ಮಲೆಗಳಲ್ಲಿ ಮದುಮಗಳು : ಪದ್ಯಗಳು ಮೂಡಿ ಬಂದವು …

ಬಾ ಹುಲಿಕಲ್ ನೆತ್ತಿಗೆ-10

-ಪ್ರೊ. ಶಿವರಾಮಯ್ಯ

ಹಾಡುಗಳು

ಮದುಮಗಳು ನಾಟಕದ ಭಾವತೀವ್ರತೆಯನ್ನು ಕಾಯ್ದುಕೊಳ್ಳಲು ಸುಮಾರು 45 ಹಾಡುಗಳನ್ನು ಬಳಸಿಕೊಳ್ಳಲಾಗಿದೆ. ಅವುಗಳಲ್ಲಿ ಕೇವಲ ನಾಲ್ಕು ಪದ್ಯಗಳು ಮಾತ್ರ ಕುವೆಂಪು ಅವರವು. ಉಳಿದಂತೆ 40 ಹಾಡುಗಳನ್ನು ನಾರಾಯಣ ಸ್ವಾಮಿ ರಚಿಸಿದರು; ಹಂಸಲೇಖ ಅವರು ಅವುಗಳನ್ನು ಸಂಗೀತಕ್ಕೆ ಅಳವಡಿಸಿ ಮದುಮಗಳು ರಂಗರೂಪವನ್ನು ಕಟ್ಟಲು ಸಹಕರಿಸಿದರು. ಕೆ.ವೈ.ಎನ್. ಮದುಮಗಳು ಮೈಮೇಲೆ ಬಂದಂತೆ ಹೊತ್ತು ಗೊತ್ತಿಲ್ಲದೆ, ಜೋಷ್ ಬಂದ ಹಾಗೆ ಪದ್ಯದ ಚರಣಗಳನ್ನು ಗುನುಗುನಿಸುತ್ತ ಲ್ಯಾಪ್ ಟಾಪ್ನಲ್ಲಿ ಟೈಪ್ ಮಾಡುತ್ತಿದ್ದ ದೃಶ್ಯವನ್ನು ಕುರಿತು.

(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)

ಹೀಗೆ ಪದ್ಯಗಳನ್ನು ರಚಿಸುವುದಕ್ಕೂ ಮೊದಲು ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ಕುವೆಂಪು ಸಮಗ್ರ ಕಾವ್ಯದ ಎರಡೂ ಸಂಪುಟ (ಸು. 2000 ಪುಟಗಳು)ಗಳನ್ನು ತರಿಸಿ, ನನ್ನ ಮುಂದಿರಿಸಿ ನೋಡಿ ಪ್ರೊಫೆಸರ್-ಇವುಗಳಲ್ಲಿ ಮದುಮಗಳು ನಾಟಕಕ್ಕೆ ಹೊಂದುವ ಪದ್ಯಗಳನ್ನು ಎಕ್ಕಿತೆಗೆಯಬೇಕು ಎಂದು ಹೇಳಿದರು. ಅದಕ್ಕೆ ಎಷ್ಟು ದಿನ ಬೇಕಾಗಬಹುದು ಎಂದು ಗಾಬರಿ ಆದರೂ ಚಲಬಿಡದೆ ಇಬ್ಬರೂ ಒಂದೊಂದು ಸಂಪುಟ ಹಿಡಿದು ಕುಳಿತೆವು.

ಆದರೆ ಅವು ಯಾವುವೂ ಮದುಮಗಳು ರಂಗರೂಪವನ್ನು ಅಥರ್ೈಸಲು ವಿಸ್ತರಿಸಲು ಹೊಂದಿಕೆಯಾಗಲಿಲ್ಲ. ‘ಪಕ್ಷಿಕಾಶಿ’ ಸಂಕಲನದ ಆನಂದಮಯ ಈ ಜಗಹೃದಯ; ಇಂತಹ ಸುಂದರ ಪ್ರಾತಃಕಾಲದಿ; ಶರತ್ಕಾಲದ ಸೂರ್ಯೋದಯದಲಿ; ಬಾಫಾಲ್ಗುಣ ರವಿ ದರ್ಶನಕೆ ಮತ್ತು ದೇವರು ರುಜು ಮಾಡಿದನು ಈ ಕವಿತೆಗಳನ್ನು ತೋರಿಸಿ ಇವುಗಳಲ್ಲಿ ಯಾವುದಾದರೂ ಒಂದು ಕವಿತೆ ತಿಮ್ಮಿ ಹುಲಿಕಲ್ಲು ನೆತ್ತಿಯಲ್ಲಿ ಕಾಣುವ ಸೂರ್ಯೋದಯದ ಸನ್ನಿವೇಶಕ್ಕೆ ಸರಿ ಹೊಗಬಹುದೇ ಎಂದು ಆತನ ಕಡೆ ನೋಡಿದೆ, ಆತ ನೋಡಿ ‘ಇಲ್ಲ ಸಾರ್ ಇವು ಸರಿಹೋಗುವುದಿಲ್ಲ.

ಅದೇನು ಭಾವ ಅದೂ? ನೊರೆ, ನೊರೆ, ನೊರೆ, ಹಾಲು! ಕಡ್ಳು ನಿಂತ್ಹಾಂಗೆ ಅದೆಯಲ್ಲಾ? ಎನ್ನುವ ತಿಮ್ಮಿಯ ಅನುಭವವನ್ನು ಈಭಾವ ಗೀತೆಗಳ ಮೂಲಕ ಹೇಳಿಸಿದರೆ ಕೃತಕವಾಗುವುದಿಲ್ಲವೆ?’ ಎಂದರು. ನನಗೂ ಸರಿಎನಿಸಿತು. ಇನ್ನೂ ಹಲವಾರು ಕವನಗಳನ್ನು ನಾಟಕದ ಸನ್ನಿವೇಶದಲ್ಲಿಟ್ಟು ನೋಡಿದೆವು. ಸರಿಬರಲಿಲ್ಲ. ಹೀಗೆ ಹುಡುಕುತ್ತಿರುವಾಗ, ಒಮ್ಮೆ ಹಳ್ಳದ ಪಾತ್ರದಲ್ಲಿ ಏಡಿ ಹಿಡಿಯುವ ಸಾಹಸದಲ್ಲಿದ್ದ ಐತ ಪೀಂಚಲು ಇವರು ಬಿಲ್ಲರ ವೇಷದ ಶಿವ ಶಿವಾಣಿಯರಂತೆ ಮುಕುಂದಯ್ಯನಿಗೆ ತೋರಿದರು ಎಂಬ ವರ್ಣನೆಗೆ ಉಚಿತವಾಗಿದ್ದು (ಮ.ಮ.ಪುಟ-142) ‘ಚಂದ್ರಮಂಚಕೆ ಬಾ, ಚಕೋರಿ’ ಸಂಕಲನದ ‘ಹರಗಿರಿಜಾ’ ಎಂಬ ಪದ್ಯ ನಮಗೆ ಒಪ್ಪಿತವಾಯಿತು.

ಆ ದೃಶ್ಯ ಕಟ್ಟುವಾಗ ಈ ಪದ್ಯ ಬಳಸಲಾಯಿತು. ಹಾಗೇ ಕಾದಂಬರಿಯ ಆರಂಭದಲ್ಲಿ ಕುವೆಂಪು ಓದುಗರಿಗೆ ‘ಇಲ್ಲಿ ಯಾರು ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ!’ ಎಂಬ ಮನವಿಯನ್ನು ಮಾಡಿಕೊಂಡಿದ್ದಾರೆ. ಈ ಮನವಿಯ ಕಡೆಯ ಚರಣ ‘ನೀರೆಲ್ಲ ಊ ತೀರ್ಥ’ ಎಂದಿದೆ. ಅದನ್ನು ನಾಟಕದಲ್ಲಿ ತೀರ್ಥವೆಲ್ಲ ಊ ನೀರೆ! ಎಂದು ಬದಲಿಸಿ ಹೇಳುವ ಮೂಲಕ ವರ್ತಮಾನದ ಭಕ್ತಿಯಾಡಂಬರವನ್ನು ವಿಡಂಬಿಸಲಾಗಿದೆ. ಹೀಗೆ ಇನ್ನೊಂದೆರಡು ಕವಿತೆಗಳನ್ನು ಹುಡುಕಿ ಬಳಸಿಕೊಳ್ಳಲಾಯಿತು. ಬೈರೇಗೌಡರ ಸೋರೇಬುರುಡೆ ನಾಟಕದಲ್ಲಿನ ಸುರುಡು ಮುನ್ನೂರು ಕೋಟಿ ಮಾಟ-ಮಂತ್ರದ ಹಾಡಾಗಿ ಬಳಕೆಯಾಯ್ತು. ನಾವು ಇಷ್ಟೆಲ್ಲ ಪ್ರಯತ್ನ ಪಟ್ಟಿದ್ದರೂ ಪ್ರೊ.ಕಿ.ರಂ. ನಾಗರಾಜ್ ಅವರು ‘ಕುವೆಂಪು ಅವರ ಅಷ್ಟೊಂದು ಕವಿತೆಗಳಲ್ಲಿ ನೋಡಿದ್ದರೆ ಮದುಮಗಳು ನಾಟಕಕ್ಕೆ ಒಪ್ಪಿಗೆಯಾಗುವ ಕವಿತೆಗಳು ಇನ್ನೂ ಸಿಕ್ಕದೆ ಇರುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದು ನಮಗೆ ಬೇಸರ ತರಿಸಿತು.

ನಾರಾಯಣಸ್ವಾಮಿ ಹಗಲು ರಾತ್ರಿ ಎನ್ನದೆ ಹಾಡುಕಟ್ಟುವ ಕೆಲಸದಲ್ಲಿ ತೊಡಗಿದರು.  ಸಂದರ್ಭದ ಒತ್ತಡ ಹಾಗಿತ್ತು. ಬಸು ಮೇಲಿಂದ ಮೇಲೆ ‘ಎಲ್ಲಿ ಸ್ಕ್ರಿಪ್ಟ್? ಎಲ್ಲಿ ಹಾಡು?’ ಎಂದು ಕಾದಾಟಕ್ಕೆ ಬರುವ ಟಗರಿನಂತೆ ಕೇಳುತ್ತಿದ್ದರು. ಪರಿಸ್ಥಿತಿ ಹೀಗಿರುತ್ತ ಕೆವೈಎನ್ಗೆ ಒಂದು ಪಲ್ಲವಿಯೊ, ಒಂದು ಚರಣವೋ, ಒಂದು ಪದ್ಯವೋ ಹೊಳೆದಾಗ ಜಗ್ಗನೆದ್ದು ‘ಇಲ್ಲಿ ಕೇಳಿ ಸಾರ್’ ಎಂದು ನನ್ನ ಕರೆದು ಲ್ಯಾಪ್ಟಾಪ್ ಮೇಲೆ ಓದಿ ಹೇಳುತ್ತಿದ್ದರು. ನನಗಿನ್ನೂ ಆ ಚಿತ್ರ ಕಣ್ಣಿಗೆ ಕಟ್ಟಿದಂತಿದೆ. ನಾನು ಓದಿ ಕೇಳಿ ಸೂಪರ್ ಎಕ್ಸೆಲೆಂಟ್ ಅದ್ಭುತ! ‘ಉಠಠಜ ಎಠಛ ಟಥಿ ಛಠಥಿ’ ಎಂದು ಉತ್ತೇಜಿಸುತ್ತಿದ್ದೆ. ಅಲ್ಲಿ ಬಂದವರಿಗೆಲ್ಲಾ ಆ ಕ್ಷಣಕಟ್ಟಿದ ಬಿಸಿ ಬಿಸಿ ಪದ್ಯ ಆಗಲೇ ರಿಲೇ ಆಗಿಬಿಡುತ್ತಿತ್ತು. ಹಾಗೆ ಮೂಡಿಬಂದ ಪದ್ಯಗಳಲ್ಲಿ ಕೆಲವನ್ನಾದರೂ ಇಲ್ಲಿ ಹೆಸರಿಸುವುದು ಸೂಕ್ತ.

ಮುಂದುವರೆಯುವುದು…….

1 ಟಿಪ್ಪಣಿ (+add yours?)

  1. mallappa banagar haaveri
    ಡಿಸೆ 31, 2010 @ 13:20:57

    adbhuta anubhavagalu daakhalisi sir.

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: