ಪುಸ್ತಕ ಸಂಭ್ರಮದ ನೋಟ ಇಲ್ಲಿದೆ

ಪ್ರೊ ಸಿ ಎನ್ ರಾಮಚಂದ್ರನ್ ಹಾಗೂ ಶ್ರೀಧರ ಬಳಗಾರ ಅವರ ಕೃತಿಗಳು ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಅಂಕಿತ ಪ್ರಕಾಶನ ಈ ಕೃತಿಗಳನ್ನು ಪ್ರಕಟಿಸಿದೆ.

ಸಂಗೀತ ನೃತ್ಯ ಹಾಗೂ ಪುಸ್ತಕದ ಸಂಭ್ರಮ ಬೆರೆತಿದ್ದ ಈ ಕಾರ್ಯಕ್ರಮದ ನೋಟ ಇಲ್ಲಿದೆ.

ದೊಡ್ಡ ಸೈಜ್ ನಲ್ಲಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ

ವ್ಯಾಲಂಟೈನ್ ಗಿಫ್ಟ್: ಪ್ರೀತಿ.. ನೀ ನಿಲ್ಲದೆ ನಾ..ಹೇಗಿರಲಿ..

Madhav Goyal, Udaan Photo School

This slideshow requires JavaScript.

‘ನೆನಪಿರಲಿ, ಪ್ರೀತಿ ಕಾಮವಲ್ಲ’

‘ನೆನಪಿರಲಿ, ಪ್ರೀತಿ ಕಾಮವಲ್ಲ’ ಎನ್ನುವ ಬೆಸ್ಟ್ ವ್ಯಾಲೆಂಟೈನ್ ಗಿಫ್ಟ್ ಸಿದ್ಧವಾಗಿದೆ. ಪತ್ರಕರ್ತ ರವಿ ಅಜ್ಜೀಪುರ ಬರೆದ ಪುಸ್ತಕವನ್ನು ರವಿ ಬೆಳಗೆರೆ, ಶಶಿಕಲಾ ವೀರಯ್ಯಸ್ವಾಮಿ ಬಿಡುಗಡೆ ಮಾಡಿದರು.

ಗಾಣಧಾಳು ಶ್ರೀಕಂಠ ಸಂಭ್ರಮದಿಂದ ತೆಗೆದ ಚಿತ್ರಗಳು ಇಲ್ಲಿವೆಫೋಟೋಗಳನ್ನು ದೊಡ್ಡ ಸೈಜ್ ನಲ್ಲಿ  ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ

ಆಕಾಶದಾಗೆ ಯಾರೋ ಮೋಜುಗಾರನು …

ಚಿತ್ರಗಳು : ಶ್ರೀ ಹರ್ಷ ಪೆರ್ಲ

ಬೆಂಗಳೂರಿನಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನದಲ್ಲಿ ವಿಮಾನಗಳ ಹಾರಾಟದ ಒಂದು ಜ್ಹಲಕ್ ಇಲ್ಲಿದೆ.

ಮಾಹೆ ಕವಿತೆಗಳು

‘ಕಡಲ ಹುಬ್ಬು’ ಎಂದೇ ಕರೆಯಲ್ಪಡುವ ಅರಬ್ಬೀ ಸಮುದ್ರದಿಂದ ಸುತ್ತುವರಿದ ಮಾಹೆ ಅಥವಾ ಮಯ್ಯಾಳಿಯಲ್ಲಿ ಇತ್ತೀಚಿಗೆ ಪ್ರತಿಷ್ಟಿತ ಕಾವ್ಯ ಉತ್ಸವ ಜರುಗಿತು. ಬಹುಭಾಷಾ ಕವಿಗೋಷ್ಠಿಯಲ್ಲಿ ಕನ್ನಡವನ್ನು ಹಿರಿಯ ಕವಿ ಕೆ ಬಿ ಸಿದ್ಧಯ್ಯ, ಮಮತಾ ಜಿ ಸಾಗರ್, ಎಚ್ ಎನ್ ಆರತಿ ಪ್ರತಿನಿಧಿಸಿದ್ದರು.

ಮಮತಾ ಜಿ ಸಾಗರ್ ಅವರ ಕ್ಯಾಮೆರಾ ಮೂಲಕ ಕಂಡ ಮಾಹೆ ಸಂಭ್ರಮ ಇಲ್ಲಿದೆ.

 

This slideshow requires JavaScript.

ಎ ಎನ್ ಮುಕುಂದ್ ಕಂಡ ಎಂ ಪಿ ಪ್ರಕಾಶ್

ಚಿತ್ರಗಳು: ಎ ಎನ್ ಮುಕುಂದ್

ರವೀಂದ್ರ ಮಾವಖಂಡ ಕಲೆಕ್ಷನ್: ಕಾಯ್ಕಿಣಿ ಮತ್ತು ಕಾಯ್ಕಿಣಿ

ತಂದೆ ಗೌರೀಶ ಕಾಯ್ಕಿಣಿ ಮಗ ಜಯಂತ ಕಾಯ್ಕಿಣಿ

Daily ‘Klik’

Photo: Taizun Ahmed Courtesy: Udaan Photo School

ಕನ್ನಡ(ಕ) ಸಾಹಿತ್ಯ ಸಮ್ಮೇಳನ

ಶಿವೂ ಕನ್ನಡ ಸಮ್ಮೇಳನಕ್ಕೆ ಹೋಗಿದ್ದರೋ..ಇಲ್ಲಾ, ಕನ್ನಡಕ ಸಮ್ಮೇಳನಕ್ಕೆ ಹೋಗಿದ್ದರೋ ಗೊತ್ತಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದ ಕೆ ಶಿವೂ ಕಣ್ಣಿಗೆ ಕನ್ನಡಕಗಳೇ ಬಿದ್ದಿವೆ. ಅದರ ಸ್ಟೈಲ್ ಇಲ್ಲಿದೆ.

ದೊಡ್ಡ ಸೈಜ್ ನಲ್ಲಿ ಈ ಫೋಟೋಗಳನ್ನು ನೋಡಲು ಫೋಟೋದ ಮೇಲೆ ಕ್ಲಿಕ್ ಮಾಡಿ

ನಾವ್ ರೆಡಿ.. ನಾವ್ ರೆಡಿ..

ಸಾಹಿತ್ಯ ಸಮ್ಮೇಳನಕ್ಕೆ ರಂಗ ಸಜ್ಜಾಗಿದೆ. ಹಾಗೆಯೇ ನಾವೂ..  ಆನ್ಲೈನ್ ಮಾಧ್ಯಮದಲ್ಲಿ ಅತ್ಯಂತ ಯಶಸ್ವಿಯಾಗಿ ಸಮ್ಮೇಳನದ ಕವರೇಜ್ ನೀಡುತ್ತಿರುವ ಬ್ಲಾಗ್ ನಮ್ಮದು. ಚಿತ್ರದುರ್ಗ ಸಮ್ಮೇಳನದಿಂದ ‘ಅವಧಿ’ ತಂಡ ಎಕ್ಸ್ಕ್ಲುಸಿವ್ ಆದ ತಂಡ ರಚಿಸಿ ಅವರನ್ನು ಸಮ್ಮೇಳನದ ಅಂಗಳಕ್ಕೆ ಕಳಿಸುತ್ತಿದೆ.

ಚಿತ್ರದುರ್ಗ ಸಮ್ಮೇಳನದ ಕವರೇಜ್ ಅನ್ನು ಸುಘೋಷ್ ನಿಗಳೆ ಮುನ್ನಡೆಸಿದ್ದರು. ನಂದೀಶ್ ಹಾಗೂ ಸತೀಶ್ ಸಾಥ್ ನೀಡಿದ್ದರು. ಗದಗ ಸಮ್ಮೇಳನದಲ್ಲಿ ಈ ಕವರೇಜ್ ಇನ್ನೂ ವಿಸ್ತಾರ ಹಾಗೂ ವ್ಯವಸ್ಥಿತ  ರೂಪು ಪಡೆಯಿತು. ಆದಿತ್ಯ ಭಾರದ್ವಾಜ್, ಹೇಮಂತ್, ಪ್ರುತ್ವಿ, ಚಾಣಕ್ಯ ಅವರ ತಂಡ ಆಡಿಯೋ, ವಿಡಿಯೋ, ಸ್ಟಿಲ್ ಕ್ಯಾಮೆರಾ ಹೊತ್ತು ಸಮ್ಮೇಳನದ ಇಂಚಿಂಚೂ ಕವರ್ ಮಾಡಿತು. ಈ ಸಾಹಸವನ್ನು ಪ್ರಜಾವಾಣಿ, ಟೈಮ್ಸ್ ಆಫ್ ಇಂಡಿಯಾ ಸಹಾ ಶ್ಲಾಘಿಸಿತು. ಎಷ್ಟೋ ಪ್ರಮುಖ ದೈನಿಕಗಳೂ ಸಹಾ ನಮ್ಮ ಸೈಟ್ ನಿಂದ ಫೋಟೋ ಪಡೆದು ಪ್ರಕಟಿಸಿದವು.

ಈಗ ಸಮ್ಮೇಳನ ಬೆಂಗಳೂರಿನಲ್ಲಿ.. ರಾಜಧಾನಿಯಲ್ಲಿ ಜರುಗುವ ಸಮ್ಮೇಳನಕ್ಕೆ ನಮ್ಮ ಇರುವೆ ದಂಡೂ ಸಜ್ಜಾಗಿದೆ. ಬೆಲ್ಲ ಇರುವಲ್ಲೆಲ್ಲಾ ಮುತ್ತಿಗೆ ಹಾಕಿಯೇ ಸೈ ಎನ್ನುವ ನಿಲುವು ನಮ್ಮದು. ಈ ಬಾರಿ ಹೇಮಂತ್, ಪ್ರುತ್ವಿ ಹಾಗೂ ಆದಿತ್ಯ ಭಾರದ್ವಾಜ್ ಸಮ್ಮೇಳನದ ಕವರೇಜ್ ಅನ್ನು ಮುನ್ನಡೆಸಲಿದ್ದಾರೆ. ಇವರೊಂದಿಗೆ ಸಾಕಷ್ಟು ಸಾಹಿತ್ಯ ಓದಿಕೊಂಡಿರುವ, ಚಟ್ ಪಟ್ ಎಂದು ಮಾತನಾಡುವ, ಹಿಡಿದರೆ ಕೆಲಸ ಮಾಡಿಯೇ ತೀರುವ ಒಂದು ದೊಡ್ಡ ತಂಡ ಬಗಲಿಗಿದೆ. ರಮ್ಯ, ಗಜೇಂದ್ರ, ಶಿಲ್ಪ, ನಯನ, ಸುಮಂತ್, ಶ್ರೀವತ್ಸ, ರಶ್ಮಿ, ಮಾಲಾ..ಇರುವ ಈ ತಂಡ ಸಕಲ ಸಾಮಗ್ರಿಯೊಂದಿಗೆ ಸಜ್ಜಾಗಿದೆ.

ಅವರು ನಿಮ್ಮ ಎದುರು ಪ್ರತ್ಯಕ್ಷರಾದರೆ, ಮೈಕ್ ಹಿಡಿದರೆ, ಅವರ ಕೊರಳಲ್ಲಿ ‘ಅವಧಿ’ ಗುರುತು ಪತ್ರ ತೂಗುತ್ತಿರುತ್ತದೆ. ಸೋ ಪ್ರೀತಿಯಿಂದ ಮಾತನಾಡಿ, ಅನಿಸಿದ್ದೆಲ್ಲಾ ಮಾತನಾಡಿ, ಎಲ್ಲವೂ  ‘ಅವಧಿ’ಯಲ್ಲಿ ಓದಿ-

 

Previous Older Entries

%d bloggers like this: