E ಪರಿಯ ಬದುಕು

ಸೂತ್ರಧಾರ ರಾಮಯ್ಯ

IT ಪೈಟಿ – ಅರ್ಥ ಗಿರ್ತಾ

ಟೆಕ್ಕಿ ಪಿಕ್ಕಿ

ನೆಲವಿಲ್ಲ ನೆಲೆಯಿಲ್ಲ;

ಭವಿತವ್ಯ ಶುದ್ಧಿಲ್ಲ.

ನಿದ್ದಿಲ್ಲ ಬುದ್ಧಿಲ್ಲ;

ಹೆಂಡ ಬಿಟ್ಟೆದ್ದಿಲ್ಲ.

ಹಾಡಿದ್ದೆ ಹಾಡು

ಬಿಟ್ಟದ್ದೇ ಬೀಡು.

ಪಾಪ…. ಹಕ್ಕೀ ಪಿಕ್ಕೀ!

ಇವರು ಅಷ್ಟೇ:

ಧನವಿದ್ದು ಮುದವಿಲ್ಲ;

ಬದುಕಲ್ಲಿ ಸೊಗವಿಲ್ಲ.

ಗಣಕದ ಉರುಳ ಉದ್ಯೋಗ;

ಹಗಲಿರಳು ಉದ್ವೇಗ.

ದೇಹವೆಂಬುದು ಯಂತ್ರ

ಮನದಿ ಅಇಟಿಯ ಮಂತ್ರ.

ಮನೆ ಎಲ್ಲೋ, ಮಡದಿ ಎಲ್ಲೋ,

ಪಾಪ… ಟೆಕ್ಕೀ ಪಿಕ್ಕಿ!

E ಪರಿಯ ಬದುಕು

‘ಸುಳ್ಳೇ ಸುಳ್ಳು; ಸಂಸಾರದಾಟ ಸುಳ್ಳೇ ಸುಳ್ಳು’ ಅಂತಾ ಜ್ಞಾನಿಗಳು ಸಾರಿದ ಹಾಗೆಯೇ, ಬರ್ತಾ ಬರತ ಮನುಷ್ಯರ LIFE ನಲ್ಲೂ

E ಬ್ಯಾಂಕಿಂಗ್, E ಕಾಮರ್ಸ್,E ಟ್ರೇಡ್, E ಮೇಲ್ ಆಮೇಲ್ ಅಂತೆಲ್ಲ ‘E ಸೇರ್ಕೊಂಡ್ ಮೇಲೆ LIFE ನೂ LIEFE ಅಂತ ಬರೆಯೋ,ಕರೆಯೋ ಕಾಲ ಸನ್ನಿ ಹಿತ ಅನ್ನೋದು ಖರೆಯೇ E ಶ್ವರನೇ ಬಲ್ಲ.

ಮಾಹಿತಿ (ಕು) ತಂತ್ರ ಜಾಣರು

ಪೂರ್ವಾಭಾದ್ರ: ಮಾಹಿತಿ ತಂತ್ರಜ್ಞಾನದ ‘ಬೆಳಕಲ್ಲಿ’ ಜನರನ್ನು ‘ಕತ್ತಲೆ’ಗೆ ದೂಡುವ ಶೇರು ಮಾರುಕಟ್ಟೆಯ ‘ಸತ್ತ್ಯಂ- ಮೇವು ಜಯತೆ

ಅರ್ಥವೇ ತಿಳಿಯುತ್ತಿಲ್ಲವೆ?

ಉತ್ತರಾಭಾದ್ರ: ‘ಅರ್ಥ’ ಇಷ್ಟೇನೆ. ತಾವು ಸತ್ಯಂ ವನ್ತರೆಂದು ಹೊರಗೆ ಪೋಸ್ ಕೊಟ್ಟು ಪಡೆದ ಶಹಬ್ಬಾಸ್ ಗಿರಿಯ ಕಣಿವೆಗೆ ಶೇರು ದಾರರನ್ನು ನೂಕಿ, ಅದ್ಭುತವಾದ ತಂತ್ರ ಜ್ಞಾನದಿಂದ, ಮಾಹಿತಿಯೇ ಇಲ್ಲದಂತೆ ಒಳಗೊಳಗೇ ಕೋಟಿಗಟ್ಟಲೆ ಮೇಯ್ತಾ(ಸ್) ಶೀಲ ಕಳಕೊಂಡರೂ, ಮಾನ ಹ ರಾಜು ಅಂದರೂ, ಚೀಲ ಹಣ ದೋಚುವಲ್ಲಿ ಜಯಶೀಲರಾದವರು.

ಬೇಕು ಬೆಕ್ಕಿನ ಜತೆ ಅನು ನಾಯಿಯು

ನರಸಿಂಹರಾಜು: ಈ ಹಾಳು ಲೋಭ.. ಐ ಮೀನ್ ಗ್ಲೋಬ ಲೈಸೇಶನ್ ಅತಿಯಾಗಿ ದೇಶದಲ್ಲಿ ಬೆಕ್ಕು ನಾಯಿಗಳ ಬೇಡಿಕೆಯೂ ಹೆಚ್ಚಾಗಿ ಹೋಗಿದೆಯನ್ತಲ್ಲ?

ಬಾಲಕೃಷ್ಣ: ಇನ್ನೇನ್ನಾಗತ್ತೆ, ಆರತಿಗೊಬ್ಬ ಮಗಳು; ಕೀರುತಿಗೊಬ್ಬ ಮಗ ಅನ್ನೋ ಸ್ಲೋಗನ್ನೂ ತುಂಡ್ ಹಾಕಿ ಜನಾ ‘ಪ್ರಾಯ’ದಲ್ಲಿ ಕೀರುತಿಗೊಬ್ಬನೇ ಇರಲಿ ಅಂತಾ ಮಗನನ್ನೇ ಆಯ್ಕೆ ಮಾಡಿಕೊಂಡ ತಪ್ಪಿಗೆ ( ಸೆಕ್ಸ್ diter ಮಿನೇಸ್ ) ತಡವಾಗಿ ಮಾಡ್ಕೊತಿರೋ

ಪ್ರಾಯಶ್ಚಿತ್ತ ! ಇದ್ದ ಒಬ್ಬ ಮಗನೂ ಓದಿ ಬೆಳೆದು ಮದುವೆಯಾದದ್ದೇ ತಡಾ, ತಂದೆ ತಾಯೀನಾ ಪರದೇಸಿ ಮಾಡ್ಬಿಟ್ಟು,( ಇಲ್ಲೇ ಬಿಟ್ಟು) ಫಾರೀನ್ಗೆ ಹಾರಿಬಿಡ್ತಾರಲ್ಲಾ! ದುಡ್ಡು ಕಾಸು ಮನೆ ಎಲ್ಲಾ ಇದ್ದರೂ ಮುದಿಜೀವಗಳ ಜತೆಗೆ ಯಾರಿರಬೇಕು ಪಾಪ! ಬೆಕ್ಕು ನಾಯಿಗಳಾದ್ರೂ ಜೊತೆಗಿರಲಿ ಅಂತ ಹಿರಿಯ ಜೀವಗಳು ಹೊರಟಾಗ ಈ ಬೇಡಿಕೆ ಸಹಜಾನೆ; ಮಾಡಿದ ಪಾಪಕ್ಕೆ ತಕ್ಕ ಸಜಾನೆ!

end ಗುಟುಕು

ಅಕ್ರಂ: ಕೇಳಿದ್ಯಾ ಸಕ್ರಂ? ಬಾಲಿವುಡ್ ಬಾಲಿಕೆಯರ ಮೇಲೆ IT ದಾಳಿ ಯಂತೆ. ಪಾಪ, ಮಾಡೆಲ್ ಆಗಿ ಇರಬೇಕಾದ ಜನಪ್ರಿಯ TAR ಗಳ ಮುಖಕ್ಕೆ ಸ್ಟಾರ್!

ಸಕ್ರಂ: ಏನೇ ಆದರು ಜನಪ್ರಿಯರಾದವರು ಧನಪ್ರಿಯರಾಗಬಾರದಿತ್ತು? ಹಗಲು ರಾತ್ರಿ ‘ಶೀಲಾ ಕಿ ಜವಾನಿ’ ಅಂತ ಕುಣಿದವರು

‘ತೆರೆ ಹಾತನಾ ಆನಿ’ ಅಂದವರು, ಆದಾಯ ಕರದವರ ಹಾತ್ ನಲ್ಲಿ ಸಿಕ್ಕಿಬೀಳಬಾರದಿತ್ತು! ಹಾಕೇಬಿಟ್ಟರಲ್ಲ ‘ಕತ್ರೀನ’ ಕೈಫ್ ಆದಾಯಕ್ಕೆ! ಎಷ್ಟೇ ಆಗಲಿ ರೇಡ್ ಮಾಡೋದು, ಕಿರು ಪರದೆಯ ಮೇಲೆ ತಾರೆಗಳ ಶೀಲವನ್ನು, ಹಣದ ಚೀಲವನ್ನು ಪರೇಡ್ ಮಾಡೋದು IT ಜನರಿಗೆ ‘ಪ್ರಿಯವಾದ ಅಂಕ’ ತಾನೇ. ಏನೇ ಆದರೂ ಜನ, ಅದರಲ್ಲೂ ಸಿನೆಮಾ ಜನಾ ಮೈಯ್ಯನ್ನು ಅಪಾರದರ್ಶಕವಾಗಿ, ಮನಸನ್ನೂ, ಸಾರ್ವಜನಿಕ ವ್ಯವಹಾರವನ್ನು ಪಾರದರ್ಶಕವಾಗಿ ಇಟ್ಟುಕೋಬೇಕು. ಅಹುದಾದರಹುದೆನ್ನಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: