ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ.
ಅವನೆಂದರೆ ಲಕ್ಷಾಂತರ ಜನರಿಗೆ ಪ್ರಿಯ..ಅವನ ಒಂದು ಝಲಕ್ ಗಾಗಿ ಕಾಯೋ ಜನ ಅದೆಷ್ಟೋ..ಅವಳ ಹಣೆ ಬರಹ ಚೆನ್ನಾಗಿತ್ತೇನೋ..
ಅವನಿಗಾಗಿ ಕಾದಿರಿಸಿದ ಲಿಫ್ಟ್ ನಲ್ಲಿ ಇವಳು ನುಗ್ಗಿದ್ದಳು…ಪಕ್ಕದಲ್ಲೇ ನಿಂತಿದ್ದ. ಅವನ ಅಸಿಸ್ಟೆಂಟ್ ಮುಖಮುಖ ನೋಡುತ್ತಿದ್ದ…
ಆತನೂ ಒಮ್ಮೆ ನೋಡಿದ. ಇವಳಿಗೆ ಏನೂ ಮಾಡಬೇಕೋ ಅರ್ಥವಾಗಲಿಲ್ಲ..ಆತ ನಕ್ಕು ಹಾಯ್ ಎಂದ..ಇವಳು ನಡುಗುತ್ತಲೇ ಹಲೋ ಎಂದಳು…
ನಾನು ನಿಮ್ಮ ದೊಡ್ಡ ಪ್ಯಾನ್ ಎಂದಳು ಅವಳಿಗೇ ಗೊತ್ತಾಗದಂತೆ.
ಥ್ಯಾಂಕ್ಸ್….ನಿಮ್ಮ ಹೆಸರು?
ಹೇಳಿದಳು.
ನಿಮ್ಮ ಫೋನ್ ನಂಬರ್ ?…ಕೇಳೋದು ಕೇಳಿ ಯಾಕಾದರೂ ಕೇಳಿದ್ನಪ್ಪಾ ಎಂದು ತುಟಿಕಚ್ಚಿಕೊಂಡಳು.
ನಿಮ್ಮದು ಹೇಳಿ. ನಾನು ಎಸ್ಎಂಎಸ್ ಮಾಡ್ತೀನಿ ಎಂದ.
……944… ಒಂದೇ ಉಸಿರಿಗೆ ಹೇಳಿದ್ದಳು.
ಲಿಪ್ಟ್ ನಿಂತಿತ್ತು.
ಹ್ಯಾವ್ ಎ ನೈಸ್ ಡೇ ಎಂದು ಹೊರಟಿದ್ದ..
ಇವಳು ಏನೂ ಹೇಳದೇ ಹಾಗೆ ನಿಂತಿದ್ದಳು. ಇವಳಿಗಾಗಿ ಕಾದು ನಿಂತಿದ್ದ ಗೆಳತಿ
ಏನೇ ಹಾಗೆ ನಿಂತಿದ್ದೀಯಾ..ಅಪರೂಪಕ್ಕೆ ಬಂದಿದ್ದೀಯಾ..ಬಾ
ಎಂದಳು.
ಫೈಸ್ಟಾರ್ ಹೊಟೆಲ್ನಲ್ಲಿ ಆಕೆ ಫ್ರಂಟ್ ಆಫೀಸರ್…
ಇಡೀ ಹೊತ್ತು ಎಸಿನಲ್ಲಿ ಬೇಜಾರಾಗಲ್ವೇನೆ?
ಗ್ರೇಟ್ ಹಂಕ್ಸ್ ಬರ್ತಾವಲ್ಲ..ಆ ಬಿಸಿಗೆ ಎಸಿ ಕಡಿಮೆ ಎನಿಸುತ್ತೆ ..ಆಕೆ ನಕ್ಕಿದ್ದಳು.
ಗೆಳತಿನ ನೋಡಲು ಬಂದವಳು ಅವನ ಧ್ಯಾನದಲ್ಲಿ ಮುಳುಗಿದ್ದಳು..ಮೊಬೈಲ್ ನೋಡುತ್ತಲೇ ಇದ್ದಳು.ಎಸ್ಎಂಎಸ್ ಈಗ ಬರಬಹುದು ಆಗ ಬರಬಹುದು ಎಂದು..ಒಂದೊಂದು ಕ್ಷಣವೂ ಕಳೆಯಲು ಅಸಾಧ್ಯ ಎನಿಸುತ್ತಿದೆಯಲ್ಲಾ.
ಬೇಕಂತ ಹೇಳಿರ್ಬೇಕು..ಛೇ..ಫೂಲ್ ಆಗ್ಬಿಟ್ನಲ್ಲಾ…ಫೋನ್ ನಂಬರ್ ಕೊಡಬಾರದಿತ್ತು…ಮತ್ತೆ ಮೊಬೈಲ್ ನೋಡುತ್ತಾಳೆ.ಛೇ..ನೆಟ್ವರ್ಕ ಇಲ್ಲ. ಒಳ್ಳೇ ಶವದ ಹಾಗೆ ಮೊಬೈಲ್ ಒಂದೇ ಒಂದು ಕಡ್ಡಿಯಲ್ಲಿ ಉಸಿರಾಡ್ತಾ ಇದೆ..
ಅವಳೇನು ಹೇಳಿದಳೋ ಇವಳೇನು ಕೇಳಿದಳೋ.ಟಾಟಾ ಬೈಬೈ ಎಂದು ಹೊರಗೋಡಿ ಬಂದಿದ್ದಳು.ಥಟ್ಟನೆ ಬಂದಿತ್ತು. ಮೊಬೈಲ್ ಗೆ ಜೀವ.ಅದರೊಂದಿಗೆ ಬಂದಿತ್ತು…ಅವನ ಎಸ್ಸೆಂಎಸ್ಸ್…
Hai…Nice to meet you..
ಮೊಬೈಲ್ ನ ಎದೆಗವುಚಿಕೊಂಡಿದ್ದಳು.
ಇತ್ತೀಚಿನ ಟಿಪ್ಪಣಿಗಳು