ಮಂಜುನಾಥ್ ಚಾಂದ್ ಬರೆವ ‘ಇವರು ಮೂರ್ತಿ’

-ಮಂಜುನಾಥ್ ಚಾಂದ್

(photo by : ci so)

ಇವರು ಮೂರ್ತಿ 9

ಕಲರ್ ಕಾಲ

‘ಕನೀಜ್’ ನಾನು ಮಾಡಿದ ಮೊದಲ ಕಲರ್ ಫಿಲ್ಮ್. ಗುರುದತ್ ಈ ಫಿಲ್ಮ್ ಅನ್ನು ಕಲರ್ ನಲ್ಲಿ ಮಾಡೋಣ ಅಂತ ಹೊರಟ. ಅದನ್ನು ಪೂರ್ತಿ ಮಾಡಲಿಕ್ಕೆ ಅವನಿಂದ ಸಾಧ್ಯವಾಗಲಿಲ್ಲ. ಇಷ್ಟ ಆಗಲಿಲ್ಲ ಅವನಿಗೆ. ಅರ್ಧಕ್ಕೆ ಬಿಟ್ಟುಬಿಟ್ಟ. ಆಮೇಲೆ ಕೈಗೆತ್ತಿಕೊಂಡಿದ್ದು ‘ಚೌದುನಿಕಾ ಚಾಂದ್’. ಈ ಫಿಲ್ಮ್ ಸೂಪರ್ ಹಿಟ್ ಚಿತ್ರ ಆಗೋಯ್ತು. ಆಗಿನ ಕಾಲದಲ್ಲಿ ಸಿಲ್ವರ್ ಜುಬಿಲಿ ಆಯ್ತು. ಫಿಲ್ಮ್ ಡಿಸ್ಟ್ರಿಬ್ಯುಟರ್ ಎಲ್ಲ ಬಂದು ಇನ್ನೊಂದಿಷ್ಟು ಚಿತ್ರ ಮಾಡಿ ಅಂತ ಕೇಳ್ತಾ ಇದ್ರು. ಆವಾಗೊಂದು ಕ್ರೇಜ್ ಬಂದಿತ್ತು; ಒಂದೋ ಎರಡೋ ಸಾಂಗ್ ಕಲರ್ ನಲ್ಲಿ ಮಾಡುವುದು. ಪೂರ್ತಿ ಫಿಲ್ಮ್ ಕಲರ್ ನಲ್ಲಿ ಮಾಡುವುದು ಕಷ್ಟ ಇತ್ತು ಬಿಡಿ. ಪ್ರೊಡಕ್ಷನ್ ತುಂಬಾ ದುಬಾರಿ ಇತ್ತು. ಹೀಗೆ ಕೆಲವು ಫಿಲ್ಮ್ ಸಾಂಗ್ ಪಿಕ್ಚರೈಸೇಶನ್ ಕಲರ್ ನಲ್ಲಿ ಮಾಡಿಕೊಟ್ಟಿದ್ದೂ ಇದೆ.

ಅಮ್ಮಾ ಅಂದ್ರೆ ಲಾಸ್ಟ್ ವರ್ಡ್!

ಗುರುದತ್ನ ಪರ್ಸನಲ್ ಲೈಫ್ ಹೇಗೋ ಏನೋ ಗೊತ್ತಿಲ್ಲ ನನಗೆ. ಆತ್ಮಹತ್ಯೆ ಮಾಡಿಕೊಳ್ಳೋ ಟೆಂಡೆನ್ಸಿ ಅವನ ಬ್ಲಡ್ನಲ್ಲೇ ಇತ್ತು ಅನಿಸತ್ತೆ. ಗುರುದತ್ ಮಗ ಕೂಡ ಆತ್ಮಹತ್ಯೆ ಮಾಡಿಕೊಂಡ. ಗುರು ತನ್ನ ವೈಯಕ್ತಿಕ ಜೀವನದ ಸಂಗತಿಗಳನ್ನು ಯಾರ ಹತ್ತಿರವೂ ಹೇಳಿಕೊಳ್ಳುತ್ತಿರಲಿಲ್ಲ. He never expressed anything to anybody. ಇನ್ಫ್ಯಾಕ್ಟ್ ಅವರ ವೈಫ್ ಗೀತಾ ದತ್ ಮಾತ್ರ ನನ್ನ ಮನೆಗೆ ಬಂದು ಕೆಲವು ವಿಷಯ ಹೇಳಿಕೊಳ್ತಾ ಇದ್ಲು.

ಆದರೆ, ಅವಳಿಗೆ ನಾನು ಹೇಳ್ತಾ ಇದ್ದೆ; ನೀವು ಒಂದು ವಿಷಯ ಹೇಳು, ನೀನು ಹ್ಯಾಪಿಯಾಗಿದ್ದಿಯೋ ಇಲ್ಲವೋ ಹೇಳು? ಗುರು ನಿನ್ನನ್ನು, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ತಾ ಇದ್ದಾನೋ ಇಲ್ಲವೋ? ಆತ ಮೂರು ಮಕ್ಕಳನ್ನೂ ಚೆನ್ನಾಗಿ ನೋಡಿಕೊಳ್ತಾ ಇದ್ದ. ಎಲ್ಲರನ್ನೂ ಹ್ಯಾಪಿಯಾಗಿ ಇರಿಸಿದ್ದ. ಅದನ್ನು ಬಿಟ್ಟು ಹೊರಗಿನವರ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ತಿಯಾ? Forget it. ಅಳೋದು ಎಲ್ಲ ಮಾಡಬೇಡ. ಅಂತ ಹೇಳಿ ಕಳಿಸ್ತಾ ಇದ್ದೆ. ಅವಳೇ ಹೇಳಿದ್ಲು, ಆ ವಿಷಯದಲ್ಲಿ ಗುರುದತ್ ಬಗ್ಗೆ ಯಾವುದೇ ಕಂಪ್ಲೇಂಟ್ ಇಲ್ಲ ಅಂತ.

ಗುರುದತ್ ಅನ್ಯಮನಸ್ಕನಾಗಿದ್ದಾಗ ನಾನೂ ಹೇಳಿದ್ದಿದೆ; ಯಾಕೆ ಏನೇನಕ್ಕೋ ತಲೆ ಕೆಡಿಸಿಕೊಳ್ತಿಯಾ ಅಂತ? ಏಯ್ ಅದೆಲ್ಲ ಬಿಡು, ಅವೆಲ್ಲ ನೀನು ಕೇಳೋಕೆ ಬರಬೇಡ ಅಂತಿದ್ದ. ಏನಾದರೂ ಸಮಸ್ಯೆ ಇದ್ದರೂ ಇರಬಹುದು, ಆದರೆ, ನಾನು ಅವನ ಪರ್ಸನಲ್ ವಿಷಯದಲ್ಲಿ ಮಧ್ಯಪ್ರವೇಶ ಮಾಡಲು ಹೋಗುತ್ತಿರಲಿಲ್ಲ. ಅವನ ಅಮ್ಮನ ಹತ್ರಾನೂ ಹೇಳಿಕೊಳ್ತಾ ಇರಲಿಲ್ಲ; ಆದ್ರೆ ಅಮ್ಮನನ್ನು ತುಂಬಾ ಪ್ರೀತಿ ಮಾಡ್ತಾ ಇದ್ದ. ಅಮ್ಮಾ ಅಂದ್ರೆ ಅವನಿಗೆ ಲಾಸ್ಟ್ ವರ್ಡ್.

ಗುರುದತ್ಗೆ ಕನ್ನಡವೇನೂ ಬರುತ್ತಿರಲಿಲ್ಲ. ಆತ ಹುಟ್ಟಿದ್ದು ಬೆಂಗಳೂರು. ಎರಡು ವರ್ಷ ಮಗುವಾಗಿದ್ದಾಗ ಅವರ ಅಪ್ಪ-ಅಮ್ಮ ಕಲ್ಕತ್ತಾಗೆ ಹೊರಟು ಹೋದರು. ಅವರ ಅಪ್ಪ-ಅಮ್ಮ ಮೂಲತಃ ಕುಂದಾಪುರದ ಪಡುಕೋಣೆಯವರು. ಅವರು ಪಣಂಬೂರಲ್ಲಿದ್ದರು ಅನಂತರ ಬೆಂಗಳೂರಿಗೆ ಬಂದರು. ಬಳಿಕ ಪ.ಬಂಗಾಲಕ್ಕೆ ಹೋದರು. ಗುರುದತ್ಗೆ ಬಂಗಾಲಿ ಓದಲು, ಬರೆಯಲು ಚೆನ್ನಾಗಿ ಬರುತ್ತಿತ್ತು. ಅದರಿಂದಾಗಿಯೇ ಅವರು ಗೀತಾ ರಾಯ್ ಪ್ರಭಾವಕ್ಕೆ ಒಳಗಾದ.

ಮುಂದುವರೆಯುವುದು….

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: