ರವೀಂದ್ರ ಮಾವಖಂಡ ಕಲೆಕ್ಷನ್: ಕಾಯ್ಕಿಣಿ ಮತ್ತು ಕಾಯ್ಕಿಣಿ
07 ಫೆಬ್ರ 2011 1 ಟಿಪ್ಪಣಿ
in ಚಿನ್ನದ ಪುಟಗಳಿಂದ, ಝೂಮ್, ಬುಕ್ ಬಝಾರ್
ಫೈಲ್ ಬುಕ್
08 ಜನ 2011 ನಿಮ್ಮ ಟಿಪ್ಪಣಿ ಬರೆಯಿರಿ
ಚಿ ಶ್ರೀನಿವಾಸರಾಜು ಅವರು ನಡೆಸುತ್ತಿದ್ದ ಕ್ರೈಸ್ಟ್ ಕಾಲೇಜು ಕನ್ನಡ ಸಂಘದ ಸ್ಪರ್ಧೆಗಳು ಕನ್ನಡ ಸಾಹಿತ್ಯವನ್ನು ಹೊಸ ಹಸಿರಿನಿಂದ ನಳನಳಿಸುವಂತೆ ಮಾಡಿದೆ. ಆ ಸಂಭ್ರಮ ಹೇಗಿರುತ್ತಿತ್ತು ಎಂಬುದಕ್ಕೆ ಇಲ್ಲಿ ಒಂದು ಉದಾಹರಣೆ.
ಈಗ ಕನ್ನಡಪ್ರಭದ ತುಮಕೂರು ವರದಿಗಾರರಾಗಿರುವ ಉಗಮ ಶ್ರೀನಿವಾಸ್ ತಮ್ಮ ಕವಿತೆಗಾಗಿ ಬಿ ಸಿ ರಾಮಚಂದ್ರ ಶರ್ಮ ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವುದು
ನಿಮ್ಮಲ್ಲೂ ಹಳೆ ಕಥೆ ಹೇಳುವ ಏನಾದರೂ ಅಪರೂಪದ ಫೋಟೋಗಳಿದ್ದರೆ ಕಳಿಸಿಕೊಡಿ-avadhimag@gmail.com
ಕುವೆಂಪು ಉವಾಚ..
29 ಡಿಸೆ 2010 3 ಟಿಪ್ಪಣಿಗಳು
ಸುಳ್ಳಿನ ಮಾಲೆಯ ಕೊರಳಿಗೆ ಸೂಡಿ
ಕಳ್ಳನೊಬ್ಬನನು ಗುರುವನು ಮಾಡಿ
ಬಡವರ ಹೊನ್ನನು ಕಾಣಿಕೆ ನೀಡಿ
ಧರ್ಮವ ಮೆರೆವರ ನೋಡಯ್ಯ!
(ಬಿ ಆರ್ ಸತ್ಯನಾರಾಯಣರ ಬ್ಲಾಗ್ ನಿಂದ)
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
(ವಿವೇಕ ರೈ ಅವರ ಬ್ಲಾಗ್ ನಿಂದ)
ಹತ್ತಾರು ಹುಚ್ಚರಿರೆ ಹುಚ್ಚನಲ್ಲದ ನರನು ಹುಚ್ಚಾಗಿ ತೋರುವನು
(ಪುರುಷೋತ್ತಮ ಬಿಳಿಮಲೆ ಅವರು ನೀಡಿದ್ದು)
ಶ್ರೀಕೃಷ್ಣ ಆಲನಹಳ್ಳಿ ಬಗ್ಗೆ ವಿವೇಕ ಶಾನಭಾಗ
30 ನವೆಂ 2010 ನಿಮ್ಮ ಟಿಪ್ಪಣಿ ಬರೆಯಿರಿ
in ಚಿನ್ನದ ಪುಟಗಳಿಂದ, ಬುಕ್ ಬಝಾರ್
ಶ್ರೀಕೃಷ್ಣ ಆಲನಹಳ್ಳಿ ವಾಚಿಕೆ ಗೆ ಅದರ ಸಂಪಾದಕ
ವಿವೇಕ ಶಾನಭಾಗ ಬರೆದ ಮಾತು ಇಲ್ಲಿದೆ
ಪುಸ್ತಕದ ಮುಖಪುಟ ವಿನ್ಯಾಸ: ಅಪಾರ
–
ನಮ್ಮ ಮಹತ್ವದ ಲೇಖಕರ ಮರು ಓದು ನಮ್ಮ ಗ್ರಹಿಕೆಗಳನ್ನು ಮರುಪರಿಶೀಲಿಸಲಿಕ್ಕೆ ಅನುವು ಮಾಡಿಕೊಡುತ್ತದೆ. ಅಂತೆಯೇ ಇಂಥ ಕೃತಿಗಳನ್ನು ಆಗಾಗ ಚಚರ್ೆಯ ಮುಂಚೂಣಿಗೆ ತರುವುದು ಸಾಹಿತ್ಯ ವಾತಾವರಣದ ಒಟ್ಟಾರೆಯಾದ ಆರೋಗ್ಯಕ್ಕೆ ಕೂಡ ಬಹಳ ಅಗತ್ಯವೆಂದು ಈಗ, ಆಲನಹಳ್ಳಿಯವರ ಎಲ್ಲ ಕೃತಿಗಳನ್ನು ಮತ್ತೊಮ್ಮೆ ಓದುವ ಈ ಸಂದರ್ಭದಲ್ಲಿ ನನಗೆ ಪದೇಪದೇ ಅನಿಸಿತು. ಶ್ರೀಕೃಷ್ಣ ಆಲನಹಳ್ಳಿಯವರನ್ನು ನಾನು ಮೊದಲ ಬಾರಿಗೆ ಓದುವ ಸಮಯದಲ್ಲಿ ಅವರು ಕನ್ನಡದ ಪ್ರಸಿದ್ಧ ಲೇಖಕರಾಗಿದ್ದರು. ಅವರ ಕಾಡು ಮತ್ತು ಗೆಂಡೆತಿಮ್ಮ ಚಲನಚಿತ್ರಗಳಾಗಿ ಯಶಸ್ಸನ್ನು ಪಡೆದಿದ್ದವು. ಅವರ ಸಾಹಿತ್ಯದ ಕುರಿತ ಚಚರ್ೆ ನಡೆಯುತ್ತಿದ್ದ ದಿನಗಳವು. ಹಾಗಾಗಿ ನನ್ನ ಆ ಮೊದಲನೆಯ ಓದು ಆಗ ಚಚರ್ೆಯಲ್ಲಿದ್ದ ಹಲವು ಸಂಗತಿಗಳಿಂದ ಪ್ರಭಾವಿತವಾಗಿತ್ತು. ಈಗ ಕಾಲದಲ್ಲಿ ದೂರ ನಿಂತು, ನಮ್ಮ ಸಾಹಿತ್ಯ ಮತ್ತು ಸಮಾಜ ಈವರೆಗೆ ಹಾದು ಬಂದ ದಾರಿಯನ್ನೂ ಗಮನದಲ್ಲಿಟ್ಟುಕೊಂಡು ನೋಡಿದಾಗ ಕೃಷ್ಣರ ಬರವಣಿಗೆಯು ಹೊಸ ಬೆಳಕಿನಲ್ಲಿ ಕಾಣತೊಡಗಿತು. ಈ ವಾಚಿಕೆಯ ಬರಹಗಳನ್ನು ಆರಿಸುವಾಗ ನಾನು ಈವತ್ತಿನ ಕಣ್ಣಿನಿಂದ ಕೃಷ್ಣರ ಬರವಣಿಗೆಯನ್ನು ನೋಡಲು ಪ್ರಯತ್ನಿಸಿದ್ದೇನೆ. ಇಂದಿನ ಹೊಸ ಓದುಗರಿಗೆ ಕೃಷ್ಣರ ಸಾಹಿತ್ಯದ ಒಂದು ನೋಟ ಕೊಡುವುದು ಹಾಗೂ ಅದರಲ್ಲಿ ಆಸಕ್ತಿ ಹುಟ್ಟಿಸುವುದು ನನ್ನ ಮುಖ್ಯ ಉದ್ದೇಶ.
ಆಧುನಿಕತೆಯ ಮೂಲಕ ಪ್ರಕಟವಾಗುವ ನಾಗರೀಕತೆಯ ಕೆಲವು ಅನಿವಾರ್ಯತೆಗಳು, ಮನುಷ್ಯನ ಮುಗ್ಧತೆ ಮತ್ತು ನೈತಿಕತೆಗಳ ನಡುವಿನ ಸೂಕ್ಷ್ಮ ಸಂಬಂಧ – ಇವೆರಡೂ ಕೃಷ್ಣರನ್ನು ಆಳವಾಗಿ ಕಾಡಿದ ವಸ್ತುಗಳು. ಅವರ ಗದ್ಯಬರಹಗಳಲ್ಲಿ, ಅದರಲ್ಲೂ ಮುಖ್ಯವಾಗಿ ಕಾದಂಬರಿಗಳಲ್ಲಿ ಇವು ಪದೇಪದೇ ಮುನ್ನೆಲೆಗೆ ಬರುತ್ತವೆ. ಅಭಿವೃದ್ಧಿಯ ಕುರಿತ ನಮ್ಮ ವಿಚಾರಗಳನ್ನೇ ನಾವು ಪರೀಕ್ಷೆಗೊಳಪಡಿಸುವ ಅಗತ್ಯವಿರುವ ಇಂದಿನ ದಿನಗಳಲ್ಲಿ ಈ ವಸ್ತುಗಳು ಅತ್ಯಂತ ಪ್ರಸ್ತುತವಾಗಿ ಕಾಣುವುದು ಸಹಜವಾಗಿದೆ. ಸಮುದಾಯಗಳು ತಮ್ಮ ಉಳಿವಿಗಾಗಿ ನಂಬಿಕೆ, ಶ್ರದ್ಧೆ ಮತ್ತು ನಿಯಮಗಳನ್ನು ರೂಪಿಸಿಕೊಳ್ಳುವುದನ್ನು ಮತ್ತು ಇಂಥ ವ್ಯವಸ್ಥೆಯ ಒಡಲಿನಿಂದಲೇ ಅವುಗಳನ್ನು ಪ್ರಶ್ನಿಸುವ, ಮೀರುವ ಶಕ್ತಿಗಳು ಹುಟ್ಟುವ ಪ್ರಕ್ರಿಯೆಯನ್ನು ಕೃಷ್ಣ ತಮ್ಮ ಕಾದಂಬರಿಗಳಲ್ಲಿ ಬಹಳ ಸೂಕ್ಷ್ಮಜ್ಞತೆಯಿಂದ ಚಿತ್ರಿಸಿದ್ದಾರೆ. ಬದಲಾವಣೆಯೆಂಬುದು ಮನುಷ್ಯನ ಒಳಗಿನದೇ, ಅಥವಾ ಹೊರಗಿನಿಂದ ಬಂದು ಅಪ್ಪಳಿಸುವುದೇ ಎಂಬ ಪ್ರಶ್ನೆಗಳನ್ನೆತ್ತಿಕೊಂಡು ಇದರ ಹಿಂದಿರುವ ವ್ಯಕ್ತಿಕೇಂದ್ರಿತ ತುಡಿತಗಳನ್ನೂ ಪರೀಕ್ಷಿಸಿದ್ದಾರೆ. ಪೇಟೆಯ ಯಾವುದೋ ಒಂದು ವಸ್ತುವೋ, ಆಚಾರವೋ ಇನ್ನೊಂದೋ ಬಂದು ಹಳ್ಳಿಗಳನ್ನು ಕಲಕುವುದಿಲ್ಲ; ಬದಲಿಗೆ ಬದಲಾವಣೆಗೆ ತುಡಿಯುವ ಮನಸ್ಸುಗಳಿಗೆ ಅವೆಲ್ಲ ವೇಗವರ್ಧಕವಾಗುತ್ತವೆ ಎಂಬುದು ಅವರ ಬರಹಗಳಲ್ಲಿ ಸೂಚಿತವಾಗಿದೆ. ಹಾಗಾಗಿ ಯಾವುದೇ ಬದಲಾವಣೆಯನ್ನು ಚಿತ್ರಿಸುವಾಗ ಕೃಷ್ಣ ಯಾರೊಬ್ಬರ ಪರವಾಗಿಯೋ ವಿರೋಧವಾಗಿಯೋ ನಿಂತು ಎಲ್ಲವನ್ನೂ ನೋಡುತ್ತಿದ್ದಾರೆ ಅನಿಸುವುದಿಲ್ಲ. ಇದು ಅವರ ಗದ್ಯ ಬರಹಗಳಲ್ಲಿ, ಮುಖ್ಯವಾಗಿ ಕಾದಂಬರಿಗಳಲ್ಲಿ, ಕಂಡುಬರುವ ನಿಲುವು. ಇದು ಅತ್ಯುತ್ತಮವಾಗಿ ಸಾಧ್ಯವಾಗಿರುವುದು `ಪರಸಂಗದ ಗೆಂಡೆತಿಮ್ಮ ಕಾದಂಬರಿಯಲ್ಲಿ. ಈ ಕೃತಿ ಅವರ ಬರವಣಿಗೆಯ ಅತ್ಯುತ್ತಮ ಮಾದರಿಯೆಂದು ನನಗೆ ತೋರುತ್ತದೆ.
ಕನ್ನಡ ಸಾಹಿತ್ಯದಲ್ಲಿ ನವ್ಯ ಮತ್ತು ಬಂಡಾಯ ಎರಡೂ ಚಳುವಳಿಗಳು ಉತ್ತುಂಗದಲ್ಲಿರುವಾಗಲೇ ಕೃಷ್ಣ ತಮ್ಮ ಬರವಣಿಗೆಯಲ್ಲಿ ಕ್ರಿಯಾಶೀಲವಾಗಿದ್ದರು ಮತ್ತು ತಮ್ಮ ಉತ್ತಮ ಕೃತಿಗಳನ್ನು ರಚಿಸಿದರು. ವೈಯಕ್ತಿಕವಾಗಿ ಎರಡೂ ಚಳುವಳಿಗಳ ಜೊತೆ ಅವರಿಗೆ ಗಾಢವಾದ ಸಂಪರ್ಕವಿತ್ತು. ಆದರೆ ಅವರ ಬರವಣಿಗೆ ಮಾತ್ರ ಈ ಯಾವೊಂದೂ ಚಳುವಳಿಯ ಪ್ರಾತಿನಿಧಿಕ ಗುಣಗಳನ್ನು ಪಡೆದಿರಲಿಲ್ಲ. ಸಾಹಿತ್ಯಕೃತಿಯೊಂದು ವೈಚಾರಿಕವಾದ ಅನುಭವವೂ ಕೂಡ ಆಗಿ ನಿಜವಾಗಬೇಕೆಂಬುದರತ್ತ ನವ್ಯದ ಮುಖ್ಯ ಬರಹಗಾರರು ದೃಷ್ಟಿ ಇಟ್ಟಿದ್ದರು. ಬರಿದೇ ಒಂದು ಕತೆಯನ್ನೋ ಕವಿತೆಯನ್ನೋ ಇಷ್ಟಪಟ್ಟರೆ ಸಾಲದು; ಯಾಕೆ ಇಷ್ಟವಾಯಿತು ಅನ್ನುವ ಪ್ರಶ್ನೆಯನ್ನು ಕೂಡ ಓದುಗ ಕೇಳಿಕೊಳ್ಳಬೇಕೆಂಬುದು ಆ ಕಾಲದ ಒಂದು ಸುಪ್ತ ಒತ್ತಾಯವಾಗಿದ್ದರಿಂದಲೇ, ಕೃತಿಯ ವೈಚಾರಿಕ ಅನುಭವದತ್ತ ವಿಮಶರ್ಾವಲಯ ಲಕ್ಷ್ಯ ಕೊಡತೊಡಗಿತು. ನಂತರದ ಬಂಡಾಯ ಚಳುವಳಿಯು ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಮುಖ್ಯವಾಗಿರಿಸಿಕೊಂಡಿದ್ದರಿಂದ, ಸಾಮಾಜಿಕ ಪ್ರಸ್ತುತತೆಯ ಪ್ರಶ್ನೆಗಳು ಸಾಹಿತ್ಯಕೃತಿಯ ವೈಚಾರಿಕ ಅನುಭವದ ಭಾಗವಾದವು. ಅಂದರೆ, ಬಂಡಾಯ ಚಳುವಳಿಯಿಂದಾಗಿ ಹೊಸ ಅನುಭವಲೋಕ, ಹೊಸ ಬಗೆಯ ಬರವಣಿಗೆ ಬರತೊಡಗಿತೇ ಹೊರತು ಮೂಲಭೂತವಾಗಿ ಸೃಜನಶೀಲ ಬರವಣಿಗೆಯನ್ನು ನೋಡುವ ಕ್ರಮ ನವ್ಯಕ್ಕಿಂತ ಬೇರೆಯಾಗಿರಲಿಲ್ಲ. ಆದರೆ ಕೃಷ್ಣ ಮಾತ್ರ ಇದರಿಂದ ಭಿನ್ನವಾಗಿ, ಎದೆಯಿಂದ ಎದೆಗೆ ಅನುಭವವನ್ನು ದಾಟಿಸುವಲ್ಲಿ ನಂಬಿಕೆಯಿಟ್ಟವರು. ಅನುಭವಗಳ ಅರ್ಥಶೋಧನೆಗಿಂತ ಹೆಚ್ಚಾಗಿ, ಬೌದ್ಧಿಕ ಠರಾವುಗಳನ್ನು ಕೃತಿಯಾಗಿಸುವುದಕ್ಕಿಂತ ಹೆಚ್ಚಾಗಿ ಅನುಭವಗಳನ್ನು ಅದರ ಸಂಪೂರ್ಣ, ಸಂಕೀರ್ಣ ಸ್ವರೂಪದಲ್ಲಿ ಓದುಗರಿಗೆ ದಾಟಿಸುವುದರತ್ತ ಅವರ ಲಕ್ಷ್ಯವಿದೆ. ವಿಶ್ಲೇಷಣೆಯ ಒತ್ತಾಯವನ್ನು ಅವರು ಓದುಗರ ಮೇಲೆ ಹೇರುವವರಲ್ಲ. ಈ ಗುಣದಿಂದಾಗಿ ಬಹುಶಃ ಅವರನ್ನು ನವ್ಯಕ್ಕಾಗಲೀ ಬಂಡಾಯಕ್ಕಾಗಲೀ ಪೂರ್ಣವಾಗಿ ಸೇರಿಸುವುದು ಸಾಧ್ಯವಾಗಲಿಲ್ಲ. ಆದರೆ ಸಾಹಿತ್ಯ ಸಲಕರಣೆಗಳ ಮಟ್ಟಿಗೆ ಹೇಳುವದಾದರೆ, ಅವರು ನವ್ಯಮಾರ್ಗದಿಂದ ಪ್ರಭಾವಿತರಾದರು ಹಾಗೂ ಎಲ್ಲ ಮುಖ್ಯಧಾರೆಗಳಿಂದಲೂ ತಮಗೆ ಅಗತ್ಯವಾದ ಕೌಶಲ್ಯವನ್ನು ಪಡೆದರು. ಆದ್ದರಿಂದಲೇ ವಾಸ್ತವವಾದಿ ಮಾರ್ಗವನ್ನು ತುಳಿದಾಗಲೂ ಅವರು ಭಾವೋದ್ವೇಗದ ಬರವಣಿಗೆಯನ್ನು ಮಾಡಲಿಲ್ಲ. ಹಳ್ಳಿಗಳ ಪ್ರಪಂಚವನ್ನು ಬಿಚ್ಚಿಟ್ಟಾಗಲೂ ಘೋಷಣೆಗಳ ನೆರಳಿನಲ್ಲಿ ನಿಲ್ಲಲಿಲ್ಲ. ಇದು ಅವರ ಎಲ್ಲ ಕಾದಂಬರಿಗಳ ಮಟ್ಟಿಗೆ ಹೇಳಬಹುದಾದ ಮಾತು. ಆದರೆ ಕೆಲವು ಕತೆಗಳಲ್ಲಿ ಮಾತ್ರ ಅವರು ವೈಚಾರಿಕ ಅನುಭವವನ್ನೂ ಸೃಷ್ಟಿಸಲು ಪ್ರಯತ್ನಿಸಿ ಸೋತಿದ್ದಾರೆ. ಆದ್ದರಿಂದ ಅದು ಅವರ ಚೇತನಕ್ಕೆ ಸಹಜವಾದುದಲ್ಲವೆಂದೇ ತೋರುತ್ತದೆ.
ನನ್ನೊಳಗೆ ‘ಭೂಮಿಗೀತ’ದ ನೆನಪು
18 ಮೇ 2010 1 ಟಿಪ್ಪಣಿ
in ಚಿನ್ನದ ಪುಟಗಳಿಂದ, ನೆನಪು
ಸಾಹಿತ್ಯ ಸಂಜೆಯಲಿ ಭೂಮಿಗೀತದ ನೆನಪು
-ಎನ್ ಮಂಗಳಾ
ಸಂಚಯ ಮತ್ತು ಸುಚಿತ್ರ ಫಿಲ್ಮ್ ಸೊಸೈಟಿಯವರು ನಡೆಸಿದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಅಡಿಗರ ‘ಭೂಮಿಗೀತ’ ಸಂಕಲನದ ಕವನಗಳ ವಾಚನ, ಅವುಗಳ ಬಗ್ಗೆ ಮಾತುಕತೆ ನಡೆಯಿತು. ಆ ಸಂಧರ್ಭದಲ್ಲಿ ನಾನು ಭೂಮಿಗೀತ ಪದ್ಯ ಓದುತ್ತಿದ್ದರೆ, ನನಗೆ ನಾವು ರಂಗಾಯಣದಲ್ಲಿ ನಾಟಕ ಮಾಡಿದ್ದರ ನೆನಪು ಒತ್ತಿ ಬರುತ್ತಿತ್ತು.
ನಿರ್ದೇಶಕರಾಗಿದ್ದ ಜಯತೀರ್ಥ ಜೋಶಿ ಪದ್ಯದ ಸಾಲುಗಳನ್ನು ನೀಡಿ ನಮ್ಮಿಂದ ಆಶುವಿಸ್ತರಣೆ ಮಾಡಿಸುತ್ತಿದ್ದರು. ಒಂದೇ ಸಾಲನ್ನು ಹಿಡಿದು ಮೂರು ನಾಲ್ಕು ಗುಂಪುಗಳು ಬೇರೆ ಬೇರೆಯಾಗಿ ದೃಶ್ಯೀಕರಿಸುತ್ತಿದ್ದೆವು. ನಂತರ ಎಲ್ಲರೂ ಮಾಡಿ ತೋರಿಸಿದ ಮೇಲೆ. ಅದನ್ನು ತಿದ್ದಿ ತೀಡಿ ಒಂದು ರೂಪಕ್ಕೆ ತಂದು ನಿಲ್ಲಿಸುತ್ತಿದ್ದ ರೀತಿ; ಜಿ.ಹೆಚ್.ನಾಯಕರು, ಕೀರಂ ನಾಗರಾಜ ಅವರುಗಳು ನಮಗೆ ಪದ್ಯ ಅರ್ಥೈಸಿಕೊಡುತ್ತಿದ್ದ ತರಗತಿಗಳು; ರಘುನಂದನರು ಅದರ ವಾಚನ ಕುರಿತಂತೆ ನಡೆಸುತ್ತಿದ್ದ ಅಭ್ಯಾಸಗಳು, ಎಲ್ಲವೂ ಸಾಲು ಸಾಲಾಗಿ ನೆನಪಿನ ಪದರುಗಳಿಂದ ಬಿಚ್ಚಿಕೊಳ್ಳಲಾರಂಭಿಸಿದವು.
ಸತತವಾಗಿ ಮೂರು ತಿಂಗಳ ಕಾಲ ಆ ಪದ್ಯದ ಮೇಲೆ ನಾವೆಲ್ಲರೂ ಕೆಲಸ ಮಾಡಿದ್ದೆವು. ಆ ನಾಟಕಕ್ಕೆಂದೇ ದ್ವಾರಕೀ ಸರ್ ಗುಂಡನೆ ಸ್ಟೇಜ್ ಕಟ್ಟಿದ್ದರು. ಹಿಂಬದಿಯಲ್ಲಿ ಕಬ್ಬಿಣದ ದೊಡ್ಡ ದೊಡ್ಡ ಆಕೃತಿಗಳನ್ನು ನಿಲ್ಲಿಸಿದ್ದರು. ಷೋ ದಿನವೂ ನಿಗದಿಯಾಯ್ತು. ಇನ್ನೇನು ಇವತ್ತೇ ಷೋ, ಬೆಳಗ್ಗೆ ರಿಹರ್ಸಲ್ ಮುಗಿಸಿ ಎಲ್ಲರೂ ಊಟಕ್ಕೆ ಹಾಸ್ಟೆಲ್ಗೆ ಹೋಗಿ, ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಸಂಜೆ ಮೂರು ಗಂಟೆಗೆ ಮತ್ತೆ ಸ್ಟೇಜ್ ಗೆ ಬಂದೆವು. ನಾಲ್ಕು ಗಂಟೆಗೆ ಶುರುವಾದ ಮಳೆ ನಿಂತಿದ್ದು ಸಂಜೆ ಆರಕ್ಕೋ ಏನೋ. ರಂಗಾಯಣದಲ್ಲಿ ಒಂದು ಪ್ರತೀತಿ ಇದೆ. ಹೆಚ್ಚು ಕಡಿಮೆ ರಂಗಾಯಣದ ನಾಟಕಗಳ ಪ್ರಥಮ ಪ್ರದರ್ಶನ ಸರಾಗವಾಗಿ ನಡೆದಿಲ್ಲ. ಯಾವಾಗಲೂ ಪ್ರಥಮ ಪ್ರದರ್ಶನದ ವೇಳೆ ಮಳೆ ಬರುವುದು ಶಾಸ್ತ್ರವೇನೋ ಎಂಬಂತಾಗಿಬಿಟ್ಟಿದೆ. ಜೋರು ಮಳೆ ಬಂದು ನಾಟಕ ನಿಲ್ಲುವುದು ಅಥವಾ ನಾಟಕದ ಮದ್ಯೆ ಮದ್ಯೆ ಮಳೆ ಬಂದು, ನಿಂತು ಆಗುವುದು, ಅಥವಾ ನಾಟಕದ ಜೊತೆ ಜೊತೆಯಲ್ಲೇ ಮಳೆ ಆಟವಾಡುತ್ತ ಇರುವುದು, ಇಲ್ಲಾ, ನಾಟಕ ಮುಗಿದ ತಕ್ಷಣ ಪ್ರೇಕ್ಷಕರು ಮನೆಗೆ ಹೋಗಲಾಗದ ಹಾಗೆ ಜೋರು ಮಳೆ ಬರುವುದು ಹೀಗೆ ಆಗುವುದು ಯಾವಾಗಲೂ ನಡೆದು ಬಂದಿರುವ ರೀತಿ.
ಹಾಗೆಯೇ ‘ಭೂಮಿಗೀತ’ ಪ್ರದರ್ಶನದ ದಿನವೂ ಆಗಿತ್ತು. ಸಂಜೆ ರಂಗದ ಮೇಲಿರಬೇಕಾಗಿದ್ದ ಕಲಾವಿದರೆಲ್ಲ ಮಂಡಿವರೆಗೆ ಪ್ಯಾಂಟ್ ಮಡಚಿ, ಭೂಮಿಗೀತ ಸ್ಟೇಜ್ ನಲ್ಲಿ ಮಂಡಿವರೆಗೆ ನಿಂತಿದ್ದ ನೀರನ್ನು ಕೆಲವರು ದೋಚಿ ದೋಚಿ ಹೊರಗೆ ಹಾಕಿತ್ತಿದ್ದರೆ ಇನ್ನೂ ಕೆಲವರು ಪೊರಕೆ ಹಿಡಿದು ನೀರನ್ನು ಮೋರಿಗೆ ತಳ್ಳುವುದರಲ್ಲಿ ನಿರತರಾಗಿದ್ದರು. ಕೆಲವರು ಷೋ ಮಾಡಲು ಸಾಧ್ಯವಾಗಲಿಲ್ಲವಲ್ಲ ಅಂತ ಬೇಸರಿಸಿಕೊಳ್ಳುತ್ತಿದ್ದಾಗ ಕಾರಂತರು ಹೇಳಿದ ಮಾತು ನೆನಪಾಗುತ್ತದೆ. ಮಳೆಗಿಂತಲೂ ನಾಟಕ ಮುಖ್ಯ ಅಲ್ಲ. ಮಳೆ ಬಂದದ್ದು ಒಳ್ಳೇದಾಯಿತು. ಭೂಮಿ ತಣ್ಣಗಾಯಿತು. ನಾಟಕ ನಾಳೆ ಮಾಡಿದರಾಯಿತು ಎಂದು ಹೇಳಿ ಹೊರಟೇ ಬಿಟ್ಟರು.
ದ್ವಾರಕೀ ಸರ್, ಆ ನಾಟಕಕ್ಕೆಂದೇ ಗುಂಡನೆಯ ಸ್ಟೇಜ್ ಕಟ್ಟಿದ್ದರು. ಹಿಂಬದಿಯಲ್ಲಿ ಕಬ್ಬಿಣದ ದೊಡ್ಡ ದೊಡ್ಡ ಆಕೃತಿಗಳನ್ನು ನಿಲ್ಲಿಸಿದ್ದರು. ಈಗ ಅದೇ ಜಾಗದಲ್ಲಿ ಹೊಸದಾಗಿ ಪ್ರಸನ್ನ ಅವರ ವಿನ್ಯಾಸದಲ್ಲಿ ನಿರ್ಮಿತವಾಗಿರುವ ರಂಗಸ್ಥಳವೇ ಭೂಮಿಗೀತ. ರಂಗಸ್ಥಳದ ಆಕಾರ ಬದಲಾದರೂ ತನ್ನ ಹಳೆಯ ಹೆಸರಿನಲ್ಲಿಯೇ ಈ ಸ್ಟೇಜ್ ಉಳಿದಿದೆ. ಇದು ರಂಗಾಯಣದಲ್ಲಿರುವ ಇಂಟಿಮೇಟ್ ಪ್ರೊಸೀನಿಯಂ ಥಿಯೇಟರ್.
ನಾಟಕ ಪ್ರದರ್ಶನ ನಿರಂತರವಾಗಿ ಹತ್ತು ದಿನಗಳ ಕಾಲ ನಡೆಯಿತು. ಆಗ ನಾಟಕ ನೋಡಲೆಂದು ಬಂದ ಕೀರ್ತಿನಾಥ ಕುರ್ತುಕೋಟಿ, ಕೆ.ವಿ.ಸುಬ್ಬಣ್ಣ. ಎಂ.ಎಸ್.ಮರುಳಸಿದ್ದಪ್ಪ, ಕೀರಂ ನಾಗರಾಜ, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್.. ಹೀಗೆ ಬಹಳಷ್ಟು ಜನರನ್ನು ಒಳಗೊಂಡ ದೊಡ್ಡ ಸಾಹಿತಿಗಳ ಗುಂಪು ನಮ್ಮೊಡನಿತ್ತು. ಅವರು ತಮ್ಮ ಅಭಿಪ್ರಾಯಗಳನ್ನು ತಿಳಿಸಿ, ಅದರ ಬಗ್ಗೆ ಆರೋಗ್ಯಕರವಾದ ಸುದೀರ್ಘ ಚರ್ಚೆ ನಡೆಸಿದ್ದೆಲ್ಲ ಈಗ ನೆನಪು.
ಅಲ್ಲದೆ ಅದೇ ನಾಟಕವನ್ನು ಬೆಂಗಳೂರಿಗೆ ತಂದಾಗ ನ್ಯಾಷನಲ್ ಕಾಲೇಜು ಕ್ಯಾಂಪಸಿನಲ್ಲಿ ಅಭಿನಯಿಸಿದ್ದೆವು. ಕಾಲೇಜಿನೊಳಗೆ ಅದೇ ಮಾದರಿಯ ಗುಂಡನೆಯ ಸ್ಟೇಜ್ ಕಟ್ಟಲು ಒಪ್ಪಿಗೆ ನೀಡಿದ್ ಹೆಚ್.ನರಸಿಂಹಯ್ಯನವರು ಅಷ್ಟೂ ದಿನ ನಮ್ಮೊಡನಿದ್ದು ಸಡಗರಿಸಿದ ನೆನಪು ……ಭೂಮಿಗೀತದ ನೆನಪು.
ಇಂದು ಮೇ ದಿನ..
01 ಮೇ 2010 ನಿಮ್ಮ ಟಿಪ್ಪಣಿ ಬರೆಯಿರಿ
in 1, ಚಿನ್ನದ ಪುಟಗಳಿಂದ, ನೆನಪು
And you’ll ask: why doesn’t his poetry
speak of dreams and leaves
and the great volcanoes of his native land?Come and see the blood in the streets.
Come and see
The blood in the streets.
Come and see the blood
In the streets!
ಇಂದು ಮೇ ದಿನ. ಪ್ಯಾಬ್ಲೋ ನೆರೂದಾ ಪ್ರಶ್ನಿಸುತ್ತಾನೆ-
ನೀವು ಕೇಳುತ್ತೀರಿ ನಾನೇಕೆ ಬರೆಯುವುದಿಲ್ಲ, ಕನಸುಗಳ ಬಗ್ಗೆ
ನೋಡಿ ಬೀದಿಯ ಮೇಲೆ ರಕ್ತವಿದೆ, ರಕ್ತವಿದೆ ಬೀದಿಯ ಮೇಲೆ
ಜಾಗತೀಕರಣದ ವಿಶೇಷವೇ ಅದು. ಅದು ಬೀದಿಯ ಮೇಲೆ ರಕ್ತ ಬೀಳುವಂತೆ ನೋಡಿಕೊಳ್ಳುವುದಿಲ್ಲ. ಆದರೆ ಅದು ಸದ್ದಿಲ್ಲದಂತೆ ರಕ್ತ ಹೀರುತ್ತಾ ಹೋಗುತ್ತದೆ. ಹೌದಲ್ಲಾ ಮೊನ್ನೆ ‘ದೇಶ ಕಾಲ’ ದ ವಿಶೇಷ ಬಿಡುಗಡೆ ಸಮಾರಂಭದಲ್ಲಿ ಜಾವೇದ್ ಅಖ್ತರ್ ಹೇಳುತ್ತಿದ್ದರು. ಸಿನೆಮಾ ರಂಗದ ಹೀರೋ ಕಾರ್ಮಿಕ ಮಾತ್ರವೇ ಆಗಿದ್ದ ಕಾಲ ಒಂದಿತ್ತು ಅಂತ. ಎಲ್ಲಿ ಮರೆತುಬಿಟ್ಟೆವು ಆತನನ್ನು. ಕೋಲಾ , ಕೆ ಎಫ್ ಸಿ ಚಿಕನ್, ಪೀಟ್ಜಾ, ಬರ್ಗರ್ ಗಳ ಸಂತೆಯಲ್ಲಿ ಆತ ಎಲ್ಲಿ ಕಳೆದು ಹೋದ?.
‘ಅನ್ನ ಕೊಡಿ, ಬಟ್ಟೆ ಕೊಡಿ, ದುಡಿವ ಕೈಗೆ ಕೆಲಸ ಕೊಡಿ’ ಅಂತ ಕೆಂಪು ಬಾವುಟ ಬೀಸುತ್ತಾ ಬರುವ ಅವರು ನಮಗೆ ಈಗ ಗಂಟೆಗಟ್ಟಲೆ ಟ್ರಾಫಿಕ್ ಜ್ಯಾಮ್ ಮಾಡುವ ದರಿದ್ರ ಮಂದಿ ಮಾತ್ರವೇ ಆಗಿದ್ದಾರೆ. ಏಕೆಂದರೆ ನಾವು ಬೇಗ ಹೋಗಿ ಸೇರಿಕೊಕೊಳ್ಳಬೇಕಾಗಿದೆ- ಇನ್ಫೋಸಿಸ್ ಗೆ, ಮೈಂಡ್ ಟ್ರೀ ಗೆ, ಜಿನೆಸಿಸ್ ಗೆ, ಮೈಕ್ರೋ ಲ್ಯಾಂಡ್ ಗೆ ..ನಮ್ಮ ವೇಗಕ್ಕೆ ತಡೆ ಒಡ್ಡಿ ಬಿಟ್ಟರಲ್ಲಾ..? ಸಿಟ್ಟು ಬಾರದೆ ಏನು..?
ಅದಕ್ಕೆ ಇರಬೇಕು ಪ್ಯಾಬ್ಲೋ ಕೇಳಿದ್ದು- ಬೀದಿಯ ಮೇಲೆ ರಕ್ತ ಬಿದ್ದಿದೆ ನೋಡಿದ್ದೀರಾ ಅಂತ..
ಅದನ್ನು ನೋಡಿದ್ದರೆ ನೀವು ನಾನೇಕೆ ಕವಿತೆ ಬರೆಯುವುದಿಲ್ಲ, ಕನಸುಗಳ ಬಗ್ಗೆ ಮಾತನಾದುವುದಿಲ್ಲ ಎಂದು ಕೇಳುತ್ತಿರಲಿಲ್ಲ
ಅಷ್ಟೇ ಅಲ್ಲ
ಐ ಪಿ ಎಲ್ ಗೆ ಏಕೆ ಹೋಗಲಿಲ್ಲ, ಸಾನಿಯಾ ಮಿರ್ಜಾ ಮದುವೆ ಸರಿಯಾ ಅನ್ನುತ್ತಿರಲಿಲ್ಲ, ನಾರಾಯಣ ಮೂರ್ತಿ ಗೆ ರಾಷ್ಟ್ರಪತಿ ಸ್ಥಾನ, ಸುಧಾ ಮೂರ್ತಿಗೆ ಸೀರಿಯಲ್ ನಲ್ಲಿ ಪಾತ್ರ, ಬಾಗ್ಚಿ ಬರೆದ ಪುಸ್ತಕ ಈ ಎಲ್ಲವೂ ಈಗಂತೂ ನನ್ನ ಮುಂದೆ ತರುತ್ತಿರಲಿಲ್ಲ.
we shall overcome…ಎನ್ನುವ ನಂಬಿಕೆಯೇ ಕುಸಿದು ಹೋಗುತ್ತಿದೆ. ಆ ನಂಬಿಕೆಗೆ ಭದ್ರ ಆದಾರ ಕೊಟ್ಟ, ಜಗತ್ತಿನಾದ್ಯಂತ ಲಕ್ಷಾಂತರ ಮನಸ್ಸುಗಳನ್ನೂ ಇಂದಿಗೂ ಹೋರಾಟಕ್ಕೆ ಹುರಿದುಂಬಿಸುತ್ತಿರುವ ಆ ಹಾಡಿಗೆ ಒಂದು ಗೌರವ ಅರ್ಪಣೆ ‘ಅವಧಿ’ಯಿಂದ. ಮೇ ದಿನದ ಅಂಗವಾಗಿ ಈ ಹಾಡು, ಈ ಹಾಡಿನ ಹುಟ್ಟು, ಆ ಹಾಡಿದಾಟ ಎಲ್ಲವೂ ಇಲ್ಲಿದೆ.
ಇದನ್ನೆಲ್ಲಾ ಒಂದಿಷ್ಟು ಹೊತ್ತು ಯೋಚಿಸುವಂತೆ ಮಾಡಿದ ಆ ಮೇ ದಿನಕ್ಕೆ ನಮನ…
ತಪ್ಪದೇ ನೋಡಿ- ಮಿಸ್ ಮಾಡ್ಬೇಡಿ
21 ಏಪ್ರಿಲ್ 2010 1 ಟಿಪ್ಪಣಿ
in ಚಿನ್ನದ ಪುಟಗಳಿಂದ, ಬುಕ್ ಬಝಾರ್, ಸೈಡ್ ವಿಂಗ್, Invite
ಕನ್ನಡ ರಂಗಭೂಮಿಯಲ್ಲಿ ಒಂದು ವಿಭಿನ್ನ ಪ್ರಯೋಗ ನಡೆಯುತ್ತಿದೆ. ಒಂದು ಮಹಾನ್ ಕಾದಂಬರಿಯನ್ನು ರಂಗಕ್ಕೇರಿಸುವುದು ಸುಲಭದ ಮಾತಲ್ಲ. ಆ ಸವಾಲನ್ನು ಸಿ ಬಸವಲಿಂಗಯ್ಯ ಕೈಗೆತ್ತಿಕೊಂಡಿದ್ದಾರೆ. ಒಂಬತ್ತು ಘಂಟೆ, ನಾಲ್ಕು ರಂಗ, ಭಿನ್ನ ಪರಿಸರ ಇವೆಲ್ಲವೂ ಕನ್ನಡ ರಂಗಭೂಮಿಗೆ ಹೊಸತು..ಹೊಸತು..
ಈ ನಾಟಕ ನೋಡುವುದು ಒಂದು ಅನುಭವ. ಖಂಡಿತಾ ಮಿಸ್ ಮಾಡಿಕೊಳ್ಳಬೇಡಿ..
ಈ ಪ್ರಯೋಗದ ಮಹತ್ವದ ಬಗ್ಗೆ ಸುಗತ ಶ್ರೀನಿವಾಸರಾಜು ಔಟ್ ಲುಕ್ ಗೆ ಬರೆದಿರುವ ಲೇಖನ ‘ಮೀಡಿಯಾ ಮೈಂಡ್’ ನಲ್ಲಿದೆ. ಅದನ್ನೂ ಓದಿ..
ಬಿನಾಕಾ ಗೀತ ಮಾಲಾ :ಮಾಲತಿ ಕಾ ಪ್ಯಾರ್ ಭರಾ ನಮಶ್ಕಾರ್
20 ಏಪ್ರಿಲ್ 2010 6 ಟಿಪ್ಪಣಿಗಳು
-ಮಾಲತಿ ಶೆಣೈ
ಚಿಕ್ಕಂದಿನಿಂದ ಅಂದರೆ ನಾನು ಒಂದು ವರ್ಷದವಳಾದಾಗಿನಿಂದ ನನಗೆ ಹಿಂದಿ ಹಾಡುಗಳನ್ನು ಕೇಳುವುದು ಅಭ್ಯಾಸ. ಅಮ್ಮ ಬೆಳಿಗ್ಗೆ ೫.೦೦ ಗಂಟೆಗೆ ಪಂಪ್ ಸ್ಟವ್ ನಲ್ಲಿ ಚಹಾ ಮಾಡ್ತಾ, ರೇಡಿಯೋ ಟ್ಯೂನ್ ಮಾಡ್ತಾ ಇದ್ದರು. ರೇಡಿಯೋದ ಆ ದಿನದ ಕಾರ್ಯಕ್ರಮ ಶುರು ಆಗುವ ಮೊದಲಿನ ಆ ಸಂಗೀತ ಇನ್ನೂ ಕಿವಿಯಲ್ಲಿ ಗುನುಗುತ್ತಿದೆ.
ಇನ್ನೊಂದು ನೆನಪು ’ಬಿನಾಕಾ ಗೀತ್ ಮಾಲಾ’ ದ ಅಮೀನ್ ಸಿಯಾನಿ’ ಪ್ಯಾರೆ ಬೆಹೆನೋ ಔರ್ ಭಾಯಿಯೋ”ಅಥವ’ಆವಾಜ್ ಕೆ ದುನಿಯಾ ಕೆ ದೋಸ್ತೋಂ, ಆಪಕೋ ಅಮೀನ್ ಸಿಯಾನಿ ಕಾ ಪ್ಯಾರ್ ಭರಾ ನಮಶ್ಕಾರ” ಕೇಳಿದ ಕೋಡಲೆ ಮೈ ಮೇಲಿನ ರೋಮ ನಿಮಿರಿ ನಿಲ್ಲುತ್ತಿದ್ದವು. ಅಷ್ಟು ಮಾಂತ್ರಿಕ ಶಕ್ತಿಯಿತ್ತು ಅವರ ದನಿಗೆ.
ಬುಧವಾರ ರಾತ್ರಿ 8.00 ರಿಂದ 9.00 ಜನ ಜೀವನ ಎಲ್ಲ ತಟಸ್ಥ. ಮುಂಬೈನಲ್ಲಿ ಮಾತ್ರವಲ್ಲ, ಇಡೀ ಭಾರತದಲ್ಲೇ. ರಿಕ್ಷಾ, taxi ನವರು ಸಹ ರೇಡಿಯೋ ಸೀಲೋನ್ ಗೆ ಟ್ಯೂನ್ ಮಾಡ್ತಿದ್ದರು. ಮಧ್ಯ ಬರುವ binaca top toothpaste ನ advertisement ಹಾಡನ್ನು ನಾವು ಅದರ ಜತೆಗೆ ಗುನುಗುನಿಸುತ್ತಿದ್ದೆವು.
ಕವಿ ನಮನ
26 ಮಾರ್ಚ್ 2010 1 ಟಿಪ್ಪಣಿ
in 1, ಚಿನ್ನದ ಪುಟಗಳಿಂದ, ನೆನಪು, ಬಾ ಕವಿತಾ, ಮೇಫ್ಲವರ್ ಮೀಡಿಯಾ ಹೌಸ್
ಇಂದು ಎಸ್ ವಿ ಪರಮೇಶ್ವರ ಭಟ್ಟರ ಹುಟ್ಟು ಹಬ್ಬ.
‘ನೀ ಬಂದು ನಿಂದಿಲ್ಲಿ
ದೀಪ ಹಚ್ಚಾ’ ಎಂದ ಕವಿಗೆ
ಮೇಫ್ಲವರ್ ಮೀಡಿಯಾ ಹೌಸಿನ ಪುಟ್ಟ ಕಾಣಿಕೆ.
ಇಂದು ಸಂಜೆ ಮಂಗಳೂರಿನಲ್ಲಿ ಬಿಡುಗಡೆ
ಇತ್ತೀಚಿನ ಟಿಪ್ಪಣಿಗಳು