ್ಮ ಬೆತ್ತಲೆಯ ಮೈಮೇಲೆ ಹಾಕಿಕೊಂಡಿದ್ದರು. ಕಮಲಾದಾಸ್ ರವರಂತೂ ಅತ್ಯಂತ ಸರಳವಾದ ಕಾಟನ್ ಸೀರೆ. ವಿಷಾದ ತುಂಬಿದ ಬಟ್ಟಲುಗಣ್ಣಿನ ನಿರಾಡಂಬರ ಕಪ್ಪು ಸುಂದರಿ. ಅವರ ಪಕ್ಕದಲ್ಲಿ ಒರಿಯಾದ ಖ್ಯಾತ ಲೇಖಕಿ ಪ್ರತಿಭಾ ರಾಯ್ರವರು ಟ್ರಿಮ್ಮಾಗಿ ಡ್ರೆಸ್ ಮಾಡಿಕೊಂಡು ತುಟಿಗೆ ಲಿಪ್ ಸ್ಟಿಕ್ ಹಚ್ಚಿಕೊಂಡಿದ್ದರು. ಅತ್ಯಂತ ಲವಲವಿಕೆಯ ಲೇಖಕಿ. ಪಂಜರದ ವಿಷಯದಲ್ಲಿ ಸಹಮತವನ್ನು ವ್ಯಕ್ತಪಡಿಸಿದರು. ಕೊನೆಗೆ ಸ್ವಲ್ಪ ದೂರದಲ್ಲಿ ನಮ್ಮ ಜಿ.ಎಸ್. ಶಿವರುದ್ರಪ್ಪನವರು ಕೂತಿದ್ದರು. ಹಿಂದಿರುಗಿ ಅವರಿಗೆ ವಿಷಯ ತಿಳಿಸಿದೆ. ಹಿಂದಿಯ ಅರ್ಥಪೂರ್ಣ ಲೇಖಕ ಮತ್ತು ಚಿಂತಕ ನಿರ್ಮಲವಮರ್ಾರವರ ಬಳಿ ಏನೋ ಮಾತಾಡುತ್ತಿದ್ದ ಅವರು ಪಂಜರವನ್ನು ತೆಗೆಸಲು ಚೀಟಿ ಕಳಿಸಿ ಎಂದರು. ನಾನು ಧೈರ್ಯ ಮಾಡಿ ಚೀಟಿಯನ್ನು ವಾಸುದೇವನ್ ನಾಯರ್ರವರ ಕೈಗೆ ತಲುಪಿಸಿದೆ. ಅವರು ಅದನ್ನು ನೋಡಿ ಸಾರಿ, ನಾನು ಗಂಭೀರವಾಗಿ ಪಂಜರವನ್ನು ಗಮನಿಸಲಿಲ್ಲ ಎಂದು ತುಂಬ ಚೂಟಿಯಿಂದ ಓಡಾಡಿಕೊಂಡಿದ್ದ ಯುವ ಕವಿ ಬಾಲಚಂದ್ರ ಚೂಡಿಕಾಡ್ರವರನ್ನು ಕರೆಸಿ ತೆಗೆಸಿದರು. ಬಾಲಚಂದ್ರರವರಿಗೆ ಕಮಲಾದಾಸ್ರವರನ್ನು ಕಂಡರೆ ತುಂಬ ಸಲಿಗೆ. ಅದಕ್ಕೇ ಸಿಕ್ಕಿದಾಗಲೆಲ್ಲ ತುಂಬಾ ತಮಾಷೆ ಮಾಡುತ್ತಿದ್ದ. ಯಾಕೆಂದರೆ ಹೊಸ ಪೀಳಿಗೆಯ ಲೇಖಕರ ಜೊತೆ ಕಮಲಾದಾಸ್ ತುಂಬ ಆಪ್ತವಾದ ಸಂಪರ್ಕವನ್ನಿಟ್ಟುಕೊಂಡಿದ್ದರು.ಕಾಲು ಗಂಟೆ ವೇದಿಕೆ ಸ್ತಬ್ಧಗೊಂಡಿತು. ಅದೇ ಸಮಯಕ್ಕೆ ಎಲ್ಲರೂ ಫೈನ್ ಎಂದು ಚಪ್ಪಾಳೆ ತಟ್ಟಿದರು.

ಇನ್ನಷ್ಟು

ನನ್ನ ಅಪ್ಪ..

-ಉಷಾ ಕಟ್ಟೆಮನೆ

ಚಿತ್ರದಲ್ಲಿರುವವರು ನಮ್ಮ ಅಪ್ಪ ಕಟ್ಟೆಮನೆ ನೇಮಣ್ಣಗೌಡರು. ಇವರು ದಶಂಬರ ೨ರಂದು ದೈವಾಧೀನರಾದರು. ಅವರಿಗೆ ೮೫ ವರ್ಷವಾಗಿತ್ತು.

ನಮ್ಮ ಅಪ್ಪ ಎಂದೊಡನೆ ನನ್ನ ಕಣ್ಮುಂದೆ ಬರುವುದು ಸಣಕಲು ದೇಹದ, ಸ್ವಲ್ಪ ಬಾಗಿದ ಬೆನ್ನಿನ ಎತ್ತರದ ವ್ಯಕ್ತಿ. ಅವರನ್ನು ಮೊದಲು ನೋಡಿದಾಗ ನನ್ನ ಮಗ ಪ್ರಶ್ನಿಸಿದ್ದು ಹೀಗೆ ”ನನ್ನ ಅಜ್ಜನ ಮನೆಯಲ್ಲಿ ಗಾಂದೀಜಿ ಯಾಕಿದ್ದಾರೆ?” ಇದವರ ಹೊರನೋಟದ ವ್ಯಕ್ತಿತ್ವ. ನನ್ನ ದೊಡ್ಡಮ್ಮನ ಮಗ, ಪುರುಷೋತ್ತಮ ಬಿಳಿಮಲೆ ಹೇಳಿದ್ದು, ” ನಾನು ಕಂಡ ಅತ್ಯಂತ ಮುಗ್ಧ, ಪ್ರಾಮಾಣಿಕ ವ್ಯಕ್ತಿ ನನ್ನ ಚಿಕ್ಕಪ್ಪ”. ನನ್ನ ಪತಿ ಶಶಿಧರ್ ಭಟ್ ಕೂಡಾ ನನ್ನಪ್ಪನಲ್ಲಿ ಅದೇ ಮುಗ್ದತೆಯನ್ನು ಕಂಡಿದ್ದರು. ವ್ಯಕ್ತಿಗತವಾಗಿ ಕೂಡಾ ಅವರು ಗಾಂದೀಜಿಯ ಅನುಯಾಯಿಯಂತೆಯೇ ಸ್ವಾವಲಂಬಿಯಾಗಿ ಬದುಕಿದ್ದರು.

೧೯೨೫ನೇ ಇಸವಿ ಮೇ ೧೦ರಂದು ಜನಿಸಿದ ಅಪ್ಪ, ಈ ಲೋಕಕ್ಕೆ ಬಂದೊಡನೆಯೇ ತಾಯಿಯನ್ನು ಕಳೆದುಕೊಂಡರು. ನನ್ನಜ್ಜ ನಾಗಪ್ಪ ಗೌಡರು ಇನ್ನೊಂದು ಮದುವೆಯಾದರು. ಆ ನನ್ನಜ್ಜಿ ನಿಜವಾದ ಅರ್ಥದಲ್ಲಿ ಮಲತಾಯಿಯೇ ಆಗಿದ್ದರು ಎಂದು ಆಕೆಯನ್ನು ಕಣ್ಣಾರೆ ಕಂಡವರ ಬಾಯಿಯಿಂದ ನಾನು ಕೇಳಿದ್ದೇನೆ.

ಅಪ್ಪನಿಗೆ ಒಬ್ಬ ಅಣ್ಣ ಮತ್ತು ಒಬ್ಬ ಅಕ್ಕ ಇದ್ದರು. ಹಾಗೆಯೇ ಚಿಕ್ಕ ಅಜ್ಜಿಯಿಂದ ಹುಟ್ಟಿದ ಇಬ್ಬರು ತಮ್ಮಂದಿರು ಮತ್ತು ಒಬ್ಬ ತಂಗಿ ಇದ್ದರು. ಈ ಆರು ಮಂದಿ ಮಕ್ಕಳಲ್ಲಿ ಎಲ್ಲರ ಅನಾಧರಣೆಗೆ ತುತ್ತಾಗಿ ಬೆಳೆದವರು ನಮ್ಮಪ್ಪನಂತೆ. ಇದೆಲ್ಲಾ ಅಂತೆ-ಕಂತೆಗಳ ಸಂತೆಯಾದರೂ ಆಸ್ತಿ ಹಂಚಿಕೆಯ ವಿಷಯದಲ್ಲಿ ಅಪ್ಪನಿಗೆ ಕೊನೆಯ ಆಯ್ಕೆ ಸಿಕ್ಕಿದ್ದು ಮಾತ್ರ ನಮ್ಮ ಗಮನಕ್ಕೂ ಬಂದಿತ್ತು.

ಅಣ್ಣ-ತಮ್ಮಂದಿರ ಮಧ್ಯೆ ಆಸ್ತಿ ಪಾಲು ಮಾಡುವ ಊರ ಪ್ರಮುಖರು ಯಾರಿಗೂ ಅನ್ಯಾಯವಾಗದಂತೆ ಸಮ ಪಾಲು ಮಾಡುತ್ತಾರೆ. ಪಾಲನ್ನು ಆಯ್ದುಕೊಳ್ಳುವ ಮೊದಲ ಅವಕಾಶ ಅತೀ ಕಿರಿಯರಿಗೆ ಹೋಗುತ್ತದೆ. ಹಾಗೆ ಎಲ್ಲರೂ ಬಿಟ್ಟು ಉಳಿದ ಕಲ್ಲು ಮುಳ್ಳುಗಳಿಂದ ಕೂಡಿದ ಜಾಗ ಮತ್ತು ಕೊಳೆ ರೋಗದ ಹಾಳು ತೋಟ ನಮ್ಮಪ್ಪನ ಪಾಲಿಗೆ ಬಂದಿತ್ತು. ಆ ವರ್ಷ ನಮಗೆ ಸಿಕ್ಕಿದ ಅಡಿಕೆ ಒಂದು ಕ್ವಿಂಟಾಲ್ ಮಾತ್ರ. ಆದರೆ ಫಲವತ್ತಾದ ಕಂಬಳದ ಗದ್ದೆ ಆ ಪಾಲಿನಲ್ಲಿತ್ತು.

ನಾನು ಮತ್ತು ನನ್ನಣ್ಣ ದಯಾನಂದ ನಮ್ಮ ಆದಿ ಮನೆ ಕಟ್ಟೆಮನೆಯಲ್ಲೇ ಜನಿಸಿದ್ದೆವು. ಅದು ತುಂಬಾ ವಿಸ್ತಾರವಾದ ಮನೆ. ಹತ್ತಾರು ಕೊಟಡಿಗಳಿದ್ದವು. ಒಟ್ಟು ಕುಟುಂಬವಾದ ಕಾರಣ ಪ್ರತಿ ದಂಪತಿಗೂ ಪ್ರತ್ಯೇಕವಾದ ಕೊಟಡಿಗಳು. ಆಸ್ತಿ ಹಂಚಿಕೆಯಾದ ಮೇಲೆ ಒಬ್ಬೊಬ್ಬರಾಗಿ ಆ ಮನೆಯಿಂದ ಹೊರನಡೆದರು. ಆದರೆ ನಮಗೆ ಬೇರೆ ಮನೆಯಿರಲಿಲ್ಲ.

ಆದಿಮನೆಯನ್ನು ನಾವೆಲ್ಲಾ ಇಂದಿಗೂ ದೊಡ್ಡಮನೆ ಎಂದೇ ಕರೆಯುತ್ತೇವೆ. ಚಿತ್ರ ಚಿತ್ತಾರದ ಗೋದಿ ಕಂಬಗಳಿರುವ ಪಡಸಾಲೆ ಆ ಮನೆಯ ವಿಶೇಷ ಆಕರ್ಷಣೆ. ಇಂತಹದೇ ಇನ್ನೊಂದು ಮನೆ ಆ ಊರಲ್ಲಿದೆ. ಅದು ಕೂಜುಗೋಡು ಮನೆ. ಒಂದು ತಿಂಗಳ ಹಿಂದೆ ನಿರ್ದೇಶಕ ಪಿ. ಶೇಷಾದ್ರಿಯವರು ಇದೇ ಮನೆಗಳಲ್ಲಿ ತಮ್ಮ ಹೊಸ ಚಿತ್ರ ’ಬೆಟ್ಟದ ಜೀವ’ ದ ಚಿತ್ರೀಕರಣ ಮಾಡಿದ್ದರು.
ಇನ್ನಷ್ಟು

ಮೋಡೀಯಾ ಮಾಡಿದೋಳ ಪರಸಂಗ ಐತೆ..

ಕಲಾವಿದೆ ಜಯಲಕ್ಷ್ಮಿ ಪಾಟೀಲ್ ಅವರ ಫೇಸ್ ಬುಕ್ ಅಂಗಳದಲ್ಲಿದ್ದ ಈ ಹಾಡು ನಿಮಗಾಗಿ. ನಿಮ್ಮ ಮನಸ್ಸು ಒಂದಿಷ್ಟು ಹೊತ್ತು ಅರಳಲಿ ಎಂದು ಕೃಷ್ಣ ಆಲನಹಳ್ಳಿ ಕಾದಂಬರಿ, ದೊಡ್ಡ ರಂಗೇಗೌಡರ ಗೀತೆ, ಮಾರುತಿ ಶಿವರಾಂ ನಿರ್ದೇಶನದ ಈ ಹಾಡು.

ನನ್ನೊಳಗೆ ‘ಭೂಮಿಗೀತ’ದ ನೆನಪು

ಸಾಹಿತ್ಯ ಸಂಜೆಯಲಿ ಭೂಮಿಗೀತದ ನೆನಪು

-ಎನ್ ಮಂಗಳಾ

ಸಂಚಯ ಮತ್ತು ಸುಚಿತ್ರ ಫಿಲ್ಮ್ ಸೊಸೈಟಿಯವರು ನಡೆಸಿದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಅಡಿಗರ ‘ಭೂಮಿಗೀತ’ ಸಂಕಲನದ ಕವನಗಳ ವಾಚನ, ಅವುಗಳ ಬಗ್ಗೆ ಮಾತುಕತೆ ನಡೆಯಿತು. ಆ ಸಂಧರ್ಭದಲ್ಲಿ ನಾನು ಭೂಮಿಗೀತ ಪದ್ಯ ಓದುತ್ತಿದ್ದರೆ, ನನಗೆ ನಾವು ರಂಗಾಯಣದಲ್ಲಿ ನಾಟಕ ಮಾಡಿದ್ದರ ನೆನಪು ಒತ್ತಿ ಬರುತ್ತಿತ್ತು.

ನಿರ್ದೇಶಕರಾಗಿದ್ದ ಜಯತೀರ್ಥ ಜೋಶಿ ಪದ್ಯದ ಸಾಲುಗಳನ್ನು ನೀಡಿ ನಮ್ಮಿಂದ ಆಶುವಿಸ್ತರಣೆ ಮಾಡಿಸುತ್ತಿದ್ದರು. ಒಂದೇ ಸಾಲನ್ನು ಹಿಡಿದು ಮೂರು ನಾಲ್ಕು ಗುಂಪುಗಳು ಬೇರೆ ಬೇರೆಯಾಗಿ ದೃಶ್ಯೀಕರಿಸುತ್ತಿದ್ದೆವು. ನಂತರ ಎಲ್ಲರೂ ಮಾಡಿ ತೋರಿಸಿದ ಮೇಲೆ. ಅದನ್ನು ತಿದ್ದಿ ತೀಡಿ ಒಂದು ರೂಪಕ್ಕೆ ತಂದು ನಿಲ್ಲಿಸುತ್ತಿದ್ದ ರೀತಿ; ಜಿ.ಹೆಚ್.ನಾಯಕರು, ಕೀರಂ ನಾಗರಾಜ ಅವರುಗಳು ನಮಗೆ ಪದ್ಯ ಅರ್ಥೈಸಿಕೊಡುತ್ತಿದ್ದ ತರಗತಿಗಳು; ರಘುನಂದನರು ಅದರ ವಾಚನ ಕುರಿತಂತೆ ನಡೆಸುತ್ತಿದ್ದ ಅಭ್ಯಾಸಗಳು, ಎಲ್ಲವೂ ಸಾಲು ಸಾಲಾಗಿ ನೆನಪಿನ ಪದರುಗಳಿಂದ ಬಿಚ್ಚಿಕೊಳ್ಳಲಾರಂಭಿಸಿದವು.

ಸತತವಾಗಿ ಮೂರು ತಿಂಗಳ ಕಾಲ ಆ ಪದ್ಯದ ಮೇಲೆ ನಾವೆಲ್ಲರೂ ಕೆಲಸ ಮಾಡಿದ್ದೆವು. ಆ ನಾಟಕಕ್ಕೆಂದೇ ದ್ವಾರಕೀ ಸರ್ ಗುಂಡನೆ ಸ್ಟೇಜ್ ಕಟ್ಟಿದ್ದರು. ಹಿಂಬದಿಯಲ್ಲಿ ಕಬ್ಬಿಣದ ದೊಡ್ಡ ದೊಡ್ಡ ಆಕೃತಿಗಳನ್ನು ನಿಲ್ಲಿಸಿದ್ದರು. ಷೋ ದಿನವೂ ನಿಗದಿಯಾಯ್ತು. ಇನ್ನೇನು ಇವತ್ತೇ ಷೋ, ಬೆಳಗ್ಗೆ ರಿಹರ್ಸಲ್ ಮುಗಿಸಿ ಎಲ್ಲರೂ ಊಟಕ್ಕೆ ಹಾಸ್ಟೆಲ್ಗೆ ಹೋಗಿ, ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಸಂಜೆ ಮೂರು ಗಂಟೆಗೆ ಮತ್ತೆ ಸ್ಟೇಜ್ ಗೆ ಬಂದೆವು. ನಾಲ್ಕು ಗಂಟೆಗೆ ಶುರುವಾದ ಮಳೆ ನಿಂತಿದ್ದು ಸಂಜೆ ಆರಕ್ಕೋ ಏನೋ. ರಂಗಾಯಣದಲ್ಲಿ ಒಂದು ಪ್ರತೀತಿ ಇದೆ. ಹೆಚ್ಚು ಕಡಿಮೆ ರಂಗಾಯಣದ ನಾಟಕಗಳ ಪ್ರಥಮ ಪ್ರದರ್ಶನ ಸರಾಗವಾಗಿ ನಡೆದಿಲ್ಲ. ಯಾವಾಗಲೂ ಪ್ರಥಮ ಪ್ರದರ್ಶನದ ವೇಳೆ ಮಳೆ ಬರುವುದು ಶಾಸ್ತ್ರವೇನೋ ಎಂಬಂತಾಗಿಬಿಟ್ಟಿದೆ. ಜೋರು ಮಳೆ ಬಂದು ನಾಟಕ ನಿಲ್ಲುವುದು ಅಥವಾ ನಾಟಕದ ಮದ್ಯೆ ಮದ್ಯೆ ಮಳೆ ಬಂದು, ನಿಂತು ಆಗುವುದು, ಅಥವಾ ನಾಟಕದ ಜೊತೆ ಜೊತೆಯಲ್ಲೇ ಮಳೆ ಆಟವಾಡುತ್ತ ಇರುವುದು, ಇಲ್ಲಾ, ನಾಟಕ ಮುಗಿದ ತಕ್ಷಣ ಪ್ರೇಕ್ಷಕರು ಮನೆಗೆ ಹೋಗಲಾಗದ ಹಾಗೆ ಜೋರು ಮಳೆ ಬರುವುದು ಹೀಗೆ ಆಗುವುದು ಯಾವಾಗಲೂ ನಡೆದು ಬಂದಿರುವ ರೀತಿ.

ಹಾಗೆಯೇ ‘ಭೂಮಿಗೀತ’ ಪ್ರದರ್ಶನದ ದಿನವೂ ಆಗಿತ್ತು. ಸಂಜೆ ರಂಗದ ಮೇಲಿರಬೇಕಾಗಿದ್ದ ಕಲಾವಿದರೆಲ್ಲ ಮಂಡಿವರೆಗೆ ಪ್ಯಾಂಟ್ ಮಡಚಿ, ಭೂಮಿಗೀತ ಸ್ಟೇಜ್ ನಲ್ಲಿ ಮಂಡಿವರೆಗೆ ನಿಂತಿದ್ದ ನೀರನ್ನು ಕೆಲವರು ದೋಚಿ ದೋಚಿ ಹೊರಗೆ ಹಾಕಿತ್ತಿದ್ದರೆ ಇನ್ನೂ ಕೆಲವರು ಪೊರಕೆ ಹಿಡಿದು ನೀರನ್ನು ಮೋರಿಗೆ ತಳ್ಳುವುದರಲ್ಲಿ ನಿರತರಾಗಿದ್ದರು. ಕೆಲವರು ಷೋ ಮಾಡಲು ಸಾಧ್ಯವಾಗಲಿಲ್ಲವಲ್ಲ ಅಂತ ಬೇಸರಿಸಿಕೊಳ್ಳುತ್ತಿದ್ದಾಗ ಕಾರಂತರು ಹೇಳಿದ ಮಾತು ನೆನಪಾಗುತ್ತದೆ. ಮಳೆಗಿಂತಲೂ ನಾಟಕ ಮುಖ್ಯ ಅಲ್ಲ. ಮಳೆ ಬಂದದ್ದು ಒಳ್ಳೇದಾಯಿತು. ಭೂಮಿ ತಣ್ಣಗಾಯಿತು. ನಾಟಕ ನಾಳೆ ಮಾಡಿದರಾಯಿತು ಎಂದು ಹೇಳಿ ಹೊರಟೇ ಬಿಟ್ಟರು.

ದ್ವಾರಕೀ ಸರ್, ಆ ನಾಟಕಕ್ಕೆಂದೇ ಗುಂಡನೆಯ ಸ್ಟೇಜ್ ಕಟ್ಟಿದ್ದರು. ಹಿಂಬದಿಯಲ್ಲಿ ಕಬ್ಬಿಣದ ದೊಡ್ಡ ದೊಡ್ಡ ಆಕೃತಿಗಳನ್ನು ನಿಲ್ಲಿಸಿದ್ದರು. ಈಗ ಅದೇ ಜಾಗದಲ್ಲಿ ಹೊಸದಾಗಿ ಪ್ರಸನ್ನ ಅವರ ವಿನ್ಯಾಸದಲ್ಲಿ ನಿರ್ಮಿತವಾಗಿರುವ ರಂಗಸ್ಥಳವೇ ಭೂಮಿಗೀತ. ರಂಗಸ್ಥಳದ ಆಕಾರ ಬದಲಾದರೂ ತನ್ನ ಹಳೆಯ ಹೆಸರಿನಲ್ಲಿಯೇ ಈ ಸ್ಟೇಜ್ ಉಳಿದಿದೆ. ಇದು ರಂಗಾಯಣದಲ್ಲಿರುವ ಇಂಟಿಮೇಟ್ ಪ್ರೊಸೀನಿಯಂ ಥಿಯೇಟರ್.

ನಾಟಕ ಪ್ರದರ್ಶನ ನಿರಂತರವಾಗಿ ಹತ್ತು ದಿನಗಳ ಕಾಲ ನಡೆಯಿತು. ಆಗ ನಾಟಕ ನೋಡಲೆಂದು ಬಂದ ಕೀರ್ತಿನಾಥ ಕುರ್ತುಕೋಟಿ, ಕೆ.ವಿ.ಸುಬ್ಬಣ್ಣ. ಎಂ.ಎಸ್.ಮರುಳಸಿದ್ದಪ್ಪ, ಕೀರಂ ನಾಗರಾಜ, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್..  ಹೀಗೆ ಬಹಳಷ್ಟು ಜನರನ್ನು ಒಳಗೊಂಡ ದೊಡ್ಡ ಸಾಹಿತಿಗಳ ಗುಂಪು ನಮ್ಮೊಡನಿತ್ತು. ಅವರು ತಮ್ಮ ಅಭಿಪ್ರಾಯಗಳನ್ನು ತಿಳಿಸಿ, ಅದರ ಬಗ್ಗೆ ಆರೋಗ್ಯಕರವಾದ ಸುದೀರ್ಘ ಚರ್ಚೆ ನಡೆಸಿದ್ದೆಲ್ಲ ಈಗ ನೆನಪು.

ಅಲ್ಲದೆ ಅದೇ ನಾಟಕವನ್ನು ಬೆಂಗಳೂರಿಗೆ ತಂದಾಗ ನ್ಯಾಷನಲ್ ಕಾಲೇಜು ಕ್ಯಾಂಪಸಿನಲ್ಲಿ ಅಭಿನಯಿಸಿದ್ದೆವು. ಕಾಲೇಜಿನೊಳಗೆ ಅದೇ ಮಾದರಿಯ ಗುಂಡನೆಯ ಸ್ಟೇಜ್ ಕಟ್ಟಲು ಒಪ್ಪಿಗೆ ನೀಡಿದ್ ಹೆಚ್.ನರಸಿಂಹಯ್ಯನವರು ಅಷ್ಟೂ ದಿನ ನಮ್ಮೊಡನಿದ್ದು ಸಡಗರಿಸಿದ ನೆನಪು ……ಭೂಮಿಗೀತದ ನೆನಪು.

Previous Older Entries

%d bloggers like this: