ಆ ಹುಡುಗಿ..

ಫ್ರಾನ್ಸ್ ದೇಶದ ಈ 80+ ವರ್ಷದ ಹುಡುಗಿ , ಇತಿಹಾಸ ಹುಡುಕಿಕೊಂಡು ನಮ್ಮ ಮನೆಗೆ ಬಂದಿತ್ತು !!

-ಕೆ ಎಸ್ ಬಾಲಸುಬ್ರಮಣ್ಯ

ಕನ್ನಡ ಬ್ಲಾಗರ್ಸ್

ಕಾಡಿನ ನೆನಪುಗಳ ಅಂತಿಮ ಸಂಚಿಕೆ ಬರೆಯುತ್ತಿದ್ದೆ. ಗೆಳೆಯ ಸುನಿಲ್ ಫೋನ್ ಮಾಡಿ “ಹಾಯ್ ಬಾಲು, ಎಲ್ಲಿದ್ದೀಯ ಪಾಯಿ” ಅಂದಾ ನಾನು “ಯಾಕೋ ಏನ್ ಸಮಾಚಾರ ಅಂದೇ ” ಅದಕ್ಕೆ ಸುನಿಲ್  “ಅದೇ ಕಣೋ ಐವಾಕ್ ನಲ್ಲಿ ನನ್ನ ಒಬ್ಬ ಹೆಂಗಸು ತುಂಬಾ ಪರಿಚಯವಾಗಿದ್ದಾರೆ , ಆಯಮ್ಮ ಶ್ರೀ ರಂಗ ಪಟ್ಟಣ ದ ಬಗ್ಗೆ ಕೇಳ್ತಿದಾರೆ ಕಣೋ ಅದಕ್ಕೆ ಅವರನ್ನ ನಿಮ್ಮ ಮನೆಗೆ ಕಳಿಸುತ್ತಿದ್ದೇನೆ ಅವರಿಗೆ ಮಾಹಿತಿ ಕೊಡು ಗುರು” ಅಂದ, “ಸರಿಯಪ್ಪಾ ಬರೋಕೆ ಹೇಳು” ಅಂದು ಫೋನ್ ಇಟ್ಟೆ. ಭಾನುವಾರ ವನ್ನು ಸೋಮಾರಿ ಹಾಗೆ ಕಳೆಯಬೇಕೆಂಬ ಆಸೆಗೆ ತಡೆಯಾಯಿತು.

ಸ್ವಲ್ಪ ಹೊತ್ತಿಗೆ ನನ್ನ ಮೊಬೈಲ್ ಗೆ ಒಂದು ಕರೆ ಬಂತು mr. balu [ಬಲು !!! ] ” i am miichele from FRANCE ,YOUR FRIEND SUNNY TOLD ME TO MEET YOU , ARE YOU FREE NOW , “ಅಂತಾ ಒಬ್ಬ ಹೆಂಗಸಿನ ಧ್ವನಿ ಮಾತಾಡ್ತು. ನಾನು “o.k.o.k. please come to my house ” ಅಂತಾ ಹೇಳಿ ಮನೆ ವಿಳಾಸ ಅವರ ಕಾರಿನ ಚಾಲಕನಿಗೆ ತಿಳಿಸಿ ಫೋನ್ ಇಟ್ಟೆ.

ಮುಂದಿನ ಹತ್ತು ನಿಮಿಷಕ್ಕೆ ಫ್ರಾಸ್ ದೇಶದ 80+ ವರ್ಷದ ಈ ಹುಡುಗಿ ನಮ್ಮ ಮನೆಯಲ್ಲಿ ಹಾಜರ್. ಮನೆಗೆ ಬಂದ ವಿದೇಶಿ ಅತಿಥಿಗೆ ಮನೆಯವರ ಪರಿಚಯ ಆಗಿ ಉಪಚಾರ ಆದ ನಂತರ ಮಾತುಕತೆ ಆರಂಭ ವಾಯಿತು. “ಅಲ್ಲಮ್ಮ ನಿನಗೆ ನಮ್ದೇಶದ ಯಾವ ವಿಷಯ ಬೇಕು ಅಂತಾ ನನಗೆ ಗೊತ್ತಾಗ್ತಿಲ್ಲ” ಅಂತಾ ನಾನೇ ಮಾತಿಗೆ ಶುರುಮಾಡಿದೆ. ಅದಕ್ಕೆ ಆ ಹುಡುಗಿ ನೋಡು “ನಮ್ಮ ಫ್ರಾನ್ಸ್ ದೇಶಕ್ಕೂ ಶ್ರೀ ರಂಗ ಪಟ್ಟಣ ಕ್ಕೂ ಸಂಬಂಧವಿತ್ತು ಅಂತಾ ಭಾರತಕ್ಕೆ ಬರುವ ಮೊದಲು ನನಗೆ ತಿಳಿಯಿತು ಅದರ ಬಗ್ಗೆ ನನಗೆ ಮಾಹಿತಿ ಬೇಕೂ , ಹಲವರನ್ನು ವಿಚಾರಿಸಿದೆ ನಮಗೆ ಗೊತ್ತಿಲ್ಲಾ ಅಂತಾರೆ ಹೀಗಾಗಿ ನನ್ನ ಬಹಳಷ್ಟು ಸಮಯ ಕಳೆದು ಹೋಯ್ತು. ನಂತರ ಪರಿಚಯವಾದ ಸುನಿಲ್ ನಿನ್ನ ಬಗ್ಗೆ ಹಿಳಿದ ಅದಕ್ಕೆ ನಿನ್ನ ಬಳಿ ಬಂದೆ” ಅಂದರು.

ನನಗೆ ಅಚ್ಚರಿಯಾದರೂ ಖುಷಿಯಾಗಿ ಫ್ರಾಸ್ ದೇಶದ ಹಾಗು ಶ್ರೀ ರಂಗ ಪಟ್ಟಣದ ಬಗ್ಗೆ ನನ್ನಲ್ಲಿದ್ದ ಕೆಲವು ಮಾಹಿತಿ ತೋರಿಸಿದೆ. ಸುಮಾರು ಎರಡು ಘಂಟೆಗಳ ಕಾಲ ಹಲವು ವಿಚಾರಗಳನ್ನು ಮಾತಾಡಿದ ಅಜ್ಜಿ ಭಾರತ ದೇಶದ ಬಗ್ಗೆ ಹೊಗಳಿದ್ದೇ ಹೊಗಳಿದ್ದು. ನನಗೋ ನಮ್ಮ ದೇಶದ ಬಗ್ಗೆ ಒಬ್ಬ ವಿದೇಶಿ ಮಹಿಳೆ ಆಡುತ್ತಿರುವ ಮಾತುಗಳನ್ನು ಕೇಳಿ ಮನಸ್ಸು ತುಂಬಿ ಬಂದಿತ್ತು. ನಂತರ ತನ್ನ ಯೋಗ ತರಬೇತಿಗೆ ಹೋಗಲು ವೇಳೆಯಾಯಿತೆಂದು ಆ ಹುಡುಗಿ ಹೊರಟು ಹೋಯಿತು. ನಮ್ಮ ಮನೆಯಲ್ಲಿ ಎಲ್ಲರೊಂದಿಗೆ ನಗು ನಗುತ್ತಾ ಬೆರೆತು ಸಂಚಲನ ಮೂಡಿಸಿ ಹೊರತು ಬಿಟ್ಟಳು ಈ ಹುಡುಗಿ.

ಇದಾಗಿ ಮೂರು ದಿನಗಳು ಕಳೆದಿತ್ತು ನನ್ನ ಸ್ನೇಹಿತ ಸುನಿಲ್  ‘ಲೋ ಪಾಯಿ, ಆ ಯಮ್ಮ ನಿನ್ನ ಹಾಗು ನಿಮ್ಮ ತಾಯಿ,ಹೆಂಡತಿ, ಬಗ್ಗೆ ಬಹಳ ಖುಷಿಯಾಗಿ ಮಾತಾಡಿದರೂ ಕಣೋ ತಗೋ ಅವರು ನಿನಗೆ ಒಂದು ಪತ್ರ ಹಾಗು ನೆನಪಿನ ಕಾಣಿಕೆ ಕೊಟ್ಟಿದ್ದಾರೆ’ ಅಂದ. ಪತ್ರ ತೆಗೆದು ನೋಡಿದೆ.ಮುದ್ದಾದ ಅಂದದ ಅಕ್ಷರ [ ಅಷ್ಟು ವಯಸ್ಸಾಗಿದ್ದರೂ ಅಕ್ಷರ ಬರೆದ ರೀತಿ ಅಚ್ಚರಿಯಾಯಿತು.]

ವಯಸ್ಸಾದರೂ ಮುಕ್ಕಾಗದ ಕೈ ಬರಹ.ಮುದ್ದಾದ ಪ್ರೀತಿಯ ಹಾರೈಕೆಗಳಿಂದ ವಿದೇಶಿ ಹುಡುಗಿ ಪತ್ರ ಬರೆದು ಮುಂದಿನ ವರ್ಷ ಭೇಟಿ ಆಗುವುದಾಗಿ ತಿಳಿಸಿ ಫ್ರಾನ್ಸ್ ನಿಂದ ತಂದಿದ್ದ ಪರಿಮಳ ದ್ರವ್ಯದ ಮೂರು ಸಣ್ಣ ಮೂಟೆಗಳನ್ನು ನೀಡಿತ್ತು. ಬರೆದ ಪ್ರೀತಿಯ ಮಾತುಗಳು ಹೃದಯದಲ್ಲಿ ನಿಂತರೆ ಪ್ರೀತಿಯ ಕಾಣಿಕೆಯ ಸುವಾಸನೆಯ ಪರಿಮಳ ಮನೆಯಲ್ಲಿ ಹರಡಿತ್ತು.

ಬನ್ನಿ ಅವರ ಬಗ್ಗೆ ನನ್ನ ಸ್ನೇಹಿತ ಕಳುಹಿಸಿರುವ ಮೇಲ್ ನಲ್ಲಿ ಅವಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾನೆ ಒಮ್ಮೆ ಓದಿಬಿಡಿ. Michele is a young lady of 80+ years (Yes Young) who visits India with every opportunity she gets and rest assured she is here at least once a year or within 2 years. She has been doing this for the past 8- 10 years. What drives her here to India is the History, Culture and the Simplicity of the people. and the power in which she believes in Ayurveda and Yoga.

When it comes to History, she has a special attraction towards Srirangapatanam in which her country men were strongly involved with Tippu Sulthan, she is interested and is on a mission to know more about her country’s involvement with Tippu and the role they played to fight British on his side.

She left happy this time with a promise to be back next year and that is because she met a person by name Balu Subramanya who give her some insight of French Involvement with Tippu and answered some of the questions she had for a long time.

What she said that touched our heart is “I do not understand why many people in India does not have much interest in their own history?” Well, what can I say.. maybe it takes a book or books to answer that simple question “WHY?”

Maybe… I am just anticipating if her question WHY? reaches more people that might bring more interest in fellow Indians to learn from and protect our richest history in the World.

Sunny ಯಾವುದೋ ದೇಶದಿಂದ ಬಂದು ನನ್ನ ದೇಶದ ಇತಿಹಾಸ ತಿಳಿಯಲು ಆಸೆ ಪಟ್ಟ ಆ ಅಜ್ಜಿಗೆ ಜೈ ಹೋ. ಭಾರತೀಯರೇ ಇನ್ನಾದರೂ ನಮ್ಮ ದೇಶದ ಇತಿಹಾಸವನ್ನು ಸ್ಮಾರಕಗಳನ್ನು ಉಳಿಸಿ.. …. ದೇಶದ ಕೀರ್ತಿ ಬೆಳಗಿಸಿ.

 

6 ಟಿಪ್ಪಣಿಗಳು (+add yours?)

  1. balasubrahmanya.k.s.
    ಫೆಬ್ರ 15, 2011 @ 15:21:30

    “ಫ್ರಾನ್ಸ್ ದೇಶದ ಈ 80+ ವರ್ಷದ ಹುಡುಗಿ , ಇತಿಹಾಸ ಹುಡುಕಿಕೊಂಡು ನಮ್ಮ ಮನೆಗೆ ಬಂದಿತ್ತು !!” ಈ ಲೇಖನ ಅವಧಿಯಲ್ಲಿ ಪ್ರಕಟವಾದ ಬಗ್ಗೆ ನನಗೆ ಪ್ರಕಾಶ್ ಹೆಗ್ಡೆ ಹೇಳಿದ್ರೂ .ಈ ಪುಟಕ್ಕೆ ಬಂದ್ರೆ ಅಚ್ಚರಿಯಾಯಿತು. ಪ್ರಕಾಶ್ ಕಂಚಿ,ಸಾವಿತ್ರಿ , ಮಾನಸ ,ಪ್ರಕಾಶ್ ಹೆಗ್ಡೆ,ಇವರುಗಳೆಲ್ಲ ಮೆಚುಗೆಯ ಮಾತಾಡಿದ್ದಾರೆ. ಪ್ರಕಟಣೆ ಮಾಡಿದ “ಅವಧಿ ” ಗೆ ಹೃತ್ಪೂರ್ವಕ ನಮನಗಳು,ಮೆಚ್ಚುಗೆಯ ಮಾತಾಡಿದ ಬ್ಲಾಗ್ ವೀಕ್ಷಕರಿಗೆ ನನ್ನ ಕೃತಜ್ಞತೆಗಳು.ಬನ್ನಿ ನನ್ನ ಬ್ಲಾಗಿಗೆ. 1] http://nimmolagobba.blogspot.com,%5Bನನ್ನ ಬರಹಗಳ ಕೊರೆತ] 2] http://shwethadri.blogspot.com, [ಈ ಬ್ಲಾಗ್ ಶ್ರೀ ರಂಗ ಪಟ್ಟಣದ ಸ್ಮಾರಖಗಳ ಪರಿಚಯ ಮಾಡುತ್ತಿದೆ .]

    ಉತ್ತರ

  2. Prakash kanchi
    ಫೆಬ್ರ 10, 2011 @ 14:28:20

    ೮೦ ರ ಪ್ರಾಯದಲ್ಲೂ ಜ್ಞಾನಾರ್ಜನೆಗೆ ಸಮಯ, ಶ್ರಮ, ಹಣ ವ್ಯಯಿಸಿ ದೂರದಿಂದ ನಮ್ಮ ದೇಶಕ್ಕೆ ಆಗಮಿಸಿ ಮಾಹಿತಿ ಪಡೆದುಕೊಂಡು ಹೋದದ್ದಲ್ಲದ್ದೆ ಮತ್ತೆ ಬಂದು ಇನ್ನು ಹೆಚ್ಚಿನ ವಿಷಯ ತಿಳಿದುಕೊಳ್ಳಲು ಆಸಕ್ತಿ ತೋರುತ್ತಿರುವ ಆಜ್ಜಿಗೆ ನನ್ನ ಶುಭ ಹಾರೈಕೆಗಳು. ಹಾಗೆಯೇ ಶ್ರೀಯುತ ಬಾಲುರವರು ಶ್ರೀರಂಗ ಪಟ್ಟಣದ ಕುರಿತು ಬರೆಯುತ್ತಿರುವ ಬ್ಲಾಗಿನ ವಿಳಾಸ ತಿಳಿಸಿ

    ಉತ್ತರ

  3. savitri
    ಫೆಬ್ರ 10, 2011 @ 11:23:42

    ೮೦ ವರ್ಷದ ಹುಡುಗಿಯ ಬಗ್ಗೆ ಓದಿ ಖುಷಿಯಾಯಿತು. ೩೦ರ ಒಳ ಹೊರಗಿನ ವಯಸ್ಸಿನ ಮುದುಕಿಯರಿಗೆ ಇಂಥ ಹುಡುಗಿಯರು ಆದರ್ಶವಾಗಬೇಕು.

    ಉತ್ತರ

  4. Manasa
    ಫೆಬ್ರ 10, 2011 @ 08:55:45

    Balu sir, wonderful article… Yes, foreigners show more interest in knowing Indian history as ours is the oldest one. Here also I see Aussies practising Yoga, feel proud to be an Indian… Keep posting such articles.

    ಉತ್ತರ

  5. prakash hegde
    ಫೆಬ್ರ 10, 2011 @ 08:30:41

    ಫ್ರಾನ್ಸ್ ದೇಶದ ಮಹಿಳೆಗೆ ಮೊದಲ ಜೈ !

    ಹಾಗೆಯೇ ಮೈಸೂರು ಅರಸರ ಬಗೆಗೆ..
    ಶ್ರೀರಂಗ ಪಟ್ಟಣದ ಇತಿಹಾಸದ ಬಗೆಗೆ ಬಹಳ ತಿಳಿದುಕೊಂಡಿರುವ ಬಾಲೂರವರಿಗೂ “ಜೈ” !

    ನಾವು ನಮ್ಮ ಇತಿಹಾಸದ ಬಗೆಗೆ ತಿಳಿದುಕೊಳ್ಳುವ ಆಸಕ್ತಿಯನ್ನೇ ಕಳೆದುಕೊಂಡಿದ್ದೇವೆ..
    ನಮಗೆ ಸಲ್ಮಾನ್ ಖಾನ್‍ನ ದಿನಚರಿ..
    ಅವನ ಪ್ರೇಮ ಕಥೆಗಳು ಇಷ್ಟವಾಗುತ್ತವೆ..

    ನಮ್ಮ ಮಾಧಮಗಳಿಗೂ ಸಹ..

    ಬಾಲೂರವರು ಶ್ರೀರಂಗ ಪಟ್ಟಣದ ಇತಿಹಾಸಕ್ಕಾಗಿಯೇ ಒಂದು ಬ್ಲಾಗ್ ಬರೆಯುತ್ತಿದ್ದಾರೆ..
    ಅದು ಓದುಗರಿಲ್ಲದೆ ಸೊರಗುತ್ತಿದೆ..

    ಬಾಲುರವರ ಈ ಲೇಖನ ಅವಧಿಯಲ್ಲಿ ಪ್ರಕಟಿಸಿದ್ದಕ್ಕೆ ಅವಧಿಗೂ “ಜೈ” !

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: