ಮಂಗಳೂರು ಬಜ್ಜಿ…

ಪಾಕ ಚಂದ್ರಿಕೆ

ಮಂಗಳೂರು ಬಜ್ಜಿಗೆ ಗೋಳಿ ಬಜೆ ಎಂದೂ ಹೆಸರು. ಬಹಳ ಸುಲಭವಾಗಿ ಮಾಡಬಹುದಾದ ತಿಂಡಿಯೂ ಹೌದು. ಮಧ್ಯಾಹ್ನ ಊಟ ಮಾಡಿ ಮಲಗಿ ಎದ್ದಾಗ ಏನೋ ತಿನ್ನಬೇಕೆನಿಸುತ್ತದೆ. ಆಗ ತಕ್ಷಣವೇ 20 ನಿಮಿಷದಲ್ಲಿ ಮಾಡಬಹುದಾದ ತಿಂಡಿಯೆಂದರೆ ಗೋಳಿಬಜೆ.

ಬೇಕಾಗುವ ವಸ್ತುಗಳು (ನಾಲ್ಕು ಮಂದಿಯ ಅಳತೆಗೆ)
1/4 ಕೆಜಿ ಮೈದಾ ಹಿಟ್ಟು
ಸ್ವಲ್ಪ ಹುಳಿ ಮೊಸರು ಅಥವಾ ಮಜ್ಜಿಗೆ
ಕರಿಬೇವಿನಸೊಪ್ಪು (5 ಎಸಳು)
ಹಸಿಶುಂಠಿ (ಒಂದು ಸಣ್ಣ ತುಂಡು)
4 ಹಸಿಮೆಣಸು (ಸ್ವಲ್ಪ ಖಾರ ಹೆಚ್ಚು ಬೇಕಾದವರು ಇನ್ನೆರಡು ಮೆಣಸು ಹಾಕಿಕೊಳ್ಳಬಹುದು)
ಚಿಟಿಕೆಯಷ್ಟು ಅಡುಗೆ ಸೋಡಾ
ಕರಿಯಲು ಎಣ್ಣೆ
ಎರಡೂವರೆ ಟೀ ಚಮಚ ಉಪ್ಪು

ಇಷ್ಟಿದ್ದರೆ ಗೋಳಿ ಬಜೆ ಸಿದ್ಧವಾದಂತೆ. ಕರಿಬೇವು, ಹಸಿಮೆಣಸು ಮತ್ತು ಹಸಿಶುಂಠಿಯನ್ನು ಸಣ್ಣಗೆ ಕತ್ತರಿಸಿಕೊಂಡು ಹಿಟ್ಟನ್ನು ಕಲೆಸುವ ಯಾವುದಾದರೂ ಪಾತ್ರಕ್ಕೆ (ಬಾಣಲಿ ರೀತಿಯ ಅಗಲ ಪಾತ್ರವಿದ್ದರೆ ಸೂಕ್ತ) ಹಾಕಿಕೊಳ್ಳಿ. ಅದಕ್ಕೆ ಉಪ್ಪು, ಮೈದಾ ಹಿಟ್ಟು ಮತ್ತು ಸೋಡಾ ಬೆರೆಸಿ. ನಂತರ ಮಜ್ಜಿಗೆ ಹಾಕಿ ಸ್ವಲ್ಪ ಹದವಾಗಿ ಕಲೆಸಿಕೊಳ್ಳಿ. ಕಲೆಸಿದ ಹಿಟ್ಟು ಬಹಳ ನೀರಾಗಿ ಅಥವಾ ಬಹಳ ಗಟ್ಟಿಯಾಗಿರಬಾರದು. ಒಂದು ಮಧ್ಯದ ಹದವಿರಬೇಕು. ನಂತರ ಒಂದೈದು ನಿಮಿಷ ಬಿಡಿ.

ಇಷ್ಟರ ಮಧ್ಯೆ ಹೇಗಿದ್ದರೂ ಒಲೆ ಹೊತ್ತಿಸಿ, ಸಣ್ಣ ಉರಿಯಲ್ಲಿ ಬಾಣಲೆಯಲ್ಲಿ ಎಣ್ಣೆ ಕಾಯಲು ಇಟ್ಟಿರುತ್ತೀರಾ. ಅದು ಕಾಯಿತು ಎನ್ನುವಾಗ, ಈ ಹಿಟ್ಟನ್ನು ಮತ್ತೊಮ್ಮೆ ಕಲೆಸಿಕೊಂಡು ಬಜ್ಜಿ ಬಿಡುವಂತೆ ಬೆರಳಿನಲ್ಲಿ ಹಿಟ್ಟನ್ನು ಎಳೆದುಕೊಂಡು ಉಂಡೆ ಉಂಡೆಯಂತೆ ಎಣ್ಣೆಗೆ ಬಿಡುವುದು. ಕೆಂಪಾದ ಮೇಲೆ ತೆಗೆಯುವುದು. ಇದಕ್ಕೆ ಕಾಯಿ ಚಟ್ನಿ ಇದ್ದರೆ ತಿನ್ನಲು ರುಚಿ.

ಕಾಯಿ ಚಟ್ನಿ
1/4 ತೆಂಗಿನಕಾಯಿಯ ತುರಿಗೆ ಎರಡು ಹಸಿಮೆಣಸು, ಬೇಕಾದರೆ ಹತ್ತು ಕಾಳು ಪುಟಾಣಿ (ಉರುಗಡಲೆ) ಬೆರೆಸಬಹುದು. ಇಲ್ಲವಾದರೆ ಕಾಯಿ, ಹಸಿಮೆಣಸು, ಉಪ್ಪು ಹಾಕಿ ಅರೆದು, ಒಂದು ಒಗ್ಗರಣೆ ಕೊಟ್ಟರೆ ಸಾಕು.

ಒಂದಷ್ಟು ಟಿಪ್ಸ್
1. ಮನೆಯಲ್ಲಿ ಮಾಡುವಾಗ ಸ್ವಲ್ಪ ಕಡಿಮೆಯೇ ಸೋಡಾ ಹಾಕಿ. ಇದರಿಂದ ಏನೂ ಆಗದು. ಬಜ್ಜಿ ಸ್ವಲ್ಪ ಗಟ್ಟಿ ಎನಿಸುವುದು ಹೌದು. ಆದರೆ ಇದರಿಂದ ತಿನ್ನುವಾಗ ಸುಸ್ತು ಎನಿಸಲಾರದು.
2. ಹಿಟ್ಟು ನೀರಾದರೆ ಬಜ್ಜಿ ಎಣ್ಣೆಯನ್ನು ಹೆಚ್ಚು ಕುಡಿಯುತ್ತದೆ.
3. ಸೋಡಾ ಜಾಸ್ತಿ ಹಾಕಿದರೆ ಬಜ್ಜಿ ಬಹಳ ಮೃದುವಾಗಿ ಬರುತ್ತದೆ. ಆದರೆ, ಹೆಚ್ಚು ಎಣ್ಣೆಯನ್ನು ಕುಡಿಯುತ್ತದೆ. ಅಲ್ಲದೇ ಸ್ವಲ್ಪ ತಣ್ಣಗಾದ ಕೂಡಲೇ ರಬ್ಬರ್ ಮಾದರಿ ಬಜ್ಜಿ ಆಗುತ್ತದೆ.
4. ಇದಕ್ಕೆ ಕೆಲವರು ಜೀರಿಗೆ ಹಾಕುವುದುಂಟು. ಆದರೆ ಅದನ್ನು ಹಾಕಿದರೆ ಸ್ವಲ್ಪ ಕಹಿ ಎನಿಸುತ್ತದೆ.
5. ಹಿಟ್ಟು ಕಲೆಸುವಾಗ ಪೂರಿ ಹಿಟ್ಟಿನಂತೆ ನಾದಬೇಡಿ. ಹಾಗೆ ಮಾಡಿದರೆ ನಾರಾಗುವ ಸಂಭವವೇ ಹೆಚ್ಚು.

 

4 ಟಿಪ್ಪಣಿಗಳು (+add yours?)

 1. ಸಂದೀಪ್ ಕಾಮತ್
  ಡಿಸೆ 26, 2010 @ 23:41:17

  Wrong – ಮಂಗಳೂರು ಬಜ್ಜಿಗೆ ಗೋಳಿ ಬಜೆ ಎಂದೂ ಹೆಸರು.

  Right – ಗೋಳಿಬಜೆಗೆ ಮಂಗಳೂರು ಬಜ್ಜಿ ಅಂತಲೂ ಹೆಸರು 😉

  ಉತ್ತರ

 2. Srivathsa Joshi
  ಡಿಸೆ 25, 2010 @ 16:35:12

  “ಬಜಗೋಳಿ ಮತ್ತು ಗೋಳಿಬಜೆ” ಎಂಬ ಒಂದು ಲಘುಲಹರಿಯನ್ನು (‘ವಿಚಿತ್ರಾನ್ನ’ ಅಂಕಣದಲ್ಲಿ ಈಹಿಂದೆ ಪ್ರಕಟವಾದದ್ದನ್ನು) ಆಸಕ್ತರು ಇಲ್ಲಿ ಓದಬಹುದು. 🙂

  ಉತ್ತರ

 3. apsubrahmanyam
  ಡಿಸೆ 24, 2010 @ 17:08:15

  ಅ೦ದಹಾಗೆ ಇದನ್ನು ತಯಾರಿಸಲು, ಈರುಳ್ಳಿ, ಬೆಳ್ಳುಳ್ಳೀ, ಟೊಮೆಟೋ, ಇತ್ಯಾದಿ ಯಾವುದೇ ದುಬಾರಿ ತರಕಾರಿ ಬೇಕಾಗುವುದಿಲ್ಲ !

  ಉತ್ತರ

 4. P. Bilimale
  ಡಿಸೆ 24, 2010 @ 15:47:33

  ಗೋಳಿ ಬಜೆ ತಿಂದಿ ಲೆಕ್ಕೋ ಅಂಡ್ ಮಾರಾಯ್ರೆ . ಥ್ಯಾಂಕ್ಸ್..

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: