ಇಲ್ಲಿದೆ ಒಂದು ಉತ್ತರ: ‘ಅಕ್ಷರ’ವಂತರು ಮತ್ತು ಅವರು ಮಾಡುವ ಸಹಜ ಅವಮಾನಗಳು!

ಕೆ ವಿ ಅಕ್ಷರ ‘ಪ್ರಜಾವಾಣಿ ಸಾಪ್ತಾಹಿಕ ಪುರವಣಿ’ಗೆ ಬರೆದ ಲೇಖನ ‘ಹರಾಜು – ಹರಕೆ’ ಬಗ್ಗೆ ‘ಅವಧಿ’ ನಡೆಸಿದ ಚರ್ಚೆ ನೀವು ಓದಿದ್ದೀರಿ. ಇತ್ತೀಚಿನ ದಿನಗಳಲ್ಲಿ ‘ಅವಧಿ’ಯಲ್ಲಿ ಅತಿ ಹೆಚ್ಚು ಜನ ಓದಿದ, ಚರ್ಚಿಸಿದ ಅಂಕಣ ಇದು. ಈ ಲೇಖನದ ಬಗ್ಗೆ ವಿಮರ್ಶಿಸಿದ, ಕಾಮೆಂಟಿಸಿದ ಎಲ್ಲರಿಗೂ ‘ಅವಧಿ’ ಯ ಪ್ರೀತಿ ಇದೆ.

ಈ ಮಧ್ಯೆ ಶಿವಮೊಗ್ಗದ ‘ಅಹರ್ನಿಶಿ ಪ್ರಕಾಶನ’ದ ಕೆ ಅಕ್ಷತಾ ಅವರು ಶಿವಸುಂದರ್ ಬರೆದ ಲೇಖನವನ್ನು ಕಳಿಸಿಕೊಟ್ಟಿದ್ದಾರೆ. ಅಕ್ಷರ ಅವರ ಲೇಖನವನ್ನು ಇನ್ನೊಂದು ದಿಕ್ಕಿನಿಂದ ವಿಮರ್ಶಿಸುವ ಈ ಲೇಖನವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಇದರೊಂದಿಗೆ ಈ ವಿಷಯದ ಕುರಿತ ಚರ್ಚೆ ಇಲ್ಲಿ ಮುಕ್ತಾಯವಾಗುತ್ತದೆ. ಆದರೂ ಓದುಗರ ಮನಸ್ಸಿನಲ್ಲಿ ಬೆಳೆಯುತ್ತಾ ಹೋಗುತ್ತದೆ ಎಂಬ ನಂಬಿಕೆ ನಮ್ಮದು.

ಇನ್ನೊಂದು ವಿಷಯದೊಂದಿಗೆ ಇನ್ನೊಮ್ಮೆ ನಿಮ್ಮ ಮುಂದೆ ಬರುತ್ತೇವೆ. ಥ್ಯಾಂಕ್ ಯು

-ಶಿವಸುಂದರ್

ಚಿತ್ರ: ಕೆಂಡಸಂಪಿಗೆ

ಕಳೆದ ವಾರದ ಸಾಪ್ತಾಹಿಕದಲ್ಲಿ ಕೆ.ವಿ ಅಕ್ಷರ ಅವರು ಬರೆದ ಹರಕೆ-ಹರಾಜು-ಯಾವುದು ಸಹಜ?ಯಾವುದು ಅವಮಾನ ಎಂಬ ಲೇಖನವನ್ನು ಓದಿ ನನ್ನಂಥ ಹಲವರ ಮನಸ್ಸಿಗೆ ಘಾಸಿಯೇ ಆಗಿದೆ. ಸುಬ್ರಹ್ಮಣ್ಯದ ದೇವಾಲಯವೊಂದರಲ್ಲಿ ಹರಕೆದಾರರು ಎಂಜಲೆಲೆಗಳ ಮೇಲೆ ಹೊರಳಾಡಿದ್ದನ್ನು ಸಮಾಜವನ್ನು ಕಾಡುತ್ತಿರುವ ಪಿಡುಗು ಎಂದು ಬಣ್ಣಿಸಿದ ಮಾಧ್ಯಮಗಳು ನಮ್ಮ ಕ್ರಿಕೆಟ್ ಆಟಗಾರರನ್ನು ಎಮ್ಮೆದನಗಳ ರೀತಿ ಹರಾಜು ಹಾಕಿದ್ದನ್ನು ಮಾತ್ರ ಅಪಮಾನವೆಂದು ಭಾವಿಸದೇ ಇರುವುದಕ್ಕೆ ನಮ್ಮ ಚಿಂತನೆಯು ವಸಾಹತುಶಾಹಿ ಪ್ರಭಾವದಿಂದ ಕಳಚಿಕೊಳ್ಳದೇ ಇರುವುದು ಕಾರಣವೆಂದು ಅಕ್ಷರ ಆರೋಪಿಸುತ್ತಾರೆ. ಬರೀ ಇಷ್ಟೆ ಆಗಿದ್ದರೆ ಈ ಲೇಖನದ ಬಗ್ಗೆ ಹೆಚ್ಚಿನ ತಕರಾರೇನೂ ಇರುವ ಅಗತ್ಯವಿರಲಿಲ್ಲ. ಆದರೆ ನಂತರದಲ್ಲಿ ಅವರು ಅವಮಾನ ಹಾಗೂ ಸಹಜ ವಿದ್ಯಮಾನಗಳ ನಡುವಿನ ವ್ಯತ್ಯಾಸವನ್ನು ವಿಷದ ಪಡಿಸಲು ಬಳಸಿರುವ ರೂಪಕ ಮತ್ತದರ ವ್ಯಾಖ್ಯಾನಗಳು ಲೇಖನದ ಹಿಂದಿರುವ ಅಮಾನವೀಯ ಕುತರ್ಕಗಳನ್ನು ಹೊರಹಾಕುತ್ತದೆ.

ಹರಕೆ ಮತ್ತು ಹರಾಜಿನಲ್ಲಿ ಯಾವುದು ಅವಮಾನ ಮತ್ತು ಯಾವುದು ಸಹಜ ವಿದ್ಯಮಾನ ಎಂಬುದನ್ನು ಖಡಾಖಂಡಿತವಾಗಿ ತೀರ್ಮಾನಿಸುವ ತರಾತುರಿಯಿಂದ ಈ ಟಿಪ್ಪಣಿಯನ್ನು ಬರೆದಿಲ್ಲ ಎಂದು ಅಡಿಟಿಪ್ಪಣಿಯ ರೀತಿಯಲ್ಲಿ ಅವರು ಬರೆದುಕೊಂಡಿದ್ದರೂ ಇಡೀ ಲೇಖನ ಎಂಜಲೆಲೆಯ ಮೇಲೆ ಹೊರಳಾಡುವ ಹರಕೆಗಳಲ್ಲಿ ಸಂಕೇತಗೊಂಡಿರುವ ಭಾರತೀಯ ಸಮಾಜದ ಹಲವು ಆಚರಣೆಗಳನ್ನು ಅಪಮಾನ ಎಂದು ಭಾವಿಸುವುದು ವಸಾಹತುಶಾಹಿ ತಿಳವಳಿಕೆಯ ಪರಿಣಾಮ ಎಂದು ದೂಷಿಸುತ್ತದೆ ಮತ್ತು ಅವೆಲ್ಲಾ ಸಹಜ ವಿದ್ಯಮಾನಗಳೆ ಎಂಬ ಸೂಚನೆಯನ್ನೂ ಕೊಡುತ್ತವೆ. ಅದೇ ರೀತಿ ಉನ್ನತ ಸ್ಥಾನದಲ್ಲಿ ಕಾಲಮೇಲೆ ಕಾಲು ಹಾಕಿ ಕೂತವನ ಎದಿರು ಇತಿಹಾಸದುದ್ದಕ್ಕೂ ತಲೆಬಾಗಿಯೇ ನಿಂತ ಸ್ಥಿತಿಯನ್ನು ಎಲ್ಲಿಯತನಕ ಕೆಳಗೆ ನಿಂತವನು ಅಪಮಾನ ಎಂದು ಭಾವಿಸುವುದಿಲ್ಲವೋ ಅಲ್ಲಿಯತನಕ ಅದನ್ನು ಅಪಮಾನ ಎಂದು ಭಾವಿಸಲಾಗದು ಎಂಬ ಫರ್ಮಾನನ್ನೂ ಸಹ ಹೊರಡಿಸುತ್ತದೆ.

ಈ ಚಿಂತನಾ ಧಾಟಿ ಅಂಬೇಡ್ಕರ್, ಫುಲೆ, ದಲಿತ ಚಳವಳಿ, ರೈತ-ಕಾರ್ಮಿಕ ಚಳವಳಿಗಳೆಲ್ಲದರ ಸಾಮಾಜಿಕ ಪ್ರಯತ್ನವನ್ನು ಮತ್ತು ದಲಿತರಿಗೆ ಮತ್ತು ಇತರ ಶೊಷಿತ ಜನಾಂಗಗಳಿಗೆ ತಂದುಕೊಟ್ಟ ಆತ್ಮಾಭಿಮಾನವನ್ನೇ ಪರೋಕ್ಷವಾಗಿ ಪ್ರಶ್ನೆಗೊಳಪಡಿಸುತ್ತದೆ. ಹಾಗೂ ಬ್ರಾಹ್ಮಣಶಾಹಿ ದಮನಕಾರಿ ಸಾಮಾಜಿಕ ಮತ್ತು ಸಾಂಸ್ಕೃತಿಕ ರಚನೆಗಳನ್ನು ಪರೋಕ್ಷವಾಗಿ ಸಮರ್ಥಿಸಿಬಿಡುತ್ತವೆ.

ಅಕ್ಷರ ಅವರ ತರ್ಕ ಈ ಅಪಾಯಕಾರಿ ನೆಲೆ-ನಿಲುವುಗಳಿಗೆ ಬಂದು ತಲುಪಲು ಪ್ರಮುಖ ಕಾರಣ ಅವರ ಚಿಂತನಾ ವಿಧಾನದಲ್ಲಿರುವ ಅಪಾಯಕಾರಿ ನೆಲೆಗಳು. ಈ ಚಿಂತನಾಧಾರೆಯು ವಸಾಹತುಶಾಹಿಯ ಪ್ರಭಾವದಿಂದ ಹೊರಬರುವ ಪ್ರಯತ್ನದಲ್ಲಿ ಗತವನ್ನು ವೈಭವೀಕರಿಸುತ್ತದೆ ಇಲ್ಲವೇ ಅವಿಮರ್ಶಾತ್ಮಕವಾಗಿ ಗ್ರಹಿಸುತ್ತವೆ. ವಸಾಹತುಶಾಹಿ ಪ್ರಭಾವಕ್ಕೆ ಒಳಪಡುವ ಮುಂಚೆಯೂ ಈ ದೇಶದಲ್ಲಿ ಜಾತಿ-ವರ್ಗ-ಲಿಂಗ ತಾರತಮ್ಯಗಳು, ಶೊಷಣೆಗಳು ಇದ್ದವೆಂಬುದನ್ನೂ ಮತ್ತು ಅದರ ವಿರುದ್ಧ ಹೋರಾಟಗಳು ಇದ್ದವೆಂಬುದನ್ನು ನಿರಾಕರಿಸುತ್ತದೆ. (ಅದರಲ್ಲೂ ಇದೀಗ ಈ ಬಗೆಯ ಚಿಂತನಾ ಧಾರೆಯ ಕವಲೊಂದು ಈ ದೇಶದಲ್ಲಿ ಜಾತಿ ಇತ್ತೇ ಹೊರತು ಜಾತಿಶೋಷಣೆ ಇರಲಿಲ್ಲ. ಪಾಶ್ಚಿಮಾತ್ಯ ಇತಿಹಾಸ ನೋಟವು ಅದನ್ನು ಶೋಷಣೆಯೆಂಬಂತೆ ಚಿತ್ರಿಸಿವೆ ಎಂಬ ಅತಿರೇಕಕ್ಕೂ ಹೋಗಿವೆ). ಅಂದರೆ ವಿದೇಶಿ ಜ್ನಾನದಮನದ ಮಾದರಿಗಳನ್ನು ವಿರೋಧಿಸುವ ಪ್ರಕ್ರಿಯೆಯಲ್ಲಿ ಸ್ವದೇಶಿ ದಮನದ ಸಾಮಾಜಿಕ ಮತ್ತು ಸಾಂಸ್ಕೃತಿಕ ರಚನೆಗಳ ಸಮರ್ಥನೆಗೆ ನಿಂತುಬಿಡುತ್ತವೆ. ಕಲವೊಮ್ಮೆ ಪ್ರತ್ಯಕ್ಷವಾಗಿ. ಕಲವೊಮ್ಮೆ ಪರೋಕ್ಷವಾಗಿ. ಆದರೆ ಅಂತಿಮ ಪರಿಣಾಮ ಮಾತ್ರ ಎರಡರದ್ದೂ ಒಂದೇ. ಆದ್ದರಿಂದಲೇ ರಾದಿಕಾ ದೇಸಾಯಿ ಎಂಬ ಖ್ಯಾತ ವಿದ್ವಾಂಸರು ಈ ಬಗೆಯ ಸಿದ್ಧಾಂತ ಬಲಪಂಥೀಯ ರಾಜಕಾರಣದ ಮಿತ್ರನಾಗಿಯೂ ಪರ್ಯಾವಸನಗೊಳ್ಳುವ ಅಪಾಯವಿದೆ ಎಂದು ಎಚ್ಚರಿಸುತ್ತಾರೆ.

ಒಂದು ಸಮಾಜದಲ್ಲಿ ಯಾವುದು ಅವಮಾನ ಮತ್ತು ಯಾವುದು ಸಹಜ ಎಂದು ಮಾನದಂಡಗಳು ಸ್ಥಳೀಯವಾಗಿ ವಿಕಸನಗೊಳ್ಳಬೇಕೆ ವಿನಃ ಪರಸಂಸ್ಕೃತಿಗಳ ಮಾನದಂಡವನ್ನು ಸಾರಾಸಗಟಾಗಿ ಆಮದುಮಾಡಿಕೊಳ್ಳಲಾಗದು ಎಂದು ಅಕ್ಷರ ಹೇಳುತ್ತಾರೆ. ಅವರು ಉದಾಹರಿಸಿರುವ, ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೆಲವು ಹರಕೆದಾರರು ಎಂಜಲೆಲೆಗಳ ಮೇಲೆ ಹೊರಳಾಡಿದ ಪ್ರಸಂಗವನ್ನು ನೋಡೋಣ. ಪಾಶ್ಚಿಮಾತ್ಯ ಕಣ್ಣುಗಳು ಅದರಲ್ಲಿ ಮೌಢ್ಯವನ್ನು ಮಾತ್ರ ನೋಡಿ ಈ ಜನ ಎಷ್ಟು ಹಿಂದುಳಿದಿದ್ದಾರೆ ಎಂದು ಹೀಯಾಳಿಸುತ್ತದೆ. ಆಧುನಿಕ ಸುಶಿಕ್ಷಿತ ಮಧ್ಯಮ ವರ್ಗದ ಪ್ರತಿಕ್ರಿಯೆಯೂ ಇಂಥವನ್ನು ಅಶಿಕ್ಷಿತ ಜನರ ಮೌಢ್ಯ, ದೇಶದ ಪಿಡುಗು ಎಂದೇ ಹೀಯಾಳಿಸುತ್ತದೆ ಎಂದೇ ಇಟ್ಟುಕೊಳ್ಳೋಣ. ಇದರಲ್ಲಿ ಹೀಯಾಳಿಕೆಯ ಅಂಶ ವಸಾಹತುಶಾಹಿ ದುರಹಂಕಾರದ ಪರಿಣಾಮ ಎಂಬುದನ್ನು ಒಪ್ಪಿಕೊಳ್ಳಲೂ ಹಿಂಜರಿಯಬೇಕಿಲ್ಲ. ಆ ಧೋರಣೆ ನಮ್ಮನ್ನೇ ನಮ್ಮವರಿಂದ ಪರಕೀಯಗೊಳಿಸುವ ಸಾಂಸ್ಕೃತಿಕ ಮೌಲ್ಯವನ್ನು ಬಿತ್ತುತ್ತದೆ. ಆದರೆ ಇದರ ಹಿಂದೆ ಮೌಢ್ಯವಿಲ್ಲ, ಅದು ಈ ದೇಶದ ಜನತೆ ಕಂಡುಕೊಂಡ ಆಧ್ಯಾತ್ಮಿಕ ಮಾರ್ಗ ಎನ್ನಲು ಸಾಧ್ಯವೇ?

ಖಂಡಿತಾ ಇಲ್ಲ. ಏಕೆಂದರೆ ಅಲ್ಲಿ ಮಡೆ ಹೊರಳುವ ಕೆಲವು ಹರಕೆದಾರರೆಲ್ಲಾ ದಲಿತ ಮತ್ತು ಇತರ ದಮನಿತ ಜಾತಿಗಳಿಗೆ ಸೇರಿದವರೇ ಆಗಿರುತ್ತಾರೇ ವಿನಃ ಮೇಲ್ಜಾತಿ ಬ್ರಾಹ್ಮಣರಲ್ಲ. ಅಷ್ಟು ಮಾತ್ರವಲ್ಲ. ಅವರು ಮಡೆ ಹೊರಳುವ ಎಂಜಲೆಲೆ ಬ್ರಾಹ್ಮಣರದ್ದೇ ವಿನಃ ಕೆಳಜಾತಿಗಳದ್ದಲ್ಲ. ಈ ಸಂಪ್ರದಾಯದಲ್ಲಿ ಎಂದಿಗೂ ಬ್ರಾಹ್ಮಣರು ದಲಿತ, ಶೂದ್ರರ ಎಂಜೆಲೆಲೆಯಲ್ಲಿ ಹೊರಳಾಡುವುದಿಲ್ಲ. ಇದರ ಹಿಂದೆ ಇರುವ ಸಾಮಾಜಿಕ ತಿಳವಳಿಕೆ ಮೇಲು ಕೀಳಿನ ತಾರತಮ್ಯದ್ದಲ್ಲವೇ? ಹೀಗಾಗಿ ಇಲ್ಲಿ ಪ್ರಧಾನವಾಗಿ ವಿಮಶರ್ೆಗೊಳಗಾಗಬೇಕಿದ್ದು ಈ ತಾರತಮ್ಯಕ್ಕೆ ಬಲಿಯಾಗಿರುವ ದಮನಿತ ಜನತೆಯ ಮೌಢ್ಯವಲ್ಲ. ಬದಲಿಗೆ ಈ ಅಮಾನವೀಯ ಪದ್ಧತಿಗೆ ಧಾಮರ್ಿಕ ಚೌಕಟ್ಟನ್ನು ಕೊಟ್ಟು ಸಾಂಸ್ಥೀಕರಿಸುತ್ತಿರುವ ಬ್ರಾಹ್ಮಣ್ಯದ ಕುತಂತ್ರ. ಈಗಂತೂ ಅದನ್ನು ಹಾಲಿ ಪ್ರಭುತ್ವ ರಾಜ್ಯದೆಲ್ಲೆಡೆಗೆ ವಿಸ್ತರಿಸುವ ಪ್ರಯತ್ನದಲ್ಲಿದೆ. ವಸಾಹತುಶಾಹಿಗಳು ಅದನ್ನು ಜನರ ಮೌಢ್ಯವೆಂದು ಕರೆದು ಅದರ ಹಿಂದಿನ ಸಾಂಸ್ಥಿಕ ಶಕ್ತಿಗಳನ್ನು ತಡೆಯುವ ಯಾವ ಪ್ರಯತ್ನವನ್ನು ಮಾಡಲಿಲ್ಲ. ಹೀಗಾಗಿ ನನ್ನ ಪ್ರಕಾರ ವಸಾಹತುಶಾಹಿಯ ಆಧುನಿಕತೆಯೇ ಒಂದು ಹಿಪಾಕ್ರಸಿ.

ಆದರೆ ಮತ್ತೊಂದು ಕಡೆ ವಸಾಹತುಶಾಹಿ ಚಿಂತನೆಯಿಂದ ಮುಕ್ತರಾದವರು ಇಂಥಾ ಮೌಢ್ಯಗಳ ಹಿಂದಿನ ದೇಸೀ ಬ್ರಾಹ್ಮಣ್ಯದ ಸಮಾಜೋ-ರಾಜಕೀಯ ಹುನ್ನಾರಗಳನ್ನು ಪ್ರಶ್ನಿಸುವ ಬದಲಿಗೆ ಆ ಬಗೆಯ ಆಚರಣೆಗಳ ವಿರೋಧವನ್ನೇ ಅಮಾನ್ಯಗೊಳಿಸುತ್ತಾ ವಸಾಹತುಶಾಹಿ ಪೂರ್ವ ದಮನಕಾರಿ ಸಾಮಾಜಿಕ ರಚನೆಗಳ ಪುನರುಥ್ಹಾನಕ್ಕೆ ಪೂರಕವಾಗುತ್ತಿಲ್ಲವೇ? ವಸಾಹತುಶಾಹಿಯ ಮೇಲರಿಮೆಯನ್ನು ಮತ್ತು ಸ್ಥಳೀಯ ಸಮಾಜದ ಮೇಲ್ಸ್ಥರದವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಶೋಷಣೆಯನ್ನು ಪ್ರಶ್ನಿಸುವ ಪ್ರಜಾತಾಂತ್ರಿಕ ಸಾಂಸ್ಕೃತಿಕ ಪರಿಕರಗಳು ನಮ್ಮ ಜನಪದರ ಇತಿಹಾಸದಲ್ಲಿದೆ. ಅದೇ ರೀತಿ ಪಾಶ್ಚಿಮಾತ್ಯ ಜ್ನಾನ ಮಾದರಿಗಳೂ ಏಕಸ್ವರೂಪಿಯೇನಲ್ಲ. ಅಲ್ಲಿನ ಶೋಷಿತ ಜನಸಮುದಾಯವೂ ತಮ್ಮ ಸಂಘರ್ಷದ ಮೂಲಕ ಪಯರ್ಾಯ ಜ್ನಾನ ಸಂಪತ್ತು ಮತ್ತು ವಿಮೋಚನಾ ಮಾರ್ಗಗಳನ್ನು ಅನ್ವೇಷಿಸಿವೆ. ಪಶ್ಚಿಮವನ್ನು ಏಕರೂಪಿಯಾಗಿ ಗ್ರಹಿಸುವ ಮೂಲಕ ಈ ಅಕ್ಷರವಂತರ ಬಳಗ ಮನುಷ್ಯ ಘನತೆಯನ್ನು ಹೆಚ್ಚಿಸುವ ಭೌಗೋಳಿಕ ಕಾರಣದಿಂದ ಮಾತ್ರ ಈ ಸ್ಥಳದ್ದಲ್ಲದ ಆದರೆ ಇತರ ದಮನಿತ ಜನರದ್ದೇ ಆದ ಜ್ನಾನ ಸಂಪತ್ತನ್ನೂ ಪೂರ್ವಗ್ರಹದಿಂದಲೇ ನೋಡುವಂತೆ ಮಾಡುತ್ತದೆ.

ವಾಸ್ತವವಾಗಿ ಹರಕೆಯ ಮತ್ತು ಹರಾಜು ಎರಡರಲ್ಲೂ ಮನುಷ್ಯನ ಸ್ವಾಭಿಮಾನ ಮತ್ತು ಘನತೆ ಎರಡೂ ಬೇರೆಬೇರೆ ರೀತಿಯಲ್ಲಿ ಅಪಮಾನಕ್ಕೊಳಪಟ್ಟಿವೆ. ಒಂದರಲ್ಲಿ ಸಾಂಸ್ಕೃತಿಕ ಗುಲಾಮೀಕರಣ ಇನ್ನೊಂದರಲ್ಲಿ ಮನುಷ್ಯ ಪ್ರತಿಭೆಯ ಸರಕೀಕರಣ. ಎರಡೂ ಮನುಷ್ಯನನ್ನು ಡಿ-ಹ್ಯೂಮನೈಸ್ ಮಾಡುತ್ತವೆ. ಹೀಗಾಗಿ ಒಂದರ ಎದುರಿಗೆ ಮತ್ತೊಂದನ್ನು ನಿಲ್ಲಿಸುವ ಅಗತ್ಯವೇ ಇಲ್ಲ. ಎರಡನ್ನೂ ಶೋಷಿತ ಜನರೆಲ್ಲರ ವಿಶ್ವಾತ್ಮಕವಾದ ಮೌಲ್ಯಗಳಾದ ಮನುಷ್ಯ ಘನತೆ, ಸ್ವಾಭಿಮಾನ ಮತ್ತು ಸಮಾನತೆಯ ನೆಲೆಯಿಂದ ಮಾತ್ರವೇ ವಿಮಶರ್ಿಸಲು ಸಾಧ್ಯ. ಅಕ್ಷರ ಹೇಳುವ ಸ್ಥಳೀಯ ಜ್ನಾನಮಾದರಿಯಲ್ಲಿ ಒಂದಾದ ವೈದಿಕಶಾಹಿಯಲ್ಲಿ ಮನುಷ್ಯ ಸಮಾನತೆಯ ಸೊಲ್ಲೇ ಇಲ್ಲ. ಹೀಗಿರುವಾಗ ಅವರ ಸ್ಥಳೀಯ ಸಾಂಸ್ಕ್ರಿತಿಕ ಮಾನದಂಡಗಳ ವಕಾಲತ್ತು ಮತ್ತು ವಿಶ್ವಾತ್ಮಕ ಮೌಲ್ಯಗಳ ಬಗೆಗಿನ ಸಂಶಯಗಳು ಹರಕೆ-ಹರಾಜು ಎರಡಕ್ಕೂ ಕಾರಣವಾಗಿರುವ ಮೂಲ ಸಾಂಸ್ಕೃತಿಕ ಮತ್ತು ಆಥರ್ಿಕ ರಚನೆಗಳನ್ನು ವಿಮಶರ್ಿಸುವುದೇ ಇಲ್ಲ. ಬದಲಿಗೆ ಸಮಥರ್ಿಸುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಜಾತಿಗ್ರಸ್ತ ಮನಸ್ಸುಗಳು ಸ್ವಾಭಿಮಾನ ತೋರಿದ ದಲಿತರಿಗೆ ಮಲ ತಿನ್ನಿಸುತ್ತಿರುವ ಈ ಹೊತ್ತಿನಲ್ಲಿ ಅದು ರೂಢಿಗತ ಸಹಜ ವಿದ್ಯಮಾನವೋ ಅಥವಾ ಸಾಮಾಜಿಕ ಅಪಮಾನವೋ ಎಂಬ ಪ್ರಶ್ನೆ ಮೂಡುವುದು ಕೇವಲ ಬೌದ್ಧಿಕ ವಿದ್ಯಮಾನವಂತೂ ಆಗಿರಲು ಸಾಧ್ಯವಿಲ್ಲ. ಈ ವಿದ್ಯಮಾನವನ್ನೂ ಸಹ ಅಕ್ಷರ ಅವರು ಬಳಸಿರುವ ರೂಪಕದಲ್ಲೇ ಹೇಳಬಹುದು. ತಲೆ ಬಾಗಿ ನಿಲ್ಲುವುದು ಅಪಮಾನ ಎಂದು ಅರ್ಥಮಾಡಿಕೊಂಡ ದಮನಿತರು ಕೂತವರ ವಿರುದ್ಧ ಬಂಡೇಳುವ ಹೊತ್ತಿನಲ್ಲಿ ಮೇಲೆ ಕೂತವರ ನೆಂಟರು ಬಂಡುಕೋರರ ಜೊತೆ ನೀವೂ ಕುಂತಿಪುತ್ರರೇ ಎಂದು ಕೃಷ್ಣ ಸಂಧಾನ ಮಾಡುವಂತಿದೆ ಅಕ್ಷರರವರ ಲೇಖನ. ಇದು ಅಕ್ಷರ ವಂಚನೆಯೂ ಹೌದು. ಅರಿವಿನ ದ್ರೋಹವೂ ಹೌದು.

– ಶಿವಸುಂದರ್

8 ಟಿಪ್ಪಣಿಗಳು (+add yours?)

 1. savitri
  ಜನ 20, 2011 @ 11:35:33

  Made snana ondu moudhya allavennuvudadare , Brahmanarenisikondavaru kelastarada janarannu balavantadinda ettikondu hogi “neevu namma enjalu eleyalli horaladi meleddare udhharavagutteeri. adakkagi made snana madalebeku” endu made snana madisuttiddara? Kelastaradavaru Brahmanarige bhayapattu avara anatiyante made snana maduttiddara?

  Secondly please remember or study once again the Epic Mahabharatha especially about Shri Krishna Sandhana topic. Aa prakaranavannu illeke holistteeri?

  ಉತ್ತರ

 2. ಸಂದೀಪ್ ಕಾಮತ್
  ಜನ 19, 2011 @ 23:18:12

  ಮೈಂಡ್ ಗೂ ಇಂಡಿಯಾಗೂ ಏನ್ ಸಂಬಂಧ?

  ಉತ್ತರ

 3. Sharadhi
  ಜನ 19, 2011 @ 21:35:17

  This response is again biased, I wonder why the rotten Indian minds are not able to come out of retrospects. Everything is lensed through caste-based approach. Yuck

  ಉತ್ತರ

 4. ಮಹೇಶ್
  ಜನ 19, 2011 @ 20:52:59

  ಇಲ್ಲಿ ಮತ್ತೆ ಜಾತಿಗಳ ನಡುವೆ ಸಂಘರ್ಷ ತರುವ ಹುನ್ನಾರ ನಡೆಯುತ್ತಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎಂಜಲೆಲೆಯ ಮೇಲೆ ಬರೀ ದಲಿತರು ಮಾತ್ರಾ ಹೊರಳಾಡುತ್ತಾರೆ ಎಂಬ ಕುರುಡು ವಾದವೇ ಮಾಡುತ್ತಿರುವುದು ಸರಿಯಲ್ಲ. ಇಲ್ಲಿ ಜಾತಿ , ಮತ ಬೇಧವಿಲ್ಲದೆ ” ನಂಬಿಕೆಯ” ಆಧಾರದಲ್ಲಿ ಹೊರಳಾಡುತ್ತಾರೆ. ಮತ್ತೂ ಇಲ್ಲಿ ಯಾಕೆ ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತೀರಿ ಸ್ವಾಮಿ. ಇನ್ನಾದರೂ ಸಮಗ್ರವಾಗಿ ಯೋಚಿಸಿ.

  ಉತ್ತರ

 5. Pramod
  ಜನ 19, 2011 @ 20:16:19

  ಮೀನ್ ವೈಲ್ ಮಡೆ ಸ್ನಾನ ಮಾಡೋರು ಮಾಡ್ತಾ ಇರ್ತಾರೆ.
  ಮೀಡಿಯದಲ್ಲಿ ಸಿಕ್ಕಾಪಟ್ಟೆ “ತಲೆ ಕೆಡಿಸುಕೊ೦ಡು” ಅಥವಾ ಆ ರೀತಿ ನಟನೆ ಮಾಡಿ ಚರ್ಚೆ ಮಾಡ್ತಾನೆ ಇರ್ತಾರೆ.

  ಲೈಫು ಇಷ್ಟೇನೆ 😀

  ಉತ್ತರ

 6. P. Bilimale
  ಜನ 19, 2011 @ 19:31:17

  ಸರಿಯಾದ ಮುಕ್ತಾಯ. ಶಿವಸುಂದರ ಅವರಿಗೆ ಕೃತಜ್ಞತೆಗಳು

  ಉತ್ತರ

 7. ajay
  ಜನ 19, 2011 @ 18:37:27

  ಈ ಉತ್ತರದಲ್ಲಿ ಹೊಸದೇನು ಕಾಣುತ್ತಿಲ್ಲ. ಮತ್ತದೇ ಬ್ರಾಹ್ಮಣಶಾಹಿ, ದಲಿತ ಶೋಷಣೆ, ಮಲ, ಕುತಂತ್ರ ಮುಂತಾದ ಹಳಸಲು ವಿಷಯಗಳ ಪ್ರಸ್ತಾಪ, ಪ್ರಲಾಪ ಅಷ್ಟೆ.

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: