ಪುಟ್ಟ ಸ್ತನಗಳೂ, ದೊಡ್ಡ ದೇಶವೂ…

-ಹರೀಶ್ ಕೇರ

ಬೆಟ್ಟದಡಿ

 

 

 

 

 

 

 

 

 

 

 

 

ಪ್ರತಿವಾರ ಮಿಲಿಯಗಟ್ಟಲೆ ಕೊಲಂಬಿಯನ್ನರು ಟಿವಿ ಧಾರಾವಾಹಿಯೊಂದನ್ನು ನೋಡುತ್ತಾರೆ. ಪುಟ್ಟದಾಗಿರುವ ತನ್ನ ಸ್ತನಗಳನ್ನು ದೊಡ್ಡದಾಗಿಸಿಕೊಳ್ಳಬೇಕೆಂದು ಹಂಬಲಿಸುವ ಟೀನೇಜ್ ಹುಡುಗಿಯೊಬ್ಬಳು ಪಡುವ ವಿವಿಧ ಪಾಡುಗಳೇ ಈ ಸೀರಿಯಲ್ಲಿನ ತಿರುಳು.

ಈಕೆಯ ಹೆಸರು ಕತಲಿನಾ. ಬಡತನದ ಬೇಗೆ, ಶಾಲೆ ಕಲಿತರೂ ಸಿಗದ ಕೆಲಸದಿಂದಾಗಿ ಕತಲಿನಾ, ತನ್ನ ಗೆಳತಿಯರು ಮಾಡಿದ್ದನ್ನೇ ಮಾಡಲು ಬಯಸುತ್ತಾಳೆ. ಆಕೆಯ ಗೆಳತಿಯರು, ಸ್ತನ ಸರ್ಜರಿ ಮಾಡಿಸಿಕೊಂಡು, ಎದೆಯ ಗಾತ್ರ ಹಿಗ್ಗಿಸಿಕೊಂಡಿದ್ದರು. ಅದಕ್ಕೆ ಕಾರಣ, ಗ್ಯಾಂಗ್‌ಸ್ಟರ್ ಯುವಕರು ಅವರನ್ನು ಮೋಹಿಸಿ, ಅವರ ಬಗೆಗೆ ಕಾಳಜಿ ವಹಿಸುತ್ತಾರೆ ಎಂಬ ಆಶೆ.

ಸರ್ಜರಿಗೆ ಹಣ ಬೇಕು. ಅದನ್ನು ಭರಿಸಲು ಕತಲಿನಾ ವೇಶ್ಯಾವೃತ್ತಿಗೆ ಇಳಿಯುತ್ತಾಳೆ. ಆದರೆ, ಅವಳ ಸ್ತನಗಳ ಗಾತ್ರ ಚಿಕ್ಕದು ತಾನೆ ! ಇದರಿಂದಾಗಿ, ಗಿರಾಕಿಗಳೂ ಅವಳೆಡೆಗೆ ಆಕರ್ಷಿತರಾಗುವುದಿಲ್ಲ. ತನ್ನ ಸ್ತನ ದೊಡ್ಡದಾದೊಡನೆ ತನ್ನ ಬದುಕೂ ಈಗಿರುವ ಸ್ಥಿತಿಯಿಂದ ಸ್ವರ್ಗವಾಗಿ ಬಿಡಬಹುದೆಂಬ ಆಸೆಯಿಂದ ಕತಲಿನಾ ತನ್ನ ಯತ್ನ ಮುಂದುವರಿಸುತ್ತಾಳೆ. ಆಕೆಯ ಯತ್ನಗಳೆಲ್ಲ ಆಕೆಯನ್ನು ಇನ್ನಷ್ಟು ಅವಮಾನ, ಹಿಂಸೆಗಳ ಕಡೆಗೆ ಒಯ್ಯುತ್ತವೆ.

ನಿಜಘಟನೆಗಳಿಂದ ಪ್ರೇರೇಪಿತವಾಗಿರುವ ಈ ಸೀರಿಯಲ್ಲಿನ ಹೆಸರು “ವಿದೌಟ್ ಟಿಟ್ಸ್ ದೇರ್ ಈಸ್ ನೋ ಪ್ಯಾರಡೈಸ್.’ ಧಾರಾವಾಹಿಯನ್ನು ಮೆಚ್ಚುವವರೂ ಟೀಕಿಸುವವರೂ ಇಲ್ಲಿದ್ದಾರೆ. “ಈ ಧಾರಾವಾಹಿ ಕೊಲಂಬಿಯಾಕ್ಕೊಂದು ಅವಮಾನ’ ಎಂದು ಗರ್ಜಿಸುವವರಿದ್ದಾರೆ.

ಆದರೆ ಸೀರಿಯಲ್‌ನ ಕರಾಳ ವಿಡಂಬನೆಯಿಂದ ಖುಷಿಪಟ್ಟವರು, “ಇದು ಈ ದೇಶದ ವಿಲನ್‌ಗಳನ್ನು ವಿಡಂಬಿಸುತ್ತಿದೆ’ ಎನ್ನುತ್ತಿದ್ದಾರೆ.ಸುಲಭ ಹಣ ಗಳಿಕೆ ಜನಪ್ರಿಯವಾಗುತ್ತಿರುವ ಈ ದೇಶ ಜಗತ್ತಿನ ಅತಿ ದೊಡ್ಡ ಕೊಕೇನ್ ರಫ್ತುದಾರ. ಮಾದಕ ದ್ರವ್ಯ ವ್ಯವಹಾರದಿಂದ ಸೃಷ್ಟಿಯಾದ ಅಂತರ್ಯುದ್ಧ ನಾಲ್ಕು ದಶಕಗಳಾದರೂ ಮುಂದುವರಿದಿದೆ ಇಲ್ಲಿ. ಈಗಷ್ಟೇ ಕೊಲಂಬಿಯಾ ಚೇತರಿಸಿಕೊಳ್ಳುತ್ತಿದೆ.

ಇಲ್ಲಿನ ಗ್ಯಾಂಗ್‌ಸ್ಟರ್‌ಗಳು “ಟ್ರಾಕ್ವೆಟೋ’ಗಳು ಎಂದೇ ಕುಖ್ಯಾತರು. ಅದಕ್ಕೆ ಕಾರಣ- “ಟ್ರಕ್ವಾ ಟ್ರಕ್ವಾ ಟ್ರಕ್ವಾ’ ಎಂದು ದನಿ ಮಾಡುವ ಅವರ ಅಟೋಮ್ಯಾಟಿಕ್ ರೈಫಲ್‌ಗಳು. ಇವರು ತಮ್ಮ ಪ್ರೇಯಸಿಯರ ಅಂದಕ್ಕೆ, ಸೌಂದರ್‍ಯದ ಸರ್ಜರಿಗಳಿಗೆ ಖರ್ಚು ಮಾಡುವವರು.

ಹಾಗೇ ಇಲ್ಲಿನ ಹುಡುಗಿಯರು ; ಇಂಥ ಒಬ್ಬ ಪಾತಕಿ ತಮ್ಮನ್ನು ಇಟ್ಟುಕೊಳ್ಳಲಿ ಎಂದು ಬಯಸುವವರು.”ಶ್ರೀಮಂತಿಕೆ ನಮ್ಮ ಹುಡುಗಿಯರನ್ನು ಸೆಳೆದುಬಿಟ್ಟಿದೆ. ಇಂಥದ್ದೆಲ್ಲ ಮಾಡುವಂತೆ ಪ್ರೇರೇಪಿಸುತ್ತಿದೆ. ಅದನ್ನು ನಾವು ಗುರುತಿಸುತ್ತಿದ್ದೇವೆ ಅಷ್ಟೆ’ ಅನ್ನುತ್ತಾಳೆ ಸೀರಿಯಲ್ಲಿನ ಒಬ್ಬ ನಟಿ ಮಾರ್ಗರಿಟಾ ರೋಸಾ. ಈಕೆಗೆ ದೊಡ್ಡ ಎದೆಗಳಿವೆ ; ಕತಲಿನಾ ಇವಳನ್ನು ಅನುಕರಿಸಲು ಯತ್ನಿಸುತ್ತಾಳೆ. ಈಕೆ ಕೂಡ ತನ್ನ ೨೮ರ ವಯಸ್ಸಿನಲ್ಲಿ ಎದೆಗೆ ಸರ್ಜರಿ ಮಾಡಿಸಿಕೊಂಡಿದ್ದಳು.

ಸೀರಿಯಲ್ಲಿನ ಮುಖ್ಯ ಪಾತ್ರ, ಗುಸ್ತಾವೋ ಬೊಲಿವರ್ ಎಂಬ ಕಾದಂಬರಿಕಾರ ಬರೆದ ಕಾದಂಬರಿಯ ಮುಖ್ಯ ಪಾತ್ರ. ಆತನ ಕತೆಯ ಕೇಂದ್ರ, ಪಿರೇರಾ ಎಂಬ ನಗರ, ಅಲ್ಲಿನ ೧೪ ವರ್ಷದ ಚಪ್ಪಟೆ ಎದೆಯ ಹುಡುಗಿ. ಕೃತಿ ಬಿಡುಗಡೆಯಾದಾಗ, ಪಿರೇರಾದ ಜನ ಕ್ರುದ್ಧರಾಗಿದ್ದರು ; ಈಗ ಸೀರಿಯಲ್ ಗಾಯಕ್ಕೆ ಉ[ ಎರೆದಂತಾಗಿದೆ. ಪಿರೇರಾದ ವ್ಯವಹಾರಸ್ಥರು ನಗರದ “ಇಮೇಜ್ ಪರಿಪಡಿಸಲು’ ಯತ್ನಿಸುತ್ತಿದ್ದಾರೆ.

ಪಿರೇರಾ ಕೊಲಂಬಿಯಾದ ಕಾಫಿ ಬೆಳೆಯುವ ಪ್ರದೇಶದ ಹೃದಯ, ದೇಶದ ಪ್ರಮುಖ ನಗರ. ಡ್ರಗ್ ಸ್ಮಗ್ಲರುಗಳು, ಕಾಫಿ ಕಾರ್ಮಿಕರು, ಟ್ರಕ್ ಡ್ರೈವರುಗಳು ಸುಂದರ ವೇಶ್ಯೆಯರ ಮೇಲೆ ಹಣ ಚೆಲ್ಲಾಡುವ ಸ್ಥಳ. ಸೀರಿಯಲ್ಲನ್ನು ಸಮರ್ಥಿಸುವವರು, ಇದು ಪಿರೇರಾದಂಥ ನಗರಗಳಲ್ಲಿ ಕತಲಿನಾಳಂಥ ತರುಣಿಯರು ಎದುರಿಸುತ್ತಿರುವ ಸಮಸ್ಯೆಗಳ ದರ್ಶನ ಮಾಡಿಸುತ್ತಿದೆ ಎಂದು ಮೆಚ್ಚಿಕೊಂಡಿದ್ದಾರೆ.

ಇತ್ತ ಕೊಲಂಬಿಯಾದಲ್ಲಿ ನಡೆಯುತ್ತಿರುವ ಕೊಲೆಗಳ ಸಂಖ್ಯೆ, ಬಡತನದಿಂದ ತಪ್ಪಿಸಿಕೊಳ್ಳಲು ಡ್ರಗ್ ಮಾಫಿಯಾ ಸೇರಿಕೊಳ್ಳುತ್ತಿರುವ ಯುವಕರ ಸಂಖ್ಯೆ ಹೆಚ್ಚುತ್ತಿದೆ.ದೊಡ್ಡ ದೇಶ, ಹೆಚ್ಚುತ್ತಿರುವ ಸೌಂದರ್‍ಯ ಸ್ಪರ್ಧೆಗಳು ಮತ್ತು ಸಮಸ್ಯೆಗಳು, ಪುಟ್ಟ ಸ್ತನಗಳ ಹುಡುಗಿಯರು, ಬಾಹುಗಳನ್ನು ಚಾಚಿರುವ ಡ್ರಗ್ ಆಕ್ಟೋಪಸ್, ಪ್ರತಿ ನಗರದಲ್ಲೂ ಭೂಗತ ಮಾಫಿಯಾ, ಚೆಲ್ಲಾಡುತ್ತಿರುವ ಹಣ

…ಥೇಟ್ ಭಾರತದಂತೆ

1 ಟಿಪ್ಪಣಿ (+add yours?)

  1. prakashchandra
    ಜನ 12, 2011 @ 13:09:21

    Nirdhishtavaada sampradaaya, kattupaadu hagoo saamaajika moulyagala arivilladiddare colombiadantha western culture deshagalaadaroo enu maaduthave. janaralli saamaajika prajne beleyabeku.

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: