ಯಾರ್ಯಾರ 4 ಫಾಥೆರ್ಸ್ ಏನೇನಾಗಿದ್ರು?

 

ಸೂತ್ರಧಾರ ರಾಮಯ್ಯ

ಆಕಾಶವಾಣಿ: ಸಂತೋಷ್ ಕುಮಾರ್ ಸದಾ ನಗುತ್ತಿರುತ್ತಾನೆ. ಮುಖ ಗಂಟು ಹಾಕಿಕೊಂಡ ದಿನವೇ ಇಲ್ಲಾ?

ಚಿತ್ರಗುಪ್ತ : ಅವನ ಹಿಂದಿನ ನಾಲ್ಕು ಜನ ರೇಷನ್, ಐ ಮೀನ್ ಫೋರ್ ಫಾದರ್ಸ್ ನಕ್ಕೇಇರಲಿಲ್ಲ! ಅಂದ ಹಾಗೇ ಅವರೆಲ್ಲ ಹರಳೆಣ್ಣೆ ವ್ಯಾಪಾರ ಮಾಡ್ತಿದ್ರಂತೆ.

…………

ಆಕಾಶವಾಣಿ: ಲಂಬು ರಂಗನ ಬಳಿ ಪ್ರಶಸ್ತಿ ಪಲಕಗಳ , ಬಿರುದು ಬಾವಲಿ ಬಿಲ್ಲೆಗಳ, ಮೊಮೆಂತೊಗಳ, ಪಾರಿತೋಷಕಗಳ ಮಳಿಗೆಯೇ ಇದೆಯಲ್ಲಾ?

ಚಿತ್ರಗುಪ್ತ : ಅವನ ಫೋರ್ ಫಾದರ್ಸ್ ರಾಜ್ಯದ ಅಗಲಕ್ಕೂ ಉದ್ದಾಮ ಸಾಹಿತಿ-ಕಲಾವಿದರಾಗಿದ್ದರಂತೆ. ರಾಜಕೀಯ ವಲಯದಲ್ಲೂ ಪ್ರಭಾವಿಗಳಂತೆ. ಸದರಿ ಪ್ರಭಾವ ವಶೀಲಿ ಭಾಜಿಗಳಿಂದ ಬಂಡಿಗಟ್ಟಲೆ ಬಿರುದು ಬಾವಲಿಗಳ್ನ ಗಿಟ್ಟಿಸಿ ಕೊಂಡರಂತೆ. ಅದ್ಸರಿ, ಪಿತ್ರಾರ್ಜಿತವಾಗಿ ರಂಗಣ್ಣ ಅವುಗಳ್ನೆಲ್ಲ ಪಡೆದು ಅದರ ಮಳಿಗೆ ಇಟ್ಟುಕೊಂಡರೆ ನಿಮಗ್ಯಾಕ್ ಹೊಟ್ಟೆ ಉರಿ? ಬೇಕಾದ್ರೆ ಪ್ರಶಸ್ತಿಗಳಿಗೆ ನೀವು ಟ್ರೈ ಮಾಡಿ, ಅದುಬಿಟ್ಟು ಸುಮ್ಮನೇ…? (ಕೆರಳಿದ ಗುಪ್ತ)

ಆಕಾಶವಾಣಿ: ಮೂರು ಹೊತ್ತು ಬಾರ್ ಗಳಲ್ಲಿ ಬೀರ್ ಕೊಂಡು, ಬ್ರಾನ್ದಿಯಾ ತಕೋ ಅಂತ, ಮನೆಯ ಚಿಂತೆಗೆ ಎಳ್ಳು ನೀರು ಬಿಟ್ಟು ಗಡನ್ಗಿನಲ್ಲೇ ಬಿದ್ದಿರ್ತಾನಲ್ರೀ ಆ ಜಯತೀರ್ಥ?

ಚಿತ್ರಗುಪ್ತ : ಅವನ ಫೋರ್ಫಾದರ್ಸು ‘ಧರ್ಮ ಭೀರು’ಗಳಾಗಿದ್ದು ಸದಾ ‘ಆ’ ಪರಮಾತ್ಮನ ಧ್ಯಾನದಲ್ಲೇ ಇದ್ರನ್ತಲ್ಲಾ ; ಹಾಗಾಗಿ

ಇವನೂ’ಈ’ ಪರಮಾತ್ಮನ ಧ್ಯಾನದಲ್ಲೇ ಮುಳುಗಿ ಹೋಗಿರ್ತಾನೆ ಅಷ್ಟೇ.

ಆಕಾಶವಾಣಿ: ಆ ವರಾಹಮೂರ್ತಿ ಎಂಥಾ ನಯವನ್ಚಕನಯ್ಯಾ? ಅವನು ಫ್ರಾಡ್ ಎಸಗದ ಕ್ಷೇತ್ರವೇ ಇಲ್ಲಾ?

ಚಿತ್ರಗುಪ್ತ : ಮೂರ್ತಿಯ ಫೋರ್ ಫಾದರ್ಸ್ ಸಹ ಅಪಾರ ಕೀರ್ತಿವನ್ತರೆ. ಫಾರ್ ‘ಮೋಸ’ ದ್ವೀಪದಿಂದ ಹೊಲಸೆಬಂದು…,ಕ್ಷಮಿಸಬೇಕು, ವಲಸೆ ಬಂದು ‘ಕನ್ನಿಂಗ್’ ಹ್ಯಾಮ್ ರಸ್ತೆಯಲ್ಲೇ ವಾಸವಾಗಿದ್ರಂತೆ. ವರಾಹಮುರ್ತಿ ಹುಟ್ಟಿದ್ದೇ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಂತೆ.

………………..

ಆಕಾಶವಾಣಿ: ರಾಮಣ್ಣ ನವರು ಪ್ರತಿ ತಿಂಗಳೂ ತಪ್ಪದೆ ಸತ್ಯನಾರಾಯಣನ ಪೂಜೆ ಮಾಡ್ತಾರಂತೆ: ಸತ್ಯ ನಾರಾಯಣನ ಪೂಜೆ ಅಲ್ಲದೆ ಬೇರಾವ ದೇವರ ಪೂಜೇನು ಮಾಡುವುದಿಲ್ಲವಂತೆ?

ಚಿತ್ರಗುಪ್ತ: ಯಾಕೆ, ಕಾಣೋದಿಲ್ ವೇನು ನಿನಗೆ? ಅವರ ಮನೆ ಗೋಡೆಗಳಿಗೆ ನೇತು ಹಾಕಿರೋ ಫೋಟೋಗಳೇ ಹೇಳುತ್ತವಲ್ಲ: ರಾಮಣ್ಣನದು ಲಾಯರ್ಗಳ ವಂಶ ಅಂತಾ?

…………………….

ಆಕಾಶವಾಣಿ: ಎಂಥಾ ಸಂದರ್ಭ ಬಂದರೂ, ಬಾಯಿ ಬಿಟ್ಟು ಒಂದು ಮಾತನ್ನೂ ಆಡೋದಿಲ್ಲ ಯಾಕೆ ಆ ಕೈಲಾಸ್ ಕುಮಾರ್?

ಚಿತ್ರಗುಪ್ತ : ಬಾಯಿ ಬಿಟ್ಟು ಮಾತಾಡೋದಿರ್ಲಿ; ಕೈಲಾಸನ ಬಲಗೈ ಎಡ ಕೈಗಿಂತ ಉದ್ದವಾಗಿರೋದನ್ನ ಗಮನಿಸಿದ್ದೀಯಾ?

ಅವನ ಅಪ್ಪ,ತಾತ ಮುತ್ತಾತಂದ್ರೆಲ್ಲ ಎಂ.ಪಿ ಗಳಾಗಿಲ್ದ್ರಂತೆ. ಆದರೂ, ಲೋಕಸಭೆಯಲ್ಲಿ ಒಂದೂ ಮಾತನಾಡದ ‘ರೆಕಾರ್ಡ್’ ಇವರ ಹೆಸರಲ್ಲೇ ಇದೆಯಂತೆ! ಸದನದಲ್ಲಿ ತುಟಿ ಹೊಲಿದ ಮೂಕ ದನಗಳನ್ತಲೇ ಕರಿತಿದ್ರಂತೆ ಜನಾ ಇವರನ್ನಾ? ಏನಿದ್ರು, ವೋಟಿಂಗ್ಗೆ

ಅಂತ ಬಿಲ್ಲುಗಳ ಮಂಡನೆಯಾದಾಗಲೆಲ್ಲಾ ಕೈ ಎತ್ತಿ ಕೈ ಎತ್ತಿ ‘ ಲಾ ಆಫ್ ಯೂಸ್ ಅಂಡ್ ಡಿಸ್ ಯೂಸ್ ‘ ಪ್ರಕಾರ, ಬಾಯಿ ಪುಟ್ಟದಾಗಿ

ಬಲಗೈ ಮಾತ್ರ ಉದ್ದವಾಗಿರೋದು ಅನುವಂಶಕತೆಯಂತೆ! ಇತಿ ಕೈಲಾಸ್ ಕಥಿ.

end ಗುಟುಗು

‘ಬ್ರೆಡ್ ‘ ಸಂಪಾದನೆಗಷ್ಟೇ ಈ ಬದುಕು ಸೀಮಿತ ಅನ್ನುವುದಾದರೆ, ಮನುಷ್ಯ ಅನ್ನಿಸಿಕೊಂಡು ಅಷ್ಟು ಕಾಲ ಯಾಕೆ ಬದುಕಿರ

bakery

1 ಟಿಪ್ಪಣಿ (+add yours?)

  1. snkelkar
    ಜನ 24, 2011 @ 09:34:34

    Sootradhaara Ramayyanavare,

    Badukina PhiLOSSophy ishtene!!

    Tumba Chennagide 4FATHERSAYANA.

    – Sunil Kelkar

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: