ನ್ಯೂತನ ಹರ್ಷದ ಎಕ್ಸ ಪ್ರಶ್ನೆ-ವೈಯಾನ್ಸರ್

-ಸೂತ್ರಧಾರ ರಾಮಯ್ಯ

ಎಕ್ಸ್: ಲೆಟ್ ದ ಬೈಯ್ಯರ್ ಬಿವೇರ್. ಇದರ ಆಧುನಿಕ ಕನ್ನಡ ಅನುವಾದವೇನು?

ವೈ : ಪದಾರ್ಥಗಳನ್ನು ಎಚ್ಚರಿಕೆಯಿಂದ ತೆಗೆದು’ಕೊಳ್ಳ’ಬೇಕು, ಅನ್ನೋದು ಇಂಗ್ಲಿಷ್ ಸೂತ್ರ. ಆದರೆ ಇತ್ತೀಚಿಗೆ ರಾಜಕಾರಣದಲ್ಲಿ ನಡೆದಿರುವ ಎಕ್ಸ್ಚೇಂಜ್ಗಳನ್ನು ಕೇಳಿದರೆ , ಎದುರಾಳಿಗಳನ್ನು ಬಯ್ಯುವವರು ಎಚ್ಚರದಿಂದಿರಬೇಕು, ಇಲ್ಲಾ, “ತಕ ‘ನಿಂದನೆ’ ನಿನಗೆ” ಅಂತಾ ವಾಪಸ್ ತಿರುಗಿಸಿ ಬಯ್ಯುತ್ತಾರೆ ಎಂದನುವಾದಿಸಬಹುದು.ಇದೊಂಥರಾ auction ಅಂಡ್ ರಿಯಾಕ್ಷನ್ ಈಸ್ ಈಕ್ಬಲ್ ಅಂಡ್ ಆಪೋಜಿಟ್ ಅನ್ನೋ ನ್ಯೂ ಟನ್ ವಾದದ ಹಾಗೆ.

ಎಕ್ಸ್: ಅಧಿಕಾರದಲ್ಲಿದ್ದಾಗ ಅಧಿಕ ಕಾರ! ಬಕ್ಕಳಿಸಿ ತಿನ್ನೋದು. ಅಪರಾಧಿ ಮನೋಭಾವ ಹೆಚ್ಚಾದಾಗ, ಸಾರ್ವಜನಿಕ ಸಭೆಗಳಲ್ಲೇ ಬಿಕ್ಕಳಿಸಿ ಅಳುವುದು! ಹಾಗೆ, ಬಡಜನರನ್ನು , ರೈತರನ್ನು ಓಲೈಸುವ ನಾಟಕವಾಡೋದು! ಇವೆಲ್ಲ ಅನೂಚಾನವಾಗಿ ರಾಜ್ಯದಲ್ಲಿ ನಡೆದು ಬ( ರು)ತ್ತಲೇ ಇದೆ; ಮುಚ್ಚು ಮರೆಯಿಲ್ಲದೆ! ಇಂತಹಾ ವೈರುಧ್ಯಕ್ಕೆ ಏನಂತೀರಾ- ವೈ ಯಾಕರಣಿಗಳೇ?

ವೈ: ದ CRY ಸಿಸ್ ಆಫ್ ಕರ್ ನಾಟಕಾ

ಎಕ್ಸ್: ಬಿಹಾರದ ನಿತೀಶ್ ಕುಮಾರ್ ಅವರ ಅಭಿವೃದ್ಧಿ ಪಾಲಿಸಿಗಳನ್ನು ಅನು’ ಮೋದಿ’ ಸುವವರ ಕುರಿತು ನಿನ್ನ ಪ್ರತಿಕ್ರಿಯೆ?

ವೈ: ಪುತ್ರ ಪುತ್ರಿ ಅಳಿಯಾಭಿವೃದ್ಧಿ ಅನುವ ‘ಉರಿ’ಯಾಳುಗಳ ಬದಲು, ಬ್ರಹ್ಮಚಾರಿಗಳಿಗೆ ಅಥವಾ ಮದುವೆ ಯಾಗದ ಹುರಿಯಾಳುಗಳಿಗೆ ಮತ ಕೊಡಿ- ಸ್ಕ್ಯಾಮುಗಳನ್ನ ದೂರ ಇಡಿ.

ಎಕ್ಸ್: ಡಬಲ್ ನೆಗೆಟಿವ್ ಮೇಕ್ಸ್ ಒನ್ ಪಾಸಿಟಿವ್ ಅನ್ನೋ ವೈಚಿತ್ರ, ಭಾಷೆಗೂ ಅನ್ವಯಿಸುತ್ತದೆ. ಉದಾಹರಣೆ ಸಹಿತ ವಿವರಿಸು.

ವೈ : ಇಷ್ಟರಲ್ಲೇ ಭ್ರಷ್ಟಾಚಾರವನ್ನು ( ಮಾಡೋದು ಅಷ್ಟರಲ್ಲೇ ಅಂತ ಗೊತ್ತಿದ್ದೂ), ಮಾಮೂಲು ಪುರುಷರನ್ನು ನಿರ್ಮೂಲ ಮಾಡುತ್ತೇವೆ. ಆದ್ದರಿಂದ ಮಹಾಜನರೇ ‘ಡೋಂಟ್ ವರಿ ಮಾಡ್ಕೋಬೇಡಿ’ ( ವರಿ ಮಾಡ್ಕೊಳ್ಳಿ?), ನಿಮ್ಮ ಸರ್ಕಾರಿ ಕೆಲಸಗಳಿಗೆ, ಶೇವೆಗಳಿಗೆ ನೀವೇನು ಕೊಡಬೇಕಾಗಿಲ್ಲ. ‘ನತಿಂಗ್ ಈಸ್ ನಾಟ್ ನೆಸೆಸ್ಸರಿ’ (ಅರ್ಥಾತ್-ಸಂಥಿಂಗ್ ಈಸ್ ನೆಸೆಸ್ಸರಿ ?) ‘ಸಂಥಿಂಗ್ ಈಸ್ ರಾಟನ್ ಇನ್ ದ ಸ್ಟೇಟ್ ಆಫ್ ಡೆನ್ಮಾರ್ಕ್’ ಅಂತ ಶೇಕ್ಸ್ಪಿಯರ್ ಹೇಳಿದ ಹಾಗೆ. ಇನ್ನು ಶೀಪ್ ಮಾರ್ಕ್ ಕೇಳಬೇಕೆ?

ಎಕ್ಸ್: ಕೈ ಕಮಾಂಡ್ಗು, ಕಮನ್ದಲ್ ಕಮಾನ್ಡಿಗು ನಡುವೆ ವ್ಯತ್ಯಾಸವೇನು?

ವೈ: ಕೈ ಕಮಾನ್ಡಿಗೆ Aರಾಜರ, ಮು.ಮಂತ್ರಿಗಳ ತಲೆ ದಂಡವಾಗಿ ಉರುಳಿದರು! ಅದರ ಮುಂದೆ, ಕಮನ್ದಲ್ ಕಮಾಂಡ್ ಡಲ್- ಉಳಿದರು A ಡ್ಯೂರಪ್ಪ !

ಎಕ್ಸ್: ಚಕೋರಂಗೆ ಚಂದ್ರಮನ ಬೆಳದಿಂಗಳ ಚಿಂತೆ. ಇದಕ್ಕೆ ಇನ್ನೊಂದರ್ಧ ಜೋಡಿಸು.

ವೈ: ಲಂ ಚಕೋರಂಗೆ ತಿಂಗಳ ಪಗಾರದ ಜೊತೆ ನಿತ್ಯ ಗಿಂಬಳದ ಚಿಂತೆ!

ಎಕ್ಸ್: ಸಾಹೇಬರು ಆಫೀಸಿನಲ್ಲಿ ಅದೇನು ಅಧಿಕಾರ ಚಲಾಯಿಸ್ತಾರೆ ಅಂತೀನಿ! ಕೈ ಕೆಳಗಿನವರಿಗೆ ಆರ್ಡರ್ ಮಾಡಿದ್ರೆ, ಎಕೋ ( ECHO) ಆಗುತ್ತೆ- ಪ್ರತಿಧ್ವನಿ!

ವೈ: ಆದರೆ ಪಾಪ! ಮನೇಲಿ ಅಮ್ಮಾವ್ರ ಎದರು, ‘ಪತಿ ಧ್ವನಿ’ಯೇ ಕೇಳಿಸಲ್ಲ ಅಂತಾರಲ್ಲ ನೆರೆಹೊರೆ ಜನ?

ಎಕ್ಸ್: ‘ಅನೀಸಿ ಲೈಸ್ ದ ಹೆಡ್ ದತ್ ವೇರ್ಸ್ ದ ಕ್ರೌನ್” ಅಂತಾರಲ್ಲ, ಹ್ಯಾಗೆ?

ವೈ: ಖುಲ್ ಜಾ ಸಿಮ್ ಸಿಮ್-ಪಲ್. ಕಿ ರೀ ಟ= ಕಿರಿ ಕಿರೀ, ಒಳಗೊಳಗೆ ಕೀಟ ಬಾಧೆ!

ಎಕ್ಸ್: ದೇವರು ಇರೋ ಕಡೆ, ದೆವ್ವಗಳು ಇರೋ ವೈಚಿತ್ರ ಬಿಡಸ್ತೀಯ ಸ್ವಲ್ಪ!

ವೈ : ರಾಮಯ್ಯಾಜುಲು ಒಬ್ಬ ದೈವಾಂಶ ಸಂ ಭೂತ!

END ಗುಟುಗು

ನರಸಿಂಹ ರಾಜು: ಕೆಲವು ಆಧುನಿಕ ಬುದ್ಧಿ ಜೀವಿಗಳು ಸಮಾಜದ ವೈಪರೀತ್ಯದ ಬಗ್ಗೆ ಪತ್ರಿಕೆಗಳ ಮೂಲಕ ಸಮರ ಸಾರುತ್ತಾರೆ. ಆದರೆ, ರಂಗಕ್ಕೆ ಇಳಿದು ಸಮಸ್ಯೆಯ ಬಳಿ ಸಾರುವುದಿಲ್ಲ.ಯಾಕೆ?

ಬಾಲಕೃಷ್ಣ: ಯಾಕಂದ್ರೆ,ವಾಕ್ ಸ್ವಾತಂತ್ರ ತಮ್ಮ ‘ಆ ಜನ್ಮ’ ಸಿದ್ಧ ಹಕ್ಕುಎಂದು ತಿಳಿದಂತೆ, ವಿವಾದ ಸ್ತಳದಿಂದ ವಾಕ್ ಔಟ್ ಸ್ವಾತಂತ್ರವು ತಮ್ಮ ‘ಈ ಜನ್ಮ’ ಸಿದ್ಧ ಹಕ್ಕು, ಆದರೆ ಮೈದಾನದ ಹೋರಾಟ ತಮ’ಗಲ್ಲ’ ಎಂದು ಗಡ್ಡಕ್ಕೆ ಕೈ ತರುತ್ತಾರೆ ; CHIN ತಕರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: