ಒಂದು ನೆನಪು: ಈ ಕಥೆ ಈಗ ಯಾಕೆ ?

-ಕೋ  ಚೆನ್ನಬಸಪ್ಪ

೧೯೩೧ನೆ ಆಗಸ್ಟ್ ೨೧ ರಂದು ಸ್ಥಾಪನೆ ಆದ ನಾನು ಓದಿದ ಹೈಯರ್ ಎಲಿಮೆಂಟರಿ ಶಾಲೆ ಇದೀಗ ತನ್ನ ವಜ್ರ ಮಹೋತ್ಸವ ವರ್ಷವನ್ನು ದಾಟಿದೆ. ಅದಕ್ಕೆ ೨೫ ವರ್ಷ ತುಂಬಿದಾಗ ೧೯೫೬ ರಲ್ಲಿ ಬೆಳ್ಳಿ ಹಬ್ಬವನ್ನೂ ಆಚರಿಸಲಿಲ್ಲ .೧೯೮೧ ರಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಲಿಲ್ಲ. ಅದನ್ನು ಕುರಿತು ಯಾರೂ ಏನೂ ಬರೆಯಲಿಲ್ಲ. ಈಗ ಅದರ ಹುಟ್ಟು ಬೆಳವಣಿಗೆಯ ಕತೆ ಯಾಕೆ ನೆನಪಾಯಿತು? ೨೦೧೧ ನಮ್ಮ ಸಂಘ ಸ್ಥಾಪನೆ ಆದ ಅಷ್ಟದಶಮಾನೋತ್ಸವ!!.

೨೦೦೫ ಜೂನ್ ೨೯ ರಂದು ನಾನು ನಮ್ಮೂರಿಗೆ ಹೋದ ಸಂಗತಿಯನ್ನು ಈ ಹಿಂದೆ ಪ್ರಸ್ತಾಪಿಸಿದ್ದೇನೆ. ಆಲೂರಿನಿಂದ ಹೊರಟು ಬೆಂಗಳೂರಿಗೆ ಬರಲು ರಾಷ್ಟ್ರೀಯ ಹೆದ್ದಾರಿ ೧೩ ಕ್ಕೆ ಬಂದಾಗ , ನನ್ನ ಮಗ ಪ್ರಭುದೇವ ‘ನೀವು ಓದಿದ ಶಾಲೆ ಎಲ್ಲಿದೆ?’ ಎಂದು ಕೇಳಿದ. ‘ಇಲ್ಲೇ ರಸ್ತೆ ಆಚೆ ಬದಿಗೆ ಅರ್ಧ ಕಿ.ಮೀಟರ್ ದೂರದಲ್ಲಿ ಕಾನಾಮಡುವು ಇದೆ.ಆಗ ಊರಲ್ಲಿದ್ದ ಆ ಶಾಲೆ ಈಗ ಊರಾಚೆಗೆ ಸ್ಥಳಾಂತರವಾಗಿದೆ. ನೋಡುತ್ತಿಯಾ ? ‘ ನೋಡೋಣ’ ಎಂದ . ಗಾಡಿಯನ್ನು ಆ ಕಡೆಗೆ ಹೊರಳಿಸಿ ಅಲ್ಲಿಗೆ ಹೊರಟೆವು. ಐದಾರು ನಿಮಿಷಗಳಲ್ಲಿ ಹುಲಿಕೆರೆ ದಾರಿಯಲ್ಲಿರುವ ಆ ಶಾಲೆಯ ಕಾಂಪೌಂಡಿನ ಹೆಬ್ಬಾಗಿಲ ಮುಂದೆ ನಿಂತೆವು. ಉಕ್ಕಿನ ಅಕ್ಷರಗಳಲ್ಲಿ ಬರೆದಿದ್ದ ಯಾರದೋ ಒಂದು ಹೆಸರು ಎದ್ದು ಕಾಣುತ್ತಿತ್ತು . ನನ್ನ ಮಗ ಆ ಹೆಸರು ಓದಿ:

‘ಇವರೇನಾ ಈ ಶಾಲೆ ಕಟ್ಟಿಸಿದವರು?’ ಎಂದ

‘ಅಲ್ಲ ಅವರ್ಯಾರೋ ನನಗೆ ಗೊತ್ತಿಲ್ಲ

‘ಮತ್ತೆ ಅವರ ಹೆಸರನ್ನು ಯಾಕೆ ಹಾಕಿದ್ದಾರೆ?

ಗೊತ್ತಿಲ್ಲ ಬಹುಷಃ ಆ ಕಬ್ಬಿಣದ ಗೇಟ್ ಮಾಡಿಸಿ ಕೊಟ್ಟವರಿರಬೇಕು ಅದೂ ಸರಿಯಾಗಿ ತಿಳಿಯದು

ಕಟ್ಟಿಸಿ ಕೊಟ್ಟವರು ಯಾರು ಮತ್ತೆ?

ಈ ಕಟ್ಟಡ ನಿಂತಿರುವ ಈ ನಿವೇಶನ ಆರೂವರೆ ಎಕರೆ ದಾನ ಮಾಡಿದವರು ನನ್ನ ಸೋದರ ಮಾವ . ಅವರ ತಾಯಿ -ನನ್ನ ಅಜ್ಜಿಯ ಹೆಸರಿನಲ್ಲಿ…..

ಅಂದು ಭಾನುವಾರ. ಗೇಟಿಗೆ ಬೀಗ ಹಾಕಿತ್ತು . ಒಳಗೆ ಹೋಗುವುದು ಹೇಗೆಂದು ನಾನು ಅತ್ತಿತ್ತ ನೋಡುತ್ತಿದ್ದಾಗ ನನ್ನ ಮಾವನ ಮೊಮ್ಮಗ ಮಲ್ಲಿಕಾರ್ಜುನ ಎಲ್ಲಿಂದಲೋ ಬಂದ . ಗೇಟಿನ ಪಕ್ಕದಲ್ಲಿ ಸೊಂಟ ಮಟ್ಟ ಕಲ್ಲು ಬಂಡೆಗಳನ್ನು ಹೂಳಿ ಸಂದಿನ ದಾರಿ ತೋರಿಸಿದ. ಒಳಗೆ ಹೋದೆವು. ಬುನಾದಿಗೆ ಪಾಯ ಅಗೆದ ದಿನವೇ ಶಾಲಾ ಕಟ್ಟಡದ ಮುಂಭಾಗದಲ್ಲಿ ನೆಟ್ಟಿದ್ದ ಮರಗಳು ಬೆಳೆದಿದ್ದವು.ಎಡಬಲಕ್ಕೆ ವಿಸ್ತಾರವಾದ ಆಟದ ಮೈದಾನ. ಇತ್ತೀಚಿಗೆ ಹೈಸ್ಕೂಲು , ಪದವಿ ಪೂರ್ವ ಕಾಲೇಜು , ಐ.ಟಿ.ಐ. ಇತ್ಯಾದಿ ಶಾಲೆಯ ಕಟ್ಟಡಗಳು ಕಾಣಿಸಿದವು. ಅಲ್ಲೊಂದು ಸಣ್ಣ ಸಭಾ ಭವನವು ತಲೆ ಎತ್ತಿತ್ತು.

ಅಜ್ಜಿಯ ಹೆಸರಿನ ಹಾಲುಗಲ್ಲಿನ ಶಿಲಾಫಲಕವನ್ನು ಶಾಲೆಗೆ ಕೊಟ್ಟಿದ್ದೆ. ಅದನ್ನು ಎಲ್ಲಿ ಹಾಕಿದ್ದಾರೆ?ಎಂದು ಕೇಳಿದೆ.

ಮಲ್ಲಿಕಾರ್ಜುನ ‘ಹೆಡ್-ಮಾಸ್ತರ್ ರೂಮಿನ ಮುಂದಿನ ಗೋಡೆಯಲ್ಲಿ ಹಾಕಿದ್ದಾರೆ .

ಅಲ್ಲಿಗೆ ಹೋಗಿ ಮಬ್ಬು ಬೆಳಕಿನಲ್ಲಿ ಆ ಶಿಲಾಫಲಕ ನೋಡಿದೆವು . ಅದರ ಮೇಲೆ :

ಶ್ರೀ

“ಈ ಶಾಲಾ ಕಟ್ಟಡದ ಸ್ಥಳ ಮತ್ತು ಮೈದಾನವನ್ನು

ಕಾನಾಮಡುವಿನ ಶ್ರೀ ಬೆನಕಶೆಟ್ಟಿ ಅಯ್ಯಪ್ಪನವರು

ತಮ್ಮ ತಾಯಿಯವರಾದ

ಶ್ರೀಮತಿ ಬೆನಕಶೆಟ್ಟಿ ಚೆನ್ನಬಸಮ್ಮ ನವರ

ಹೆಸರಿನಲ್ಲಿ ದಾನವಾಗಿ ಕೊಟ್ಟಿದ್ದಾರೆ

ನನ್ನ ಮಗ ಆ ಶಿಲಾ ಫಲಕ ಓದಿ ‘ಹೌದಾ?ಆಗಿನ ಕಾಲದಲ್ಲಿ ಇಷ್ಟು ದಾನ ಮಾಡಿದ್ದಾರಲ್ಲಾ!…

ಈ ಅಮೃತ ಶಿಲಾಫಲಕವನ್ನು ನಾನು ಬೆಂಗಳೂರಿನಿಂದ ತಂದಿದ್ದೆ . ಲಾಲಭಾಗ್ ಮುಂಭಾಗದಲ್ಲಿರುವ ಒಬ್ಬ ಹಾಲುಗಲ್ಲು ವ್ಯಾಪಾರಿಯ ಅಂಗಡಿಯಲ್ಲಿ ಈ ಶಿಲಾಲಿಪಿ ಕೆತ್ತಿಸಿ ಅದನ್ನು ಪ್ಯಾಕ್ ಮಾಡಿಸಿ ಬೆಂಗಳೂರಿನಿಂದ ರೈಲಿನಲ್ಲಿ ಬಳ್ಳಾರಿಗೆ ತಂದು ಅಲ್ಲಿಂದ ಇಲ್ಲಿಗೆ ಕಾರಿನಲ್ಲಿ ತಂದಿದ್ದೆ .ಪ್ರಾರಂಭಿಸಿದಾಗ ಅದನ್ನು ಕಟ್ಟಡದ ಗೋಡೆಯಲ್ಲಿ ಅಳವಡಿಸಲು ಏರ್ಪಾಟು ಮಾಡಿದ್ದೆ. ಅಲ್ಲಿರುವ ಶಾಲಾ ಆಡಳಿತಾಧಿಕಾರಿಗಳು ಆ ಕೆಲಸ ಮಾಡುತ್ತಾರೆಂದು ನಾನು ಎಣಿಸಿದ್ದೆ . ಆದರೆ ಆ ಶಿಲಾಫಲಕವನ್ನು ಮುಖ್ಯೋಪಾಧ್ಯಾಯರ ಕೊಠಡಿಯ ಒಂದು ಅಲ್ ಮೈರಾದ ಹಿಂದೆ ಕಳೆದ ಶತಮಾನದ ಕೊನೆಯ ದಶಕದ ವರೆಗೆ ಹಾಗೆಯೇ ಗೋಣಿ ತಟ್ಟಿನಲ್ಲಿ ಮುಚ್ಹಿ ಬಚ್ಹಿಟ್ಟಿದ್ದರು ! ಶ್ರೀ ಗೋವಿಂದೇಗೌಡರು ಶಿಕ್ಷಣ ಮಂತ್ರಿಗಳಾಗಿದ್ದಾಗ ಒಮ್ಮೆ ಅವರೊಡನೆ ಹಂಪಿಯಲ್ಲಿ ಜರುಗಿದ ಒಂದು ಕಾರ್ಯಕ್ರಮಕ್ಕೆ ಹೋಗುವಾಗ ನಮ್ಮ ಶಾಲೆಯ ಮುಂದೆಯೆ ಹಾದು ಹೋಗಬೇಕಾಗಿತ್ತು . ಶಾಲೆ ಇನ್ನು ಒಂದೆರಡು ಫರ್ಲಾಂಗ್ ಇದ್ದಾಗ ನಾನು ನಾವೀಗ ನನ್ನ ಹುಟ್ಟಿದೂರಲ್ಲಿ ಹಾದು ಹೋಗುತ್ತಿದ್ದೇವೆ.ನಾನು ಓದಿದ ಶಾಲೆ ಇದೇ ಊರಿನಲ್ಲಿದೆ. ಅದರ ಮುಂದೆಯೇ ಹಾದು ಹೋಗಬೇಕು . ಒಂದೈದು ನಿಮಿಷ ಶಾಲೆಯೊಳಗೆ ಹೋಗೋಣಾ ಎಂದೆ.

ಆಗಲಿ ಅಗತ್ಯವಾಗಿ ಎಂದರು .

ಕಾರು ಶಾಲೆಯ ಹೆಬ್ಬಾಗಿಲ ಮುಂದೆ ನಿಂತಿತು.ಯಾರೋ ಬಂದು ಬಾಗಿಲು ತೆಗೆದರು.ನಾವು ನೇರವಾಗಿ ಮುಖ್ಯೋಪಾಧ್ಯಾಯರ ಕೊಠಡಿಯ ಕಡೆ ಹೋದೆವು. ನನ್ನನ್ನು ಗುರುತು ಹಿಡಿದ ಒಬ್ಬಿಬ್ಬರು ಉಪಾಧ್ಯಾಯರು ಅಲ್ಲಿಗೆ ಬಂದರು. ಶಿಕ್ಷಣ ಮಂತ್ರಿಗಳನ್ನು ಅವರಿಗೆ ಪರಿಚಯಿಸಿದೆ. ಮುಖ್ಯೋಪಾಧ್ಯಾಯರ ಕೊಠಡಿಗೆ ಕರೆದೊಯ್ದರು. ಸ್ವಲ್ಪ ಹೊತ್ತಿನಲ್ಲಿ ನಾವು ಆ ಮಾರ್ಗವಾಗಿ ಪ್ರಯಾಣ ಮಾಡುವುದನ್ನು ಹೇಗೋ ತಿಳಿದಿದ್ದ ಮಾಜಿ ಶಾಸಕ ಶ್ರೀ ಬಿ.ಎಸ್.ವಿರಭದ್ರಪ್ಪನವರು ಅನಿರೀಕ್ಷಿತವಾಗಿ ಬಂದರು. ಶಿಕ್ಷಣ ಮಂತ್ರಿಗಳ ಪರಿಚಯ ಅವರಿಗಿತ್ತು. ಅನಿರೀಕ್ಷಿತವಾಗಿ ಬಂದ ರಾಜ್ಯದ ಶಿಕ್ಷಣ ಮಂತ್ರಿಗಳಿಗೆ ಒಂದು ಹೂಮಾಲೆ ಹಾಕುವುದಕ್ಕೆ ಆಗಲಿಲ್ಲ ಎಂದು ಮೆಲ್ಲನೆ ನನಗೆ ಕಿವಿಯಲ್ಲಿ ಹೇಳಿದಾಗ :

ಅವರು ಮಾಲೆ ಗೀಲೆ ಹಾಕಿಸಿಕೊಳ್ಳುವುದಿಲ್ಲ . ಸಂಕೋಚ ಪಡಬೇಡಿ ಎಂದು ಸಮಾಧಾನ ಹೇಳಿದೆ. ನಾವು ಕೊಠಡಿಯಿಂದ ಹೊರಟಾದ ಮುಖ್ಯೋಪಾಧ್ಯಾಯರನ್ನು ಕುರಿತು ಈ ‘ಆರೂವರೆ ಎಕರೆ ದಾನ ಮಾಡಿದವರ ಹೆಸರು ಕೆತ್ತಿಸಿದ್ದ ಒಂದು ಶಿಲಾಫಲಕ ತಯಾರಾಗಿತ್ತು.ಅದು ಕಾಣುವುದಿಲ್ಲವಲ್ಲ ! ಇದೆಯೋ ಒಡೆದು ಹೋಗಿದೆಯೇ? ಇದೆ ನನ್ನ ಅಲ್ ಮೈರಾದ ಹಿಂದೆ ಜೋಪಾನವಾಗಿದೆ ಎಂದು ಆ ಸಂದಿನಲ್ಲಿದ್ದ ಶಿಲಾಫಲಕವನ್ನು ಹೊರಗೆಳೆದರು.

‘ಅಂತು ಕಾದಿಟ್ಟಿದ್ದಿರಿ . ಒಡೆದು ಹಾಕಿಲ್ಲ ದಾನಿಗಳಿಗೆ ದೊಡ್ಡ ಉಪಕಾರ ಮಾಡಿದ್ದೀರಿ. ಬಂದವರಿಗೆ ಕಾಣುವಂತೆ ಯಾವುದಾದರು ಗೋಡೆಯಲ್ಲಿ ಅಳವಡಿಸಿ ಇನ್ನೊಮ್ಮೆ ಮಂತ್ರಿಗಳೊಡನೆ ಬಿಡುವು ಮಾಡಿಕೊಂಡು ಬರುವ ಹೊತ್ತಿಗೆ ಅಸ್ಟಾದರು ಮಾಡಿ ಎಂದೆ.

‘ಆಯ್ತು ಸಾರ್ ‘

ಅದು ಯಾವಾಗ ಆಯ್ತೋ ನನಗೆ ಪಕ್ಕ ಗೊತ್ತಿಲ್ಲ . ಅಂತು ಸಂದಿನಲ್ಲಿ ಕತ್ತಲೆಯಿಂದ ಬಯಲಿಗೆ ಬಂದು ಈ ಒಂದು ಗೋಡೆಯಲ್ಲಿ ಹುಡುಕಿ ಬಗ್ಗಿ ನೋಡಿದರೆ ಆ ಶಿಲಾಲಿಪಿ ಕಾಣುತ್ತದೆ . ನಾನು ಓದಿದ ಶಾಲೆಯ ಆಡಳಿತ ಇಂದಿಗೂ ಗುರುಣ್ಣನವರು ಮತ್ತು ಇತರರು ಸ್ಥಾಪಿಸಿದ ಶ್ರೀ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ವಶದಲ್ಲಿಯೇ ಇದೆ ಈಗಿನ ಆಡಳಿತಾಧಿಕಾರಿಗಳ ಬಳಿ ಹಿಂದೆ ಆ ಶಾಲೆಗಾಗಿ ಭೂದಾನ ಮಾಡಿದವರ ಧನಸಹಾಯ ಮಾಡಿದವರ , ಶ್ರಮದಾನ ಮಾಡಿದವರ ದಾಖಲೆಗಳು ಇದ್ದಂತೆ ಕಾಣಲಿಲ್ಲ ! ಆ ಸಂಬಂಧ ದಾಖಲೆಗಳು ಇಲ್ಲ. ಕೆಲವು ವರ್ಷಗಳ ಹಿಂದೆ ನಮ್ಮ ಸಂಘ ರಿಜಿಸ್ಟರ್ ಆಗಿದೆ ಎಂಬ ಬಗ್ಗೆ ‘ರಿಜಿಸ್ಟ್ರೇಶನ್ ಸರ್ಟಿಫಿಕೆಟ್ ಹಾಜರು ಪಡಿಸಲು ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳು ಕೇಳಿದಾಗ ಶ್ರೀ ಬಿ.ಎಸ್.ವೀರಭದ್ರಪ್ಪನವರು ‘ಸರ್ಟಿಫಿಕೆಟ್ ನಿಮ್ಮಲ್ಲಿದೆಯೇ ‘? ಎಂದು ನನ್ನ ಕೇಳಿದ್ದರು. ವಾರ್ಷಿಕ ವರದಿಗಳು ಲಭ್ಯವಿರಲಿಲ್ಲ . ನಾನು ಹಳೆಯ ಕಾಗದಗಳನ್ನು ಹುಡುಕಿದಾಗ ಶಾಲೆ ಸ್ಥಾಪನೆ ಆದ ದಿನಾಂಕ , ನಿವೇಶನ ಪಡೆದ ವರ್ಷ , ಶ್ರಮದಾನ ಶಿಬಿರ ಜರುಗಿದ ವರ್ಷ , ಶಾಲಾ ಕಟ್ಟಡಕ್ಕೆ ತಗುಲಿದ ವೆಚ್ಹ ಮುಂತಾದ ವಿವರಗಳನ್ನು ಬರೆದಿಟ್ಟಿದ್ದ ಒಂದು ಹಾಳೆ ಸಿಕ್ಕಿತು.ಅದರಲ್ಲಿ ೧೯೫೬-೫೭ included in F.Y.P ಎಂದು ಬರೆದಿದ್ದೇನೆ F.Y.P ಎಂದರೇನು ? ಎಂಬ ವಿಚಾರವಾಗಿ ಯೋಚನೆ ಮಾಡಿದೆ .Five Year Plan ಎಂದು ಹೊಳೆಯಿತು . ಆ ವರ್ಷದ ಸಂಘ ರಿಜಿಸ್ಟರ್ ಆಗಿದ್ದು .

೧೯೬೫ ರ ಡಿಸೆಂಬರ್ ನಲ್ಲಿ ನಾನು ಬಳ್ಳಾರಿ ಬಿಟ್ಟ ಮೇಲೆ ಆ ಶಾಲೆಯ ಬಗ್ಗೆ ಆಸಕ್ತಿ ವಹಿಸುವುದು ಸಾಧ್ಯವಾಗಲಿಲ್ಲ . ಬೆಂಗಳೂರಿನಲ್ಲಿ ೧೯೬೫ ರಿಂದ ೭೨ರ ವರೆಗೆ ಇರುವಾಗ ಆ ಶಾಲೆಯ ಆಡಳಿತಾಧಿಕಾರಿಗಳು ಆಗಾಗ ಕ್ವಚಿತ್ ಕಾಣುತ್ತಿದ್ದರು . ಆ ತರುವಾಯ ಅವರು ಸಂಪೂರ್ಣ ಮರೆತೇ ಬಿಟ್ಟರು . ಆದರು ನಾನು ಆಗಾಗ ನೆನಪು ಮಾಡಿಕೊಳ್ಳುತ್ತಿದ್ದೆ . ೧೯೭೨-೭೪ರಲ್ಲಿ ಮಂಗಳೂರಿನಲ್ಲಿದ್ದಾಗ ಆ ಜಿಲ್ಲೆಯ ಉದ್ದಗಲದ ಆಗುಂಬೆ ಬೆಟ್ಟದ ಬುಡದ ಸೋಮೇಶ್ವರ ಗ್ರಾಮದಿಂದ ಹಿಡಿದು ಮರುವಂತಿಗೆ, ಹಂಗಾರ ಕಟ್ಟೆ, ಕುಂದಾಪುರ , ಉಡುಪಿ, ಕಾರ್ಕಳ , ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಧರ್ಮಸ್ಥಳ ಇತ್ಯಾದಿ ಗ್ರಾಮಗಳಿಗೆ ಹೋದಾಗ ಅಲ್ಲಿರುವ ಶಾಲೆಗಳನ್ನು ನೋಡಿದಾಗ ನಮ್ಮ ಶಾಲೆ ನೆನಪಾಗುತ್ತಿತ್ತು . ಅಲ್ಲಿರುವ ಶಾಲೆಗಳು ನಮ್ಮೂರ ಶಾಲೆಯಂತೆ ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕ ರಾಜ್ಯ ನಿರ್ಮಾಣಕ್ಕೆ ಮುಂಚೆ ಮದ್ರಾಸ್ ರಾಜ್ಯದಲ್ಲಿದ್ದಾಗ ಸ್ಥಾಪನೆ ಆದವುಗಳು . ದ.ಕ.ಜಿಲ್ಲೆಯ ಶಾಲೆಯಲ್ಲಿ ಓದಿದ ಪಥ್ಯ ಪುಸ್ತಕಗಳನ್ನೇ ನಮ್ಮ ಶಾಲೆಯಲ್ಲೂ ಓದಿದ್ದೆವು . ಹಂಗಾರ ಕಟ್ಟೆಯ ಚೇತನ ಹೈಸ್ಕೂಲು , ದಶಮಾನೋತ್ಸವಕ್ಕೆ ಮುಖ್ಯ ಅತಿಥಿ ಆಗಿ ಹೋಗಿದ್ದಾಗ ಅಲ್ಲಿದ್ದ “ಹೈಯರ್ ಎಲಿಮೆಂಟರಿ ಸ್ಕೂಲ್” ಎಂಬ ನಾಮಫಲಕವನ್ನು ನೋಡಿ ನಮ್ಮ ಶಾಲೆಯ ನೆನಪು ನನಗಾಯಿತು.ಆದರೆ ನಮ್ಮ ಶಾಲೆಗೆ ಅವರ ಹಳೆಯ ವಿಧ್ಯಾರ್ಥಿಗಳು ನೆನಪು ಇದ್ದಂತೆ ಕಾಣಲಿಲ್ಲ! ಆದರು ಇತ್ತೀಚಿಗೆ ಒಂದೆರಡು ವರ್ಷಗಳ ಹಿಂದೆ , ಸಂಘದ ಕಾರ್ಯದರ್ಶಿಗೆ ನಾನು ನೆನಪಿಗೆ ಬಂದಿದ್ದೆ . ಆ ವರ್ಷ ನಮ್ಮ ಶಾಲಾ ಆವರಣದಲ್ಲಿ ‘ ಬಳ್ಳಾರಿ ಜಿಲ್ಲ ಕ್ರೀಡಾ ಉತ್ಸವ’ವನ್ನು ಏರ್ಪಡಿಸಿದ್ದರು . ಆ ಸಂದರ್ಭದಲ್ಲಿ ಒಂದು ಸ್ಮರಣ ಸಂಚಿಕೆ ಪ್ರಕಟಿಸಬೇಕಾಗಿತ್ತಂತೆ. ಅದಕ್ಕೆ ಒಂದು ಲೇಖನ ಬರೆದು ಕಳಿಸಲು ‘ಕೋರಲಾಗಿದೆ’ ಎಂಬ ಪತ್ರ ಬರೆದಿದ್ದರು.

ನನ್ನ ಸೋದರಮಾವನ ಮಗನ ಅನುಭವ ಇನ್ನೊಂದು . ಅವನು ಎಸ್.ಎಸ್.ಎಲ್.ಸಿ. ತೇರ್ಗಡೆ ಆಗಿ ಊರಲ್ಲಿಯೇ ಇದ್ದು ಒಕ್ಕಲುತನ ಮಾಡಿಕೊಂಡು ಇರಬೇಕಾಗಿತ್ತು. ನನ್ನ ಮಾವ ಅಪ್ರಾಪ್ತ ಮಕ್ಕಳನ್ನು ಬಿಟ್ಟು ಅಕಾಲ ಮರಣಕ್ಕೆ ತುತ್ತಾದರು . ನನ್ನ ಅಜ್ಜಿ ಏಕಮಾತ್ರ ಅಪ್ರಾಪ್ತ ಮಗನನ್ನು ಕಟ್ಟಿಕೊಂಡು ಹೆಣಗಾಡಿ ದ್ದಳು . ಇದ್ದ ಒಬ್ಬನನ್ನು ಕಣ್ಣೆದುರಿನಲ್ಲಿಯೇ ಕುಣಿಗಿಟ್ಟು ಕಣ್ಣು ಕಳೆದುಕೊಂಡಿದ್ದಳು . ಈಗ ಅಪ್ರಾಪ್ತ ಮೊಮ್ಮಕ್ಕಳನ್ನು , ಮಧ್ಯವಯಸ್ಸಿನ ಸೊಸೆಯನ್ನು ಕಟ್ಟಿಕೊಂಡು ಬಾಳುವೆ ಮಾಡಬೇಕಾಗಿತ್ತು . ೫೦-೬೦ ಎಕರೆ ಭೂಮಿಯಿತ್ತು . ಅದನ್ನು ಗೆಯ್ಯುವವರು ಯಾರು? ಆಗ ಮೊಮ್ಮಗನೇ ನೊಗಕ್ಕೆ ಹೆಗಲೊಡ್ಡಬೇಕಾಯಿತು . ಆಗ ಆ ಹುಡುಗನಿಗೆ ನಮ್ಮ ಶಾಲೆಯಲ್ಲಿ ಅಟೆಂಡರ್-ಕಂ -ಗುಮಾಸ್ತನಾದ . ಕರೆಸ್ಪಾಂಡೆಂಟ್ ಕೋರ್ಸಿನಲ್ಲಿ ಬಿ.ಎ.ಮತ್ತು ಎಂ.ಎ.ಪಾಸು ಮಾಡಿಕೊಂಡ . ಆಗ ಅವನು ಶಾಲೆಯಲ್ಲಿ ಅಧ್ಯಾಪಕನಾಗಲು ಅರ್ಹತೆ ಪಡೆದಿದ್ದ ಆದರು ಈಗಿನ ಮೀಸಲಾತಿ ಪದ್ಧತಿಯ ನಿಯಮಗಳಿಂದಾಗಿ ಅವನಿಗೆ ಒಂದು ಉಪಾಧ್ಯಾಯ ಕೆಲಸ ಸಿಗಲಿಲ್ಲ . ಇನ್ನು ಮೊನ್ನೆ ಮೊನ್ನೆ ನಿವೃತ್ತಿ ಹೊಂದಿದ.

ಇನ್ನು ಕೊನೆಯ ಮಾತು. ನಾನು ಓದಿದ ಶಾಲೆಯನ್ನು ನೋಡಲೆಂದು ನನ್ನ ಮಗ ಅಪೇಕ್ಷಿಸಿದ್ದರಿಂದ ಇಲ್ಲಿಗೆ ಬಂದೆವು . ಶಾಲೆಯ ಹೆಬ್ಬಾಗಿಲು ಮುಖ್ಯೋಪಾಧ್ಯಾಯರ ಬಾಗಿಲು ಮುಚ್ಹಿದ ಕೊಠಡಿ , ಅದರ ಹೊರಗೋಡೆಯಲ್ಲಿ ಅಳವಡಿಸಲಾಗಿದ್ದ ಶಿಲಾಫಲಕ ನೋಡಿದೆವು. ಹೊತ್ತು ಮುಳುಗುವ ಹೊತ್ತಾಗಿತ್ತು . ಇನ್ನೂರ ನಲವತ್ತು ಕಿ.ಮಿ.ಪ್ರಯಾಣ ಮಾಡಬೇಕಿತ್ತು . ಶಾಲೆಯ ಸುತ್ತ ಒಮ್ಮೆ ಸುತ್ತಾಡಿ ಬಂದ ನನ್ನ ಮಗ.

‘ಈ ಹಳ್ಳಿಗಾಡಿನಲ್ಲಿ ಈ ಶಾಲೆ ವಿದ್ಯಾಭ್ಯಾಸಕ್ಕೆ ಬಹಳ ಚೆನ್ನಾಗಿದೆ . ಇದನ್ನು ಇನ್ನು ಅಭಿವೃದ್ಧಿ ಪಡಿಸಲು ನೀವು ಏನಾದರು ಮಾಡಬೇಕು ಅಂದ’. ಎಸ್ಟಾದರು ಅವನು “distinguished professor of teaching” ಪ್ರಶಸ್ತಿ ಪಡೆದವನು . ಅವನಿಗೆ ಆ ಶಾಲೆಯ ಬೆಲೆ ಪ್ರಯೋಜನ ಗೊತ್ತು. ‘ಮಾಡಬೇಕಾದ್ದೇ! ಹೊತ್ತಾಯಿತು ಹೋಗೋಣ ‘ ಎನ್ನುತ್ತಾ ಅಲ್ಲಿಂದ ಹೊರಟೆವು.

1 ಟಿಪ್ಪಣಿ (+add yours?)

  1. chandrakant
    ಫೆಬ್ರ 01, 2011 @ 17:46:41

    ಚನ್ನಬಸಪ್ಪನವರೆ,
    ಆ ಶಾಲೆಯಲ್ಲಿ ಓದಿ ಕಲಿತು ಬೆಳೆದ ಮಕ್ಕಳ ಪರವಾಗಿ ಅನಂತಾನಂತ ವಂದನೆಗಳು. ಇನ್ನು ದಾನಿಯ ಲೆಕ್ಕ ದಯವಿತ್ತುಎ ಮರೆತು ಬಿಡಿ. ದಿ ನೋಟಿ ಫಿ ಧನ್ದೆಯ ಸರ್ಕಾರಗಳು ಇನ್ನೇನು ತಾನೇ ಮಾಡಿಯಾವು? ಅಲ್ಲದೆ, ದಾನಿ ಎಡ ಕೈನಲ್ಲಿ ಕೊಟ್ಟದ್ದು ಬಲ ಕೈ ಗೆ ಗೊತ್ತಗಬಾರದಲ್ಲವೇ? ಚಂದ್ರಕಾಂತ್

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: