ಇಂದಿನ ನಾಟಕ

ನಾಟಕ ಬೆಂಗ್ಳೂರು 2010 ಉತ್ಸವದಲ್ಲಿ

ಸ್ನೇಹರಂಗ ಬೆಂಗಳೂರು ಅಭಿನಯಿಸುವ ನಾಟಕ
ಕುದುರೆ ಬಂತು ಕುದುರೆ
ರಚನೆ: ರಾಮಚಂದ್ರ ದೇವ
ನಿರ್ದೇಶನ : ಎನ್.ಮಂಗಳಾ

ನಾಟಕದ ಬಗ್ಗೆ

ವಾಸ್ತವ ಬದುಕಿನ ಹಲವಾರು ಸಿಕ್ಕುಗಳಲ್ಲಿರುವ ಇಲ್ಲಿನ ಎಲ್ಲಾ ಪಾತ್ರಗಳು ವಾಸ್ತವವನ್ನು ಎದುರಿಸಲು ತಮ್ಮದೇ ಆದ ಕನಸುಗಳ ಜೊತೆ ಭ್ರಮೆಯ ಕುದುರೆಯನ್ನೇರಿ ಸಾಗುತ್ತಿರುವವರು. ಗಂಡನಿಗಾಗಿ ಕಾಯುವ ಹೆಂಡತಿ, ಅಪ್ಪನಿಗಾಗಿ ಕಾಯುವ ಮಗ, ಇಲ್ಲದ ಸಂಬಂಧಗಳನ್ನು ಇದೆ ಎಂದು ಭ್ರಮಿಸಿ ಸುಖಿಸುವ ಪೋಸ್ಟ್ ,ಮ್ಯಾನ್ , ಛಿದ್ರವಾಗಿರುವ ಸಂಸಾರವನ್ನು ಕಟ್ಟಿಕೊಳ್ಳುತ್ತೇನೆ ಎಂಬ ನಂಬಿಕೆಯಲ್ಲಿ ತೇಲುವ ಕ್ಲರ್ಕ್ಕ ದೊಡ್ಡ ಹೀರೊ ಆಗಿಬಿಡಬೇಕೆಂಬ ಮಹತ್ವಾಕಾಂಕ್ಷೆಯಲ್ಲಿ ಸಂಸಾರ ನಿರ್ಲಕ್ಷಿಸಿರುವ ನಟ-ಎಲ್ಲರು ತುಡಿಯುತ್ತಿರುವುದು ಒಂದು ಸುಂದರ ಬದುಕಿಗಾಗಿ.

ಅದಕ್ಕಾಗಿ ಅವರೆಲ್ಲರೂ ಕನಸೆಂಬ ಕುದುರೆಯನ್ನೇರಿ ಪಯಣಿಸುತ್ತಿರುವ ಸವಾರರು. ಎಲ್ಲಾ ಕಾಲಕ್ಕೂ ಭೂತ, ಭವಿಷ್ಯಗಳು ಜನರನ್ನು ವಿನಾಶದ ಆತಂಕದಲ್ಲಿ ಮುಳುಗಿಸುತ್ತಾ ವರ್ತಮಾನವನ್ನು ಅಸಹನೀಯಗೊಳಿಸಿ ಬಿಡುತ್ತದೆ. ಅದನ್ನು ಎದುರಿಸಲಾಗದೆ ಭ್ರಮಾ ಲೋಕಕ್ಕೆ ಜಾರಿಕೊಳ್ಳುವವರ ಬದುಕಿನ ಹರವು ಈ ನಾಟಕ.

ನಿರ್ದೇಶಕರ ಬಗ್ಗೆ

ಕುದುರೆ ಬಂತು ಕುದುರೆ ನಾಟಕದ ನಿರ್ದೇಶಕರಾದ ಶ್ರೀಮತಿ.ಎನ್.ಮಂಗಳಾ ಅವರು ಕನ್ನಡ ಸಾಹಿತ್ಯದಲ್ಲಿ ಎಂ.ಎ ಮಾಡಿ ಸಮುದಾಯದ ಮೂಲಕ ನಾಟಕ ರಂಗಕ್ಕೆ ಪಾದಾರ್ಪಣೆ ಮಾಡಿದರು. ರಂಗಾಯಣದಲ್ಲಿ ಬಿ.ವಿ.ಕಾರಂತರ ಗರಡಿಯಲ್ಲಿ ನಾಟಕ ಕಲಿಕೆಯ ಹಲವು ಸಾಧ್ಯತೆಗಳ ಬೆಳಕಿಗೆ ತೆರೆದುಕೊಂಡವರು. ಅಲ್ಲಿಯೇ ಹದಿಮೂರು ವರ್ಷಗಳಕಾಲ ರಂಗ ಕಲಾವಿದೆಯಾಗಿ ಕೆಲಸ ನಿರ್ವಹಿಸಿದ್ದಾರೆ. ಕಳೆದ ಎರಡು ದಶಕಗಳಿಂದ ರಂಗಭೂಮಿಯಲ್ಲಿ ನಟಿಯಾಗಿ ನಿದರ್ೇಶಕರಾಗಿ ವಸ್ತ್ರ ವಿನ್ಯಾಸಕರಾಗಿ ಹಲವಾರು ನಾಟಕಗಳನ್ನು ಮಕ್ಕಳಿಗಾಗಿ ಮತ್ತು ವಯಸ್ಕರಿಗಾಗಿ ನಿರ್ದೇಶಿಸಿದ್ದಾರೆ. ಮಂಗಳಾ ಅವರು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಕೇಂದ್ರದಿಂದ ಜೂನಿಯರ್ ಮತ್ತು ಸೀನಿಯರ್ ಫಲೋಷಿಪ್ಗಳನ್ನ ಪಡೆದಿದ್ದಾರೆ. ಪ್ರಸ್ತುತ ಸಂಚಾರಿ ಥಿಯೇಟ್ರು ತಂಡದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

ತಂಡದ ಬಗ್ಗೆ
ಚಿಂತೆಗಳ ಸಂತೆಯಲಿ ಕಳೆದುಹೋದ ಬದುಕುಗಳ ನಡುವೆ ನಾಟಕದ ಬಗ್ಗೆ ಒಲವು ಮೂಡಿರುವುದು ಅಪರೂಪದ ಸಂಗತಿ. ಜೀವಂತ ಕೃತಕ ಭಾವನೆಗಳ ನಡುವೆಯೂ ಹೊಸತಾದ ಪ್ರಯೋಗಗಳನ್ನು ಮಾಡಬೇಕು ಆ ಮೂಲಕ ರಂಗಭೂಮಿಯ ಮೇಲೆ ಹೊಸಬೆಳಕು ಹರಡಬೇಕು, ಹೊಸ ಆಯಾಮಗಳಿಗಾಗಿ ಶ್ರಮಿಸಿ, ನಿರಂತರ ಹರಿವ ನೀರಾಗಬೇಕೆಂಬ ಸಮಾನ ಮನಸ್ಕರ ಒಕ್ಕೂಟರ ತಂಡ ಅತ್ಯಲ್ಪ ಕಾಲದಲ್ಲೇ ಗಣನೀಯ ಪ್ರಗತಿ ಸಾಧಿಸಿರುವುದು ಸಂತಸದ ಸಂಗತಿ.
ಕುದುರೆ ಬಂತು ಕುದುರೆ ಬೆಂಗಳೂರು ಹಬ್ಬದಲ್ಲಿ ಒಂದು ಅಶ್ವಾರೋಹಣ ಕೌತುಕ.

ನಿಮ್ಮ ಟಿಪ್ಪಣಿ ಬರೆಯಿರಿ