ಸಾಂಗತ್ಯ ಸಂಯೋಜಿಸುವ ಐದನೇ ಚಿತ್ರ ಶಿಬಿರ ಜನವರಿ 22 ಮತ್ತು 23 ರಂದು ಎಂದಿನಂತೆ ಕುಪ್ಪಳಿಯಲ್ಲಿ ನಡೆಯಲಿದೆ.
45 ಮಂದಿಗೆ ಪ್ರವೇಶಾವಕಾಶವಿದೆ. ಊಟ, ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. 400 ರೂ. ಪ್ರವೇಶ ಶುಲ್ಕ. ಜನವರಿ 22 ರಂದು ಬೆಳಗ್ಗೆ 9. 30 ಕ್ಕೆ ಆರಂಭವಾಗುವ ಚಿತ್ರ ಶಿಬಿರದಲ್ಲಿ ಒಟ್ಟೂ ಎರಡೂ ದಿನ ಕೇವಲ ಸಿನಿಮಾಗಳನ್ನು ವೀಕ್ಷಿಸುವುದು, ಚರ್ಚಿಸುವುದಷ್ಟೆ ಕೆಲಸ.
ಪ್ರತಿ ಚಿತ್ರ ವೀಕ್ಷಣೆಯ ನಂತರವೂ ಸಂವಾದವಿರುತ್ತದೆ. ಅದರಲ್ಲಿ ತಮ್ಮ ತಮ್ಮ ಅಭಿಪ್ರಾಯವನ್ನು ಮಂಡಿಸಬಹುದು. ತಾಂತ್ರಿಕ ಸಂಗತಿಗಳ ವಿವರ ಕೊಡಲು ನಮ್ಮೊಂದಿಗೆ ತಜ್ಞರು ಹಾಗೂ ಸಾಂಗತ್ಯ ಟ್ರಸ್ಟ್ ನ ಅಧ್ಯಕ್ಷರಾದ ಪರಮೇಶ್ ಗುರುಸ್ವಾಮಿಯವರು ಇರುತ್ತಾರೆ. ಇವರೊಂದಿಗೆ ಇನ್ನೂ ಕೆಲವು ಸಿನಿತಜ್ಞರು ಭಾಗವಹಿಸುವರು.
ಈ ಹಿಂದೆಯೂ ನಾಲ್ಕು ಶಿಬಿರಗಳನ್ನು ನಡೆಸಿದ್ದು, ಬಹಳ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾಗಳನ್ನು ಚರ್ಚಿಸುವ ಮೂಲಕವೇ ದೃಶ್ಯ ಸಾಧ್ಯತೆಗಳನ್ನು ಅರಿಯುವ ಶೈಕ್ಷಣಿಕ ಉದ್ದೇಶದಿಂದಲೇ ಬಹುತೇಕ ವಿಶ್ವ ಸಿನಿಮಾಗಳ ಪ್ರದರ್ಶನವಿರುತ್ತದೆ. ಪ್ರತಿ ವರ್ಷ ಜನವರಿ ಮತ್ತು ಆಗಸ್ಟ್ ನಲ್ಲಿ ಶಿಬಿರಗಳನ್ನು ನಡೆಸಲಾಗುತ್ತದೆ.
ಆಸಕ್ತರು ಹೆಸರನ್ನು ನೋಂದಾಯಿಸಬಹುದು. ತಮ್ಮ ಬರುವಿಕೆ ಕುರಿತು saangatya@gmail.com ಗೆ ಇಮೇಲ್ ಮಾಡಬಹುದು. ಮತ್ತಿತರ ಮಾಹಿತಿಗೆ ಮತ್ತು ಹೆಸರು ನೋಂದಣಿಗೆ 94805 82027, 94807 97113, 94482 45172
ಡಿಸೆ 30, 2010 @ 09:17:25
ಸಿನಿಮಾಗಳ ಪಟ್ಟಿ ಕೊಡಿ