ಜಿ ಪಿ ಬಸವರಾಜು ಪ್ರಶ್ನೆ: ಯಾವುದು ರಾಜಕೀಯ ಅನನ್ಯತೆ?

 

-ಜಿ.ಪಿ.ಬಸವರಾಜು

ಏನನ್ನೇ ಬಲಿಕೊಟ್ಟರೂ ಸರಿ, ಕುಚರ್ಿಯನ್ನು ಬಿಡಲೇ ಕೂಡದೆಂಬ ಹಟದಲ್ಲಿ ರಾಜ್ಯದ ಮತ್ತು ರಾಷ್ಟ್ರದ ಎಲ್ಲ ದೇವಾಲಯಗಳಿಗೂ ಅಂಡಲೆದ ಮುಖ್ಯಮಂತ್ರಿ ಯಡಿಯೂರಪ್ಪನವರ (ಈ ಹೆಸರನ್ನು ಹ್ಯಾಗೆ ಬರೆಯಬೇಕೆಂಬುದನ್ನು ವ್ಯಾಕರಣ ಪಂಡಿತರಾಗಲಿ, ಭಾಷಾತಜ್ಞರಾಗಲಿ ಹೇಳುವಂತಿಲ್ಲ; ಅದನ್ನು ಜ್ಯೋತಿಷಿಗಳು ನಿರ್ಧರಿಸುತ್ತಾರೆ.) ರಾಜಕಾರಣವನ್ನು ಕನರ್ಾಟಕದ ರಾಜಕೀಯ ಅನನ್ಯತೆ ಎಂದು ಕರೆಯೋಣವೇ? ಅಧಿಕಾರದಿಂದ ಹೊರಗಿದ್ದಾಗ ಮಾತ್ರ ಮೌಲ್ಯಗಳು(ಮಾತಿನಲ್ಲಿ), ಅಧಿಕಾರಕ್ಕೆ ಬಂದ ಮೇಲೆ ಕುಚರ್ಿಯೇ ಬಹುದೊಡ್ಡ ಮೌಲ್ಯ ಎನ್ನುವ ಬಿಜೆಪಿಯ ರಾಜಕಾರಣವನ್ನು ಕನರ್ಾಟಕದ ರಾಜಕೀಯ ಅನನ್ಯತೆ ಎಂದು ಹೇಳಬಹುದೇ? ಅಥವಾ ಹಣಬಲದಿಂದ ಶಾಸಕರನ್ನು, ಜನಪ್ರತಿನಿಧಿಗಳನ್ನು ಕೊಂಡುಕೊಳ್ಳುವ ಪ್ರಜಾಪ್ರಭುತ್ವ ವಿರೋಧೀ ಕೃತ್ಯಕ್ಕೆ ‘ಆಪರೇಷನ್ ಕಮಲ’ ಎಂದು ಕರೆದ ಬಿಜೆಪಿಯ ಲಜ್ಜೆಗೇಡಿತನದ ರಾಜಕಾರಣವೇ ಕನರ್ಾಟಕದ ರಾಜಕೀಯ ಅನನ್ಯತೆಯೇ?

ಹಿಂದುತ್ವ ಎಂದರೆ ಸಾಮರಸ್ಯ ಬದುಕಿಗೆ ಬೆಂಕಿಹಚ್ಚುವುದು ಎಂದು ಭಾವಿಸಿರುವ ಪರಿವಾರದ ರಾಜಕಾರಣವೇ ಕನರ್ಾಟಕದ ರಾಜಕೀಯ ಅನನ್ಯತೆಯೇ? ಮಠಗಳು, ಧರ್ಮಕೇಂದ್ರಗಳು ಎಂದು ಹೇಳಿಕೊಳ್ಳುತ್ತ ಧರ್ಮದ ಮುಸುಕಿನಲ್ಲಿ ಜಾತಿ ರಾಜಕಾರಣವನ್ನು ನಡೆಸುತ್ತಿರುವ ಇಂಥ ಸಂಸ್ಥೆಗಳ ವಿದ್ಯಮಾನವೇ ಕನರ್ಾಟಕದ ರಾಜಕೀಯ ಅನನ್ಯತೆಯಾಗುತ್ತದೆಯೇ? ಭೂಮಿಯನ್ನು, ಖನಿಜ ಸಂಪತ್ತನ್ನು ಕೊಳ್ಳೆ ಹೊಡೆಯುವ ಕನರ್ಾಟಕದ ಪಕ್ಷಾತೀತ ರಾಜಕಾರಣವನ್ನೇ ಕನರ್ಾಟಕದ ರಾಜಕೀಯ ಅನನ್ಯತೆ ಎಂದು ಕರೆಯೋಣವೇ? ಶ್ರೀಸಾಮಾನ್ಯನ ಅಪಾರ ಅನುಭವವನ್ನು ತನ್ನೊಡಲಲ್ಲಿಟ್ಟುಕೊಂಡು, ತನ್ನ ಕುಟುಂಬದ ಆಚೆಗೆ ನೋಡಲಾಗದಂಥ ಕುರುಡಿನಲ್ಲಿ ತೊಳಲುತ್ತಿರುವ ದೇವೇಗೌಡರ ‘ಜಾತ್ಯತೀತ'(!) ರಾಜಕಾರಣವನ್ನು ಕನರ್ಾಟಕದ ರಾಜಕೀಯ ಅನನ್ಯತೆ ಎಂದು ಹೇಳಬಹುದೇ? ತಾನೂ ಒಬ್ಬ ಸಮರ್ಥ ನಾಯಕ ಎಂಬುದನ್ನೇ ಮರೆತು ಪಕ್ಷದಿಂದ ಪಕ್ಷಕ್ಕೆ ಹಾರುತ್ತ ಎಲ್ಲಿಯೂ ಕಾಲೂರಲಾಗದ ಸ್ಥಿತಿಯಲ್ಲಿರುವ ಮಾಜಿ ಸಮಾಜವಾದಿ ಬಂಗಾರಪ್ಪನವರ ರಾಜಕೀಯವನ್ನು ಕನರ್ಾಟಕದ ರಾಜಕೀಯ ಅನನ್ಯತೆ ಎಂದರೆ ಹೇಗೆ? ಕಾಂಗ್ರೆಸ್ ಪಕ್ಷವನ್ನು ಸಮರ್ಥ ವಿರೋಧ ಪಕ್ಷವಾಗಿ ಕನರ್ಾಟಕದಲ್ಲಿ ಕಟ್ಟಲಾಗದೆ ಕೇಂದ್ರ ಸಂಪುಟದಲ್ಲಿ ಮುಖ ಮರೆಸಿಕೊಂಡಿರುವ ಕನರ್ಾಟಕದ ಸಚಿವರ ಕಾರ್ಯವೈಖರಿಯನ್ನು ಕನರ್ಾಟಕದ ರಾಜಕೀಯ ಅನನ್ಯತೆ ಎಂದು ವ್ಯಾಖ್ಯಾನಿಸೋಣವೇ?

ಇನ್ನಷ್ಟು

%d bloggers like this: