ಒಂದು ಇನ್ಸ್ಟಾಲೇಶನ್ ಮಾಡೋದು ಹೇಗೆ..?
21 ಮಾರ್ಚ್ 2010 ನಿಮ್ಮ ಟಿಪ್ಪಣಿ ಬರೆಯಿರಿ
in 1, ಕ್ಯಾನ್ವಾಸ್
ಇವರು ಅನಿಮಿಷ. ಎಕನಾಮಿಕ್ ಟೈಮ್ನಲ್ಲಿ ಕಲಾವಿದರು. ಇತ್ತೀಚಿಗೆ ತಾನೇ ಗಾಂಧಿಯವರ ‘ಸತ್ಯದೊಂದಿಗೆ ನನ್ನ ಪ್ರಯೋಗ’ವನ್ನು ಆಧಾರವಾಗಿಟ್ಟುಕೊಂಡು ಇನ್ಸ್ಟಲೇಶನ್ ಕಲೆ ರೂಪಿಸಿದ್ದರು. ಕಾಡುವ ಕಲಾ ಪ್ರದರ್ಶನ ಅದು. ಇನ್ಸ್ಟಲೇಶನ್ ಅಂದ್ರೆ ಏನು ಅನಿಮಿಷಾ ಅವರೆ? ಅಂತ ಕೇಳುವುದರ ಬದಲು ಅವರ ರಾಶಿ ರಾಶಿ ಫೋಟೋಗಳ ಮೂಲಕ ಒಂದು ಚಿತ್ರ ಸಿಗುವಂತೆ ಮಾಡಿದ್ದೇವೆ-
ತೆರದಿದೆ ಪುಸ್ತಕ ಲೋಕ
20 ಫೆಬ್ರ 2010 ನಿಮ್ಮ ಟಿಪ್ಪಣಿ ಬರೆಯಿರಿ
in ಕ್ಯಾನ್ವಾಸ್ ಟ್ಯಾಗ್ ಗಳು:ಕನ್ನಡ ಸಾಹಿತ್ಯ ಸಮ್ಮೇಳನ
ಮತ್ತೆ ಮತ್ತೆ ‘ಅಪಾರ’
11 ಸೆಪ್ಟೆಂ 2009 ನಿಮ್ಮ ಟಿಪ್ಪಣಿ ಬರೆಯಿರಿ
in ಕ್ಯಾನ್ವಾಸ್, ಫ್ರೆಂಡ್ಸ್ ಕಾಲೊನಿ, ಬುಕ್ ಬಝಾರ್, ಬ್ಲಾಗ್ ಮಂಡಲ
ಸೃಜನ್ ಎಳೆದ ರೇಖೆ
03 ಜೂನ್ 2009 9 ಟಿಪ್ಪಣಿಗಳು
in ಕ್ಯಾನ್ವಾಸ್
ಸೃಜನ್ ಎಷ್ಟು ಮೆಲು ಹಾಗೂ ಕಡಿಮೆ ಮಾತಿನವರೆಂದರೆ ಮಾತನಾಡುವ ಕೆಲಸವನ್ನು ತಮ್ಮ ಚಿತ್ರಗಳಿಗೆ ಒಪ್ಪಿಸಿದ್ದಾರೆ. ಶ್ರೀಕಾಂತ್ ಅಂದರೆ ಯಾರು ಎಂದು ಕೇಳಿಯಾರು. ತಮ್ಮ ನಿಜ ಹೆಸರನ್ನು ಮರೆಸಿ ಹೇಗೆ ಖುಷಿಗೆ ಇಟ್ಟುಕೊಂಡ ಸೃಜನ್ ಹೆಸರೇ ಎಲ್ಲೆಡೆ ಹರಡಿಹೊಗಿದೆಯೋ ಹಾಗೆ ಅವರ ಕೆಲಸವೂ…
ಬಳ್ಳಾರಿಯ ತೋರಣಗಲ್ ನ ಜಿಂದಾಲ್ ನಲ್ಲಿ ಮುಖ್ಯ ಹುದ್ದೆಯಲ್ಲಿರುವ ಶ್ರೀಕಾಂತ್ ಅದು ಮುಖ್ಯವೇ ಅಲ್ಲವೇನೋ ಎಂಬಂತೆ ತಮ್ಮ ಹವ್ಯಾಸಗಳಿಗೆ ಒಡ್ಡಿಕೊಂಡುಬಿಟ್ಟಿದ್ದಾರೆ. ತಮ್ಮ ಕೆಲಸದ ಗಡಿಬಿಡಿಯ ನಡುವೆಯೂ, ಮಗಳೊಡನೆ ಆಟವಾಡುವ ಅವಳಿಗೂ ಕುಂಚದ ಓನಾಮ ಕಲಿಸುವ, ಆರ್ಕಟೆಕ್ಟ್ ಪತ್ನಿಗೆ ರೇಖೆ ಎಳೆದುಕೊಡುವುದರ ನಡುವೆಯೂ ತಮ್ಮ ಹವ್ಯಾಸವನ್ನೆಲ್ಲಾ ಜೀವಂತವಾಗಿಟ್ಟುಕೊಂಡಿದ್ದಾರೆ.
ಅನುವಾದ ಇವರಿಗೆ ಅಚ್ಚುಮೆಚ್ಚು. ಕಥೆ, ಕವಿತೆಯಲ್ಲೂ ಕೈಯಾಡಿಸಿರುವ ಸೃಜನ್ ಸಿನೆಮಾ ಬರಹಗಾರರೂ ಹೌದು ಎಂಬುದು ಅನೇಕರಿಗೆ ಗೊತ್ತಿಲ್ಲ. ಸುಮಾರು ಒಂದು ದಶಕದಿಂದ ರೂಪತಾರಾಗೆ ಬರೆಯುತ್ತಿದ್ದಾರೆ. ಒಂದು ಒಳ್ಳೆಯ ಸಿನೆಮಾ ನೋಡಿಬಿಟ್ಟರೆ ತನ್ನ ಗೆಳೆಯರಿಗೆಲ್ಲಾ ಪುಕ್ಕಟೆ ಸಿ ಡಿ ಕಳಿಸಿ ನೋಡಿಸುವ ಸೃಜನ್ ಎಷ್ಟೋ ಸಾಕ್ಷ್ಯಚಿತ್ರಕ್ಕೂ ಕೈ ಹಾಕಿದ್ದಾರೆ. ಕುಂ ವೀ ಬಗ್ಗೆ ಇವರು ತಯಾರಿಸಿದ ಡಾಕ್ಯುಮೆಂಟರಿ ಸುಮಾರು ಕಡೆ ಪ್ರದರ್ಶನಗೊಂಡಿದೆ.
ಇಂತಿಪ್ಪ ಸೃಜನ್ ಅವರ ಬಣ್ಣದ ಲೋಕದ ಜ್ಹಲಕ್ ಇಲ್ಲಿದೆ
–




ಇತ್ತೀಚಿನ ಟಿಪ್ಪಣಿಗಳು