ಕನ್ನಡಮ್ಮನ ಪ್ರತಿಮೆ- ಬೇಕೋ ಬೇಡವೋ..?

ಮುಖ್ಯಮಂತ್ರಿ ಯಡಿಯೂರಪ್ಪನವರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 25 ಕೋಟಿ ರೂ ವೆಚ್ಚದಲ್ಲಿ ಕನ್ನಡ ಭುವನೇಶ್ವರಿ ಪ್ರತಿಮೆ ನಿರ್ಮಿಸುವುದಾಗಿ ಹೇಳಿದ್ದಾರೆ. ಅದನ್ನು ಕವಿ ಕೃಷ್ಣಮೂರ್ತಿ ಬೆಳಗೆರೆ ಸಮಾನಾಂತರ ಘೋಷ್ಟಿಯಲ್ಲಿ ತರಾಟೆಗೆ ತೆಗೆದುಕೊಂಡದ್ದೂ ಆಗಿದೆ.

ಈಗ ನೀವು ಹೇಳಿ..ಪ್ರತಿಮೆ ಬೇಕೋ ಬೇಡವೋ..?

10 ಟಿಪ್ಪಣಿಗಳು (+add yours?)

 1. ರೇಣುಕಾ ನಿಡಗುಂದಿ
  ಫೆಬ್ರ 09, 2011 @ 12:56:13

  ಅಧ್ಯಾಪಕ ವೃತ್ತಿಶಿಕ್ಷಣ ಪಡೆದು ಉದ್ಯೋಗವಿಲ್ಲದೇ, ಕೆಲಸ ಕರೆಗಾಗಿ ಕಾದು ಕುಳಿತ ನಿರುದ್ಯೋಗಿಗಳಿದ್ದಾರೆ. ಅವರಿಗೆ ಕೆಲಸಕೊಡಿ. ಕನ್ನಡ ಕಟ್ಟುವ ಕೆಲ್ಸವನ್ನಾದರೂ ಮಾಡಿಯಾರು. ಪ್ರತಿಮೆ ಹೆಸರಿನಲ್ಲಿ ಮತ್ತಷ್ಟು ಘೋಟಾಳಾ ಅಗುವುದು ಬೇಕಿಲ್ಲ. ಅದರ ಅಗತ್ಯವೂ ಇಲ್ಲ.

  ಉತ್ತರ

 2. ಕುಮಾರ ರೈತ
  ಫೆಬ್ರ 09, 2011 @ 09:16:17

  ಪ್ರತಿಮಾ ಸಂಸ್ಕೃತಿಗೆ ಅಂಟಿಕೊಳ್ಳುವುದೇ ಸರಿಯಲ್ಲ. ಅನೇಕ ಕನ್ನಡ ಶಾಲೆಗಳು ಭೌತಿಕ ದುಸ್ಥಿತಿಯಲ್ಲಿವೆ. ರಾಜಧಾನಿ ಕನ್ನಡ ಶಾಲೆಗಳ ಪರಿಸ್ಥಿತಿ ಅಧ್ವಾನ. ಎಳವೆಯಲ್ಲಿಯೇ ಕನ್ನಡ ಪ್ರೇಮ ಬಿತ್ತಿ-ಬೆಳೆಸಬೇಕಾದ ಶಾಲೆಗಳ ಇಂಥ ಸ್ಥಿತಿ, ಮಕ್ಕಳ ಮನಸಿನ ಮೇಲೆ ಬೀರುವ ದುಷ್ಪರಿಣಾಮ ಅಪಾರ. ಅತ್ಯಂತ ಎತ್ತರದ ಭುವನೇಶ್ವರಿ ಪ್ರತಿಮೆ ಸ್ಥಾಪನೆಯಿಂದ ಕನ್ನಡ ಭಾಷೆಗೆ ಯಾವ ಭಾಗ್ಯವೂ ಬರುವುದಿಲ್ಲ. ಇದೇ ಹಣವನ್ನು ಕನ್ನಡದ ರಚನಾತ್ಮಕ ಕಾರ್ಯಗಳಿಗೆ ಬಳಸಲೇಬೇಕು

  ಉತ್ತರ

 3. ಪ್ರಶಾಂತ್ ,,,,,,,,,,,,,,,,,,
  ಫೆಬ್ರ 08, 2011 @ 15:16:38

  ಬೇಡಾ ಸ್ವಾಮಿ ಬೇಡಾ,ಕನ್ನಡ ಶಾಲೆಗಳು ಮುಚ್ಚೊವ ಸ್ಥಿತಿಗೆ ಬನ್ದಿವೆ. ಅದರಿಂದಾಗಿ ಶಿಕ್ಷಕರ ಸಂಖ್ಯೆ ಹೆಚ್ಚುವರಿಯಾಗಿದ್ದು , ಇದರಿಂದಾಗಿ ಶಿಕ್ಷಕರು ವಲಸೇ ಹೊಗುವಂತಾಗಿದೆ, ಮತ್ತು ನಿರುದ್ಯೋಗಿ ಶಿಕ್ಷಕರಿಗೆ ಕೆಲಸ ಸಿಗದಾಗಿದೆ, ಸಾಧ್ಯವಾದ್ರೆ ಇದನ್ನು ತಪ್ಪಿಸಲು ಪ್ರಯತ್ನಿಸಿ. ಭುವನೇಶ್ವರಿ ಪ್ರತಿಮೆ ನಿರ್ಮಿಸುವುದಾಗಿ ಹೇಳಿ ಅದರ ಹಣ ಸೋರಿಕೆಯಿಂದ ರಾಜಕಾರಣಿಗಳ ಖಜಾನೆ ತುಂಬಿಸುವುದನ್ನು ಬಿಡಿ……..

  ಉತ್ತರ

 4. chandrakant
  ಫೆಬ್ರ 07, 2011 @ 17:50:45

  ಪ್ರತಿಮೆ ಬೇಡ ಸ್ವಾಮಿ. ಕನ್ನಡ ಶಾಲೆಗಳು ಮುಚ್ಚೊ ಸ್ಥಿತಿಗೆ ಬನ್ದಿವೆ. ಸಾಧ್ಯವಾದ್ರೆ ಅವುಗಳನ್ನ ಉಳಿಸಿ. ಇಲ್ಲ್ದಿದ್ರೆ ಬೆನ್ಗಳೂರಲ್ಲಿ ನೂರಕ್ಕೆ ಎಪ್ಪತ್ತು ಭಾಗ ಇರೊ ಅನ್ಯಭಾಶಿಕರಿಗೆ ಕನ್ನಡ ಕಲಿಸೊದು ನೊಡಿ. ಆಗ ಕನ್ನಡ ಉಳಿಯಬಹುದು ಬೆಳೆಯಬಹುದು.

  ಉತ್ತರ

 5. ಅರಕಲಗೂಡು ಜಯಕುಮಾರ್
  ಫೆಬ್ರ 07, 2011 @ 17:47:15

  ಪ್ರತಿಮೆ ಸ್ಥಾಪನೆಗೆ 25ಕೋಟಿ ವ್ಯಯಿಸುವುದು ಯಡಿಯೂರಪ್ಪರ ಮೂರ್ಖತನದ ಪರಮಾವಧಿ ಇಚ್ಚಾಶಕ್ತಿಯಿಟ್ಟುಕೊಂಡು ಕನ್ನಡ ಭಾಷೆ ಅಭಿವೃದ್ದಿಗೆ ಪೂರಕವಾದ ವಿವಿಧ ಆಯಾಮಗಳಲ್ಲಿ ಹಣ ವ್ಯಯಿಸಲಿ, ಪ್ರತಿಮಾ ಸಂಸ್ಕೃತಿ ಬೇಕಿಲ್ಲ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಅಭಿವೃದ್ದಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತುಗಳಿಗೆ ಅಗತ್ಯ ಅನುದಾನ ನೀಡಲಿ, ಕನ್ನಡ ಮತ್ತು ಸಂಸ್ಕೃತಿ ಖಾತೆಗೆ ಮರುಜೀವ ನೀಡಲಿ. ಸಾಹಿತ್ಯ ಭವನಗಳು ಎಲ್ಲೆಡೆಯೂ ತಲೆಎತ್ತುವಂತೆ ಯೋಜನೆ ರೂಪಿಸಿ ಕನ್ನಡ ಪರಂಪರೆಯ ಉಳಿವಿಗೆ ಅವಕಾಶ ನೀಡಲಿ ಅದು ಬಿಟ್ಟು ಇದೆಂತಹದು ಪ್ರತಿಮಾ ಸಂಸ್ಕೃತಿ ಥೂ…!

  ಉತ್ತರ

 6. RJ
  ಫೆಬ್ರ 07, 2011 @ 17:30:59

  ನಮ್ಮ ಯಡ್ಯೂರಪ್ಪನವರು ಯಾಕೆ ಹೀಗೆ ಮಾತಾಡ್ತಾರೋ ಗೊತ್ತಿಲ್ಲ.
  ಯಾವ ಸಭೆ ಸಮಾರಂಭಕ್ಕೆ ಹೋದರೂ ಅಲ್ಲಿ ಸಂಬಂಧಪಟ್ಟ ವ್ಯಕ್ತಿ,ವಿಚಾರಗಳಿಗೆ
  ಸಂಬಂಧಿಸಿದಂತೆ ಒಂದಿಷ್ಟು grant ಕೊಡೋದು ಅವರ ಸ್ಪೆಷಾಲಿಟಿ ಆದಂತಿದೆ..
  ಹೀಗೆ ಮಾಡಿಮಾಡಿಯೇ ಅದೆಷ್ಟೋ ಮಠಗಳಿಗೆ ಹಣ ಕೊಟ್ಟಾಗಿದೆ.
  ಸಮಗ್ರ vision ಇಲ್ಲದ,ನೆರೆದ ಕೊಂಚ ಜನಕ್ಕೆ ತತ್ ಕ್ಷಣಕ್ಕೆ ಖುಷಿ ಕೊಡಬಲ್ಲ ಇಂಥ ಹುಚ್ಚಾಟಗಳಿಗೆ
  ಯಾವ ತೆರನಾದ ಸಮರ್ಥನೆಯಾದರೂ ಇದೆಯೇ..?
  ಒಂದು ವೇಳೆ ಇದು ಸರಿ ಅನಿಸಿದರೆ,ನನ್ನ ಹುಟ್ಟುಹಬ್ಬಕ್ಕೆ ಯಡ್ಯೂರಪ್ಪನವರನ್ನು ಆಹ್ವಾನಿಸಿ
  ಅವರಿಂದ ಕೊಂಚ ಎಂಥದೋ grant ನಿರೀಕ್ಷಿಸುವದರಲ್ಲಿ ತಪ್ಪಿಲ್ಲ ಅಂತ ಅಂದುಕೊಂಡಿದ್ದೇನೆ..
  ***
  (‘ಅವಧಿ’ ಯಾಕೆ ಇಂಥ ಹುಚ್ಚಾಟಗಳ ಬಗ್ಗೆ ಚರ್ಚೆ ಹುಟ್ಟು ಹಾಕಬಾರದು? ಪ್ರತಿ ಮೂರ್ನಾಲ್ಕು ದಿನಕ್ಕೊಂದರಂತೆ ಕಳೆದ ಆರು ತಿಂಗಳ ಮು.ಮ.ಗಳ statements ಗಮನಿಸಿದರೆ ಸಾಕು,ಎಲ್ಲೆಲ್ಲಿ grant ಕೊಡುತ್ತೇನೆ ಅಂತ ಹೇಳಿದ್ದಾರೆಂದು ಗೊತ್ತಾಗುತ್ತದೆ.)
  -RJ

  ಉತ್ತರ

 7. Dr. Indira hegde
  ಫೆಬ್ರ 07, 2011 @ 17:25:48

  ಕನ್ನಡ ಭಾಷೆಯನ್ನು ಕಲಿಯುವ ಅನಿವಾರ್ಯತೆ ಎಲ್ಲ ಕನ್ನಡನಾಡಿನಲ್ಸಿ ವಾಸಿಸುವವರಲ್ಲಿಯೂ ಉಂಟಾಗಬೇಕು. ನಾವು ರಾಜಸ್ಥಾನ, ಗುಜರಾತ್ ಪ್ರವಾಸ ಹೋದಾಗ ಅಲ್ಲಿ ಇಂಗ್ಲಿಷ್ ಹಿಂದಿ ಇಲ್ಲದೆ ಅವಿದ್ಯಾವಂತರಂತಾದೆವು. ಇಲ್ಲಿ ಕನ್ನಡಿಗರೇ ಕನ್ನಡ ಮಾತನಾಡುವುದಿಲ್ಲ.

  ಭುವನೇಶ್ವರಿಯ ಪ್ರತಿಮೆಯನ್ನು ಆರಾಧಿಸಿದರೆ ಕನ್ನಡಭಾಷೆ, ಸಂಸ್ಕೃತಿಯನ್ನು ಜನರು ಪ್ರೀತಿಸುವರೆ?

  ಉತ್ತರ

 8. ಡಾ.ಬಿ.ಆರ್.ಸತ್ಯನಾರಾಯಣ
  ಫೆಬ್ರ 07, 2011 @ 13:56:12

  ಉತ್ತರ ಕರ್ನಾಟಕದಲ್ಲಿ ನೆರೆ ಸಂತ್ರಸ್ತರು ಎರಡು ವರ್ಷಗಳಿಂದ ತಗಡಿನ ಶೆಡ್ಡಿನಲ್ಲಿ ವಾಸಿಸುತ್ತಿದ್ದಾರೆ. ಮೊದಲು ಅವರಿಗೊಂದು ಸ್ಥಿರ ಸೂರು ಕಲ್ಪಿಸಿಕೊಡಿ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುವಚಂತೆ ಮಾಡಿ ರೈತರ ಆತ್ಮಹತ್ಯೆಯನ್ನು ತಪ್ಪಿಸಿ. ಸಾಹಿತ್ಯವೇ ಬದುಕಲ್ಲ. ಬದುಕಿನ ಒಂದು ಅಗತ್ಯವಷ್ಟೆ. ಹಾಗೆಯೇ ಭಾಷೆಯೂ ಕೂಡ. ಒಬ್ಬ ಒಳ್ಳೆಯ ಮನುಷ್ಯನನ್ನು, ಆತನ ವಿಚಾರಧಾರೆಗಳನ್ನು ಆತ ಸತ್ತನಂತರ ಹಾಳು ಮಾಡಬೇಕೆಂದರೆ ಆತನ ಹೆಸರಿನಲ್ಲಿ ಮಠ ಅಥವಾ ದೇವಸ್ಥಾನ ಕಟ್ಟಿದರೆ ಸಾಕಂತೆ. ಹಾಗೆಯೇ ಇನ್ನೂ ಜನಸಾಮಾನ್ಯರ ನಡುವೆ ಇನ್ನೂ ಜೀವಂತವಾಗಿರುವ ಕನ್ನಡ ಭಾಷೆಗೆ ಪ್ರತಿಮೆ ನಿರ್ಮಿಸಿ ಸಮಾಧಿ ಮಾಡುವುದು ಬೇಡ.

  ಉತ್ತರ

 9. Dhananjaya Kulkarni
  ಫೆಬ್ರ 07, 2011 @ 13:25:15

  ಮಠ-ಮಾನ್ಯಗಳಿಗೆ, ಪ್ರತಿಮೆಗಳ ನಿರ್ಮಾಣಕ್ಕೆ ನೀರಿನಂತೆ ಹಣ ಹರಿಸಿದರೆ ಅದು ಖಂಡಿತವಾಗಿ ಅಭಿವೃದ್ಧಿ ಕಾರ್ಯಕ್ರಮವಾಗುವುದಿಲ್ಲ. ಇಡೀ ನಾಡನ್ನ ಕನ್ನಡೀಕರಣಗೊಳಿಸುವ ಅಗತ್ಯವಿದೆ..ಅನ್ನ ನೀಡುವ ಭಾಷೆ ನಮ್ಮ ಉಸಿರಾಗದಿದ್ದರೆ, ಮುಂದೆ ನಾವು ಪರ ಭಾಷೆಗಳ ದಾಸರಾಗಬೇಕಾದೀತು..ನಮ್ಮ ಭಾಷಾಭಿಮಾನ ಕೇವಲ ಸಮ್ಮೇಳನಗಳಿಗೆ ಮೀಸಲಾಗದಿರಲಿ….ಅದು ನಮ್ಮ ನಿತ್ಯ ಬದುಕಿನ ಉಸಿರಾಗಲಿ…

  ಉತ್ತರ

 10. P. Bilimale
  ಫೆಬ್ರ 07, 2011 @ 12:07:13

  ಖಂಡಿತ ಬೇಡ, ಕನ್ನಡ ಶಾಲಿಗಳಲ್ಲಿ ಸುಮಾರು ೧೦ ಸಾವಿರ ಅಧ್ಯಾಪಕ ಹುದ್ದೆಗಳು ಖಾಲಿ ಇವೆಯಂತೆ, ಅದನ್ನು ತುಂಬಿಸಿ ಕನ್ನಡ ಬೆಳೆಯಲು ಸರಕಾರ ಅವಕಾಶ ಮಾಡಿ ಕೊಡಲಿ, ಪ್ರತಿಮಾ ಸಂಸ್ಕೃತಿ ಅನಗತ್ಯ

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: