ಜಿ ಪಿ ಬಸವರಾಜು ಪ್ರಶ್ನೆ: ಯಾವುದು ರಾಜಕೀಯ ಅನನ್ಯತೆ?

 

-ಜಿ.ಪಿ.ಬಸವರಾಜು

ಏನನ್ನೇ ಬಲಿಕೊಟ್ಟರೂ ಸರಿ, ಕುಚರ್ಿಯನ್ನು ಬಿಡಲೇ ಕೂಡದೆಂಬ ಹಟದಲ್ಲಿ ರಾಜ್ಯದ ಮತ್ತು ರಾಷ್ಟ್ರದ ಎಲ್ಲ ದೇವಾಲಯಗಳಿಗೂ ಅಂಡಲೆದ ಮುಖ್ಯಮಂತ್ರಿ ಯಡಿಯೂರಪ್ಪನವರ (ಈ ಹೆಸರನ್ನು ಹ್ಯಾಗೆ ಬರೆಯಬೇಕೆಂಬುದನ್ನು ವ್ಯಾಕರಣ ಪಂಡಿತರಾಗಲಿ, ಭಾಷಾತಜ್ಞರಾಗಲಿ ಹೇಳುವಂತಿಲ್ಲ; ಅದನ್ನು ಜ್ಯೋತಿಷಿಗಳು ನಿರ್ಧರಿಸುತ್ತಾರೆ.) ರಾಜಕಾರಣವನ್ನು ಕನರ್ಾಟಕದ ರಾಜಕೀಯ ಅನನ್ಯತೆ ಎಂದು ಕರೆಯೋಣವೇ? ಅಧಿಕಾರದಿಂದ ಹೊರಗಿದ್ದಾಗ ಮಾತ್ರ ಮೌಲ್ಯಗಳು(ಮಾತಿನಲ್ಲಿ), ಅಧಿಕಾರಕ್ಕೆ ಬಂದ ಮೇಲೆ ಕುಚರ್ಿಯೇ ಬಹುದೊಡ್ಡ ಮೌಲ್ಯ ಎನ್ನುವ ಬಿಜೆಪಿಯ ರಾಜಕಾರಣವನ್ನು ಕನರ್ಾಟಕದ ರಾಜಕೀಯ ಅನನ್ಯತೆ ಎಂದು ಹೇಳಬಹುದೇ? ಅಥವಾ ಹಣಬಲದಿಂದ ಶಾಸಕರನ್ನು, ಜನಪ್ರತಿನಿಧಿಗಳನ್ನು ಕೊಂಡುಕೊಳ್ಳುವ ಪ್ರಜಾಪ್ರಭುತ್ವ ವಿರೋಧೀ ಕೃತ್ಯಕ್ಕೆ ‘ಆಪರೇಷನ್ ಕಮಲ’ ಎಂದು ಕರೆದ ಬಿಜೆಪಿಯ ಲಜ್ಜೆಗೇಡಿತನದ ರಾಜಕಾರಣವೇ ಕನರ್ಾಟಕದ ರಾಜಕೀಯ ಅನನ್ಯತೆಯೇ?

ಹಿಂದುತ್ವ ಎಂದರೆ ಸಾಮರಸ್ಯ ಬದುಕಿಗೆ ಬೆಂಕಿಹಚ್ಚುವುದು ಎಂದು ಭಾವಿಸಿರುವ ಪರಿವಾರದ ರಾಜಕಾರಣವೇ ಕನರ್ಾಟಕದ ರಾಜಕೀಯ ಅನನ್ಯತೆಯೇ? ಮಠಗಳು, ಧರ್ಮಕೇಂದ್ರಗಳು ಎಂದು ಹೇಳಿಕೊಳ್ಳುತ್ತ ಧರ್ಮದ ಮುಸುಕಿನಲ್ಲಿ ಜಾತಿ ರಾಜಕಾರಣವನ್ನು ನಡೆಸುತ್ತಿರುವ ಇಂಥ ಸಂಸ್ಥೆಗಳ ವಿದ್ಯಮಾನವೇ ಕನರ್ಾಟಕದ ರಾಜಕೀಯ ಅನನ್ಯತೆಯಾಗುತ್ತದೆಯೇ? ಭೂಮಿಯನ್ನು, ಖನಿಜ ಸಂಪತ್ತನ್ನು ಕೊಳ್ಳೆ ಹೊಡೆಯುವ ಕನರ್ಾಟಕದ ಪಕ್ಷಾತೀತ ರಾಜಕಾರಣವನ್ನೇ ಕನರ್ಾಟಕದ ರಾಜಕೀಯ ಅನನ್ಯತೆ ಎಂದು ಕರೆಯೋಣವೇ? ಶ್ರೀಸಾಮಾನ್ಯನ ಅಪಾರ ಅನುಭವವನ್ನು ತನ್ನೊಡಲಲ್ಲಿಟ್ಟುಕೊಂಡು, ತನ್ನ ಕುಟುಂಬದ ಆಚೆಗೆ ನೋಡಲಾಗದಂಥ ಕುರುಡಿನಲ್ಲಿ ತೊಳಲುತ್ತಿರುವ ದೇವೇಗೌಡರ ‘ಜಾತ್ಯತೀತ'(!) ರಾಜಕಾರಣವನ್ನು ಕನರ್ಾಟಕದ ರಾಜಕೀಯ ಅನನ್ಯತೆ ಎಂದು ಹೇಳಬಹುದೇ? ತಾನೂ ಒಬ್ಬ ಸಮರ್ಥ ನಾಯಕ ಎಂಬುದನ್ನೇ ಮರೆತು ಪಕ್ಷದಿಂದ ಪಕ್ಷಕ್ಕೆ ಹಾರುತ್ತ ಎಲ್ಲಿಯೂ ಕಾಲೂರಲಾಗದ ಸ್ಥಿತಿಯಲ್ಲಿರುವ ಮಾಜಿ ಸಮಾಜವಾದಿ ಬಂಗಾರಪ್ಪನವರ ರಾಜಕೀಯವನ್ನು ಕನರ್ಾಟಕದ ರಾಜಕೀಯ ಅನನ್ಯತೆ ಎಂದರೆ ಹೇಗೆ? ಕಾಂಗ್ರೆಸ್ ಪಕ್ಷವನ್ನು ಸಮರ್ಥ ವಿರೋಧ ಪಕ್ಷವಾಗಿ ಕನರ್ಾಟಕದಲ್ಲಿ ಕಟ್ಟಲಾಗದೆ ಕೇಂದ್ರ ಸಂಪುಟದಲ್ಲಿ ಮುಖ ಮರೆಸಿಕೊಂಡಿರುವ ಕನರ್ಾಟಕದ ಸಚಿವರ ಕಾರ್ಯವೈಖರಿಯನ್ನು ಕನರ್ಾಟಕದ ರಾಜಕೀಯ ಅನನ್ಯತೆ ಎಂದು ವ್ಯಾಖ್ಯಾನಿಸೋಣವೇ?

ಕನರ್ಾಟಕದಲ್ಲಿರುವ ಪಕ್ಷಾತೀತವಾದ ರಾಜಕೀಯ ಭಂಡತೆಯನ್ನೇ ಅದರ ಅನನ್ಯತೆ ಎಂದು ಹೇಳೋಣವೇ? ನಮ್ಮ ರಾಜಕಾರಣಿಗಳು ಮುಳುಗೇಳುತ್ತಿರುವ ಭ್ರಷ್ಟತೆ, ನೂರಾರು ಹಗರಣಗಳು, ಲಜ್ಜೆಯೇ ಇಲ್ಲದ ನಡವಳಿಕೆ, ಮೂಢ ನಂಬಿಕೆಗಳನ್ನು ಉತ್ತೇಜಿಸುವ ವೈಚಾರಿಕ ದಾರಿದ್ರ್ಯ, ಜನತೆಯ ಹಿತದ ಬಗ್ಗೆ ನಿದ್ರೆಗಣ್ಣಿನಲ್ಲಿಯೂ ಚಿಂತಿಸದ ಅಪಾರ ನಿರ್ಲಕ್ಷ್ಯ- ಇವುಗಳೇ ಕನರ್ಾಟಕದ ಅನನ್ಯತೆಯೇ?ಕನರ್ಾಟಕದ ಸದ್ಯದ ರಾಜಕೀಯವನ್ನು ಎತ್ತಿತೋರಿಸುವ ಯಾವುದೇ ಮುಖವನ್ನು ನೋಡಿದರೂ ಅದು ಇಡೀ ಭಾರತದ ರಾಜಕೀಯ ಮುಖವೇ ಆಗಿ ತೋರುತ್ತಿದೆ. ಇದನ್ನು ಕನರ್ಾಟಕದ ಅನನ್ಯತೆಯೆಂದು ವ್ಯಾಖ್ಯಾನಿಸಲು ಸಾಧ್ಯವೇ?

ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುದೊಡ್ಡ ಶಕ್ತಿ ಎಂದರೆ ಅದರ ರಾಜಕೀಯ ಕೇವಲ ಆಳುವ ಪಕ್ಷ, ವಿರೋಧ ಪಕ್ಷ ಹಾಗೂ ಪಕ್ಷೇತರ ಅಭ್ಯಥರ್ಿಗಳ ರಾಜಕೀಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ; ಸಮುದಾಯದ ಚಿಂತನೆ, ಕ್ರಿಯಾಶೀಲತೆ, ಸಹಭಾಗಿತ್ವ ಮತ್ತು ಸಮುದಾಯದ ಅನುಭವಜನ್ಯ ವಿವೇಕಗಳಿಗೂ ಅದು ವಿಸ್ತರಿಸಿಕೊಂಡಿರುತ್ತದೆ. ರಾಜಕೀಯವನ್ನು ನಿಯಂತ್ರಿಸಬಲ್ಲ ಜನಶಕ್ತಿಯೂ ರಾಜಕೀಯದ ಭಾಗವೇ ಆಗಿರುತ್ತದೆ. ಸಮುದಾಯದ ಈ ಗುಣಗಳು ಸದ್ಯದ ಬದುಕಿನಲ್ಲಿ ಮಾತ್ರ ಪ್ರತಿಫಲಿಸುತ್ತಿರುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ವರ್ತಮಾನ, ಚರಿತ್ರೆ ಮತ್ತು ಭವಿಷ್ಯತ್ತುಗಳನ್ನು ಸಮಗ್ರವಾಗಿ ಪರಿಶೀಲಿಸಿದಾಗ ಮಾತ್ರ ಸಮುದಾಯದ ಈ ಗುಣಗಳು ಕಾಣಿಸುತ್ತವೆ. ಕನರ್ಾಟಕದ ರಾಜಕೀಯ ಅನನ್ಯತೆಯನ್ನು ನಾವು ಇಂಥ ಪರಿಶೀಲನೆಯ ಮೂಲಕವೇ ಕಂಡುಕೊಳ್ಳಬಹುದು.

ರಸ್ತೆ ನಿಮರ್ಾಣಕ್ಕೊ, ಕೈಗಾರಿಕೆಗಳ ಸ್ಥಾಪನೆಗೊ ಇತ್ಯಾದಿ ಕಾರಣಗಳಿಗಾಗಿ ಭೂಮಿಯನ್ನು ವಶಪಡಿಸಿಕೊಳ್ಳುವ ಪ್ರಶ್ನೆ ಎದುರಾದಾಗ ದೇವೇಗೌಡರು ತಾವು ರೈತರ ಪರ ಹೋರಾಟಗಾರರಂತೆ ಮಾತನಾಡುತ್ತಾರೆ. ಎಡೆಯೂರಪ್ಪನವರಂತೂ ಪ್ರಮಾಣ ವಚನ ಸ್ವೀಕಾರದಿಂದ ಹಿಡಿದು ಇಲ್ಲಿಯವರೆಗೆ ಅನೇಕ ಸಂದರ್ಭಗಳನ್ನು ಬಳಸಿಕೊಂಡು ತಾವು ರೈತರ ಪರ ಎಂದು ತೋರಿಸಿಕೊಳ್ಳಲು ನಾಟಕಗಳನ್ನು ಆಡುತ್ತಲೇ ಬಂದಿದ್ದಾರೆ. ರೈತರ ಜ್ವಲಂತ ಸಮಸ್ಯೆಗಳಿಗೆ ಎಂದೂ ಮುಖಾಮುಖಿಯಾಗದ ಇಂಥ ಅನೇಕ ನಾಯಕರು ತಾವು ರೈತರ ಪರ ಎಂದು ತೋರಿಸಿಕೊಳ್ಳಬೇಕಾದರೆ ಅದರ ಹಿಂದಿರುವ ಒತ್ತಡ ಎಲಿಯದು? ಯಾರಿಂದ, ಯಾವಾಗಿನಿಂದ ಬಂತು?

1980ರ ದಶಕದ ಕನರ್ಾಟಕದ ಚರಿತ್ರೆಯನ್ನು ನೋಡಿದರೆ ಅಲ್ಲಿ ಈ ಪ್ರಶ್ನೆಗಳಿಗೆ ಉತ್ತರವಿರುವಂತಿದೆ. ಪ್ರೊ.ನಂಜುಂಡಸ್ವಾಮಿ, ಎಚ್.ಎಸ್.ರುದ್ರಪ್ಪ, ಸುಂದರೇಶ್, ಶಾಮಣ್ಣ, ಬಾಬಾಗೌಡ ಪಾಟೀಲ ಮೊದಲಾದವರ ನೇತೃತ್ವದಲ್ಲಿ ಹುಟ್ಟಿಕೊಂಡ ರೈತಚಳವಳಿ ಒಂದು ಪ್ರಬಲ ಶಕ್ತಿಯಾಗಿ ಬೆಳೆದದ್ದು ಕನರ್ಾಟಕದ ಇತಿಹಾಸದಲ್ಲಿ ಬಹಳ ದೊಡ್ಡ ಅಧ್ಯಾಯ. ಗುಂಡೂರಾಯರು ಮುಖ್ಯಮಂತ್ರಿಯಾಗಿದ್ದಾಗ ರೂಪಗೊಂಡ ರೈತಚಳವಳಿ ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ಗುಂಡೂರಾಯರನ್ನು ಚುನಾವಣೆಯಲ್ಲಿ ಸೋಲಿಸಿ ಮತ್ತೆ ಮುಖ ಎತ್ತದಂತೆ ಮಾಡಿತು. ರೈತರೇ ಕಟ್ಟಿದ ರಾಜಕೀಯ ಪಕ್ಷಗಳು ಪ್ರಬಲ ಪಕ್ಷಗಳಾಗಿ ಬೆಳೆಯಲಿಲ್ಲ. ರೈತಸಂಘಟನೆಯಲ್ಲಿ ಮೂಡಿದ ಬಿರುಕು ಬೆಳೆಯುತ್ತಲೇ ಹೋದದ್ದು ಅನೇಕರು ರೈತ ಸಂಘಟನೆಯ ಬಗೆಗೆ ಇಟ್ಟುಕೊಂಡಿದ್ದ ಭರವಸೆ ಈಡೇರದೇ ಹೋದದ್ದು ಎಲ್ಲ ನಿಜವಾದರೂ, ರೈತ ಚಳವಳಿ ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟುಹಾಕಿದ ಎಚ್ಚರ ಬಹಳ ಮಹತ್ವದ ಕೊಡುಗೆ. ಇವತ್ತು ರಾಜಕೀಯ ನಾಯಕರು ರೈತರ ಬಗ್ಗೆ ತೋರಿಕೆಗಾದರೂ ಮಾತನಾಡುತ್ತಿರುವುದರ ಹಿಂದೆ ಈ ಚಳವಳಿಯ ಕೊಡುಗೆ ಇದೆ. ಇದು ಕನರ್ಾಟಕದ ರಾಜಕೀಯ ಅನನ್ಯತೆಯ ಒಂದು ಮುಖ್ಯ ಮುಖ ಎಂಬುದು ನನ್ನ ತಿಳುವಳಿಕೆ.

ಭಾಷಾಭಿಮಾನದ ಪ್ರಶ್ನೆ ಬಂದಾಗ ತಮಿಳುನಾಡನ್ನೊ, ಕೇರಳವನ್ನೊ ಅಥವಾ ಪಶ್ಚಿಮ ಬಂಗಾಳವನ್ನೊ ಹೆಸರಿಸುವುದು ಉಂಟು. ಕನರ್ಾಟಕದ ಭಾಷಾಭಿಮಾನವಂತೂ ಸೊನ್ನೆ ಎಂಬ ಟೀಕೆಗಳು ಈಗಲೂ ಕೇಳುತ್ತಿವೆ. ಆದರೆ ಕನರ್ಾಟಕದಲ್ಲಿ ಗೋಕಾಕ್ ಚಳವಳಿ ಒಂದು ಪ್ರಬಲ ಭಾಷಾ ಚಳವಳಿಯಾಗಿ ರೂಪಗೊಂಡದ್ದು ಅದರ ರಾಜಕೀಯ ಪಲ್ಲಟಗಳು ಕನರ್ಾಟಕದ ರಾಜಕೀಯದಲ್ಲಿ ಮಹತ್ವದ ಪಾತ್ರವಹಿಸಿದ್ದು ಬಹಳ ಮುಖ್ಯವಾದದ್ದು. ಕನರ್ಾಟಕದಲ್ಲಿ ಇದು ಹೇಗೆ ಸಾಧ್ಯವಾಯಿತು? ಇದು ಕೂಡಾ ಕನರ್ಾಟಕದ ರಾಜಕೀಯ ಅನನ್ಯತೆಯೇ.

ನಾಡು-ನುಡಿಯ ಬಗೆಗಿನ ನಮ್ಮ ಅಭಿಮಾನ ಎಂದೂ ದುರಭಿಮಾನಕ್ಕೆ ಎಡೆಕೊಡಲಿಲ್ಲ. ಈ ಕಾರಣದಿಂದಾಗಿಯೇ ನಾವು ಭಾಷೆಯ ಹೆಸರಿನಲ್ಲಿ ಅನ್ಯಭಾಷೆಗಳ ಜನರನ್ನು ದ್ವೇಷಿಸಿಲ್ಲ; ಹೆದರಿಸಿ, ಕಂಗೆಡಿಸಿ ಕನರ್ಾಟಕದಿಂದ ಓಡಿಸಿಲ್ಲ. ಸಹಬಾಳ್ವೆ ಎನ್ನುವುದು ನಮ್ಮ ವಿವೇಕವೇ ಹೊರತು ದೌರ್ಬಲ್ಯವಲ್ಲ. ನಮ್ಮ ಗಡಿಗಳು ಇವತ್ತಿಗೂ ಬೆಂಕಿಯನ್ನು ಉಗುಳುವ ತಾಣಗಳಲ್ಲ. ರಾಜಕೀಯ ಕಾರಣಗಳಿಗಾಗಿ ಆಗಾಗ ಅಲಲ್ಲಿ ಸಣ್ಣಪುಟ್ಟ ಗಲಭೆಗಳು ಆಗಿರಬಹುದು. ಅವು ರಾಜಕಾರಣ ಪ್ರೇರಿತ ಗಲಭೆಗಳೇ ಹೊರತು, ಜನ ಮಾಡಿದ ಗಲಭೆಗಳಲ್ಲ. ಇದು ಕನರ್ಾಟಕದ ಬಹುದೊಡ್ಡ, ಅಪರೂಪದ ಗುಣ.

ನಮ್ಮ ಭಾಷೆಯನ್ನು ನಾವು ಕಟ್ಟಿದ್ದೇವೆ; ಮುನ್ನಡೆಸಿದ್ದೇವೆ. ಇದು ಕೂಗಾಟದ ಮೂಲಕ, ತೋರುಗಾಣಿಕೆಯ ಹೋರಾಟಗಳ ಮೂಲಕ ಮಾಡಿದ ಸಾಧನೆಯಲ್ಲ. ಪ್ರಾಮಾಣಿಕ ಹೋರಾಟಗಳೂ ಒಂದು ಹಂತದಲ್ಲಿ ಅಗತ್ಯ. ಆದರೆ ಹೋರಾಟಗಳಿಂದಷ್ಟೇ ಒಂದು ಭಾಷೆಯನ್ನು, ಸಂಸ್ಕೃತಿಯನ್ನು ಕಟ್ಟಲಾಗುವುದಿಲ್ಲ. ಅದರ ಹಿಂದೆ ಅನೇಕ ಬಗೆಯ ಪರಿಶ್ರಮಗಳೂ ಇರುತ್ತವೆ. ನಮ್ಮ ಕನ್ನಡ ಸಾಹಿತ್ಯ ಏಳು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿರುವುದನ್ನು ಗಮನಿಸಿದರೆ ಇಂಥ ಸಾಧನೆಗಳ ಪರಿಚಯವಾಗುತ್ತದೆ. ರಾಜಕೀಯ ಕಾರಣಗಳಿಂದಾಗಿ ಶಾಸ್ತ್ರೀಯ ಭಾಷೆಯ ಸ್ಥಾನ ಕನ್ನಡಕ್ಕೆ ತಡವಾಗಿ ಬಂದಿರಬಹುದು. ಆದರೆ ಅಂಥ ಒಂದು ಅರ್ಹತೆ ನಮ್ಮ ಭಾಷೆಗಿರುವುದು ಸತ್ಯವಲ್ಲವೇ.

ಕನರ್ಾಟಕದ ಇನ್ನೊಂದು ಪ್ರಮುಖ ಚಳವಳಿ ದಲಿತ ಚಳವಳಿ. ಇದೊಂದು ಪ್ರಬಲ ರಾಜಕೀಯ ಶಕ್ತಿಯಾಗಿ, ಅಸ್ತ್ರವಾಗಿ ಬೆಳೆಯಲಿಲ್ಲವೆಂಬುದು ನಿಜವಾದರೂ, ಮಹಾರಾಷ್ಟ್ರದ ದಲಿತ್ ಪ್ಯಾಂಥರ್ಸ್ ಚಳವಳಿಗೆ ಇದನ್ನು ಹೋಲಿಸಿ ನೋಡಿ ಅನೇಕರು ನಿರಾಸೆಗೊಂಡರೂ ಈ ಚಳವಳಿ ಮೂಡಿಸಿದ ಎಚ್ಚರ ಕನರ್ಾಟಕದ ರಾಜಕೀಯದ ಮಟ್ಟಿಗಂತೂ ಅನನ್ಯವೇ. ಕನರ್ಾಟಕದಲ್ಲಿ ದಲಿತ ಶಕ್ತಿ ಇವತ್ತು ಅನೇಕ ಗುಂಪುಗಳಲ್ಲಿ ಹಂಚಿಹೋಗಿದೆ; ರಾಜಕೀಯ ಅಧಿಕಾರವನ್ನು ದಲಿತರು ಹಿಡಿಯಲಾಗದ ಸ್ಥಿತಿ ರಾಜ್ಯ ರಾಜಕಾರಣದಲ್ಲಿ ನಿಮರ್ಾಣವಾಗಿದೆ. ಇಷ್ಟಾದರೂ, ಈ ಚಳವಳಿ ದಲಿತ ಸಮುದಾಯದಲ್ಲಿ ಹುಟ್ಟಿಸಿದ ಸಾಮಾಜಿಕ, ಆಥರ್ಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಎಚ್ಚರಗಳು ಒಟ್ಟು ಸಮುದಾಯವನ್ನು ಮುನ್ನಡೆಸುವಲ್ಲಿ ಒಂದು ಚಾಲನಶಕ್ತಿಯಾಗಿರುವುದು, ಅಧಿಕಾರ ರಾಜಕಾರಣದ ಒಳಗೇ ಒಂದು ಗುಪ್ತ ಭೀತಿಯನ್ನು ಹುಟ್ಟಿಸಿರುವುದು ಬಹಳ ಮಹತ್ವದ ಅಂಶಗಳು.

ತಮಿಳುನಾಡಿನಲ್ಲಿ ಬೆಳ್ಳಿ ತೆರೆಯ ನಟ ನಟಿಯರೇ ಇವತ್ತಿಗೂ ಅಧಿಕಾರ ರಾಜಕಾರಣವನ್ನು ನಡೆಸುತ್ತಿದ್ದಾರೆ. ನಮ್ಮಲ್ಲಿ ಮೇರು ನಟ ರಾಜಕುಮಾರ್ ಎಷ್ಟೇ ಒತ್ತಡವಿದ್ದರೂ ರಾಜಕೀಯವನ್ನು ಏಕೆ ಪ್ರವೇಶಿಸಲಿಲ್ಲ? ಅವರನ್ನು ನಿಯಂತ್ರಿಸಿದ ಶಕ್ತಿ ಯಾವುದು? ನಟರ ರಾಜಕೀಯ ಪ್ರವೇಶಕ್ಕೆ ನಮ್ಮ ಕನ್ನಡ ನೆಲವೇ ವಿರೋಧವಾಗಿತ್ತೇ? ಒಂದು ಅಪವಾದದಂತೆ ಅಂಬರೀಶ್ ಲೋಕಸಭೆಗೆ ಆಯ್ಕೆಯಾದದ್ದು ನಿಜ. ಆದರೆ ಅವರಿಗೂ ನಮ್ಮ ಜನ ಸೋಲಿನ ರುಚಿಯನ್ನು ತೋರಿಸಿದರಲ್ಲಾ! ಸಮುದಾಯದ ಈ ವಿವೇಕವೇ ಕನರ್ಾಟಕದ ರಾಜಕೀಯ ಅನನ್ಯತೆಯಲ್ಲವೇ?

ಪೆರಿಯಾರ್ ಕನರ್ಾಟಕದಲ್ಲಿ ಹುಟ್ಟಿದರೊ, ತಮಿಳುನಾಡಿನಲ್ಲಿ ಬೆಳೆದರೋ ಅದು ಮುಖ್ಯವಲ್ಲ. ಪೆರಿಯಾರ್ ವಿಚಾರಗಳಿಗೆ ತಮಿಳುನಾಡು ಸ್ಪಂದಿಸಿದ ರೀತಿ, ದ್ರಾವಿಡತ್ವವನ್ನು ಉಳಿಸಿಕೊಳ್ಳಲು ತಮಿಳರು ನಡೆಸಿದ ಹೋರಾಟ ಬಹಳ ದೊಡ್ಡದು. ಅದು ಆ ರಾಜ್ಯದ, ಜನತೆಯ ಅನನ್ಯತೆ. ಕನರ್ಾಟಕದ ವೈಚಾರಿಕ ಚಿಂತನೆಯ ಅನನ್ಯತೆ ಹೀಗೆ ಪ್ರಖರವಾಗಿ ಕಾಣಿಸದೆ ಇರಬಹುದು. ಆದರೆ ಕನರ್ಾಟಕ ಎಲ್ಲ ಬಗೆಯ ಚಿಂತನೆಗೆ, ವಿಚಾರಧಾರೆಗೆ ಮುಕ್ತವಾಗಿ ಬಾಗಿಲುಗಳನ್ನು ತೆರೆದಿರುವುದು ಅದರ ಬಹುಮುಖೀ ಸತ್ವಕ್ಕೆ ಕಾರಣವಾಗಿದೆ. ಕನರ್ಾಟಕದಲ್ಲಿ ಗಾಂಧಿ ಚಚರ್ೆಗೆ ಒಳಗಾಗಿದ್ದಾರೆ. ಹಾಗೆಯೇ ಲೋಹಿಯಾ, ಅಂಬೇಡ್ಕರ್, ಮಾಕ್ಸರ್್, ಜೆಪಿ, ಶಾಂತವೇರಿ ಗೋಪಾಲಗೌಡ, ಕುವೆಂಪು ಅವರ ವಿಚಾರಗಳ ಮಂಥನವೂ ಅರ್ಥಪೂರ್ಣವಾಗಿಯೇ ನಡೆದಿದೆ. ಅಷ್ಟೇ ಅಲ್ಲ ಈ ವಿಚಾರಗಳು ನಮ್ಮ ಸಾಮಾಜಿಕ, ರಾಜಕೀಯ, ಆಥರ್ಿಕ, ಸಾಂಸ್ಕೃತಿಕ ವಿದ್ಯಮಾನಗಳ ಮೇಲೆ ಪ್ರಭಾವವನ್ನೂ ಕಾಲಕಾಲಕೆ ಬೀರುತ್ತ ಬಂದಿವೆ. ನಮ್ಮಲ್ಲಿ ಹುಟ್ಟಿದ ಬಹುಮುಖ್ಯ ಚಳವಳಿಗಳ ಹಿನ್ನೆಲೆಯಲ್ಲಿ ಇಂಥ ವಿಚಾರಧಾರೆಗಳ ಪ್ರಭಾವವನ್ನು ಗುರುತಿಸುವುದು ಕಷ್ಟವಾಗಲಾರದು. ಶಿವಮೊಗ್ಗ ಜಿಲ್ಲೆಯ ಒಂದು ಪುಟ್ಟ ಊರು ಕಾಗೋಡಿನಲ್ಲಿ ಗೇಣಿದಾರರ ಚಳವಳಿ ನಡೆದದ್ದು, ಲೋಹಿಯಾ ಈ ಗ್ರಾಮಕ್ಕೆ ಭೇಟಿಕೊಟ್ಟದ್ದು, ಇಡೀ ರಾಷ್ಟ್ರವೇ ಈ ಚಳವಳಿಯನ್ನು ಕುತೂಹಲದಿಂದ ನೋಡಿದ್ದು-ಇದೆಲ್ಲದರ ಹಿಂದೆ ಲೋಹಿಯಾ ಚಿಂತನೆಯ ಎಳೆಗಳಿರುವುದನ್ನು ಮರೆಯುವುದು ಹೇಗೆ?

ಕಳೆದ 50-60 ವರ್ಷಗಳ ಕನ್ನಡ ಸಾಹಿತ್ಯ ಚರಿತ್ರೆಯನ್ನು ಗಮನಿಸಿದಾಗಲೂ ಗಾಂಧಿ, ಲೋಹಿಯಾ, ಮಾಕ್ಸರ್್, ಅಂಬೇಡ್ಕರ್ ಮೊದಲಾದ ಚಿಂತಕರ ದಟ್ಟ ಪ್ರಭಾವವನ್ನು ಗುರುತಿಸುವುದು ಕಷ್ಟವಾಗಲಾರದು. ಹಾಗೆಯೇ ಸ್ವಾತಂತ್ರ್ಯಾನಂತರದ ಕನರ್ಾಟಕದ ರಾಜಕೀಯ ಪುಟಗಳನ್ನು ತಿರುಗಿಸಿದಾಲೂ ಈ ಚಿಂತನೆಗಳ ಪ್ರಭಾವಗಳೊ ಅಥವಾ ಅವುಗಳ ನೆರಳೊ ಕಾಣಿಸುತ್ತವೆ.

ಕೂಗಾಟದಲ್ಲಿ, ಹಾರಾಟದಲ್ಲಿ ಕನರ್ಾಟಕ ಹಿಂದು. ಅದು ಸಭ್ಯತೆಯ ಗಡಿಯನ್ನು ಎಂದೂ ದಾಟಿಲ್ಲ. ಸಹಿಷ್ಣುತೆ, ಸಹಕಾರ, ಸಹಬಾಳ್ವೆಗಳಿಗೆ ಹೆಸರಾದದ್ದು ಕನರ್ಾಟಕ. ಇಂಥ ಗುಣಗಳೂ ನಮ್ಮ ಅಧಿಕಾರ ರಾಜಕಾರಣದ ಮೇಲೆ, ರಾಜಕಾರಣಿಗಳ ಮೇಲೆ ಪರೋಕ್ಷ ಒತ್ತಡಗಳನ್ನು ಹೇರುತ್ತಿರಬಹುದು. ಇದು ಕನರ್ಾಟಕದ ಅನನ್ಯ ಗುಣವೇ.

ಅಮೆರಿಕದ ರಾಜಕಾರಣ ಎಂಥ ಸ್ಥಿತ್ಯಂತರಗಳನ್ನು ಪಡೆದುಕೊಂಡರೂ, ಅಲ್ಲಿ ಉದಾರ ಮನೋಭಾವ, ಸ್ವಾತಂತ್ರ್ಯವನ್ನು ಗೌರವಿಸುವ ಗುಣ ಸದಾ ಉಳಿದುಕೊಂಡೇ ಬಂದಿವೆ. ಅದಕ್ಕೆ ಕಾರಣಗಳೇನು? ಅಮೆರಿಕ ಎಲ್ಲರನ್ನೂ ಸಹಿಸುತ್ತದೆ, ಎಲ್ಲರನ್ನು ಸ್ವಾಗತಿಸುತ್ತದೆ, ಕನರ್ಾಟಕದಂತೆ.

 

 

 

1 ಟಿಪ್ಪಣಿ (+add yours?)

  1. guruprasad
    ಫೆಬ್ರ 09, 2011 @ 15:02:26

    lekhana thumba chenagi muddi bandide , elliyavarige namma jana nanu nanna mane anutha sumane irutharo aliyavarege ivara aata , janake samajika javabdari banda maru chakhsannave brashtta hagu nicha nayakarige buddi kalisuthare

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: