ಹಂಗಾಮ ಕಾರ್ನರ್: ಸಂಜೆಯ ಅಪರಿಚಿತರು

-ಎಂ.ಆರ್.ಗಿರಿಜ
ಮುಗಿಲ ಮಾರಿಗೆ$ ರಾಗರತಿಯ ನಂಜ ಏರಿತ್ತ $ ಆಗ – ಸಂಜೆಯಾಗಿತ್ತ       -ಬೇಂದ್ರೆ

ಅಲೆದಾಟ ಮೊದಲಿನಿಂದಲೂ ನನ್ನ ಸಂಜೆಗಳ ಒಂದು ಭಾಗ ಸಂಜೆ ಸಂಜೆಯೇ. ಅದರ ಕಂಪು, ಗತ್ತು ಸುಂದರ ಮುಂಜಾವಿಗೂ ಇಲ್ಲ . ಸಂಜೆ ಮುದುಡುವುದೆಂದರೆ ಕನಸುಗಳು ಅರ್ಧದಲ್ಲೇ ಅರಳದೆ ನಿಂತುಬಿಟ್ಟಂತೆ. ಸುಂದರ ಸಂಗೀತ ಕಛೇರಿ ಉತ್ಕಟತೆ ನುಟ್ಟುವಷ್ಟರಲ್ಲಿ ತಟ್ಟನೆ ಕರೆಂಟ್ ಕೈಕೊಟ್ಟಂತೆ. ಬಟ್ಟೆ ಅಂಗಡಿ, ಪಾನಿಪುರಿ, ಕೇಕ್ ಅಂಗಡಿಗಳ ಮುಂದೆ ’ ಸುಳಿದಾಡಬೇಡ ಗೆಳತಿ’ ಎಂದು ಬುದ್ದಿ ಹೇಳಿದರೂ ಅದನ್ನು ಕೇಳುತ್ತಾ ಕೂರುವ ಜೀವವಲ್ಲ ನನ್ನದು.

ಅದರಲ್ಲೂ ಐಸ್ ಕ್ರೀಂ ಮೆಲ್ಲೂತ್ತಲೋ, ಪಾಪ್‌ಕಾರ್ನ್ ತಿನ್ನುತ್ತಲೋ ಜನದಟ್ಟಣೆಯ ನಗರ ಪ್ರದೇಶದಲ್ಲಿ ಒಬ್ಬಳೇ ತಿರುಗಾಡುವುದೆಂದೆರೆ ಅಚ್ಚುಮೆಚ್ಚು. ಇದು ’ದೋಸ್ತ್ ದೋಸ್ತ್ ನ ರಹಾ’ ತರಹದ ಒಂಟಿತನವಲ್ಲ. ಏಕಾಂತದ ಧ್ಯಾನ, ಜನರಾಣ್ಯದ ಬೆಳಕಿನಲ್ಲಿ ಜೀವೋನ್ಮಾದದ ಹುಡುಕಾಟ.

ಸುಮ್ಮನೆ ಯಾವ ಪರಿಚಿತರ ಕಣ್ಣಿಗೂ ಬೀಳದೆ ನಿರುಮ್ಮಳವಾಗಿ ಇರುವ ಸುಖದಲ್ಲೇ ಅದೇಷ್ಟು ಸುಖ? ಪುಟ್ಟ ಊರುಗಳಿಗೆ ಹೋಲಿಸಿದರೆ ದೊಡ್ಡ ಊರು ಆಕರ್ಷಕವಾಗಲು ಇದೂ ಕಾರಣವಿರಬೇಕು. ಪುಟ್ಟ ಊರಿನಲ್ಲಿ ಬದುಕಿದರೆ ಎಲ್ಲರ ಕಣ್ಣುಗಳಲ್ಲಿಯೂ ಮಿಕ್ಕೆಲ್ಲರ ಚಿರಪರಿಚಯ ಖಾಯಂ ಆಗಿ ಉಳಿದು ಬಿಟ್ಟಿರುತ್ತದೆ. ಎದುರಿಗೆ ವ್ಯಕ್ತಿ ಸಿಕ್ಕೊಡನೆ ಅವರಿರಲಿ, ಅವರ ಸುತ್ತ ಹತ್ತು ಜನರ ಕಂತೆ ಪುರಾಣಗಳೂ ಮಿದುಳಿನಲ್ಲಿ ಒಂದೊಂದೇ ತರೆದುಕೊಂಡು ಬಿಡುತ್ತವೆ. ಊಹೆಗೆ ಅವಕಾಶವಿಲ್ಲ. ಇನ್ನು ಅಪರಿಚಿತತೆಯ ಆನಂದವಂತೂ ಇಲ್ಲೇ ಇಲ್ಲ.

ನಗರದ ಜನದಟ್ಟಣೆಯ ಶಾಪಿಂಗ್ ಕಾಂಪ್ಲೆಕ್ಸ್‌ಗಳ ಬಳಿಯೋ , ಪಾರ್ಕಿಂಗ್ ಸ್ಥಳದ ಬಳಿಯೋ ಪಾರ್ಕಿನೊಳಗೋ ಸುಮ್ಮನೆ ಕೂತರೆ ಸಾಕು, ನಮ್ಮ ಮುಂದೆ ಅನಾವರಣಗೊಳ್ಳುವ ಪ್ರಪಂಚಕ್ಕೆ ಅದೆಷ್ಟು ಬಣ್ಣ! ಅಲ್ಲಿ ಸಿಳಿದಾಡುವ ಮುಖಗಳಲ್ಲಿ ಕುಣಿಯುವ ಅಂತಃ ಕರಣದ ಕಾಲುವೆಯ ವಿವಿಧ ಆವೆಮಡಿಕೆಗಳ ಕಂಪು, ರಂಗನ್ನು ಸವಿಯುತ್ತಾ ಕೂರುವುದಿದೆಯಲ್ಲ, ಇದಕ್ಕಿಂತ ದೊಡ್ಡ ಕ್ಲಾಸ್‌ರೂಂ ಎಲ್ಲಿ ಸಿಗುತ್ತದೆ?

ಸಂಜೆ ಚೆಲುವು ತುಂಬಿಕೊಳ್ಳುವ ಪಾರ್ಕಿನಲ್ಲಿ ಮುದ್ದು ಮದ್ದಾಗಿ ನಡೆಯುವ ಮಕ್ಕಳು, ದಿನದ ವಾರದ ದುಗುಡ ಉಮ್ಮಳ ಹಂಚಿಕೊಳ್ಳುತ್ತಾ ಮಧ್ಯಾಹ್ನದ ಕಾವನ್ನು ಹೊಎಚೆಲ್ಲುತ್ತಿರುವ ಕಲ್ಲಿಬೆಂಚಿಗೆ ಬೆನ್ನು ಒಎಗಿಸಿ ಕೂತ ಯುವದಂಪತಿಗಳ ಜೋಡಿ .. .. ಇವರೆಲ್ಲಾ ನನ್ನ ಕನಸಿನ ಬಲೆಯಲ್ಲಿ ಅಪರಿಚಿತೆಯ ನಸುಬಿಸಿಯ ಅದೃಶ್ಯ ತಂತುವಿನ ಮೂಲಕ ನನ್ನ ಆತ್ಮೀಯ ವಲಯಕ್ಕರ ಬಂದವರು.

ಮಾತಿಲ್ಲ ಕತೆಯಿಲ್ಲ. ಗುರುತು ಪರಿಚಯವಂತೂ ಆಗುವುದೂ ಇಲ್ಲ. ಆದರೂ ಜೀವನದ ಆ ಒಂದೊಂದು ಫ್ರೇಮುಗಳು ನನ್ನ ಮನಸ್ಸಿನ ಕ್ಯಾನ್ ವಾಸನ್ನು ಬಂಧಿಸಿ ಚಚ್ಚೌಕಗೊಳಿಸುತ್ತವೆ. ನಾನು ಅವರಂತಲ್ಲದ, ನನ್ನನ್ನು ಅವರು ನೋಡದ, ಕೇಳದ ಈ ಮೌನದಲ್ಲೇ ಒಂದು ಮಧುರಾಲಾಪವಿದೆ. ಅದೃಶ್ಯ ತಂತುವಿನ ಮೂಲಕ ನಡೆಯುವ ನಿಶಬ್ದ ಪ್ರಪಂಚವಿದೆ. ಅದು ಭರವಸೆಯ ಒಂದು ಬೀಜದ ಮೊಳಕೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: