ನೇಮಿಚಂದ್ರ ಕಾಲಂ: ಬದುಕು ಬದಲಿಸಬಹುದು

ಮಾಯಾ ಯಾರಿಗೂ ಹೇಳದೆ ಆಸ್ಪತ್ರೆಯಿಂದ ಹೊರಬಿದ್ದರು. ಬದುಕು ತನಗೆ ಎರಡೇ ತಿಂಗಳು ಉಳಿಸಿದ್ದರೆ, ಆ ಎರಡು ತಿಂಗಳನ್ನು ಆಸ್ಪತ್ರೆಯಲ್ಲಿ ಮಾಫಿìನ್‌ ಚುಚ್ಚಿಸಿಕೊಂಡು ಹೆಣವಾಗಿ ಕಳೆಯಲು ಅವರು ಇಚ್ಛಿಸಲಿಲ್ಲ. ತ‌ನ್ನ ಕೊನೆಯ ದಿನಗಳನ್ನು ರಣವೈದ್ಯವಿಲ್ಲದೆ, ಏಕಾಂತದಲ್ಲಿ ಪ್ರಾರ್ಥನೆಯಲ್ಲಿ ಕಳೆಯಲು ಬಯಸಿದರು.

ಸಾವೇ ನೀ ಬರುವುದಿದ್ದರೆ, ನಾಳೆ ಬಾ ಎಂದು ಸಾವನ್ನು 35 ವರ್ಷ ಗಳಿಂದ ಹೊರಗಟ್ಟಿರುವ ಅದ್ಭುತ ಕತೆ ಮಾಯಾ ತಿವಾರಿಯವರದು.

chitra : abhaya simha

ಮಾಯಾ ತಿವಾರಿ ದಕ್ಷಿಣ ಅಮೆರಿಕದ ಪುಟ್ಟ ದೇಶ “ಗುಯಾನಾ’ದ ಒಂದು ಹಳ್ಳಿಯಲ್ಲಿ 1952ರಲ್ಲಿ ಹುಟ್ಟಿದರು. ಅವರ ತಂದೆ ಭಾರತೀಯ ಮೂಲದ ಪಂಡಿತ್‌ ರಾಮ್‌ಪ್ರಸಾದ್‌ ತಿವಾರಿ. ಮಾಯಾ ತಮ್ಮ ಹದಿನಾರನೇ ವಯಸ್ಸಿಗೇ ಯಾದವೀ ಕಲಹದಲ್ಲಿ ಹೊತ್ತಿ ಉರಿಯುತ್ತಿದ್ದ ಗುಯಾನಾ ತೊರೆದು, ನ್ಯೂಯಾರ್ಕ್‌ ನಗರಕ್ಕೆ ವಲಸೆ ಬಂದಿದ್ದರು.

ತನ್ನ ಭಾರತೀಯ-ಗುಯಾನಿ ಹಿನ್ನೆಲೆಯ ಬಗ್ಗೆ ಅವರಿಗೆ ಅಳುಕಿತ್ತು, ಕೀಳರಿಮೆ ಕೂಡಾ ಇದ್ದಿರಬಹುದು. ಆ ತಮ್ಮ ಗುರುತನ್ನು ಹಿಂದೆ ಬಿಟ್ಟು, ಹೊಸ ದೇಶದಲ್ಲಿ ಹೊಸ ಬದುಕನ್ನು ಕಟ್ಟಲು ಹೊರಟರು.

1970ರ ದಶಕ, ಮಾಯಾ ತಿವಾರಿ “ಟಾಪ್‌ ಅಮೆರಿಕನ್‌ ಫಾÂಷನ್‌ ಡಿಸೈನರ್‌’ ಎಂದು ಗುರುತಿಸಲ್ಪಟ್ಟರು. ಲೈಫ್ ಮ್ಯಾಗಝಿನ್‌ ಮಾಯಾ ಅವರ ಕೆಲಸವನ್ನು “ಅಮೆರಿಕದ ಮೊಟ್ಟ ಮೊದಲ ಹೈ ಫಾÂಷನ್‌’ ಎಂದು ಉಲ್ಲೇಖೀಸಿತು. “ಮಾಯಾ’ ಬ್ರಾಂಡ್‌ ಹೆಸರಿನ ಆಕೆಯ ವಿಶಿಷ್ಟ ಫಾÂಷನ್‌ ಉಡುಗೆಗಳು, ಅಮೆರಿಕದ ಪ್ರತಿಯೊಂದು ಪ್ರತಿಷ್ಠಿತ ಅಂಗಡಿಗಳಲ್ಲಿ ಮಾರಾಟಕ್ಕಿದ್ದವು. 70ರ ದಶಕದುದ್ದಕ್ಕೂ, ನ್ಯೂಯಾರ್ಕಿನ ಮ್ಯಾಡಿಸನ್‌ ಅವೆನ್ಯೂನಲ್ಲಿದ್ದ ಆಕೆಯ ಗ್ರಾಂಡ್‌ ಬುಟೀಕ್‌ “ಮಾಯಾ’ ಹಾಲಿವುಡ್‌ ಪ್ರಸಿದ್ಧರಿಗೆ, ರಾಕ್‌ ಸಂಗೀತಗಾರರಿಗೆ “ಹೈ ಫಾÂಷನ್‌’ ಉಡುಪುಗಳನ್ನು ಒದಗಿಸಿದ ತಾಣವಾಗಿತ್ತು. ವೋಗ್‌, ಕಾಸೊ¾ಪೊಲಿಟನ್‌ ಎಲ್ಲದರಲ್ಲೂ ಮಾಯಾ ಕಾಣಿಸಿಕೊಂಡರು, ನ್ಯೂಯಾರ್ಕ್‌ ಪತ್ರಿಕೆಯ ಮುಖ ಪುಟವನ್ನು ಅಲಂಕರಿಸಿದರು.

ಹಣ, ಹೆಸರು, ಪ್ರಸಿದ್ಧಿಯ ತುತ್ತತುದಿಯಲ್ಲಿದ್ದ ಸಮಯ. ಹೊಳೆವ ಲಿಪ್‌ಸ್ಟಿಕ್‌, ತೊಟ್ಟ ಫಾÂಷನೆಬಲ್‌ ಬಟ್ಟೆಗಳು, ಪ್ಲಾಟ್‌ಫಾರ್ಮ್ ಶೂಗಳು- ಈ ಎಲ್ಲ ಯಶಸ್ಸಿನ ಅಮಲಿನಲ್ಲಿ ತನ್ನೊಳಗೆ ಬಿಚ್ಚಿಕೊಳ್ಳುತ್ತಿದ್ದ ಅನಾರೋಗ್ಯದ ಬೀಜಗಳನ್ನು ಗಮನಿಸಲು ಅವರಿಗೆ ಸಮಯವಿರಲಿಲ್ಲ. ಫಾÂಷನ್‌ ಜಗತ್ತಿನಲ್ಲಿ ಬಿಡುವಿಲ್ಲದ ದುಡಿಮೆ, ಬೆಳಗಿನವರೆಗೂ ಪಾರ್ಟಿಗಳು.

 

ಯಶಸ್ಸಿನ ಹೆದ್ದಾರಿಯಲ್ಲಿ ದಾಪುಗಾಲು ಇಟ್ಟು ನಡೆಯುತ್ತಾ, ಆತ್ಮವಿಶ್ವಾಸ ಹೆಚ್ಚುತ್ತಿದ್ದ ಈ ಕ್ಷಣದಲ್ಲಿಯೇ ಆಕೆಯ ಒಳಗೆ ತನ್ನ ಕುಟುಂಬ ಮತ್ತು ತನ್ನ ಭೂತಕ್ಕೆ ತಾನು ಬೆನ್ನು ತಿರುಗಿಸಿದೆ ಎಂಬ ವಿಚಾರ ಅಪ್ರಜಾnಪೂರ್ವಕವಾಗಿ ಅಂತರಾಳದ ಮೂಲೆಯಲ್ಲಿ ಎಲ್ಲೋ ಅವಿತು ಹಿಂಸಿಸಿತ್ತು. ತನ್ನ ಇಡೀ ಕುಟುಂಬವನ್ನು ಸಿವಿಲ್‌ ಯುದ್ಧದ ಘೋರ ಯಾತನೆಗೆ, ಕ್ರೂರ ವಿಧಿಗೆ ಬಿಟ್ಟು ತಾನೊಬ್ಬಳು ಸುರಕ್ಷಿತವಾಗಿ ಸ್ವತಂತ್ರ ಬದುಕಿಗೆ ಓಡಿ ಬಂದ ಅಪರಾಧಿ ಪ್ರಜ್ಞೆ ಕಾಡಿತ್ತು.

 

ಮಾರ್ಚ್‌ ತಿಂಗಳು 1975, ಇಪ್ಪತ್ತಮೂರು ವರ್ಷ, ಮಾಯಾಗೆ ತನ್ನ ಮನಸ್ಸಿನ ಇರುಸು ಮುರುಸು “ಡಿಸ್‌-ಈಸ್‌’ , ತನ್ನ ದೇಹದಲ್ಲಿ ದೈಹಿಕ ರೋಗವಾಗಿ ರೂಪು ಪಡೆದಿದೆ ಅನಿಸತೊಡಗಿತು. ಒಂದು ರೀತಿ ಮಂಕು ಬಡಿದಿತ್ತು ಮನಸ್ಸಿಗೆ, ಬುದ್ಧಿಗೆ. ದೇಹದಲ್ಲಿ ನಿಶ್ಶಕ್ತಿ, ನಾಲಿಗೆಗೆ ರುಚಿ ಇಲ್ಲ, ಸದಾ ಆಯಾಸ. ಹೊಟ್ಟೆ ಕೆಳಗಿಳಿದು ಭಾರವಾದ ಭಾವನೆ. ವೈದ್ಯರನ್ನು ಹೋಗಿ ಕಂಡರು. ಅವರ ಗರ್ಭಕೋಶದಲ್ಲಿ ಕ್ಯಾನ್ಸರ್‌ ಗಡ್ಡೆ ಇರುವುದು ತಿಳಿದು ಬಂತು.

 

ಕ್ಯಾನ್ಸರ್‌ ಅಂಡಾಶಯದಿಂದ ಗರ್ಭಕೋಶಕ್ಕೆ ಹರಿದಿತ್ತು. ಜೂನ್‌ ತಿಂಗಳು ಗರ್ಭಕೋಶವನ್ನು ಸಂಪೂರ್ಣವಾಗಿ ತೆಗೆದು ಹಾಕಿದರು. ಆರು ತಿಂಗಳ ರೇಡಿಯೇಷನ್‌ ತೆರಪಿ ಪಡೆದರು. ಇಷ್ಟೆಲ್ಲ ತೀವ್ರತರದ ಉಪಚಾರದ ನಂತರವೂ, ಮತ್ತೆ ಪರೀಕ್ಷಿಸಿಕೊಂಡಾಗ ಗಡ್ಡೆಗಳು ಒಂದು ಶ್ವಾಸಕೋಶಕ್ಕೆ, ಎರಡೂ ಮೂತ್ರಪಿಂಡಕ್ಕೆ ಅಂಟಿಕೊಂಡಿರುವುದು ಕಂಡಿತು. ಉಳಿದ ಭಾಗದಲ್ಲಿಯೂ ಗಡ್ಡೆಗಳಿದ್ದವು. ಹೊಟ್ಟೆ, ಸಣ್ಣ ಕರುಳುಗಳಿಗೆ ಅಂಟಿ ಬೆಳೆದ ಗಡ್ಡೆಗಳನ್ನು ಬಿಡಿಸಿ ತೆಗೆಯಲು ಗಂಟೆ ಗಂಟೆಗಳ ಸರ್ಜರಿ ನಡೆಯಿತು.

1977 ನವೆಂಬರ್‌ ತಿಂಗಳು, ವೈದ್ಯರಿಗೆ ಅವರ ಕ್ಯಾನ್ಸರ್‌ ಮಾರಕವಾದದ್ದು ಎಂದು ಅರಿವಾಗಿತ್ತು. ಹನ್ನೆರಡು ಬಾರಿ ಶಸ್ತ್ರಚಿಕಿತ್ಸೆ, ಲೆಕ್ಕವಿಲ್ಲದಷ್ಟು ರೇಡಿಯೇಶನ್‌ ಥೆರಪಿ ಎಲ್ಲವೂ ಮುಗಿದ ಮೇಲೆ ವೈದ್ಯರು ಹೇಳಿದ್ದರು, “ನಿಮಗಿರುವುದು ಎರಡೇ ತಿಂಗಳು’. ಯಮಯಾತನೆಯಲ್ಲಿ ನರಳುತ್ತಿದ್ದ ಮಾಯಾಗೆ ಕರುಣೆಯಿಂದ ಹೇಳಿದರು, “ಆಸ್ಪತ್ರೆಯಲ್ಲಿ ನ‌ಮ್ಮ ಶುಶ್ರೂಷೆಯಲ್ಲಿ ಇರು. ಹೆಚ್ಚು ಹೆಚ್ಚು ಮಾಫಿìನ್‌ ನೀಡಿ ನೋವನ್ನು ಆದಷ್ಟು ಶಮನಗೊಳಿಸಲು ಪ್ರಯತ್ನಿಸುತ್ತೇವೆ’

 

ಮಾಯಾ ಯಾರಿಗೂ ಹೇಳದೆ ಆಸ್ಪತ್ರೆಯಿಂದ ಹೊರಬಿದ್ದರು. ಬದುಕು ತನಗೆ ಎರಡೇ ತಿಂಗಳು ಉಳಿಸಿದ್ದರೆ, ಆ ಎರಡು ತಿಂಗಳನ್ನು ಆಸ್ಪತ್ರೆಯಲ್ಲಿ ಮಾಫಿìನ್‌ ಚುಚ್ಚಿಸಿಕೊಂಡು ಹೆಣವಾಗಿ ಕಳೆಯಲು ಅವರು ಇಚ್ಛಿಸಲಿಲ್ಲ. ತ‌ನ್ನ ಕೊನೆಯ ದಿನಗಳನ್ನು ರಣವೈದ್ಯವಿಲ್ಲದೆ, ಏಕಾಂತದಲ್ಲಿ ಪ್ರಾರ್ಥನೆಯಲ್ಲಿ ಕಳೆಯಲು ಬಯಸಿದರು.

 

ವೆರ್‌ಮೌಂಟ್‌ ಬೆಟ್ಟಗಳ ಹಿಮ ಶಿಖರದ ನಡುವಿನ ಗೆಳತಿಯೊಬ್ಬಳ “ಸ್ಕೀ ಕ್ಯಾಬಿನ್‌’ ಗೆ ಸಾವನ್ನು ಬರಮಾಡಿಕೊಳ್ಳಲು ಹೋದರು. ತನ್ನ ಬದುಕಿನ ಬಗ್ಗೆ ಅಲ್ಲಿ ಧ್ಯಾನಸ್ಥರಾದಳು. ಡಿಸೆಂಬರ್‌ ತಿಂಗಳು, ಕೊರೆವ ಚಳಿಗಾಲ. ಅತ್ಯಂತ ಶಾಂತ ವಾತಾವರಣ. ಸುತ್ತಲಿನ ಪರ್ವತಗಳು, ನೆಲ ಮುಗಿಲುಗಳೆಲ್ಲ ಶ್ವೇತವರ್ಣದ ಹಿಮದ ಛಾದರ ಹೊದ್ದು ಮೌನವಾಗಿ ಮಲಗಿದ ಈ ಅದ್ಭುತ ಪರಿಸರ, ಚಡಪಡಿಸುತ್ತಿದ್ದ ಆಕೆಯ ಮನದ ಆಳಕ್ಕಿಳಿಯಲು ಸಹಾಯ ಮಾಡಿತು. ಅಂತರಂಗಕ್ಕೆ ಇಳಿದಂತೆ ಗಾಢ ಮೌನ ಮತ್ತು ಧ್ಯಾನದಲ್ಲಿ ತೊಡಗಿದರು. ತಮ್ಮೆದೆಯಲ್ಲಿ ಹೊತ್ತಿ ಉರಿದು ಬೆಂಕಿಯಂತೆ ಬೇಯಿಸುತ್ತಿದ್ದ ಗೂಢ‌ ಗುಟ್ಟುಗಳನ್ನೆಲ್ಲ ಹಾಳೆಯ ಮೇಲೆ ಬರೆಯತೊಡಗಿದರು.

 

ಭೀಕರ ಇತಿಹಾಸ

ಮಾಯಾ ಅವರ ಹಿಂದೆ ದೊಡ್ಡ ಇತಿಹಾಸವಿತ್ತು, ಬರ್ಬರ ಚರಿತ್ರೆಯ ನೂರು ಸಾವಿರ ನೋವುಗಳಿದ್ದವು. ಗುಯಾನಾ ಬ್ರಿಟಿಷ್‌ ಕಾಲೊನಿಯಾಗಿತ್ತು. 200 ವರ್ಷಗಳ ಕಾಲೊನಿ ಆಡಳಿತದಲ್ಲಿ, ಬ್ರಿಟಿಷರು ಆಫ್ರಿಕಾದಿಂದ ಕಪ್ಪು$ ಜನರನ್ನು ಗುಲಾಮರಾಗಿ ಎಳೆ ತಂದಿದ್ದರು. ಹಾಗೆಯೇ ಭಾರತದಲ್ಲಿಯ ಬಡವರನ್ನು ಕೂಲಿಕಾರ್ಮಿಕರಾಗಿ ಎಳೆದೊಯ್ದಿದ್ದರು.

 

ಮಾಯಾ ತಿವಾರಿಯ ಮುತ್ತಜ್ಜಿ- ಮುತ್ತಜ್ಜ ಬ್ರಿಟಿಷ್‌ ಭಾರತದಿಂದ ಬ್ರಿಟಿಷ್‌ ಗುಯಾನಾಕ್ಕೆ ಗಂಟು-ಮೂಟೆಗಳೆಂಬಂತೆೆ ರಫಾ¤ಗಿದ್ದರು. ತಮ್ಮಂತೆಯೇ ಸಾವಿರಾರು ಭಾರತೀಯರೊಡನೆ ಅವರು ಮೂರ್ನಾಲ್ಕು ತಿಂಗಳ ಭೀಕರ ಸಮುದ್ರಯಾನವನ್ನು ಮಾಡಿ ತಲುಪಿದ್ದರು. ಈ ಹಾದಿಯಲ್ಲಿ ಬ್ರಿಟಿಷ್‌ ಯೋಧರು, ಅದೆಷ್ಟೋ ಭಾರತೀಯ ಮಹಿಳೆಯರನ್ನು ಮಾನಭಂಗ ಮಾಡಿದ್ದರು, ಅವರ ಗಂಡಂದಿರನ್ನು ಹೊಡೆದು ಬಡಿದಿದ್ದರು, ಅನೇಕರನ್ನು ಸಮುದ್ರದಲ್ಲಿ ಎಸೆದಿದ್ದರು. ಬದುಕುಳಿದು ಬಂದು ತಲುಪಿದವರ ಆತ್ಮಸ್ಥೆ„ರ್ಯ ಮುರಿದು ಬಿದ್ದಿತ್ತು. ಅವರು ಅನುಭವಿಸಿದ ನೋವು, ಕ್ರೌರ್ಯ ಅವರ ಮುಂದಿನ ಪೀಳಿಗೆ ಪೀಳಿಗೆಗಳ ಮನಸ್ಸಿನಲ್ಲಿ ಠಸ್ಸೆ ಒತ್ತಿ ನಿಂತಿತ್ತು.

 

ಹಾಗಿದ್ದೂ ಮಾಯಾ ಅವರ ತಂದೆ ಎಳೆಯ ವಯಸ್ಸಿನ ಲ್ಲಿಯೇ ಮಕ್ಕಳನ್ನು ಯೋಗ, ಪ್ರಾಣಾಯಾಮ, ಧ್ಯಾನ, ಸಾಧನಕ್ಕೆ ಪರಿಚಯ ಮಾಡಿಕೊಟ್ಟಿದ್ದರು. ಪರಾಡಳಿತದ ತುಳಿತ‌ದಲ್ಲಿ ಭಾರತದಲ್ಲಿ ಕೂಡಾ ಕಳೆದು ಹೋಗುತ್ತಿದ್ದ ಭಾರತೀಯ ಜೀವನ ವಿಧಾನವನ್ನು ಬಲು ಕಷ್ಟದಿಂದ ಉಳಿಸಿಕೊಂಡು ಬಂದಿದ್ದರು. 1966ರಲ್ಲಿ ಗುಯಾನಾ ಬ್ರಿಟಿಷ್‌ ಆಡಳಿತದಿಂದ ಮುಕ್ತಿ ಪಡೆದು ಸ್ವತಂತ್ರವಾದಾಗ, ಭೀಕರ ಯಾದವೀ ಯುದ್ಧ ಆಫ್ರಿಕಾ ಮತ್ತು ಭಾರತ ಸಂಜಾತ ಗುಯಾನೀಯರ ನಡುವೆ ಆರಂಭವಾಯಿತು. 16 ವರ್ಷದ ಬಾಲೆ ತನ್ನ ಪ್ರೀತಿಯ ಕುಟುಂಬವನ್ನು ಹಿಂದೆ ಬಿಟ್ಟು ನ್ಯೂಯಾರ್ಕಿಗೆ ಹೊರಟಳು.

 

ನ್ಯೂಯಾರ್ಕ್‌ ನಗರದ ಸುರಕ್ಷಿತ ಪರಿಸರದಲ್ಲೂ, ಮಾಯಾರ‌ ಮನಸ್ಸು ಶಾಂತವಿರಲಿಲ್ಲ. ಗುಯಾನಾದ ಜನಾಂಗೀಯ ಯುದ್ಧ, ರಕ್ತಪಾತ ದುಃಸ್ವಪ್ತವಾಗಿ ಕಾಡಿದ್ದವು. ಕಡೆಗೆ ಮಾಯಾ ತಮ್ಮ ಸುತ್ತಲೂ ಒಂದು ಕೋಟೆ ಕಟ್ಟಿಕೊಂಡರು. ಗುಯಾನಾದ ಸುದ್ದಿಯಿಂದ ದೂರ ಉಳಿದರು. ತನ್ನ ಕಹಿ ಇತಿಹಾಸ, ಭೂತವನ್ನೆಲ್ಲ ಅಳಿಸಿ ಹಾಕಿ, ಹಿಂದಿನ ಬದುಕಿಗೆ ಕದ ಮುಚ್ಚಿ ಕುಳಿತರು.

 

ಅಂತರಂಗದ ಗಂಟುಗಳು

ವೆರ್‌ಮೌಂಟ್‌ ಪರ್ವತದ ಮಡಿಲಲ್ಲಿ, ಬದುಕಿನಂಚಿನಲ್ಲಿ ಕುಳಿತ ಈ ಸಮಯದಲ್ಲಿ ಮಾಯಾ ತಮ್ಮಂತರಂಗವನ್ನೆಲ್ಲ ಶೋಧಿಸಿ ಬರೆದೇ ಬರೆದರು. ಧಾರಕಾರವಾಗಿ ಅತ್ತರು. ಬರೆಯುತ್ತಾ ತಮ್ಮಾಳದಲ್ಲಿ ಗಂಟು ಗಂಟಾದ ಗುಟ್ಟುಗಳನ್ನು ಹೊರ ಹಾಕಿದರು.

 

ಒಂದು ರಾತ್ರಿ ಉರಿವ ಬೆಂಕಿಯ ಬಳಿ ಬೆಚ್ಚಗೆ ಕುಳಿತಂತೆ ತಂದೆಯ ಪ್ರೀತಿ, ವಿವೇಕ, ವಿವೇಚನೆ ಅವರಿಗೆ ನೆನಪಾಯಿತು. ತನ್ನ ಕುಟುಂಬ, ತನ್ನ ತಂದೆ ತಾಯಿಯರನ್ನು ಕಂಡು 12 ವರ್ಷಗಳು ಕಳೆದು ಹೋಗಿದ್ದವು. ಅವರು ಹೇಗಿದ್ದಾರೆ, ಭೀಕರ ಸಿವಿಲ್‌ ಯುದ್ಧದಿಂದ ಬದುಕುಳಿದರೆ, ಅವರು ಎಲ್ಲಿದ್ದಾರೆ ಏನೊಂದೂ ತಿಳಿಯದ ವರ್ಷಗಳವು. ಮನಸ್ಸಿನ ಕಣ್ಣುಗಳ ಮುಂದೆ ತಂದೆ ಮತ್ತೆ ಮತ್ತೆ ಕಂಡರು. ತಮ್ಮ ಅಂತರಂಗದ ನೋವನ್ನು, ಅಪರಾಧಿ ಪ್ರಜ್ಞೆಯನ್ನು, ತಂದೆಯಲ್ಲಿ ಹೇಳಿಕೊಂಡು ಮಾಯಾ ಅತ್ತರು. ತಮ್ಮ ಬದುಕಿನ ಅತಿಕ್ರಮಣಗಳಿಗೆ, ಅಪಚಾರಗಳಿಗೆ, ಉಲ್ಲಂಘನೆಗಳಿಗೆ ಕ್ಷಮೆ ಯಾಚಿಸಿದರು. ತಮ್ಮೊಳಗಿದ್ದ ತಮ್ಮ ಮಿತಿಗಳನ್ನು, ಕೊರತೆಗಳನ್ನು, ದೌರ್ಬಲ್ಯ ಗಳನ್ನು ಒಂದೊಂದಾಗಿ ಗುರುತಿಸಿ, ಎದುರಿಸಿ ಒಪ್ಪಿಕೊಂಡರು. ತಾವು ತೊಟ್ಟ ಮುಖವಾಡವನ್ನು ತೆಗೆದಿಟ್ಟರು. ಎದೆಯ ಭಾರ ಇಳಿದಿತ್ತು, ಮನಸ್ಸು ಹಗುರಾದಂತೆ ಭಾಸವಾಯಿತು. ಮೆಲ್ಲನೆ ಗಮನಿಸಿದರು ದೇಹದಲ್ಲಿ ನೋವು ಮಾಯವಾಗಿತ್ತು.

 

ಇದೇ ಸಮಯದಲ್ಲಿ ಬಾಲ್ಯದಲ್ಲಿ ತಂದೆ ಕಲಿಸಿದ್ದ ಯೋಗ, ಪ್ರಾಣಾಯಾಮ, ಧ್ಯಾನಗಳಲ್ಲಿ ತೊಡಗಿದರು. ಮನಸ್ಸು ಶಾಂತವಾಯಿತು. “ಸಾಧನಾ ಆಫ್ ಫ‌ೂಡ್‌’ ಮೂಲಕ ಸ್ವಾಸ್ಥ್ಯದ ಹಾದಿಯಲ್ಲಿ ಹೆಜ್ಜೆ ಇರಿಸಿದರು. ಅಲ್ಲಿ ಗುಯಾನಾದಲ್ಲಿ ತ‌ನ್ನಮ್ಮ ಎಲ್ಲಿಲ್ಲದ ಪ್ರೀತಿಯಿಂದ ಸಂತಸದಿಂದ ಅಡಿಗೆ ಮಾಡುತ್ತಿದ್ದುದು ನೆನಪಾಯಿತು. ಕುಟ್ಟಿ ತಿರುವಿದ ಧಾನ್ಯಗಳು, ತಾಜಾ ತರಕಾರಿ ಹಣ್ಣುಗಳು. “ಆಹಾರವೇ ದೇಹಕ್ಕೆ ಔಷಧಿ. ಅದರಲ್ಲೂ ಭಾರತೀಯ ಆಹಾರ ಕ್ರಮದಲ್ಲಿ, ದೇಹವನ್ನು ಕಾಯುವ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗಿಡಮೂಲಿಕೆಗಳಿವೆ ‘ ಎಂದು ಅರಿತರು. ಉಪವಾಸಗಳನ್ನು ಆಚರಿಸಿದರು. ಜೈವಿಕ ತಾಜಾ ಆಹಾರಕ್ಕೆ ಮೊರೆ ಹೋದರು.

 

ಒಂದು ದಿನ ಹೊರಗೆ ನೋಡಿದರು, ಪರ್ವತ ಶಿಖರಗಳ ಹಿಮ ಕರಗಿತ್ತು. ವಸಂತ ಋತು ಆಗಮಿಸಿತ್ತು. ಆರು ತಿಂಗಳೇ ಕಳೆದಿತ್ತು ! “ವೈದ್ಯರು ಕೊಟ್ಟ ಎರಡು ತಿಂಗಳಾಚೆಗೆ ತಾನು ನಾಲ್ಕು ತಿಂಗಳು ಬದುಕಿದ್ದೇನೆ ‘ ಅರಿವಿಗೆ ಬಂದೊಡನೆ ಅಚ್ಚರಿಯಾಯಿತು. ಸೀದಾ ಮ್ಯಾನ್‌ಹಾಟನ್‌ಗೆ ಹಿಂತಿರುಗಿದರು. ಆಸ್ಪತ್ರೆಗೆ ನಡೆದರು. ವೈದ್ಯರು ತಪಾಸಣೆ ಮಾಡಿದರು. ಅವರ ದೇಹದಲ್ಲೆಲ್ಲೂ ಕ್ಯಾನ್ಸರ್‌ನ ಸುಳಿವೇ ಇರಲಿಲ್ಲ! ತೀವ್ರ ರೋಗದಿಂದ ಹೊರಟು ನಿರೋಗಕ್ಕೆ ತಲುಪಿ ಗುಣವಾದ‌ ತಮ್ಮ ಈ ಯಾತ್ರೆಯನ್ನು ಮಾಯಾ ದಿ ಪಾತ್‌ ಆಫ್ ಪ್ರಾಕ್ಟೀಸ್‌ ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ.

 

ಫ್ರೀಸರ್‌ನಲ್ಲಿ ಕ್ಯಾನ್‌ನಲ್ಲಿಟ್ಟ ನಿಃಸಣ್ತೀ ಆಹಾರವನ್ನು, ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿ ಗಡಿಬಿಡಿಯಲ್ಲಿ ತಿಂದು ಓಡುವ ಜೀವನ ವಿಧಾನವನ್ನು ಹೊರ ತಳ್ಳಿದರು. ಜೈವಿಕ ಆಹಾರಕ್ಕೆ ಹೊರಳಿದರು. ಆಹಾರದ ಪರಿಮಳವನ್ನು, ರುಚಿಯನ್ನು ಆಘ್ರಾಣಿಸಿ, ಶಾಂತವಾಗಿ ಕುಳಿತು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡರು. ಫಾÂಷನ್‌ ಲೋಕ ಈಗ ಅವರ ಆದ್ಯತೆಯಾಗಿರಲಿಲ್ಲ.

ತಾನು ಯಾರೆಂದು ಗುರುತಿಸಿಕೊಳ್ಳಲು ಅವರಿಗೆ ಈಗ ನಾಚಿಕೆ ಇರಲಿಲ್ಲ. ತಮ್ಮ ಕುಟುಂಬವನ್ನು ಹುಡುಕಿ ಹೋದರು. ಗುಯಾನಾದ ಆ ಯುದ್ಧದ ವರ್ಷಗಳಲ್ಲಿ ಕುಟುಂಬ ಬದುಕುಳಿದಿತ್ತು. ನಂತರದ ವರ್ಷಗಳಲ್ಲಿ ಆಕೆಯ ಇಡೀ ಕುಟುಂಬ ಕೆನಾಡಾಗೆ ವಲಸೆ ಹೋಗಿತ್ತು. ಹನ್ನೆರಡು ವರ್ಷಗಳು ತನ್ನ ಸ್ವಸುಖದ ಹಾದಿಯಲ್ಲಿ ಅವರನ್ನು ಮರೆತಿದ್ದರೂ, ತೊರೆದಿದ್ದರೂ, ಒಂದೇ ಒಂದು ಕಟು ನುಡಿಯಿಲ್ಲದೆ, ಮಾಯಾರನ್ನು ಕುಟುಂಬ ಆಪ್ತವಾಗಿ ಅಪ್ಪಿತು. ಮನಸ್ಸು ತೃಪ್ತಿಯಾಗುವಷ್ಟು ಅತ್ತರು, ಹಗುರಾಗಿ ಸಂತಸದಿಂದ ಸಂಭ್ರಮಿಸಿದರು. “ಹರಿದು ಹೋದ ಸಂಬಂಧಗಳ ದುರಸ್ತಿಯಾದಂತೆ, ದೇಹ ಮನಸ್ಸು ಚೇತನಗಳೂ ದುರಸ್ತಿಯಾದವು’ ಎನ್ನುತ್ತಾರೆ ಮಾಯಾ. ದೇಹದಲ್ಲಿ ಶಕ್ತಿ, ಮನಸ್ಸಿನಲ್ಲಿ ಸಮಾಧಾನವನ್ನು ಹೊತ್ತು ಮಾಯಾ ನ್ಯೂಯಾರ್ಕಿಗೆ ಹಿಂತಿರುಗಿದರು. “ಅಂತರಾಳದ ಆಳದಿಂದ ನಾನು ಗುಣವಾಗತೊಡಗಿದ್ದೆ ‘ ಎನ್ನುತ್ತಾರೆ.

 

ಆಯುರ್ವೇದದ ಹಾದಿಯಲ್ಲಿ

ಕ್ಯಾನ್ಸರ್‌ನಿಂದ ಸಂಪೂರ್ಣ ಮುಕ್ತಿ ಪಡೆದ ಮಾಯಾ ಇತರರಿಗೆ ವಾಸಿಯಾಗಬಲ್ಲ ಬದುಕುವ ವಿಧಾನಗಳನ್ನು ತಿಳಿಸಲು ಬಯಸಿದರು. ತನ್ನ ಪೂರ್ವಿಕರ ಬೇರುಗಳಿದ್ದ ಭಾರತಕ್ಕೆ ಬಂದರು. ಹೃಷಿಕೇಶಕ್ಕೆ ಬಂದು “ದಯಾನಂದ ಆಶ್ರಮ’ ವನ್ನು ಸೇರಿದರು. ಇಲ್ಲಿ ಸ್ವಾಮಿ ದಯಾನಂದ ಸರಸ್ವತಿ ಅವರಿಂದ ಆಯುರ್ವೇದ, ಯೋಗ, ವೇದಾಧ್ಯಯನ ಮಾಡಿ ಸನ್ಯಾಸ ದೀಕ್ಷೆಯನ್ನು ಪಡೆದರು. ಗುರುಗಳಿತ್ತ‌ ಆಧ್ಯಾತ್ಮಿಕ ಹೆಸರು “ಸ್ವಾಮಿ ಮಾಯಾತೀತಾನಂದ ‘.

 

1981ರಲ್ಲಿ ಅಮೆರಿಕಗೆ ಹಿಂತಿರುಗಿದ ಮಾಯಾ, “ವೈಸ್‌ ಅರ್ಥ್ ಸ್ಕೂಲ್‌ ಆಫ್ ಆಯುರ್ವೇದ’ ಸ್ಥಾಪಿಸಿದರು. ಅಮೆರಿಕದ ಮೊಟ್ಟ ಮೊದಲ “ಆಯುರ್ವೇದ ಹೊಲಿಸ್ಟಿಕ್‌ ಹೆಲ್ತ್‌ ಎಜುಕೇಶನ್‌ ‘ ಕುರಿತ ವಿದ್ಯಾಸಂಸ್ಥೆ ಇದು. ಇಂದು ಇವರನ್ನು ಭಾರತೀಯ ಆಯುರ್ವೇದ ವೈದ್ಯಶಾಸ್ತ್ರದ ಜಗತ್ತಿನ ಪ್ರಮುಖ ಮಹಿಳಾ ತಜ್ಞರೆಂದು ಗುರುತಿಸುತ್ತಾರೆ.

 

ಮಾಯಾ ತಿವಾರಿ “ಆಯುರ್ವೇದ ಎ ಲೈಫ್ ಇನ್‌ ಬ್ಯಾಲೆನ್ಸ್‌ ‘, “ಆಯುರ್ವೇದ: ಸೀಕ್ರೆಟ್‌ ಆಫ್ ಹೀಲಿಂಗ್‌’, “ವಿಮೆನ್ಸ್‌ ಪವರ್‌ ಟು ಹೀಲ್‌ ಥ್ರೂ ಇನ್ನರ್‌ ಮೆಡಿಸಿನ್‌’ ಪುಸ್ತಕಗಳನ್ನು ಬರೆದಿದ್ದಾರೆ.

 

ಸ್ವಸ್ಥ ಬದುಕಿಗೆ ಸ್ವಾಗತ

ನಮ್ಮ ಇಡೀ ಸ್ವಾಸ್ಥ್ಯದ ಗುಟ್ಟು ಸರಳ ಸಹಜ ಜೀವನದಲ್ಲಿ ಅಡಗಿದೆ. ಒಳ್ಳೆಯ ಪೌಷ್ಟಿಕ ಆಹಾರ, ಒಳ್ಳೆಯ ವಿಚಾರ, ನಿರ್ಮಲ ಮನಸ್ಸು, ದೈಹಿಕ ದುಡಿತ- ವ್ಯಾಯಾಮ, ಪ್ರಜಾnಪೂರ್ವಕ ಉಸಿರಾಟ-ಪ್ರಾಣಾಯಾಮ, ಧ್ಯಾನ, ಯೋಗ, ಬದುಕಿನ ಅನಂತ ಕೃಪೆಯ ಬಗ್ಗೆ ತೃಪ್ತ ಮನಸ್ಸು, ಮನಸ್ಸಿನ ಗಂಟುಗಳ ಸಿಕ್ಕು ಬಿಡಿಸಿ ಮಾನಸಿಕ ಒತ್ತಡದಿಂದ ಮುಕ್ತಿ – ಇಷ್ಟರಲ್ಲಿಯೇ ಆರೋಗ್ಯದ ಗುಟ್ಟಿದೆ. ನಮ್ಮೊ¾ಳಗಿನ ಗುಣವಾಗುವ ಆ ಅದ್ಭುತ ಶಕ್ತಿಯನ್ನು ನಾವು ಜಾಗೃತಗೊಳಿ ಸಲು ಸಾಧ್ಯವಿದೆ. “ತೀವ್ರ ನೋವಿನ ಹಾದಿ ಸಂತಸದ ತಾಣಕ್ಕೆ ಕರೆದೊಯ್ಯುತ್ತದೆ. ನಮ್ಮ ಚಿಂತನೆ, ವಿಚಾರ, ಕ್ರಿಯೆಯ ನಡುವೆ ಸಾಮರಸ್ಯವಿರಬೇಕು’ ಮಾಯಾ ಕಂಡುಕೊಂಡ ಸತ್ಯ.

 

ಇಂದು ಮಾತೆ ಮಾಯಾ ಹೇಳುತ್ತಾರೆ, “ಯೋಗಾ, ಆಯುರ್ವೇದ, ಸಾಧನಾ, ಧ್ಯಾನ – ಇವು ಬದುಕಿನ ಬದುಕುವ ರೀತಿಯಾಗಬೇಕು. ಆರೋಗ್ಯಕ್ಕಾಗಿ ನಾವು ಎಷ್ಟೆಲ್ಲ ಪರದಾಡುತ್ತೇವೆ, ಎಷ್ಟು ದೂರಕ್ಕೆ ಹುಡುಕಿ ಹೋಗುತ್ತೇವೆ. ಗುಣವಾಗುವ ಪ್ರಕ್ರಿಯೆ ನಮ್ಮೊಳಗೆ, ನಮ್ಮಲ್ಲಿಯೇ ಇದೆ ‘

ಮಾಯಾ ತಿವಾರಿಯ ಬದುಕು ಆ ಗುಣವಾಗಬಲ್ಲ ಸಾಮರ್ಥ್ಯದ ಅಸಾಧಾರಣ ಉದಾಹರಣೆಯಾಗಿದೆ. ಮಾಯಾ ತಿವಾರಿಯನ್ನು ಮತ್ತೆ ಭೇಟಿಯಾಗಲು ಹೊರಟಿದ್ದೇನೆ, ಹೃಷಿಕೇಶಕ್ಕೆ. ಈ ಫೆಬ್ರವರಿಯಲ್ಲಿ ಅವರು ಮತ್ತೆ ಬರಲಿದ್ದಾರೆ.

 

 

3 ಟಿಪ್ಪಣಿಗಳು (+add yours?)

 1. aravind shedbal
  ಜನ 21, 2011 @ 16:08:51

  Its great, There is nothing called absolute truth. Its really great that she could get completely recovered from cancer. “Jagave Mayaaa jaala”

  ಉತ್ತರ

 2. B.R.Usha
  ಜನ 20, 2011 @ 17:27:54

  Nambalasaadhya Madam….!!!

  ಉತ್ತರ

 3. veda
  ಜನ 19, 2011 @ 17:27:31

  Nijakku ashcharyakara. Cancer nantha ketta rogavannu metti ninthiruva Mayaravarannu neevu betiyadanantharada anubhavagalannu saha tappade bareyiri Madam.

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: