ಮಲೆಗಳಲ್ಲಿ ಮದುಮಗಳು : ಗಣೇಶ ಎಂಬ ಚೂಟಿ ಹುಡುಗ ಟೈಪ್ ಮಾಡುತ್ತಾ ಹೋದ

ಬಾ ಹುಲಿಕಲ್ ನೆತ್ತಿಗೆ-4

-ಪ್ರೊ. ಶಿವರಾಮಯ್ಯ

ಗಣೇಶ ದರ್ಶನ

ಇಷ್ಟರಲ್ಲಿ ಒಂದು ಸಮಸ್ಯೆ ಉದ್ಭವವಾಯಿತು. ನನಗೂ ಕೃಷ್ಣಪ್ರಸಾದರಿಗೂ ಕಂಪ್ಯೂಟರ್ ಜ್ಞಾನ ಇಲ್ಲ. ಮೂಲಕೃತಿಯ ಸಂಭಾಷಣೆಯನ್ನು ನಾವು ಕೈಬರಹದಲ್ಲಿ ಎತ್ತಿಕೊಂಡಿದ್ದೆವು. ದೃಶ್ಯ ಜೋಡಣೆ ಅರ್ಜೆಂಟಾಗಿ ಕಂಪ್ಯೂಟರ್ ಕಾಪಿ ಬೇಕಾಯಿತು. ಇಲ್ಲವಾದರೆ ಕೆಲಸ ನಿಧಾನಗತಿ ತಾಳುತ್ತಿತ್ತು. ಇದೇ ಸಮಯಕ್ಕೆತುರ್ತು ಕೆಲಸಕ್ಕೆಂದು ಬೆಂಗಳೂರಿಗೆ ಹಿಂದಿರುಗಿದ್ದ ಬೈರೇಗೌಡರಿಗೆ ಒಬ್ಬ ಕಂಪ್ಯೂಟರ್ ಬಲ್ಲಂತ ವ್ಯಕ್ತಿಯನ್ನು ಕರೆದು ತಾ ಎಂದು ಹೇಳಿದೆವು. ಅವರು ಗಣೇಶ ಎಂಬ ಚೂಟಿ ಹುಡುಗನನ್ನು ಜೊತೆಗೇ ಕರೆತಂದು ‘ನಾಳೆ ಬೆಳಿಗ್ಗೆ ಈತನನ್ನು ಕಳುಹಿಸಬೇಕಾಗಿದೆ, ಇಡೀ ರಾತ್ರಿ ನಾವು ಟೈಪ್ ಕೆಲಸ ಮುಗಿಸುತ್ತೇವೆ’ ಎಂದರು.

(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)

ಅದೇ ಪ್ರಕಾರ ಕೆಲಸ ಆರಂಭವಾಯಿತು. ಆತ ನಿದ್ದೆಯಿಲ್ಲದೆ ಕರೆಂಟ್ ಇದ್ದಾಗಲೆಲ್ಲ, ಆ ಸೊಳ್ಳೆ ಕಾಟವನ್ನೂ ಲೆಕ್ಕಿಸದೆ ಟೈಪ್ ಮಾಡುತ್ತಾ ಹೋದ, ಆತನಿಗೆ ನಾವು ಬರೆದುದನ್ನು ಫೀಡ್ ಮಾಡುತ್ತಾ ಹೋದೆವು. ಆತ ಬೆಳಿಗ್ಗೆ ಬೆಂಗಳೂರಿಗೆ ಅರ್ಜೆಂಟ್  ಹೋಗಲೇಬೇಕಾಗಿತ್ತು. ಆ ಕಾರಣ ಕೇಳಿ ನಾವು ಚಕಿತರಾದೆವು. ಯಾಕೆಂದರೆ ಆ ಕಡ್ಡಿ ಫೈಲ್ವಾನ ಇನ್ನೂ ಬ್ಯಾಚುಲರ್ ಹುಡುಗ ಎಂದು ಭಾವಿಸಿದ್ದೆವು. ಆದರೆ ಆತ ಪ್ರೇಮವಿವಾಹವಾಗಿ ಎರಡು ಮಕ್ಕಳ ತಂದೆಯಂತೆ, ಅದೇ ದಿನ ಅವರಿದ್ದ ಮನೆಯಿಂದ ಇನ್ನೊಂದು ಬಾಡಿಗೆ ಮನೆಗೆ ಬದಲಾಯಿಸಬೇಕಾಗಿತ್ತು.

ಈತನಿಲ್ಲದೆ ಮಕ್ಕಳನ್ನು ಕಟ್ಟಿಕೊಂಡು ಅವನ ಹೆಂಡತಿ ಅಲ್ಲಿ ಪರದಾಡುತ್ತಿದ್ದಳಂತೆ ‘ಬಿಡುವ ಮನೆಯವರಿಂದ ಅಡ್ವಾನ್ಸ್ ಹಿಂದೆ ಪಡೆಯಬೇಕು, ಮನೆ ಸಾಮಾನು ವಗೈರೆ ಕಟ್ಟಿ ಟೆಂಪೋ ಹಿಡಿದು ಸಾಗಿಸಬೇಕು. ನಾನೊಬ್ಬಳೆ ಹೇಗೆ ಮಾಡಲಿ?’ ಎಂದಾಕೆ ಗಣೇಶ್ಗೆ ಗಂಟೆಗಂಟೆಗೂ ಫೋನ್ ಮಾಡುತ್ತ ‘ಹೊರಟಿರಾ’ ಎಂದು ಕೇಳುತ್ತಿದ್ದಳು. ಈತ ಒಂದು ಕಿವಿಯಿಂದ ಇನ್ನೊಂದು ಕಿವಿಗೆ ಮೊಬೈಲ್ ಬದಲಿಸುತ್ತಾ ಸವ್ಯಸಾಚಿಯಂತೆ ಎರಡೂಕೈಯನ್ನು ಕಂಪ್ಯೂಟರ್ ಮೇಲೆ ಆಡಿಸುತ್ತ ಇಗೋಬಂದೆ, ಅಗೋ ಬಂದೆ ಎಂದು ಟೈಪ್ ಮಾಡುತ್ತಲೇ ಹೋದ.

ಕಡೆಗೆ ತಡೆಯಲಾರದೆ 4 ಗಂಟೆ ಸುಮಾರಿಗೆ ಲ್ಯಾಪ್ಟ್ಯಾಪ್ ಕೆಳಗಿರಿಸಿ ‘ಇಗೋ ಹೊರಟೆ ಸಾರ್’ ಎಂದು ಎದ್ದುನಿಂತ ವಿನೀತ ಭಾವದಲ್ಲಿ, ಅಷ್ಟರಲ್ಲಿ ಮೂಲ ಸಂಭಾಷಣೆಯ ಭಾಗವನ್ನು ಅಧ್ಯಾಯಗಳ ಪ್ರಕಾರ ಕಂಪ್ಯೂಟರ್ಗೆ ಅಳವಡಿಸುವ ಕೆಲಸ ಮುಗಿದಿತ್ತು. ಅಂತೂ ಗಣೇಶ್ ಬಂದ 24 ಗಂಟೆಗಳೊಳಗಾಗಿ ನಮ್ಮ ಕ್ಯಾಂಪ್ನಿಂದ ಬಿಡುಗಡೆಗೊಂಡು ಹೋದ. ಅವನ ಕೆಲಸದ ಸ್ಪೀಡ್ ನೋಡಿದವರಿಗೆ ವ್ಯಾಸನ ಮಹಾಭಾರತವನ್ನು ಲಿಪಿ ಮಾಡಿದ ಗಣೇಶ ಹೀಗೇ ವರ್ಕ್ ಮಾಡಿದ್ದಿರಬೇಕು ಎನಿಸುತ್ತಿತ್ತು.

ಮುಂದುವರೆಯುವುದು……

4 ಟಿಪ್ಪಣಿಗಳು (+add yours?)

 1. armanikanth
  ಡಿಸೆ 24, 2010 @ 19:03:47

  ee ganesha namma mandya da huduga swaamy…avana saadhaneya kathe ya vistaara doddadide…avanige olleyadaagali…

  ಉತ್ತರ

 2. manju
  ಡಿಸೆ 24, 2010 @ 11:21:39

  ನೀವು, ನಿಮ್ಮ ತಂಡ ಹಾಗೂ ನನ್ನ ನೆಚ್ಚಿನ ಕೆ.ವೈ.ಎನ್. ಎಲ್ಲರೂ ಹೀಗೆ ಕಂಪ್ಯೂಟರ್ ಬಲ್ಲ ಟೈಪಿಸ್ಟ್ ಗಳನ್ನು ಸದಾಕಾಲ ಕಾಡಿಸುತ್ತೀರಿ. ಆದರೆ ನಮಗೆ ಹಾಗೆ ಕೆಲಸ ಮಾಡುವುದೇ ಒಂದು ರೀತಿ ಖುಷಿ ಹೆಮ್ಮೆ. ಗಣೇಶ್ ಗೆ ನಮ್ಮೆಲ್ಲರ ಕರನಮನ.

  -ಮಂಜು

  ಉತ್ತರ

 3. Shiva
  ಡಿಸೆ 23, 2010 @ 12:11:04

  ಈ ಸೀರೀಸ್ ನ ಹಳೆಯ ಲೇಖನಗಳಿಗೆ ಲಿಂಕ್ ಕೊಟ್ಟಿದ್ದರೆ ಚೆನ್ನಾಗಿರುತಿತ್ತು .

  ಉತ್ತರ

 4. SATHYAPRASAD BV
  ಡಿಸೆ 23, 2010 @ 08:55:38

  ಸರ್, ತುಂಬಾ ಸೊಗಸಾಗಿದೆ, ಮಲೆಗಳಲ್ಲಿ ಮದುಮಗಳು ಕಾದಂಬರಿಯ ಒಂದು ಪಾತ್ರವೋ ಇದು ಎಂಬಂತಿದೆ!

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: