‘ರಂಗಶಂಕರ’ದಲ್ಲಿ ಇಂದು

ಇಂದಿನ ನಾಟಕ
ಅನೇಕ
ಪ್ರಯೋಗಿಸುವ

ಮಸ್ತಕಾಭಿಷೇಕ ರಿಹರ್ಸಲ್ಲು
ರಚನೆ :  ಹೆಚ್.ಎಸ್.ಶಿವಪ್ರಕಾಶ್
ನಿರ್ದೇಶನ : ಸುರೇಶ ಆನಗಳ್ಳಿ
ಬೆಳಕು: ಆ ನ ರಮೇಶ್, ಮಹದೇವ ಸ್ವಾಮಿ
ರಂಗವಿನ್ಯಾಸ: ಶಂಕರ ಜೀವಿ
ಪರಿಕರ: ಸಂತೋಷ್ಷ ಪಾಂಚಾಲ್
ನಾಟಕಕಾರರ ಟಿಪ್ಪಣಿ:
ನನ್ನ ಹಿಂದಿನ ನಾಟಕಗಳ ಹಾದಿಯನ್ನು ಬಿಟ್ಟು ಹೊಸ ತೆರನ ನಾಟಕರಚನೆಗೆ ಪ್ರಯತ್ನಿಸಿದ್ದೇನೆ. ನಾಟಕ ಕಥನವು ಇಲ್ಲಿ ಹಲವು ಸ್ತರಗಳ ಮೇಲೆ ನಡೆಯುತ್ತದೆ: ನೇರ ಕಥನ ಮತ್ತು ಒಳನಾಟಕ ಪರಸ್ಪರ ಮುಖಾಮುಖಿಯಾಗುವ ಹಾಗೆ, ಪುರಾಣ ಮತ್ತು  ಇತಿಹಾಸ, ಶಬ್ದ ಮತ್ತು ದೃಶ್ಯ, ಗದ್ಯ ಮತ್ತು ಪದ್ಯ, ಸ್ವಪ್ನ ಮತ್ತು ಜಾಗರ, ಸುದ್ದಿ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ಪರಸ್ಪರ ತಿಕ್ಕಾಟದಲ್ಲಿ ವಸ್ತುವನ್ನು ಕಟ್ಟುತ್ತವೆ. ಯಾವ ರೀತಿ ಹೊಸ ಮಾಧ್ಯಮಗಳು ಆಧುನಿಕಪೂರ್ವ ಸಂವಹನಕ್ರಮಗಳಿಂದ
ನಿರ್ಣೀತವಾಗಿಯೂ ಅವುಗಳ ಸ್ವರೂಪವನ್ನು ಮಾರ್ಪಡಿಸುತ್ತಿವೆ ಎಂಬುದನ್ನು ವಿಶೇಷವಾಗಿ ನಿಗಾ ಮಾಡಿ, ಹಲಮಜಲುಗಳ ನಾಟಕವನ್ನು ಕಟ್ಟಲು ಪ್ರಯತ್ನಿಸಿದ್ದೇನೆ. ಮೂಲಭೂತ ಬದಲಾವಣೆಗಳ ಸಂದರ್ಭದಲ್ಲೂ ಹೇಗೆ ಗತದ ಮತ್ತು ಇಂದಿನ ಅನುಭವಪ್ರಕ್ರಿಯೆಯಲ್ಲಿ ನಿರಂತರತೆಯ ಮಗ್ಗುಲಿದೆ ಅನ್ನುವುದನ್ನೂ ತೋರಿಸಿದ್ದೇನೆ.
ನಿರ್ದೇಶಕರ ಟಿಪ್ಪಣಿ:
ಪಾರಂಪರಿಕ ರಂಗಭೂಮಿ ತನ್ನ ಸಿಧ್ಧ ಚೌಕಟ್ಟಿನಲ್ಲಿ ಕಥನವನ್ನು ಒಳಗೊಳ್ಳುತ್ತದೆ. ಆಧುನಿಕ ರಂಗಭೂಮಿ ಬಹುಮಟ್ಟಿಗೆ ನಾಟಕಕೃತಿಯ ಪಠ್ಯಕ್ಕನುಸಾರ ರಂಗಭಾಷೆಯನ್ನು ನಿರ್ಮಿಸಲೆಳೆಸುತ್ತದೆ. ಈ ಎರಡು ಮಾರ್ಗಗಳಿಂದ ಭಿನ್ನವಾದ ರಂಗನಿರ್ಮಾಣ ಕ್ರಮವನ್ನು ಈ ಪ್ರಯೋಗದಲ್ಲಿ ಪ್ರಯತ್ನಿಸಿದ್ದೇನೆ. ನಾಟಕ ಕೃತಿಯನ್ನು ಯಥಾವತ್ತಾಗಿ ರಂಗಕ್ಕ್ಕೆ ತರುವುದರ ಬದಲಿಗೆ ರಂಗಭೂಮಿಯ ‘ಆಟ’ ಗಳ ಮೂಲಕ ನಾಟಕ ಕೃತಿಯಿಂದ ಸ್ವತಂತ್ರವಾದ ಮಂಚನಶೈಲಿಯನ್ನು ಪ್ರಯತ್ನಿಸಿದ್ದೇನೆ. ನಮ್ಮ ಆಧುನಿಕಪೂರ್ವ ಜನಪ್ರಿಯ ರಂಗಪ್ರಕಾರಗಳು ‘ಆಟಗಳೇ ಅಲ್ಲವೆ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: