ಇದು ಜಾಣರ ಸಮಾಚಾರ..

ಬಯಲು ಸೀಮೆಯಿಂದ (ಕೊಪ್ಪಳದಿಂದ ) ಜಾಣರ ಜಿಲ್ಲೆ (ಉಡುಪಿ)ಗೆ ವರ್ಗವಾಗಿ ಬಂದ ‘ಪ್ರಜಾವಾಣಿ’ ವರದಿಗಾರ ಮಂಜುನಾಥ ಭಟ್ ಏನು ಮಾಡಬಹುದು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ . ‘ಪ್ರಜಾವಾಣಿ’ ಪತ್ರಿಕೆಯ ‘ಕರಾವಳಿ’ ಪುಟದಲ್ಲಿ ಎಂಥ ಮಾರಾಯ್ರೆ ….? ಅಂಕಣದ ಮೂಲಕ ಗಮನ ಸೆಳದಿದ್ದಾರೆ.

ಸುಮಾರು ಎಪ್ಪತ್ತೇಳು ವಾರಗಳವರೆಗೂ ನಿರಂತರವಾಗಿ ಹರಿದುಬರುತ್ತಿದ್ದ ಈ ಅಂಕಣ ಬರಹಗಳ ಭಾಷೆ, ಶೈಲಿ, ವಿಚಾರಗಳಿಂದ ಓದುಗರನ್ನು ಸೆರೆಹಿಡಿಯುವುದರಲ್ಲಿ ಯಶಸ್ಸನ್ನು ಗಳಿಸಿದೆ. ಆಯ್ದ ಬರಹಗಳ ಸುಂದರ ಗುಚ್ಛ ಈ ‘ಎಂಥ ಮಾರಾಯ್ರೆ’ ಇದು ಜಾಣರ ಸಮಾಚಾರ.

ಮಂಜುನಾಥ ಭಟ್ ರು ಉಡುಪಿಯಲ್ಲಿ ನೆಲೆಸಿದ್ದಾಗ ಇಲ್ಲಿಯ ವಿದ್ಯಮಾನಗಳಿಗೆ ಕಣ್ಣು ಕಿವಿಗಳನ್ನು ತೆರೆದಿಟ್ಟು ತನ್ನ ಸಹೃದಯೀ ಪ್ರತಿಕ್ರಿಯೆಗಳನ್ನು ಈ ಅಂಕಣಗಳ ಮೂಲಕ ಹೊರಗೆಡಹಿದ್ದಾರೆ. ಇಲ್ಲಿ ಹಾಸ್ಯವಿದೆ, ವಿಡಂಬನೆ ಇದೆ, ಆದೇಶವಿದೆ, ಸಂದೇಶವಿದೆ, ರೋಚಕತೆ ಇದೆ, ರಸಿಕತೆಯೂ ಇದೆ. ಬರಹಗೆಳಿಗೆ ತಮ್ಮ ರೇಖೆಗಳಿಂದ ಜೀವ ತುಂಬಿದ್ದಾರೆ ವ್ಯಂಗ್ಯ ಚಿತ್ರಕಾರ ಜೀವನ್. ಮುಖಪುಟದಲ್ಲಿ ಜೇಮ್ಸ್ ವಾಜ್ ತನ್ನ ಕೈಚಳಕ ತೋರಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಾಡಿನ ಖ್ಯಾತ ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆಯ ಮೆಚ್ಚುಗೆಯ ಮುನ್ನುಡಿ ಇದೆ. ಮಂಜುನಾಥ ಭಟ್ ರ ಈ ಚೊಚ್ಚಲ ಸಾಹಸಕ್ಕೆ ಭಲೇ ಎನ್ನಲೇಬೇಕು. ಹೌದು. ನೀವು ಕೊಂಡು ಓದಿ, ಆನಂದಿಸಬಹುದಾದ ಒಳ್ಳೆಯ ಕೃತಿ  ಎಂಥ ಮಾರಾಯ್ರೆ.

-ಕು ಗೋ

ಬೆನ್ನುಡಿಯಿಂದ

 

3 ಟಿಪ್ಪಣಿಗಳು (+add yours?)

 1. Dr.Gopalkrishna.M.Gaonkar
  ಜನ 16, 2011 @ 21:09:21

  PÀÈw, C«¨sÀfvÀ zÀ.PÀ zÀ d£ÀgÀ,ªÀåªÀ¸ÉÜAiÀÄ ¤dgÀÆ¥ÀªÀ£ÀÄß C£ÀĨsÀ«¹ §gÉÀzÀAwzÉ. zÀÆgÀzÀ°è ¤AvÀÄ ºÀ®ªÀ£ÀÄß H»¹PÉÆAqÀÄ,J®èªÀÇ zÀ.PÀ zÀAvÀªÀgÀAvÉ DUÀ¨ÉÃPÀÄ C£ÀÄߪÀAvÀªÀjUÉ AiÉÆÃa¸ÀĪÀAwzÉ. ºÀ¯ªÁgÀÄ M¼ÉîAiÀÄ,eÉÆvÉUÉ PÉlÖ UÀÄtUÀ¼À£ÀÄß GzÁgÀuÉAiÉÆA¢UÉ awæ¸ÀĪÀ ‘JAxÀzÀÄ ªÀiÁgÁAiÉÄæ’ NzÀÄUÀjUÉ RĶPÉÆqÀÄvÀÛzÉ.ªÀÄAdÄ£ÁxÀ. ¨sÀlÖjAzÀ E£ÀÆߺÉZÀÄÑ EAxÀPÀÈw §gÀ¯ÉAzÀÄ D²¸ÀÄvÉÛãÉ.

  ಉತ್ತರ

 2. ಈಶ್ವರ ಭಟ್
  ಜನ 14, 2011 @ 12:29:03

  ಎಂಥ ಮರಾಯ್ರೇ ?. ಕರಾವಳಿ ಜನ ಜೀವನದ ದೈನಂದಿನ ಕಥೆಯನ್ನೇ ಸಾರವಾಗಿ ಕಡಿದಿಟ್ಟ ವ್ಯವಹಾರಿಕ ಅನುಭವವಾಗಿದೆ. ಮನುಷ್ಯ ಕೇವಲ ಜೀವಿಸುವದಕ್ಕೆ ಎಂಥಹ ನಾಟಕಗಳನ್ನು ಮಾಡಿತ್ತಾನೆ ಎಂಬುದನ್ನು ಈ ಕೃತಿ ಸಂಗ್ರಹ ಹೊರಚೆಲ್ಲಿದೆ. ಒಂದು ಉತ್ತಮ ಪ್ರಯೊಗ ಜನರಲ್ಲಿ ಬದಲಾವಣೆ ತರುವಂತಾಗಿದ್ದರೆ ಪುಸ್ತಕ ಪ್ರಕಟನೆಯ ಉದ್ದೇಶ ನೆರವೆರುತ್ತೇನು?. ಇಂಥ ಕೃತಿಗಳು ಮಂಜುನಾಥ ಭಟ್ಟರಿಂದ ಮುಡಿ ಬರಲೀ ಎಂದು ಅಪೇಕ್ಷಿಸುತ್ತೇನೆ. ಎಲ್ಲರೂ ಒಮ್ಮೆ ಓದ ಬೇಕಾದ ಪುಸ್ತಕ . ಒಂದು ಭಾಗದ ಜನಜೀವನ ಪರಿಚಯಿಸುವದರ ಜೊತೆಗೆ ನಮ್ಮಲ್ಲಿಯೂ ಹೀಗೆಯೇ ಎಂಬುದನ್ನು ವರೆಗೆ ಹಚ್ಚಲು ತಲೆ ಸುರು ಮಾಡುತ್ತದೆ. ಚೂರು ಮಂಡೆ ಬಿಸಿ ಮರಾರ್ರೇ…..?

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: