ಅಕ್ಷರ, ಮಡೆಸ್ನಾನ, ಗಾಂಧಿ, ಗೋಡ್ಸೆ..

ಕೆ ವಿ ಅಕ್ಷರ ಪ್ರಜಾವಾಣಿಯಲ್ಲಿ ಬರೆದ ಲೇಖನ ‘ಹರಕೆ ಹರಾಜು’ ಲೇಖನವನ್ನು ನೀವು ಓದಿದ್ದೀರಿ. ಅದು ಇಲ್ಲಿದೆ. ತೀವ್ರ ಚರ್ಚೆಯನ್ನು ಹುಟ್ಟುಹಾಕಿದ ಈ ಲೇಖನಕ್ಕೆ ಹಿರಿಯ ಚಿಂತಕ ಡಿ ಎಸ್ ನಾಗಭೂಷಣ ಅವರು ಪ್ರತಿಕ್ರಿಯೆ ಕಳಿಸಿದ್ದರು.

ಅದು ಅಲ್ಲಿ ಪ್ರಕಟವಾಗದ ಕಾರಣ ಆ ಪ್ರತಿಕ್ರಿಯೆಯನ್ನು ಕಳಿಸಿಕೊಟ್ಟಿದ್ದಾರೆ. ಅದು ಇಲ್ಲಿದೆ.

-ಡಿ.ಎಸ್.ನಾಗಭೂಷಣ

ಮಾನ್ಯರೇ,

ಪ್ರಜಾವಾಣಿಯ 16.1.2011ರ ಸಾಪ್ತಾಹಿಕ ಪುರವಣಿಯಯಲ್ಲಿ ಕೆ.ವಿ.ಅಕ್ಷರ ಅವರು ಬರೆದಿರುವ ಹರಕೆ ಹರಾಜು: ಯಾವುದು ಸಹಜ? ಯಾವುದು ಅವಮಾನ? ಎಂಬ ಲೇಖನ ಓದುತ್ತಿದ್ದಂತೆ, ಗಾಂಧಿ ಕೊಲೆ ವಿಚಾರಣೆ ಸಂದರ್ಭದಲ್ಲಿ ನಾಥೂರಾಮ ಗೋಡ್ಸೆ ಪ್ರಸ್ತುತಪಡಿಸಿದ ಒಂದು ವಾದ ಸರಣಿ ನೆನಪಿಗೆ ಬಂತು. ಗಾಂಧೀಜಿಯವರ ಕೊಲೆಯ ಹಿಂದೆ ಕೆಲಸ ಮಾಡಿದ ಸಿದ್ಧಾಂತ ಮತ್ತು ಅದರ ಪ್ರಭಾವದಿಂದಾಗಿ ಆಯೋಜಿತವಾದ ಕೊಲೆ ಪಿತೂರಿಯ ಸ್ವರೂಪವನ್ನು ನ್ಯಾಯಾಲಯದ ಮುಂದೆ ಸಾಕ್ಷ್ಯಗಳೊಂದಿಗೆ ಸಾಬೀತುಪಡಿಸುವಲ್ಲಿ ನಿರತರಾಗಿದ್ದ ಸರ್ಕಾರಿ ವಕೀಲ ದಫ್ತರಿಯವರು ತಮ್ಮ ವಾದದ ಸಂದರ್ಭವೊಂದರಲ್ಲ್ಲಿ ಗಾಂಧೀಜಿ ಕೊಲೆಯನ್ನು ಅನೈತಿಕ ಅಪರಾಧವೆಂದು ಬಣ್ಣಿಸಿದರು. ಆಗ ಗೋಡ್ಸೆ ಅದನ್ನು ತೀವ್ರವಾಗಿ ಪ್ರತಿಭಟಿಸಿ ಈ ರೀತಿ ವಾದ ಮಂಡಿಸಿದನು:

ಕನಿಷ್ಟ ಪಕ್ಷ ಈ ಪ್ರಕರಣದಲ್ಲಿ ನೀತಿ ಅಥವಾ ಅನೀತಿಯ ಕುರಿತು ಶೋಧಿಸಲು ಸರ್ಕಾರಿ ವಕೀಲರಿಗೆ ಅಧಿಕಾರವಿರುವುದಿಲ್ಲ. ಅಲ್ಲದೇ, ಆ ಪ್ರಶ್ನೆಯ ಬಗೆಗೆ ನಿರ್ಣಯ ಕೊಡುವ ಅಧಿಕಾರವು ಈ ನ್ಯಾಯಾಲಯಕ್ಕೆ ಇರುವುದಿಲ್ಲ. ಇದು ಅವರ ಅಧಿಕಾರ ವ್ಯಾಪ್ತಿಯ ಹೊರಗಿನ ವಿಷಯ. ನೈತಿಕತೆಯ ವ್ಯಾಖ್ಯೆಯು ಸಮಾಜ-ಸಮಾಜಗಳಲ್ಲಿ, ದೇಶ-ದೇಶಗಳಲ್ಲಿ ಯಾವಾಗಲೂ ಬೇರೆ ಬೇರೆಯಾಗಿರುತ್ತದೆ. ಒಂದು ಸಮಾಜದಲ್ಲಿ ಮಹಿಳೆಯರು ಬುರ್ಖಾ ಹಾಕಿಕೊಳ್ಳದಿದ್ದರೆ ಅನೈತಿಕವೆಂದು ತಿಳಿಯಲಾಗುತ್ತದೆ. ಕೆಲವು ದೇಶಗಳಲ್ಲಿ ಮದ್ಯಪಾನವನ್ನು ಅನೈತಿಕವೆಂದು ತಿಳಿಯಲಾಗುವುದಿಲ್ಲ. ಒಂದು ಯುಗದಲ್ಲಿ ಬ್ರಾಹ್ಮಣರಲ್ಲದವರಿಗೆ ವೇದವಿದ್ಯೆಯನ್ನು ಕಲಿಸಲಾಗುತ್ತಿರಲಿಲ್ಲ. ಆದರೆ ಕಾಲಕ್ಕನುಗುಣವಾಗಿ ಎಲ್ಲ ಕಡೆಗಳಲ್ಲೂ ಇದೆಲ್ಲವೂ ಬದಲಾಗುತ್ತಾ ಹೋಯಿತು. ಹಾಗಾಗಿ ಇದರ ಆಧಾರದ ಮೇಲೆ ತ್ರಿಕಾಲಾಬಾಧಿತವಾದ ನೀತಿ-ಅನೀತಿಯ ಬಗೆಗಿನ ಸ್ಥಿರವಾದ ನಿಯಮವನ್ನು ನಿರ್ಧರಿಸಲಾಗುವುದಿಲ್ಲ.

ಇನ್ನಷ್ಟು

‘ಜುಗಾರಿ ಕ್ರಾಸ್’ ನಲ್ಲಿ ಈ ಬಾರಿ ಸೋಮಶೇಖರ್ ಆಯೋಗ

‘ಜುಗಾರಿ ಕ್ರಾಸ್’ ಚರ್ಚೆಗಾಗಿ ಇರುವ ತಾಣ. ಈಗಾಗಲೇ ಹಲಾವಾರು ಮೌಲಿಕ ಚರ್ಚೆಗಳನ್ನು ಹುಟ್ಟುಹಾಕಿರುವ ನಾ ದಿವಾಕರ ಅವರು ಈ ಬಾರಿ ಸೋಮಶೇಖರ ಆಯೋಗದ ವರದಿಯನ್ನು ಚರ್ಚೆಗೆ ಎತ್ತಿಕೊಂಡಿದ್ದಾರೆ.

ಇದೇನು ಆಯೋಗವೋ ಇಲ್ಲಾ ಪ್ರಯೋಗವೋ ಎನ್ನುವ ಪ್ರಶ್ನೆ ಕೇಳುತ್ತಿದ್ದಾರೆ. ಬನ್ನಿ ಚರ್ಚೆಯಲ್ಲಿ ಭಾಗವಹಿಸಿ.

ಆಯೋಗವೋ ಪ್ರಯೋಗವೋ ?

-ನಾ ದಿವಾಕರ

ಸ್ವತಂತ್ರ ಭಾರತದ ಪ್ರಜಾಸತ್ತಾತ್ಮಕ ಆಳ್ವಿಕೆಯ ಇತಿಹಾಸದಲ್ಲಿ ಜನಮಾನಸವು ಕಂಡಿರುವ ಒಂದು ಕಟು ಸತ್ಯ ಏನೆಂದರೆ, ಏನೇ ಅಪರಾಧ ಎಸಗಲಿ ಪ್ರಬಲ ವರ್ಗಗಳಿಗೆ, ಆಳುವ ವರ್ಗಗಳಿಗೆ, ಶ್ರೀಮಂತ ವರ್ಗಗಳಿಗೆ ಭಾರತೀಯ ನ್ಯಾಯ ಸಂಹಿತೆಯಲ್ಲಿ ಶಿಕ್ಷೆ ಆಗುವುದಿಲ್ಲ ! ರಾಜಕಾರಣಿಗಳು ಮತ್ತು ರಾಜಕೀಯ ಪ್ರೇರಿತ ಶಕ್ತಿಗಳು ಎಂದಿಗೂ ಶಿಕ್ಷಾರ್ಹರಾಗಲಾರರು. ಆಳುವ ರಾಜಕೀಯ ಪಕ್ಷಕ್ಕೆ ನಿಕಟವಾದ ಸಂಘಟನೆಗಳು ಎಂದಿಗೂ ಅಪರಾಧಿ ಸ್ಥಾನದಲ್ಲಿ ನಿಲ್ಲುವುದಿಲ್ಲ. ಈ ವರ್ಗಗಳೆಲ್ಲವೂ ಒಂದು ರೀತಿ ವಿಚಾರಣಾಧೀನ ಖೈದಿಗಳಂತೆ. ಸಾರ್ವಭೌಮ ಪ್ರಜೆಗಳ ದೃಷ್ಟಿಯಲ್ಲಿ ಆರೋಪಿಗಳಾಗಿರುತ್ತಾರೆ, ನ್ಯಾಯಾಂಗ ಮೂಲಕ ವಿಚಾರಣೆ ನಡೆಯುತ್ತಿರುತ್ತದೆ ಆದರೆ ಅಂತಿಮ ತೀಪರ್ು ಮಾತ್ರ ಅಪರಾಧಿಗೆ ಮನ್ನಣೆ ನೀಡುವುದೇ ಆಗಿರುತ್ತದೆ. ಈ ವಿಚಾರಣಾ ಖೈದಿಗಳನ್ನು ನ್ಯಾಯಾಂಗದ ಪರಿಧಿಯಿಂದ ಹೊರಗಿಟ್ಟು ನ್ಯಾಯಾನ್ಯಾಯಗಳ ಪರಾಮಶರ್ೆ ನಡೆಸುವ ನಿಟ್ಟಿನಲ್ಲಿ ಭಾರತದ ಆಳ್ವಿಕರು ಕಂಡುಹಿಡಿದಿರುವ ಒಂದು ಸಾಂವಿಧಾನಿಕ ಅಸ್ತ್ರ ಎಂದರೆ ವಿಚಾರಣಾ ಆಯೋಗ !

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈವರೆಗೂ ನಡೆದಿರುವ ಭ್ರಷ್ಟಾಚಾರ ಪ್ರಕರಣಗಳು, ಕೋಮು ಗಲಭೆಗಳು, ಜಾತಿ ಸಂಘರ್ಷಗಳು, ಜಾತಿ ಪ್ರೇರಿತ ಹತ್ಯಾಕಾಂಡಗಳು ನೂರಾರು. ಈ ಎಲ್ಲಾ ಘಟನೆಗಳಲ್ಲಿ ಅಪರಾಧಿಗಳಾರು ಎಂದು ವಿವರಿಸಿ ಹೇಳುವ ಅಗತ್ಯವಿಲ್ಲ. ಆಳ್ವಿಕರ ಒಡೆದು ಆಳುವ ನೀತಿಗೆ ಬಲಿಯಾಗುವ ಸುಶಿಕ್ಷಿತ ಸಮಾಜದ ಪೂವರ್ಾಗ್ರಹಪೀಡಿತರು ಮತ್ತು ಅನಕ್ಷರಸ್ತ ಸಮಾಜದ ಅಮಾಯಕರು ಈ ಎಲ್ಲಾ ಘಟನೆಗಳಲ್ಲಿ ಮುಂಚೂಣಿ ಸೈನಿಕರಾಗಿರುತ್ತಾರೆ. ಆದರೆ ಈ ಸೂತ್ರದ ಗೊಂಬೆಗಳನ್ನು ಆಡಿಸುವ ಸೂತ್ರಧಾರರು ಅಧಿಕಾರದ ಗದ್ದುಗೆಯನ್ನು ಅಲಂಕರಿಸಿ ತಮ್ಮ ರಾಜ್ಯಾಡಳಿತ (!) ನಡೆಸುತ್ತಿರುತ್ತಾರೆ. ರಾಜಕಾರಣಿ-ಅಧಿಕಾರಶಾಹಿ ಮತ್ತು ದೇಶದ ಕಾನೂನು ವ್ಯವಸ್ಥೆಯ ಪರಿಪಾಲಕರ ನೇಪಥ್ಯದ ಒಕ್ಕೂಟ ಎಲ್ಲೋ ಒಂದೆಡೆ ಸಮಾಜಘಾತುಕ ಶಕ್ತಿಗಳಿಗೆ ಅಗೋಚರ ವೇದಿಕೆಯಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ನೋಡಿದಾಗ ಎದುರಾಗುವ ಕಟು ವಾಸ್ತವವೆಂದರೆ, ಸಾವಿರಾರು ಮುಗ್ಧ ಜನತೆಯನ್ನು ಬಲಿ ತೆಗೆದುಕೊಂಡ ಭೀಕರ ಹತ್ಯಾಕಾಂಡಗಳಾಗಲೀ, ರಾಜಕಾರಣ ಮತ್ತು ಧಮರ್ಾಂಧತೆಯ ಸಮ್ಮಿಲನದಿಂದ ಸಂಭವಿಸುವ ಕೋಮು ಸಂಘರ್ಷಗಳಾಗಲೀ, ಮಾನವ ಸಮಾಜವನ್ನು ನೈತಿಕ ಅಧಃಪತನದತ್ತ ಕೊಂಡೊಯ್ಯುವ ಜಾತಿ ಸಂಘರ್ಷಗಲಾಗಲೀ, ಜನಸಾಮಾನ್ಯರ ಶ್ರಮ ಮತ್ತು ಬೆವರಿನಿಂದ ಉತ್ಪಾದಿಸಲಾಗುವ ಸಂಪತ್ತನ್ನು ಕ್ಷಣಮಾತ್ರದಲ್ಲಿ ಲಪಟಾಯಿಸುವ ಭ್ರಷ್ಟಾಚಾರದ ಹಗರಣಗಳಾಗಲೀ ಇವೆಲ್ಲವೂ ಆಧುನಿಕ ನಾಗರಿಕ ಸಮಾಜದ ಸುಪ್ತ ಮಾನವೀಯ ಪ್ರಜ್ಞೆಯನ್ನು ಭೂಗತ ಮಾಡಿ, ಮನುಜ ಪ್ರಜ್ಞೆಯನ್ನು ಭ್ರಷ್ಟಗೊಳಿಸುವ ಆಳ್ವಿಕರ ಹುನ್ನಾರಗಳೆಂದೇ ಹೇಳಬಹುದು. ಈ ಹುನ್ನಾರಕ್ಕೆ ಬಲಿಯಾಗುವ ವ್ಯಕ್ತಿ, ಸಮಾಜ ಮತ್ತು ಸಮುದಾಯಗಳು ಕಾಲಕಾಲಕ್ಕೆ ವಿಭಿನ್ನ ಸ್ವರೂಪ ಪಡೆಯುತ್ತಲೇ ಹೋಗುತ್ತವೆ. ಹಾಗೆಯೇ ಈ ವಿದ್ಯಮಾನಗಳನ್ನು ನಿರ್ವಹಿಸುವ ಪ್ರಬಲ ವರ್ಗಗಳು ಪರಕಾಯ ಪ್ರವೇಶ ಮಾಡುತ್ತಲೇ ಇರುತ್ತವೆ. ದೇವನೊಬ್ಬ ನಾಮ ಹಲವು ಎಂಬಂತೆ, ಸೂತ್ರಧಾರ ಒಬ್ಬನೇ ಆದರೂ ಹಲವು ನಾಮಾಂಕಿತಗಳು.

ಇನ್ನಷ್ಟು

ಬಂದ್ ಆಗಿರುವುದು ಜನತೆಯ ಪ್ರಜ್ಞೆ: ಪ್ರತಿಕ್ರಿಯೆಗೆ ಸ್ವಾಗತ

ಇದು ‘ಜುಗಾರಿ ಕ್ರಾಸ್’ ಇಲ್ಲಿ ಕಾಣಿಸುವ ಬರಹಗಳು ಚರ್ಚೆಯನ್ನು ಪ್ರೇರೇಪಿಸುತ್ತದೆ. ಮೊನ್ನೆ ನಡೆದ ಕರ್ನಾಟಕ ಬಂದ್ ಕುರಿತು ಈಗಾಗಲೇ ಅವಧಿ’ಯಲ್ಲಿ ಸಾಕಷ್ಟು ಬರಹಗಳನ್ನು ಬರೆದಿರುವ ನಾ ದಿವಾಕರ್ ಅವರು ಬರೆದಿದ್ದಾರೆ. ಪ್ರತಿಕ್ರಿಯೆಗೆ ಸ್ವಾಗತ.

-ನಾ. ದಿವಾಕರ

ಭಾರತ ಸ್ವತಂತ್ರ ರಾಷ್ಟ್ರವಾಗಿ ತನ್ನದೇ ಅದ ಸಂವಿಧಾನವನ್ನು ರೂಪಿಸಿಕೊಂಡು ಗಣತಂತ್ರ ರಾಷ್ಟ್ರವಾಗಿ ರೂಪುಗೊಂಡ ಸಂದರ್ಭವನ್ನು ಗಣರಾಜ್ಯೋತ್ಸವದ ದಿನ ನೆನೆಯಲಾಗುತ್ತದೆ. ಸಾಂವಿಧಾನಿಕ ಹೊಣೆಗಾರಿಕೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಆಳ್ವಿಕರು ಮತ್ತು ದೇಶದ ಪ್ರಜೆಗಳು ತಮ್ಮ ನೈತಿಕ-ಸಾಮಾಜಿಕ-ರಾಜಕೀಯ ಕರ್ತವ್ಯ ಪ್ರಜ್ಞೆಯನ್ನು ಮರೆಯದಿರಲೂ ಈ ಆಚರಣೆಗಳು ನೆರವಾಗುತ್ತವೆ. ಆದರೆ ಈ ಬಾರಿಯ ಗಣತಂತ್ರ ದಿನ ಕರ್ನಾಟಕದ ಮಟ್ಟಿಗೆ ಅತಂತ್ರದ ದಿನಾಚರಣೆಯಾಗಿ ಪರಿಣಮಿಸಿದೆ. ಇಲ್ಲಿ ಸಮಸ್ಯೆ ಉದ್ಭವಿಸಿರುವುದು ಜನತೆಯಿಂದಲ್ಲ, ಯಾವುದೇ ಸಂಘಟನೆಯಿಂದಲ್ಲ ಅಥವಾ ನೈಸರ್ಗಿಕ ಕಾರಣಗಳಿಂದಲೂ ಅಲ್ಲ. ಸಂವಿಧಾನದ ಆಶಯಗಳನ್ನು ಪ್ರಜಾಸತ್ತಾತ್ಮಕ ಚೌಕಟ್ಟಿನಲ್ಲಿ ಸಾಕಾರಗೊಳಿಸುವ ಗುರುತರ ಜವಾಬ್ದಾರಿ ಹೊತ್ತಿರುವ ಎರಡು ಸಾಂವಿಧಾನಿಕ ಸಂಸ್ಥೆಗಳ ನಡುವೆ ಏರ್ಪಟ್ಟಿರುವ ಸಂಘರ್ಷವೇ ಸಮಸ್ಯೆಯಾಗಿ ಕಾಡುತ್ತಿದೆ.

ಒಂದೆಡೆ ಸಾರ್ವಭೌಮ ಪ್ರಜೆಗಳಿಂದ ಚುನಾಯಿತವಾಗಿರುವ ಒಂದು ಪ್ರಜಾಸತ್ತಾತ್ಮಕ ಸಂಸ್ಥೆ ಮತ್ತೊಂದೆಡೆ ಸಂಯುಕ್ತ ರಾಜ್ಯಾಡಳಿತ ವ್ಯವಸ್ಥೆಯ ಅನುಸಾರ ಸಂವಿಧಾನರೀತ್ಯಾ ನೇಮಿಸಲ್ಪಟ್ಟ ಮೇಲ್ವಿಚಾರಕ ಸಂಸ್ಥೆ. ಈ ಎರಡೂ ಸಂಸ್ಥೆಗಳ ಇರಬೇಕಾದ್ದು ಸಂವಿಧಾನ ಬದ್ಧತೆ, ಪ್ರಜಾಹಿತದ ಬಗ್ಗೆ ಕಾಳಜಿ ಮತ್ತು ಸಾಂವಿಧಾನಿಕ ಕರ್ತವ್ಯ ಪ್ರಜ್ಞೆ. ಸಾರ್ವಭೌಮ ಪ್ರಜೆಗಳ ಅಭ್ಯುದಯಕ್ಕಾಗಿ ಸೂಕ್ತ ಯೋಜನೆಗಳನ್ನು ರೂಪಿಸಿ, ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ ಮತ್ತು ಸಾಂಸ್ಕೃತಿಕ ಔನ್ನತ್ಯಗಳನ್ನು ರಕ್ಷಿಸುವ ಜವಾಬ್ದಾರಿ ಇರುವುದು ಆಳ್ವಿಕರ ಮೇಲೆ. ಈ ಆಳ್ವಿಕರ ಕಾರ್ಯಾಚರಣೆಯ ಬಗ್ಗೆ ನಿಗಾ ವಹಿಸಿ ಸಂವಿಧಾನದ ರಕ್ಷಣೆ ಮಾಡುವುದು ರಾಜ್ಯಪಾಲರ ಹೊಣೆಗಾರಿಕೆ. ದೇಶದ ಜನತೆಯಾಗಲೀ, ಕಾನೂನು ವ್ಯವಸ್ಥೆಯಾಗಲೀ ಇದಕ್ಕೂ ಮೀರಿದ ಅಪೇಕ್ಷೆ ಹೊಂದಿರಲಾರದು.

ಇನ್ನಷ್ಟು

Tirumalesh on Akshara’s article

K.V. Akshara is a well-meaning person and has been doing a good job in Heggodu, but unfortunately his comparison between Madesnaana and IPL is far-fetched and sidetracks the issue of the heinous practice of rolling over leaves in which people have eaten. Rolling over the ground may be good exercise (indeed it is!) but the temple practice is medieval and is associated with superstitious beliefs and exploitation of ignorance. Akshara probably never realized the implications of the comparison he made. He should come out and condemn the Madesnaana practice unequivocally.

Although I am an agnost, I will not like our temples to be done away with. But there is a need to modernize them. At present they are awefully filthy! Get them cleaned, make them an iviting place where people of all faiths and beliefs can come together and worship. First of all, get them fitted with bathrooms, fans and lights! A good flooring please!

As for the IPL thing, I don’t know much about it. But people have always gone where they get wellpaid, even in the teaching profession.

If this is done by auction, well, there is the rub and Akshara may have a point! But this is a separate issue.

-k v tirumalesh

photo courtesy: Kendasampige

‘ಯಾರ’ ಸಂವೇದನೆಯನ್ನು ‘ಯಾರು’ ಕೊಂದರು?

-ಜಿ.ಪಿ.ಬಸವರಾಜು

ಕೆ.ವಿ.ಅಕ್ಷರ ಅವರು ಇತ್ತೀಚೆಗೆ ಪ್ರಜಾವಾಣಿಯಲ್ಲಿ ಪ್ರಕಟಿಸಿದ ‘ಹರಕೆ-ಹರಾಜು’ ಲೇಖನ ಅನೇಕ ಪ್ರಶ್ನೆಗಳನ್ನು ಎತ್ತಲು ಅವಕಾಶಕೊಡುತ್ತದೆ. ಇಂಥ ಮುಖ್ಯ ಸಂಗತಿಗಳ ಬಗ್ಗೆ ನಮ್ಮ ಸಮೂಹ ಮಾಧ್ಯಮ ವಹಿಸುತ್ತಿರುವ ಪಾತ್ರದ ಬಗ್ಗೆ ಅವರು ಕೆಲವು ಪ್ರಶ್ನೆಗಳನ್ನು ಎತ್ತುತ್ತಾರೆ.

ಮಾಧ್ಯಮವನ್ನು ನಮ್ಮ ಸಮಾಜದ ಒಂದು ಅಂಗವಾಗಿಯೇ ನೋಡಬೇಕು; ಹೊರಗಿಟ್ಟು ನೋಡಬಾರದು. ಒಂದು ಸಮಾಜದ ಸಂವೇದನೆ ಜಡವಾಗಿದ್ದರೆ ಮಾಧ್ಯಮದ ಸಂವೇದನೆ ಅದಕ್ಕನುಗುಣವಾಗಿರುತ್ತದೆ. ನಮ್ಮ ದೇಶದಲ್ಲಿ ಮಾಧ್ಯಮಗಳು ಚುರುಕಾಗಿಯೂ ಕೆಲಸ ಮಾಡಿವೆ; ಜಡವಾಗಿಯೂ ವರ್ತಿಸಿವೆ. ಇತ್ತೀಚೆಗೆ ಅನೇಕ ಮುಖ್ಯ ಹಗರಣಗಳು ಬಯಲಾಗಲು, ಸಾರ್ವಜನಿಕ ಚರ್ಚೆಯ ವಿಷಯಗಳಾಗಲು ಮಾಧ್ಯಮ ವಹಿಸಿದ ಪಾತ್ರವೇ ಕಾರಣ ಎಂಬುದನ್ನು ನಾವು ಮರೆಯಲಾಗದು. ನಮ್ಮ ಕ್ರಿಕೆಟ್ ‘ಕಲಿ’ಗಳನ್ನು ಮಾರುಕಟ್ಟೆಯ ವಸ್ತುಗಳಂತೆ ಬಿಕರಿ ಮಾಡುವುದನ್ನು ಒಂದು ‘ಅವಮಾನದ’ ಸಂಗತಿಯಾಗಿ ಪರಿಗಣಿಸಲಾಗದಷ್ಟು ಮಾಧ್ಯಮ ಜಡವಾಗಿವೆ ಎಂಬುದು ನಿಜ. ಹೀಗೆ ಕ್ರಿಕೆಟ್ಟಿಗೆ ಮಾತ್ರ ಈ ಅವಮಾನವನ್ನು ಸೀಮಿತಗೊಳಿಸಬೇಕಾಗಿಯೂ ಇಲ್ಲ. ನಮ್ಮ ಶಿಕ್ಷಣ ಕ್ಷೇತ್ರವನ್ನೇ ನೋಡಿದರೂ ಇದು ತಿಳಿಯುತ್ತದೆ: ಸಾಫ್ಟ್ವೇರ್ ಇಂಜಿನಿಯರುಗಳು ಮತ್ತು ವೈದ್ಯರನ್ನು ಮಾತ್ರ ಅಂತರ ರಾಷ್ಟ್ರೀಯ ಮಾರುಕಟ್ಟೆಯ ಸರಕಾಗಿ ಬೆಲೆಕಟ್ಟಿ ಉಳಿದ ಜ್ಞಾನಶಾಖೆಗಳಲ್ಲಿ ಅಧ್ಯಯನ ಮಾಡುವ ಲಕ್ಷಾಂತರ ಪ್ರತಿಭಾವಂತರನ್ನು ಕಾಲ ಕಸ ಮಾಡಿರುವುದರ ಹಿಂದೆ ಇರುವ ಮನಸ್ಸು ಯಾರದು? ಹಾಗೆಯೇ ಇನ್ನು ಅನೇಕ ಉದಾಹರಣೆಗಳನ್ನು ಕೊಡಬಹುದು.

ಜಾಗತೀಕರಣ ಎನ್ನುವುದು ಹಣದ ರೂಪದಲ್ಲಿ ಮಾತ್ರ ನಮ್ಮನ್ನು ಆವರಿಸಿದ್ದರ ಕೆಟ್ಟ ಪರಿಣಾಮ ಎಲ್ಲೆಲ್ಲಿಯೂ ಮುಖ ತೋರುತ್ತಿದೆ. ಈ ಹಣ ಎನ್ನುವುದು ನಮ್ಮ ಸಮಾಜದ ಸೂಕ್ಷ್ಮ ಸಂವೇದನೆಯನ್ನು ತಿಂದು ಹಾಕಿದೆ; ಮಾಧ್ಯಮಗಳೂ ಹೀಗಾಗಿರುವುದು ವಿಷಾದದ ಸಂಗತಿ. ಆದರೆ ಸುಬ್ರಹ್ಮಣ್ಯ ದೇವಾಲಯವೊಂದರಲ್ಲಿ ಹಲವು ಹರಕೆದಾರರು ಎಂಜಲೆಲೆಗಳ ಮೇಲೆ ಹೊರಳಾಡಿದ ಸುದ್ದಿ ಮುಖಪುಟದ ವರದಿಯಾದದ್ದು ಮತ್ತು ‘ವರದಿಯಾದ ರೀತಿಯಿಂದಲೇ ಇದು ನಮ್ಮ ಸಮಾಜವನ್ನು ಕಾಡುತ್ತಿರುವ ಮುಖ್ಯವಾದ ಪಿಡುಗಿನ ಒಂದು ಉದಾಹರಣೆ-ಎಂಬ ಧ್ವನಿಯೂ ಈ ವರದಿಗಳ ಹಿಂದಿತ್ತು’ ಎಂಬುದು ನಮ್ಮ ಮಾಧ್ಯಮಗಳು ನಿರ್ವಹಿಸಿದ ಅಗತ್ಯ ಕರ್ತವ್ಯ ಹಾಗೂ ಎಚ್ಚೆತ್ತ ರೀತಿಯನ್ನೂ ತೋರುತ್ತಿದೆ.

ಅಕ್ಷರ ಅವರು ಭಾವಿಸುವಂತೆ ಇದು, ‘ನಗಣ್ಯವೆನ್ನಬಹುದಾದ ಒಂದು ಪುಟ್ಟ ಊರಿನ ಒಂದು ಘಟನೆ.’ ಹಾಗೆಯೇ, ‘ದೇವಾಲಯದಲ್ಲಿ ಯಾರೋ ಒಂದಿಷ್ಟು ಜನ, ತಮ್ಮದೇ ಆದ ನಂಬಿಕೆಯಿಂದ ಪ್ರೇರಿತರಾಗಿ’ ಮಾಡಿದ ಕೆಲಸ ಇದು. ಸುಬ್ರಹ್ಮಣ್ಯದಂಥ ‘ಪುಟ್ಟ ಊರು’ಗಳು ನಮ್ಮ ಧಾರ್ಮಿಕ ಕ್ಷೇತ್ರದಲ್ಲಿ ಇಂಥ ನಂಬಿಕೆಗಳನ್ನು ಬಿತ್ತುವ, ಸಮೃದ್ಧ ಫಸಲನ್ನು ತೆಗೆಯುವ ಪ್ರಭಾವೀ ಕ್ಷೇತ್ರಗಳೆಂಬುದು ಮತ್ತು ಇಂಥ ಪುಟ್ಟ ಊರುಗಳು ಭಾರತದ ತುಂಬ ಕ್ರಿಯಾಶೀಲವಾಗಿದ್ದವು ಮತ್ತು ಈಗಲೂ ಕ್ರಿಯಾಶೀಲವಾಗಿವೆ ಎಂಬುದನ್ನು ನಾನು ವಿವರಿಸಬೇಕಾದ ಅಗತ್ಯವಿಲ್ಲ. ತಿರುಪತಿಯೂ ಪುಟ್ಟ ಊರೇ; ಧರ್ಮಸ್ಥಳವೂ ಪುಟ್ಟ ಊರೇ. ಪುಟಪರ್ತಿ ಇನ್ನೂ ಸಣ್ಣ ಊರು.

ತಲೆಯ ಮೇಲೆ ಮಲ ಹೊರುವ ವ್ಯಕ್ತಿ ಇದು ತನಗೆ ಅಪಮಾನಕರ ಎಂದು ಭಾವಿಸುವುದಕ್ಕೆ ಸಾವಿರ ಸಾವಿರ ವರ್ಷಗಳೇ ಬೇಕಾದವು. ಇಂಥ ಪ್ರಜ್ಞೆಯನ್ನು ದಲಿತರಿಗಿಂತ ಮೊದಲೇ ಪಡೆದಿದ್ದ ಮೇಲ್ಜಾತಿ ಮತ್ತು ವರ್ಗಗಳು ಇದನ್ನು ಯಾಕೆ ಅವನ ಅರಿವಿಗೆ ಬರುವಂತೆ ಮಾಡಲಿಲ್ಲ. ಅಂಥ ಒಂದು ಸೂಕ್ಷ್ಮ ಸಂವೇದನೆಯೇ ಅವನಲ್ಲಿ ಇಲ್ಲದಂತೆ ಮಾಡಿದವರು ಯಾರು? ಇಂಥ ಸೂಕ್ಷ್ಮ ಪ್ರಶ್ನೆಗಳಿಗೆ ಉತ್ತರಿಸುವುದು ಸಾಧ್ಯವಾದಾಗ ಮಾತ್ರ, ಎಂಜಲೆಲೆಯ ಮೇಲೆ ಉರುಳುವವರು ಸ್ವಂತ ನಂಬಿಕೆಯಿಂದ ಮತ್ತು ಪ್ರೇರಣೆಯಿಂದ ಹಾಗೆ ಮಾಡುತ್ತಾರೊ ಅಥವಾ ಬೇರೆಯ ಕಾರಣಗಳು ಇದರ ಹಿಂದೆ ಇರಬಹುದೊ ಎಂಬುದು ಅರ್ಥವಾಗುವುದು ಸಾಧ್ಯ.

ಇನ್ನಷ್ಟು

ಬೌದ್ಧಿಕ ದಿವಾಳಿತನವನ್ನು ಬಿಂಬಿಸುವ ‘ಅವಮಾನ’ದ ವ್ಯಾಖ್ಯಾನ


ಮಂಜುನಾಥ ಲತಾ

ಮಾನ್ಯರೆ,

ಪ್ರಜಾವಾಣಿಯ ಜನವರಿ 16, 2011ರ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಕೆ.ವಿ. ಅಕ್ಷರ ಅವರಹರಕೆ ಹರಾಜು: ಯಾವುದು ಸಹಜ? ಯಾವುದು ಅವಮಾನ?’ ಲೇಖನಕ್ಕೆ ನನ್ನದೊಂದು ಪ್ರತಿಕ್ರಿಯೆ.

ಅಕ್ಷರ ಅವರ ವಿಚಾರಲಹರಿ ನಮ್ಮ ಸಮಸಮಾಜದ ಕನಸು ಕಾಣುವ ಮನಸ್ಸುಗಳಿಗೆ ಮಾಡಿದ ಅವಮಾನದಂತೆಯೂ ಅಕ್ಷರರಂಥವರ ಅಕ್ಷರದ ಬೌದ್ಧಿಕತೆಗೆ ಬಡಿದಿರುವ ಪೂರ್ವಗ್ರಹದ ಬಾಧೆಯಂತೆಯೂ ಕಾಣುತ್ತಿದೆ. ತಮ್ಮ ವಿಚಾರದ ಕೊನೆಯಲ್ಲಿ ಅವರು ‘…ಇವುಗಳಲ್ಲಿ ಯಾವುದೇ ಒಂದರ ಪರವಾಗಿ ವಕಾಲತ್ತು ಮಾಡುವುದೂ ನನ್ನ ಉದ್ದೇಶವಲ್ಲ’ ಎಂದು ಹೇಳುವಲ್ಲಿಯೇ ತಾವು ಯಾವುದರ ಪರವಾಗಿದ್ದಾರೆಂಬುದನ್ನು ತೋರಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಅವರ ಲೇಖನದ ಆರಂಭದಲ್ಲೇ ಇದೆ. ಮೇಲ್ವರ್ಗದ ಜನ ತಿಂದುಂಡ ಎಂಜಲೆಲೆಯ ಮೇಲೆ ಜನರು ಉರುಳಾಡುವುದು ಅವರಿಗೆ ನಗಣ್ಯವೆನ್ನಬಹುದಾದ ಘಟನೆ. ಅವರ ಲೇಖನದ ಶೀಷರ್ಿಕೆಯೇ ಹೇಳುವಂತೆ ಅದು ಈ ಸಮಾಜದಲ್ಲಿ ನಡೆಯಬಹುದಾದ ‘ಸಹಜ’ ಕ್ರಿಯೆ. ಅವರ ಪ್ರಕಾರ ಅದು ಮನುಷ್ಯನೊಬ್ಬನಿಗೆ ಮಾಡುವ ಅವಮಾನವೇನೂ ಅಲ್ಲ; ಅಸಮಾನತೆಯನ್ನು ಮತ್ತಷ್ಟು ಉತ್ತೇಜಿಸುವ, ಪಾವಿತ್ರ್ಯ-ಅಪಾವಿತ್ರ್ಯದ ಹುಸಿಯನ್ನು ವೈಭವೀಕರಿಸುವ, ಶ್ರೇಷ್ಠ-ಕನಿಷ್ಠದ ತಾರತಮ್ಯ ಬಿತ್ತುವ, ಮೇಲು-ಕೀಳನ್ನು ಎತ್ತಿ ಹಿಡಿಯುವ ಆಚರಣೆಯಂತೆ ಅದನ್ನು ನೋಡಬೇಕಿಲ್ಲ. ಹಾಗಾಗಿ ಅವರು ಅಂತಹುದೊಂದು ಮೌಢ್ಯದ ಪರವಾಗಿದ್ದಾರೆಂದು ಹೇಳಬಹುದು.

ಚಿತ್ರ ಕೃಪೆ: ದಟ್ಸ್ ಕನ್ನಡ

ಅವಮಾನ ಎನ್ನುವುದರ ಕುರಿತೂ ಅಕ್ಷರ ಅವರು ತಮಗೆ ಗೊಂದಲವಿರುವುದಾಗಿ ಹೇಳಿಕೊಂಡಿದ್ದಾರೆ; ಇದು ತಪ್ಪೇನೂ ಅಲ್ಲ. ಯಾಕೆಂದರೆ ಅಪಮಾನವೆಂಬುದನ್ನು ಅಕ್ಷರರಂಥವರೇನೂ (ಸಾಮಾಜಿಕವಾಗಿ, ದೈಹಿಕವಾಗಿ) ಅನುಭವಿಸಿದವರಲ್ಲವಲ್ಲ! ಸ್ವತಃ ಅಪಮಾನಿತನಿಗೇ ತನಗೆ ಆಗುತ್ತಿರುವುದು ಅಪಮಾನ ಎಂದು ಗೊತ್ತಿಲ್ಲದಿರುವುದರಿಂದ ಅದು ಅವಮಾನ ಅಥವಾ ಶೋಷಣೆ ಎನ್ನಿಸಿಕೊಳ್ಳುವುದಿಲ್ಲ ಎನ್ನುವುದು ಅಕ್ಷರ ಅವರ ವಾದ. ಹಾಗಾದರೆ ಮಲ ತಿನ್ನಿಸಿಕೊಂಡ, ತಲೆಯ ಮೇಲೆ ಮಲ ಸುರಿದುಕೊಂಡ ದಲಿತರಿಗೆ, ಬೆತ್ತಲೆ ಹರಕೆ ಸಲ್ಲಿಸುವ ಹೆಣ್ಣುಮಕ್ಕಳಿಗೆ ತಾವು ಅನುಭವಿಸುತ್ತಿರುವುದು ಅವಮಾನವೆಂದು ತಿಳಿದಿಲ್ಲವಾದರೆ ಅದನ್ನು ಅಕ್ಷರ ಅವರ ಪ್ರಕಾರ ಅಪಮಾನವೆಂದು ಭಾವಿಸಕೂಡದು! ಬದಲಿಗೆ ಅದನ್ನೊಂದು ಸಹಜವಾದ ಸಾಮಾಜಿಕ ಕ್ರಿಯೆಯೆಂಬಂತೆ ನೋಡಬೇಕು; ಅಥವಾ ನಮ್ಮ ಸಮಾಜ ಇರುವುದು ಹೀಗೆಯೇ ಎಂದು ನಾವೆಲ್ಲರೂ ತಿಳಿದುಕೊಳ್ಳಬೇಕು. ನಮ್ಮ ಅನುಭವಕ್ಕೆ ಬಾರದ ಯಾವುದನ್ನೂ ನಾವು ಶೋಷಣೆ ಎಂದಾಗಲೀ, ಅತ್ಯಾಚಾರವೆಂದಾಗಲೀ ಕರೆಯಕೂಡದು ಎಂಬ ಅಕ್ಷರ ಅವರ ವಾದ ಕೇವಲ ವಿತಂಡವಾದವಾಗಿದೆ. ಹೀಗೆ ವಿತಂಡವಾದ ಹೂಡುತ್ತಾ ಹೋಗುವುದೇ ಆದರೆ, ನಾವು ಕೊಲೆಗೀಡಾಗುವ ಮನುಷ್ಯನನ್ನು, ಅತ್ಯಾಚಾರಕ್ಕೊಳಗಾಗುವ ಹೆಣ್ಣುಮಗಳೊಬ್ಬಳನ್ನು, ದಬ್ಬಾಳಿಕೆಗೊಳಗಾಗುವ ಶೋಷಿತನೊಬ್ಬನನ್ನು ಸುಲಭವಾಗಿ ‘ಬ್ರೈನ್ ವಾಷ್’ ಮಾಡಿ ‘ನಿಮ್ಮ ಮೇಲೆ ನಡೆಯುತ್ತಿರುವುದು ಕೊಲೆ, ಅತ್ಯಾಚಾರ, ದಬ್ಬಾಳಿಕೆ, ಶೋಷಣೆ ಅಲ್ಲ’ ಎಂದು ನಂಬಿಕೆ ಹುಟ್ಟಿಸುವುದು ಸುಲಭ ಎಂದಾಯಿತು!

‘ತನಗೆ ಅವಮಾನ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ತೀಮರ್ಾನಿಸುವಾತ ಸ್ವತಃ ಆ ಅವಮಾನಿತನೇ ಆಗಿರಬೇಕೇ ಹೊರತು, ಆತನ ಪರವಾಗಿ ಇನ್ನೊಬ್ಬರು ‘ಅವನಿಗೆ ಅವಮಾನವಾಗುತ್ತಿದೆ’ ಎಂದು ತೀಮರ್ಾನಿಸಲಾಗದು’ ಎಂಬ ಅಕ್ಷರ ಅವರ ಇನ್ನೊಂದು ಥಿಯರಿ ಅಪ್ರಬುದ್ಧವಾದುದು. ಹಾಗೆ ಶೋಷಣೆ-ಅವಮಾನದ ಅರಿವನ್ನು ಶೋಷಿತರು-ಅವಮಾನಿತರಲ್ಲಿ ಬಿತ್ತದೆ ಹೋಗಿದ್ದರೆ ಜಗತ್ತಿನಲ್ಲಿ ಇಷ್ಟೆಲ್ಲ ಮಾನವಂತರು ಇಷ್ಟೆಲ್ಲ ಮಾನವಪರ ಚಳುವಳಿಗಳಿಗೆ ಸಾಕ್ಷಿಗಳಾಗಲು ಸಾಧ್ಯವೇ ಆಗುತ್ತಿರಲಿಲ್ಲ; ಗಾಂಧಿ, ಅಂಬೇಡ್ಕರ್ರಂಥವರು ಅಪಮಾನಿತರ ಪರವಾದ ನಾಯಕರಾಗಿ ಉಳಿಯಲು ಸಾಧ್ಯವಾಗುತ್ತಿರಲಿಲ್ಲ. ಸ್ವತಃ ಸಂಸ್ಕೃತಿ ಚಿಂತಕರಾದ ಅಕ್ಷರ ಅಂಥವರಿಗೆ ಇದು ಗೊತ್ತಿಲ್ಲದ ಸಂಗತಿಯೇನಲ್ಲ.

ಇನ್ನಷ್ಟು

ಇಲ್ಲಿದೆ ಒಂದು ಉತ್ತರ: ‘ಅಕ್ಷರ’ವಂತರು ಮತ್ತು ಅವರು ಮಾಡುವ ಸಹಜ ಅವಮಾನಗಳು!

ಕೆ ವಿ ಅಕ್ಷರ ‘ಪ್ರಜಾವಾಣಿ ಸಾಪ್ತಾಹಿಕ ಪುರವಣಿ’ಗೆ ಬರೆದ ಲೇಖನ ‘ಹರಾಜು – ಹರಕೆ’ ಬಗ್ಗೆ ‘ಅವಧಿ’ ನಡೆಸಿದ ಚರ್ಚೆ ನೀವು ಓದಿದ್ದೀರಿ. ಇತ್ತೀಚಿನ ದಿನಗಳಲ್ಲಿ ‘ಅವಧಿ’ಯಲ್ಲಿ ಅತಿ ಹೆಚ್ಚು ಜನ ಓದಿದ, ಚರ್ಚಿಸಿದ ಅಂಕಣ ಇದು. ಈ ಲೇಖನದ ಬಗ್ಗೆ ವಿಮರ್ಶಿಸಿದ, ಕಾಮೆಂಟಿಸಿದ ಎಲ್ಲರಿಗೂ ‘ಅವಧಿ’ ಯ ಪ್ರೀತಿ ಇದೆ.

ಈ ಮಧ್ಯೆ ಶಿವಮೊಗ್ಗದ ‘ಅಹರ್ನಿಶಿ ಪ್ರಕಾಶನ’ದ ಕೆ ಅಕ್ಷತಾ ಅವರು ಶಿವಸುಂದರ್ ಬರೆದ ಲೇಖನವನ್ನು ಕಳಿಸಿಕೊಟ್ಟಿದ್ದಾರೆ. ಅಕ್ಷರ ಅವರ ಲೇಖನವನ್ನು ಇನ್ನೊಂದು ದಿಕ್ಕಿನಿಂದ ವಿಮರ್ಶಿಸುವ ಈ ಲೇಖನವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಇದರೊಂದಿಗೆ ಈ ವಿಷಯದ ಕುರಿತ ಚರ್ಚೆ ಇಲ್ಲಿ ಮುಕ್ತಾಯವಾಗುತ್ತದೆ. ಆದರೂ ಓದುಗರ ಮನಸ್ಸಿನಲ್ಲಿ ಬೆಳೆಯುತ್ತಾ ಹೋಗುತ್ತದೆ ಎಂಬ ನಂಬಿಕೆ ನಮ್ಮದು.

ಇನ್ನೊಂದು ವಿಷಯದೊಂದಿಗೆ ಇನ್ನೊಮ್ಮೆ ನಿಮ್ಮ ಮುಂದೆ ಬರುತ್ತೇವೆ. ಥ್ಯಾಂಕ್ ಯು

-ಶಿವಸುಂದರ್

ಚಿತ್ರ: ಕೆಂಡಸಂಪಿಗೆ

ಕಳೆದ ವಾರದ ಸಾಪ್ತಾಹಿಕದಲ್ಲಿ ಕೆ.ವಿ ಅಕ್ಷರ ಅವರು ಬರೆದ ಹರಕೆ-ಹರಾಜು-ಯಾವುದು ಸಹಜ?ಯಾವುದು ಅವಮಾನ ಎಂಬ ಲೇಖನವನ್ನು ಓದಿ ನನ್ನಂಥ ಹಲವರ ಮನಸ್ಸಿಗೆ ಘಾಸಿಯೇ ಆಗಿದೆ. ಸುಬ್ರಹ್ಮಣ್ಯದ ದೇವಾಲಯವೊಂದರಲ್ಲಿ ಹರಕೆದಾರರು ಎಂಜಲೆಲೆಗಳ ಮೇಲೆ ಹೊರಳಾಡಿದ್ದನ್ನು ಸಮಾಜವನ್ನು ಕಾಡುತ್ತಿರುವ ಪಿಡುಗು ಎಂದು ಬಣ್ಣಿಸಿದ ಮಾಧ್ಯಮಗಳು ನಮ್ಮ ಕ್ರಿಕೆಟ್ ಆಟಗಾರರನ್ನು ಎಮ್ಮೆದನಗಳ ರೀತಿ ಹರಾಜು ಹಾಕಿದ್ದನ್ನು ಮಾತ್ರ ಅಪಮಾನವೆಂದು ಭಾವಿಸದೇ ಇರುವುದಕ್ಕೆ ನಮ್ಮ ಚಿಂತನೆಯು ವಸಾಹತುಶಾಹಿ ಪ್ರಭಾವದಿಂದ ಕಳಚಿಕೊಳ್ಳದೇ ಇರುವುದು ಕಾರಣವೆಂದು ಅಕ್ಷರ ಆರೋಪಿಸುತ್ತಾರೆ. ಬರೀ ಇಷ್ಟೆ ಆಗಿದ್ದರೆ ಈ ಲೇಖನದ ಬಗ್ಗೆ ಹೆಚ್ಚಿನ ತಕರಾರೇನೂ ಇರುವ ಅಗತ್ಯವಿರಲಿಲ್ಲ. ಆದರೆ ನಂತರದಲ್ಲಿ ಅವರು ಅವಮಾನ ಹಾಗೂ ಸಹಜ ವಿದ್ಯಮಾನಗಳ ನಡುವಿನ ವ್ಯತ್ಯಾಸವನ್ನು ವಿಷದ ಪಡಿಸಲು ಬಳಸಿರುವ ರೂಪಕ ಮತ್ತದರ ವ್ಯಾಖ್ಯಾನಗಳು ಲೇಖನದ ಹಿಂದಿರುವ ಅಮಾನವೀಯ ಕುತರ್ಕಗಳನ್ನು ಹೊರಹಾಕುತ್ತದೆ.

ಹರಕೆ ಮತ್ತು ಹರಾಜಿನಲ್ಲಿ ಯಾವುದು ಅವಮಾನ ಮತ್ತು ಯಾವುದು ಸಹಜ ವಿದ್ಯಮಾನ ಎಂಬುದನ್ನು ಖಡಾಖಂಡಿತವಾಗಿ ತೀರ್ಮಾನಿಸುವ ತರಾತುರಿಯಿಂದ ಈ ಟಿಪ್ಪಣಿಯನ್ನು ಬರೆದಿಲ್ಲ ಎಂದು ಅಡಿಟಿಪ್ಪಣಿಯ ರೀತಿಯಲ್ಲಿ ಅವರು ಬರೆದುಕೊಂಡಿದ್ದರೂ ಇಡೀ ಲೇಖನ ಎಂಜಲೆಲೆಯ ಮೇಲೆ ಹೊರಳಾಡುವ ಹರಕೆಗಳಲ್ಲಿ ಸಂಕೇತಗೊಂಡಿರುವ ಭಾರತೀಯ ಸಮಾಜದ ಹಲವು ಆಚರಣೆಗಳನ್ನು ಅಪಮಾನ ಎಂದು ಭಾವಿಸುವುದು ವಸಾಹತುಶಾಹಿ ತಿಳವಳಿಕೆಯ ಪರಿಣಾಮ ಎಂದು ದೂಷಿಸುತ್ತದೆ ಮತ್ತು ಅವೆಲ್ಲಾ ಸಹಜ ವಿದ್ಯಮಾನಗಳೆ ಎಂಬ ಸೂಚನೆಯನ್ನೂ ಕೊಡುತ್ತವೆ. ಅದೇ ರೀತಿ ಉನ್ನತ ಸ್ಥಾನದಲ್ಲಿ ಕಾಲಮೇಲೆ ಕಾಲು ಹಾಕಿ ಕೂತವನ ಎದಿರು ಇತಿಹಾಸದುದ್ದಕ್ಕೂ ತಲೆಬಾಗಿಯೇ ನಿಂತ ಸ್ಥಿತಿಯನ್ನು ಎಲ್ಲಿಯತನಕ ಕೆಳಗೆ ನಿಂತವನು ಅಪಮಾನ ಎಂದು ಭಾವಿಸುವುದಿಲ್ಲವೋ ಅಲ್ಲಿಯತನಕ ಅದನ್ನು ಅಪಮಾನ ಎಂದು ಭಾವಿಸಲಾಗದು ಎಂಬ ಫರ್ಮಾನನ್ನೂ ಸಹ ಹೊರಡಿಸುತ್ತದೆ.

ಈ ಚಿಂತನಾ ಧಾಟಿ ಅಂಬೇಡ್ಕರ್, ಫುಲೆ, ದಲಿತ ಚಳವಳಿ, ರೈತ-ಕಾರ್ಮಿಕ ಚಳವಳಿಗಳೆಲ್ಲದರ ಸಾಮಾಜಿಕ ಪ್ರಯತ್ನವನ್ನು ಮತ್ತು ದಲಿತರಿಗೆ ಮತ್ತು ಇತರ ಶೊಷಿತ ಜನಾಂಗಗಳಿಗೆ ತಂದುಕೊಟ್ಟ ಆತ್ಮಾಭಿಮಾನವನ್ನೇ ಪರೋಕ್ಷವಾಗಿ ಪ್ರಶ್ನೆಗೊಳಪಡಿಸುತ್ತದೆ. ಹಾಗೂ ಬ್ರಾಹ್ಮಣಶಾಹಿ ದಮನಕಾರಿ ಸಾಮಾಜಿಕ ಮತ್ತು ಸಾಂಸ್ಕೃತಿಕ ರಚನೆಗಳನ್ನು ಪರೋಕ್ಷವಾಗಿ ಸಮರ್ಥಿಸಿಬಿಡುತ್ತವೆ.

ಇನ್ನಷ್ಟು

ಅಕ್ಷರ, ಆ ಮತ್ತು ಆ..

ಇದು ‘ಜುಗಾರಿ ಕ್ರಾಸ್’ ಅಂಕಣ. ಚರ್ಚೆಗೆ ವೇದಿಕೆ.

ಪ್ರಜಾವಾಣಿ ‘ಸಾಪ್ತಾಹಿಕ ಪುರವಣಿ’ಯಲ್ಲಿ ಕೆ ವಿ ಅಕ್ಷರ ಅವರ  ‘ಹರಕೆ ಹರಾಜು’ ಲೇಖನ ಪ್ರಕಟವಾಗಿತ್ತು. ಆ ಲೇಖನ ಇಲ್ಲಿದೆ. ಅಕ್ಷರ ಬರೆದಿರುವ ಈ ಲೇಖನ ಯಾವ ದಿಕ್ಕಿನಲ್ಲಿದೆ ಎಂದು ಆಶ್ಚರ್ಯವಾಗುತ್ತಿದೆ. ಮಡೆ ಸ್ನಾನದಂತಹ ಆಚರಣೆಯನ್ನೂ, ಕ್ರಿಕೆಟ್ ಆಟಗಾರರ ಹರಾಜನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡಲಾಗಿದೆ.

ಈ ಲೇಖನ ಓದಿದವರು ಪರ ವಿರುದ್ಧ ಅಭಿಪ್ರಾಯಗಳನ್ನು ದಾಖಲಿಸುತ್ತಿದ್ದಾರೆ. (ಅ)ತ್ರಾಡಿ ಸುರೇಶ ಹೆಗ್ಡೆ ಮತ್ತು (ಆ)ದಿತ್ಯ ಭಾರದ್ವಾಜ್ ಅಭಿಪ್ರಾಯಗಳು ಇಲ್ಲಿವೆ.

ನಿಮ್ಮ ಅಭಿಪ್ರಾಯವನ್ನೂ ತಿಳಿಸಿ

++

ಇಲ್ಲಿ ನಾನು ಓರ್ವ ಸಾಮಾನ್ಯ ಓದುಗನಾಗಿ ಪ್ರತಿಕ್ರಿಯಿಸುತ್ತಿದ್ದೇನೆ. ಓರ್ವ ಬರಹಗಾರನಾಗಿ ಅಲ್ಲ.

ಏಕೆಂದರೆ, ಇವರೀರ್ವರ ಅನಿಸಿಕೆಗಳಿಗೆ ಪ್ರತಿಕ್ರಿಯಿಸಲು ಅವರ ಮಟ್ಟದ ಬರಹಗಾರ ನಾನಲ್ಲ.

ಮಕ್ಕಳನ್ನು ಮೇಲಿಂದ ಎಸೆಯುವುದು ಅಪಾಯಕಾರಿ ಎಂದ ವೈದ್ಯರನ್ನು ತರಾಟೆಗೆ ತೆಗೆದುಕೊಂಡು ಪುರಾವೆ ನೀಡಿದ್ದಾರಾ… ದುಷ್ಪರಿಣಾಮದ ಬಗ್ಗೆ ಅಧ್ಯಯನ ಮಾಡಿದ್ದಾರಾ ಅನ್ನುವ ಜೋಗಿಯವರ ಅನಿಸಿಕೆಗಳನ್ನು ಓದುವಾಗ ವಿಚಿತ್ರ ಅನಿಸ್ತಾ ಇದೆ.

ಇವರು ಅದೇ ಜೋಗಿಮನೆ ಜೋಗೀನಾ?!

“ಬಚ್ಚಲು ಮನೆಯಲ್ಲಿ ಜಾರುತ್ತೆ ಮಗೂ, ಜಾಗ್ರತೆ…” ಅನ್ನುವ ಅಪ್ಪನನ್ನೋ, ಅಮ್ಮನನ್ನೋ ಮಕ್ಕಳು “ಅಧ್ಯಯನ ಮಾಡಿದ್ದೀರಾ? ಇಲ್ಲಿ ಎಷ್ಟು ಮಂದಿ ಬಿದ್ದಿದ್ದಾರೆ? ಯಾವ ಯಾವ ಮೂಳೆ ಮುರಿದುಕೊಂಡಿದ್ದಾರೆ?” ಎಂದು ಮರು ಪ್ರಶ್ನೆ ಮಾಡಿದಂತಿದೆ ಇದು.

ಅಧ್ಯಯನದ ನಂತರವೇ ಬಡಿಸಿದ್ದನ್ನು ಊಟಮಾಡುವವರೇ ನಾವುಗಳೆಲ್ಲಾ?

ಮೇಲಿಂದ ಮಕ್ಕಳನ್ನು ಎಸೆಯುವಾಗ, ಹಿಡಿಯುವವರ ಕೈತಪ್ಪಿಹೋದರೆ ಮಗು ಬಿದ್ದು ತಲೆ ಒಡೆದುಕೊಳ್ಳಬಹುದು ಅನ್ನುವುದು ಸಾಮಾನ್ಯ ಜ್ಞಾನ ಅಥವಾ ದುರ್ಬಲ ಹೃದಯಿ ಮಕ್ಕಳು ಉಸಿರುಗಟ್ಟಿ ಸಾಯಬಹುದು ಅನ್ನುವುದಕ್ಕೂ ವಿಶೇಷ ಜ್ಞಾನವೇನೂ ಬೇಕಾಗಿಲ್ಲ.

ಅಪಾಯಕಾರಿ ಅಂದ ಕೂಡಲೇ ಎಲ್ಲಾ ಮಕ್ಕಳೂ ಅಪಾಯಕ್ಕೆ ಈಡಾಗುತ್ತರೆ ಎಂದೇನಿಲ್ಲ. ಅಪಾಯದ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಅನ್ನುವುದಷ್ಟೇ ಸತ್ಯ.

ಉಪದೇಶಗಳು ಪತ್ರಿಕೆಗಳಿಂದ ಬರಬೇಕಿಲ್ಲ. ಘಟನೆ ಮುಖ್ಯ. ವರದಿ ಮಾಡುವವರು ಮುಖ್ಯರಲ್ಲ ಅನ್ನುವ ಧೋರಣೆ ಹೊಂದಿರುವವರು ಬರಹಗಾರರಾಗಿ, ವಿಮರ್ಶಕರಾಗಿ ಹೊರ ಹೊಮ್ಮುವುದು ಹೇಗೆ ಸಾಧ್ಯವಾಯಿತು?

ವರದಿ ಮಾಡುವವರು ಮುಖ್ಯರಲ್ಲ ಎಂದು ಒಪ್ಪಿಕೊಳ್ಳುವವನಿಗೂ, ವರದಿಯಲ್ಲಿನ ಸತ್ಯಾಂಶ ಎಷ್ಟು ಅನ್ನುವುದು ಮುಖ್ಯವಾಗಿರುತ್ತದೆ, ಒಂದು ಘಟನೆ ಹೇಗೆ ವರದಿಯಾಗಿದೆ ಅನ್ನುವುದೂ ಮುಖ್ಯವಾಗುತ್ತದೆ. ಹಾಗಾಗಿ ವರದಿಗಾರನೂ ಮುಖ್ಯನಾಗುತ್ತಾನೆ.

ಒಂದು ನಿರ್ದಿಷ್ಟ ಪತ್ರಿಕೆಗೆ ಅಥವಾ ಸುದ್ದಿ ವಾಹಿನಿಗೆ ಆಕರ್ಷಿತನಾಗುವ ಓದುಗ ಅಥವಾ ವೀಕ್ಷಕ ಅಲ್ಲಿನ ವರದಿಗಾರರನ್ನು ಅವಲಂಬಿಸಿಯೇ ಆಕರ್ಷಿತನಾಗಿರುತ್ತಾನೆ ಅನ್ನುವುದು ಸತ್ಯ. ಪತಿಕೆಗಳಲ್ಲಿನ ಬರಹಗಳು ಓದುಗನಲ್ಲಿ ಬದಲಾವಣೆ ತರಲಾರದು ಎನ್ನುವುದನ್ನು ಒಪ್ಪಲಾಗದು.

ಸ್ವಾತಂತ್ರ್ಯಹೋರಾಟದ ಸಂದರ್ಭದಲ್ಲಿ ಪತ್ರಿಕೆಗಳಲ್ಲಿನ ಬರಹಗಳ ಮುಖಾಂತರ ಜನರಲ್ಲಿ ಬದಲಾವಣೆ ತರಲು ಸಾಧ್ಯವಾಗಿರಲಿಲ್ಲವೇ?

ಹಾಗೊಂದು ವೇಳೆ ಪತ್ರಿಕೆಗಳಲ್ಲಿನ ಬರಹಗಳು, ತನ್ನೊಳಗೆ ಬದಲಾವಣೆ ತರಲು ಬಯಸುವ ಮಾನವನಲ್ಲಿ ಬದಲಾವಣೆ ತರಲಾರವು ಎನ್ನುವುದಾದರೆ, ಪತ್ರಿಕೆಗಳಲ್ಲಿನ ಸುದ್ದಿ ವರದಿಗಳನ್ನುಳಿದು ಪ್ರಕಟವಾಗುವ ಎಲ್ಲಾ ಅಂಕಣ ಬರಹಗಳ ಬರಹಗಾರರೆಲ್ಲಾ ತಮ್ಮ ತೆವಲಿಗಷ್ಟೇ ಬರೆಯುತ್ತಿದ್ದಾರೆ ಎನ್ನಬಹುದೇ?

ತಮ್ಮ ಅಂಕಣಗಳನ್ನು ಓದುವ ಓದುಗರಲ್ಲಿ ಎಳ್ಳಷ್ಟೂ ಬದಲಾವಣೆಯನ್ನು ನಿರೀಕ್ಷಿಸುವುದಿಲ್ಲವೇ?

ಅಕ್ಷರ ಅವರ ನಂತರ ಜೋಗಿಯವರೂ ಎಡವಟ್ಟು ಮಾಡಿಕೊಂಡಿದ್ದಾರೆ ಅಂತ ಅನಿಸುತ್ತಿದೆ, ನನಗೆ

ಆತ್ರಾಡಿ ಸುರೇಶ್ ಹೆಗ್ಡೆ

ಅಕ್ಷರ ಅವರ ತರ್ಕವನ್ನೇ ವಿಸ್ತರಿಸುವುದಾದರೆ, ಹರಾಜಿಗೆ ನಿಂತ ಆಟಗಾರರೂ ಕೂಡ ಅವರು ಅವಮಾನಿತರಾಗುತ್ತಿದ್ದಾರೆ ಎಂದು ಭಾವಿಸಬೇಕಿತ್ತಲ್ಲವೇ? ಅದನ್ನು ಮಾತ್ರ ಹೇಗೆ ಅಕ್ಷರ ಅವರು ನಮ್ಮ ಕಾಲಘಟ್ಟ ಮತ್ತು ಸಮಾಜದ larger canvas ನಲ್ಲಿಟ್ಟು ಅದನ್ನು ಅವಮಾನ ಎಂದು ಭಾವಿಸುತ್ತಾರೆ?

ಹಾಗಾದರೆ ಅಸ್ಪ್ರುಷ್ಯತೆಯೂ ಅವಮಾನವಲ್ಲವೇ? ಈಗ ತಲೆತಲಾಂತರದಿಂದ ಅಸ್ಪ್ರುಷ್ಯತೆಯಲ್ಲಿ ಬೆಂದವರಿಗೆ ಅದೊಂದು ಜೀವನ ಕ್ರಮ. ಅವರಿಗೆ ಅದು ಅವಮಾನ ಅನ್ನಿಸುವುದೇ ಇಲ್ಲ. ಅಕ್ಷರ ಅವರ ಪ್ರಕಾರ ಅದು ಈಗ ಅವಮಾನವೇ ಅಲ್ಲ. ಆದರೆ ಅದೇ ದಲಿತ ದೊಡ್ಡಿಯಲ್ಲಿ ಒಬ್ಬ ಓದಿಕೊಳ್ತಾನೆ. ಅವನಿಗೆ ನಿರಂತರ ಆಗುತ್ತಿರುವ ಅವಮಾನ ಅರಿವಿಗೆ ಬರುತ್ತದೆ. ಆಗ ಮಾತ್ರವೇ ಅದು ಅವಮಾನವೇ? so it is relative! ಅವಮಾನ ಅವಮಾನಿತನ ಅರಿವು ಬೌದ್ಧಿಕತೆಗೆ ಸಂಬಂಧ ಪಟ್ಟದ್ದೋ? ಒಟ್ಟಾರೆ ಬೌದ್ಧಿಕವಾಗಿ ಅದು ಮಾನವತೆಗೆ ನಾವು ಮಾಡುತ್ತಿರುವ ಅವಮಾನವಲ್ಲವೇ?

ಒಂದು ಕಡೆ ದಲಿತರು ಪರಿಗಣಿಸಿದರೆ ಮಾತ್ರ ಅದು ಅವಮಾನ, ಆದರೆ ಯಾರು ಎಷ್ಟಕ್ಕೆ ಹರಾಜಾದರು ಎಂಬ celebration ನಲ್ಲಿ ಮುಳುಗಿರುವ ಆಟಗಾರರಿಗೆ ಅವಮಾನವಾಗಿದೆಯೆಂದು ಅಕ್ಷರ ಅವರು ನಿರ್ಧರಿಸುತ್ತಾರೆ. ಇದು ಕುತರ್ಕವೇ ಸರಿ. IPL ಹರಾಜನ್ನು ಅಕ್ಷರ ಅವರ ನೆಲೆಯಲ್ಲಿಯೇ ವಿರೋಧಿಸುವವ ನಾನು. talent ಅನ್ನು ಹರಾಜು ಹಾಕುವುದು ಪ್ರಾಚೀನ ರೋಮನ್ ವಿಕಾರದ ಪಳೆಯುಳಿಕೆಯೂ ಇಂದಿನ ಜಾಗತೀಕರಣದ ಎಲ್ಲವನ್ನೂ quanitify ಮಾಡಿ ಅದಕ್ಕೊಂದು price tag ನೇತು ಹಾಕುವ ಕಬಂಧ ಬಾಹು ಎಂಬುದನ್ನು ನಾನು ಬಲ್ಲೆ.

ಆದರೆ `ಅವಮಾನಿತನ’ ಅರಿವು ಎಂಬುದನ್ನು ಹಿಡಿದು ipl ಮತ್ತು ಎಂಜಲೆಲೆಯ ಮಡೆಸ್ನಾನವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಆ ಮುಖೇನ ಮಡೆಸ್ನಾನದಂತಹ ಬ್ರಾಹ್ಮಣತ್ವದ ದಮನಿಕೆಯನ್ನು ಸಮರ್ಥಿಸುವುದಿದೆಯಲ್ಲ, ಅದು ಸರ್ವಥಾ ಖಂಡನೀಯ. ಅದ್ಯಾವ ಚಿಕಿತ್ಸೆ? ಯಾವ ಆಚರಣೆ? ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ಹೊರಳಾಡುವುದು ಶ್ರೇಷ್ಠ ಎಂಬುದು ಜೀವ ವಿರೋಧಿ ಚಿಂತನೆಯೇ. ಅದು ಸರ್ವಥಾ ಖಂಡನೀಯ. ಇಡೀ ಲೇಖನ ಒಂದು ಕುತರ್ಕದಿಂದ ಕೂಡಿದುದೆ ಆಗಿದೆ. an attempt to re-inforce the status quo by a rabid ಕುತರ್ಕ born out of either the brahminical mindset involuntarily or worse still an intentional attempt to mislead the readers to believe in the ಕುತರ್ಕ catered in the article, which would amount to intellectual corruption.

ಈ ಲೇಖನದ ಮನಸ್ಥಿತಿಯ ಸುತ್ತಲೂ ಇಂಥದೊಂದು ಚರ್ಚೆಯನ್ನು ಹುಟ್ಟು ಹಾಕಿದ ಅವಧಿಗೆ ಕೃತಜ್ಞತೆಗಳು.

-ಆದಿತ್ಯ ಭಾರದ್ವಾಜ್

ಬಿಳಿಮಲೆ ಮತ್ತು ಜೋಗಿ

ಇದು ‘ಜುಗಾರಿ ಕ್ರಾಸ್’ ಅಂಕಣ. ಚರ್ಚೆಗೆ ವೇದಿಕೆ.

ಪ್ರಜಾವಾಣಿ ‘ಸಾಪ್ತಾಹಿಕ ಪುರವಣಿ’ಯಲ್ಲಿ ಕೆ ವಿ ಅಕ್ಷರ ಅವರ  ‘ಹರಕೆ ಹರಾಜು’ ಲೇಖನ ಪ್ರಕಟವಾಗಿತ್ತು. ಆ ಲೇಖನ ಇಲ್ಲಿದೆ. ಅಕ್ಷರ ಬರೆದಿರುವ ಈ ಲೇಖನ ಯಾವ ದಿಕ್ಕಿನಲ್ಲಿದೆ ಎಂದು ಆಶ್ಚರ್ಯವಾಗುತ್ತಿದೆ. ಮಡೆ ಸ್ನಾನದಂತಹ ಆಚರಣೆಯನ್ನೂ, ಕ್ರಿಕೆಟ್ ಆಟಗಾರರ ಹರಾಜನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡಲಾಗಿದೆ.

ಈ ಲೇಖನದೆಅ ಬಗ್ಗೆ ಪುರುಷೋತ್ತಮ ಬಿಳಿಮಲೆ ಹಾಗೂ ಜೋಗಿ ವಿಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಅಕ್ಷರ ಅವರ ಲೇಖನದ ಬಗ್ಗೆಯೂ, ಬಿಳಿಮಲೆ, ಜೋಗಿ ಅಭಿಪ್ರಾಯದ ಬಗ್ಗೆಯೂ ನಿಮ್ಮ ಅಭಿಪ್ರಾಯ ಕಳಿಸಿ

ಅಕ್ಷರ ಅವರ ಲೇಖನ ಓದಿ ತುಂಬಾ ನಿರಾಶೆಯಾಯಿತು. ‘ಹರಾಜಿನ ಸುದ್ದಿಗೆ ಹೋಲಿಸಿದರೆ, ಹರಕೆಯ ಸುದ್ದಿಯು ಅದು ಸಂಭವಿಸಿದ ಭೌಗೋಲಿಕ ಸ್ಥಳದ ದೃಷ್ಟಿಯಿಂದಲೇ ಆಗಲಿ, ಅಥವಾ ಅದರ ಪರಿಣಾಮದ ವ್ಯಾಪ್ತಿಯಲ್ಲೇ ಆಗಲಿ, ಅಥವಾ ಈ ವ್ಯವಹಾರದ ಹಿಂದೆ ಅಡಗಿರುವ ಹಣದ ಪ್ರಮಾಣದಿಂದಲೇ ಆಗಲಿ ಅಷ್ಟು ಮುಖ್ಯವಲ್ಲದ್ದೆಂಬಂತೆ ಕಾಣುತ್ತದೆ.’ ಎಂಬ ಅವರ ಮಾತುಗಳು ಆಘಾತಕಾರಿಯಾಗಿದೆ. ಅವಮಾನವನ್ನು ಕೇವಲ ಬೌದ್ಧಿಕ ಅಹಂಕಾರದಲ್ಲಿ ವಿವರಿಸುವ ಮತ್ತು ಗ್ರಹಿಸುವ ಈ ಬಗೆಯ ಬರೆಹ, ಮಾನವನ ಘನತೆಯನ್ನು ಹಣದ ಮೂಲಕ ವಿವರಿಸುವ ಮಿತಿಗೆ ಒಳಪಟ್ಟಿದೆ. ಇದು ಪ್ರತಿಗಾಮಿ ಪರಂಪರೆಯನ್ನು ನಾಜೂಕಾಗಿ ಸಂರಕ್ಷಿಸುವ ಹೊಸ ವಿಧಾನ. ಬತ್ತಲೆ ಸೇವೆ ನಿಂತು ಹೋದಂತೆ ಎಂಜಲು ಎಲೆಯಮೇಲೆ ಹೊರಳುವುದು ನಿಲ್ಲಬೇಕು.

-ಪುರುಷೋತ್ತಮ  ಬಿಳಿಮಲೆ

++

ಅಕ್ಷರ ಅನಿಸಿಕೆ ಇಷ್ಟವಾಯಿತು.

ಇವತ್ತು ಯಾವುದು ಮೂಢನಂಬಿಕೆ, ಯಾವುದು ಅವಮಾನ, ಯಾವುದು ಶ್ರೇಷ್ಠ ಅನ್ನುವುದನ್ನು ನಿರ್ಧಾರ ಮಾಡುವುದು ಪತ್ರಿಕೆಗಳು ಮತ್ತು ಚಾನಲ್ಲುಗಳು. ಮೀಡಿಯಾಕ್ಕೆ ಆ ಹಕ್ಕು ಕೊಟ್ಟವರು ಯಾರು? ಮೀಡಿಯದಲ್ಲಾದರೂ ಅಂಥ ನಿರ್ಧಾರ ಕೈಗೊಳ್ಳಬಹುದಾದ ಸ್ವೋಪಜ್ಞರು ಇದ್ದಾರಾ? ಇದು ಕಂದಾಚಾರ, ಇದು ಅಂಧಶ್ರದ್ಧೆ, ಇದು ಮೌಢ್ಯ ಎಂದು ಒದರಿ ಅವೂ ಕೂಡ ಸುಮ್ಮನಾಗುತ್ತವೆ. ಮೀಡಿಯಾಗಳಿಗೆ ಅವು ಆ ಕ್ಷಣಕ್ಕೊಂದು ಸುದ್ದಿ ಮಾತ್ರ.

ಒಂದು ಆಚರಣೆಯನ್ನು ಎಷ್ಟು ಮಂದಿ ಎಷ್ಟು ವರ್ಷದಿಂದ ಮಾಡುತ್ತಾ ಬಂದಿದ್ದಾರೆ. ಅವರಿಗೆ ಅದರಿಂದ ಯಾವ ಪ್ರಯೋಜನ ಆಗಿದೆ. ಮಾನಸಿನ ನೆಮ್ಮದಿ ಎಷ್ಟು ಸಿಕ್ಕಿದೆ, ದೈಹಿಕವಾಗಿ ಅನುಕೂಲ ಏನೇನಾಗಿದೆ. ನಿಜಕ್ಕೂ ಅದರಿಂದ ಉಪಯೋಗ ಇದೆಯಾ ಅನ್ನುವುದನ್ನು ಮನೋವಿಜ್ಞಾನಿಗಳೂ, ವಿಜ್ಞಾನಿಗಳೂ, ಸಮಾಜಶಾಸ್ತ್ರಜ್ಞರೂ ಸೇರಿಕೊಂಡು ಅಧ್ಯಯನನ ನಡೆಸಿ ತೀರ್ಮಾನಿಸಬೇಕು. ಅಂಥ ಪ್ರಯತ್ನ ಎಲ್ಲಿ ನಡೆಯುತ್ತಿದೆ.

ಮೊನ್ನೆ ಯಾವುದೋ ಚಾನಲ್ಲಿನಲ್ಲಿ ಉತ್ತರ ಕರ್ನಾಟಕದ ಯಾವುದೋ ಹಳ್ಳಿಯ ಜಾತ್ರೆಯಲ್ಲಿ ಮಗುವನ್ನು ಅಷ್ಟೆತ್ತರದಿಂದ ಕೆಳಗೆಸೆಯುವ ಆಚರಣೆ ಪ್ರಸಾರವಾಗುತ್ತಿತ್ತು. ವೈದ್ಯರೊಬ್ಬರು ಮಕ್ಕಳನ್ನು ಅಷ್ಟು ಎತ್ತರದಿಂದ ಎಸೆಯುವುದು ಅಪಾಯಕಾರಿ ಎಂದು ಹೇಳಿಕೆ ಕೊಡುತ್ತಿದ್ದರು. ಅದರ ಪರಿಣಾಮಗಳ ಬಗ್ಗೆ ಅವರಿಗ ಗೊತ್ತಿತ್ತೇ, ಎಷ್ಟೋ ವರ್ಷಗಳಿಂದ ನಡೆಯುತ್ತಿರುವ ಆಚರಣೆ ಅದು. ಐವತ್ತು ವರ್ಷದ ಹಿಂದೆ ಹಾಗೆ ಎಸೆಯಲ್ಪಟ್ಟವರು ಯಾರು, ಅವರು ಹೇಗಿದ್ದಾರೆ. ಅವರ ಮೇಲೆ ಅದರಿಂದ ಯಾವ ದುಷ್ಪರಿಣಾಮ ಆಗಿದೆ ಅನ್ನೋದನ್ನು ಅಧ್ಯಯನ ಮಾಡುತ್ತೀರಾ.. ಇಲ್ಲ, ಹೋಗಲಿ ಈ ವರ್ಷ ಮೇಲಿಂದ ಕೆಳಗೆ ಎಸೆಯದ ಒಂದೇ ಒಂದು ಮಗು ಮುಂದಿನ ಒಂದು ವರ್ಷದಲ್ಲಿ ಏನೇನೋ ಸಮಸ್ಯೆ ಎದುರಿಸಿತು ಎಂದು ಫಾಲೋ ಅಪ್ ಮಾಡಿದ್ದೀರಾ. ಅದೂ ಇಲ್ಲ. ಆ ಕ್ಷಣದ ತೆವಲಿಗ ಆಚರಣೆಗಳು ಮತ್ತು ಸಂಪ್ರದಾಯಗಳು ಬಲಿಯಾಗುತ್ತಿವೆ.

ನಾವು ಏನು ಮಾಡಬೇಕು, ಯಾವುದು ಮೌಢ್ಯ, ಯಾವುದು ಸತ್ಯಂಪ್ರದಾಯ, ನಾನು ಹೇಗೆ ನಡೆದುಕೊಳ್ಳಬೇಕು, ಯಾರನ್ನು ಪೂಜಸಬೇಕು ಅನ್ನುವುದನ್ನು ಮೀಡಿಯಾ ನಿರ್ಧಾರ ಮಾಡುವಂತಾಗಿರುವುದು ಇಂದಿನ ಮುಖ್ಯ ಸಮಸ್ಸೆ. ಇದರಿಂದಾಗಿ ಪ್ರತಿಯೊಂದೂ ಮೀಡಿಯಾವನ್ನು ಓಲೈಸುವ ಕ್ರಿಯೆಯಷ್ಟೇ ಆಗಿಬಿಟ್ಟಿದೆ. ಚಿಂತನೆಯಲ್ಲಾಗಲೀ, ಕ್ರಿಯೆಯಲ್ಲಾಗಲೀ ಒರಿಜಿನಾಲಿಟಿ ಕಾಣಿಸದು.

ನನಗೆ ಪತ್ರಿಕೆ ಬೇಕಾಗಿರುವುದು ಸುದ್ದಿಗೆ ಮಾತ್ರ. ನನ್ನನ್ನು ತಿದ್ದುವುದಕ್ಕೋ ಬುದ್ಧಿವಂತನನ್ನಾಗಿ ಮಾಡುವುದಕ್ಕೋ ಅಲ್ಲ. ಈಗಿನ ಪತ್ರಿಕರ್ತರು, ಅದರಲ್ಲೂ ಇಂಗ್ಲಿಷ್ ಪತ್ರಕರ್ತರು ತಾವು ಸರ್ವಜ್ಞರು ಅಂದುಕೊಂಡಂತಿದೆ. ಆದರೆ, ನಾವು ಪತ್ರಕರ್ತರು ನೆನಪಿಬೇಕಾದ ಸಂಗತಿಯೊಂದಿದೆ. ಚರಿತ್ರೆಯಲ್ಲಿ ದಾಖಲಾಗುವುದು ಕ್ರಿಯೆಯೇ ಹೊರತು, ಮಾತಲ್ಲ. ಮಹಾತ್ಮ ಗಾಂಧಿ ದಂಡಿ ಮಾರ್ಚ್ ಮಾಡಿದ್ದಷ್ಟೇ ಮುಖ್ಯ ಅದನ್ನು ಯಾರು ವರದಿ ಮಾಡಿದರು ಅನ್ನುವುದಲ್ಲ.

ಜೋಗಿ

ಅಕ್ಷರ ಎಡವಟ್ಟು

ಇದು ‘ಜುಗಾರಿ ಕ್ರಾಸ್’ ಅಂಕಣ. ಚರ್ಚೆಗೆ ವೇದಿಕೆ.

ಪ್ರಜಾವಾಣಿ ‘ಸಾಪ್ತಾಹಿಕ ಪುರವಣಿ’ಯಲ್ಲಿ ಕೆ ವಿ ಅಕ್ಷರ ಅವರ  ‘ಹರಕೆ ಹರಾಜು’ ಲೇಖನ ಪ್ರಕಟವಾಗಿತ್ತು. ಆ ಲೇಖನ ಇಲ್ಲಿದೆ. ಅಕ್ಷರ ಬರೆದಿರುವ ಈ ಲೇಖನ ಯಾವ ದಿಕ್ಕಿನಲ್ಲಿದೆ ಎಂದು ಆಶ್ಚರ್ಯವಾಗುತ್ತಿದೆ. ಮಡೆ ಸ್ನಾನದಂತಹ ಆಚರಣೆಯನ್ನೂ, ಕ್ರಿಕೆಟ್ ಆಟಗಾರರ ಹರಾಜನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡಲಾಗಿದೆ.

ಈ ಲೇಖನ ಓದಿ ಅನಿವಾಸಿ ಸುದರ್ಶನ್ ಆಸ್ಟ್ರೇಲಿಯಾದಿಂದ ಪ್ರತಿಕ್ರಿಯಿಸಿದ್ದಾರೆ.

ಅಕ್ಷರ ಅವರ ಲೇಖನದ ಬಗ್ಗೆಯೂ, ಅನಿವಾಸಿ ಅಭಿಪ್ರಾಯದ ಬಗ್ಗೆಯೂ ನಿಮ್ಮ ಅಭಿಪ್ರಾಯ ಕಳಿಸಿ

ಅಕ್ಷರ ಕೆ.ವಿ ಮಾನಾವಮಾನದ ಹಂದರದಲ್ಲಿ ಮಡೆಸ್ನಾನ ಹಾಗು ಐಪಿಲ್ ಆಟಗಾರರ ಹರಾಜನ್ನು ನೋಡಿರುವುದು ಭಿನ್ನವಾಗಿದೆ. ಆ ಭಿನ್ನತೆಯನ್ನು ಮೀರಿ ನೋಡಿದರೆ ಕೆಲವು ಎಡವಟ್ಟುಗಳು ಕಾಣುತ್ತವೆ.

೧. ಮಡೆಸ್ನಾನವಾಗಲೀ, ಐಪಿಲ್ ಹರಾಜಾಗಲಿ “ಅವಮಾನ”ದ ಚೌಕಟ್ಟಿನಲ್ಲಿಟ್ಟು ನೋಡುವುದಕ್ಕಿಂತ ಬೇರೆಯಾಗಿ ನೋಡಿದರೆ ಹೆಚ್ಚು ಅರ್ಥಪೂರ್ಣವಾಗುತ್ತದೆ ಅನಿಸುತ್ತದೆ. ಇದಕ್ಕೆ ಕೆಲವು ಕಾರಣಗಳನ್ನು ಕೊಡುತ್ತೇನೆ. ಅದಕ್ಕಿಂತ ಮೊದಲು ಸ್ಪಷ್ಟಪಡಿಸಬೇಕಾದುದು: ಅವೆರಡನ್ನೂ “ಅವಮಾನ”ದ ತಕ್ಕಡಿಯಲ್ಲಿಟ್ಟು ನೋಡಿದರೆ ಅವಕ್ಕಿರುವ ಇನ್ನುಳಿದ ಮುಖ್ಯವಾದ ಆಯಾಮಗಳು ತಪ್ಪಿಹೋಗಬಾರದೆನ್ನುವ ಇಚ್ಛೆ ಅಷ್ಟೆ.

೨. ಮಡೆಸ್ನಾನವನ್ನು “ಅವಮಾನ”ವಾಗಿ ನೋಡುವ ವಿಚಾರವಂತರು, ಐಪಿಎಲ್ ಹರಾಜನ್ನು ನೋಡುವುದಿಲ್ಲ ಎಂಬುದು ಅಕ್ಷರರವರ ಅಂಬೋಣವಷ್ಟೆ. ಅವರು ಅವೆರಡನ್ನೂ ಒಟ್ಟಿಗೆ ನೋಡಿದ ಮಾತ್ರಕ್ಕೆ ಎಲ್ಲ ವಿಚಾರವಂತರೂ ಹಾಗೆಯೇ ನೋಡಿ, ಐಪಿಎಲ್ ಹರಾಜನ್ನು “ಅವಮಾನ”ವೋ ಅಲ್ಲವೋ ಎಂದು ಪರಿಗಣಿಸಬೇಕಿಲ್ಲ ಅಲ್ಲವೆ? ಅಲ್ಲದೆ, ಎಲ್ಲ ವಿಚಾರವಂತರೂ ಹಾಗೆ ಮಾಡುತ್ತಾರೆ ಎಂದು ನನಗೆ ಅನಿಸುವುದಿಲ್ಲ. ಎರಡನ್ನೂ “ಅವಮಾನ”ಕರವಾಗಿ ನೋಡುವ ಹಲವು ಮಂದಿ ಇದ್ದಾರೆ (ಹಾಗೆ ನೋಡುವುದು ಸರಿಯೋ ತಪ್ಪೋ). ನನಗೆ ಕೆಲವರು ವಯ್ಯಕ್ತಿಕವಾಗಿ ಗೊತ್ತಿದ್ದಾರೆ. ಅವರು ಪತ್ರಿಕೆ/ಟಿವಿಯಲ್ಲಿ ಬರೆದಿಲ್ಲ/ಬಂದಿಲ್ಲ ಎಂದ ಮಾತ್ರಕ್ಕೆ ಅಂತಹವರು ಇಲ್ಲ ಎಂದು ಪರಿಗಣಿಸುವುದು ಸರಿಯೆ? ಟಿವಿ/ಪತ್ರಿಕೆಯಲ್ಲಿ ಬರೆಯುವವರು ಮಾತ್ರ ವಿಚಾರವಂತರೆನಿಸಿಕೊಳ್ಳುತ್ತಾರೆಯೆ? (ಅಥವಾ ಅಕ್ಷರರು ಬರೇ ಟಿವಿ ವಿಚಾರವಂತರನ್ನು ಗುರಿಯಾಗಿಟ್ಟುಕೊಂಡಿದ್ದಾರೆಯೆ? ಅದು ಸಾಧುವೆ?)

೩. ಮಡೆಸ್ನಾನವನ್ನು “ಅವಮಾನ”ಕರ ಅನಿಸಲು ಅದು ‘ಮಧ್ಯಯುಗದ ಭಾರತದ ಅನಾಗರಿಕ ಮನಃಸ್ಥಿತಿಯು ಇನ್ನೂ ಮುಂದುವರೆಯುತ್ತಿರುವ ಸಂಕೇತ’ ಎಂಬುದೇ ಕಾರಣವಾಗಬೇಕಾಗಿಲ್ಲ. ಬದಲಾಗಿ ಮಧ್ಯಯುಗದ ಹಲವು ಮನಃಸ್ಥಿತಿಗಳನ್ನು ಮನುಷ್ಯ ತನಗೆ ಉಪಯೋಗವಾಗುತ್ತದೆ ಎನ್ನುವ ಕಾರಣಕ್ಕೆ ಉಳಿಸಿಕೊಂಡೂ ಇದ್ದಾನೆ. ಅದನ್ನು ನೀವು ಕಾನೂನು, ವ್ಯವಾಹರ ಹಾಗು ಕಲೆಗಳಲ್ಲಿ ಇಂದಿಗೂ ನೋಡಬಹುದು. ನಮ್ಮ ಆಧ್ಯಾತ್ಮದ ಹಲವು ಸಂಗತಿಗಳು ಅಂತಹ ಒಂದು ಪಳೆಯುಳಿಕೆಯೇ. ಅದನ್ನು ಪಕ್ಕಕ್ಕಿಟ್ಟು Rationality ಹಾಗು ಸಮಾನತೆಯ ಹಂದರದಲ್ಲಿ ಮಡೆಸ್ನಾನವನ್ನು ಖಂಡಿತವಾಗಿಯೂ ಅವಲೋಕಿಸಬಹುದು. (ಬಹುಶಃ ಅಕ್ಷರರಿಗೆ ಅದು ಗೌಣ ಅನಿಸಿರಬಹುದು) Rationality – ಮಡೆಸ್ನಾನ ಚರ್ಮರೋಗ ನಿವಾರಕ ಎಂಬ ತಿಳುವಳಿಕೆಯನ್ನು ಪ್ರಶ್ನಿಸುತ್ತದೆ. ನಮಗೆ ತಿಳಿದಿರುವ ಎಲ್ಲ ಮಡೆಸ್ನಾನಗಳಲ್ಲೂ “ಬ್ರಾಹ್ಮಣರ ಎಂಜಲೆಲೆಯ ಮೇಲೇ ಉರುಳಾಡುತ್ತಾರೆಂಬ” ಅಸಮಾನತೆ ಅಕ್ಷರರನ್ನು ಕಾಡಿಯೇ ಇಲ್ಲ ಎನ್ನುವುದು ಆಶ್ಚರ್ಯ. ಹಾಗಾಗಿಯೇ ಮಡೆಸ್ನಾನವನ್ನು ಮೂರನೆಯವರ “ಅವಮಾನ”ದ ಮೂಲಕ ಪರೀಕ್ಷಿಸುತ್ತಿದ್ದಾರೇನೋ ಅಥವಾ ‘ಅವಮಾನ’ವನ್ನು ಈ ಎರಡು ಬಿಂದುವಿನ ನಡುವೆ ಚಿತ್ರಿಸಲು ಹವಣಿಸುತ್ತಿದ್ದಾರೇನೋ. “ಅವಮಾನ” ಎಂಬುದನ್ನು ಸುಲಭದಲ್ಲಿ define ಮಾಡಲಾಗದ್ದು ಎಂಬುದು ಅವರ ಮಾತಿನಲ್ಲೇ ತಿಳಿಯುತ್ತದೆ ಕೂಡ. ಹಾಗಾಗಿಯೇ ಅದೊಂದು ಪಲಾಯನವಾದೀಯ ನಿಲುವಿರಬಹುದೆ ಎನಿಸುತ್ತದೆ?

ಇನ್ನಷ್ಟು

Previous Older Entries

%d bloggers like this: