‘ದೇಶ ಕಾಲ’ದ ಹೊಸ ಸಂಚಿಕೆ ಬಂದಿದೆ..

ದೇಶ ಕಾಲದ ಹೊಸ ಸಂಚಿಕೆ ಬಂದಿದೆ. ಈ ಸಲದ ದೇಶ ಕಾಲದ ಥೀಮ್  “ಸಮಕಾಲೀನ ಮರಾಠಿ ಸಾಹಿತ್ಯ”.

ಇಡೀ ಸಂಚಿಕೆಯ ತುಂಬಾ ಮರಾಠಿಯ ಸಮೃದ್ಧ ಸುಗಂಧ. ಎರಡು ಮರಾಠಿ ಕತೆಗಳು, ಎರಡು ಮರಾಠಿ ಕಾದಂಬರಿಯ ಆಯ್ದ ಪುಟಗಳು, ಜಯಂತ ಕಾಯ್ಕಿಣಿ, ಚಂದ್ರಕಾಂತ ಪೋಕಳೆ, ಸರಜೂ ಕಾಟ್ಕರ್ ಅವರೂ ಸೇರಿದಂತೆ ಅನೇಕರು ಅನುವಾದಿಸಿರುವ ಕವಿತೆಗಳಿವೆ.

ಕೆ.ವಿ.ಅಕ್ಷರ ನಿರ್ವಹಿಸುವ ಸಮಯ ಪರೀಕ್ಷೆಯಲ್ಲಿ “ಕನ್ನಡ ಕಣ್ಣಿನಲ್ಲಿ ಮರಾಠಿ ಮನಸ್ಸು” ಕುರಿತು ಡಾ.ಜಿ.ಎಸ್.ಆಮೂರ, ಎಂ.ಪ್ರಭಾಕರ್ ಜೋಷಿ, ಮಿತ್ರಾ ವೆಂಕಟ್ರಾಜ ಅವರ ಲೇಖನಗಳ ಜತೆಗೆ, ಮರಾಠಿಮಯ ವಾತಾವರಣದ ಮುಂಬೈನಲ್ಲಿ ಎರಡು ದಶಕಗಳ ಕಾಲ ವಾಸವಾಗಿದ್ದ ಕಥೆಗಾರ ಜಯಂತ ಕಾಯ್ಕಿಣಿ ಅವರ ವಿಶಿಷ್ಟ ಲೇಖನವೂ ಇದೆ. ಕತೆಗಾರ, ಕಲಾವಿದ ಡಿ.ಎಸ್.ಚೌಗಲೆ ಅನುವಾದಿಸಿರುವ “ಚದುರಂಗ ಮತ್ತು ಕತ್ತೆ” ನಾಟಕ ಈ ಸಂಚಿಕೆಯ ಮತ್ತೊಂದು ವಿಶೇಷ. ಮರಾಠಿ ರಂಗಭೂಮಿಯ ಪ್ರಸಿದ್ಧ ನಾಟಕಕಾರ ವಿಜಯ್ ತೇಂಡೂಲ್ಕರ್ ಅವರ ನಾಟಕಗಳನ್ನು ಇನ್ನೊಬ್ಬ ಪ್ರಸಿದ್ಧ ನಾಟಕಕಾರ ಗಿರೀಶ ಕಾರ್ನಾಡ ವಿಶ್ಲೇಷಿಸಿದ್ದಾರೆ.

ಚನ್ನಕೇಶವ ಅದ್ಭುತ ಮುಖಪುಟವನ್ನು ರಚಿಸಿದ್ದಾರೆ. ಏಕಾಂತದಲ್ಲಿ ಆರಾಮವಾಗಿ ಓದಬಹುದಾದ ಈ ಸಂಚಿಕೆ, ತನ್ನ ಓರಣ ಮತ್ತು ಹೂರಣ ಎರಡರಿಂದಲೂ ಮನ ಸೆಳೆಯುತ್ತದೆ. ಬಿಡಿ ಸಂಚಿಕೆಯ ಬೆಲೆ ರೂ.100. ನಾಲ್ಕು ಸಂಚಿಕೆಗಳ ವಾರ್ಷಿಕ ಸದಸ್ಯತ್ವಕ್ಕೆ ಚಂದಾ ರೂ.300. ವಿವರಗಳಿಗಾಗಿ ಸಂಪರ್ಕ: ದೂರವಾಣಿ: 09243136256, ಈ ಮೇಲ್ – deshakaala@gmail.com

ಈ ಸಂಚಿಕೆಯಿಂದ ಆಯ್ದ ಕವಿತೆ ‘ಹೆಣ ಸಾಗಿಸುವುದು ಕಠಿಣ’ ನಿಮ್ಮ ಓದಿಗಾಗಿ

ಹೆಣ ಸಾಗಿಸುವುದು ಕಠಿಣ

-ಅರುಣ ಕಾಳೆ

ಪ್ರೀತ್ಯಾಗ ಬಿದ್ದಾಗ,

ಹಾಕ್ಕೊಂಡ ಅರಿವಿ ರೇಟು

ತೊಟ್ಟ ವಡವಿ ವಸ್ತಾ

ಅಸಲಿನೋ, ನಕಲಿನೋ ಗೊತ್ತಾಗೋದಿಲ್ಲ.

ಆ ಕೂಟಿನ್ಯಾಗ

ಎರಡೆರಡು ತಾಸು ನಿಲ್ತಾನಿವ,

ಅಕಿ ಅತ್ತಾಗಿತ್ತಾಗ ಓಡ್ಯಾಡತಾಳ,

ಚಂದ ಕಾಣಸಲಿಕ್ಕಂತ,

ಗೆಳೆತ್ಯಾರ ಮನಪಸಂದ ಸೀರಿ

ಉಟಕೊಂಡು ಬರತಾಳ

-ಅವನಿಗದು ಗೊತ್ತಾಗೊದಿಲ್ಲ.

ಅಂತರ ಕಡಿಮೆಯಾಗಿ

ಹೋಗೋದು ಬರೋದು ಮುಗದು,

ಏಕಾಂತಕ್ಕ ಇಳಿದಾಗ

ಅಕಿ ‘ಬಿಕ್ಕಿ ಬಿಕ್ಕಿ ಅಳತಾಳ’.

ನಾನು ಬಡವಿ, ಒಳಚಡ್ಡಿನೂ ಇಲ್ಲಾ ಅಂತಾಳ.

ಖೂನಿ ಮಾಡೋದು ಸುಲಭ,

ಆದರ ಹೆಣ ಸಾಗಸೋದು ಭಾಳ ಕಠಿಣ.

(ಮರಾಠಿಯಿಂದ ಕನ್ನಡಕ್ಕೆ : ಸತೀಶ ಕುಲಕರ್ಣಿ / ಕಾಂಚನ ಕುಲಕರ್ಣಿ)

[ಅಕಾಲ ಮರಣಕ್ಕೀಡಾದ ಅರುಣ ಕಾಳೆ ಮರಾಠಿ ಸಮಕಾಲೀನ ಕಾವ್ಯದ ದೊಡ್ಡ ಹೆಸರು. ಮಾಹಿತಿ ಯಂತ್ರ ಯುಗದ ಮನುಷ್ಯನ ಒಳತೋಟಿಗಳನ್ನು ಅರ್ಥೈಸಿಕೊಂಡು ಕವಿತೆ ರಚಿಸುತ್ತಿದ್ದ ಅರುಣ ಕಾಳೆ ಇತಿಹಾಸವನ್ನು ವರ್ತಮಾನದ ತಕ್ಕಡಿಯಲ್ಲಿಟ್ಟು ತೂಗಿನೋಡಿದ ಕವಿ. ದಲಿತ ಕವಿತೆಯ ಪರಿಧಿಯನ್ನು ಹಿಗ್ಗಿಸಿದ ಹೆಗ್ಗಳಿಕೆ ಇವರದು. `ನಂತರ ಆಲೇಲೆ ಲೋಕ’, `ಗ್ಲೋಬಲಚ ಗಾವಕೂಸ’ ಇವರ ಮುಖ್ಯ ಕವಿತಾ ಸಂಗ್ರಹಗಳು.]

5 ಟಿಪ್ಪಣಿಗಳು (+add yours?)

 1. vijayendra
  ಜನ 20, 2011 @ 09:39:04

  Are u at Bangalore Malathi? if so call me on 9448320220. Vijayendra

  ಉತ್ತರ

 2. malathi S
  ಜನ 20, 2011 @ 08:09:50

  Thank you Cross Road & Chiranjeevi

  ಉತ್ತರ

 3. Chiranjeevi
  ಜನ 19, 2011 @ 13:54:52

  It is available in Sapna.

  ಉತ್ತರ

 4. Cross Road
  ಜನ 19, 2011 @ 10:34:09

  NO, ITS IN ANKITHA BOOK HOUSE. U CAN GET IT DIRECTLY FROM DESHAKAALA.

  ಉತ್ತರ

 5. malathi S
  ಜನ 19, 2011 @ 08:51:56

  Great!!! Looking forward to getting this book. Is it available at Sapna??
  🙂
  malathi S

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: