ಮಂಜುನಾಥ್ ಚಾಂದ್ ಬರೆವ ‘ಇವರು ಮೂರ್ತಿ’

-ಮಂಜುನಾಥ್ ಚಾಂದ್

ಇವರು ಮೂರ್ತಿ 6

ಐ ವಾಂಟು ವರ್ಕ್ ವಿದ್ ಯು ಸರ್!

ಆಗ ಒಂದೊಂದು ಫಿಲ್ಮ್ ಶೂಟಿಂಗ್ ಮುಗಿದ ಮೇಲೂ ಒಂದು ಎರಡು ತಿಂಗಳು ಬ್ರೇಕ್ ಇರುತ್ತಿತ್ತು. ಈ ಬಿಡುವಿನ ಸಂದರ್ಭದಲ್ಲಿ ನಾನೊಂದು ಫಿಲ್ಮ್ ನೊಡಿದ್ದೆ; ಅಮ್ರಪಾಲಿ ಅಂತ. ಅದರ ಫೋಟೋಗ್ರಫಿ ಬ್ಯುಟಿಫುಲ್. ಇಂಗ್ಲಿಷ್ ಪಿಕ್ಚರ್ಗೆ ಫೋಟೊಗ್ರಫಿ ಮಾಡಿದಂತಿತ್ತು. ಪಾಲಿ ಮಿಶ್ರಿ ಅಂತ ಅದರ ಫೋಟೋಗ್ರಾಫರ್. ಪ್ರಕಾಶ್ ಸ್ಟುಡಿಯೋದಲ್ಲಿ ನೂರು ರೂ. ಸಂಭಾವನೆ ಪಡೆಯಲು ಹೋಗಿದ್ದಾಗ, ನನ್ನ ಜೂನಿಯರ್ ಕರೆದು, “ಪಾಲಿ ಮಿಶ್ರಿ ತುಮ್ಕೊ ಬುಲಾರಹೇ ಜಾವೋ’ ಎಂದ. ನನಗೆ ಭಾರೀ ಅಚ್ಚರಿ. “ಮಜಾಕ್ ಕರ್ ರಹೇ ಹೋ’ ಅಂತ ಅವನನ್ನೇ ಬೈದೆ. ಆದರೆ, ಅದು ನಿಜವಾಗಿತ್ತು. ಇನ್ನೊಂದು ಸ್ಟುಡಿಯೊದಲ್ಲಿ ಅವರಿಗಾಗಿ ನಾನು ಕಾದೆ.

ವೈಟ್ ಶರ್ಟ್, ವೈಟ್ ಪ್ಯಾಂಟು ಹಾಕ್ಕೊಂಡ ಸ್ಮಾರ್ಟ್ ಆಜಾನುಬಾಹು ಪಾರ್ಸಿ ಬಂದು ಕಾರಿನಿಂದ ಇಳಿದರು. ನನ್ನನ್ನು ನೋಡಿ “ಆರ್ ಯೂ ಕೃಷ್ಣಮೂರ್ತಿ?’ ಅಂತ ಕೇಳಿದರು. ನನಗೋ ಆಶ್ಚರ್ಯ. “ಐ ಹರ್ಡ್ ಯು ವಾಂಟು ವರ್ಕ್ ವಿದ್ ಮೀ?” ಎಂದು ಕೇಳಿದರು. “ಯೆಸ್ ಸರ್! ಇಟ್ಸ್ ಮೈ ambition ಸರ್” ಅಂದೆ.

ಕಮಾನ್ ಅಂತ ಒಳಗಡೆ ಕರ್ಕೊಂಡು ಹೋದರು. ನನಗೆ ಮಾತೇ ಬಂದಾಗಿ ಹೋಗಿತ್ತು. ಆವತ್ತು ಬೆಳಗಿಂದ ಸಂಜೆ ತಂಕ ಅವರ ಜೊತೆ ಕೆಲಸ ಮಾಡಿದೆ. ಸಂಜೆ ನನ್ನ ಕರೆದು ಹೇಳಿದರು, “ನನ್ನ ಜೊತೆ ಇಲ್ಲಿ ತನಕ 23 ಜನ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದರು, ನೀನು 24ನೇಯವನು. ಯು ಆರ್ ದಿ ಬೆಸ್ಟ್” ಅಂದರು ಮಿಶ್ರಿ. ಮೊದಲನೇ ದಿನವೇ ಆಗಿರುವುದು ಇದು. ನನಗೋ ಅಪಾರ ಸಂತೋಷ. ಯು ಆರ್ ಮಿದ್ ಮಿ, ಡೋಂಟ್ ವರಿ, ಕಮ್ ಟುಮಾರೋ ಅಂತ ಹೇಳಿ ಬೆನ್ನು ತಟ್ಟಿ ಕಳಿಸಿದರು. ಹೀಗೆ ಅವರ ಜೊತೆ ನಾನು ನಾಲ್ಕು ವರ್ಷ ಕಾಲ ಸಹಾಯಕನಾಗಿ ಕೆಲಸ ಮಾಡಿದೆ.

ಗುರುದತ್ ಗೆಣೆತನ…

ಬಳಿಕ ಗುರುದತ್ ನಮ್ಮ ಸ್ಟುಡಿಯೋನಲ್ಲಿ ಒಂದು ಪಿಕ್ಚರ್ ಮಾಡಬೇಕು ಅಂತ ಬಂದ. ಫೇಮಸ್ ಸ್ಟುಡಿಯೋ ಅಂತ ಆಗ ತಾನೆ ಬಾಂಬೆನಲ್ಲಿ ಆರಂಭವಾಗಿತ್ತು. ತುಂಬಾ ಅತ್ಯಾಧುನಿಕ ಸ್ಟುಡಿಯೋ ಆಗಿನ ಕಾಲಕ್ಕೆ. ಒಳ್ಳೆಯ ಸೆಟ್ಟಿಂಗ್, ಸಾಕಷ್ಟು ರೂಮ್ಗಳು, ಒಳ್ಳೆಯ ಕ್ಯಾಮರಾ ಎಲ್ಲ ಇದ್ದವು. ಆಗ ಗುರುದತ್ ಬಾಝಿ ಅಂತ ಫಿಲಂ ಮಾಡಲು ಅಲ್ಲಿಗೆ ಬಂದ. ನಾನು ಇನ್ನೊಬ್ಬರು ಸಿನಿಯರ್ ಫೋಟೋಗ್ರಾಫರ್ಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದೆ. ಆ ಫಿಲ್ಮ್ನಲ್ಲಿ ಒಂದು ಸಾಂಗ್ ಪಿಕ್ಚರೈಶೇಷನ್ ಸಂದರ್ಭದಲ್ಲಿ ನಾನು ಕೆಲವು ಹೊಸ ಸಲಹೆಗಳನ್ನು ಕೊಟ್ಟೆ. ಗುರುದತ್ ಗೆ ಇದು ತುಂಬಾ ಇಷ್ಟವಾಯಿತು. ಆದರೆ, ನಮ್ಮ ಕ್ಯಾಮರಾಮ್ಯಾನ್ ಈ ಶಾಟ್ ತಗೊಳ್ಳಲಿಕ್ಕೆ ಸಾಧ್ಯವಿಲ್ಲ ಅಂದ. ಯಾಕೆಂದ್ರೆ ಆತ ಸಲ್ಪ ದಪ್ಪಗಿದ್ದ. ಹಾಗಾಗಿ ಅವನಿಗೆ ಎದ್ದು ಕೂತು ಮಾಡಲು ಸಾಧ್ಯವಿರಲಿಲ್ಲ.

ಕ್ಯಾಮರಾಮನ್ಗೆ ಕೇಳಿ ನೋಡು, ಅವನಿಗೆ ಸಾಧ್ಯವಿಲ್ಲಾಂದ್ರೆ ನಾನು ಈ ಶಾಟ್ ಶೂಟ್ ಮಾಡ್ತೇನೆ ಅಂದೆ. ಗುರುದತ್ ಹೋಗಿ ಕೇಳಿದ. ಅದಕ್ಕೆ ಕ್ಯಾಮರಾಮನ್ ಒಪ್ಪಿಗೆ ಕೊಟ್ಟ. ನಾನು ಅದನ್ನು ಶೂಟ್ ಮಾಡಿದೆ. ಆವತ್ತೇ ಗುರುದತ್ ಹೇಳಿದ; ಇನ್ನು ಮುಂದೆ ನಾನು ನೀನು ಒಟ್ಟಿಗೆ ಕೆಲಸ ಮಾಡುವ ಅಂದ. ಮುಂದೆ ಇನ್ನೊಂದು ಫಿಲ್ಮ್ಗೆ ಗುರುದತ್ ಕೈ ಹಾಕಿದ. ಅಲ್ಲಿಂದ ಅವ ಸಾಯುವ ತನಕ ಅವನ ಜೊತೆಗೇ ಕೆಲಸ ಮಾಡಿದೆ. ಗುರುದತ್ ತುಂಬಾ ಸಿಂಪಲ್ ಮನುಷ್ಯ. ಎಲ್ಲರ ಜೊತೆ ಆತ ತುಂಬಾ ಅನ್ಯೋನ್ಯವಾಗಿ ಇರುತ್ತಿದ್ದ. ಗುರುದತ್ ಬಿಟ್ಟು ಬೇರೆಯವರ ಜೊತೆ ಕೆಲಸ ಮಾಡಲು ನನಗೆ ಮನಸ್ಸಿರಲಿಲ್ಲ. ಕೆಲಸದಲ್ಲಿ ನನಗೆಷ್ಟು ಆಸಕ್ತಿ ಇತ್ತೋ, ಅದಕ್ಕಿಂತ ಹೆಚ್ಚು ಆಸಕ್ತಿ ಗುರುದತ್ಗೆ ಇತ್ತು.

ಮುಂದುವರೆಯುವುದು……

3 ಟಿಪ್ಪಣಿಗಳು (+add yours?)

 1. chand
  ಡಿಸೆ 25, 2010 @ 09:29:58

  thank you prakashchandra…

  ಉತ್ತರ

 2. GUNDANNA CHICKMAGALUR
  ಡಿಸೆ 25, 2010 @ 00:33:28

  murthy tarahada cameraman avarannu namma deshada yaavude bhasheya chitrarangadalli naavu nodalaagallilla.. sathyajit ray avarannu swalpa mattige horatu padisi.. Gurudutt avara pyaasa chitrada lighting na murthy avaru maadida vidhaanavannu dayamaadi odugarige tilisi.

  ಉತ್ತರ

 3. prakashchandra
  ಡಿಸೆ 24, 2010 @ 17:40:26

  Eega guru dutt entry ada koodale “ivaru murthy” serialge uthama thiruvu sikkide, chand continue maadi….!

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: