‘ಹಂಗಾಮ’ ಕಾರ್ನರ್ ನಲ್ಲಿ ಭೂಪ ಕೇಳೆಂದ

ಮಂಜನ ಲವ್ವು

-ವೆಂಕಟ್ರಮಣ ಗೌಡ

ಮಂಜನ ಕೈಗೆ ತಲೆಕೊಟ್ಟು ಕೂರುವುದೆಂದರೆ ಯಾವನಿಗೂ ನಿಶ್ಚಿಂತೆಯ ಕೆಲಸವಲ್ಲ. ಬಲು ರಸಿಕನೂ ಪ್ರಚಂಡ ವಾಚಾಳಿಯೂ ಆದ ಅವನು ಹಗಲು ಹನ್ನೊಂದು ತಾಸು ಆ ಹೆಂಗಸು ಈ ಹೆಂಗಸು ಎಂದು ನಾಲಿಗೆಯನ್ನು ಕತ್ತೆ ದುಡಿಸಿದ ಹಾಗೆ ದುಡಿಸುವವ. ಚೌರ ಮಾಡಿಸಿಕೊಳ್ಳಲು ಬಂದವ ಅವನ ಮಾತಿಗೆ ಶ್ರೋತೃ ವಾಗಬೇಕು ಮಾತ್ರವಲ್ಲ. ಕವಳದ ರಸ ತುಂಬಿಕೊಂಡೇ ಇರುವ ಅವನ ಬಾಯ ನಿರಂತರ ಉಗುಳಿನ ಪ್ರೋಕ್ಷಣೆಯಲ್ಲಿ ಪಾವನನೂ ಆಗಬೇಕು. ಹೀಗಿದ್ದೂ. ಚೌರ ಮಾಡಿಸಿಕೊಳ್ಳಬೇಕಾದರೆ ಉರಲ್ಲಿ ಅವನೊಬ್ಬನೇ ಗತಿಯೆಂಬಂತಾಗಿರುವುದರಿಂದ ಅವನು ಯಾವಾಗಲೂ ನೆಲದಜಿಂದ ಒಂದು ಗೇಣು ಮೇಲೇ.

ಅಂಥವನ ತಕ್ಕವರೆಂಬಂತೆ ಒಂದಿಬ್ಬರೂ ಊರಲ್ಲದ್ದಾರೆ. ಅವನ ಚೌರದಂಗಡಿಯೊಳಗೆ ಎಂಟರಾಗುತ್ತಲೇ ಅವರು ಜೋರು ಮಾಡುವ ತಾಕತ್ತು ಇದೆ.ಈ ಜೋರು ಬಾ.ಿನವರು ಮಂಜನ ಸಲೂನಿನೊಳಗೆ ಬಂದರೆಂದರೆ ಮಂಜನ ಬ್ರಶ್ಯು ಸೋಪು ಇತ್ಯಾದಿ ವಿಶೇಷಗಳು ಅಪರೂಪಕ್ಕೆಂಬಂತೆ ಹೊರಗಿಣುಕಿ ಇತರ ಸಾಮಾನ್ಯ ಮಂದಿಯ ಕಣ್ಣು ಕುಕ್ಕುತ್ತವೆ. ನೀರಲ್ಲದ್ದಿದ ಬ್ರಶ್ಯನ್ನು ಕೈಗೆ ತಕ್ಕೊಳ್ಳುತ್ತಿದ್ದಂತೆಯೇ, ನೋಡುತ್ತಿದ್ದವರ ಹೊಟ್ಟೆ ಉರಿಯುತ್ತದೆ.

ನಾಲ್ಕು ಸರ್ತಿ ಅವರು ಕಣ್ಣರೆಪ್ಪೆ ಬಡಿಯುವಷ್ಟರಲ್ಲೇ ತಾನೆಂಬಂತೆ ಉಕ್ಕುತ್ತದೆ. ಮೊಕ ನೋಡಿ ಮಣೆ ಹಾಕುವವ ಎಂದೂ ಜನ ಮಂಡಜನ ಬಗ್ಗೆ ಹಲ್ಲು ಕಚ್ಚುವುದಿದೆ. ಇವರೆಲ್ಲರ ಇಂತಾ ಸಿಟ್ಟು ಕೂಡ ಕೆಲವರಿಗೆ ಮಾತ್ರವೇ ಸೀಮಿತವಾದಂತಿರುವ ಮಂಜನ ಬ್ರಶ್ಯಿನಿಂದ ಉಕ್ಕುವ ನೊರೆಯ ದರ್ಶನವಾದಾಗ ಮಾತ್ರ. ನಾಳೆ ಬೆಳಗಾದರೆ ಇವರೂ ಬಗೀಲೆ ಹೆರ್ದಾಕೊ ಮಂಜ ಎನ್ನುತ್ತ ಬಂದು ಅವನೆದುರು ಕೂರುವವರೇ.

ತನ್ನನ್ನು ಜೋರು ಮಾಡುವವರನ್ನು ಮಾತ್ರ ಇಷ್ಟೊಂದು ಉಪಚರಿಸುವ ಮಂಜ ತಮ್ಮನ್ನು ಮಾತ್ರ ಕಾಲಕಸ ಎಂಬಂತೆ ನೋಡುತ್ತಾನೆ ಎಂಬುದೇ ಅವರ ತಕರಾರು. ಮಂಜನದೂ ಕಂಜೂಸು ಬುದ್ದಿಯೇ. ಅವರ ಮುಕ್ಕಾದರೆ ಹೌದೊ ಅಲ್ಲವೊ ಅನ್ನುವಂತೆ ಸೋಪು ಕಾಣಿಸುತ್ತಾನೆ. ಬಗೀಲೆ ಗನಾಕೇ ತಿಕ್ಕೊ , ನೊರೆ ಬರ್ಲಿ ಎಂದು ಯಾವನಾದರೂ ಮುದುಕನಂತೋನು ಆಸೆಯಿಂದ ಕೇಳಿದರೆ , ಓ ಒಡ್ಯಾ, ಮಾರಾಜಾ, ನಿಮ್ಮಂತಾ ಎಯ್ದು ಮೊಕಕ್ಕೆ ನೊರೆ ಬರುವಷ್ಟರಲ್ಲಿ ನನ್ನ ಗಳಿಕೆ ಇದ್ದಲ್ಲೇ ಇರೂದು, ಸೋಪು ತರೂಕೆ ಗುನಗರ ಅಂಗಡೀಲಿ ನಾ ಹಚ್ಚೂ ಲೆಕ್ಕ ಬಾಲದಂಗೆ ಬೆಲೂದು., ಗೊತ್ತೀತ್ತಾ… ಎಂದು ಮುಖಕ್ಕೇ ಮಂಗಳೀರತಿ ಮಾಡಿದಿದ್ದರೆ ಅವನು ಮಂಜನೇ ಅಲ್ಲ. ಇಂತಾ ಮಂಜ ಗಿರಾಕಿ ಜೋರು ಬಾಯವನಲ್ಲದಿದ್ದರೆ ಮುಖದ ಮೇಲೆ ಬ್ರಶ್ಯು ಆಡಿಸಿ ಬುರುಬುರು ನೊರೆಯ ಮಜಾ ಕೊಡುವುದು ದೂರದ್ದೇ ಮಾತು ನರಮ್ಮಿರುವ ಗಿರಾಕಿಗಳ ಮುಂದೆ ಮಂಜನದೇ ಜೋರು. ಕೊಡು ಮೂರು ಕಾಸಿಗೆ ಇದೂ ಬೇಕು ಏದೂ ಬೇಕು ಅಂದ್ರೆ ಹೆಂಗ್ರ … ಎಂದು ನಿಮ್ಮ ಯೋಗ್ಯತೆಗ ಇಷ್ಟೇ ಎಂಬರ್ಥವನ್ನು ನಾಜೂಕಾಗಿಯೇ ಸೂಚಿಸಿಬಿಡುತ್ತಾನೆ. ಯಾವುದೂ ತಾಗದಿದ್ದರೆ, ಒಬ್ಬೊಬ್ಬರ ಚರ್ಮನೇ ಹಂಗ್ರ. ಹಂಗೇ ಸೋಪು ನೊರೆ ಬಿಡದೂ ಚರ್ಮದ ಗುಣದ ಮೇಲೇ ಇರತೀದ್ರ ಎಂದು ಬುಡವನ್ನೇ ಅಲ್ಲಾಡಿಸಲೂ ದಾಕ್ಷಣ್ಯ ಮಾಡ.

ಊರಿನ ಎಷ್ಟೋ ಮಂದಿಯ ಹತಾಶೆಗೂ ಕಾರಣವಾದದ್ದಾಗಿದೆ ಎಂಜನ ಮಾಯಾವಿ ಬ್ರಶ್ಯು. ಅದರ ಸ್ವರ್ಶಯೋಗ ಬರಲಿಲ್ಲವೆಂದೇ ಮಂಜನ ಮೇಲೆ ಸಿಟ್ಟಾದ ಕೆಲವರು ಅವನಿಗೆ ಒಂದು ಕೈ ತೋರಿಸಿಯೇ ಬಿಡುವಾ ಹೇಳಿ ತಾವೇ ಸ್ವತ ಅಂಥ ಙ್ರಶ್ಯಿನ ಓನರಾಗಲು ಮನಸ್ಸು ಮಾಡಿದ್ದಿತ್ತು. ಅಂಥವರು ಮೊದಲು ಗುನಗನ ಅಂಗಡಿಯಲ್ಲಿ ವಿಚಾರಿಸಿದ್ದರು. ಆದರೆಂ ಬ್ರಶ್ಿಗೂ ಜನ ಕೇಳಿಯಾರೆಂದು ಕನಸಲ್ಲೂ ಊಹಿಸಿರದ ಗುನಗನ ಅಂಗಡಿಯಲ್ಲಿ ಅದು ಇರುವ ಮಾತೇ ಇರಲಿಲ್ಲ. ಇವರಿಷ್ಟೊಂದು ಮಂದಿ ಒಂದೇ ಸಲ ಅದನ್ನು ಕೇಳಿದಾಗ ಇಲ್ಲವೆಂದು ಹೇಳುವಂತಾಗಿ ಕೈ ಕೈ ಹಿಸುಕಿಕೊಂಡಿದ್ದ. ತರಿಸಿ ತೊಡ್ತೆನೆ ಎಂದು ಹೇಳುಿವ ಜಾಣತನ ತೋರಿಸಿದ್ದನಾದರೂ, ಅವರಾರಿಗೂ ಕಾಯುವ ತಾಳ್ಮೆ ಇರಲಿಲ್ಲ. ಅಂಕೋಲೆ ಪೇಟೇಲೇ ನೋಡುವಾ ಫಶೀಗೆ ಬಿದ್ದಿದ್ದರು. ಒಂದು ಸರ್ತಿಯೊ, ಎರಡು ಸರ್ತಿಯೊ ಮುಖದ ಮೇಲೆ ಆಡಿಸಿದ್ದಷ್ಟೇ ಆಮೇಲೆ ಕೈಗೂ ಸಿಕ್ಕದಂತೆ ಬುಡದಲ್ಲೇ ಕಿತ್ತುಕೊಂಡು ಉದುರಿದ್ದವು .ಹೀಗಾದ ಮೇಲೆ , ಎಂಟು ದಿನಕ್ಕೂ ಹದಿನೈದು ದಿನಕ್ಕೂ ಮಂಜನಿಗೆ ಎರಡು ರೂಪಾಯಿ ಕೊಟ್ಟು ಗಡ್ಡ ಹೆರೆಸಿಕೊಳ್ಳುವುದು ಸುರಳಿತ ಎಂದುಕೊಂಡು ಬ್ರಶ್ಷಿನ ಹಂಗು ತೊರೆದಿದ್ದರು .

ಇದೆಲ್ಲದರ ನಡುವೆ ಅಂಗಡಿ ಗುಣಗಾನ ಫಜಿತಿಯೇ ಬೇರೆಯಾಗಿತ್ತು . ಹೇಗೂ ಬ್ರಶ್ಶ್ಯು ಗಳಿಗೂ ಗಿರಾಕಿಗಳಿದ್ದಾರೆ ಎಂದು ತಿಳಿದು ಅಂಗಡಿಯಲ್ಲಿ ತಂದು ರಾಶಿ ಹಾಕಿದ್ದ . ಆದರೆ ಕೇಳುವವರು ಗತಿಯಿಲ್ಲದೆ ಬಿದ್ದಲ್ಲೇ ಬಿದ್ದವನ್ನು ಇಲಿಗಳು ಹೊರಲು ಶುರು ಮಾಡಿದ್ದವು . ಗುನಗನಿಗೆ ಮತ್ತೊಮ್ಮೆ ಕೈ ಕೈ ಹಿಸುಕಿಕೊಳ್ಳು ವಂತಾಗಿತ್ತು. ಗುನಗನ ಈ ಸ್ಥಿತಿಯ ಬಗ್ಗೆ ಕಿಬಳಿ ಕಿಟಕಿಯಲ್ಲಿ ನಿಂತು ಆಡಿಕೊಳ್ಳುತ್ತ ಬಿದ್ದು ಬಿದ್ದು ನಗುವುದರಲ್ಲೂ ಕಡಿಮೆ ಎನ್ನಿಸಿ ಕೊಳ್ಳಲಿಲ್ಲ ಈ ಮಂದಿ . ಗುನಗನ ಕತೆ ಹಾಗಿರಲಿ . ಇದೆಲ್ಲದರ ಹಿಂದೆ ಇದ್ದು ಇಲ್ಲದಂತಿರುವ ಮಂಜ ಮಾತ್ರ ತನ್ನ ಎಂದಿನ ದಿನಚರಿ ಯೊಂದಿಗಿರುವಾಗಲೇ ಹೊಸ ಕತೆಯೊಂದು ಪ್ರಚಲಿತದಲ್ಲಿ ಬಂತು . ಅದೂ,ಮಂಜನಿಗೂ ಮೀನು ಮಾರುವ ಕನ್ನಿಗೂ ಲವ್ವು ಶುರುವಾಗಿದೆ ಎಂಬುದು .

ಹಾಗೆಂದು ಕನ್ನಿ ಊರಲ್ಲಿ ಹೊಸದಾಗಿ ಕಾಣಿಸಿಕೊಂಡವಳೆನು ಅಲ್ಲ . ಸಾಕಷ್ಟು ಸಮಯದಿಂದಲೂ ಊರಲ್ಲಿ ಮೀನು ಮಾರಿಕೊಂಡು ಇದ್ದವಳೇ . ಅದೇನೇ ಇದ್ದರು , ಇಬ್ಬರ ಮಧ್ಯೆ ಲವ್ವು ಶುರುವಾಗಿದೆ ಎಂಬುದರ ವಾಸನೆ ಊರಿಗೆ ಸಿಕ್ಕಿದ ಮೇಲೆ , ಅದರ ಬಗ್ಗೆ ತೀವ್ರ ಪತ್ತೆದಾರಿಕೆಗಳು ಬೇರೆ ಬೇರೆ ದಿಕ್ಕಿನಿಂದ ಶುರುವಾದವು .

ಊರಿನ ಕಡೇ ಬರುವ ಯಾವುದಾದರೊಂದು ಲಾರಿಯಲ್ಲಿ ಬರುತ್ತಿದ್ದ ಕನ್ನಿಯ ಮೀನಿನ ಬುಟ್ಟಿ ಇಳಿಸಲು ಸ್ಟಾಪಿನ ಜಾಗಕ್ಕೆ ಹತ್ತಿರವೇ ಇರುವ ಮಂಜನೆ ಹೋಗುವುದು ಮೊದಲಿನಿಂದಲೂ ಅಲಿಖಿತ ಶಾಸನವೆಂಬಂತೆ ನಡೆದು ಬಂದಿತ್ತಾದರೂ ಈಗ ಅದಕ್ಕೇ ಹೊಸ ಅರ್ಥ ಬಂದಿತ್ತು . ಎಲ್ಲಿಂದಲೋ ಒಂದು ವೀಳ್ಯ ದೆಲೆ, ಅಡಿಕೆ ಚೂರು ಹಿಡಿದುಕೊಂಡು ಬರುವ ಮಂಜ ‘ಸುಣ್ಣ ಕೊಡೇ’ ಎಂದು ಕನ್ನಿಯ ಮುಂದೆ ಹೋಗಿ ಹಲ್ಲು ಗಿಂಜುವುದು ಆಕೆ ಇವನೆದುರು ಹಾವ ಭಾವ ಪೂರ್ವಕವಾಗಿ ಮಾತಿಗೆ ನಿಲ್ಲುವುದು ಎಷ್ಟೊಂದು ಮಟ್ಟಿಗೆ ಈಗ ಮಾತಿನ ವಿಷಯವಾಗಿ ಬಿತ್ತಿತೆಂದರೆ ಊರ ಜನ ತಮ್ಮ ಕಥೆಗಾರಿಕೆಯ ಸಾಮರ್ಥ್ಯವನ್ನೇ ಚಾಲೆಂಜಿಗೆ ಒಡ್ಡಿದವರಂತೆ ಕಾಣಿಸತೊಡಗಿದರು.

ಮಂಜ ಮತ್ತು ಕನ್ನಿಯ ನಡುವಿನ ಲವ್ವಿನ ಕುರಿತ ರಸಭರಿತ ಮಾತು ಮಾತು ಮಾತುಗಳ ಮಧ್ಯೆಯೇ ಆ ಲವ್ವಿನ ವಿಚಾರ ಕಟ್ಟು ಕತೆಯಲ್ಲ ದಿಟ ಎಂಬುದು ಬಹಿರಂಗ ಗೋಳ್ಳುವುದಕ್ಕೆ ಹೆಚ್ಚು ಸಮಯ ಹಿಡಿಯಲಿಲ್ಲ . ಊರಿನೆದುರು ಈಗ ಮಂಜ ಮತ್ತು ಕನ್ನಿ ಯಾವುದೇ ಮುಚ್ಚು ಮರೆಯಿಲ್ಲದೆ ತಾವು ಪ್ರೇಮಿಗಳೆಂದು ಕಾಣಿಸಿಕೊಳ್ಳುವುದು , ಕೆಂಪಗೆ ನಾಚುವುದು ಶುರುವಾಯಿತು .

ಹೀಗೊಂದು ಪ್ರೇಮ ನಿಶ್ಚ್ಚಯ ಆದ ಮೇಲೆ ಆದ ಬೆಳವಣಿಗೆಯೇ ಈಗ ಪಾಯಿಂಟು . ಏನೆಂದರೆ , ಮಂಜ ಪ್ರೇಮದ ತೇವದಲ್ಲಿ ಬದಲಾಗಿಬಿಟ್ಟಿದ್ದ ಇವನು ಮಂಜನಾ ಎಂದು ಅನುಮಾನ ಹುಟ್ಟು ವಷ್ಟರ ಮಟ್ಟಿಗೆ ಬದಲಾಗಿ ಬಿಟ್ಟಿದ್ದ . ಊರಲ್ಲಿ ಒಂದಿಬ್ಬರ ಮುಖದ ಮೇಲಷ್ಟೇ ಬುರುಬುರು ಎಂದು ನೊರೆ ಬಾರಿಸುತ್ತಿದ್ದ ಆತನ ಬ್ರಶ್ಯು ಈಗ ಎಲ್ಲರ ಮುಖದಲ್ಲೂ ನೊರೆಯನ್ನು ಉಕ್ಕಿಸ ತೊಡಗಿತು . ಮಂಜ ಬದಲಾಗಿದ್ದಾನೆ ಎಂದು ಹೇಳುವುದಕ್ಕೆ ಆ ನೊರೆಯ ಹೊರತಾಗಿ ಭೂಮಿಯ ಮೇಲೆ ಮತ್ತಾವುದೇ ಸಾಕ್ಷಿಯ ಜರೂರು ಇರಲಿಲ್ಲ .

ಮಂಜ ಮೊದಲಿಗಿಂತಲೂ ಚುರುಕಾಗಿ ಬ್ರಶ್ ಆಡಿಸುತ್ತಿದ್ದ ಮತ್ತದು ಯಾರಾದರೂ ಮುಖದ ಮೇಲೆ ಆಡುವಾಗ , ಇದು ಯಾರ ಮುಖ ಅದೂ ಯಾರ ಮುಖ ಎಂದು ಭೇದ ಮಾಡದೆ , ಕಿಂಚಿತ್ತು ಕಂಜೂಸಿ ಮಾಡದೆ ನೋರೆಯುಕ್ಕಿಸತೊಡಗಿತ್ತು . ಮಂಜ ಊರಲ್ಲಿ ಎಲ್ಲರ ಪ್ರೀತಿ ಪಾತ್ರನಾದ .

ಮಂಜನಲ್ಲಿ ಇಷ್ಟೊಂದು ಬದಲಾವಣೆ ತಂಡ ಲವ್ವಿಗೆ ಊರ ಜನ ಶರನೆಂದಿತು . ಆತನ ಪ್ರೇಮ ಜೀವನವು ಮುಖದ ಮೇಲೆ ಉಕ್ಕಿಸುವ ನೊರೆಯ ಹಾಗೆಯೇ ಉಕ್ಕುತ್ತಿರಲಿ ಎಂದು ಹಾರೈಸಿತು…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: