ಬಿಳಿಮಲೆ ಮತ್ತು ಜೋಗಿ

ಇದು ‘ಜುಗಾರಿ ಕ್ರಾಸ್’ ಅಂಕಣ. ಚರ್ಚೆಗೆ ವೇದಿಕೆ.

ಪ್ರಜಾವಾಣಿ ‘ಸಾಪ್ತಾಹಿಕ ಪುರವಣಿ’ಯಲ್ಲಿ ಕೆ ವಿ ಅಕ್ಷರ ಅವರ  ‘ಹರಕೆ ಹರಾಜು’ ಲೇಖನ ಪ್ರಕಟವಾಗಿತ್ತು. ಆ ಲೇಖನ ಇಲ್ಲಿದೆ. ಅಕ್ಷರ ಬರೆದಿರುವ ಈ ಲೇಖನ ಯಾವ ದಿಕ್ಕಿನಲ್ಲಿದೆ ಎಂದು ಆಶ್ಚರ್ಯವಾಗುತ್ತಿದೆ. ಮಡೆ ಸ್ನಾನದಂತಹ ಆಚರಣೆಯನ್ನೂ, ಕ್ರಿಕೆಟ್ ಆಟಗಾರರ ಹರಾಜನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡಲಾಗಿದೆ.

ಈ ಲೇಖನದೆಅ ಬಗ್ಗೆ ಪುರುಷೋತ್ತಮ ಬಿಳಿಮಲೆ ಹಾಗೂ ಜೋಗಿ ವಿಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಅಕ್ಷರ ಅವರ ಲೇಖನದ ಬಗ್ಗೆಯೂ, ಬಿಳಿಮಲೆ, ಜೋಗಿ ಅಭಿಪ್ರಾಯದ ಬಗ್ಗೆಯೂ ನಿಮ್ಮ ಅಭಿಪ್ರಾಯ ಕಳಿಸಿ

ಅಕ್ಷರ ಅವರ ಲೇಖನ ಓದಿ ತುಂಬಾ ನಿರಾಶೆಯಾಯಿತು. ‘ಹರಾಜಿನ ಸುದ್ದಿಗೆ ಹೋಲಿಸಿದರೆ, ಹರಕೆಯ ಸುದ್ದಿಯು ಅದು ಸಂಭವಿಸಿದ ಭೌಗೋಲಿಕ ಸ್ಥಳದ ದೃಷ್ಟಿಯಿಂದಲೇ ಆಗಲಿ, ಅಥವಾ ಅದರ ಪರಿಣಾಮದ ವ್ಯಾಪ್ತಿಯಲ್ಲೇ ಆಗಲಿ, ಅಥವಾ ಈ ವ್ಯವಹಾರದ ಹಿಂದೆ ಅಡಗಿರುವ ಹಣದ ಪ್ರಮಾಣದಿಂದಲೇ ಆಗಲಿ ಅಷ್ಟು ಮುಖ್ಯವಲ್ಲದ್ದೆಂಬಂತೆ ಕಾಣುತ್ತದೆ.’ ಎಂಬ ಅವರ ಮಾತುಗಳು ಆಘಾತಕಾರಿಯಾಗಿದೆ. ಅವಮಾನವನ್ನು ಕೇವಲ ಬೌದ್ಧಿಕ ಅಹಂಕಾರದಲ್ಲಿ ವಿವರಿಸುವ ಮತ್ತು ಗ್ರಹಿಸುವ ಈ ಬಗೆಯ ಬರೆಹ, ಮಾನವನ ಘನತೆಯನ್ನು ಹಣದ ಮೂಲಕ ವಿವರಿಸುವ ಮಿತಿಗೆ ಒಳಪಟ್ಟಿದೆ. ಇದು ಪ್ರತಿಗಾಮಿ ಪರಂಪರೆಯನ್ನು ನಾಜೂಕಾಗಿ ಸಂರಕ್ಷಿಸುವ ಹೊಸ ವಿಧಾನ. ಬತ್ತಲೆ ಸೇವೆ ನಿಂತು ಹೋದಂತೆ ಎಂಜಲು ಎಲೆಯಮೇಲೆ ಹೊರಳುವುದು ನಿಲ್ಲಬೇಕು.

-ಪುರುಷೋತ್ತಮ  ಬಿಳಿಮಲೆ

++

ಅಕ್ಷರ ಅನಿಸಿಕೆ ಇಷ್ಟವಾಯಿತು.

ಇವತ್ತು ಯಾವುದು ಮೂಢನಂಬಿಕೆ, ಯಾವುದು ಅವಮಾನ, ಯಾವುದು ಶ್ರೇಷ್ಠ ಅನ್ನುವುದನ್ನು ನಿರ್ಧಾರ ಮಾಡುವುದು ಪತ್ರಿಕೆಗಳು ಮತ್ತು ಚಾನಲ್ಲುಗಳು. ಮೀಡಿಯಾಕ್ಕೆ ಆ ಹಕ್ಕು ಕೊಟ್ಟವರು ಯಾರು? ಮೀಡಿಯದಲ್ಲಾದರೂ ಅಂಥ ನಿರ್ಧಾರ ಕೈಗೊಳ್ಳಬಹುದಾದ ಸ್ವೋಪಜ್ಞರು ಇದ್ದಾರಾ? ಇದು ಕಂದಾಚಾರ, ಇದು ಅಂಧಶ್ರದ್ಧೆ, ಇದು ಮೌಢ್ಯ ಎಂದು ಒದರಿ ಅವೂ ಕೂಡ ಸುಮ್ಮನಾಗುತ್ತವೆ. ಮೀಡಿಯಾಗಳಿಗೆ ಅವು ಆ ಕ್ಷಣಕ್ಕೊಂದು ಸುದ್ದಿ ಮಾತ್ರ.

ಒಂದು ಆಚರಣೆಯನ್ನು ಎಷ್ಟು ಮಂದಿ ಎಷ್ಟು ವರ್ಷದಿಂದ ಮಾಡುತ್ತಾ ಬಂದಿದ್ದಾರೆ. ಅವರಿಗೆ ಅದರಿಂದ ಯಾವ ಪ್ರಯೋಜನ ಆಗಿದೆ. ಮಾನಸಿನ ನೆಮ್ಮದಿ ಎಷ್ಟು ಸಿಕ್ಕಿದೆ, ದೈಹಿಕವಾಗಿ ಅನುಕೂಲ ಏನೇನಾಗಿದೆ. ನಿಜಕ್ಕೂ ಅದರಿಂದ ಉಪಯೋಗ ಇದೆಯಾ ಅನ್ನುವುದನ್ನು ಮನೋವಿಜ್ಞಾನಿಗಳೂ, ವಿಜ್ಞಾನಿಗಳೂ, ಸಮಾಜಶಾಸ್ತ್ರಜ್ಞರೂ ಸೇರಿಕೊಂಡು ಅಧ್ಯಯನನ ನಡೆಸಿ ತೀರ್ಮಾನಿಸಬೇಕು. ಅಂಥ ಪ್ರಯತ್ನ ಎಲ್ಲಿ ನಡೆಯುತ್ತಿದೆ.

ಮೊನ್ನೆ ಯಾವುದೋ ಚಾನಲ್ಲಿನಲ್ಲಿ ಉತ್ತರ ಕರ್ನಾಟಕದ ಯಾವುದೋ ಹಳ್ಳಿಯ ಜಾತ್ರೆಯಲ್ಲಿ ಮಗುವನ್ನು ಅಷ್ಟೆತ್ತರದಿಂದ ಕೆಳಗೆಸೆಯುವ ಆಚರಣೆ ಪ್ರಸಾರವಾಗುತ್ತಿತ್ತು. ವೈದ್ಯರೊಬ್ಬರು ಮಕ್ಕಳನ್ನು ಅಷ್ಟು ಎತ್ತರದಿಂದ ಎಸೆಯುವುದು ಅಪಾಯಕಾರಿ ಎಂದು ಹೇಳಿಕೆ ಕೊಡುತ್ತಿದ್ದರು. ಅದರ ಪರಿಣಾಮಗಳ ಬಗ್ಗೆ ಅವರಿಗ ಗೊತ್ತಿತ್ತೇ, ಎಷ್ಟೋ ವರ್ಷಗಳಿಂದ ನಡೆಯುತ್ತಿರುವ ಆಚರಣೆ ಅದು. ಐವತ್ತು ವರ್ಷದ ಹಿಂದೆ ಹಾಗೆ ಎಸೆಯಲ್ಪಟ್ಟವರು ಯಾರು, ಅವರು ಹೇಗಿದ್ದಾರೆ. ಅವರ ಮೇಲೆ ಅದರಿಂದ ಯಾವ ದುಷ್ಪರಿಣಾಮ ಆಗಿದೆ ಅನ್ನೋದನ್ನು ಅಧ್ಯಯನ ಮಾಡುತ್ತೀರಾ.. ಇಲ್ಲ, ಹೋಗಲಿ ಈ ವರ್ಷ ಮೇಲಿಂದ ಕೆಳಗೆ ಎಸೆಯದ ಒಂದೇ ಒಂದು ಮಗು ಮುಂದಿನ ಒಂದು ವರ್ಷದಲ್ಲಿ ಏನೇನೋ ಸಮಸ್ಯೆ ಎದುರಿಸಿತು ಎಂದು ಫಾಲೋ ಅಪ್ ಮಾಡಿದ್ದೀರಾ. ಅದೂ ಇಲ್ಲ. ಆ ಕ್ಷಣದ ತೆವಲಿಗ ಆಚರಣೆಗಳು ಮತ್ತು ಸಂಪ್ರದಾಯಗಳು ಬಲಿಯಾಗುತ್ತಿವೆ.

ನಾವು ಏನು ಮಾಡಬೇಕು, ಯಾವುದು ಮೌಢ್ಯ, ಯಾವುದು ಸತ್ಯಂಪ್ರದಾಯ, ನಾನು ಹೇಗೆ ನಡೆದುಕೊಳ್ಳಬೇಕು, ಯಾರನ್ನು ಪೂಜಸಬೇಕು ಅನ್ನುವುದನ್ನು ಮೀಡಿಯಾ ನಿರ್ಧಾರ ಮಾಡುವಂತಾಗಿರುವುದು ಇಂದಿನ ಮುಖ್ಯ ಸಮಸ್ಸೆ. ಇದರಿಂದಾಗಿ ಪ್ರತಿಯೊಂದೂ ಮೀಡಿಯಾವನ್ನು ಓಲೈಸುವ ಕ್ರಿಯೆಯಷ್ಟೇ ಆಗಿಬಿಟ್ಟಿದೆ. ಚಿಂತನೆಯಲ್ಲಾಗಲೀ, ಕ್ರಿಯೆಯಲ್ಲಾಗಲೀ ಒರಿಜಿನಾಲಿಟಿ ಕಾಣಿಸದು.

ನನಗೆ ಪತ್ರಿಕೆ ಬೇಕಾಗಿರುವುದು ಸುದ್ದಿಗೆ ಮಾತ್ರ. ನನ್ನನ್ನು ತಿದ್ದುವುದಕ್ಕೋ ಬುದ್ಧಿವಂತನನ್ನಾಗಿ ಮಾಡುವುದಕ್ಕೋ ಅಲ್ಲ. ಈಗಿನ ಪತ್ರಿಕರ್ತರು, ಅದರಲ್ಲೂ ಇಂಗ್ಲಿಷ್ ಪತ್ರಕರ್ತರು ತಾವು ಸರ್ವಜ್ಞರು ಅಂದುಕೊಂಡಂತಿದೆ. ಆದರೆ, ನಾವು ಪತ್ರಕರ್ತರು ನೆನಪಿಬೇಕಾದ ಸಂಗತಿಯೊಂದಿದೆ. ಚರಿತ್ರೆಯಲ್ಲಿ ದಾಖಲಾಗುವುದು ಕ್ರಿಯೆಯೇ ಹೊರತು, ಮಾತಲ್ಲ. ಮಹಾತ್ಮ ಗಾಂಧಿ ದಂಡಿ ಮಾರ್ಚ್ ಮಾಡಿದ್ದಷ್ಟೇ ಮುಖ್ಯ ಅದನ್ನು ಯಾರು ವರದಿ ಮಾಡಿದರು ಅನ್ನುವುದಲ್ಲ.

ಜೋಗಿ

11 ಟಿಪ್ಪಣಿಗಳು (+add yours?)

 1. Cross Road
  ಜನ 19, 2011 @ 00:19:06

  ಈ ಲಿಂಕು ನೋಡಿ-

  http://cslcku.wordpress.com/2010/12/21/ritua/

  ಉತ್ತರ

 2. D.M.Sagar,Dr.
  ಜನ 18, 2011 @ 20:42:41

  The reason I like and appreciate Jogi’s comments is “ಒಂದು ಆಚರಣೆಯನ್ನು ಎಷ್ಟು ಮಂದಿ ಎಷ್ಟು ವರ್ಷದಿಂದ ಮಾಡುತ್ತಾ ಬಂದಿದ್ದಾರೆ. ಅವರಿಗೆ ಅದರಿಂದ ಯಾವ ಪ್ರಯೋಜನ ಆಗಿದೆ. ಮಾನಸಿನ ನೆಮ್ಮದಿ ಎಷ್ಟು ಸಿಕ್ಕಿದೆ, ದೈಹಿಕವಾಗಿ ಅನುಕೂಲ ಏನೇನಾಗಿದೆ. ನಿಜಕ್ಕೂ ಅದರಿಂದ ಉಪಯೋಗ ಇದೆಯಾ ಅನ್ನುವುದನ್ನು ಮನೋವಿಜ್ಞಾನಿಗಳೂ, ವಿಜ್ಞಾನಿಗಳೂ, ಸಮಾಜಶಾಸ್ತ್ರಜ್ಞರೂ ಸೇರಿಕೊಂಡು ಅಧ್ಯಯನನ ನಡೆಸಿ ತೀರ್ಮಾನಿಸಬೇಕು. ಅಂಥ ಪ್ರಯತ್ನ ಎಲ್ಲಿ ನಡೆಯುತ್ತಿದೆ.

  Here, he’s expressed some genuine concerns about finding truth/consequences behind such practices.

  The reason, I didn’t like Bilimale’s comments is “ಅಥವಾ ಅದರ ಪರಿಣಾಮದ ವ್ಯಾಪ್ತಿಯಲ್ಲೇ ಆಗಲಿ, ಅಥವಾ ಈ ವ್ಯವಹಾರದ ಹಿಂದೆ ಅಡಗಿರುವ ಹಣದ ಪ್ರಮಾಣದಿಂದಲೇ ಆಗಲಿ ಅಷ್ಟು ಮುಖ್ಯವಲ್ಲದ್ದೆಂಬಂತೆ ಕಾಣುತ್ತದೆ.’ ಎಂಬ ಅವರ ಮಾತುಗಳು ಆಘಾತಕಾರಿಯಾಗಿದೆ. ಅವಮಾನವನ್ನು ಕೇವಲ ಬೌದ್ಧಿಕ ಅಹಂಕಾರದಲ್ಲಿ ವಿವರಿಸುವ ಮತ್ತು ಗ್ರಹಿಸುವ ಈ ಬಗೆಯ ಬರೆಹ, ಮಾನವನ ಘನತೆಯನ್ನು ಹಣದ ಮೂಲಕ ವಿವರಿಸುವ ಮಿತಿಗೆ ಒಳಪಟ್ಟಿದೆ. ಇದು ಪ್ರತಿಗಾಮಿ ಪರಂಪರೆಯನ್ನು ನಾಜೂಕಾಗಿ ಸಂರಕ್ಷಿಸುವ ಹೊಸ ವಿಧಾನ.”
  Now, I wonder where is this “ಬೌದ್ಧಿಕ ಅಹಂಕಾರ” ?. Also Bilimale has over reacted and threw couple of unrelated rhetorics to confuse the majority of souls those who have access to internet+key board than conveying the message to those who have got access to their brains!

  ಉತ್ತರ

 3. ಸಂದೀಪ್ ಕಾಮತ್
  ಜನ 18, 2011 @ 18:57:11

  ಮಂಗಳೂರಿನಲ್ಲಿ ಮೀನು ಹರಾಜು ಹಾಕ್ತಾರೆ. ಮೇನಕಾ (ಅಥವಾ ಮನೆಕಾ? ) ಗೆ ಗೊತ್ತಾದ್ರೆ ಪಡ್ಚ!

  ಉತ್ತರ

 4. Vasanth
  ಜನ 18, 2011 @ 17:34:41

  Jogi and some of the writers publish books/write like anything. But they are not ideologically strong or stand for any cause. They can swim in both of the world (secular and communal boat) easily. So his reaction is not at all surprised.

  ಉತ್ತರ

 5. ಪರಾಂಜಪೆ
  ಜನ 18, 2011 @ 17:21:55

  ಸ್ವಾಮಿ
  ಅಕ್ಷರ ಅವರ ಲೇಖನದ ಕುರಿತಾಗಿ ಸುದರ್ಶನ್, ಬಿಳಿಮಲೆ, ಜೋಗಿ – ಹೀಗೆ ಅನೇಕರ ಅಭಿಪ್ರಾಯ ಓದಿದ ನ೦ತರ ಸುಮ್ಮನಿರಲಾಗಲಿಲ್ಲ. ಮಡೆ ಸ್ನಾನವನ್ನೂ IPL ಹರಾಜನ್ನೂ ಒತ್ತಟ್ಟಿಗೆ ಇಟ್ಟು ಅಕ್ಷರ ಅವರು ತಮ್ಮ ಅಭಿಪ್ರಾಯ ಮ೦ಡಿಸಿದ್ದಾರೆ. ಓಕೆ, ಮಡೆಸ್ನಾನ ಅನ್ನುವುದನ್ನು ಮೌಢ್ಯ ಎ೦ದು ಒಪ್ಪುವುದಾದರೆ IPL ಹರಾಜನ್ನು ಆಧುನಿಕ ಸಮಾಜದ ಮಾನಸಿಕ ದಿವಾಳಿತನ ಅನ್ನೋಣವೇ ? ಈ ಮಡೆಸ್ನಾನದ ವಿಚಾರದಲ್ಲಿ ಬ್ರಾಹ್ಮಣರು ಉ೦ಡೆದ್ದ ಎಲೆ ಮೇಲೆ ಉರುಳುಸೇವೆ ಅ೦ದ ಕೂಡಲೇ ಅದಕ್ಕೊ೦ದು ವಿಶೇಷತೆ ಬ೦ದು ಬಿಡ್ತು. ಇಲ್ಲವಾದರೆ ನಮ್ಮ ಸುತ್ತ ಅದೆಷ್ಟ್ರೋ ಇ೦ತಹ ಪುರಾತನ ನ೦ಬಿಕೆಗಳ ಕಟ್ಟಳೆಗಳಿವೆ, ಅವನ್ನೆಲ್ಲ ಯಾರೂ ಪ್ರಶ್ನಿಸ ಹೋಗುವುದಿಲ್ಲ, ಯಾಕೆ೦ದರೆ ಅಲ್ಲಿ ಬ್ರಾಹ್ಮಣರ ಮಧ್ಯಸ್ಥಿಕೆ ಇಲ್ಲ. ನಮ್ಮ ದೇಶದಲ್ಲಿ ಹಳೆಯ ನ೦ಬಿಕೆಗಳು , ಆಚರಣೆಗಳು ಲೆಕ್ಕವಿಲ್ಲದಷ್ಟು ಇವೆ, ಅವನ್ನೆಲ್ಲ ಮೌಢ್ಯ ಎ೦ಬ ನೆಲೆಯಲ್ಲಿ ಹತ್ತಿಕ್ಕುವ ಪ್ರಯತ್ನಕ್ಕೆ ಹೋಗದೆ ಕೆಲವನ್ನು ಮಾತ್ರ ಪ್ರಶ್ನಿಸಲಾಗುತ್ತಿದೆ. ಇರಲಿ, ಪ್ರಗತಿಶೀಲ ಯುಗದಲ್ಲಿ ಈ ಮಟ್ಟದ ಎಚ್ಚರ ಜನಮಾನಸದಲ್ಲಿ ಮೂಡುತ್ತಿರುವುದು ಪ್ರಗತಿಯ ಸ೦ಕೇತ ಅನ್ನೋಣ. ಆದರೆ IPL ಹರಾಜು ಪ್ರಕ್ರಿಯೆಗೆ ಆಟಗಾರಾರ ಹರಾಜು, ಮಾರಾಟ ಎನ್ನುವುದನ್ನು ನನ್ನ ಮನಸ್ಸು ಕೂಡ ಒಪ್ಪುತ್ತಿಲ್ಲ, ಇಲ್ಲಿ ಹರಾಜಾದವರು ಯಾರಿಗೂ ಗುಲಾಮರಾಗಿ ಇರಬೇಕಿಲ್ಲ, ಹರಾಜಾದವರಿಗೆ ಆರ್ಥಿಕ ಲಾಭ ಆಗುತ್ತದೆ ಎ೦ಬೆಲ್ಲ ವಾದಗಳಿವೆ ನಿಜ. ಆದರೆ ಕ್ರಿಕೆಟ್ ಆಟಗಾರರ “ಹರಾಜು” “ಮಾರಾಟ” ಅನ್ನುವ ಪದಗಳೇ ಕಿರಿಕಿರಿ ಎನಿಸುತ್ತವೆ.

  ಉದಾಹರಣೆಗೆ ಇ೦ದು “ಏಜೆ೦ಟ್” “ಬ್ರೋಕರ್” ಎನ್ನುವ ಪದಗಳನ್ನು ಹೆಚ್ಚಿನವರು ಬಳಸುತ್ತಿಲ್ಲ. ಹಿ೦ದೆಲ್ಲ ಇನ್ಸೂರೆನ್ಸ್ ಏಜೆ೦ಟ್ ಎ೦ತ ಕರೆಯಿಸಿ ಕೊಳ್ಳುತ್ತಿದ್ದವರು ಇ೦ದು ಇನ್ಸುರೆನ್ಸ್ ಅಡ್ವೈಸರ್ ಆಗಿದ್ದರೆ ಶೇರ್ ಬ್ರೋಕರ್ ಗಳು ಇನ್ವೆಸ್ಟ್ ಮೆ೦ಟ್ ಕನ್ಸಲ್ಟೆ೦ಟ್ ಎ೦ದು ಕರೆಯಿಸಿ ಕೊಳ್ಳುತ್ತಿದ್ದಾರೆ. ಅ೦ದರೆ ಈ “ಏಜೆ೦ಟ್” ಮತ್ತು “ಬ್ರೋಕರ್” ಎ೦ಬ ಪದಗಳು ಅದೆಷ್ಟು ಸವಕಲಾಗಿವೆ ಎ೦ದರೆ ಅವನ್ನು ಉಪಯೋಗಿಸಿದರೆ ಜನ ಒಂಥರಾ ಪ್ರತಿಕ್ರಿಯಿಸ್ತಾರೆ, ಆ ಪದಗಳೊ೦ದಿಗೆ ಏನೇನೋ ತಳಕು ಹಾಕಿ ಬಿಡ್ತಾರೆ. ಹಾಗೆಯೇ ಈ ಆಟಗಾರ “ಹರಾಜು, ಮಾರಾಟ” ಅನ್ನುವ ಪದವನ್ನು ಅರಗಿಸಿಕೊಳ್ಳಲು ನಮಗೆ ಇನ್ನಷ್ಟು ಕಾಲ ಬೇಕಾಗಬಹುದು, ಅದಕ್ಕೆ ಬೇರಾವುದಾದರೂ ಪರ್ಯಾಯ ಪಾರಿಭಾಷಿಕ ಪದ ಬಳಸಿದರೆ ಸೂಕ್ತವಾಗಬಹುದೇನೋ ? ಜೋಗಿಯವರು ಹೇಳಿದ೦ತೆ “ಮಾಧ್ಯಮದವರು ನಮ್ಮ ಅನಿಸಿಕೆ, ಆಚರಣೆ ಗಳನ್ನು ತಿದ್ದಲು ಇರುವವರಲ್ಲ” ಎ೦ಬ ಮಾತನ್ನು ಸಾರ ಸಗಟಾಗಿ ನಿರಾಕರಿಸಲು ಆಗುತ್ತಿಲ್ಲ. ಆದರೆ ಜೋಗಿಯವರ ಮಾತಿನಲ್ಲಿಯೂ ಹುರುಳಿದೆ.

  ಉತ್ತರ

 6. ಆಸು ಹೆಗ್ಡೆ
  ಜನ 18, 2011 @ 14:13:29

  ಇಲ್ಲಿ ನಾನು ಓರ್ವ ಸಾಮಾನ್ಯ ಓದುಗನಾಗಿ ಪ್ರತಿಕ್ರಿಯಿಸುತ್ತಿದ್ದೇನೆ. ಓರ್ವ ಬರಹಗಾರನಾಗಿ ಅಲ್ಲ.

  ಏಕೆಂದರೆ, ಇವರೀರ್ವರ ಅನಿಸಿಕೆಗಳಿಗೆ ಪ್ರತಿಕ್ರಿಯಿಸಲು ಅವರ ಮಟ್ಟದ ಬರಹಗಾರ ನಾನಲ್ಲ.

  ಮಕ್ಕಳನ್ನು ಮೇಲಿಂದ ಎಸೆಯುವುದು ಅಪಾಯಕಾರಿ ಎಂದ ವೈದ್ಯರನ್ನು ತರಾಟೆಗೆ ತೆಗೆದುಕೊಂಡು ಪುರಾವೆ ನೀಡಿದ್ದಾರಾ… ದುಷ್ಪರಿಣಾಮದ ಬಗ್ಗೆ ಅಧ್ಯಯನ ಮಾಡಿದ್ದಾರಾ ಅನ್ನುವ ಜೋಗಿಯವರ ಅನಿಸಿಕೆಗಳನ್ನು ಓದುವಾಗ ವಿಚಿತ್ರ ಅನಿಸ್ತಾ ಇದೆ.

  ಇವರು ಅದೇ ಜೋಗಿಮನೆ ಜೋಗೀನಾ?!

  “ಬಚ್ಚಲು ಮನೆಯಲ್ಲಿ ಜಾರುತ್ತೆ ಮಗೂ, ಜಾಗ್ರತೆ…” ಅನ್ನುವ ಅಪ್ಪನನ್ನೋ, ಅಮ್ಮನನ್ನೋ ಮಕ್ಕಳು “ಅಧ್ಯಯನ ಮಾಡಿದ್ದೀರಾ? ಇಲ್ಲಿ ಎಷ್ಟು ಮಂದಿ ಬಿದ್ದಿದ್ದಾರೆ? ಯಾವ ಯಾವ ಮೂಳೆ ಮುರಿದುಕೊಂಡಿದ್ದಾರೆ?” ಎಂದು ಮರು ಪ್ರಶ್ನೆ ಮಾಡಿದಂತಿದೆ ಇದು.

  ಅಧ್ಯಯನದ ನಂತರವೇ ಬಡಿಸಿದ್ದನ್ನು ಊಟಮಾಡುವವರೇ ನಾವುಗಳೆಲ್ಲಾ?

  ಮೇಲಿಂದ ಮಕ್ಕಳನ್ನು ಎಸೆಯುವಾಗ, ಹಿಡಿಯುವವರ ಕೈತಪ್ಪಿಹೋದರೆ ಮಗು ಬಿದ್ದು ತಲೆ ಒಡೆದುಕೊಳ್ಳಬಹುದು ಅನ್ನುವುದು ಸಾಮಾನ್ಯ ಜ್ಞಾನ ಅಥವಾ ದುರ್ಬಲ ಹೃದಯಿ ಮಕ್ಕಳು ಉಸಿರುಗಟ್ಟಿ ಸಾಯಬಹುದು ಅನ್ನುವುದಕ್ಕೂ ವಿಶೇಷ ಜ್ಞಾನವೇನೂ ಬೇಕಾಗಿಲ್ಲ.

  ಅಪಾಯಕಾರಿ ಅಂದ ಕೂಡಲೇ ಎಲ್ಲಾ ಮಕ್ಕಳೂ ಅಪಾಯಕ್ಕೆ ಈಡಾಗುತ್ತರೆ ಎಂದೇನಿಲ್ಲ. ಅಪಾಯದ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಅನ್ನುವುದಷ್ಟೇ ಸತ್ಯ.

  ಉಪದೇಶಗಳು ಪತ್ರಿಕೆಗಳಿಂದ ಬರಬೇಕಿಲ್ಲ. ಘಟನೆ ಮುಖ್ಯ. ವರದಿ ಮಾಡುವವರು ಮುಖ್ಯರಲ್ಲ ಅನ್ನುವ ಧೋರಣೆ ಹೊಂದಿರುವವರು ಬರಹಗಾರರಾಗಿ, ವಿಮರ್ಶಕರಾಗಿ ಹೊರ ಹೊಮ್ಮುವುದು ಹೇಗೆ ಸಾಧ್ಯವಾಯಿತು?

  ವರದಿ ಮಾಡುವವರು ಮುಖ್ಯರಲ್ಲ ಎಂದು ಒಪ್ಪಿಕೊಳ್ಳುವವನಿಗೂ, ವರದಿಯಲ್ಲಿನ ಸತ್ಯಾಂಶ ಎಷ್ಟು ಅನ್ನುವುದು ಮುಖ್ಯವಾಗಿರುತ್ತದೆ, ಒಂದು ಘಟನೆ ಹೇಗೆ ವರದಿಯಾಗಿದೆ ಅನ್ನುವುದೂ ಮುಖ್ಯವಾಗುತ್ತದೆ. ಹಾಗಾಗಿ ವರದಿಗಾರನೂ ಮುಖ್ಯನಾಗುತ್ತಾನೆ.

  ಒಂದು ನಿರ್ದಿಷ್ಟ ಪತ್ರಿಕೆಗೆ ಅಥವಾ ಸುದ್ದಿ ವಾಹಿನಿಗೆ ಆಕರ್ಷಿತನಾಗುವ ಓದುಗ ಅಥವಾ ವೀಕ್ಷಕ ಅಲ್ಲಿನ ವರದಿಗಾರರನ್ನು ಅವಲಂಬಿಸಿಯೇ ಆಕರ್ಷಿತನಾಗಿರುತ್ತಾನೆ ಅನ್ನುವುದು ಸತ್ಯ. ಪತಿಕೆಗಳಲ್ಲಿನ ಬರಹಗಳು ಓದುಗನಲ್ಲಿ ಬದಲಾವಣೆ ತರಲಾರದು ಎನ್ನುವುದನ್ನು ಒಪ್ಪಲಾಗದು.
  ಸ್ವಾತಂತ್ರ್ಯಹೋರಾಟದ ಸಂದರ್ಭದಲ್ಲಿ ಪತ್ರಿಕೆಗಳಲ್ಲಿನ ಬರಹಗಳ ಮುಖಾಂತರ ಜನರಲ್ಲಿ ಬದಲಾವಣೆ ತರಲು ಸಾಧ್ಯವಾಗಿರಲಿಲ್ಲವೇ?
  ಹಾಗೊಂದು ವೇಳೆ ಪತ್ರಿಕೆಗಳಲ್ಲಿನ ಬರಹಗಳು, ತನ್ನೊಳಗೆ ಬದಲಾವಣೆ ತರಲು ಬಯಸುವ ಮಾನವನಲ್ಲಿ ಬದಲಾವಣೆ ತರಲಾರವು ಎನ್ನುವುದಾದರೆ, ಪತ್ರಿಕೆಗಳಲ್ಲಿನ ಸುದ್ದಿ ವರದಿಗಳನ್ನುಳಿದು ಪ್ರಕಟವಾಗುವ ಎಲ್ಲಾ ಅಂಕಣ ಬರಹಗಳ ಬರಹಗಾರರೆಲ್ಲಾ ತಮ್ಮ ತೆವಲಿಗಷ್ಟೇ ಬರೆಯುತ್ತಿದ್ದಾರೆ ಎನ್ನಬಹುದೇ?

  ತಮ್ಮ ಅಂಕಣಗಳನ್ನು ಓದುವ ಓದುಗರಲ್ಲಿ ಎಳ್ಳಷ್ಟೂ ಬದಲಾವಣೆಯನ್ನು ನಿರೀಕ್ಷಿಸುವುದಿಲ್ಲವೇ?

  ಅಕ್ಷರ ಅವರ ನಂತರ ಜೋಗಿಯವರೂ ಎಡವಟ್ಟು ಮಾಡಿಕೊಂಡಿದ್ದಾರೆ ಅಂತ ಅನಿಸುತ್ತಿದೆ, ನನಗೆ.

  ಉತ್ತರ

 7. savitri
  ಜನ 18, 2011 @ 13:03:21

  Bilimale Sir Akshar avaru mathugalannu apaartha maadikondantide. Akshar avaru patrika varadiya tirulannu prastutapadisutta haage barediddare horatu adu tamma swanta abhiprayavendenu avaru helilla. Akshara avar lekhanada ottu abhiprayavenandare manaapamaanada parikalpaneyu vaiyaktikavagi mattu vastu stithiyannadharisi hege badalaguttade embudu.

  Jogi Sir abhiprayapattiddu sari, aadare bahalastu adhyanagalu Ph.D maduvudakke mattu lekhana roopadalli ulidubidodakke seemithavagive annisuttide. Mattu kelavu adhyanagalinda parihaara kramagalannu kaigondaru janaru avugalige sahakarisi sudharisuttilla. ondu udhaharane helabekendare naanu Vayaskara Shikshana Karyakramadalli swayam sevakiyagi teaching maaduttiddaga nanna listnallidda phalanubhavi vidyarthiniyarannu kareyalu nityavu avara manegalige hoguttidde. aadare avarellaru pade pade ondu prashneyannu keluttiddaru, ” akkavra, nimga sarkaara estu duddu kottaithe? naavu kalitare namagenu koduthe sarkaara?” ityadi avara prashnegalu. avaru kalitare hege laabhavaguttade anta nanna thiluvalike iddastu(I was studiying in high school during those years) tilisi helta idde. aadaru nanna 20 jana shishyeyaralli obbale obbalu akshara kalitalu. aake hanta hantavagi vaicharika pradnye padeyali anta naanu estondu prayatniside. aadaru aake naanu oorallillada samyadalli Soudatti ellamma guddakke hogi (kutumba sametha) Ellammana saravannu haakikondu bandu bittalu. aake matyaru alla. nanna odahuttida akka. So I am bored. But she is relaxed from some of her mental problems since that event. It is hard to root such customs out. aadaru naavu avugala viruddha kramagalannu kaigolluttale iddare samaja swalpavadaru sudharisbahudu.

  ಉತ್ತರ

 8. Vishvas
  ಜನ 18, 2011 @ 12:50:52

  ಭೌಗೋಲಿಕ ಸ್ಥಳದ ದೃಷ್ಟಿಯಿಂದಲೇ ಆಗಲಿ, ಅಥವಾ ಅದರ ಪರಿಣಾಮದ ವ್ಯಾಪ್ತಿಯಲ್ಲೇ ಆಗಲಿ, ಅಥವಾ ಈ ವ್ಯವಹಾರದ ಹಿಂದೆ ಅಡಗಿರುವ ಹಣದ ಪ್ರಮಾಣದಿಂದಲೇ ಆಗಲಿ ಬೆತ್ತಲೆ ಸೇವೆ ಕೂಡಾ ಐಪಿಎಲ್ ಗೆ ಹೋಲಿಸಿದರೆ ಕಡಿಮೆಯೇ.. ಕೆವಿ ಅಕ್ಷರ ಹಾಗೂ ಜೋಗಿವರ ಪೌರೋಹಿತ್ಯದಲ್ಲಿ ಅದನ್ನು ವಿಗ್ರಂಭಣೆಯಿಂದ ಆಚರಿಸಲು ದಲಿತರು ಹಾಗೂ ಹಿಂದುಳಿದವರಿಗೆ ತಿಳಿಹೇಳಬಹದು.. ಈ ಹಾಳು ಮಾಧ್ಯಮಗಳೇ ಬೆತ್ತಲೆ ಸೇವೆಯನ್ನು ಹೊರಜಗತ್ತಿಗೆ ವಿಕ್ಋತವಾಗಿ ತೋರಿಸಿದ್ದು.. coommon is Jogi always best..

  ಉತ್ತರ

 9. ajay
  ಜನ 18, 2011 @ 11:53:07

  ಜೋಗಿಯವರ ಅಭಿಪ್ರಾಯವನ್ನು ಒಪ್ಪಬಹುದು. ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಕೆಲ ಜನರು ತಮ್ಮ ಪೂರ್ವಗ್ರಹಗಳಿಂದ ನಿರ್ಧರಿಸಲು ಹೋಗುತ್ತಿರುವುದು ಇಂದಿನ ದುರಂತ. ಅಂತವರು ಬರೀ ಮಾಧ್ಯಮಗಳಲ್ಲಷ್ಟೇ ಅಲ್ಲ, ಪ್ರತಿಕ್ಷೇತ್ರದಲ್ಲೂ ಇದ್ದಾರೆ. ಮಡೆಸ್ನಾನ ವಿರೋಧಿಸಲು ಬಾವುಟ ಹಿಡಿದವರು ಮೊನ್ನೆ ಮೈಲಾಪುರ ಜಾತ್ರೆಯಲ್ಲಿ ಕುರಿಮರಿಗಳನ್ನು ಎಸೆಯುವ ಬಗ್ಗೆ ತುಟಿಕ್ ಪಿಟಿಕ್ ಎನ್ನಲಿಲ್ಲ. ಅದು ಅವರಿಗೆ ಮೌಢ್ಯವೆನಿಸಲಿಲ್ಲ, ಅಮಾನವೀಯವೆನಿಸಲಿಲ್ಲ. ಹೀಗಾಗುತ್ತಾ ಹೋದಾಗ ಹಲವು ಪ್ರಶ್ನೆಗಳೇಳುತ್ತವೆ. ಇವರುಗಳು ಸಮಾಜದ ಒಂದು ವರ್ಗದ ಜನರ ವಿರೋಧ ಮಾಡಲಿಕ್ಕಾಗಿಯೇ ನಿಂತಿದ್ದಾರಾ? ಅಥವಾ ಮೈಲಾಪುರವು ಕುಕ್ಕೆ ಸುಬ್ರಮಣ್ಯದಷ್ಟು ಪ್ರಸಿದ್ದಿ ಪಡೆಯದ ಸ್ಥಳವಾದ್ದರಿಂದ ಪ್ರಚಾರ ಸಿಗುವುದಿಲ್ಲ ಎನ್ನಬಹುದೋ ಅಥವಾ ಅದನ್ನು ವಿರೋಧಿಸುವ ಧೈರ್ಯ ಇವರಿಗೆ ಇಲ್ಲ ಎನ್ನಬಹುದಾ?. ಅಲ್ಲಿಗೆ ಹಾರಿಬಿತ್ತು ಸಾಮಾಜಿಕ ಕಾಳಜಿ.

  ಉತ್ತರ

 10. SATHYAPRASAD BV
  ಜನ 18, 2011 @ 11:38:44

  ಇದೊಂದು ವಿಚಿತ್ರ ಹೋಲಿಕೆ. ಎಂಜಲು ಎಲೆಗಳ ಮೇಲೆ ಬಿದ್ದು ಉರುಳು ಸೇವೆ ಮಾಡುವುದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ. ಇದನ್ನು ಎಲ್ಲ ವಿಚಾರವಂತರೂ ಖಂಡಿಸುತ್ತಾರೆ. ಆದರೆ ಇದನ್ನು ಐಪಿಎಲ್ ಆಟಗಾರರ ಹರಾಜಿಗೆ ಹೋಲಿಸಿ ಸಮರ್ಥಿಸಿಕೊಳ್ಳುವುದು ಯಾರಿಗೂ ಶೋಭೆ ತರುವಂತಹುದಲ್ಲ. ವಾಣಿಜ್ಯಾತ್ಮಕವಾಗಿ ಹಾಗೆ ಹರಾಜು ಮಾಡಿರುವುದು ತಪ್ಪಿರಬಹುದು, ಆದರೆ ಮಡೆಸ್ನಾನದಂತೆ ಅಸಹ್ಯಕರವಲ್ಲ. ಜಾಗತೀಕರಣದ ಹಾದಿಯಲ್ಲಿ ನಮಗೆ ಬೇಕಿದ್ದೋ ಬೇಡದೆಯೋ ನಾವು ಬಹು ದೂರ ಸಾಗಿಬಂದಿದ್ದೇವೆ. ಹಾಗೆ ನೋಡಿದರೆ ವಿದ್ಯಾ ಸಂಸ್ಥೆಗಳಲ್ಲಿ ಜರುಗುವ ಇತ್ತೀಚಿನ ಕ್ಯಾಂಪಸ್ ಆಯ್ಕೆಗಳೂ ಸಹ ಸ್ವಲ್ಪ ಹೆಚ್ಚು ಕಡಿಮೆ ಹೀಗೇ (ಐಪಿಎಲ್ ಹರಾಜಿನಂತೆ) ನಡೆಯುತ್ತವೆ. ಇದನ್ನು ನಾವು ಮಡೆಸ್ನಾನದಂತಹ ಅನಾಗರಿಕ ಆಚರಣೆಗೆ ಹೋಲಿಸಲಾದೀತೇ?

  ಉತ್ತರ

 11. BALU
  ಜನ 18, 2011 @ 11:27:06

  Jogi always best , sir, not commented about IPL acution!

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: