ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಅದ್ಯಾಕೋ ಗೊತ್ತಿಲ್ಲ ಫೆಬ್ರವರಿ ಹದಿನಾಲ್ಕಕ್ಕೆ ಇರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲವೇನು ಅನ್ನಿಸುವಂತೆ ಒಂದು ಬಗೆಯ ವಾತಾವರಣ ಕಲ್ಪಿತವಾಗುತ್ತದೆ. ಪ್ರಾಯಶ: ಪ್ರೀತಿಯ ಬಗ್ಗೆ ಇರುವಂತಹ ಆಹ್ಲಾದಕರ ಭಾವ ಇಂತಹ ಚೈತನ್ಯ-ಖುಷಿಯನ್ನು ಉಂಟು ಮಾಡುತ್ತದೆ ಎಂದು ಕಾಣುತ್ತದೆ.ಆದ್ರೆ ಪಾಪ ಹೃದಯ ಪಡಕೊಂಡವರಷ್ಟೇ ಮುರುಕೊಂಡವರ ಸಂಖ್ಯೆಯು ಇಂದು ಕಾಣುತ್ತೆ.

ಈ ಒಂದು ದಿನ ಇದೆ ಅಂತ ಸಾಮಾನ್ಯರಿಗೆ ಗೊತ್ತೇ ಇರಲಿಲ್ಲ, ಅಂತಹ ವಿಷಯ ಗೊತ್ತು ಮಾಡಿದ್ದು ನಮ್ಮ ವಾಹಿನಿಗಳು. ಅದರಲ್ಲೂ ದೃಶ್ಯ ಮಾಧ್ಯಮಗಳು ಒಂದೊಂದಾಗಿ ಯಾವಾಗ ಜನಸೇವೆಗೆ ನಿಲ್ತೋ ಆಗ ಶುರು ಆಯ್ತು ನೋಡಿ ಪ್ರೇಮಕ್ಕೊಂದು ಸುಗ್ಗಿ ಕಾಲ.ಇಂತಹ ದಿನ ಇದೆ, ಇದು ಹಿಂಗೆ ಅನ್ನುವ ಸಂಗತಿ ಬ್ಯಾಡ ಅನ್ನುವಷ್ಟು ಪ್ರಸಾರ ಮಾಡಿ ಬಿಡುತ್ತದೆ ವಾಹಿನಿಗಳು. ಆ ಮೂಲಕ ಸಂತ ವ್ಯಾಲೆಂಟೈನ್ ನೆನಪನ್ನು ಅಜರಾಮರ ಮಾಡಿದ್ದೇವೆ

ಪೂರ್ಣ ಓದಿಗೆ- ಮೀಡಿಯಾ ಮೈಂಡ್

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ.

ಅವರು ತಾವು ಕಂಡಿರುವ ಅಥವಾ ಭಾಗವಹಿಸಿರುವ ಎಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಎಂದಿಗೂ ಗಿರೀಶ್ ಕಾರ್ನಾಡ್ ಅವರನ್ನು ಕಂಡೆ ಇಲ್ಲ, ಅದೇ ರೀತಿ ಇತರ ಸಾಹಿತ್ಯ ಮಿತ್ರರ ಅನ್ವಯ ಭೈರಪ್ಪನವರು ಕನಕಪುರದ ಅಧ್ಯಕ್ಷತೆಯಲ್ಲಿ ಕಂಡವರು ಅದಕ್ಕೆ ಮುನ್ನ ಆಮೇಲೆ ಉಹುಂ!ಇಂತಹ ಮಾತುಗಳನ್ನು ಕೇಳಿದಾಗ ಬೇಸರ ಅನ್ನಿಸುತ್ತದೆ. ಸಾಹಿತ್ಯ-ಅಕ್ಷರ ಲೋಕ ಅತ್ಯಂತ ಪ್ರಭಾವಶಾಲಿಯಾದ ಮಾಧ್ಯಮ. ಅದು ಎಲ್ಲಾ ಮಾಧ್ಯಮಗಳ ತಾಯಿಬೇರು. ತಾವು ಓದಿದ ಲೇಖಕರನ್ನು ಕಣ್ಣಾರೆ ಕಾಣುವ ಆಸೆಯಿಂದ ಬಂದಿರುವವರು ಹಲವರು . ಆ ಆಸೆಯನ್ನು ಹೊಂದಿರುವ ಆರಾಧಕ ಮನಗಳು , ಸಾಹಿತಿಗಳನ್ನು ಬೆಳೆಸಿದ ಓದುಗ ದೊರೆಗಳು ಪ್ರೀತಿಯಿಂದ ಸೇರುವ ಇಂತಹ ಮಹೋನ್ನತ ಸ್ಥಳದಲ್ಲಿ ಸಾಹಿತ್ಯಲೋಕದ ಅನೇಕ ದಿಗ್ಗಜರು ಬರದೆ ಇರುವುದು ಅತ್ಯಂತ ನೋವಿನ ಸಂಗತಿ ಅಂದ್ರು ಓದುಗದೊರೆಯೊಬ್ಬರು

ಪೂರ್ಣ ಓದಿಗೆ- ಮೀಡಿಯಾ ಮೈಂಡ್

 

ನಮ್ಮ ಹರೆಯದ ಗಂಡುಹಾರ್ಟುಗಳು ವಿಲವಿಲ!

ನಮ್ಮ ಹಿರಿಯ ಕಲಾವಿದರಾದ ಉಮೇಶ್, ದತ್ತಣ್ಣ, ಹಿರಿಯ ಪತ್ರಕರ್ತೆ ವಿಜಯಮ್ಮ, ನಿರ್ದೇಶಕ-ನಟ ರವಿ…ಇವರುಗಳ ಮನೆಯಲ್ಲಿ ಮನೆಕೆಲಸ ಮಾಡುವ ಒಂದು ಸ್ಪರ್ಧೆ. ಆ ಪರಿ ಮೆಡಿಕ್ಯೂರ್- ಪೆಡಿಕ್ಯೂರ್ ಮಾಡಿಸಿಕೊಂಡು, ಸಿ0ಗಾರವಾಗಿ ಬಂದ ಬಂಗಾರಿಗಳು ಕಸ ಗುಡಿಸುವ ಕೆಲಸ ಮನೆ ಒರೆಸುವ ಅಯ್ಯೋ ಪಾಪವೇ ಅನ್ನಿಸುವಂತಾಯಿತು.

ಹಿರಿಯ ಕಲಾವಿದರಾದ ದತ್ತಣ್ಣ, ರವಿ, ಉಮೇಶ್ ಸಿಕ್ಕಿದ ಚಾನ್ಸ್ ಚೆನ್ನಾಗಿ ಬಳಸಿಕೊಂಡು ಆ ಹುಡುಗಿಯರನ್ನು ರೇಗಿ ಕೆಲಸ ಮಾಡಿಸಿ ಕೊಂಡರು.ವೀಕ್ಷಕರಿಗೆ ಮಜ ಸಿಕ್ತು .

ಸ್ವಲ್ಪ ವಿಚಿತ್ರ ಎಂದು ಅನ್ನಿಸಿದರು ಇಲ್ಲಿ ಮೂಲ ಉದ್ದೇಶ ಸಹನೆ. ಅದು ಎಷ್ಟರ ಮಟ್ಟಿಗೆ ಆ ಹೆಣ್ಣು ಮಕ್ಕಳಲ್ಲಿ ಇದೆ ಎಂದು ಕಂಡು ಹಿಡಿಯುವ ಪ್ರಯತ್ನ. ಯಾಕೋ ಆ ಹೆಣ್ಣುಮಕ್ಕಳನ್ನು ಕಂಡಾಗ ಪಾಪವೇ ಕಸಮುಸರೆ ಕಮಲಿಗಳೇ ಎಂದು ವೀಕ್ಷಿಸುವಂತಾಯಿತು.

ನಮ್ಮ ಹರೆಯದ ಗಂಡುಹಾರ್ಟುಗಳು ವಿಲವಿಲ !

ಪೂರ್ಣ ಓದಿಗೆ –ಮೀಡಿಯಾ ಮೈಂಡ್

ನಕ್ರ ಬಕ್ರ: ಹಾಸ್ಯದ ಹೆಸರಲ್ಲಿ ತೊಂದರೆ ಮಾಡಬೇಡಿ!

ಇತ್ತೀಚೆಗೆ ನಾನು ಕಸ್ತೂರಿ ವಾಹಿನಿಯಲ್ಲಿ ಇತ್ತೀಚೆಗೆ ನಕ್ರ ಬಕ್ರ -2 ಕಾರ್ಯಕ್ರಮ ವೀಕ್ಷಿಸಿದೆ. ಒಂದು ಸಂಗತಿ ಮನಕ್ಕೆ ಬೇಸರ ಅನ್ನಿಸಿತು. ನಿಜ ಇದರಲ್ಲಿ ಗೊತ್ತಿಲ್ಲದೇ ವ್ಯಕ್ತಿಗಳನ್ನು ಬಕರ ಮಾಡುವು ಷೋ..! ಛಬ್ಬಿಸ್ ಜನವರಿಯಂದು ಒಬ್ಬಾತನಿಗೆ ಬಕ್ರ ಮಾಡಿದ್ರು ಆತ ತುಂಬಾ ಮಾನಸಿಕವಾಗಿ ದಣಿದು ಹೋದರು.. ನೇರವಾಗಿ ಹೇಳ ಬೇಕು ಅಂತ ಅಂದ್ರೆ ಹೆದರಿಕೆಯಿಂದ.

ಆ ಮುಖದಲ್ಲಿದ್ದ ಆತಂಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುವಂತೆ ಇತ್ತು. ಭದ್ರ ಕಣ್ರೀ ನೀವು ಏನೋ ಮಾಡಲು ಹೋಗಿ ಮತ್ತೇನೋ ಆದೀತು. ಮನುಷ್ಯನ ದೇಹದ ಸ್ಥಿತಿಯ ಬಗ್ಗೆ ಹೇಳುವ ಹಾಗಿಲ್ಲ.ನೀವು ಆಟ ಆಡಿಸಿ ಪ್ರೈಸ್ ಕೊಟ್ಟು ಬಿಟ್ರೆ ಆ ಕ್ಷಣದಲ್ಲಿ ಆತನ ದೈಹಿಕ -ಮಾನಸಿಕಸ್ಥಿತಿಯ ಮೇಲೆ ಉಂಟಾದ ಪರಿಣಾಮಗಳು ಸರಿಯಾಗಲು ನಿಮಿಷಗಳಲ್ಲ, ಗಂಟೆಗಳೇ ಬೇಕಾಗುತ್ತದೆ. ಹಾಸ್ಯದ ಹೆಸರಿನಲ್ಲಿ ಜೀವಗಳಿಗೆ ತೊಂದರೆ ಮಾಡ ಬೇಡಿ !

ಪೂರ್ಣ ಓದಿಗೆ- ಮೀಡಿಯಾ ಮೈಂಡ್

ಬಹಳ ಡೇಂಜರ್, ಡಾನ್ ಗಳಿಗಿಂತ -ರಾಜಕಾರಣಿಗಳಿಗಿಂತ!

ಭವಿಷ್ಯ ಹೇಗಿದೆ ಎಂದು ತಿಳಿಯುವುದು ಯಾರಿಗೆ ಇಷ್ಟ ಇಲ್ಲ. ನಾಳೆ ಎನ್ನುವ ಸಂಗತಿಯ ಬಗ್ಗೆ ಎಲ್ಲರಿಗು ಕುತೂಹಲ ಇದ್ದೆ ಇದೆ. ಅಂತಹ ಕುತೂಹಲವೂ ಅಮಾಯಕರ ಜೀವನದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿರುತ್ತದೆ.ಆದರೆ ಇದನ್ನೇ ಕ್ಯಾಶ್ ಮಾಡಿ ಕೊಳ್ಳುವ ಧೂರ್ತರು ಸಿಕ್ಕಾಪಟ್ಟೆ ಈ ಸಮಾಜದಲಿ ಇದ್ದಾರೆ. ನಯನತಾರ, ಮೀರಾ ಜಾಸ್ಮಿನ್ ಫೋಟೋಗಳನ್ನು ತೆಗೆದು ಅವರ ಮುಂದೆ ಇಟ್ಟು ಈ ಹುಡುಗಿ ನನ್ನ ಮಾವನ ಮಗಳು -ಪ್ರೀತಿಸಿದವಳು ಎಂದು ಹೇಳಿ ಆ ಭವಿಷ್ಯ ಹೇಳುವವರು ನೀಡುವ ತಪ್ಪು ಮಾಹಿತಿಯನ್ನು ಸಮಸ್ತ ವೀಕ್ಷಕರ ಮುಂದೆ ಅವರ ಬಣ್ಣ ಬಯಲು ಮಾಡಿತು ಟೀಮ್ .

ಉತ್ತಮ ಮಾಹಿತಿ. ಸಾಕಷ್ಟು ಅಮಾಯಕರ ಬದುಕಿನ ಜೊತೆ ಆಟ ಆಡುವ ಇಂತಹವರು ಸಿಕ್ಕಾಪಟ್ಟೆ ಇದ್ದಾರೆ .ಪ್ರಕಾಶ್ -ರಾಮ್ ಪತ್ರಕರ್ತರು ಈ ಸಾಹಸಕ್ಕೆ ಕೈಹಾಕಿದ್ದು… ಒಳ್ಳೆಯ ಕಾರ್ಯಕ್ರಮ. ಸಾಹಸ ಎಂದು ನಾನು ಯಾಕೆ ಹೇಳಿದ್ದು ಅಂದ್ರೆ ಇಂತಹ ಢೋಂಗಿ ಭವಿಷ್ಯ ಹೇಳುವವರು ಬಹಳ ಡೇಂಜರ್, ಡಾನ್ ಗಳಿಗಿಂತ -ರಾಜಕಾರಣಿಗಳಿಗಿಂತ!

ಪೂರ್ಣ ಓದಿಗೆ- ಮೀಡಿಯಾ ಮೈಂಡ್

ನಾನು, ನನ್ ಲವ್ ಸ್ಟೋರಿ

ಯಾವ ವಿಷಯ ಇರಬಹುದು? ಹೇಗೆ ಕಾರ್ಯಕ್ರಮ ಆರಂಭಿಸ ಬಹುದು ಎನ್ನುವ ಬಗ್ಗೆ ಕೆಲವು ಕಾರ್ಯಕ್ರಮಗಳ ಬಗ್ಗೆ ಸಣ್ಣ ಕುತೂಹಲ ಇದ್ದೆ ಇರುತ್ತದೆ .ಅಂತಹುದೇ ಕುತೂಹಲ ಸಮಯ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ನಾನು ನನ್ ಲವ್ ಸ್ಟ್ರೋರಿ ಕಾರ್ಯಕ್ರಮದ ಬಗ್ಗೆ ಇತ್ತು. ಗುಡ್ ಬಿಗಿನಿಂಗ್ ಯ 🙂 ತುಂಬಾ ಖುಷಿ ಕೊಟ್ಟ ಕಾರ್ಯಕ್ರಮ ಅದು.

ಹಿರಿಯ ಸಾಹಿತಿ ದಂಪತಿಗಳಾದ ಹಂಪನ ಹಾಗೂ ಕಮಲ ಹಂಪನ ಅವರ ಬಾಳ ಪಯಣದ-ಪ್ರೇಮ ಕಥೆಯ ಬಗೆಗಿನ ಪಕ್ಷಿನೋಟ ಅದ್ಭುತ ವಾವ್ !ಸರಳ ಮನದ ಬುದ್ಧಿವಂತ ಹೆಣ್ಣುಮಗಳು . ಆಕೆಯ ಮಾತು ದಾರಿದೀಪದಂತೆ ಇತ್ತೇ ವಿನಃ ಟೈಪಾಸ್ ಕಡಲೆಪುರಿಯಂತೆ ಇರಲಿಲ್ಲ.

ಅಂತರ್ಜಾತೀಯ ವಿವಾಹ ಅಂದ್ರೆ ಈಗಲೇ ಕಷ್ಟವು ಕಾಮನ್. ದುಡ್ಡಿನವರು ಆದ್ರೆ ಓಕೆ ನಡೀತದೆ, ಅದು ಬಿಟ್ರೆ ಆ ದಂಪತಿಗಳು ತ್ರಿಶಂಕು ಸ್ವರ್ಗ ಅನುಭವಸುವ ಸ್ಥಿತಿ .ಇಲ್ಲ ಹಾಗೇನು ಇಲ್ಲ ಎಂದು ಹೇಳುವ ಮಂದಿ ಇದ್ದಾರೆ.ಕೆಲವು ಕಷ್ಟಗಳು ಕಣ್ಣಾರೆ ಕಂಡಿದ್ದೇನೆ. ಆ ಒಂದು ಆಧಾರದ ಅನ್ವಯ ಈ ಮಾತುಗಳನ್ನು ಟೆಲ್ಲಿಂಗ್ ಅಷ್ಟೆ 🙂

ಪೂರ್ಣ ಓದಿಗೆ- ಮೀಡಿಯಾ ಮೈಂಡ್

ನಾಗರಾಜ್ ಕೋಟೆ ಹಾಸ್ಯಗವನ ನನಗೆ ತುಂಬಾನೆ ಇಷ್ಟ..

ಈಟೀವಿ ಕನ್ನಡ ವಾಹಿನಿಯಲ್ಲಿ ವಾವ್ ! ಕಾರ್ಯಕ್ರಮದಲ್ಲಿ ವಿಶೇಷ ಅನ್ನಿಸಿದ್ದು ಹಾಸ್ಯ ಕಲಾವಿದರ ಹಾಗೆನ್ನುವುದಕ್ಕಿಂತ ಮನೋಲ್ಲಾಸ ಹೆಚ್ಚಿಸುವ ಕಲಾವಿದರ ಕಾರ್ಯಕ್ರಮ. ನಾಗರಾಜ ಕೋಟೆ, ಮಿಮಿಕ್ರಿ ಪ್ರೊಫೆಸರ್ ದಯಾನಂದ್ ಕಾರ್ಯಕ್ರಮ ವಾವ್ ಅನ್ನುವಂತೆ ಇತ್ತು. ಮುಖ್ಯವಾಗಿ ಸಾಮಾನ್ಯವಾಗಿ ನಾಗರಾಜ್ ಕೋಟೆ ಅವರ ಹಾಸ್ಯ ಹನಿಗವನ ನನಗೆ ತುಂಬಾನೆ ಇಷ್ಟ. ಅವರು ಎಫೆಮ್ ಒಂದರಲ್ಲಿ ಮಾಡುವ ಪಟೇಲನ ಜೋಕ್ ಸಿಕ್ಕಾಪಟ್ಟೆ ಖುಷಿ ಕೊಡುತ್ತದೆ. ಅಂತಹುದೇ ಹಾಸ್ಯದ ಖುಷಿ ಸಾಯಿ ಕುಮಾರ್ ಅವರ ಕಾರ್ಯಕ್ರಮದಲ್ಲಿ ಹಂಚಿದರು. ಕೋಟೆಯವರ ಮಾತಿನ ಶೈಲಿ ಕಂಡು ಸಾಯಿ ಎಮಿಟೇಮಿಟೊ ಎಂದು ಮೌನವಾಗಿ ಎಂಜಾಯ್ ಮಾಡಿದರು 🙂

ಮಿಮಿಕ್ರಿ ದಯಾನಂದ್ ಮಾತಾಡದೆ ಮೌನವಾಗಿ ಅವರು ಆಂಗಿಕ ಶೈಲಿಯಿಂದ ಹಿರಿಯ ಕಲಾವಿದರ ಸ್ಟೈಲ್ಸ್ ತೋರಿದರು. ಡಯಲಾಗ್ ಹೇಳುವುದರಿಂದ ಎಲ್ಲರಿಗೂ ಆ ಕಲಾವಿದರ ಬಗ್ಗೆ ಚೆನ್ನಾಗಿ ತಿಳಿಯುತ್ತದೆ. ಆದರೆ ಇವರು ಕೇವಲ ಬಾಡಿ ಲಾಂಗ್ವೇಜ್ ಮೂಲಕ ಈ ಪರಿ ಪ್ರತಿಭೆ ತೋರಿದರೆ ಸಾಯಿ ಮಾತ್ರವಲ್ಲ ಸಮಸ್ತ ವೀಕ್ಷಕ ಪ್ರಭುಗಳು ಖುಷಿ ಪಡ್ತಾರೆ ಸಚ್ಚಿ 🙂

ಪೂರ್ಣ ಓದಿಗೆ- ಮೀಡಿಯಾ ಮೈಂಡ್

ಪ್ರೀತಿ ಲೂಸ ಲೈಲ ಲೂಸ ಮಜನು ಲೂಸ..??

ಅಪ್ಪ ಲೂಸ ಅಮ್ಮ ಲೂಸ ಪ್ರೀತಿ ಲೂಸ ಲೈಲ ಲೂಸ ಮಜನು ಲೂಸ ಹಿಸ್ಟ್ರಿ ಲೂಸ…. ಅದು ಸರಿ ಅದು ಸರಿ :-)…! ಈಗ ಹೆಚ್ಚು ಪ್ರಚಲಿತದಲ್ಲಿ ಇರುವ ಪ್ರೇಮಗೀತೆ . ಒಲವೆ ಜೀವನ ಸಾಕ್ಷಾತ್ಕಾರ ಎಂದು ಯಾರು ಹೇಳುವ ಅಗತ್ಯ ಇಲ್ಲ ಮನದಲ್ಲಿ ಇದ್ದಿದ್ದು ನೇರವಾಗಿ ಒಗೆದು ಬಿಡ್ತಾರೆ ಈಗಿನ ಪ್ರೇಮಿಗಳು.

ಅಯ್ಯೋ ಏನ್ರೀ ಈ ಕಥೆ ನಮ್ಮ ಕನ್ನಡ ಚಾನಲ್ ಗಳದ್ದು 🙂 ಎಲ್ಲಿ ನೋಡಿದ್ರೂ ಪ್ರೇಮಮಯ . ಫೆಬ್ರವರಿ ಹತ್ರ ಬಂದ0ಗೆ ಎಲ್ಲಾ ಚಾನೆಲ್ ನವರು ರೋಮಾಂಚಿತರಾಗಿ ಬಿಡ್ತಾರೆ. ಎಲ್ಲೋ ತನ್ನ ಪಾಡಿಗೆ ಇರುವ ಎಲ್ಲಾ ಹೆಣ್ಣು ಮಕ್ಕಳ ಅಣ್ಣ ಪ್ರಮೋದ್ ಮುತಾಲಿಕ್ ಅವರನ್ನು ಬಡಿದೆಬ್ಬಿಸುವ ಕೆಲ್ಸದಲ್ಲಿ ಸದಾ ನಿರತರಾಗಿ ಇರ್ತಾರೆ. ಪ್ರೇಮ ಗಾಳಿ, ಆ ಬಿಸಿ, ಆ ಕಥೆ ಎಲ್ಲವೂ ಕೇವಲ ಜನವರಿ ಅರ್ಧ ತಿಂಗಳಿಂದ ಶುರು ಆಗಿ ಫೆಬ್ರವರಿ ಅಂತ್ಯದಲ್ಲಿ ಟಾಟಾ ಬೈ ಬೈ 🙂

ಜಯಮಾಲ ಮ್ಯಾಡಂಗೆ ಶಾನೆ ಕ್ವಾಪ ಬರುತ್ತೆ ಅಷ್ಟೆ..!

ಯಾಕೆಂದ್ರೆ ಅಯ್ಯಪ್ಪನ ಫೋಟೋ ಸಹ ಹೆಣ್ಣುಮಕ್ಕಳು ನೋಡ ಬಾರದು ಎನ್ನುವ ಮನೆಗಳು- ಭಕ್ತರು ಇರುವ ಈ ಕಾಲದಲ್ಲಿ ಹೀಗೆ ಜಯಮಾಲ……! ಯಪ್ಪಾ! ಆದರೂ ಏನೆ ಹೇಳಿ ಪಾಪ ಅಯ್ಯಪ್ಪ ಅನ್ನುವ ಕಥೆ ಆರಂಭ ಆಗಿದೆ. ಈಗ ವಿಳಕ್ಕು ಬಗ್ಗೆಯೂ ಚರ್ಚೆ ಶುರು ಆಗಿದೆ ಅಂದ್ರೆ ಅದಕ್ಕಿಂತ ಬೇಸರದ ಸಂಗತಿ ಇಲ್ಲ.

ಪೂರ್ಣ ಓದಿಗೆ- ಮೀಡಿಯಾ ಮೈಂಡ್

 

‘ಸುವರ್ಣ’ದಲ್ಲಿ ತಿಮ್ಮಕ್ಕಜ್ಜಿ

ನಿನ್ನೆ ಸುವರ್ಣ ನ್ಯೂಸ್ನಲ್ಲಿ ಸಾಲು ಮರದ ತಿಮ್ಮಕ್ಕಜ್ಜಿ ಅವರ ಜೊತೆ ರಂಗನಾಥ್ ಸರ್ ಹಾಗೂ ಗೌರೀಶ್ ಅಕ್ಕಿ ಮಾತಾಡಿದರು. ತಮ್ಮ ಊರಲ್ಲಿ ಹೆರಿಗೆ ಆಸ್ಪತ್ರೆ ಕಟ್ಟಬೇಕು ಎಂದು ಸತ್ಯಾಗ್ರಹಕ್ಕೆ ಕುಳಿತು ಭಾಗಶ: ಗೆದ್ದ ತಿಮ್ಮಕಜ್ಜಿಯನ್ನು ಪ್ರಶ್ನೆ ಕೇಳುತ್ತಿದ್ದರು. ಅಜ್ಜಿ ತನಗೆ ತೋಚಿದ ಉತ್ತರ ಹೇಳ್ತಾ ಇದ್ರು. ಅಲ್ಲ ಅಜ್ಜಿ ಈ ವಯಸ್ಸಿನಲ್ಲಿ ಇದೇನು ನಿನ್ನ ಸಾಹಸ ಎನ್ನುವ ಅರ್ಥ ಬರುವ ಪ್ರಶ್ನೆ ಹಾಕಿದರು ರಂಗ ಸರ್ . ಆಗ ಅಜ್ಜಿ ಸತ್ತ ಮೇಲೂ ಹೆಸರು ಉಳಿ ಬೇಕಲ್ವ ಅಂದ್ರು ಎಲ್ಲರು ಅದಕ್ಕೆ ಹೀಗೆ ಮಾಡಿದೆ ಎಂದು ಉತ್ತರ ನೀಡಿದರು :-). ಹೆರಿಗೆ ಆಸ್ಪತ್ರೆ ನಮ್ಮೂರಾಗೆ ಬೇಕೇ ಬೇಕು ಎಂದು ಹಟಕ್ಕೆ ಕೂತ ಅಜ್ಜಿಯ ಈ ಶಕ್ತಿ ಬಗ್ಗೆ ಖುಷಿಪಟ್ಟು ರಂಗ ಮಾಷ್ಟ್ರು ಕೇಳಿದ ಪ್ರಶ್ನೆ ಇದು. ಒಟ್ಟಾರೆ ಆಕೆ ಹೇಳಿದ ಉತ್ತರಗಳು ಮನಸೋಲ್ಲಾಸ ಹೆಚ್ಚಿಸಿತು…!

ಪೂರ್ಣ ಓದಿಗೆ- ಮೀಡಿಯಾ ಮೈಂಡ್

Previous Older Entries

%d bloggers like this: