ಮಲೆಗಳಲ್ಲಿ ಮದುಮಗಳು: ಎಂಥ ಚಾನ್ಸ್ ಕಳಕೊಂಡ್ರಿ ಸಾರ್..

ಬಾ ಹುಲಿಕಲ್ ನೆತ್ತಿಗೆ-14

-ಪ್ರೊ. ಶಿವರಾಮಯ್ಯ

ನಾಯಿ ತನಗೇ ಬೇಕೆಂದು ಮುಕುಂದಯ್ಯ ಒಮ್ಮೆ ಕಟ್ಟಿಹಾಕಿ ‘ಬೆಲ್ಲದ ಪಾಕ ತಿನ್ನಿಸಿದರೆ ಇನ್ನು ಬಿಟ್ಟು ಹೋಗುವುದಿಲ್ಲ’ವೆಂಬ ನಂಬಿಕೆಯ ಮೇರೆಗೆ ಬೆಲ್ಲ ಹಾಕಿದ್ದೆ. ಆದರೂ ಅದು ಕೇರ್ ಮಾಡದೆ ಹಗ್ಗ ಬಿಚ್ಚಿದ ಕೂಡಲೇ ಗುತ್ತಿಯನ್ನು ಹುಡುಕುತ್ತ ಪರಾರಿಯಾಗಿತ್ತು. ತಿಮ್ಮಿ ಗುತ್ತಿಯರಿಬ್ಬರು ಆ ದಿನ ರಾತ್ರಿ ಹುಲಿಕಲ್ಲುನೆತ್ತಿಯ ಕಾವಲು ಮಂಟಪದಲ್ಲಿ ತಂಗಿದ್ದಾಗ ಕುರ್ಕನ ಜೊತೆ ಹೋರಾಡಿ, ಅದು ಒಕ್ಕಣ್ಣನಾಗಿದ್ದರೂ ಅವನ ಸಂಗಾತಿಯಾಗಿಯೇ ಬರುತ್ತಿತ್ತು.

ಗುತ್ತಿ ಇಲ್ಲದೆ ನಾಯಿಯನ್ನು ನಾಯಿ ಇಲ್ಲದೆ ಗುತ್ತಿಯನ್ನು ಕಲ್ಪಿಸಿಕೊಳ್ಳುವುದಕ್ಕೂ ಆಗದು. ಕಡೆಯಲ್ಲಿ ಕಾನೂರು, ಮುತ್ತಳ್ಳಿ ಮುಂತಾದ ಕಡೆಗೆ ಹೋಗುವ ಗೌಡರೊಂದಿಗೆ ತಿಮ್ಮಿ ಮತ್ತು ಗುತ್ತಿಯರು ತುಂಗಾ ಪ್ರವಾಹವನ್ನು ದಾಟುವರಾದರೂ, ಅವನೆಷ್ಟೇ ಅಂಗಲಾಚಿದರೂ ಅಂಬಿಗ ಹುಲಿಯನನ್ನು ದೋಣಿ ಹತ್ತಿಸದಿದ್ದಾಗ, ಒಂಟಿ ಕಣ್ಣಿನ ನಾಯಿ ಈಜಲು ಹೋಗಿ ಪ್ರವಾಹದಲ್ಲಿ ಕೊಚ್ಚಿ ಹೋಗುವುದು, ಅದನ್ನು ಗುತ್ತಿಕಣ್ಣಾರೆ ಕಂಡು ಚಿಂತಾಕ್ರಾಂತನಾಗಿ ಅಸಹಾಯಕ ಸ್ಥಿತಿಯಲ್ಲಿ ಉಳಿಯುವುದು ಇತ್ಯಾದಿ ಕರುಣಾಜನಕ ದೃಶ್ಯ ಕಂಡಾಗ ಜನಪದ ಮಹಾಭಾರತದ ಸೋಗರ್ಾರೋಹಣ ಪರ್ವ ನೆನಪಾಗುತ್ತದೆ.

(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)

ಜನಪದ ಗಾಯಕಕವಿ ಬೆಟ್ಟದ ಬೀಡು ಸಿದ್ದಶೆಟ್ಟರಿಂದ ಹೇಳಲ್ಪಟ್ಟು ಪಿ.ಕೆ.ರಾಜಶೇಖರ ಅವರಿಂದ ಸಂಪಾದಿಸಲ್ಪಟ್ಟಿರುವ ಜನಪದ ಮಹಾಭಾರತದ ಸೋಗರ್ಾರೋಹಣ ಪರ್ವದಲ್ಲಿ ಧರ್ಮರಾಯನನ್ನು ಸ್ವರ್ಗಕ್ಕೆ ಕರೆತರಲು ಪರಮಾತ್ಮ ಪುಷ್ಪಕವಾಹನವನ್ನು ಕಳುಹಿಸುತ್ತಾನೆ. ಚಾರಕರು ಹಾಗೆಂದು ಹೇಳಿದ ಕೂಡಲೇ ಧರ್ಮರಾಯ ಕಡೆಯವರಿಗೂ ತನ್ನನ್ನು ಹಿಂಬಾಲಿಸಿ ಬಂದಿದ್ದ ನಾಯಿಮರಿಯನ್ನೂ ಎತ್ತಿ ಕಂಕುಳಲ್ಲಿರಿಸಿಕೊಂಡು ವಾಹನ ಹತ್ತಲು ಉಪಕ್ರಮಿಸುವನು. ಆದರೆ ದೇವದೂತರು ಆತನನ್ನು ತಡೆದು ಸ್ವಾಮಿಗಳೇ ನೀವೋಬ್ಬರಲ್ಲದೆ ಈ ನಾಯಿಮರಿಯ ಕರ್ಕೊಂಡ್ಬರಕೆ ಆಡ್ರಾಗಿಲ್ಲ ಎನ್ನುವರು.

ಆಗ ಧರ್ಮರಾಯ ಹಾಗಾದ್ರೆ ನಿಮ್ಮ ಪುಷ್ಪಕ ವಾಹನವನ್ನು ಹಿಂದಕ್ಕೆ ತಗೊಂಡು ಹೋಗಿ ನಾನು ಬರಲಾರೆ ಎನ್ನುವನು. (ಜಾನಪದ ಮಹಾಭಾರತ ಪು-605) ಆದರೆ ಆ ಪುರಾಣದ ಧರ್ಮರಾಯನಂತೆ ಎದುರಾಡುವ ಭಾಗ್ಯ ಈ ಹೊಲಯ ಗುತ್ತಿಗೆ ಇಲ್ಲ. ಪೋಲೀಸ್ ಕೇಸ್ನಲ್ಲಿ ಸಿಕ್ಕಿ ಬಿದ್ದು ತಲೆ ಮರೆಸಿಕೊಂಡು ಹೊರಟಿರುವಾಗ, ತನ್ನ ಕಳ್ಳುಬಳ್ಳಿ ಕಾಡುಪರಿಸರದಿಂದ ದೂರವಾಗಿ ಹೋಗುತ್ತಿರುವಾಗ ಅವನನ್ನು ಕೇಳುವವರಾರು? ಹೀಗೆ ಮಲೆನಾಡು ಪ್ರಾಂತ್ಯಕ್ಕೆ ಮನುಷ್ಯನನ್ನು ಅನಾಥಗೊಳಿಸುವ ನಗರನಾಗರೀಕತೆ ಪ್ರವೇಶಿಸುತ್ತಿತ್ತು. ಹುಲಿಕಲ್ಲು ಗುಡ್ಡದಲ್ಲಿ ಹೆಬ್ಬುಲಿಯ ಆರ್ಭಟಕ್ಕೆ ಹೆದರದ ಆ ಬೆಟ್ಟ ಬಂಡೆಯಂತಹ ಗುತ್ತಿ ಕಾನೂರು ಚಂದ್ರೇಗೌಡರ ದರ್ಪದ ಮುಂದೆ ಬಾಲ ಮುದುರಿದ ನಾಯಿಕುನ್ನಿಯಂತಾಗಿ ಬಿಡುತ್ತಾನೆ. ಕಾನೂರಿಗೆ ಹೋದ ಮೇಲೆ ಅವನ ಅಸ್ತಿತ್ವವೇ ಕಳೆದು ಹೋಗುತ್ತದೆ -ಅವನ ಹುಲಿಯನ ಹಾಗೆಯೇ ಎಂಬುದನ್ನು ಕಾನೂರು ಹೆಗ್ಗಡತಿಯ ಓದುಗರು ಬಲ್ಲರು.

ಹುಲಿಕಲ್ಲು ನೆತ್ತಿ ಹತ್ತುವುದೆಂದರೆ ಕನ್ನಡ ಸಾಹಿತ್ಯಲೋಕದ ಒಂದು ಮಹಾ ಪಯಣ. ಅಲ್ಲಿಗೆ ಹತ್ತಿದವರು ತಿಮ್ಮಿ ಗುತ್ತಿ, ಐತ ಪೀಂಚಲು, ಚಿನ್ನಮ್ಮ-ಮುಕುಂದಯ್ಯ ಮತ್ತು ಗುತ್ತಿಯ ನಾಯಿ ಹುಲಿಯ ಮಾತ್ರ. ಈ ಅಭೇದ ರೂಪಕವನ್ನು ವರ್ತಮಾನಕ್ಕೆ ವಿಸ್ತರಿಸುವುದೇ ಮದುಮಗಳು ರಂಗರೂಪ. ಇದೇ ಬಸವಲಿಂಗಯ್ಯನವರ ಉದ್ದೇಶ ಅವರ ತಣಿಯದ ಕಾರ್ಯತತ್ಪರತೆಯ ಪರಿಣಾಮ ಮಲೆಗಳಲ್ಲಿ ಮದುಮಗಳು ಎಂಬ ಈ ಬೃಹತ್ ಮನೋರಮ ನಾಟಕ ರಂಗದ ಮೇಲೆ ನೋಡಿ ನಾಗರಿಕರು ಮೆಚ್ಚಿಕೊಂಡಾಗ ಮಾತ್ರ ನನ್ನಶ್ರಮ ಸಾರ್ಥಕ ಎಂದು ಅವರು ಆಗಾಗ ಹೇಳುತ್ತಿದ್ದರು. ಆಮೇಲೆ ನಾಟಕ ನೋಡಿದ ಜನ ಹಿಗ್ಗಿ ಕೈವಾರಿಸಿದ್ದಾರೆ. ಕನ್ನಡ ಸಾಂಸ್ಕೃತಿಕ ಲೋಕದ ಒಂದು ಚಾರಿತ್ರಿಕ ಘಟನೆ.

ನಾಟಕ ವಿಮಶರ್ೆ

ಮದುಮಗಳು ನಾಟಕ ಏಪ್ರಿಲ್-23ರಂದು ಸೆಟ್ ಏರುವುದಿತ್ತು. ನಾನು, ನಾರಾಯಣ ಸ್ವಾಮಿ ಏಪ್ರಿಲ್-15ರಂದು ಮೈಸೂರಿಗೆ ಹೋಗಿದ್ದಾಗ ಕೆಲವು ದೃಶ್ಯಗಳ ಪ್ರಾಕ್ಟೀಸ್ ನೋಡಿಬಂದೆವು. ಆದರೆ ಅಷ್ಟರಲ್ಲಿ ನಾನು ಅನಿವಾರ್ಯ ಕಾರಣದಿಂದ ಏಪ್ರಿಲ್-17ರಂದೇ ಅಮೆರಿಕಾಕ್ಕೆ ಹೋಗಬೇಕಾಯಿತು. ಜೂನ್ 3ಕ್ಕೆ ನಾನು ಹಿಂದಿರುಗುವಷ್ಟರಲ್ಲಿ ನಾಟಕ ನೋಡಿದವರು ಪತ್ರಿಕೆಗಳಿಗೆ ಬರೆದ ಪ್ರತಿಕ್ರಿಯೆ ಬರಹಗಳನ್ನು ನೋಡಿದೆ. ಬಹಳ ಮಟ್ಟಿಗೆ ಎಲ್ಲರೂ ನಾಟಕವನ್ನು ಕೊಂಡಾಡಿ, ಬಸವಲಿಂಗಯ್ಯನವರ ಣಒತಿಜ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಬೆಂಗಳೂರಿನಲ್ಲಿ ಜಿ.ಕೆ.ಗೋವಿಂದರಾವ್, ಕ.ವೆಂ.ರಾಜಗೋಪಾಲ್. ಕೆ.ಮರುಳಸಿದ್ಧಪ್ಪ ಕಿ.ರಂ.ನಾಗರಾಜ ಮುಂತಾದವರನ್ನೊಳಗೊಂಡ ‘ಮದುಮಗಳು: ರಂಗರೂಪ ಒಂದು ಸಂವಾದ’ ನಡೆಯಿತು.

ಸಾಮಾನ್ಯವಗಿ ಒಂದೆರಡು ಅಪವಾದಗಳನ್ನು ಬಿಟ್ಟರೆ ಎಲ್ಲರೂ ನಾಟಕವನ್ನು ತುಂಬು ಹೃದಯದಿಂದ ಮೆಚ್ಚಿಕೊಂಡರು. ಕನರ್ಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ‘ಮದುಮಗಳು ನಾಟಕ ಒಂದು ಅನನ್ಯ ಘಟನೆ’ ಎಂದು ಜಿ.ಕೆ.ಜಿ.ಅವರೆಂದರೆ, ಇದೊಂದು ‘ಅಪೂರ್ವ ರಂಗಕೃತಿ’ ಎಂದು ಕೆ.ಎಂ.ಎಸ್. ಹೊಗಳಿದರು. ಹಿರಿಯರಾದ ಕ.ವೆಂ.ರಾಜಗೋಪಾಲ್ ‘ಮಲೆಗಳಲ್ಲಿ ಮದುಮಗಳು ಇಂಗ್ಲಿಷಿನಲ್ಲಿ ಬಂದಿದ್ದರೆ ನೋಬಲ್ ಬಹುಮಾನದಿಂದ ಪುರಸ್ಕೃತವಾಗುತ್ತಿತ್ತು. ಅಂಥ ಒಂದು ಮಹತ್ಕೃತಿಯನ್ನು ಕನ್ನಡಕ್ಕೆ ಕೊಟ್ಟ ಕುವೆಂಪು ಅದ್ಭುತ ಚೇತನ.

ಅದನ್ನು ಓದಿದ, ರಂಗರೂಪ ನೋಡಿದ ಸಹೃದಯರು ಧನ್ಯರು’ ಎಂದು ಮನತೆರೆದು ಮಾತನಾಡಿದರು. ಡಾ.ರಹಮತ್ ತರೀಕೆರೆ, ಡಾ.ಜಿ.ಆರ್. ತಿಪ್ಪೇಸ್ವಾಮಿ, ಡಾ.ಎ.ಆರ್. ಗೋವಿಂದಸ್ವಾಮಿ ಮುಂತಾದವರು ಮೆಚ್ಚಿ ಬರೆದ ಲೇಖನಗಳನ್ನೂ, ನಿದರ್ೆಶಕ ಬಸವಲಿಂಗಯ್ಯನವರು ‘ಮದುಮಗಳು ರಂಗರೂಪ ಹುಟ್ಟಿದ’ ಬಗೆಗಿನ ಸಂದರ್ಶನವನ್ನೂ, ರಂಗರೂಪಕ್ಕೆ ಅಳವಡಿಸಿದ ಡಾ.ಕೆ.ವೈ.ನಾರಾಯಣ ಸ್ವಾಮಿಯವರ ಪ್ರತಿಕ್ರಿಯೆಯನ್ನೂ ಸಂಗ್ರಹಿಸಿ ಸಂಸ ಎಂಬ ರಂಗಕ್ರಿಯೆಗೆ ಮೀಸಲಾದ ಮಾಸಪತ್ರಿಕೆಯು (ಸಂಪುಟ-7, ಸಂಚಿಕೆ 10, ಮೇ 2010) ‘ರಂಗಾಯಣದಲ್ಲಿ ಮದುಮಗಳು: ಒಂದು ಜೀವಂತ ದೃಶ್ಯಕಾವ್ಯ’ ಎಂದು ಹೊಗಳಿ, ಸುರೇಶ ಸಿ.ಎಂ. ಅವರ ನೇತೃತ್ವದಲ್ಲಿ ಪ್ರಕಟವಾಯಿತು.

ಆದರೆ ನನಗೆ ಮಾತ್ರ ನಾಟಕ ನೋಡುವ ಅದೃಷ್ಟ ಇದ್ದಿರಲಿಲ್ಲ: ಇನ್ನೆಂದಾದರೊಮ್ಮೆ ಆಡಬಹುದೇ ಎಂದು ಕಾಯುತ್ತಿದ್ದೇನೆ. ನನ್ನಂಥ ಇನ್ನೂ ಅನೇಕ ಜನರಿದ್ದಾರೆ. ಸಕರ್ಾರ ಮತ್ತು ಸಂಬಂಧ ಪಟ್ಟ ಸಂಸ್ಕೃತಿ ಮಂತ್ರಿಗಳು ಅಧಿಕಾರಿಗಳು ಜನರ ಬಯಕೆಯನ್ನು ಮನ್ನಿಸಬೇಕು. ಅದಿರಲಿ. ನಾನು ಅಮೆರಿಕಾದಿಂದ ಬಂದಕೂಡಲೇ ಬೈರೇಗೌಡರು ‘ಎಂಥ ಚಾನ್ಸ್ ಕಳಕೊಂಡ್ರಿಸಾರ್, ಶತಮಾನದ ನಾಟಕ ನೋಡುವ ಅದೃಷ್ಟ ತಪ್ಪಿ ಹೋಯಿತು; ಆ ಮಂಜುನಾಥ ಬೆಳಕೆರೆ ವೆಂಕಟಣ್ಣನ ಪಾತ್ರ ನೋಡಬೇಕಿತ್ತು ಗುತ್ತಿ ನಾಯಿ (ಅನಿಲ್)ಯನ್ನಾದರೂ ಕಾಣಬೇಕಿತ್ತು’ ಹೀಗೆ ಹೇಳುತ್ತಾ ಹೋದರು. ಈ ಪ್ರಶಂಸೆಯನ್ನು ಕೇಳಿ ಕೇಳಿ ಒಳಗೊಳಗೆ ನೋಡದಿರುವುದಕ್ಕೆ ಬೇಸರವಿದ್ದರೂ ಕರತಲರಂಗಭೂಮಿಯಲ್ಲಿ ನಾನು ಮದುಮಗಳು ಕೃತಿಯನ್ನು ಸದಾ ಇಟಿರಿಠಥಿ ಮಾಡುತ್ತಿದ್ದೇನೆ ಗೊತ್ತಾ? ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದೆಲ್ಲಾ ಅವರನ್ನು ಸುಮ್ಮನಿರಿಸಲು ಪ್ರಯತ್ನಿಸುತ್ತಿದ್ದೇನೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: