ರಹಮತ್ ಜೊತೆಗಿನ ಸಂವಾದ ಹೀಗಿತ್ತು..

ರಹಮತ್ ತರೀಕೆರೆ ಅಭಿನಂದನಾ ಕಾರ್ಯಕ್ರಮ ಹಾವೇರಿಯಲ್ಲಿ ಜರುಗಿತು. ಕನ್ನಡ ನೆಟ್ ಕಂಡಂತೆ ಕಾರ್ಯಕ್ರಮ ಹೀಗಿತ್ತು.

ಫೋಟೋಗಳನ್ನು ದೊಡ್ಡ ಸೈಜ್ ನಲ್ಲಿ ನೋಡಲು ಫೋಟೋದ ಮೇಲೆ ಕ್ಲಿಕ್ ಮಾಡಿ

ಜನವರಿ ೧೫, ೧೬ ರಂದು ಹಾವೇರಿಯ ಗುರುಭವನದಲ್ಲಿ ಎರಡು ದಿನಗಳ ಕಾಲ ರಹಮತ್ ತರೀಕೆರೆ ಅವರ ಜತೆ ಸಂವಾದ ಮತ್ತು ಅವರ ವಿಚಾರ ಸಂಕಿರಣ ಅರ್ಥಪೂರ್ಣವಾಗಿ ನಡೆಯಿತು. ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಸಾಹಿತ್ಯಾಸಕ್ತರು ರಹಮತ್ ಮೇಷ್ಟ್ರ ಮೇಲಿನ ಪ್ರೀತಿಯಿಂದಾಗಿ ಬಂದಿದ್ದರು. ಪೀರ್ ಭಾಷಾ ಕಾರ್ಯಕ್ರಮದ ಆರಂಭಕ್ಕೆ ರಹಮತ್ ಅವರನ್ನು ಆರಾಧಿಸಬೇಕಿಲ್ಲ, ಅವರೊಂದಿಗೆ ನಮ್ಮ ಭಿನ್ನಮತಗಳನ್ನೂ ಕೂಡ ಗಂಭೀರವಾಗಿಯೇ ಎತ್ತಬೇಕಿದೆ ಎಂದರು. ಅಂತೆಯೇ ಇಡೀ ಕಾರ್ಯಕ್ರಮ ಒಂದು ಮೆಚ್ಚುಗೆಯ ಹಳಹಳಿಕೆಯಾಗದೆ, ತರೀಕೆರೆ ಅವರ ನೆಪದಲ್ಲಿ ವರ್ತಮಾನದ ಕರ್ನಾಟಕದ ಚರ್ಚೆಯೇ ಆದದ್ದು ಈ ಕಾರ್ಯಕ್ರಮದ ಯಶಸ್ಸು.

ಡಾ. ಎಂ.ಎಂ ಕಲಬುರ್ಗಿಯವರು ವಿದ್ವತ್ತು ಮತ್ತು ಶ್ರದ್ಧೆ ಎರಡೂ ಒಂದೇ ಕಡೆ ಮೇಳವಿಸಿದೆ ಎಂದರೆ ಟಿ.ಆರ್.ಚಂದ್ರಶೇಖರ್ ಅವರು ರಹಮತ್ ರ ಜೀವನ ಪ್ರೀತಿಯನ್ನು ತುಂಬಾ ಆಪ್ತವಾಗಿ ಕಟ್ಟಿಕೊಟ್ಟರು. ಅಂತೆಯೇ ಜಿ. ರಾಮಕೃಷ್ಣ ಅವರು ಸದ್ಯದ ಕರ್ನಾಟಕದಲ್ಲಿ ರಹಮತ್ ಮಾದರಿಯ ಅಧ್ಯಯನ ಕ್ರಮದ ಅಗತ್ಯವಿದೆ ಎಂದರು. ಡೊಮನಿಕ್, ಆಶಾದೇವಿ, ಚಂದ್ರಪ್ಪ ಸೊಬಟಿ, ವೀರೇಶ ಬಡಿಗೇರ, ನಟರಾಜ ಬೂದಾಳ, ಸರ್ಜಾಶಂಕರ, ತಾರಿಣಿ, ಭಾರತೀದೇವಿ, ಶ್ರೀಧರ ಬಳಗಾರ,ಕೆ.ಪಿ.ಸುರೇಶ, ರಂಗನಾಥ, ಮುಜಾಫರ್ ಅಸ್ಸಾದಿ, ರಾಜೇಂದ್ರ ಚನ್ನಿ ಹೀಗೆ ಹಿರಿಯರು,ಹೊಸಬರು ರಹಮತ್ ಅವರನ್ನು ಬೇರೆ ಬೇರೆ ಮಗ್ಗಲುಗಳಿಂದ ನೋಡಿ ಅವರ ಚಿಂತನೆಯನ್ನು ವಿಸ್ತರಿಸುವಂತೆಯೂ, ಮತ್ತು ಚಿಂತನೆಗೆ ಹೊಸ ಹೊಳಪನ್ನು ನೀಡುವಂತೆಯೂ ಮಾತನಾಡಿದರು.

ಕನ್ನಡ ನೆಟ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: