FII ಮಹಾತ್ಮೆ ಎಂಬ ಅಧಿಕಪ್ರಸಂಗ!

-ಜಯದೇವ ಪ್ರಸಾದ ಮೊಳೆಯಾರ


ಕಾಸು ಕುಡಿಕೆ-30

Market correction- The day after you buy stocks!!- Anon

ಮಾರ್-ಕೆಟ್ಟು ಕರೆಕ್ಷನ್- ನೀವು ಶೇರು ಕೊಂಡ ಮರುದಿನ ನಡೆಯುವಂತದ್ದು!!- ಅನಾಮಿಕ.

ಬಲ್ಲಿರೇನಯ್ಯ?
ಹ್ಹೂಂ
ಈ ಭರತ ಖಂಡದಲ್ಲಿ. . .
ಹ್ಹೂಂ
. . .ಈ ಜಂಬೂ ದ್ವೀಪದಲ್ಲಿ. . .
ಹ್ಹೂಂ
. . . ಈ ಶೇರುಕಟ್ಟೆಯೆಂಬ ಮಾಯಾನಗರಿಗೆ. . .
ಹ್ಹೂಂ
. . .  ಒಡೆಯನು ಯಾರೆಂದು ಕೇಳಿ ಬಲ್ಲಿರಿ??
FII ಎಂಬುದಾಗಿ ಕೇಳಿ ಬಲ್ಲೆವು
ಓಹೋ, G.K ಯಲ್ಲಿ ನಿಮ್ಮ ಪರಿಣಿತಿಯನ್ನು ನೋಡಿ ನಮಗೆ ಬಹಳ ಸಂತೋಷವಾಗುತ್ತಿದೆ. ಸರಿಯಾದ ಉತ್ತರವನ್ನೇ ಕೊಟ್ಟಿದ್ದೀರಿ. ಭಲೇ, ಭೇಷ್, ಭೇಷ್!!
ಆಮೇಲೆ, ನಾವು ಈ ಮಾಯಾನಗರಿಗೆ ಬಂದದ್ದಾಯಿತು, ನಿಮ್ಮೊಡನೆ ಮಾತನಾಡಿದ್ದಾಯಿತು, ಮತ್ತೆ ಈಗ ಕಾರ್ಯಕ್ಕೆ ಬರೋಣ. ಈ FII ಯ ಮಹಾತ್ಮೆಯನ್ನು ನಾನೇನೆಂದು ಬಣ್ಣಿಸಲಿ? ಅದನ್ನು ಬಣ್ಣಿಸಲು ನೂರು ನಾಲಗೆ ಸಾಲದು,. ಆದರೂ ಹೇಳುವೆ, ಕೇಳುವಂತವರಾಗಿ. . . . .

************
೧೯೯೧ ರ ನರಸಿಂಹ ರಾವ್ ಕೃಪಾಪೋಷಿತ ಉದಾರೀಕರಣ ನೀತಿಯ ಪೂರ್ವದಲ್ಲಿ ಭಾರತೀಯ ಮಾರುಕಟ್ಟೆ ನಮ್ಮ ಜಂಬೂ ದ್ವೀಪದಂತೆ ಒಂದು ದ್ವೀಪವಾಗಿಯೇ ಅಸ್ತಿತ್ವದಲ್ಲಿತ್ತು. ವಿದೇಶದ ಯಾವುದೇ ದುಷ್ಟ-ಶಿಷ್ಟ ಶಕ್ತಿಗಳ ಕ್ಷುದ್ರ ನೋಟವೂ ನಮ್ಮ ಮಾರುಕಟ್ಟೆಯನ್ನು ತಟ್ಟಿದ್ದಿಲ್ಲ. ತಪ್ಪೋ ಸರಿಯೋ ನಮಗೆ ಗೊತ್ತಿದ್ದಂತೆಯೇ ಮಾರುಕಟ್ಟೆಯನ್ನು ನಾವು ಆಡುತ್ತಿದ್ದೆವು.

ಈಗ ವೈಜ್ಞಾನಿಕ, ಪ್ರೊಫೆಶನಲ್ ಎಂದೆಲ್ಲ ಕರೆಯಲ್ಪಡುವ ಯಾವುದೇ ವಾಲ್ಯುಯೇಶನ್ ತಕ್ನಿಕ್ಕುಗಳು ಆವಾಗ ಇರಲಿಲ್ಲ. ಶೇರು ಕುಂಡಲಿ ಬರೆದು ಅವುಗಳ ಗರ್ಭಕ್ಕೆ ದೃಷ್ಟಿ ಬೀರಿ ಶೇರುಗಳ ಗೋಚರ ಫಲ-ಗ್ರಹಚಾರ ಫಲ ನೀಡುವ ಪರಿಪಾಠ ಇದ್ದಿರಲೇ ಇಲ್ಲ. ಒಟ್ಟಿನಲ್ಲಿ, ಒಂದು ರೀತಿಯ ಫ್ರೀ ಫಾರ್ ಆಲ್ ರೀತಿಯ ಕುಸ್ತಿ ಪಂದ್ಯಾಟದಂತೆ ನಮ್ಮ ದಲಾಲ್ ಸ್ಟೀಟ್ ದೇಶದ ಜನತೆಗೆ ಮನೋರಂಜನೆ ನೀಡುತ್ತಿತ್ತು. ಜೊತೆಗೆ ಅಲ್ಪ ಸ್ವಲ್ಪ ಕಾಸು ಕೂಡಾ.
More

ವಿಮೆ ಮತ್ತು ಹೂಡಿಕೆಯ ಹೈಬ್ರಿಡ್ !…

-ಜಯದೇವ ಪ್ರಸಾದ ಮೊಳೆಯಾರ

ಕಾಸು ಕುಡಿಕೆ-29

Success is simply a matter of  luck. Ask any failure. . . . . Earl Wilson

ಸಫಲತೆಯು ಕೇವಲ ಅದೃಷ್ಟದ ವಿಷಯ; ಯಾವುದೇ ವಿಫಲಾತ್ಮನನ್ನು ಕೇಳಿರಿ. . . . . ಅರ್ಲ್ ವಿಲ್ಸನ್

ಕಾಕು-೨೮ ರಲ್ಲಿ ವಿಮಾ ಪಾಲಿಸಿಗಳ ಬಗ್ಗೆ ಪರಿಚಯಾತ್ಮಕವಾಗಿ ಬರೆದು ಅವುಗಳ ಮೇಲಿನ ರಿಟರ್ನ್ ಬಗ್ಗೆ ಕಾಕುನೋಟವನ್ನು ಮುಂದಿನ ವಾರ ಕೊಡುತ್ತೇನೆ ಎಂದಿದ್ದೆ. ಈಗ ಅದನ್ನು ನೋಡೋಣ:

ವಿಮೆಯಲ್ಲಿ ಅತಿಮುಖ್ಯವಾಗಿ ಮೂರು ವಿಧ:

೧. ಹೂಡಿಕೆಯಿಲ್ಲದ, ಯಾವುದೇ ರಿಟರ್ನ್ ಕೂಡಾ ಇಲ್ಲದ ಶುದ್ಧ ವಿಮೆ ಮಾತ್ರ ಆಗಿರುವ ಟರ್ಮ್ ಇನ್ಶೂರನ್ಸ್

೨. ಸಾಲಪತ್ರಗಳಲ್ಲಿ ಹಣ ಹೂಡುವ, ಬೋನಸ್ ರೂಪದಲ್ಲಿ ರಿಟರ್ನ್ ಸಿಗುವ With profits ಯೋಜನೆಗಳಾದ ಎಂಡೋಮೆಂಟ್, ಮನಿಬ್ಯಾಕ್ ಇತ್ಯಾದಿ.

೩. ಶೇರು ಮಾರುಕಟ್ಟೆಯಲ್ಲಿ ಹಣ ಹೂಡುವ, ಮಾರುಕಟ್ಟೆಯಾಧಾರಿತ ರಿಟರ್ನ್ ನೀಡುವ Market linked Policies (ULIP,ULPP)

ಇದೋ ಈವಾರ, ವಿಮಾ ನಿಗಮದ ಶಾಸ್ತ್ರೀಯ ಸ್ಕೀಂ ಎಂದು ಪರಿಗಣಿಸಲಾಗುವ ಎರಡನೆಯ ನಮೂನೆಯ ವಿದ್ ಪ್ರಾಫಿಟ್ ಎಂಡೋಮೆಂಟ್ ಪಾಲಿಸಿಯ ಬಗ್ಗೆ ವಿಶ್ಲೇಷಣೆ:

ಮೊದಲೇ ತಿಳಿಸಿದಂತೆ ಎಂಡೋಮೆಂಟ್ ಪಾಲಿಸಿ ಎಂಬುದು ಪ್ಯೂರ್ ಟರ್ಮ್ ಪ್ಲಾನಿನ ವಿಮೆ ಮತ್ತು ಸಾಲ/ಡೆಟ್‌ಗಳಲ್ಲಿನ ಹೂಡಿಕೆಯ ಹೈಬ್ರಿಡ್. (ಎಲ್ಲೈಸಿಯು ಈ ಪಾಲಿಸಿಯ ನಿಧಿಯನ್ನು ಮುಖ್ಯವಾಗಿ ಸರಕಾರಿ ಸಾಲಪತ್ರಗಳಲ್ಲಿ ಹೂಡುತ್ತದೆ) ಹಾಗಾಗಿ ಎಲ್ಲೈಸಿಯ ಎಂಡೋಮೆಂಟ್ ಪಾಲಿಸಿಯನ್ನು ಇಲ್ಲಿ ಎಲ್ಲೈಸಿಯದ್ದೇ ಆದ ಅನ್ಮೋಲ್ ಜೀವನ್ ಎಂಬ ಟರ್ಮ್ ಪ್ಲಾನ್ ಹಾಗೂ ಸರಕಾರ ಸಾಲಪತ್ರಗಳಲ್ಲಿ ಹೂಡುವ PPಈ ಜೊತೆ ಹೋಲಿಸಲಾಗಿದೆ. ಅರ್ಥಾತ್, ಎಂಡೋಮೆಂಟ್ v/s ಟರ್ಮ್ ಪ್ಲಾನ್ + PPಈ

With profits ಸ್ಕೀಂಗಳಲ್ಲಿ ಪ್ರತಿವರ್ಷ ವಿಮಾಸಂಸ್ಥೆ ಸಾಲಪತ್ರಗಳಲ್ಲಿ ಮಾಡಿದ ತನ್ನ ಹೂಡಿಕೆಯ ಆಧಾರದಲ್ಲಿ ಬಂದ ಲಾಭವನ್ನು ವಿಮಾ ಮೊತ್ತದ (Sum assured) ಮೇಲೆ ಹಂಚುತ್ತದೆ. ಸಾವಿರಕ್ಕೆ ಇಂತಿಷ್ಟು ಅಂತ ಬೋನಸ್ ಹೆಸರಿನಲ್ಲಿ ಇದು ನಿಮ್ಮ ಪಾಲಿಸಿಯಲ್ಲಿ ಜಮೆಯಾಗುತ್ತದೆ. ಇದು ಸಾಕಷ್ಟು ಸೇಫ್ ಮತ್ತು ಊಹ್ಯವಾಗಿರುತ್ತದೆ. ನಾವು ಕಟ್ಟಿದ ಪ್ರೀಮಿಯಂಗೆ ಈ ಬೋನಸ್ಸೇ ಪ್ರತಿಫಲವಾದರೂ ಈ ಬೋನಸ್ ಎಂಬುದು ವಿಮಾ ಮೊತ್ತದ ಮೇಲೆಯೇ ಹೊರತು ಕಟ್ಟಿದ ಪ್ರೀಮಿಯಂನ ಮೇಲೆ ಅಲ್ಲ.

ಒಂದು ಟರ್ಮ್ ಪಾಲಿಸಿಯಲ್ಲಿ ಕೇವಲ ವಿಮೆಗಾಗಿ ಪ್ರೀಮಿಯಂ ಕಟ್ಟಲಾಗುತ್ತದೆ. ಅದು ಯಾವ ಕಾರಣಕ್ಕೂ ಹಿಂದಕ್ಕೆ ಬರುವುದಿಲ್ಲ. ಹೂಡಿಕೆಗಳಲ್ಲಿ ಜನಪ್ರಿಯವಾದ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ( PPಈ) ನಾವು ವಾರ್ಷಿಕವಾಗಿ ಕಟ್ಟುವ ಕಂತಿಗೆ ಸರಕಾರಿ ನಿಗದಿತ ಬಡ್ಡಿದರವನ್ನು ವರ್ಷಾಂತ್ಯದಲ್ಲಿ (ಸಧ್ಯಕ್ಕೆ ೮%) ನೀಡುತ್ತದೆ. ಅದು ಆಗ ಅಸಲಿಗೆ ಸೇರಲ್ಪಟ್ಟು ಮುಂದಕ್ಕೆ ಅದರ ಮೆಲೆ ಚಕ್ರಬಡ್ಡಿ ಸಿಗುತ್ತದೆ.

ಕೆಳಗಿನ ಟೇಬಲ್ ನೋಡಿ ಯಾರೂ ಬೆಚ್ಚಿ ಬೀಳುವ ಅವಶ್ಯಕತೆ ಇಲ್ಲ. ಒಂದು ದೊಡ್ಡ ಆಕಳಿಕೆ ತೆಗೆದು ಪೇಪರನ್ನು ಎತ್ತಿ ಟೀಪೋಯ್ ಮೇಲೆ ಕುಕ್ಕಿ ಇನ್ನೊಂದು ಕಪ್ ಟೀ ಸಿಗುತ್ತದೆಯೋ ಎಂಬ ಆಸೆಯಲ್ಲಿ ಕಿಚನ್ ಕಡೆ ನೋಡಬೇಕಾಗಿಲ್ಲ. ಕಾಸು-ಕುಡಿಕೆಯ ಮಾತು ಮತ್ತು ಮ್ಯಾಟ್ಟರ್ ಎರಡನ್ನೂ ಅತ್ಯಂತ ಸಿಂಪಲ್ ಆಗಿ ಇಡುವುದು ನನ್ನ ಲಾಗಾಯ್ತಿನಿಂದ ಬಂದಂತಹ ಪರಿಪಾಠವಾಗಿದೆ.

More

Mr. ಗುರ್ಗುಂಟಿ’ಸ್ ವಿಮಾಲೋಕ

-ಜಯದೇವ ಪ್ರಸಾದ ಮೊಳೆಯಾರ

ಕಾಸು ಕುಡಿಕೆ-28

ಸಾಲವನು ಕೊಂಬಾಗ ಮೇಲೋಗರವುಂಡಂತೆ

ಸಾಲಿಗ ಬಂದು ಎಳೆವಾಗ ಕಿಬ್ಬದಿಯ

ಕೀಲು ಮುರಿದಂತೆ ಸರ್ವಜ್ಞ !

(ಸಾಲದ ಬಗ್ಗೆ ಬರಹಗಳನ್ನು ಓದಿ ಓದುಗರೊಬ್ಬರು ಕಳುಹಿಸಿದ್ದು. . . )

ಗುರುಗುಂಟಿರಾಯರ ದರ್ಶನವಿಲ್ಲದೆ ಒಂದು ರೀತಿಯ ಉದಾಸೀನದಿಂದ ಬಳಲುತ್ತಿದ್ದೆ. ಈ ಸಾಲದ ತಗಾದೆ ಆರಂಭವಾದಂದಿನಿಂದ ಅವರ ಸುದ್ದಿಯೇ ಇಲ್ಲ. ಬೇರೆ ಕೆಲವರೂ ಅದೇ ಭಾವನೆ ವ್ಯಕ್ತ ಪಡಿಸುತ್ತಿದ್ದರು. ಮೊನ್ನೆ ಮೊನ್ನೆಯಂತೂ ಒಂದು ಪತ್ರವೇ ಬಂದು ಬಿಟ್ಟಿತು- ಫ್ಯಾನ್ ಮೈಲ್! ‘ಉಡುಪಿ-ಮಣಿಪಾಲದ ಜನತೆ ನಾವು; ರಾಯರ ಸುದ್ದಿ ಇಲ್ಲದ ಕಾರಣ ಬೇಸರದಲ್ಲಿದ್ದೇವೆ, ಹೇಗಾದರೂ ಮಾಡಿ ಅವರನ್ನು ಒಮ್ಮೆ ಎಲ್ಲಿದ್ದರೂ ಕರೆದುಕೊಂಡು ಬನ್ನಿ’ ಎಂಬ ಒತ್ತಾಯಪೂರ್ವಕ ಕೇಳಿಕೆ.

ವ್ವಾರೆವ್ವಾ, ರಾಯರು ಇಷ್ಟು ಫೇಮಸ್ ಅಂತ ನನಗೆ ಗೊತ್ತೇ ಇರಲಿಲ್ಲ!

ರಿಸೀವರ್ ಎತ್ತಿ ರಾಯರಿಗೆ ಡಯಾಲಿಸಿಸ್ ಮಾಡಿದೆ. “ಹಲೋ. .” ರಾಯರ ದಪ್ಪ ದನಿ ಫೋನಿನಲ್ಲಿ ಕೇಳಿಸಿತು.

“ನಮಸ್ಕಾರ ರಾಯರೇ, ಕೆಲವು ವಾರ ಆಯ್ತು. ನಿಮ್ಮ ಸುದ್ದಿಯೇ ಇಲ್ಲ. ಎಲ್ರೂ ಕೇಳ್ತಾ ಇದ್ದಾರೆ. ಏನ್ ವಿಶೇಷ?” ವಿಚಾರಿಸಿದೆ.

“ವಿಶೇಷ ಎಲ್ಲ ನಿಮ್ಮದೇ. ಈಗೀಗ, ಜನರಿಗೆ ಸಾಲ ಮಾಡೋದು ಹೇಳ್ಕೊಡ್ತಾ ಇದ್ದೀರಾ, ಸೇವಿಂಗ್ಸ್ ಹೇಳ್ಕೊಡಿ. ಸಾಲದ ವಿಷ್ಯ ಎಲ್ಲ ಯಾಕೆ?”

“ಇಲ್ಲ ಹಾಗೇನೂ ಇಲ್ಲ. ಅದೂ ಕೆಲವೊಮ್ಮೆ ಬೇಕಾಗ್ತದೆ ಅಲ್ವ? ಅದ್ರಲ್ಲೂ ಬಹಳಷ್ಟು ಹೊಂಡಗಳು ಇರ್ತದಲ್ವಾ? ಅದಕ್ಕೇ ಸ್ವಲ್ಪ ವಿವರ ಕೊಟ್ಟಿದ್ದೇನೆ ಅಷ್ಟೆ”

“ಹೊಂಡಕ್ಕೆ ಎನಾಗ್ಬೇಕು ಸ್ವಾಮೀ, ದುಡ್ಡಿದ್ದಲ್ಲಿ ಎಲ್ಲ ಹೊಂಡಗಳೂ ಇರ್ತವೆ. ನಮ್ಮ ಕರಾವಳಿ ಹೈವೇ ನೋಡಿದ್ರೆ ಗೊತ್ತಾಗುದಿಲ್ವಾ? ಅದಿರ್ಲಿ, ಮುಂದಿನ ಕಾಕುನಲ್ಲಿ ಏನ್ ವಿಷಯ?”

“ಇನ್ಶೂರನ್ಸ್ ಬಗ್ಗೆ ಬರ್ಯೋಣಾ ಅಂತ. ಆ ವಿಷಯ ಮುಟ್ಟಿಯೇ ಇಲ್ಲ.” ಅಂದೆ.

“ಎನೂ? ಇನ್ಶೂರನ್ಸ್ ಆ. . . ?? ನಂಗೂ ಆ ವಿಷಯದಲ್ಲಿ ಆಸಕ್ತಿ ಇದೆ. ಸ್ವಲ್ಪ ಡಿಸ್ಕಸ್ ಮಾಡೋಣ. ಈ ಬಾರಿ ಡಯಾನ, ಪರಿವಾರ್ ಎಲ್ಲ ಬೇಡ. ಹಾಂಗ್ಯೋದಲ್ಲಿ ಪಿಟ್ಜಾ ಹೊಡೆದರೆ ಹೇಗೆ?” ರಾಯರ ಉತ್ಸಾಹ ಫೋನಿನಿಂದ ಹೊರಹರಿದು ನನ್ನ ಕಿವಿಯನ್ನು ಒದ್ದೆ ಮಾಡಿತು.

More

ಕಾಸು ಕುಡಿಕೆ:ಜರಾಸಂಧನ ಕ್ರೆಡಿಟ್ ಕಾರ್ಡ್…

ಕಾಸು ಕುಡಿಕೆ -27

-ಜಯದೇವ ಪ್ರಸಾದ ಮೊಳೆಯಾರ

The best way to get credit is to get into a position of not needing any!. . . Anon

ಸಾಲ ಪಡೆಯುವ ಅತ್ಯಂತ ಉತ್ತಮ ಮಾರ್ಗವೆಂದರೆ ಅದು ಅಗತ್ಯವಿಲ್ಲದ ಸ್ಥಿತಿಗೆ ಬರುವುದು!. . . ಅನಾಮಿಕ.

ಸಾಲದ ಬಗ್ಗೆ ಮಾತನಾಡುತ್ತ ಇರುವಾಗ ಕ್ರೆಡಿಟ್ ಕಾರ್ಡ್ ಬಗ್ಗೆ ಮಾತನಾಡದೆ ಮಾತು ಮುಗಿಸುವಂತೆಯೇ ಇಲ್ಲ. ಅದರ ಹೆಸರೇ ಸೂಚಿಸುವಂತೆ ಅದೊಂದು ಸಾಲದ ಕಾರ್ಡ್ – ಕಳೆದ ಶತಮಾನದ ಒಂದು ಅತ್ಯಂತ ಉಪಯುಕ್ತ ವಿತ್ತೀಯ ಅನ್ವೇಷಣೆ. ಇದರ ಉಪಯುಕ್ತತೆಯ ಬಗ್ಗೆ ಕಾಲಿಗೆ ಗಾಲಿಕಟ್ಟಿದಂತೆ ವಾರಗಟ್ಟಲೆ ತಿರುಗಾಡುವ ನನ್ನಂತವರು ಚೆನ್ನಾಗಿ ತಿಳಿದಿದ್ದಾರೆ. ಊರೂರು ಸುತ್ತಾಡುವಾಗ ಸಾವಿರಾರು ರೂಪಾಯಿಯ ನಗದು ದುಡ್ಡನ್ನು ತೆಗೆದುಕೊಂಡೂ ಹೋಗುವುದು ಬಲುಕಷ್ಟ. ಅದೆಲ್ಲದರ ಬದಲು ಒಂದೇ ಒಂದು ಕಾರ್ಡ್ – ಕ್ರೆಡಿಟ್ ಕಾರ್ಡ್ ಮೂಲಕ ಎಲ್ಲಾ ಪಾವತಿಗಳನ್ನೂ ಮಾಡಬಹುದಾಗಿದೆ.

ನೀವು ಒಂದು ಬ್ಯಾಂಕಿನ ಮೂಲಕ ನಿಮ್ಮ ಎಲ್ಲಾ ಆದಾಯದ, ಅರ್ಥಿಕ ಸ್ಥಿತಿಗತಿಗಳ ವಿವರಗಳನ್ನು ನೀಡಿ ಅದಕ್ಕಿರುವ ಪ್ರವೇಶ, ವಾರ್ಷಿಕ ಶುಲ್ಕ ನೀಡಿ ಒಂದು ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುತ್ತೀರಿ.

ಅಂತಹ ಕಾರ್ಡ್‌ಗಳನ್ನು ಸ್ವೀಕರಿಸುವಂತಹ ಅಂಗಡಿಗಳಲ್ಲಿ ಬೇಕಾದ ವಸ್ತುಗಳನ್ನು ಖರೀದಿಸಿ ನಿಮ್ಮ ಕಾರ್ಡನ್ನು ಕೌಂಟರಿನಲ್ಲಿ ಕೊಡುತ್ತೀರಿ. ಕೌಂಟರಿನಲ್ಲಿ ಕುಳಿತ ವ್ಯಕ್ತಿ ನಿಮ್ಮ ಕಾರ್ಡನ್ನು ಒಂದು ಮೆಶೀನಿನಲ್ಲಿ ಉಜ್ಜಿ (swipe) ಬ್ಯಾಂಕಿಂಗ್ ವ್ಯವಸ್ಥೆಯ ಕಂಪ್ಯೂಟರಿಗೆ ಡಯಲ್ ಮಾಡುತ್ತಾನೆ.

ಆ ಕಂಪ್ಯೂಟರ್ ನೀವು ಕೊಡಬೇಕಾದ ದುಡ್ಡನ್ನು ಆ ಅಂಗಡಿಯವರ ಖಾತೆಗೆ ನೀಡಿ ಅಷ್ಟು ದುಡ್ಡನ್ನು ಬ್ಯಾಂಕು ನಿಮಗೆ ಕೊಟ್ಟ ಸಾಲ ಎಂದು ನಿಮ್ಮ ಖಾತೆಯಲ್ಲಿ ನಮೂದಿಸುತ್ತದೆ.

ಅಷ್ಟು ದುಡ್ಡನ್ನು ನೀವು ಅದರ ಮಾಸಿಕ ಬಿಲ್ ದಿನಾಂಕದಿಂದ ಸುಮಾರು ೨೦ ದಿನಗಳಲ್ಲಿ (due date) ಕೊಡಬೇಕಾಗುತ್ತದೆ. ಅಂದರೆ ಯಾವುದೇ ತಿಂಗಳಿನುದ್ದಕ್ಕೂ ಮಾಡಿದ ಖರ್ಚಿನ ಮರುಪಾವತಿಗೆ ಒಟ್ಟು ೨೦-೫೦ ದಿನಗಳವರೆಗೆ ಫ್ರೀ ಸಮಯ ಸಿಕ್ಕಂತಾಯಿತು. ಆ ಅವಧಿಯೊಳಗೆ ಪಾವಿತಿ ಮಾಡಿದಲ್ಲಿ ನಿಮ್ಮಿಂದ ಯಾವುದೇ ಹೆಚ್ಚುವರಿ ಶುಲ್ಕವನ್ನು ವಸೂಲು ಮಾಡಲಾಗುವುದಿಲ್ಲ.

ಬದಲಿಗೆ ಅಂಗಡಿಯವನಿಂದ ಈ ಸೇವೆಗಾಗಿ ಸ್ವಲ್ಪ ಶುಲ್ಕವನ್ನು ವಸೂಲಿ ಮಾಡಲಾಗುತ್ತದೆ. ಆ ಫ್ರೀ ಅವಧಿಯನ್ನು ಮೀರಿದರೆ ಮಾತ್ರ ಅದಕ್ಕೆ ಹೇರಳವಾದ ತಡಪಾವತಿಯ ಶುಲ್ಕ, ಬಡ್ಡಿದರ, ತೆರಿಗೆಗಳು ಇತ್ಯಾದಿ ಚಾರ್ಜುಗಳು ಬೀಳುತ್ತವೆ.

‘ದಂಡಿಯಾಗಿ honeyಸುವ ದುಂಡಿ’ಯ ಪ್ರಕಾರ ದುಡ್ಡು ಎಂದಿಗೂ ನಗದು. ಅದಕ್ಕಾಗಿಯೇ ಬ್ಯಾಂಕಿನ ದುಡ್ಡುಕಿಂಡಿಗಳಲ್ಲೆಲ್ಲಾ ‘CASH ನಗದು’ ಎಂಬ ಬೋರ್ಡ್ ಹಾಕಿದ್ದಾರಂತೆ. ಹಾಗೆಯೇ, ಅಕ್ಕಸಾಲಿಗನ ಬಳಿ ಇರುವ ದುಡ್ಡೂ ಕೂಡಾ ನಗದ ದುಡ್ಡು. ಅದು ಕೂಡಾ ನಗುವುದೇ ಇಲ್ಲ. ಆದರೆ ನಮ್ಮ ಕಿಸಿಯಲ್ಲಿರುವ ಕ್ರೆಡಿಟ್ ಕಾರ್ಡ್ ಮಾತ್ರ ನಗುವ ದುಡ್ಡು. ಜೇಬು, ಎಕೌಂಟು ಎಷ್ಟೇ ಖಾಲಿಯಿದ್ದರೂ ಸ್ವೈಪ್ ಮಾಡಿದಾಕ್ಷಣ ನಗು ನಗುತ್ತಾ ಬರುವ ದುಡ್ಡು;

ನಿಮಗೂ ಕೂಡಾ ನಗೆಯೋ ನಗೆ! ಇಲ್ಲದ ದುಡ್ಡು ಪ್ರತ್ಯಕ್ಷವಾಗುವಾಗ ಯಾರಿಗೆ ತಾನೇ ನಗು ಬಾರದು? – well, ಅದರ ಬಿಲ್ ಮಾತ್ರ ತನ್ನ ಬಾಣಗಳೊಂದಿಗೆ ಬರುವ ವರೆಗೆ !!! ಮತ್ತೆ, Credit card billನ ಆ ಬಾಣಗಳೋ. . . ಆಹಾ, ಏನೆಂದು ಬಣ್ಣಿಸಲಿ? ಒಂದೊಂದು ಬಾಣಗಳೂ ದಿವ್ಯಾಸ್ತ್ರಗಳು! ಪ್ರತಿತಿಂಗಳು ನಮ್ಮ ಮನೆಗೆ ಅಂಚೆಯಲ್ಲಿ ಬರುವ ಆ ಬಿಲ್ಲನ್ನು ಅಳುಕುತ್ತಲೇ ಎತ್ತಿ ಹೆದೆಯೇರಿಸಿದಾಗ ಒಂದೊಂದೇ ಅಸ್ತ್ರಗಳ ಮುಖಪರಿಚಯವಾಗುತ್ತದೆ. ಉದಾಹರಣೆಗೆ,

More

ಕಾಸು ಕುಡಿಕೆ: ‘ಅರ್ಜೆಂಟ್ ಸಾಲ’…

ಕಾಸು ಕುಡಿಕೆ -26
-ಜಯದೇವ ಪ್ರಸಾದ ಮೊಳೆಯಾರ

If you owe the bank $100 that’s your problem. If you owe the bank $100 million,
that’s the bank’s problem…………. J.Paul Getty.
ನೀವು ಬ್ಯಾಂಕಿಗೆ ನೂರು ಡಾಲರು ಕೊಡಬೇಕಾಗಿದ್ದಲ್ಲಿ ಅದು ನಿಮ್ಮ ಸಮಸ್ಯೆ. ಬದಲು, ನೀವು ನೂರು ಮಿಲಿಯ ಡಾಲರು ಕೊಡಬೇಕಾಗಿದ್ದಲ್ಲಿ ಅದು ಬ್ಯಾಂಕಿನ ಸಮಸ್ಯೆ !!. . . . . . . .  ಜೆ. ಪೌಲ್ ಗೆಟ್ಟಿ.
ಹಾಲ್‌ನಲ್ಲಿ ಕುಳಿತು ಕಂಪ್ಯೂಟರ್ ಮೇಲೆ ‘ಕಾಕು-೨೬’ ಅಂತ ಫಾಂಟ್ ಸೈಜ್   ಹದಿನೆಂಟರಲ್ಲಿ ಕುಟ್ಟಿ, ಅದರ ಕೆಳಗೆ ‘ಅರ್ಜೆಂಟ್ ಸಾಲ’ ಅಂತ ಫಾಂಟ್ ಸೈಜ್ ಮೂವತ್ತಾರರಲ್ಲಿ ಕುಟ್ಟಿ, ಇವತ್ತು ಇದರಲ್ಲಿ ಗುರುಗುಂಟಿರಾಯರು ಬೇಕೇ ಬೇಡವೇ? ಮಸಾಲೆ ದೋಸೆ ಬೇಕೇ ಬೇಡವೇ? ಅಂತ ತಲೆಕೆರೆದುಕೊಂಡು ಸ್ಕ್ರೀನನ್ನು ನೋಡುತ್ತಾ ಆಲೋಚಿಸುತ್ತಿರುವಾಗ ‘ಸರ್. .  ’ ಎಂಬ ಹೆಣ್ಣುದನಿ ಸಣ್ಣಗೆ ಕೇಳಿದಂತಾಗಿ ಬಾಗಿಲೆಡೆ ತಲೆಯೆತ್ತಿ ನೋಡಿದೆ.
ಒಂದು ಸಾದಾರಣ ಸೀರೆಯುಟ್ಟ, ಮುಖದಲ್ಲಿ ಸಾಕಷ್ಟು ಚಿಂತೆ ಗಾಬರಿಗಳ ಛಾಯೆಯನ್ನು ಹೊತ್ತ ಸುಮಾರು ನಡುವಯಸ್ಸಿನ ಹೆಂಗಸೊಬ್ಬರು ನನ್ನ ಮನೆ ಬಾಗಿಲಲ್ಲಿ ನಿಂತು ‘ಒಳಗೆ ಬರಲೇ?’ ಎಂಬ ಭಾವವನ್ನು ಕಣ್ಣಿನಲ್ಲೇ ಸೂಚಿಸುತ್ತಾ ಕೈ ಹಿಸುಕುತ್ತಿದ್ದರು. ಅಸಹಾಯಕರಾಗಿ ಕಂಡುಬಂದ ಹೆಂಗಸನ್ನು ಅರೆಕ್ಷಣ ಹಾಗೆಯೇ ನೋಡಿದೆ. ಗುರುತಾಗಲಿಲ್ಲ. ಕುರ್ಚಿಯಿಂದೆದ್ದು ‘ಬನ್ನಿ ಒಳಗೆ’ ಎನ್ನುತ್ತಾ ಸ್ವಾಗತಿಸಲು ಬಾಗಿಲೆಡೆಗೆ ಸಾಗಿದೆ.
‘ನನ್ನ ಹೆಸರು ವಿಮಲ.
ಸ್ವಲ್ಪ ಅರ್ಜೆಂಟು ಮಾತನಾಡ್ಲಿಕ್ಕೆ ಉಂಟು, ಸರ್’ ಎನ್ನುತ್ತಾ ಒಳ ಬಂದು ನಾನು ತೋರಿಸಿದ ಕುರ್ಚಿಯಲ್ಲಿ ನಿಧಾನವಾಗಿ ಕುಳಿತರು.
ಇನ್ನೂ ಗುರುತಾಗಲಿಲ್ಲ. ಯಾರೋಪ್ಪ. ಏನ್ ಕತೆಯೋ?’ ಎನ್ನುತ್ತಾ ನಾನೂ ಅವರೆದುರು ಕುಳಿತು “ಹೇಳಿ ವಿಮಲ, ಏನ್ ವಿಷಯ?” ಅಂತ ವಿಚಾರಿಸಿದೆ.
ವಿಮಲ ಇನ್ನಷ್ಟೂ ಗಂಭೀರರಾದರು. ಮುಖದಲ್ಲಿ ದುಃಖ ಬೇಸರಗಳು ಮುಖದಿಂದ ಒಡೆದು ಹರಿಯುವಂತೆ ಭಾಸವಾಯಿತು. ಚಿಕ್ಕ ಮೋರೆ ಮಾಡಿ ಸ್ವಲ್ಪ ಹೊತ್ತು ಮಾತನಾಡಲು ಶಬ್ದಗಳಿಗಾಗಿ ತಡಕಾಡುತ್ತಾ ಕುಳಿತರು. ಮಹಿಳೆ ಏನೋ ದೊಡ್ಡ ಕಷ್ಟದಲ್ಲಿ ಇದ್ದಂತೆ ತೋರುತ್ತಿತ್ತು.
“ನಾನು ನಿಮ್ಮ ನೇಬರ್. . . ಇಲ್ಲೇ ಹತ್ರ ಸೆಕೆಂಡ್ ಕ್ರಾಸ್. ನಾವು ಸ್ವಲ್ಪ ಸಾಲದ ತಾಪತ್ರಯದಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ನಮ್ಮ ಮನೆಯವರು. . . , ಮನುಷ್ಯ ಸ್ವಲ್ಪ ದುಬಾರಿ. ಸಿಕ್ಕಿದ್ದಕ್ಕೆಲ್ಲ ಖರ್ಚು ಮಾಡ್ತಾರೆ. ಕಂಡದ್ದೆಲ್ಲ ಬೇಕು. ಇದ್ದಷ್ಟೂ ಸಾಲ್ದು. ಮತ್ತೆ ಸಾಲ ಮಾಡ್ತಾರೆ, ಒಂದು ಸಾಲ ಮುಚ್ಚಲು ಇನ್ನೊಂದು ಕಡೆ ಹೋಗಿ ಸಾಲ ಮಾಡ್ತಾರೆ.
ಹೀಗೆ ಅಲ್ಲಿ ಇಲ್ಲಿ ಅಂತ ಸಿಕ್ಕಿದ ಫೈನಾನ್ಸ್ ಕಂಪೆನಿಗಳಲ್ಲೆಲ್ಲಾ ಹೋಗಿ ಸಿಕ್ಕಪಟ್ಟೆ ಸಾಲ ಮಾಡಿದ್ದಾರೆ. ವಾಪಾಸು ಕಟ್ಟಲು ನಮ್ಮಲ್ಲಿ ದುಡ್ಡು ಇಲ್ಲ. ಈಗ ರಿಕವರಿ ಅಂತ ಮನೆ ಹತ್ರ ಯಾರ್ಯಾರೋ ಬರ್ತಾರೆ. ಗಲಾಟೆ ಮಾಡಿ ಹೋಗ್ತಾರೆ. ಒಟ್ಟಿನಲ್ಲಿ ನನಗೆ ಹೆದರಿಕೆ ಆಗ್ತದೆ. ಏನು ಮಾಡುವುದು ಅಂತ ಗೊತ್ತಾಗುದಿಲ್ಲ. . . “ ನಿಧಾನವಾಗಿ ವಿಮಲ ತಮ್ಮ ಸಮಸ್ಯೆಯನ್ನು ಬಿಡಿಸಿಟ್ಟರು.

ಕಾಸು ಕುಡಿಕೆ:’ಸಾಲಂಕೃತ ವಿದ್ಯಾ’. . .

ಕಾಸು ಕುಡಿಕೆ -25

-ಜಯದೇವ ಪ್ರಸಾದ ಮೊಳೆಯಾರ

It is easy to get a loan, unless you need it. . . . . . . .   Norman Augustine.

.

ಸಾಲ ಪಡೆಯುವುದು ಅತಿಸುಲಭ, ನಿಮಗೆ ಅಗತ್ಯವಿಲ್ಲದವರೆಗೆ. . . . . ನಾರ್ಮನ್ ಅಗಸ್ಟಿನ್

ಸಾರ್, ನಮಸ್ಕಾರ ಗುರುಗುಂಟಿರಾಯರ ದನಿ ಫೋನ್‌ನಲ್ಲಿ ಸ್ಪಷ್ಟವಾದ ಮೊಳಗಿತು. ಈ ಬಾರಿ ಧ್ವನಿ ಒಣಗಿದ ಮಸಾಲೆ ದೋಸೆಯಂತೆ ಕುಗ್ಗಿರದೆ ಈಗ ತಾನೇ ಎಣ್ಣೆಯಲ್ಲಿ ಹುರಿದ ಅಂಬಡೆಯಂತೆ ಉಬ್ಬಿತ್ತು. ಲವಲವಿಕೆಯಿಂದ ಕೂಡಿತ್ತು. ಉತ್ಸಾಹ ಮತ್ತು ಆತ್ಮೀಯತೆ ಸ್ವರದಲ್ಲಿ ಪುನರ್‌ಪ್ರತಿಷ್ಟಾಪನೆಯಾಗಿತ್ತು. ಅಂದರೆ, ಮೊನ್ನೆ ನಾನು ಕೊಟ್ಟ ಸ್ಪಷ್ಟೀಕರಣ ಕೆಲಸ ಮಾಡಿತ್ತು.

ನಮಸ್ಕಾರ ರಾಯರೆ, ಹೇಗಿದ್ದೀರಿ? ಇತ್ತೀಚೆಗೆ ಭಾರೀ ಅಪರೂಪ! ಏನು ಇಂಟರ್ವ್ಯೂ ಕೊಡೊದ್ರಲ್ಲೇ ಬಿಜೀನಾ? ಯಾವ್ದಕ್ಕೂ ಇರಲಿ ಅಂತ ಒಂದು ಡೋಸ್ ಚುಚ್ಚಿದೆ.

ಅದೂ. . . ಹಾಗೇನಿಲ್ಲಾ ಸಾರ್, ಅದೇನೋ ಒಂದ್ಚೂರು. . . ಹೀಗೇ. . . ಹೇಳಿದ್ದೂ. . . ಹ್ಹ ಹ್ಹ ಹ್ಹ ಎಂದು ’ಹ್ಹ ಹ್ಹ ಹ್ಹ ಹಾಸ್ಯ ಸಂಘ’ದ ಆಜೀವ ಸದಸ್ಯರಂತೆ ನಕ್ಕರು.

ಇರ್ಲಿ ಬಿಡಿ, ಪರ್ವಾಗಿಲ್ಲ! ಮತ್ತೇನು ವಿಶೇಷ? ದೋಸೆ-ಕಾಫಿ ಎಲ್ಲಾ ಬಿಟ್ಬಿಟ್ರಾ? ಈಗೆಲ್ಲಾ ಮೀನು-ಮಾಂಸ ಅಂತ ತಿರುಗಾಡ್ತಾ ಇರೋ ಹಾಗಿದೆ? ಅಂತ ಬೂಸ್ಟರ್ ಡೋಸ್ ಚುಚ್ಚಿದೆ.

ಬೇಡ ಬಿಡಿ, ಮೊಳೆಯಾರ್ರೇ, ಅದು ಹೊಗ್ಲಿ. ಅದೆಲ್ಲಾ ಯಾಕೀಗ? ಏನೋ ಮಿಸ್ ಅಂಡರ್ಸ್ಟಾಂಡಿಂಗೂಊಊಊಊ ಎಂದು ಈ ಬಾರಿ ಟಿಪಿ-ಕಲ್ ಕೈಲಾಸಂ ಶೈಲಿಯಲ್ಲಿ ರಾಗವೆಳೆದು, ಈ ಬಾರಿ ಏನು ಬರೀತೀರಿ? ಅದು ಹೇಳಿ ಮೊದ್ಲು ಅಂತ ವಿಷಯಾಂತರಿಸಿದರು.

ಓಕೆ ಸಾರ್, ಬಿಟ್ಬಿಡಿ ಅದನ್ನೆಲ್ಲ. ಕಳೆದ ಬಾರಿ Housing loan, ಈ ಬಾರಿ Education loan

ಓಹ್, ಎಜುಕೇಶನ್ ಲೋನಾ? ಹಾಗೆ ಹೇಳಿ ಮತ್ತೆ, ನಾನೂ ಬರ್ತೀನಿ ಇರಿ.. ನನ್ನ ಅಣ್ಣನ ಮಗಳು ಇದ್ದಾಳೆ, ವಿದ್ಯಾ ಅಂತ.. ’ಸಾಲಂ’ಕೃತ ವಿದ್ಯಾ !!! – ವಿದ್ಯೆಗಾಗಿ ಸಾಲ ಮಾಡಿದ್ಲು. ಅದ್ಕೇ ಅವ್ಳನ್ನು ನಾವು ಹಾಗೆ ಕರೀತಿದ್ವಿ. ನಂಗೆ ಆ ಬಗ್ಗೆ ಸ್ವಲ್ಪ ಗೊತ್ತಿದೆ. ತಾಳಿ ನಾನು ಈಗ್ಲೇ ಬರ್ತೇನೆ. . ಅವರ ಉತ್ಸಾಹ ನೋಡಿದರೆ ಮಾತನಾಡುತ್ತಿದ್ದಂತೆಯೇ ಆ ಫೋನೊಳಕ್ಕೇ ತೂರಿ ನನ್ನೆದುರು ಬಂದು ಪ್ರತ್ಯಕ್ಷರಾಗುತ್ತಾರೋ ಎಂಬ ಶಂಕೆ ಮೂಡಿತು.

ಇಲ್ಲ ಸಾರ್, ಇದು ವಿವೇಕಾನಂದ ಕಾಮತರು ಹೇಳಿ ಬರಿಯೋದು. ನೀವು ಮುಂದಿನ ಎಪಿಸೋಡಿಗೆ ಬನ್ನಿ. ಈ ಬಾರಿ ಬೇಡ. ಚೆನ್ನಾಗಿರೋದಿಲ್ಲ ಸಾಗಹಾಕಲು ಟ್ರೈ ಮಾಡಿದೆ.

ಇಲ್ಲ ಇಲ್ಲ, ಕಾಮತರು ಬೇಡ. ಅವ್ರಿಗೆ excuse ಕೇಳಿ ನಮ್‌ಕಡೆಯಿಂದ. ನಾನೀಗ್ಲೇ ಬಂದೆ ಅಂತ ಹೇಳಿ ಫೋನ್ ಕಟ್ ಮಾಡಿದ ಗುರುಗುಂಟಿರಾಯರು ಕ್ಷಣಮಾತ್ರದಲ್ಲಿ ೬ ನೇ ಪುಟದ ಸಂಪುಟದಲ್ಲಿ ತಮ್ಮ ಹಕ್ಕು ಸ್ಥಾಪನಾರ್ಥಾಯ ’ಟಣ್’ ಎಂದು ಪ್ರತ್ಯಕ್ಷರಾದರು.

ಸೋ,Here is ‘Education loan’ with Gurugunti. . . . . .

More

ಕಾಸು ಕುಡಿಕೆ:’ಮೀನಾ ಮತ್ತು ಗೃಹಸಾಲ’

ಕಾಸು ಕುಡಿಕೆ -24

-ಜಯದೇವ ಪ್ರಸಾದ ಮೊಳೆಯಾರ

Always borrow from a pessimist, he never expects it back.. . . . . . . Anonymous.

.

ಯಾವತ್ತೂ ಒಬ್ಬ ನಿರಾಶಾವಾದಿಯಿಂದಲೇ ಸಾಲ ತೆಗೆದುಕೊಳ್ಳಿ, ಆತ ಅದನ್ನು ವಾಪಾಸು ನಿರೀಕ್ಷಿಸುವುದಿಲ್ಲ.. . ಅನಾಮಿಕ.

ಇದು ಒಳ್ಳೆ ಫಚೀತಿ ಆಯ್ತಲ್ಲ ಮಾರಾಯ್ರೆ,

ಇದ್ದಕ್ಕಿದ್ದಂತೆ ಈ ಮೀನಾ ಎಂಬ ಚತುರೆ ಯಾವ ರಾಶಿಯಿಂದ ಎದ್ದು ಬಂದಳು? ನಾನು ಆರನೇ ಪೇಜಿನಲ್ಲಿ ಪ್ರತಿಷ್ಠಾಪನೆ ಮಾಡಿದ ಗುರುಗುಂಟಿರಾಯರನ್ನು ಅಲ್ಲಿಂದ ಕಿಡ್ನಾಪ್ ಮಾಡಿ ಮೊನ್ನೆಯ ಸಾಪ್ತಾಹಿಕದ ಎರಡನೆಯ ಪೇಜಿನಲ್ಲಿ ಇಂಟರ್‌ವ್ಯೂ ಮಾಡಿ ಛೂ ಬಿಟ್ಟ ಈ ಮಹಾನುಭಾವಳು ಯಾರು? ಇದು ಮೊತ್ತ ಮೊದಲನೆಯ ಪ್ರಶ್ನೆ.

ಎರಡನೆಯದಾಗಿ ಈ ಗುರುಗುಂಟಿರಾಯರಿಗೆ ನನ್ನ ಮೇಲೆ ಯಾಕಿಷ್ಟು ಸಿಟ್ಟೋ ಆ ದೇವನೇ ಬಲ್ಲ. ನಾನು ಅವರಿಗೆ ಇನ್ಸಲ್ಟ್ ಮಾಡಿದ್ದೇನಂತೆ, ಕೆಟ್ಟ ಟ್ರೀಟ್ಮೆಂಟ್ ನೀಡಿದ್ದೇನಂತೆ. ಅಬ್ಬಬ್ಬ ರಾಯರ ಕಂಪ್ಲೈಂಟ್ ಒಂದಾ ಎರಡಾ? ನಾನೇನೋ ವಸ್ತು ನಿಷ್ಠವಾಗಿ ಇದ್ದುದನ್ನು ಇದ್ದಂತೆ ಹೇಳಿದರೆ ಅವರಿಗೆ ಯಾಕಪ್ಪಾ ಇಷ್ಟು ಕೆಂಡದಂತ ಕೋಪ? ಇದು ಎರಡನೆಯ ಪ್ರಶ್ನೆ.

ಈ ಎರಡೂ ಪ್ರಶ್ನೆಗಳಿಗೆ ಒಂದು ಸಿ.ಬಿ.ಐ ಎನ್‌ಕ್ವಯರಿ ಆಗಲೇ ಬೇಕು. ಅದೇನೇ ಇರಲಿ, ನನಗೆ ಮಾತ್ರ ಗುರುಗುಂಟಿರಾಯರ ಮೇಲೆ ಯಾವುದೇ ರೀತಿಯ ಅಸಮಧಾನವಾಗಲಿ, ಕೋಪ-ಬೇಸರಗಳಾಗಲಿ ಇಲ್ಲವೇ ಇಲ್ಲ. ಅವರು ನನಗೆ ಬಹಳ ಆಪ್ತರೇ.

ಅವರನ್ನು ಬಹಳ ಮೊದಲಿನಿಂದಲೇ ಮೆಚ್ಚಿಕೊಂಡು ಬಂದವರಲ್ಲಿ ನಾನೂ ಒಬ್ಬ. ನಾನು ಅವರನ್ನು ಮೊತ್ತ ಮೊದಲನೆಯದಾಗಿ ಭೇಟಿಯಾದದ್ದು ಬರವಣಿಗೆ ಶಾಸ್ತ್ರದಲ್ಲಿ ನನ್ನ ಗುರುಗಳಾದ ಶಾಂತಾರಾಮ ಸೋಮಯಾಜಿಯವರ ’ನಾವು ಮತ್ತು ನಮ್ಮ ಮನಸ್ಸು’ (sಸುಮುಖ ಪ್ರಕಾಶನ) ಎಂಬ ಪುಸ್ತಕದಲ್ಲಿ. ಆ ಪುಸ್ತಕ ಆರಂಭವಾಗುವುದೇ ಈ ರೀತಿ – ರಾಯರ ಹೆಸರಿನೊಂದಿಗೆ:

’ಗುರುಗುಂಟಿರಾಯರು ವಾಕ್ ಹೊರಡುತ್ತಾರೆ. ಮನೆಯಿಂದ ಹೊರಬಂದು ಗೇಟ್ ದಾಟಿ, ಸಣ್ಣ ಕಾಲು ಹಾದಿಯಲ್ಲಿ ಚಪ್ಪಲಿಯಿಂದ ಧೂಳಿ ಕೆದಕಿಕೊಂಡು ನಡೆಯುತ್ತಾರೆ. ಮತ್ತೆ ಡಾಮಾರು ಮಾರ್ಗಕ್ಕೆ ಕಾಲಿಟ್ಟು ಕಾರು, ಬೈಕು, ಲಾರಿ, ಬಸ್ಸುಗಳಿಂದ ಆದಷ್ಟು ದೂರದಲ್ಲಿ ಹೆಜ್ಜೆ ಹಾಕುತ್ತಾರೆ.’

More

ಕಾಸು ಕುಡಿಕೆ:‘ವಾರೆನ್ ಬಫೆ ಎಂಬ ಶೇರು ಗಾರುಡಿಗ’

ಕಾಸು ಕುಡಿಕೆ-23

-ಜಯದೇವ ಪ್ರಸಾದ ಮೊಳೆಯಾರ


Price is what you pay, value is what you get . . . . . . . . . . Warren Buffet

ನೀವು ಕೊಡುವುದು ಬೆಲೆ; ಕೊಳ್ಳುವುದು ಮೌಲ್ಯ. . . . . . . . . . . . . . . . . . ವಾರೆನ್ ಬಫೆ

ಜಗತ್ತಿನ ಅತಿಶ್ರೀಮಂತ ವ್ಯಕ್ತಿ ಮೈಕ್ರೋಸಾಫ್ಟಿನ ಬಿಲ್ ಗೇಟ್ಸ್. ಅದು ಎಲ್ಲರಿಗೂ ಗೊತ್ತು. ಜಗತ್ತಿನ ಎರಡನೆಯ ಅತಿಶ್ರೀಮಂತ ವ್ಯಕ್ತಿ ವಾರೆನ್ ಬಫೆ (ಸಧ್ಯಕ್ಕೆ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ). ಇದ್ರಲ್ಲಿ ವಿಶೇಷ ಏನಪ್ಪಾ ಅಂದ್ರೆ, ಅವರು ೩೦ ಬಿಲಿಯನ್ ಡಾಲರಿಗೂ ಮೀರಿದ ತನ್ನ ಎಲ್ಲಾ ಸಂಪತ್ತನ್ನೂ ಶೇರು ಮಾರುಕಟ್ಟೆಯಲ್ಲಿಯೇ ಸಂಪಾದಿಸಿದರು. ಅಬ್ಬಾ!!! ಬಫೆ ಇಂದು ಜಗತ್ತಿನ ಅತ್ಯಂತ ಪ್ರಭಾವಶಾಲೀ ಇನ್ವೆಸ್ಟರ್ ಹಾಗೂ ಶೇರಾನುರಾಗಿ ಜನರ ಆರಾಧ್ಯ ದೈವ!

ವಾರೆವ್ವಾ. . . , ನ್ಯೂಸ್ ಅಂದ್ರೆ ಇದು ನೋಡಿ! ಹಾಗಾದ್ರೆ ಯಾರು ಈ ವಾರೆನ್ ಬಫೆ? ಅವರ ಕುಲಗೋತ್ರವೇನು? ಅದು ಹೇಗೆ ಅವರು ಅಷ್ಟು ಧನ ಮಾರುಕಟ್ಟೆಯಲ್ಲಿ ಸಂಪಾದಿಸಿದರು? ಅದರ ಗುಟ್ಟೇನು? ನಾವೂ ಹಾಗೆ ಮಾಡಬಹುದೇ? ಎಂದು ನೀವು ಖಂಡಿತಾ ಕೇಳುವಿರಿ ಎಂದು ನನಗೆ ಗೊತ್ತು.

ಅದಕ್ಕೇ ನಾನು ಮುಂಚಿತವಾಗಿಯೇ ಅಂತರ್ಜಾಲವನ್ನು ಜಾಲಾಡಿ ಆತನ ಪೂರ್ವಾಪರಗಳ ಬಗ್ಗೆ ಒಂದಿಷ್ಟು ಮಾಹಿತಿ ಕಲೆ ಹಾಕಿದ್ದೇನೆ.

ಆಗಸ್ಟ್ ೩೦, ೧೯೩೦ ರಂದು ಅಮೇರಿಕದ ಓಮಹದಲ್ಲಿ ಹೋವರ್ಡ್ ಎಂಬ ಶೇರು ಬ್ರೋಕರನ ಮಗನಾಗಿ ಜನಿಸಿದ ವಾರೆನ್ ಬಫೆ ಎಳವೆಯಲ್ಲಿಯೇ ಗಣಿತ ಮತ್ತು ಬಿಸಿನೆಸ್ ಬಗ್ಗೆ ತನಗಿರುವ ಅದ್ಭುತ ಪರಿಣಿತಿಯಿಂದ ಎಲ್ಲರನ್ನೂ ಬೆರಗುಗೊಳಿಸುತ್ತಿದ್ದ.

More

ಕಾಸು ಕುಡಿಕೆ:‘ಶೇರು ಜೋಯಿಸರ ಫಲಭವಿಷ್ಯ’

ಕಾಸು ಕುಡಿಕೆ-22

-ಜಯದೇವ ಪ್ರಸಾದ ಮೊಳೆಯಾರ

Beware of geeks bearing formulas……………….. Warren Buffet.

ಸೂತ್ರಗಳೊಂದಿಗೆ ಬರುವ ಪ್ರಭೃತಿಗಳ ಬಗ್ಗೆ ಎಚ್ಚರವಿರಲಿ. . . . . . . . . . . . ವಾರೆನ್ ಬಫೆಟ್.

‘ಆತ ಪ್ರತಿ ಮಧ್ಯಾಹ್ನದ ಹೊತ್ತು ಶ್ರದ್ಧೆಯಿಂದ ತನ್ನ ಚೀಲವನ್ನು ತೆರೆದು ತನ್ನ ವೃತ್ತೀಯ ಸರಕುಗಳನ್ನು ಬಿಡಿಸಿಡುತ್ತಾನೆ – ಒಂದು ಡಜನ್ ಕವಡೆ, ಒಂದು ಮಸುಕಾದ, ನಿಗೂಢ ಕುಂಡಲಿಗಳುಳ್ಳ ಚೌಕಾಕಾರದ ಬಟ್ಟೆ, ಒಂದು ನೋಟ್ ಪುಸ್ತಕ ಹಾಗೂ ಒಂದು ತಾಳೆ ಗರಿಯ ಕಟ್ಟು.

ಆತನ ಹಣೆ ವಿಭೂತಿ ಮತ್ತು ಅರಿಶಿನಗಳಿಂದ ಲೇಪಿಸಲ್ಪಟ್ಟಿದ್ದು, ಕಣ್ಣುಗಳು ಗ್ರಾಹಕರಿಗಾಗಿ ಹುಡುಕಾಡುತ್ತಿರುವ ತೀಕ್ಷ್ಣವಾದ ನೋಟದಿಂದ ಹೊಳೆಯುತ್ತಿದ್ದು ಮುಗ್ಧ ಗ್ರಾಹಕರು ಅದನ್ನು ಯಾವುದೋ ದಿವ್ಯ ಜ್ಯೋತಿಯೆಂದೇ ತಿಳಿದುಕೊಂಡು ನೆಮ್ಮದಿಪಟ್ಟುಕೊಳ್ಳುತ್ತಿದ್ದರು.

ಆತನ ಕಣ್ಣುಗಳ ಶಕ್ತಿಯು, ಬಣ್ಣಬಳಿದ ಹಣೆ ಮತ್ತು ಕೆನ್ನೆಗಳಿಂದ ಕೆಳಕ್ಕಿಳಿಯುವ ಕಪ್ಪು ಹುರಿಮೀಸೆಯ ನಡುವಿನ ಅದರ ಸ್ಥಾನದಿಂದ ಸಾಕಷ್ಟು ಉದ್ದೀಪನಗೊಂಡಿದ್ದವು. ಅಂತಹ ಸಜ್ಜಿಕೆಯಲ್ಲಿ ಯಾವುದೇ ಮಂದಬುದ್ಧಿಯವನ ಕಣ್ಣುಗಳೂ ಹೊಳೆಯದಿರದು. ಇದಕ್ಕೆಲ್ಲ ಕಿರೀಟವಿಟ್ಟಂತೆ ಒಂದು ಕೇಸರಿ ಬಣ್ಣದ ಮುಂಡಾಸನ್ನು ತನ್ನ ತಲೆಗೆ ಸುತ್ತಿದ್ದನು. ಈ ವರ್ಣ ಸಂಯೋಜನೆ ಎಂದೂ ತಪ್ಪುತ್ತಿರಲಿಲ್ಲ.

ಡೇಲಿಯಾ ಹೂವಿನಿಂದ ಆಕರ್ಷಿತವಾದ ಜೇನ್ನೊಣಗಳಂತೆ ಜನರು ಆತನೆಡೆಗೆ ಆಕರ್ಷಿತರಾಗುತ್ತಿದ್ದರು. ಟೌನ್ ಹಾಲ್ ಮಾರ್ಗವನ್ನು ಆವರಿಸಿಕೊಂಡಂತಿರುವ ಹುಳಿಮರದ ಕೊಂಬೆಗಳಡಿಯಲ್ಲಿ ಅವನು ಕೂರುವನು. . . . . .’

ಆರ್.ಕೆ. ನಾರಾಯಣ್ ಬರೆದ ‘An astrologer’s day’ ಎಂಬ ಕತೆ ಈ ರೀತಿ ಆರಂಭವಾಗುತ್ತದೆ. ಇದು ಜೋಯಿಸರ ಒಂದು ವರ್ಣನೆ. ನಮ್ಮೆಲ್ಲರ ಮನದಲ್ಲೂ ಇಂತಹ ಬೇರೆ ಬೇರೆ ಚಿತ್ರಣಗಳಿರಬಹುದು. ಯಾಕೆಂದರೆ, ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಜೋಯಿಸರ ಜೊತೆ ಅನುಭವವನ್ನು ಹೊಂದಿದವರೇ ಆಗಿರುತ್ತೇವೆ.

More

ಕಾಸು ಕುಡಿಕೆ: ಸೌಖ್ಯಾಳ ಯಕ್ಷಪ್ರಶ್ನೆ ಮತ್ತು ಜಾಹೀರಾತು ದುನಿಯಾ

ಕಾಕು-೨೧

-ಜಯದೇವ ಪ್ರಸಾದ ಮೊಳೆಯಾರ

‘Packaging is more important than the product’ – A popular IIM,A wisecrack.

ಸರಕಿನಿಂದ ಜಾಸ್ತಿ ಅದರ ಹೊದಿಕೆ ಮುಖ್ಯ – ಒಂದು ಜನಪ್ರಿಯ IIM, ಅಹಮದಾಬಾದ್ ಚಾಟೋಕ್ತಿ.

ಬೆಂಗಳೂರಿನಿಂದ ಸೌಖ್ಯಾ ಎಂಬವರು ಈ ಜಯದೇವ್‌ಸರ್ ‘ಕಾಸು-ಕುಡಿಕೆ’ ಅಂತ ಬೋರ್ಡ್ ಹಾಕ್ಕೊಂಡು ಊರೋರ್ಗೆಲ್ಲಾ ಬುದ್ಧಿ ಹೇಳ್ತಾರಲ್ಲಾ, ಸ್ವತಃ ಅವರಿಗೆ ಬುದ್ಧಿ ಎಷ್ಟಿದೆ ಅಂತ ನೋಡ್ಲೇ ಬೇಕು ಎಂಬ ತುಂಟತನದಿಂದ ಈ ಕೆಳ್ಗಿನ ಪ್ರಶ್ನೆಗಳ್ನ ಈ-ಮೈಲ್ ಮುಖಾಂತರ ಕಳ್ಸಿದ್ರು.

‘ಒಂದು ರೇಸ್ ಇದೆ ಅಂತ ತಿಳ್ಕೊಳ್ಳಿ. ಅದ್ರಲ್ಲಿ ನೀವು ಹುಚ್ಚುನಾಯಿ ಅಟ್ಟಿಸ್ಕೊಂಡು ಬಂದ ಹಂಗೆ ಓಡ್ತೀರಾ, ಅದೇನೋ ಚಿನ್ನಾನೋ, ಬೆಳ್ಳಿನೋ ಪದ್ಕಾ ಗೆಲ್ಲೋಕೆ. ಹಂಗೇ ಓಡೀ ಓಡೀ ಒಬ್ಬೊಬ್ರನ್ನೇ ಹಿಂದಕ್ಕೆ ಹಾಕಿ ರೇಸ್ನಲ್ಲಿ ಮುಂದಕ್ಕೆ ಬರ್ತೀರಾ. ಕೊನೆಗೊಮ್ಮೆ ಏದುಸಿರು ಬಿಡ್ತಾ ಸೆಕೆಂಡ್ ಪ್ಲೇಸ್‌ನಲ್ಲಿ ಇದ್ದೋನನ್ನೂ ಹಿಂದಕ್ಕೆ ಹಾಕಿ ಮುಂದಕ್ಕೆ ಬರ್ತೀರಾ. ಈಗ ಹೇಳಿ ನೀವು ಯಾವ ಪ್ಲೇಸ್‌ನಲ್ಲಿ ಪಂದ್ಯ ಗೆದ್ರಿ? ಕೂಡ್ಲೇ ಹೇಳಿ. ಹೆಚ್ಚು ಯೋಚ್ನೆ ಮಾಡ್ದೆ ಮನಸ್ಸಿಗೆ ಬಂದ ಉತ್ತರವನ್ನು ‘ತಟ್’ ಅಂತ ಹೇಳಿ. . .

More

Previous Older Entries Next Newer Entries

%d bloggers like this: