ಸದಾರಮೆಯ ಮೋಡಿ: ನೀವೂ ನೋಡಿ

-ರುಕ್ಮಿಣಿಮಾಲ

ಮಾಲಾ ಲಹರಿ

ರಂಗಾಯಣದಲ್ಲಿ ನಡೆದ ನಾಟಕ ಸದಾರಮೆ ನೋಡಲು ಹೋಗಿದ್ದೆವು. ಅದುವರೆಗೆ ೬ ಬಾರಿ ಈ ನಾಟಕ ಪ್ರದರ್ಶನ ಕಂಡಿದೆಯಂತೆ.  ಆದರೂಇನ್ನಷ್ಟು ದಿನ ಅಭಿನಯಿಸಿ ಎಂಬ ಪ್ರೀತಿಪೂರ್ವ ಒತ್ತಡ ಜನರಿಂದ ಬರುತ್ತಲೇ ಇದೆಯಂತೆ. ಜನವರಿ ೧೪ರಂದು ರಂಗಾಯಣಕ್ಕೆ ೨೩ ವರ್ಷದ ಸಂಭ್ರಮಾಚರಣೆ. ರಂಗಾಯಣ ಕಂಪನಿ ನಾಟಕದೊಂದಿಗೆ ಹೊಸ ಅಲೆ ಸೃಷ್ಟಿಸಿದೆ. ಬೆಳ್ಳವೆ ನರಹರಿ ಶಾಸ್ತ್ರಿ ರಚಿಸಿರುವ ಗುಬ್ಬಿ ಕಂಪನಿಯ ಪ್ರಸಿದ್ಧ ನಾಟಕ ಸದಾರಮೆ. ಇದನ್ನು ೧೫ ಮಂದಿ ರಂಗಾಯಣ ಕಲಾವಿದರು ಅಭಿನಯಿಸಿ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾದರು.

ಇಲ್ಲಿಯ ಹಾಡುಗಳನ್ನು ಆಯಾಯ ಪಾತ್ರಧಾರಿಗಳೇ ಗುಬ್ಬಿ ಕಂಪನಿಯ ಗುರು ವೈ.ಎಂ. ಪುಟ್ಟಣ್ಣಯ್ಯನವರ ಹಾರ್ಮೋನಿಯಂ, ಹಾಗೂ ಪಕ್ಕಾವಾದ್ಯದವರ ಸಹಕಾರದೊಂದಿಗೆ ಸುಶ್ರಾವ್ಯವಾಗಿ ಹಾಡಿ ಮೋಡಿ ಮಾಡಿದರು. ಕಟ್ಟಿಮನಿ ಒಳ್ಳೆ ಸಮಯ ಒಳ್ಳೆ ಸಮಯ ಕಳ್ಳತನ ಮಾಡಲಿದು ಒಳ್ಳೆ ಸಮಯವು ಎಂದು ಹಾಡುತ್ತ ಬಂದಾಗ ಅವರೊಂದಿಗೆ ಪ್ರೇಕ್ಷಕರೂ ಕುಳಿತಲ್ಲೇ ಚಪ್ಪಾಳೆ ತಟ್ಟುತ್ತ ಸಾಥ್ ನೀಡಿದರು.

ಈ ನಾಟಕಕ್ಕೆಂದೇ ಪ್ರತ್ಯೇಕವಾಗಿ ೪ ಲಕ್ಷ ರೂಪಾಯಿ ವೆಚ್ಚದಲ್ಲಿ ಕಂಪನಿ ನಾಟಕದ ಇಲಕಲ್ ರಂಗಪರದೆಗಳನ್ನು ರಚಿಸಿ ದ್ದಾರೆ. ನಾಟಕ ನೋಡಲು ಸಾಲುದ್ದದ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆದುಕೊಳ್ಳುತ್ತಿದ್ದಾರೆ. ೨೦೦ ಮಂದಿ ಮಾತ್ರ ಕೂರುವ ಮಂದಿರವದು. ಅದರೂ ಕೂಡ ಕೆಲವು ಹೆಚ್ಚುವರಿ ಕುರ್ಚಿ ಹಾಕುತ್ತಿದ್ದಾರೆ. ೧೦೦ ಟಿಕೆಟನ್ನು ಮುಂಗಡ ಕೊಡುತ್ತಿದ್ದಾರೆ. ರೂ.೩೦ ದರ.

ನಾಟಕದ ಪ್ರಾರಂಭದಲ್ಲಿ ೫ ನಿಮಿಷ ಹಾರ್ಮೋನಿಯಂನೊಂದಿಗೆ ರಂಗು ರಂಗಿನ ಬೆಳಕಿನ ಕಣ್ಣುಮುಚ್ಚಾಲೆ ಮಾತ್ರ ಕಣ್ಣಿಗೆ ಬಹಳ ಕಿರಿಕಿರಿ ಮಾಡಿದ್ದು ಬಿಟ್ಟರೆ ಮತ್ತೆಲ್ಲ ಬಹಳ ಚೆನ್ನಾಗಿತ್ತು ನಾಟಕ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: