ಸೈಕಲ್ ಪೆಡಲ್ ಏಟು ಮತ್ತು ನಾನು

ಗೋವಿಂದರಾಜ್

ಸುಮ್ಮನೆ

“ಓದ್ಕೋ ಹೋಗಪ್ಪ. ಮಾವ ಬಂದ್ರೆ ಹೊಡಿತಾನೆ. ನೀನು ಅಳ್ತಿಯ.ನಂಗೆ ನೋಡಕ್ಕಾಗಲ್ಲ. ತಡ್ಕಲಕ್ ಬಂದ್ರೆ ನಂಗು ಬಯ್ತಾನೆ. ಅದಕ್ಕೆ ಈ ಉರಿಗಾಳು ತಿನ್ಕೊಂಡು ಓದ್ಕೋ..ಜಾಣ ನನ್ನ ಮಗ…” ಹಾಗಂತ ನನ್ನ ಅಜ್ಜಿ ಎಂಬ ಅಮ್ಮ ಒಂದು ಮುಸ್ಸಂಜೆ ಹೇಳುತ್ತಿದ್ದರೆ ನನಗೆ ಕೇಳುವ ವಯಸ್ಸಾಗಲಿ ಮನಸ್ಸಾಗಲಿ ಇರಲಿಲ್ಲ. ಆಗಿನ್ನೂ ಚಿಕ್ಕವನು. ಶಿಶುವಿಹಾರಕ್ಕೆ ಸೇರಿಸುವ ವಯಸ್ಸು ಆಗಿರಲಿಲ್ಲ. ಅದಕ್ಕೆ ಮೈಸೂರು ಎಂಬ ಅರಮನೆಗಳ ಊರಿನಲ್ಲಿ ಪಿಯುಸಿ ಓದಿಕೊಂಡು ಪ್ರತಿದಿನ ಮನೆಯಿಂದ ತಂಗಳು ತಿಂದು ಫೈರ್ ಅಂಡ್ ಲವ್ಲೀ ಸ್ನೌ ಹಾಕೊಂಡು ಓಡಾಡುತಿದ್ಧ ಮಾವ ನನಗೆ ಮನೆಯ ಮೇಷ್ಟ್ರು.

ಮಾವ ಎಂದರೆ ನನ್ನನ್ನೂ ಸೇರಿದಂತೆ ನನ್ನ ಮನೆಯ ಹಿರಿಯರು, ಕಿರಿಯರು ಅಲ್ಲದೆ ನನ್ನ ಹತ್ತಿರದ ಸಂಬಂದಿಕರಿಗೆಲ್ಲ ಎಲ್ಲಿಲ್ಲದ ಭಯ. ತಪ್ಪು ಎಂದು ತಿಳಿದಾಕ್ಷಣ ಮುಖ ಮೂತಿ ನೋಡದೆ ಚೆನ್ನಾಗಿ ಬಯ್ದು ಮಾನ ಹರಾಜು ಹಾಕುತಿದ್ದ. ಎಲ್ಲರು ಮಾವನ ಮಾತನ್ನು ಒಪ್ಪುಥ್ಥಿದ್ದುದಕ್ಕೆ ಕಾರಣವಿತ್ತು. ಮಾವ ಎಸ್ಸೆಸೆಲ್ಸಿ ಪಾಸಾಗಿಯೂ ದೌಲತ್ತು ಇರಲಿಲ್ಲ. ಜತೆಗೆ ಹೆಣ್ಣು ಮಕ್ಕಳನ್ನು ಕಣ್ಣೆತ್ತಿ ಕೂಡ ನೋಡುವ ಜಾಯಮಾನದವನಾಗಿರಲಿಲ್ಲ. ಅದರೊಂದಿಗೆ ಓದಿನಲ್ಲಿ ಕೂಡ ಹಿಂದೆ ಇರಲಿಲ್ಲ. ಮಧ್ಯಹ್ನ ಕಾಲೇಜು ಮುಗಿಸಿಕೊಂಡು ಬಂದವನೇ ತಂಗಳು ಮುದ್ದೆ ತಿಂದು ಸೂಳೆ ಮಂಟಿ ಹೊಲದ ಬೇವಿನ ಅಥವಾ ಹೊಂಗೆ ಮರದ ನೆರಳಲ್ಲಿ ಪವಡಿಸಿ ಪುಸ್ತಕ ತೆರೆದನೆಂದರೆ ಭಗವಂತ ಬಂದು ಎಬ್ಬಿಸಿದರು ಮುಸ್ಸಂಜೆ ಮುಂಚೆ ಪುಸ್ತಕ ಮಡಚುತಿರಲಿಲ್ಲ. ಹೆಂಗಸರೆಂದರೆ ಮೂರು ದೂರ. ಹೆಂಗಸರಿಂದ ದೂರ ಇರುವುದು ಓದುವವನ ಬಹುಮುಖ್ಯ ಲಕ್ಷಣ ಎಂಬುದು ಅಲಿಖಿತ ನಿಯಮ ನನ್ನ ಮನೆಯಲ್ಲಿ. ಹಾಗಾಗಿ ಮಾವನಿಗೆ ಅಲ್ಲಿ ಬಹು ಮುಖ್ಯ ಸ್ಥಾನ ಇತ್ತು.

ಹಾಗಾಗಿ ಮಾವ, ಊರಿನ ನೆರೆಹೊರೆಯ ಅಜ್ಜಿಯನ್ದಿರಿಗೆಲ್ಲ ಅಕ್ಕರೆಮಗ. ಅವನಿಗೆ ಅಪ್ಪ ಹುಟ್ಟುವ ಮುಂಚೆ ತೀರಿ ಹೋಗಿದ್ದರಿಂದ ಎಲ್ಲರ ಮನೆಮಗನು ಆಗಿದ್ದ. ದೊಡ್ಡ ಕೆಲಸಕ್ಕೆ ಸೇರಿ ಅಮ್ಮನ (ಅಜ್ಜಿಯನ್ನು ನಮ್ಮೂರ ಕಡೆ ಅಮ್ಮ ಅಂತಾಳೆ ಕರೆವುದು) ಹೆಸರನ್ನು ಮುಗಿಲೆಥ್ಥರಕ್ಕೆ ಏರಿಸಬೇಕೆಂಬ ಮಹದಾಸೆ. ತನ್ನ ವಯಸ್ಸಿನ ಹುಡುಗರೆಲ್ಲ ಗೋಲಿ ಗೆಜ್ಜಗ ಆಡುತ್ತ ಮೈ ಮರೆತಿರುವಾಗ ಮಾವ ಮಾತ್ರ ಪುಸ್ತಕ ಹಿಡಿದುಕೊಂಡು ಓದುತ್ತ ಕುಳಿತು ಬಿಡುತಿದ್ದ. ಅದಕ್ಕೆ ಊರಿನ ದೊಡ್ಡವರಿಂದ ಹಿಡಿದು ಸಣ್ಣ ಹಯ್ಕಳ ತನಕ ಮರ್ಯಾದೆ ಕೊಡುತ್ತಿದ್ದರು. ಮಾವ ಅದೇಕೋ ಉರು ಉಧ್ಧಾರ ಮಾಡುವ ಕೆಲಸಕ್ಕೆ ಅನ್ಧೆ ಕಿ ಹಾಕುತಿದ್ದ. ಸಿಕ್ಕವರಿಗೆಲ್ಲ “ಮಕ್ಕಳನ್ನ ಸ್ಕೂಲಿಗೆ ಸೇರಿಸಿ” ಅಂತ ಬಾಷಣ ಬಿಗಿಯುತ್ತಿದ್ದ. ಅದನ್ನು ತುಂಬ ಜನ ಅಕ್ಷರ ಸಹ ಪಾಲಿಸಿದ್ದರು. ಇಂಥ ಮಾವ ನನಗು ಅಕ್ಷರ ಕಲಿಸದಿದ್ದರೆ ಹೇಗೆ?

ಹಾಗಂತಲೇ, ಪ್ರತಿದಿನ ಕಾಲೇಜು ಮುಗಿಸಿ ಬಂದವನೇ ಉಂಡು ತಿಂದು ಓದಿಕೊಂಡು ಬಂದು ಮುಸ್ಸಂಜೆಗೆ ನನ್ನ ತಲೆಗೆ ಕೈ ಮಡಗುತಿದ್ದ. ನನಗೋ ಓದು ಎಂದರೆ ಅಲರ್ಜಿ. ಬೇಕಂತಲೇ ತೂಕಡಿಸಿ ಬಿಡುತ್ಹಿದ್ದೆ. ಆದರೆ ಮಾವ ಮಾತ್ರ ಥೇಟು ಭಗೀರಥನ ಹಾಗೆ ಯತ್ನ ಮಾಡುತಿದ್ದ. ಅಲ್ಲಿ ತನಕ ಕಲಿಸುವಿಕೆ ತುಸು ನಿಧಾನವು ಸೌಮ್ಯವೂ ಆಗಿತ್ತು. ಈ ನಡುವೆ ನನಗೆ ನಗುವ ಖಾಯಿಲೆ ಬೇರೆ! ಸ್ಲೇಟು ಹಿಡಿದುಕೊಂಡು ಕಿಸಿಕಿಸಿ ನಗಲು ಆರಂಭಿಸುಥಿದ್ಧೆ. ಮಾವನಿಗೆ ನಗುವುದು ಎಂದರೆ ಪಿತ್ತ ನೆತ್ತಿ ಗೆರಿದಂತೆ ಅರ್ಥ. ಮನೆಯಲ್ಲಿ ನಗು ನಿಷಿಧ್ಧ. ಆದರೆ ನನ್ನ ನಗುವನ್ನು ಮಾತ್ರ ಅಲ್ಲೀ ತನಕ ಸಹಿಸಿಕೊಂಡೆ ಬಂದಿದ್ದ. ಅವತ್ತು ಮಾತ್ರ ಅದೇನಾಯಿತೋ ಏನೋ ನಾನು ಸ್ಲೇಟು ಹಿಡಿದು ಅ ಆ ಇ ಈ ಅಂತ ಬಳಪ ಹಿಡಿದು ತಿದ್ದುತ್ತಾ ಹಿ ಹಿ ಹಿ ಅಂತ ನಗು ಹೊರ ಹಾಕಿದ್ದೆ ತಡ…ಮಾವನ ಸಿಟ್ಟು ಅದೆಲ್ಲಿತ್ಹೋ…ಪಕ್ಕದಲ್ಲೇ ಬಿದ್ದಿದ್ದ ಬಯ್ಸಿಕಲ್ ಪೆಡಲ್ ನಲ್ಲಿ ಪಟ್ಟನೆ ಹಣೆಗೆ ಭಾರಿಸಿಬಿಟ್ಟ. ಚಿಲ್ಳಂಥ ಚೀರಿದ್ದೆ ಗೊತ್ತು ಏನಾಯಿತೋ ಎಂತೋ ಗೊತ್ತಾಗಲೇ ಇಲ್ಲ. ಹಣೆ ಬುರ ಬುರ ಅಂತ ಉದಿಕೊಳ್ಳ ತೊಡಗಿತು. ಅಮ್ಮ ವಲೆ ಮುಂದೆ ಕುತ್ಹಲ್ಲಿಂದ ಎದ್ದು ಒದ್ದೋಡಿ ಬಂದು “ಛೆ ಅನ್ಯಾಯಕಾರ. ಮಕ್ಳು ಚಿಕ್ಕವು ಅಂತಲೂ ನೋಡಲ್ಲ. ಅದ್ಯಾವ ಸೀಮೆ ಓದಿದಿಯೋ. ಹಂಗ ಹೊಡ್ಯಧು?. ನೀ ಏನು ಮನ್ಸನೋ ಮರವೋ ” ಅಂತ ಬಯ್ಯುತ್ತ ನನ್ನ ಸಮಾಧಾನ ಪಡಿಸತೊದಗಿದಳು. ಅವತ್ತೆ ಕೊನೆ ಮಾವ ನನಗೆ ಹೊಡೆಯಲಿಲ್ಲ. ಏಕೆಂದರೆ: ಕೆಲವೇ ದಿನಗಳಲ್ಲಿ ಅಚ್ಚರಿ ಎಂಬಂತೆ ನಾನು ಸಂಪೂರ್ಣ ಓದುವುದನ್ನೇ ಕಲಿತು ಬಿಟ್ಟಿದ್ದೆ! ಅದು ನನಗೆ ಇವತ್ತಿಗು ಪವಾಡವೇ. ಹಾಗಂತ ಈಗಲೂ ಮನೆಯವರು ಆಗಾಗ ರೆಗಿಸುಥ್ಥಲೇ ಇರುತ್ತಾರೆ

 

1 ಟಿಪ್ಪಣಿ (+add yours?)

  1. savitri
    ಜನ 29, 2011 @ 17:23:07

    ಲೇಖನ ಬಹಳ ಚೆನ್ನಾಗಿದೆ. ಓದುತ್ತಿದ್ದಂತೆ ನನಗೂ ಕಿಸಿ ಕಿಸಿ ನಗುವಿನ ದಿನಗಳು ನೆನಪಾದವು.

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: