ವಿ ನೋದ ವೇ ಆಫ್ ಲೈಫ್

-ಸೂತ್ರಧಾರ ರಾಮಯ್ಯ

ದಾಸ ವಾಣಿಯೂ ದಾಸ್ ಕ್ಯಾಪಿ ತಳ್ಳು:

ರಾಜಕಾರಣದ ಪಟ್ಟುಗಳನ್ನೆಲ್ಲ ಕರಗತ ಮಾಡಿಕೊಂಡು, ತಾನು ಮತ್ತು ತನ್ನ ಪಕ್ಷ ಎಸಗುತ್ತಿದ್ದ ಗುರು-ತರವಾದ ತಪ್ಪುಗಳನ್ನು ಸಮರ್ಥಿಸಿಕೊಂಡು ವಾದಮಾಡಿ ಗೆಲ್ಲುವಂತಹ ದೈವ ದತ್ತವಾದ ಕಲೆ-ಯನ್ನು ಮೈಗೂಡಿಸಿಕೊಂಡಿದ್ದ g .ಗುರು (ಪೂರ್ವಾಶ್ರಮದ ಹೆಸರು. ಈಗ ಗುರು g ) ಅದು ಯಾವ ಕಾರಣಕ್ಕೋ ಸನ್ಯಾಸಾಶ್ರಮಕ್ಕೆ ದಿಫೆಕ್ಟ್ ಆದರು. ಆದರೂ, ಇಲ್ಲೂ ತಮ್ಮ ವಾಕ್ ಚಾತುರ್ಯದಿಂದ ಅಸಂಖ್ಯ ಶ್ರೀಮಂತವರ್ಗದ (ಎಲೈಟ್ ) ಅನುಯಾಯಿಗಳನ್ನು ಸಂಪಾದಿಸಿದರು; ಹಾಗೇ ಕೋಟಿ ಗಟ್ಟಲೆ ಹಣವನ್ನೂ!

ಒಂದು ದಿನ ತೂಕದ ವ್ಯಕ್ತಿಗಳೇ ತುಂಬಿದ್ದ ಕಾರ್ಯಕ್ರಮಕ್ಕೆ ಮೊದಲು, ದಾಸರ ಪದವೊಂದನ್ನು ಹಾಡಲು ‘ಅ’ ಕಾರಪ್ರಿಯ ಶಿಷ್ಯನಿಗೆ ಅಪ್ಪಣೆ ಇತ್ತರು ಗುರು ಜಿ. ಶಿಷ್ಯ ವೇದಿಕೆ ಏರಿದ; ಆಡೊಂದ ಆಡಿದ: ಮಾನವ ಜನ್ಮ ದೊಡ್ಡದು, ಇದ ‘ಆನಿ’ ಮಾಡಿಕೊಳ್ಳಲು ಬೇಡಿ ಉಚ್ಚಪ್ಪಗಳಿರಾ …, ಹಾಗಂತ ಹಾಡಿದ್ದೆ ತಡ, ಇಡೀ ಗ್ಯಾದರಿನ್ಗೆ

ಗೊಳ್ ಅಂತ ನಕ್ಕು ಬಿಡ್ತು! ಗುರು ಜಿಗೆ ಅಸಾಧ್ಯ ಸಿಟ್ಟು ಬಂತು.ಕೈಗೆ ಮೈಕ್ ತೆಗೆದು ಕೊಂಡು “ಎಲೈ(ಟ್) ಹುಚ್ಚಪ್ಪಗಳಿರಾ, ನನ್ನ ಶಿಷ್ಯ ಹೇಳಿದ್ದರಲ್ಲಿ ನಗುವನ್ತದು ಏನಿದೆ? ಮಾನವ ಜನ್ಮ ಪ್ರತೀಕವಾದ ಈ ನಮ್ಮ ಶರೀರ ಸಾಕಷ್ಟು ದೊಡ್ಡದೇ; ಆರು ಅಡಿವರ್ಗು ಬೆಳೆಯುತ್ತೆ. ಸದ್ಯ ನನ್ನ ಕಣ್ಣಿಗೆ ಕಾಣ್ತಿರೋ ಹಾಗೇ ಸುಮಾರು ನೂರೈವತ್ತು ಕೇಜೀವರೆಗೂ ತೂಗುತ್ತೆ. ಅಷ್ಟು ಸಾಲದೇ? ಅದನ್ನು ಐ ಮೀನ್ ದೇಹವನ್ನು ‘ಆನಿ’ (ಉತ್ತರ ಕರ್ನಾಟಕದ ಆನೆ) ಮಾಡಿಕೊಳ್ಳಲುಬೇಡಿ, ಉಚ್ಚಪ್ಪಗಳಿರಾ…? ಅಂದರೆ ದೊಡ್ದಮನುಷ್ಯರುಗಳೇ? ಅಂತಾ ನಿಮ್ಮನ್ನು ಉದ್ದೇಶಿಸಿ ಹಾಡುತ್ತಲೇ ಅರ್ಥೈಸಿದ ನನ್ನ

ಶಿಷ್ಯ. ಅದರಲ್ಲಿ ನಗುವಂತದ್ದೇನಿದೆ? ಆನಿ ಮಾಡಿಕೊಂಡರೆ ಏನೇನು ಅನಾನುಕುಲಗಳು

ನೋಡಿ: ಈ ಸಭಾಂಗಣದ ಕೆಪ್ಪ್ಯಾಸಿಟಿ ಇನ್ನೂರು ಜನಕ್ಕೆ ಅಂತಿದೆ. ಆದರೆ ನೀವು ನೂರು ಜನ ಕೂತ ಮಾತ್ರಕ್ಕೆ ‘ಹೌಸ್ ಫುಲ್’! ಆಗಿಹೋಯ್ತು. ಹೊರಗಡೆ ಇರೋ ಇನ್ನು ನೂರು ಜನಕ್ಕೆ ನಾನು ಇನ್ನೊಂದು ಲೆಕ್ಚರ್ ತಗೋಬೇಕು. ಅದೆಷ್ಟು ಲಾಸ್ ನನಗೆ! ಎಂದು ಎ ಲೈಟಾಗಿ ಕಾಲೆಳೆಯುವ ಮೂಲಕವೇ ಮಾನವಜನ್ಮ ಕುರಿತ ತಮ್ಮ ಕಳ(ಳ್ಳ) ಕಳಿಯನ್ನು ಮೆರೆದರು G ಗುರು…ಕ್ಷಮಿಸಿ ಗುರು G .

ಏ ನಾಯಿ ತು ಪಾಡು!

ಪುಡಾರಿ ಪುಂಡಲೀಕನ ಅರವತ್ತನೇ ವರ್ಷದ ಅಭಿನಂದನಾ ಸಮಾರಂಭಕ್ಕೆ ಬೋರ್ಡು ಬರೆಯಬೇಕಿದ್ದ ಕಲಾವಿದ, ಪುನ್ದಲೀಕರ ಕ್ವಾಲಿಫಿಕೇಶನ್, ಭಯೋ ಡೆಟ ಗಳು ಏನೆಂದು

ಸಂಘಟಕನನ್ನು ಕೇಳಿದ. “ಅಯ್ಯೋ ಅವರ ಗುಣ ಒಂದೇ, ಎರಡೇ? ಹಿ ಈಸ್ A ಜ್ಞಾನಿ ,

ಪ್ರಭುದ್ದ, ಯೋಗ್ಯ, ವಿದ್ಯಾನಿಧಿ, ರಸಿಕ, ಪ್ರಾಮಾಣಿಕ! ಎಲ್ಲವು A ಗ್ರೇಡ್ ಅಂತಲೇ ಬರಕೋ’ ಎಂದು ಹೇಳಿ ಹೊರಟ ಸಂಘಟಕ. ಮಾರನೆ ದಿನ ಸಮಾರಂಭದ ವೇದಿಕೆಯ ಮೇಲೆ ನೋಡಿದಾಗ ಹೀಗೆ ರಾರಾಜಿಸಿತ್ತು ಬೋರ್ಡು:

DR ಪುಡಾರಿ ಪುಂಡಲೀಕ A ಜ್ಞಾನಿ.

…………. ಡಿಟೋ……. Aಯೋಗ್ಯ

…………..ಡಿಟೋ ……A ಪ್ರಭುದ್ಧ

…………..ಡಿಟೋ…….A ಪ್ರಾಮಾಣಿಕ

……………ಡಿಟೋ……A ರಸಿಕ

……………ಡಿಟೋ……A ವಿದ್ಯಾನಿಧಿ

……………ಡಿಟೋ……A ದಕ್ಷ ……… ಇತ್ಯಾದಿ, ಪುನ್ದಲೀಕನ ಗುಣ ಗಾನ್ ಮಾಡಿಟ್ಟಿದ್ದ ಕಲಾವಿದ!

 

ಸುಂದರಿಯ’ಮಾನಾ ಲೀಸ್’ ಗೆ ?

ಕರಿಬಸಯ್ಯ: ನೋಡಿದ್ರಾ ಗುರುಗಳೇ ಡಾವಿಂಚಿ ಕೋಡ್ ಚಲನ ಚಿತ್ರಾನ?

ಕಪ್ಪಣ್ಣ : ಅದೇನು ಬಂತಯ್ಯಾ ಡಾವಿಂಚಿಗೆ ಕೇಡು! ಅಷ್ಟು ಮನಮೋಹಕವಾಗಿ ‘ಮೋನ ಲೀಸ’ಳ ಚಿತ್ರವನ್ನು ರೂಪಿಸಿದರೂ, ಮೈಮೇಲೆ ತುಂಡು ಬಟ್ಟೆ ಹಾಕದೆ ಆಕೆ ‘ಮಾನ ಲೀಸ್’ ಗೆ ಹಾಕಿ ಬಿಟ್ಟನಲ್ಲಾ ಸಲೀಸಾಗಿ ಅಂತಾ?

 

end ಗುಟುಗು

ಮಗು: ಅಪ್ಪಾ..

ಅಪ್ಪಾ: ಏನು ಮಗೂ..

ಮಗು: ಪಕ್ಕದ ಮನೆ ಕೈ ಲಾಸ್ ಅವರ ಮಗ ಕಮಲೇಶ್ ಇದ್ದಾನಲ್ಲ…?

ಅಪ್ಪಾ: ಹೌದು, ಏನಾಯ್ತು?

ಮಗು: ಅವನು ಮಣ್ಣು ತಿಂದುಬಿಟ್ಟಾ!

ಅಪ್ಪಾ: ಗೊತ್ತಿಲ್ಲಾ ಮಗು. ಎಷ್ಟೇ ಅಗಲಿ ದೇಶ ಭುಕ್ತರ ಸಂತತಿ ನೋಡು; ಅವರಪ್ಪ

ಅಜ್ಜರೆಲ್ಲಾ ಅಧಿಕಾರದಲ್ಲಿದ್ದುಕೊಂಡು ಭೂ ಕಬಳಿಕೆ ಮಾಡ್ತಾ ಇದ್ರನ್ತಲ್ಲಾ…,

ಬಹುಶಃ ಅವರ ಪ್ರಭಾವ ಇರಬೇಕು ಅಂತಾ ಕಾಣುತ್ತೆ……..ಅಹ್ಹಹ್ಹ ಹ್ಹಾ೧

 

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: