ಸೂಫಿ..ಸೂಫಿ..

ಸಾಮಾಜಿಕ ಚಿಂತನೆ ಮತ್ತು ಸೂಫಿ-ಸಂತರು

-ವಿ  ಎನ್ ಲಕ್ಷ್ಮೀನಾರಾಯಣ

ಈಚಿನ ದಿನಗಳಲ್ಲಿ ಸಾಮಾಜಿಕ ಬದಲಾವಣೆಯ ಮಾತು ಬಂದಾಗಲೆಲ್ಲಾ ಕನ್ನಡದ ಬುದ್ಧಿಜೀವಿಗಳು ಮತ್ತು ಚಿಂತಕರು ಗಾಂಧೀಜಿಯವರ ಚಿಂತನೆಗಳನ್ನು ಬುದ್ಧ, ಬಸವ, ಅಲ್ಲಮ ಮುಂತಾದ ಸಂತರು ಮತ್ತು ಅನುಭಾವಿಗಳ ಲೋಕದೃಷ್ಟಿಯೊಂದಿಗೆ ತಾಳೆಹಾಕಿ ತಮ್ಮ ಚಿಂತನೆಗಳನ್ನು ಪ್ರಸರಿಸುವುದು ವಾಡಿಕೆಯಾಗಿದೆ. ಜಾಗತೀಕರಣದ ಕೆಡಕುಗಳಿಗೆ ಪರಮಹಂಸರು, ರಮಣ, ಸೂಫಿ-ಸಾಧು-ಸಂತರ ಜೀವನದೃಷ್ಟಿ ಪರಿಣಾಮಕಾರಿಯಾದ ಸಿದ್ಧೌಷಧವೆಂಬಂಥ ದೃಷ್ಟಿಕೋನವನ್ನು ಅವರು ಬಿಂಬಿಸುತ್ತಾರೆ. ಲೋಭ, ದುರಾಸೆಗಳಿಂದ ನಮ್ಮನ್ನು ನಾವು ಬಿಡಿಸಿಕೊಂಡರೆ ಸಾಮಾಜಿಕ ವಿಷಮತೆ ತಾನೇತಾನಾಗಿ ಮಾಯವಾಗುತ್ತದೆ ಎಂದು ಹೇಳುತ್ತಾರೆ. ಸಂಪ್ರದಾಯವಾದೀ ಪ್ರಸಿದ್ಧ ಲೇಖಕರು ಮತ್ತು ಶ್ರದ್ಧಾವಂತ ಮಹಿಳೆಯರು ಆಚರಿಸುವ ಧಾಮರ್ಿಕತೆ, ಆಸ್ತಿಕತೆ ಮತ್ತು ನಂಬಿಕೆ ಮೂಲದ ಆಚರಣೆಗಳು ವಾಸ್ತವವಾಗಿ ವಸಾಹತುಶಾಹಿಯ ವಿರುದ್ಧ ದೇಸೀನೆಲೆಯ ಶಿಕ್ಷಿತ-ಅಶಿಕ್ಷಿತ-ಅಸಹಾಯಕ ಮುಗ್ಧಜನರು ಕೈಗೊಂಡ ಕ್ರಾಂತಿಕಾರೀ ಪ್ರತಿಭಟನೆಗಳು ಎಂದು ನಂಬುತ್ತಾರೆ. ಹಾಗೆಂದು ಜನರನ್ನು ನಂಬಿಸಲು ಪ್ರಯತ್ನಿಸುತ್ತಾರೆ. ಕೋಮುವಾದವನ್ನು ಎದುರಿಸಲು ಸೂಫಿ-ಸಂತ ಮೂಲದ ಹಾಡು-ಸಂಗೀತ-ಸಾಹಿತ್ಯವನ್ನು, ಜಾಗತೀಕರಣವನ್ನು ಎದುರಿಸಲು ಆಸ್ತಿಕ ಮೂಲದ ದೇಸೀತನವನ್ನು ಮೈಗೂಡಿಸಿ ಕೊಳ್ಳಬೇಕೆಂದು ಇಂಥವರು ಹೇಳುತ್ತಾರೆ.

ಒಂದೆಡೆ ಸಾಮಾಜಿಕವಾಗಿ, ಕಳ್ಳತನ, ಕೊಲೆ, ಸುಲಿಗೆ, ದರೋಡೆಗಳು ಬಲಗೊಳ್ಳುತ್ತಿದ್ದರೆ, ರಾಜಕೀಯವಾಗಿ ಭ್ರಷ್ಟಾಚಾರ, ಜಾತೀಯತೆ, ಕೋಮುವಾದ, ಪರಮತಅಸಹನೆಯ ಫ್ಯಾಸಿಸ್ಟ್ ಧೋರಣೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಉತ್ತರದಾಯಿತ್ವವಿಲ್ಲದ ದುರಾಡಳಿತ ವ್ಯಾಪಕವಾಗುತ್ತಿದೆ. ಮತ್ತೊಂದೆಡೆ ಬೆಲೆಯೇರಿಕೆ, ನಿರುದ್ಯೋಗ ಸಮಸ್ಯೆಗಳು ನಮ್ಮ ಧುರೀಣರಿಗೆ ಮತ್ತು ಯುವಜನರಿಗೆ ಗಂಭೀರ ಸಮಸ್ಯೆಗಳೆಂದು ಅನ್ನಿಸದೆ ಕೇವಲ ಜಾಗತಿಕ ಜನಜೀವನದ ಸಹಜ ಸ್ಥಿತಿಗತಿಗಳಾಗಿವೆ. ಭ್ರಷ್ಟರು ಇಲ್ಲವೆ ಅಸಹಾಯಕರಾದ ನ್ಯಾಯಾಧೀಶರು ಜನಸಾಮಾನ್ಯರಿಗೆ ಸಹಜನ್ಯಾಯವಲ್ಲ, ಸಾಂವಿಧಾನಿಕ ನ್ಯಾಯವೊದಗಿಸಲೂ ಸಾಧ್ಯವಾಗದಷ್ಟು ಕುರುಡರಾಗಿದ್ದಾರೆ. ಜನರ ಅಭಿಪ್ರಾಯ-ಭೇದ ಭಿನ್ನತೆಗಳನ್ನು ದುಗುಡ-ದುಮ್ಮಾನಗಳನ್ನೂ ಸರಕನ್ನಾಗಿಸಿ ಮಾರಿಕೊಳ್ಳುತ್ತಿರುವ ಮಾಧ್ಯಮಗಳು ವ್ಯಾಪಾರಿಗಳ ಜೇಬಿನಲ್ಲಿ ಸೇರಿಕೊಂಡಿವೆ. ಪಕ್ಷರಾಜಕಾರಣ ಪರಸ್ಪರವಾಗಿ ಬ್ಲಾಕ್ಮೇಲ್ ಮಾಡಿ ಹಣ ಮಾಡುವ,ಅಸ್ತಿತ್ವ ಉಳಿಸಿಕೊಳ್ಳುವ ಮಾಫಿಯಾ/ದಲ್ಲಾಳಿಗಳ ಸಂಘಟಿತ ದಂಧೆಯಾಗಿದೆ. ಇವುಗಳ ಜೊತೆಗೆ, ಹವಾಮಾನ ವೈಪರೀತ್ಯದ ತೊಂದರೆಗಳಾದ ಅತಿವೃಷ್ಟಿ-ಅನಾವೃಷ್ಟಿ, ಪ್ರವಾಹ, ಶೀತಗಾಳಿ, ಬಿಸಿಗಾಳಿ ರೈತರು, ದುರ್ಬಲರು ಮತ್ತು ಶಕ್ತಿಹೀನರಿಗೆ ಹಿಂದೆಂದೂ ಕಂಡರಿಯದಷ್ಟು ಕಷ್ಟನಷ್ಟಗಳನ್ನು ತಂದೊಡ್ಡುತ್ತಿವೆ. ಕೈತುಂಬಾ ಹಣಗಳಿಸುವ ಮಧ್ಯಮವಗರ್ೀಯರು ಹೊಟ್ಟೆತುಂಬಿದಮೇಲೆ ತಮ್ಮನ್ನು ಕಾಡುವ ಬದುಕಿನ ಬರಡುತನ, ಏಕತಾನತೆ, ಅನಾರೋಗ್ಯದ ದಿಗಿಲುಗಳಿಗೆ ಬಾಬಾಗಳು, ಭಕ್ತಿ, ಸೂಫಿ, ಅನುಭಾವಗಳ ವ್ಯಾಪಾರಕೇಂದ್ರಗಳಿಗೆ ಲಗ್ಗೆ ಇಡುತ್ತಿದ್ದಾರೆ. ಜಾಗತೀಕರಣದ ಧೂರ್ತರಾಜಕೀಯಕ್ಕೆ ಪಯರ್ಾಯವಾದ ರಾಜಕೀಯ ದರ್ಶನ-ಚಿಂತನೆಗಳು ಇದ್ದೂ ಇಲ್ಲದಂತಿರುವ ಸ್ಥಿತಿಗೆ ತಲುಪಿವೆ.

ಕನ್ನಡದ ಚಿಂತಕರು-ಬುದ್ಧಿಜೀವಿಗಳು ಹೆಸರಿಸುವ ಎಲ್ಲಾ ಅನುಭಾವಿ-ಸೂಫಿ-ಸಂತರು ವೈಯಕ್ತಿಕ ಸ್ತರದಲ್ಲಿ ಮಾನವೀಯತೆಯ ವರ್ಗರಹಿತ ಸಮಾಜದಲ್ಲಿ ಗಾಢ ನಂಬಿಕೆ ಇಟ್ಟ ಅ-ರಾಜಕರು, ಅ-ನಾಥರು. ಅವರ ನಿಜಜೀವನದಲ್ಲಿ ಆಚರಿಸಿದ, ಸಹಜೀವಿಗಳೊಂದಿಗೆ ಹಂಚಿಕೊಂಡ ಲಭ್ಯ ಜೀವನಾಗತ್ಯ ಗಳಲ್ಲೆ ಬದುಕುವ ಸರಳತೆ, ಸರ್ವಸಮಾನತೆ, ಸರ್ವಸಹೋದರತೆ, ಪರಸ್ಪರ ಸಹಕಾರ ಮತ್ತು ಜೀವಕಾರುಣ್ಯಗಳು ಜನಸಮುದಾಯವನ್ನು, ವಿಶೇಷವಾಗಿ ಬಡಜನರನ್ನು ತಮ್ಮೆಡೆಗೆ ಸೆಳೆದುಕೊಳ್ಳು ವಂಥವು. ಆದರೆ, ತಾತ್ವಿಕವಾಗಿ ಇದೇ ಬಗೆಯ ಜೀವನಶೈಲಿಯನ್ನು ಪ್ರತಿಪಾದಿಸುವ, ಅದಕ್ಕೆ ಪೂರಕವಾದ ಆಥರ್ಿಕ ನೆಲೆಗಟ್ಟನ್ನು ನಿಮರ್ಿಸಿಕೊಳ್ಳಬೇಕೆನ್ನುವ ಸಾಮ್ಯವಾದೀ ರಾಜಕೀಯ ದೃಷ್ಟಿಕೋನವನ್ನು ಪ್ರಗತಿಪರರೆನಿಸಿಕೊಂಡ ನಮ್ಮ ಬಹುತೇಕ ಚಿಂತಕರು-ಬುದ್ಧಿಜೀವಿಗಳು ತಪ್ಪಿಯೂ ಹೆಸರಿಸುವುದಿಲ್ಲ. ಬದಲಾಗಿ ಸ್ವಾತಂತ್ರ್ಯ-ಪ್ರಜಾಪ್ರಭುತ್ವದ ಹೆಸರಿನಲ್ಲಿ ತಿರಸ್ಕರಿಸುತ್ತಾರೆ. ಸಾಧ್ಯವಿದ್ದರೆ ಸಮಯಾನುಸಾರ ಅವುಗಳ ಕೀರ್ತನೆಯಿಂದ ಲಾಭವನ್ನೂ ಪಡೆದುಕೊಳ್ಳುತ್ತಾರೆ. ರಾಜಕೀಯವಲ್ಲದ ಭ್ರಾಮಕ-ಧಾಮರ್ಿಕ-ಸಾಂಸ್ಕೃತಿಕ ಪಯರ್ಾಯಗಳನ್ನು ನೈತಿಕನೆಲೆಗಳಲ್ಲಿ ಒಪ್ಪಿಕೊಳ್ಳುವಂತೆ ಸಹಜೀವಿ ಗಳನ್ನು ಬಲವಾಗಿ ಒತ್ತಾಯಿಸುವಂಥ ವಾಗ್ವಾದಗಳನ್ನು ಹುಟ್ಟುಹಾಕುತ್ತಾರೆ. ಮೇಲು ನೋಟಕ್ಕೆ ಅತ್ಯಂತ ಆಕರ್ಷಕವಾಗಿ ಕಾಣುವ, ವೈಯಕ್ತಿಕ ಪ್ರತಿಷ್ಠೆಯನ್ನು ಹೆಚ್ಚಿಸುವ ಇವರ ಚಿಂತನೆಗಳು ವಾಸ್ತವವಾಗಿ ಅಪ್ರಾಮಾಣಿಕವಾದುವು ಮತ್ತು ಸಮುದಾಯವನ್ನು ದಾರಿತಪ್ಪಿಸುವಂಥವು.

ಬುದ್ಧನಿಂದ ಹಿಡಿದು, ಅಲ್ಲಮ, ಕಬೀರ, ಪರಮಹಂಸ, ವಿವೇಕಾನಂದ, ರಮಣ ಜೆಕೆ, ಮತ್ತು ಯುಜಿ ಗಳಂಥ ಆಧುನಿಕ ಅನುಭಾವಿಗಳ, ಎಲ್ಲಾ ಸೂಫಿ-ಸಂತರ ಉಪದೇಶ-ಸಂದೇಶಗಳ ಸಾರ ಹೀಗಿದೆ:

ಜೀವನ ಮೂಲತಃ ಹಸಿವು, ಬಾಯಾರಿಕೆ, ಭಯ ಆಸೆಗಳ ಮತ್ತು ಸಂತಾನೋತ್ಪತ್ತಿಯ ಸಂಕೀರ್ಣ ಅಗತ್ಯಗಳ ನೇರ ಪರಿಣಾಮವಾದ ಸುಖ-ದುಃಖ-ನೆಮ್ಮದಿ-ಆತಂಕಗಳ ಅಸ್ತಿತ್ವ. ಸಾಯುವ ತನಕವೂ ಒಂದಲ್ಲ ಒಂದು ರೀತಿಯಲ್ಲಿ ಜೀವಿಗಳಿಗೆ ನರಳಿಕೆ ಅನಿವಾರ್ಯ. ಲೌಕಿಕ ನೆಲೆಯಲ್ಲಿ ಇದರಿಂದ ಯಾರಿಗೂ ಬಿಡುಗಡೆಯಿಲ್ಲ. ಆದರೆ ಕಠಿಣ ಆಧ್ಯಾತ್ಮಿಕ ಸಾಧನೆಯಿಂದ ಇದನ್ನು ಮೀರಬಹುದು. ಅದೇ ಆತ್ಮಸಾಕ್ಷಾತ್ಕಾರ. ಹೀಗಿದ್ದರೂ ಅದು ವ್ಯಕ್ತಿಗತವಾಗಿ ಮಾತ್ರ ಸಾಧ್ಯ. ಒಬ್ಬರು ಇನ್ನೊಬ್ಬರಿಗೆ ಕೊಡಲು ಬರುವಂಥದಲ್ಲ. ಜನರನ್ನು ಉಪದೇಶ-ಅರಿವು-ಆಚರಣೆಗಳ ಮೂಲಕ ಸಾರ್ವಜನಿಕವಾಗಿ ತರಬೇತುಗೊಳಿಸಿ ಸಾಧ್ಯಮಾಡುವಂಥದ್ದೂ ಅಲ್ಲ. ಅದು ಹಣದಿಂದ ಸಿಕ್ಕುವುದಿಲ್ಲ. ಸಂಘಟನೆಯಿಂದ ಸಾಧ್ಯವಿಲ್ಲ. (ನ ಕರ್ಮಣ ನ ಪ್ರಜಯ, ಧನೇನ ತ್ಯಾಗೇನೈಕೆ ಅಮೃತತ್ವ ಮಾನಷುಃ) ಅಂಥ ಆತ್ಯಂತಿಕ ಬಿಡುಗಡೆಯಲ್ಲಿ ವ್ಯಕ್ತಿ-ಸಮಷ್ಟಿಗಳಾದಿಯಾದ ಎಲ್ಲಾ ದ್ವಂದ್ವಗಳೂ ಕರಗಿಹೋಗುವುದರಿಂದ ಲೋಕೋಧ್ಧಾರ ಅಥವಾ ಲೋಕಸಂಗ್ರಹದ ಘೋಷಣೆ ಕೇವಲ ಅರೆಬೆಂದ ಅಧ್ಯಾತ್ಮವಾದಿಗಳ ಸೋಗು ಆಗುತ್ತದೆ. ಅಥವಾ ಆಸ್ತಿ-ಸಂಪತ್ತಿನ ಸಂಗ್ರಾಹಕರಾದ ಮಹಾತ್ಮ-ಮಹಷರ್ಿ-ಸದ್ಗುರುಗಳೆಂಬ ಆಧ್ಯಾತ್ಮಿಕ ವರ್ತಕರ ದಂಧೆಯಾಗುತ್ತದೆ. ಅಷ್ಟೇ ಅಲ್ಲ, ಗಾಂಧೀ ಪ್ರಣೀತ ನೈತಿಕನೆಲೆಗಟ್ಟಿನ ಸಾಧುಸಮಾಜವನ್ನೂ ಕಟ್ಟಲಾಗುವುದಿಲ್ಲ. ಅಂಥ ಸವರ್ೋದಯ ಎಂದಿಗೂ ಸಾಧ್ಯವಿಲ್ಲ. ಏಕೆಂದರೆ, ದ್ವಂದ್ವಾತ್ಮಕವಾದ ಈ ವಿಶ್ವ ಬದಲಾದರೂ ಅದರ ದ್ವಂದ್ವರಹಿತ ಮೂಲತತ್ವ ಮಾತ್ರ ಎಂದಿಗೂ ಬದಲಾಗುವುದಿಲ್ಲ.

ಬುದ್ಧನ ಸಾಂಘಿಕತೆಯಲ್ಲಿ ಸಾಮಾಜಿಕತೆಯಿದೆ ಆದರೆ ಸಮಾಜವಾದವಿಲ್ಲ. ವಿವೇಕಾನಂದ, ನಾರಾಯಣಗುರು ಮೊದಲಾದವರ ಸಾಂಘಿಕ ದೃಷ್ಟಿಗಳಲ್ಲಿ ಸಾಮಾಜಿಕ ಪರಿವರ್ತನೆಯ ಆಶಯವಿದೆ. ಆದರೆ ಜನಪರವಾದ ರಾಜಕೀಯ ಬದಲಾವಣೆಯ ಜರೂರಿಲ್ಲ. ರಾಜಕಾರಣದ ಗರ್ಭದಲ್ಲೇ ಆಧ್ಯಾತ್ಮಿಕತೆಯನ್ನು ಕಸಿಮಾಡಲೆತ್ನಿಸಿದ ಮಹಾತ್ಮಾ ಗಾಂಧಿಯ ಸಂತ ಸಮಾಜ, ಸವರ್ೋದಯದ ಕಲ್ಪನೆ ನೈತಿಕ ಅರ್ಥವ್ಯವಸ್ಥೆಯ ಸಾಮಾಜೀಕತೆಯೇ ಹೊರತು ರಾಜಕೀಯ ಪಯರ್ಾಯವಲ್ಲ. ಇದು ನಿಜವಾದರೆ, ನಮ್ಮ ಬಹುತೇಕ ಹಿರಿಯ-ಕಿರಿಯ ಬುದ್ಧಿಜೀವಿಗಳು ಜಾಗತೀಕರಣದ ಕಳಿತ ಫಲಗಳಿಗೆ ಕೈ ಚಾಚುತ್ತಲೇ ಅನುಭಾವಿಗಳ ಬಗ್ಗೆ, ಸೂಫಿಸಂತರ ಬಗ್ಗೆ, ಬಸವ ಬುದ್ಧ ಗಾಂಧಿಯ ಬಗ್ಗೆ ಏಕೆ ಆಕಷರ್ಿತರಾಗಿದ್ದಾರೆ? ಜನರನ್ನು ಅತ್ತ ಆಕಷರ್ಿಸಲು ಹವಣಿಸುತ್ತಾರೆ?

ಜಾಗತೀಕರಣದ ಒಟ್ಟು ಉದ್ದೇಶ ಮತ್ತು ಪರಿಣಾಮ ಜೀವನಾಗತ್ಯ ವಸ್ತು-ಸೌಲಭ್ಯ-ಸಂಪತ್ತಿನ ಉತ್ಪಾದನೆ-ಹಂಚಿಕೆಗಳ ಸ್ವಾಮ್ಯವನ್ನು ಸಾಮಾಜಿಕ ನಿಯಂತ್ರಣದಿಂದ ತಪ್ಪಿಸಿ ಖಾಸಗೀಕರಿಸುವುದು. ಸ್ವಾತಂತ್ರ್ಯ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ವಿಕೇಂದ್ರೀಕರಿಸಿ ಮತ್ತೆ ವ್ಯಕ್ತಿ ಪಾರಮ್ಯದ, ವ್ಯಾಪಾರೀಕರಣ-ಕೇಂದ್ರೀಕರಣದ ಮೂಲಕ ಕಾಪರ್ೋರೇಟ್ ಸ್ವಾಮ್ಯಕ್ಕೆ ಒಪ್ಪಿಸುವುದು. ಇದು ಏಕಕಾಲಕ್ಕೆ ಆಥರ್ಿಕ ಪರಿವರ್ತನೆಯೂ ಹೌದು, ರಾಜಕೀಯವೂ ಹೌದು. ಈ ವಿದ್ಯಮಾನವನ್ನು ಅಪರಿಹಾರ್ಯ, ಅನಿವಾರ್ಯ ಮತ್ತು ಹಿಂದಕ್ಕೆ ಹೋಗಲಾಗದ ಬದಲಾವಣೆಯೆಂದು ಸಮಥರ್ಿಸುವ ತಾತ್ವಿಕ ವಿವರಣೆಗಳು ಆಧುನಿಕೋತ್ತರ ರಾಜಕೀಯ-ಸಾಂಸ್ಕೃತಿಕ ಮೀಮಾಂಸೆಗಳ, ನವಚಿಂತನಾ ವಿನ್ಯಾಸಗಳ ರಚನೆಗೆ, ಆಧಾರವಾಗಿವೆ ಇಲ್ಲವೇ ಪೂರಕವಾಗಿವೆ. ಇದನ್ನೆದುರಿಸಬೇಕಾದ ಪಯರ್ಾಯ ರಾಜಕಾರಣ, ವರ್ತಮಾನದ ಅಗತ್ಯಗಳನ್ನು ಒಳಗೊಳ್ಳುವಂತೆ, ತನ್ನ ಚಿಂತನಾ ವಿನ್ಯಾಸಗಳನ್ನು ಪಯರ್ಾಯವಾಗಿ ರೂಪಿಸಿಕೊಳ್ಳುವ ಬದಲು ಜಾಗತೀಕರಣದ ಬಂಡವಾಳವಾದೀ ತಾತ್ವಿಕತೆಯನ್ನು ಸಮಥರ್ಿಸುವ ಚಿಂತನಾವಿನ್ಯಾಸಗಳಲ್ಲೇ ಉತ್ತರಗಳನ್ನು ಹುಡುಕುತ್ತಿದೆ. ಅಲ್ಲದೆ ತನ್ನ ಸಾಮ್ಯವಾದೀ ತತ್ವವನ್ನು ಬಳಸಿಕೊಂಡು ಜಾಗತೀಕರಣದ ಹಿಂದಿರುವ ಜಾಗತಿಕ ಬಂಡವಳಿಗರ ಅಧಿಕಾರವನ್ನು, ತಂತ್ರಜ್ಞಾನ-ರಣವ್ಯೂಹಗಳನ್ನು ಕೈವಶಮಾಡಿಕೊಳ್ಳುವಷ್ಟು ಶಕ್ತಿಶಾಲಿಯಾಗಿಲ್ಲ. ಹೀಗಾಗಿ ಸಾಮ್ಯವಾದೀ ರಾಜಕೀಯ ಆಧುನಿಕ ಬಂಡವಾಳವನ್ನು ಸರಿಸಾಟಿಯಾಗಿ ಎದುರಿಸದೆ, ನಿಷ್ಪ್ರಯೋಜಕವಾದಂತೆ, ತಾತ್ವಿಕವಾಗಿ ಅಪ್ರಸ್ತುತವಾದಂತೆ ತೋರುತ್ತದೆ. ಇಂಥ ರಾಜಕೀಯ ಅತಂತ್ರ ಸ್ಥಿತಿಗೆ ಸಿಕ್ಕಿದ ಚಿಂತಕರ ಸಂದಿಗ್ಧತೆಗೂ ಅನುಭಾವಿಗಳ, ಸೂಫೀಸಂತರ ದರ್ಶನದಿಂದ ಹೊಮ್ಮುವ ಅ-ರಾಜಕ, ಅ-ನಾಥ ಸ್ಥಿತಿಗೂ ಹತ್ತಿರದ ಸಂಬಂಧವಿದೆ. ಎಲ್ಲಾ ಅನುಭಾವಿಗಳು, ಸೂಫಿ ಸಾಧು ಸಂತರು, ಸಾಧಕರಾಗಿ ಭೋಗ-ಸುಖ-ಲಾಲಸೆಯ ತುತ್ತತುದಿಯಲ್ಲಿದ್ದಾಗ ಅಥವಾ ಅವುಗಳ ತೀವ್ರ ಅಭಾವದ ನಿರ್ಗತಿಕ ಸ್ಥಿತಿಯಲ್ಲಿದ್ದಾಗ ಅನುಭಾವದ ಸೆಳತಕ್ಕೆ ಸಿಕ್ಕಿದವರೆಂದು ಅವರ ಬಗೆಗೆ ಲಭ್ಯವಿರುವ ಐತಿಹ್ಯ-ಪುರಾಣಗಳು ಹೇಳುತ್ತವೆ. ಸಂಘಟನೆ ವಿಘಟನೆಯ ದಾರಿ ಹಿಡಿದಾಗ, ಬಂಡವಳಿಗರನ್ನು ಎದುರಿಸುವ ಆಥರ್ಿಕಚೈತನ್ಯವಿಲ್ಲದಾದಾಗ, ಹಿಂಬಾಲಕರ ಸಂಖ್ಯಾಬಲ ಕುಸಿದಾಗ, ವೋಟಿನ ರಾಜಕೀಯ, ಜನಾಂದೋಲನ ಅಥವಾ ಮಿಲಿಟರಿ ರಣವ್ಯೂಹ-ರಣತಂತ್ರ, ಈ ಮೂರುವಿಧಾನಗಳಲ್ಲಿ ಬಿಡಿಬಿಡಿಯಾಗಿ ಅಥವಾ ಒಟ್ಟಿಗೆ ರಾಜಕೀಯ ಅಧಿಕಾರಕ್ಕಾಗಿ ಪ್ರಯತ್ನಿಸುವುದೇ ಒಂದಲ್ಲ ಒಂದು ರೀತಿಯಲ್ಲಿ ಅರ್ಥಹೀನವೆಂದು ಪ್ರಗತಿಪರ ನೆಲೆಯಲ್ಲೆ ಜಾಗತೀಕರಣದ ಲಾಭಗಳನ್ನು ಹೆಕ್ಕಿಕೊಳ್ಳುವ ಜಾಣಚಿಂತಕರು ಪ್ರತಿಪಾದಿಸುತ್ತಾರೆ. ಅಂಥವರಿಗೆ ಅನುಭಾವಿಗಳ-ಸೂಫೀಸಂತರ ಮಾರ್ಗವೇ ಸಾಮಾಜಿಕ ಬದಲಾವಣೆಗೆ ಅತ್ಯಂತ ಸಮಂಜಸವೆಂದು, ಕ್ಷೇಮಕರವೆಂದು ಅನ್ನಿಸುತ್ತದೆ. ನಮ್ಮ ಸೂಫೀ-ಸಂತಮುಖೀ ಚಿಂತಕರ ಬೌದ್ಧಿಕ ನಿಲುವುಗಳ ಹಿಂದೆ ಇರುವ ಗ್ರಹಿಕೆಗಳೂ ಇಂಥವೇ.

ಸಾಧ್ಯವಿದ್ದರೆ ಎಲ್ಲಾ ದ್ವಂದ್ವಗಳನ್ನು ಮೀರಿ ಅಲ್ಲಮನೋ ಪರಮಹಂಸರೋ, ರಮಣರೋ ಆದರೆ ಏನೂ ಬಾಧಕವಿಲ್ಲ. ಸೂಫಿ-ಸಂತರು ಹೇಳುವ ಅನುಭಾವವನ್ನು ಪಡೆದರೆ ದ್ವಂದ್ವಗಳಾಚೆ ನಿಂತು ನಿಷ್ಕ್ರಿಯರಾಗಿ ಕನಿಷ್ಠತಮ ಅಗತ್ಯಗಳಲ್ಲಿ ಬದುಕುವ ಅ-ರಾಜಕ, ಅ-ನಾಥರಾಗಿರಬಹುದು. ಅದಾಗದಿದ್ದರೆ ಭವದ ಸಾಮಾಜಕತೆ-ರಾಜಕೀಯಗಳನ್ನು ಒಪ್ಪಿ ಈ ದ್ವಂದ್ವಾತ್ಮಕ ಪ್ರಪಂಚದಲ್ಲಿ ಸಕ್ರಿಯರಾಗಬಹುದು. ಎರಡಕ್ಕೂ ಮಧ್ಯದ ಸ್ಥಿತಿ ಯಾವುದೂ ಇಲ್ಲ. ಇದೆ ಎಂದಾದರೆ, ಸಕ್ರಿಯರಾಗಬೇಕಾದಾಗ ಚಿಪ್ಪಿನೊಳಕ್ಕೆ ಸರಿದು ಅನುಭಾವದತ್ತ ಕೈಚಾಚುವುದು, ನಿಷ್ಕ್ರಿಯಸ್ಥಿತಿಯ ಅನುಭಾವವನ್ನು ಮುಟ್ಟಬೇಕೆಂದು ಮುಟ್ಟಲಾಗದೆ ಅದರ ಹಳಹಳಿಕೆಯನ್ನೇ ಸಕ್ರಿಯೆಯೆಂದು ಭ್ರಮಿಸುವುದು, ಭವವನ್ನು ಕೀತರ್ಿಸಿ ಪಡೆದ ಉಪಭೋಗಗಳನ್ನು ಆರಾಧಿಸುವುದು. ಇದು ನಮ್ಮ ಚಿಂತಕರ ಬೌದ್ಧಿಕಭ್ರಷ್ಟತೆ. ಅಪ್ರಾಮಾಣಿಕತೆ. ಎರಡೂ ನಿಲುವುಗಳಿಂದ ಸಿಗಬಹುದಾದ ಲೌಕಿಕ ಲಾಭವನ್ನು ಹೆಕ್ಕಿಕೊಳ್ಳುವ ಅವಕಾಶವಾದೀ ನಿಲುವು. ಇದನ್ನು ನಿಜವೆಂದು ಒಪ್ಪಿ ಟೀಕಿಸುವವರ ಬಾಯಿಮುಚ್ಚಿಸುವುದು ಪ್ರಾಮಾಣಿಕತೆಯಲ್ಲ, ಸರಿಯೆಂದು ಸಾಧಿಸುವುದು ನಿಸೃಹತೆಯಲ್ಲ, ಧೂರ್ತತನ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: