ಮಂಜುನಾಥ್ ಚಾಂದ್ ಬರೆವ ‘ಇವರು ಮೂರ್ತಿ’

-ಮಂಜುನಾಥ್ ಚಾಂದ್

ಇವರು ಮೂರ್ತಿ 5

ದೇವಸ್ಥಾನದಂತಿತ್ತು ಸಿನೆಮಾ ಇಂಡಸ್ಟ್ರೀ…
ಫೋಟೋಗ್ರಫಿ ಡಿಪ್ಲೊಮಾ ಕೋರ್ಸ್ ಮಾಡಿದ ನಂತರವೂ ನನಗೆ ನೇರವಾಗಿ ಸಿನೆಮಾ ಇಂಡಸ್ಟ್ರಿಯೊಳಗೆ ಬಿಡಲಿಲ್ಲ. ಆಗ ಮುಂಬೈನಲ್ಲಿ ಸಿನೆಮಾ ಇಂಡಸ್ಟ್ರೀ ಅಂದ್ರೆ ಭಾರೀ ಕಟ್ಟುನಿಟ್ಟು. ಯಾರನ್ನೂ ಒಳಗೆ ಬಿಡುತ್ತಿರಲಿಲ್ಲ. ಅದು ಒಂದು ದೇವಸ್ಥಾನದ ಥರ. ಒಳಗೆ ಹೋಗಬೇಕಂದರೆ ತುಂಬಾ ಕಷ್ಟ ಇತ್ತು. ಡಿಪ್ಲೊಮಾ ಮಾಡಿದ ನಂತರ ನನಗೆ ಫೋಟೊಗ್ರಫಿ ಪ್ರೊಫೆಸನಲ್ಸ್ ಹತ್ರ ತರಬೇತಿಗೆ ಹಾಕಿದರು.

ಪ್ರಕಾಶ್ ಸ್ಟುಡಿಯೋದಲ್ಲಿ ಪ್ರಾಕ್ಟಿಕಲ್ ಟ್ರೈನಿಂಗ್ ಮಾಡಿದೆ. ಅದೆಲ್ಲ ಆದ ಮೇಲೆ ಬಾಂಬೆಯಿಂದ ವಾಪಾಸ್ ಬರೋಕೆ ಇಷ್ಟ ಇರಲಿಲ್ಲ. ಆದರೆ ಏನು ಮಾಡೋದು ಅಂತ ಚಿಂತೆ. ನನ್ನ ಫ್ರೆಂಡು ಧೈರ್ಯ ತುಂಬಿದ. ಯಾರಾದರೂ ಮಿನಿ ಡೈರೆಕ್ಟರ್ ಬಳಿ ಕರೆದೊಯ್ಯುವೆ ಎಂದ. ವಾಯಲಿನ್ ನುಡಿಸಬಹುದು, ಅದರಿಂದ ದುಡ್ಡು ಬರುತ್ತೆ, ಪ್ರಯತ್ನ ಮಾಡು ಅಂತ ಹೇಳಿದ.

ಮೋಹನ್ ಸೆಹಗಲ್ ಅಂತ ಒಬ್ರು ಫ್ರೆಂಡ್ ಇದ್ರು. ಅವರು ಆಗಿನ ಕಾಲದಲ್ಲಿ ಭರತನಾಟ್ಯಂ ಡ್ಯಾನ್ಸರ್ ಆಗಿದ್ದರು. ನಾನು ವಾಯಲಿನ್ ನುಡಿಸುವುದನ್ನು ನೋಡಿ ಫೆಮಸ್ ಕೊರಿಯೋಗ್ರಾಫರ್ ಉದಯಶಂಕರ್ (ಕಥಕ್ ಶೈಲಿ), ರಾಮಗೋಪಾಲ್ ಅವರಿಗೆ ನನ್ನನ್ನು ಪರಿಚಯ ಮಾಡಿಸಿಕೊಟ್ಟರು, ಇವರು ವಾಯಲಿನ್ ನುಡಿಸ್ತಾರೆ ಅಂತ. ಅವರು ನನ್ನನ್ನ ಮೋಹನ್ ಸೆಹಗಲ್ಗೆ ಪರಿಚಯ ಮಾಡಿಸಿದರು.

ಅವರು ಒಬ್ಬರು ಸಂಗೀತ ನಿರ್ದೇಶಕರಲ್ಲಿ ನನ್ನನ್ನು ಸೇರಿಸಿದರು. ಅವರ ಜೊತೆ ಕೆಲಸ ಮಾಡಿದೆ. ಕೊನೆಗೆ ಅವರು ನನಗೆ ನೂರು ರೂ. ಸಂಭಾವನೆ ಕೊಟ್ಟರು. 100 ರೂ. ಆಗಿನ ಕಾಲದಲ್ಲಿ ಭರ್ಜರಿ ಮೊತ್ತ. ಅದೇ ಸಂಗೀತ ನಿರ್ದೇಶಕರು ದ್ರೋಣಾಚಾರ್ಯ ಅಂತ ಒಬ್ಬರು ಕ್ಯಾಮರಾ ಚೀಫ್ ಅವರಿಗೆ ಪರಿಚಯ ಮಾಡಿಸಿದರು. ಓಹ್ ಯು ಸ್ಟಡೀಡ್ ಕ್ಯಾಮರಾ? ಗುಡ್ ಕಮ್ ಫ್ರಂ ಟುಮಾರೊ ಅಂದರು. ಅವರೇ ನನ್ನ ಕ್ಯಾಮರಾಗೆ ಜೀವ ತುಂಬಿದ ದ್ರೋಣಾಚಾರ್ಯರು.

ಮುಂದುವರೆಯುವುದು…….

ನಿಮ್ಮ ಟಿಪ್ಪಣಿ ಬರೆಯಿರಿ