ಇನ್ನೂ ಗೃಹಪ್ರವೇಶ ಆಗಿಲ್ಲ..

ಏನಿದೇನಿದು?? ಅಂತ ಇನ್ನೂ ನಾವು ಕೇಳುವ ಮುನ್ನವೇ ‘ಸಂಪಾದಕೀಯ‘ ಬ್ಲಾಗ್ ಬ್ರೇಕಿಂಗ್ ನ್ಯೂಸ್ ನೀಡಿದೆ.

ಹೌದು ನಾವು ವೆಬ್ ತಾಣವಾಗಿ ಬದಲಾಗಲಿದ್ದೇವೆ.

ಇನ್ನೇನು ೧೦ ಲಕ್ಷ ಹಿಟ್ಸ್ ಪಡೆಯಲಿದ್ದ ನಾವು ಆ ಸಂದರ್ಭದಲ್ಲಿ ನಮ್ಮದೇ ತಾಣ ಆರಂಭಿಸ ಬೇಕೆಂದುಕೊಂಡಿದ್ದೆವು.

ಆದ್ದರಿಂದ ‘ಅವಧಿ’ ಡೆಮ್ಮಿ ತಯಾರಿಸಿ ಟೆಸ್ಟಿಂಗ್ ನಡೆಸಿದ್ದೆವು ಈಗ ನೀವು ನೋಡುತ್ತಿರುವುದೂ ಸಹಾ ಡೆಮ್ಮಿ ಆವೃತ್ತಿಯೇ. ಅಧಿಕೃತವಾಗಿ ‘ಅವಧಿ’ ಇನ್ನೂ ಲಾಂಚ್ ಆಗಿಲ್ಲ.

ಅದೇನೋ ಸರಿ, ಆದರೆ ‘ಈ ಬ್ಲಾಗ್ ಗೂ, ವೆಬ್ ಸೈಟ್ ಗೂ ಏನು ವ್ಯತ್ಯಾಸ?’ ಅಂತ ಸಾಕಷ್ಟು ಜನ ಕೇಳಿದ್ದಾರೆ.

‘ಸಂಪಾದಕೀಯ’ ಈಗಾಗಲೇ ಆದಷ್ಟೂ ಅದನ್ನು ವಿವರಿಸಿದೆ.

ಆದರೂ ನಾವು ಕೇಳಿದವರಿಗೆ ಸರಳವಾಗಿ ಅರ್ಥ ಮಾಡಿಸಲು ‘ಇದು ಪೇಯಿಂಗ್ ಗೆಸ್ಟ್ ಆಗಿರುವುದಕ್ಕೂ, ಮನೆ ಓನರ್ ಆಗುವುದಕ್ಕೂ ಏನು ವ್ಯತ್ಯಾಸ ಇದೆಯೋ ಅಷ್ಟೇ ವ್ಯತ್ಯಾಸ’ ಅಂತ ಹೇಳುತ್ತಿದ್ದೇವೆ.

ಸರಿ ಆಲ್ವಾ…?

ನಮ್ಮದೇ ಸೈಟ್, ನಮಗೆ ಬೇಕಾದಂತೆ ಮನೆ ಕಟ್ಟಿಸಿಕೊಂಡು ನಮಗೆ ಬೇಕಾದಲ್ಲಿ ಮೊಳೆ ಹೊಡೆದುಕೊಂಡು, ನಮಗೆ ಬೇಕಾದಲ್ಲಿ ಬಟ್ಟೆ ಒಣಗಿ ಹಾಕಿ.. ಹೀಗೆ ಎಷ್ಟೆಲ್ಲಾ ಸ್ವಾತಂತ್ರ್ಯ..?

ಅದೇ ಪೇಯಿಂಗ್ ಗೆಸ್ಟ್ ಆಗಿದ್ದಾಗ ಕೊಟ್ಟ ಇಷ್ಟಗಲದ ಮಂಚದಲ್ಲಿ ಮಲಗಬೇಕು. ಬಟ್ಟೆ ಇಟ್ಟುಕೊಳ್ಳಲು ಮಂಚದ ಕೆಳಗೆ ಎಷ್ಟು ಜಾಗ ಇದೆಯೋ ಅಷ್ಟೇ…೯ ಘಂಟೆ ಒಳಗೆ ಗೂಡು ಸೇರಿಕೊಳ್ಳಬೇಕು. ಚಪಾತಿ ಲಟ್ಟಿಸಿದ್ದು ಸರಿ ಇಲ್ಲ, ಸುಟ್ಟಿದ್ದು ರುಚಿಸಿಲ್ಲ. ಆ ಮಾತೇ ಇಲ್ಲ, ನಿಮಗೆ ಇಷ್ಟವಾದ ಚಾನಲ್ ನೋಡೋಣ ಎಂದು ಹಾಲ್ ಗೆ ಬಂದರೆ ಅಲ್ಲಿರುವ ಒಂದೇ ಟಿ ವಿ ಸೆಟ್ ಮುಂದೆ ಆಗಲೇ ಹತ್ತಾರು ತಲೆಗಳು.. ಬ್ಲಾಗ್ ಎಂದರೆ ಅದೇ ಥೇಟ್ ಪೇಯಿಂಗ್ ಗೆಸ್ಟ್ ನಂತೆ ‘ನಿಮ್ಮೊಡನಿದ್ದೂ ನಿಮ್ಮಂತಾಗದವ’..

ಇರಲಿ ಇದನ್ನೆಲ್ಲಾ ಅವಧಿ http://avadhimag.com ಆಗಿ ಬದಲಾಗುವಾಗ ಚರ್ಚಿಸೋಣ

ಸಧ್ಯಕ್ಕೆ ಅವಧಿ ಬ್ಲಾಗ್ ಓದುತ್ತಿರಿ.

ಇನ್ನು ಕೆಲವೇ ದಿನದಲ್ಲಿ ಅಧಿಕೃತವಾಗಿ ನಾವು ವರ್ಡ್ ಪ್ರೆಸ್ ತಾಣಕ್ಕೆ ವಿದಾಯ ಹೇಳಲಿದ್ದೇವೆ. ನಮ್ಮದೇ ಮನೆ ಗೃಹಪ್ರವೇಶಕ್ಕಾಗಿ-

5 ಟಿಪ್ಪಣಿಗಳು (+add yours?)

 1. D S Ramaswamy
  ಫೆಬ್ರ 20, 2011 @ 21:05:28

  ಹೊಸಮನೆಯ ಪರಿಸರ ಎಲ್ಲರಿಗೂ ಇಷ್ಟವಾಗಲಿ. ಸ್ವಂತ ಮನೆ ಅಂತ ದೂರದ ಏರಿಯಾಕ್ಕೆ ಹೋಗಲ್ಲ ತಾನೆ? (net work problem?)

  ಉತ್ತರ

 2. ananth
  ಫೆಬ್ರ 19, 2011 @ 13:53:00

  wish you all the best

  ಉತ್ತರ

 3. prakashchandra
  ಫೆಬ್ರ 19, 2011 @ 10:20:07

  Naavoo bahala dinadinda chaathaka pakshiyanthe kaayuthiddeve, avadhi yaavaaga website agi badalaaguthado antha…! Eega namma santhasa immadiside, gn mohan avarihge shubhaashayagalu. Nimma prayathnakke nammellara sampoorna sahakaara khanditha ide.

  ಉತ್ತರ

 4. GVJ
  ಫೆಬ್ರ 19, 2011 @ 06:33:01

  🙂

  ಉತ್ತರ

 5. ಶ್ರೀವತ್ಸ ಜೋಶಿ
  ಫೆಬ್ರ 18, 2011 @ 23:09:50

  ಹೊಸ ವೆಬ್‌ಸೈಟ್‌ ಮಾಸ್ಟ್‌ಹೆಡ್‍‌ನಲ್ಲಿ ಸೂರ್ಯನ ಮೀಸೆ ಚೆನ್ನಾಗಿದೆ!

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: