ಬೌದ್ಧಿಕ ದಿವಾಳಿತನವನ್ನು ಬಿಂಬಿಸುವ ‘ಅವಮಾನ’ದ ವ್ಯಾಖ್ಯಾನ


ಮಂಜುನಾಥ ಲತಾ

ಮಾನ್ಯರೆ,

ಪ್ರಜಾವಾಣಿಯ ಜನವರಿ 16, 2011ರ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಕೆ.ವಿ. ಅಕ್ಷರ ಅವರಹರಕೆ ಹರಾಜು: ಯಾವುದು ಸಹಜ? ಯಾವುದು ಅವಮಾನ?’ ಲೇಖನಕ್ಕೆ ನನ್ನದೊಂದು ಪ್ರತಿಕ್ರಿಯೆ.

ಅಕ್ಷರ ಅವರ ವಿಚಾರಲಹರಿ ನಮ್ಮ ಸಮಸಮಾಜದ ಕನಸು ಕಾಣುವ ಮನಸ್ಸುಗಳಿಗೆ ಮಾಡಿದ ಅವಮಾನದಂತೆಯೂ ಅಕ್ಷರರಂಥವರ ಅಕ್ಷರದ ಬೌದ್ಧಿಕತೆಗೆ ಬಡಿದಿರುವ ಪೂರ್ವಗ್ರಹದ ಬಾಧೆಯಂತೆಯೂ ಕಾಣುತ್ತಿದೆ. ತಮ್ಮ ವಿಚಾರದ ಕೊನೆಯಲ್ಲಿ ಅವರು ‘…ಇವುಗಳಲ್ಲಿ ಯಾವುದೇ ಒಂದರ ಪರವಾಗಿ ವಕಾಲತ್ತು ಮಾಡುವುದೂ ನನ್ನ ಉದ್ದೇಶವಲ್ಲ’ ಎಂದು ಹೇಳುವಲ್ಲಿಯೇ ತಾವು ಯಾವುದರ ಪರವಾಗಿದ್ದಾರೆಂಬುದನ್ನು ತೋರಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಅವರ ಲೇಖನದ ಆರಂಭದಲ್ಲೇ ಇದೆ. ಮೇಲ್ವರ್ಗದ ಜನ ತಿಂದುಂಡ ಎಂಜಲೆಲೆಯ ಮೇಲೆ ಜನರು ಉರುಳಾಡುವುದು ಅವರಿಗೆ ನಗಣ್ಯವೆನ್ನಬಹುದಾದ ಘಟನೆ. ಅವರ ಲೇಖನದ ಶೀಷರ್ಿಕೆಯೇ ಹೇಳುವಂತೆ ಅದು ಈ ಸಮಾಜದಲ್ಲಿ ನಡೆಯಬಹುದಾದ ‘ಸಹಜ’ ಕ್ರಿಯೆ. ಅವರ ಪ್ರಕಾರ ಅದು ಮನುಷ್ಯನೊಬ್ಬನಿಗೆ ಮಾಡುವ ಅವಮಾನವೇನೂ ಅಲ್ಲ; ಅಸಮಾನತೆಯನ್ನು ಮತ್ತಷ್ಟು ಉತ್ತೇಜಿಸುವ, ಪಾವಿತ್ರ್ಯ-ಅಪಾವಿತ್ರ್ಯದ ಹುಸಿಯನ್ನು ವೈಭವೀಕರಿಸುವ, ಶ್ರೇಷ್ಠ-ಕನಿಷ್ಠದ ತಾರತಮ್ಯ ಬಿತ್ತುವ, ಮೇಲು-ಕೀಳನ್ನು ಎತ್ತಿ ಹಿಡಿಯುವ ಆಚರಣೆಯಂತೆ ಅದನ್ನು ನೋಡಬೇಕಿಲ್ಲ. ಹಾಗಾಗಿ ಅವರು ಅಂತಹುದೊಂದು ಮೌಢ್ಯದ ಪರವಾಗಿದ್ದಾರೆಂದು ಹೇಳಬಹುದು.

ಚಿತ್ರ ಕೃಪೆ: ದಟ್ಸ್ ಕನ್ನಡ

ಅವಮಾನ ಎನ್ನುವುದರ ಕುರಿತೂ ಅಕ್ಷರ ಅವರು ತಮಗೆ ಗೊಂದಲವಿರುವುದಾಗಿ ಹೇಳಿಕೊಂಡಿದ್ದಾರೆ; ಇದು ತಪ್ಪೇನೂ ಅಲ್ಲ. ಯಾಕೆಂದರೆ ಅಪಮಾನವೆಂಬುದನ್ನು ಅಕ್ಷರರಂಥವರೇನೂ (ಸಾಮಾಜಿಕವಾಗಿ, ದೈಹಿಕವಾಗಿ) ಅನುಭವಿಸಿದವರಲ್ಲವಲ್ಲ! ಸ್ವತಃ ಅಪಮಾನಿತನಿಗೇ ತನಗೆ ಆಗುತ್ತಿರುವುದು ಅಪಮಾನ ಎಂದು ಗೊತ್ತಿಲ್ಲದಿರುವುದರಿಂದ ಅದು ಅವಮಾನ ಅಥವಾ ಶೋಷಣೆ ಎನ್ನಿಸಿಕೊಳ್ಳುವುದಿಲ್ಲ ಎನ್ನುವುದು ಅಕ್ಷರ ಅವರ ವಾದ. ಹಾಗಾದರೆ ಮಲ ತಿನ್ನಿಸಿಕೊಂಡ, ತಲೆಯ ಮೇಲೆ ಮಲ ಸುರಿದುಕೊಂಡ ದಲಿತರಿಗೆ, ಬೆತ್ತಲೆ ಹರಕೆ ಸಲ್ಲಿಸುವ ಹೆಣ್ಣುಮಕ್ಕಳಿಗೆ ತಾವು ಅನುಭವಿಸುತ್ತಿರುವುದು ಅವಮಾನವೆಂದು ತಿಳಿದಿಲ್ಲವಾದರೆ ಅದನ್ನು ಅಕ್ಷರ ಅವರ ಪ್ರಕಾರ ಅಪಮಾನವೆಂದು ಭಾವಿಸಕೂಡದು! ಬದಲಿಗೆ ಅದನ್ನೊಂದು ಸಹಜವಾದ ಸಾಮಾಜಿಕ ಕ್ರಿಯೆಯೆಂಬಂತೆ ನೋಡಬೇಕು; ಅಥವಾ ನಮ್ಮ ಸಮಾಜ ಇರುವುದು ಹೀಗೆಯೇ ಎಂದು ನಾವೆಲ್ಲರೂ ತಿಳಿದುಕೊಳ್ಳಬೇಕು. ನಮ್ಮ ಅನುಭವಕ್ಕೆ ಬಾರದ ಯಾವುದನ್ನೂ ನಾವು ಶೋಷಣೆ ಎಂದಾಗಲೀ, ಅತ್ಯಾಚಾರವೆಂದಾಗಲೀ ಕರೆಯಕೂಡದು ಎಂಬ ಅಕ್ಷರ ಅವರ ವಾದ ಕೇವಲ ವಿತಂಡವಾದವಾಗಿದೆ. ಹೀಗೆ ವಿತಂಡವಾದ ಹೂಡುತ್ತಾ ಹೋಗುವುದೇ ಆದರೆ, ನಾವು ಕೊಲೆಗೀಡಾಗುವ ಮನುಷ್ಯನನ್ನು, ಅತ್ಯಾಚಾರಕ್ಕೊಳಗಾಗುವ ಹೆಣ್ಣುಮಗಳೊಬ್ಬಳನ್ನು, ದಬ್ಬಾಳಿಕೆಗೊಳಗಾಗುವ ಶೋಷಿತನೊಬ್ಬನನ್ನು ಸುಲಭವಾಗಿ ‘ಬ್ರೈನ್ ವಾಷ್’ ಮಾಡಿ ‘ನಿಮ್ಮ ಮೇಲೆ ನಡೆಯುತ್ತಿರುವುದು ಕೊಲೆ, ಅತ್ಯಾಚಾರ, ದಬ್ಬಾಳಿಕೆ, ಶೋಷಣೆ ಅಲ್ಲ’ ಎಂದು ನಂಬಿಕೆ ಹುಟ್ಟಿಸುವುದು ಸುಲಭ ಎಂದಾಯಿತು!

‘ತನಗೆ ಅವಮಾನ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ತೀಮರ್ಾನಿಸುವಾತ ಸ್ವತಃ ಆ ಅವಮಾನಿತನೇ ಆಗಿರಬೇಕೇ ಹೊರತು, ಆತನ ಪರವಾಗಿ ಇನ್ನೊಬ್ಬರು ‘ಅವನಿಗೆ ಅವಮಾನವಾಗುತ್ತಿದೆ’ ಎಂದು ತೀಮರ್ಾನಿಸಲಾಗದು’ ಎಂಬ ಅಕ್ಷರ ಅವರ ಇನ್ನೊಂದು ಥಿಯರಿ ಅಪ್ರಬುದ್ಧವಾದುದು. ಹಾಗೆ ಶೋಷಣೆ-ಅವಮಾನದ ಅರಿವನ್ನು ಶೋಷಿತರು-ಅವಮಾನಿತರಲ್ಲಿ ಬಿತ್ತದೆ ಹೋಗಿದ್ದರೆ ಜಗತ್ತಿನಲ್ಲಿ ಇಷ್ಟೆಲ್ಲ ಮಾನವಂತರು ಇಷ್ಟೆಲ್ಲ ಮಾನವಪರ ಚಳುವಳಿಗಳಿಗೆ ಸಾಕ್ಷಿಗಳಾಗಲು ಸಾಧ್ಯವೇ ಆಗುತ್ತಿರಲಿಲ್ಲ; ಗಾಂಧಿ, ಅಂಬೇಡ್ಕರ್ರಂಥವರು ಅಪಮಾನಿತರ ಪರವಾದ ನಾಯಕರಾಗಿ ಉಳಿಯಲು ಸಾಧ್ಯವಾಗುತ್ತಿರಲಿಲ್ಲ. ಸ್ವತಃ ಸಂಸ್ಕೃತಿ ಚಿಂತಕರಾದ ಅಕ್ಷರ ಅಂಥವರಿಗೆ ಇದು ಗೊತ್ತಿಲ್ಲದ ಸಂಗತಿಯೇನಲ್ಲ.

ಮೇಲ್ವರ್ಗದ ಜನ ತಿಂದುಂಡ ಎಂಜಲೆಲೆಗಳ ಮೇಲೆ ಜನ ಹೊರಳಾಡುವುದು ಮೌಢ್ಯ, ಶ್ರೇಷ್ಠತೆಯನ್ನು ಪ್ರತಿಷ್ಠಾಪಿಸುವುದರ ಕುತಂತ್ರ ಎಂಬುದು 2011ರಲ್ಲಿ ಬದುಕುತ್ತಿರುವ ಅಕ್ಷರರಂಥ ‘ವಿಚಾರವಂತ’ರಿಗೆ ಅವಮಾನ ಎನ್ನಿಸಿದ್ದಕ್ಕಿಂತಲೂ ಕ್ರಿಕೆಟಿಗರ ಹರಾಜು ಪ್ರಕ್ರಿಯೆಯೇ ದೊಡ್ಡ ಅವಮಾನ ಎಂದು ಭಾವಿಸುವ ಅವರ ವೈಚಾರಿಕತೆಯೇ ಅರೆಬರೆಯಾದುದು. ಕ್ರಿಕೆಟಿಗರು ಹರಾಜಾಗುವುದು ಈ ದೇಶ ತಲುಪಿರುವ ಬೌದ್ಧಿಕ ದಿವಾಳಿತನಕ್ಕೆ ಉದಾಹರಣೆ ಎಂಬುದರಲ್ಲಿ ಎರಡು ಮಾತಿಲ್ಲ. ಕ್ರಿಕೆಟಿಗರನ್ನು ಸಮೂಹಸನ್ನಿಯ ತೆರದಿ ಆರಾಧಿಸುವ, ಸೌಂದರ್ಯ ಸ್ಪಧರ್ೆಗಳ, ರಿಯಾಲಿಟಿ ಶೋಗಳ ವಿಕೃತಿಯನ್ನು ಪೂಜಿಸುವ, ಟೀವಿ ಚಾನೆಲ್ಗಳ ಜ್ಯೋತಿಷ್ಯ-ಭವಿಷ್ಯವನ್ನು ಕುರುಡಾಗಿ ಅನುಕರಿಸುವ ಮಧ್ಯಮವರ್ಗದವರ ಅರೆತಿಳುವಳಿಕೆಯಂತೆಯೇ ಇದೂ ಕೂಡ. ಅದರ ಬಗ್ಗೆ ಮಾತನಾಡಬೇಕಾದುದು ಎಲ್ಲಾ ಪ್ರಜ್ಞಾವಂತರ ಆದ್ಯತೆ ಕೂಡ. ಆದರೆ ಎಂಜಲೆಲೆಯ ಘಟನೆಗೂ ಕ್ರಿಕೆಟಿಗರ ಹರಾಜಿಗೂ ತಮ್ಮ ವಿಚಾರವನ್ನು ತಳುಕಿ ಹಾಕಿ ನೋಡುವ ಅಕ್ಷರ ಅವರ ಚಿಂತನೆಯೇ ಅಸ್ಪಷ್ಟತೆಯಿಂದ ಕೂಡಿದೆ. ಅಥವಾ ಅವರೇ ಹೇಳುವ ಹಾಗೆ ಮನುಷ್ಯನೊಬ್ಬನಿಗೆ ಅವಮಾನವಾಗುವುದಕ್ಕಿಂತಲೂ ಕ್ರಿಕೆಟಿಗರ ಮಾನಗೇಡಿತನವೇ ಅವರಿಗೆ ದೊಡ್ಡ ಅವಮಾನವಾಗಿ ಕಂಡಿರುವುದರ ಹಿಂದೆ ಅಕ್ಷರ ಅವರ ಸಾಮಾಜಿಕ ಚಿಂತನೆಯ ಆಯ್ಕೆ ಇದೆ.

ಇದನ್ನೊಂದು ಸಂಸ್ಕೃತಿ ಚಿಂತನೆಯಂತೆ ಬಿಂಬಿಸಲು ನೋಡುವ ಅಕ್ಷರರಂಥವರ ಬೌದ್ಧಿಕವಿಲಾಸದ ಬಗ್ಗೆ ವಿಷಾದವಾಗುತ್ತಿದೆ. ಇಡೀ ಲೇಖನವನ್ನು ಓದುತ್ತಲೇ ಇದನ್ನು ಅಕ್ಷರ ಅವರು ಬರೆದರೆಂಬ ಕಾರಣಕ್ಕೆ ಸಾಪ್ತಾಹಿಕದ ಸಂಪಾದಕರು ಪ್ರಕಟಿಸಿದರೋ ಏನೋ ಅನುಮಾನ ನನಗೆ ಮೂಡಿತು; ಹಾಗಿರುವುದೇ ನಿಜವಾದಲ್ಲಿ ‘ಪ್ರಜಾವಾಣಿ’ಯನ್ನು ನನ್ನದೇ ಸೈದ್ದಾಂತಿಕ ಕಾರಣಗಳಿಗೆ ಪ್ರೀತಿಸುವ ನನ್ನಂಥವನಿಗೆ ನಿಜವಾಗಿಯೂ ವಿಷಾದವಿದೆ.

ಮಂಜುನಾಥ  ಲತಾ

8 ಟಿಪ್ಪಣಿಗಳು (+add yours?)

 1. kvtirumalesh
  ಜನ 22, 2011 @ 20:37:02

  K.V. Akshara is a well-meaning person and has been doing a good job in Heggodu, but unfortunately his comparison between Madesnaana and IPL is far-fetched and sidetracks the issue of the heinous practice of rolling over leaves in which people have eaten. Rolling over the ground may be good exercise (indeed it is!) but the temple practice is medieval and is associated with superstitious beliefs and exploitation of ignorance. Akshara probably never realized the implications of the comparison he made. He should come out and condemn the Madesnaana practice unequivocally.
  Although I am an agnost, I will not like our temples to be done away with. But there is a need to modernize them. At present they are awefully filthy! Get them cleaned, make them an iviting place where people of all faiths and beliefs can come together and worship. First of all, get them fitted with bathrooms, fans and lights! A good flooring please!
  As for the IPL thing, I don’t know much about it. But people have always gone where they get wellpaid, even in the teaching profession.
  If this is done by auction, well, there is the rub and Akshara may have a point! But this is a separate issue.
  kvtirumalesh

  ಉತ್ತರ

 2. ಸಂದೀಪ್ ಕಾಮತ್
  ಜನ 21, 2011 @ 23:28:14

  ” ದಯವಿಟ್ಟು ಕ್ಷಮಿಸಿ ಆ ಲೇಖನ ಬರೆದಿರೋದು ಅಕ್ಷರ ಅವರು ಅಲ್ಲ , ಸುಬ್ರಾಯ ಭಟ್ರು ” ಅಂತ ಒಂದು ಸ್ಪಷ್ಟೀಕರಣ ನೀಡಿ! ಆಮೇಲೆ ನೋಡಿ ಪ್ರತಿಕ್ರಿಯೆಗಳು ಬೇರೆಯದೇ ಆಗಿರುತ್ತೆ !

  ವಿ.ಸೂ ” ಸುಬ್ರಾಯ ಭಟ್ ಈ ಹೆಸರು ಕಾಲ್ಪನಿಕ ! (ಯಾಕೋ ಕಾಲ್ಪನಿಕ ಆದ್ರೂ ’ಭಟ್ರು ’ ಬೇಡ ಇತ್ತು ಅನ್ಸುತ್ತೆ !)

  ಉತ್ತರ

 3. Vasanth
  ಜನ 21, 2011 @ 22:48:31

  The discussion on this topic is in right direction. But few who have never come across the caste atrocities are trying to focus on IPL action. But larger issue is the kind of comparison Akshara has did. Akshara’s article is full of stereotypic not the response that have been made on this article. Manjunath Latha’s and Manikanth’s views on the article is absolutely in right direction.

  ಉತ್ತರ

 4. armanikanth
  ಜನ 21, 2011 @ 19:04:05

  ಐ.ಪಿ.ಎಲ್. ಹರಾಜು ಅನ್ನೋದು ಆಟ…ಆದರೆ ಹರಕೆಯ ಹೆಸರಲ್ಲಿ ನಡೆಯುತ್ತಿರುವುದು ಅಮಾಯಕರ ಬದುಕಿನ ಮೇಲೆ ದಾಳಿ. ಆಟಕ್ಕಿಂತ ಬದುಕು ದೊಡ್ಡದು.ನೊಂದವರನ್ನು ಉಪಚರಿಸುವ,ಅವರ ಕಣ್ಣು ಒರೆಸುವ ಕಾರ್ಯ ತಿಳಿವಳಿಕೆ ಇರುವ ಎಲ್ಲರದ್ದೂ ಆಗಬೇಕು. ಇಷ್ಟು ಸಣ್ಣ ಸಂಗತಿ ಅಕ್ಷರ ಅವರಂಥ ದೊಡ್ಡ (?)ಮನುಷ್ಯರಿಗೆ ಯಾಕೆ ಅರ್ಥ ಆಗಲಿಲ್ಲ?
  ಮಣಿಕಾಂತ್.

  ಉತ್ತರ

 5. Ravi
  ಜನ 21, 2011 @ 18:19:30

  ಬೌದ್ಧಿಕ ದಿವಾಳಿತನ ನಿಮ್ಮಲ್ಲಿದೆ ಮಂಜುನಾಥರೆ. ಬ್ರೈನ್ ವಾಷ್ ಬಗ್ಗೆ ಅಕ್ಷರ ತಮ್ಮ ಲೇಖನದಲ್ಲೇ ರೂಪಕದ ಮೂಲಕ ವಿವರಿಸಿದ್ದಾರೆ. ಆದುದರಿಂದಲೇ ಮಾನವರ ಹರಾಜು ನಿಮಗೆ ದೊಡ್ಡ ಅವಮಾನದಂತೆ ಕಾಣುವುದಿಲ್ಲ. ಕಾಣಬೇಕೆಂದೇನೂ ಇಲ್ಲ. ಅವಮಾನವೆನ್ನುವುದು ಅನುಭವಿಸುವ ಮನಸ್ಸಿನಲ್ಲಿದೆ. ನೀವು ಪಟ್ಟಿ ಮಾಡಿದ ಶೋಷಣೆಗಳು ಸ್ವಯಂ-ಪ್ರೇರಿತ ಅಲ್ಲ. ಅದಕ್ಕಾಗಿಯೇ ಶೋಷಣೆ ಎಂದಿದ್ದೇನೆ. ಸ್ವಯಂ-ಪ್ರೇರಿತವಾಗಿದ್ದರೆ ಹಾಗೂ ಅವಮಾನ ಎನ್ನುವುದು ಕರ್ತೃವಿನ ಮನಸ್ಸಿನಲ್ಲಿಲ್ಲದಿದ್ದರೆ ಅದು ಖಂಡಿತವಾಗಿವೂ ಅವಮಾನವೆನಿಸಿಕೊಳ್ಳುವುದಿಲ್ಲ. ಅವಧಿಯಲ್ಲಿ ಬರುತ್ತಿರುವ ಪ್ರತಿಕ್ರಿಯೆಗಳನ್ನು ಗಮನಿಸುತ್ತಿದ್ದೇನೆ. ಹೆಚ್ಚಿನವು ಪೂರ್ವಗ್ರಹಪೀಡಿತವಾಗಿವೆ. ಚರ್ಚೆಗಿಂತ ಮುಖ್ಯವಾಗಿ stereotyping ನಡೆಯುತ್ತಿದೆ ಈ ವೇದಿಕೆಯಲ್ಲಿ. ವಿಷಾದನೀಯ.

  ಉತ್ತರ

  • ಶ್ರೀವತ್ಸ ಜೋಶಿ
   ಜನ 21, 2011 @ 20:27:25

   Ravi, ನಿಮ್ಮ ಅಭಿಪ್ರಾಯವೇ ನನ್ನದು. ಅದಕ್ಕಾಗಿಯೇ ನಾನು ಈ ಚರ್ಚೆಯಿಂದ ಸ್ವಯಂ ನಿವೃತ್ತಿ ಘೋಷಿಸಿದ್ದೆ. ಡಾ. ಸಾಗರ್ ದೊಡ್ಡೇರಿ ಸಹ ಅದೇ ಅನಿಸಿಕೆ ವ್ಯಕ್ತಪಡಿಸಿದ್ದರು. ಅಕ್ಷರ ಅವರ ಲೇಖನದ ಮೂಲವಸ್ತುವನ್ನು ನಿರ್ಲಕ್ಷಿಸಿ ಅವರು ಪ್ರಸ್ತಾಪಿಸಿದ ಉದಾಹರಣೆಗಳ ಬಗ್ಗೆಯೇ ಇಲ್ಲಿ ಚರ್ಚೆ. ಅದೂ ನೀವೆಂದಂತೆ ಪೂರ್ವಗ್ರಹಪೀಡಿತ. ನಿನ್ನೆಯಷ್ಟೇ “ಈ ಚರ್ಚೆ ಇಲ್ಲಿಗೆ ಮುಕ್ತಾಯ” ಎಂದಿದ್ದ ಅವಧಿ ಬ್ಲಾಗ್ ಈಗ ಚರ್ಚೆಯ ಅವಧಿಯನ್ನು ಮತ್ತಷ್ಟು ಮುಂದುವರಿಸಿದೆ 🙂

   [ಚರ್ಚೆ ಆಗಬಾರದು ಎಂದಲ್ಲ, ಅಥವಾ ನನ್ನ ಮನಸ್ಸಿಗೆ ಹಿತಕರವಾಗಿಯೇ ಆಗಬೇಕು ಎಂದೂ ಅಲ್ಲ. ಈ ಚರ್ಚೆಯನ್ನು ಗಮನಿಸಿ ಇವು ನನ್ನ ಪ್ರಾಮಾಣಿಕ ಅನಿಸಿಕೆಗಳು ಅಷ್ಟೇ. ನಾನು ಮಡೆಸ್ನಾನದ ಸಮರ್ಥಕನಾಗಲೀ, ಅಕ್ಷರ ಅವರ ಹಿತಚಿಂತಕನಾಗಲೀ ಅಲ್ಲ. ನನ್ನ ವಾದವನ್ನು ಎಲ್ಲರೂ ಒಪ್ಪಬೇಕಂತಲೂ ಅಲ್ಲ. ವಸ್ತುನಿಷ್ಠವಾಗಿ ಗಮನಿಸಿದಾಗ ನನಗನಿಸಿದ್ದು ಇಷ್ಟು. ಅದನ್ನು ಇಲ್ಲಿ ಸಂತೋಷದಿಂದ ಬರೆದಿದ್ದೇನೆ. 🙂 ]

   ಉತ್ತರ

 6. harish babu
  ಜನ 21, 2011 @ 15:48:59

  Manjunatha latha,

  You are 100% right I agree with you

  ಉತ್ತರ

 7. kanam nagaraju
  ಜನ 21, 2011 @ 10:17:18

  dayavittu akshara avarannu kshamisibidi.

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: