ಅವರೆ ಕಾಳು ಸೀಸನ್ ಮುಗಿಯುವ ಮುನ್ನ

-ಮಾಲತಿ ಶೆಣೈ

ನೆನಪಿನ ಸಂಚಿ

ಬೆಂಗಳೂರಿಗೆ ಬಂದ ಮೊದಲ ಎರಡು ವರ್ಷ ನಾನು ಅವರೆ ಕಾಳಿನ ಸುದ್ದಿಗೆ ಹೋಗ್ಲೇ ಇಲ್ಲ. ಮುಂಬೈನಲ್ಲಿ ಅದು ಸಿಗುತ್ತಿರಲಿಲ್ಲ.ನಮ್ಮ ಆಫಿಸ್ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ನ ಏಳನೆ ಮಹಡಿಯಲ್ಲಿತ್ತು. ಕೆಲವೊಮ್ಮೆ break ತೆಗೊಂಡು ಕಿಟಕಿಯಿಂದ ಕೆಳಗೆ ನೋಡಿದ್ರೆ, ಕೆಳಗಡೆ ತರಕಾರಿ ಮಾರುವವರು ರಾಶಿ ರಾಶಿ ಅವರೆಕಾಳನ್ನು ಬಿಡಿಸಿ ನೀರಿನಲ್ಲಿ ಹಾಕಿಡತಿದ್ರು. ನಮ್ಮ ಆಫಿಸ್ ನವರು ಯಾರಿಗೂ ಅವರೆಕಾಳಿನ ಬಗ್ಗೆ ತಿಳಿದಿರಲಿಲ್ಲ. ಜನರು ಮುಗಿಬಿದ್ದು ತೆಗೆದುಕೊಂಡು ಹೋಗುವುದನ್ನು ನೋಡುತ್ತಿದ್ದೆ ವಿನ: ನಾನಂತು ಅದರ ತಂಟೆಗೆ ಹೋಗಿರಲಿಲ್ಲ.

ಆಮೇಲೆ ನಿಧಾನವಾಗಿ ವಿಜಯಕರ್ನಾಟಕದ ಅಂಕಣಕಾರರಾದ ಶ್ರೀವತ್ಸ ಜೋಶಿಯವರ ಪರಿಚಯವಾಯ್ತು. ಅವರ ಮೂಲಕ thatskannada ಡಾಟ್ ಕಾಮ್ websiteನ ಪರಿಚಯವಾಯ್ತು. ಅಲ್ಲಿ ಅವರೆಕಾಳಿನ ಉಪ್ಪಿಟ್ಟಿನ ವಿವರಣೆ ಹಾಗೂ ಕಮೆಂಟ್ ಗಳನ್ನು ಓದಿ ಬಾಯಲ್ಲಿ ನೀರೂರಿತು. ನಾನು ಯಾವಗಾದರೊಮ್ಮೆ try ಮಾಡಬೇಕೆಂದು ಅಂದುಕೊಂಡಿದ್ದೆ ಅಷ್ಟೆ. ಶ್ರೀಕಾಂತ್ ಹತ್ತಿರ mention ಮಾಡಿದಾಗ, ಅವರು ಹಿಂದೊಮ್ಮೆ ಅವರ ಫ್ರೆಂಡ್ ಮನೆಯಲ್ಲಿ ಅವರೆಕಾಳು ಉಪ್ಪಿಟ್ಟು ಮತ್ತು ಚಟ್ನಿ ತಿಂದಿದ್ದು ನೆನಸಿಕೊಂಡು, ಸ್ವಲ್ಪ extra fittings (ಮಕ್ಕಳ term) ಇಟ್ಟು ಅದನ್ನು ರಸವತ್ತಾಗಿ ಬಣ್ಣಿಸಿದಾಗ, ಸ್ವಲ್ಪ ಹೊಟ್ಟೆಕಿಚ್ಚಾಗಿದ್ದು ನಿಜ. but ಪುನಃ ಅದು ನನ್ನ ಮನಸ್ಸಿನಿಂದ ಆಚೆ ಹೋಯ್ತು. ಮತ್ತು ಅಷ್ಟರಲ್ಲೇ ನಮ್ಮ ಹೊಸ ಆಫಿಸ್ ರಾಜಾಜಿನಗರ ಎರಡನೇ ಬ್ಲಾಕ್ ನಲ್ಲಿ ಶುರು ಮಾಡಿದ್ವಿ. ನನ್ನನ್ನು ಅಲ್ಲಿಗೆ ವರ್ಗಾಯಿಸಿದರು.

ಹೊಸ ಆಫಿಸಿಗೆ ಹೋದ ಕೆಲವೆ ದಿನದಲ್ಲಿ ನಮ್ಮ ಆಫಿಸ್ ಗೆ ಗೋವಿಂದರಾಜನ್ ಅನ್ನುವವರು ನಮ್ಮನ್ನು join ಆದರು. ಅವರು ಕೆಲವೊಮ್ಮೆ ಬೆಳಿಗ್ಗೆ ಅಲ್ಲಿ ಹತ್ತಿರದ ಹೋಟಲ್ ನಿಂದ ಅವರ favorite ಪಡ್ಡು (hoppers) ತರಿಸುತ್ತಿದ್ದರು. ಒಂದು ಸಲ ಪಡ್ಡು ಇರಲಿಲ್ಲ ಅದಕ್ಕೆ ಅವರೆಕಾಳಿನ ಅಕ್ಕಿ ರೊಟ್ಟಿ ತರಿಸಿ ತಿನ್ನುವಾಗ ನನಗೆ ಅದರ ಪರಿಮಳ ಬಂದು ನಾಚಿಕೆ ಬಿಟ್ಟು ಅವರ ಹತ್ತಿರ ಒಂದು piece ತೆಗೊಂಡು ತಿಂದೆ. ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ ಪರಮಾನಂದಂ..ಪರಮಸುಖದಂ…. ಆಮೇಲೆ ಅವರು ಹೋಟಲ್ ನಿಂದ ಏನಾದ್ರೂ ತರಿಸುವಾಗ ನಾನು ನನಗೋಸ್ಕರ ಅಕ್ಕಿ ರೊಟ್ಟಿ ತರಿಸ್ತಿದ್ದೆ. ಬೆಳಿಗ್ಗೆ ಒಂದು ರೊಟ್ಟಿ ತಿಂದ್ರೆ ಆಮೇಲೆ ಇಡೀ ದಿನ ಹಸಿವೆ ಆಗ್ತಿರಲಿಲ್ಲ. ನನ್ನ ಊಟದ ಡಬ್ಬಿ ಉಳಿದವರು ಹಂಚಿಕೊಳ್ಳುತ್ತಿದ್ದರು.ಮತ್ತೆ ಮನೇಯಲ್ಲೇ ಮಾಡಬೇಕೆನ್ನುವ ಹುಮ್ಮಸ್ಸು ಬಂತು. ಯಾಕೆಂದ್ರೆ ಅಕ್ಕಿ ರೊಟ್ಟಿ ಸಿಗುವ ಅಶೋಕಾ ಹೋಟಲ್ ಮುಚ್ಚಿ ಬಿಟ್ಟು ಅಲ್ಲಿ ರಾಗಿ ಮುದ್ದೆ ಹೋಟಲ್ ಬಂತು 😦

experiment ಮಾಡಲು ಇನ್ನೊಂದು ಕಾರಣಾನೂ ಇತ್ತು. ಮೊದಲು ಜಯನಗರದಿಂದ ಮಹಾಲಕ್ಷ್ಮೀ ಲೇ ಔಟ್ ಗೆ ಬಸ್ಸ್ ನಲ್ಲಿ ನೇತಾಡಿಕೊಂಡು ಸಂಜೆ 7.15 ರಿಂದ 7.30 ಕ್ಕೆ ಮನೆ ತಲುಪಿ, ನೆಲ ಒರೆಸಿ ಬಟ್ಟೆ wash ಮಾಡಿ, ಉಳಿದ ಆಫಿಸ್ ಕೆಲಸಗಳು,ಆಮೇಲೆ ರಾತ್ರಿ ಅಡುಗೆ, ಮರುದಿನದ ತಿಂಡಿ ಅಡುಗೆಯ ಸ್ವಲ್ಪ ತಯಾರಿ ನಡೆಸುವಷ್ಟರಲ್ಲಿ ಸುಸ್ತಾಗಿರುತ್ತಿತ್ತು. (ಮತ್ತೆ ಅಮೇರಿಕದಲ್ಲಿರೋ ತಂಗಿ ಏನಾದ್ರು ಫೋನ್ ಮಾಡಿದ್ರೆ, ಯಾಕೋ ಅವಳು ನಮ್ಮನ್ನು ತುಂಬ ಮಿಸ್ ಮಾಡ್ತಾ ಇದ್ದಳು, ಅವಳು ಆಗಷ್ಟೆ ಅಮೇರಿಕಾಗೆ ಹೋಗಿದ್ಲು- ಮನೆಯಲ್ಲಿ ಕೊನೆಯವಳು ಮುದ್ದಿನ ತಂಗಿ)ಮಾತಾಡ್ತಾ ರಾತ್ರಿ ಮಲಗುವಾಗ ಎರಡು ಮೂರು ಗಂಟೆ ಯಾಗಿದ್ದೂ ಇದೆ.) easy ಯಾಗಿರುವ ತೊಗರಿ ಬೇಳೆ ತೊವ್ವೆ ನೆ ಜಾಸ್ತಿ ಮಾಡ್ತಿದ್ದಿದ್ದು. ಹೊಸದಾಗಿ ಏನಾದ್ರೂ ಟ್ರೈ ಮಾಡಲು ಮೂಡ್ ಇರ್ತಿರಲಿಲ್ಲ.

ರಾಜಾಜಿನಗರಕ್ಕೆ ಬಂದ ಮೇಲೆ, ಅದರಲ್ಲೂ ಆಫಿಸ್ ಕ್ಲೀನ್ ಮಾಡುವ ಸರೋಜಮ್ಮನೇ, ಮನೆ ಕೆಲಸ ಮಾಡಿಕೊಡ್ತೇನೆ ಅಂದಾಗ,ನನ್ನ ಕೈ ನಲ್ಲಿ ಸಮಯ ಉಳಿತಿತ್ತು. ಬೆಳಿಗ್ಗೆ ಶ್ರೀಕಾಂತ್ drop ಮಾಡ್ತಿದ್ದರು. ಸಂಜೆ ಆಫಿಸ್ ನಿಂದ ಮನೆಗೆ ನಡೆದುಕೊಂಡು ಹೋಗ್ತಿದ್ದೆ. ಅನನ್ಯ hospital ಬಳಿ ಅವರೆಕಾಳು ಮಾರುವ ಹೆಂಗಸಿನ ಪರಿಚಯ ಆಗಿ, ಅದನ್ನು ಅಡಿಗೆಗೆ ಬಳಸುವ ಬಗ್ಗೆ ಅವರ ಹತ್ತಿರ ತಿಳದುಕೊಳ್ಳುತ್ತಿದ್ದೆ.

ಇತ್ತೀಚಿನ ಎಂಟು ವರ್ಷಗಳಲ್ಲಿ ಅವರೆ ಕಾಳನ್ನು ಬಳಸಿ ಮೂರು ತರಹದ ಉಪ್ಪಿಟ್ಟು( ರವೆ as well as ಅಕ್ಕಿ ತರೀದು), ಪುಲಾವ್, ವೆಜಿಟೇಬಲ್ ಭಾತ್, ಅವರೆ ಕಾಳು+ಮೆಂತೆ ಸೊಪ್ಪು ಹಾಕಿ ಪಲ್ಯ ವಗೈರೆ ಮಾಡ್ತೇನೆ. ಅಷ್ಟೇ ಅಲ್ಲ ಬಿಸಿ ಬೇಳೆ ಭಾತ್ ಮತ್ತು ಖಾರ ಪೊಂಗಲ್ ನಲ್ಲೂ ಅವರೆ ಬಳಸುತ್ತೇನೆ. ಕೊಂಕಣಿ ಅಡಿಗೆಯಲ್ಲೂ ತುಂಬಾ ಹೊಂದುತ್ತೆ ಈ ಕಾಳು in ಹುಳಿ, ಸಾಂಬಾರು, ಘಸಿ etc. ಅವರೆ ಹಾಕಿದ ಬಸ್ಸಾರು ಬಗ್ಗೆ ಕೇಳಿದ್ದೇನೆ ಹೊರತು ನಾನು ಎಲ್ಲೂ ತಿಂದಿಲ್ಲ. ಅದಕ್ಕೆ ಮಾಡಿಲ್ಲ.ಶ್ರೀಕಾಂತ್ ಮಾದಪ್ಪ ಮೆಸ್ ನ ಬಸ್ಸಾರು ಹೊಗಳ್ತಾ ಇರ್ತಾರೆ. 😦

ಒಂದೆ ಬೇಜಾರಿನ ಸಂಗತಿಯೆಂದರೆ, ಕೆಲವರು ಮನೆಯ ಎದುರುಗಡೆನೆ ಸಿಪ್ಪೆ ಹಾಕೋದು. ಕೇಳಿದ್ರೆ ದನ ತಿನ್ನುತ್ತವೆ ಅಂತಾರೆ, ಎರಡು ಮೂರು ಬಾರಿ ಸಿಪ್ಪೆ ಮೇಲೆ ಜಾರಿದ್ದೇನೆ ಕೂಡ. ಕೆಲವರ ಪ್ರಕಾರ ಸಿಪ್ಪೆಯನ್ನು ಮನೆಯೆದುರಿಗೆ ಬಿಸಾಡಿದರೆ, ಆ ಮನೆಯವರು ಅವರೆ ಕಾಳು ತಿಂದಾಗ ಹೊಟ್ಟೆ ನೋವು ಬರಲ್ವಂತೆ. ಬಸ್ಸ್ ನಲ್ಲಿ ಕೂತು, ಅಥವ, ಮಹಿಳೆಯರು ಅಂಗಡಿ ನಿಭಾಯಿಸುವ ಕಡೆಯಲ್ಲಿ ಪುರುಸೊತ್ತಾದಾಗ, ಪುಟ್ಟ ಟಿ.ವಿ.ನೋಡ್ತಾ ಅಲ್ಲೆ ಅವರೆಕಾಯಿ ಬಿಡಿಸೋದು ಒಂದು ವಿಶೇಷ.

ಆಫೀಸ್ ನ ಸೀನಿಯರ್ಸ್ ಗೆಲ್ಲ ’ಅವರೆ’ ಸೇರಿಸಿ ಸಂಭೋದಿಸುವುದು. ಸಾಲಿಮಠ್ ಅವರೆ, ಗೋವಿಂದರಾಜನ್ ಅವರೆ.. ಹೆಬ್ಬಾಳ ಅವರೆ etc. ಶ್ರೀಕಾಂತ್ ಒಂದು ಸಲ ನನಗೆ ಹೇಳಿದ್ರು ’ಹೆಬ್ಬಾಳ ಅವರೆ” ಅಂತ ಒಂದು ಅವರೆಕಾಳಿನ variety ಇದೆ ಎಂದು. ಅಮೇಲೆ ಅವರಿಗೆ ಹೆಬ್ಬಾಳ sir ಅಂತ ಕರೆಯುವುದು ನಾನು.

so ಇಲ್ಲಿದೆ ಅವರೆ ಕಾಳು ಹಾಕಿ ಮಾಡಿದ ಅಕ್ಕಿ ರೊಟ್ಟಿ.

ಅಕ್ಕಿ ಹಿಟ್ಟು – 3 ಕಪ್

ಬಾಂಬೆ ರವಾ- 1/2 ಕಪ್

ಹಸಿ ಮೆಣಸು – 4 ಅಥವ 5

ಉಪ್ಪು ಹಾಕಿ ಬೇಯಿಸಿದ ಅವರೆಕಾಳು- 1 ಕಪ್

ತಾಜ ತೆಂಗಿನ ತುರಿ- 1/2 ಕಪ್

ಹುಳಿ ಮೊಸರು – 1/2 ಕಪ್

ಸಣ್ಣದಾಗಿ ಕತ್ತರಿಸಿದ ಈರುಳ್ಳಿ, (ಸಬ್ಬಸಿಗೆ (Dill) ಸೊಪ್ಪು-optional), ಹುರಿದು coarsely ಪುಡಿಮಾಡಿದ ಶೆಂಗಾ ಬೀಜ, 1/2 ಟೀ ಸ್ಪೂನ್ ಜೀರಿಗೆ (optional), ಉಪ್ಪು. ಎಲ್ಲವನ್ನೂ ಸೇರಿಸಿ ಹಿಟ್ಟು ಚಿತ್ರದಲ್ಲಿ ತೋರಿಸಿದ ಹಾಗೆ ಹಿಟ್ಟು ತಯಾರಿಸಿ.
ಈ  ಲಿಂಕ್ ನಲ್ಲಿ ರೊಟ್ಟಿ ಮಾಡುವ ವಿಧಾನ ಇದೆ

ಕೆಂಪು ಖಾರದ ಚಟ್ನಿ ಮತ್ತು ಪುದಿನ ಬರೆಸಿದ ಕಾಯಿ ಚಟ್ನಿ ಜತೆಗೆ home made ತುಪ್ಪ…ಸ್ವರ್ಗಕ್ಕೆ ಮೂರೆ ಗೇಣು

ಅದು ಶ್ರೀಕಾಂತ್ ಉವಾಚ

ಖಾರದ ಚಟ್ನಿ ಮಾಡಲು:

ಬಿಸಿ ನೀರಿನಲ್ಲಿ ಬ್ಯಾಡಗಿ ಮೆಣಸಿನಕಾಯಿಯನ್ನು ಸ್ವಲ್ಪ ಹೊತ್ತು ನೆನೆಸಿಡಿ. ಅದಕ್ಕೆ ಹುಳಿ, ಎರಡು ಬೆಳ್ಳುಳ್ಳಿ, ಎರಡು ಕಾಳು ಕೊತ್ತಂಬರಿ ಬೀಜ, ಉಪ್ಪು , ಚೂರೆ ಬೆಲ್ಲ ಹಾಕಿ ಮಿಕ್ಸಿ/ರುಬ್ಬೋ ಕಲ್ಲಲ್ಲಿ ತಿರುವಿ. ಚಟ್ನಿ ರೆಡಿ….ಖಾರ ಜಾಸ್ತಿಯಾಗಿ ’ಜೀವನ ಸಾಕ್ಷಾತ್-ಖಾರ’ ಆದ್ರೆ ನಾನು ಜವಾಬ್ದಾರಳಲ್ಲ. ಬೆಳ್ಳುಳ್ಳಿ ಇಷ್ಟ ಪಡದವರು ಹಿಂಗನ್ನು ಸ್ವಲ್ಪ ಬಿಸಿ ಎಣ್ಣೆಯಲ್ಲಿ ಅರಳಿಸಿ ಹಾಕ ಬಹುದು. no problem.

ಅವರೆಕಾಳು ಸೀಸನ್ ಮುಗಿಯುವ ಮುನ್ನ ಒಂದು ಸಲ್ try karke dekho na..

🙂

pic: Niharika Shenoy

3 ಟಿಪ್ಪಣಿಗಳು (+add yours?)

 1. Jyothi Kadladi
  ಜನ 31, 2011 @ 17:38:48

  Sakhat tasty!! baayalli neeroorisuva recipe jothege nimma wonderful vivarane.. tumba channagide.. i’ve tried red akki rotti also.. took the recipe from Taste of Mysore.. it was a success! I “mixied” red chillis, fried gram, 2 spoons of scraped coconut, salt and mixed it with the flour.. rest all same method.. it was crispy and nice. avarekalu is a wonderful kaalu.. goes well with almost everything.. u know i’d tasty massoppu (with avarekalu) and bassaru prepared by aunty at home.. enjoyed so much!!

  ಉತ್ತರ

 2. malathi S
  ಜನ 27, 2011 @ 17:02:13

  🙂 thank you Avadhi!!.
  ಅವರೆಕಾಳು ಚಿತ್ರ ಚೆನ್ನಾಗಿದೆ!!
  ಎಮ್ ಎಸ್

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: