ಮಂಜುನಾಥ್ ಚಾಂದ್ ಬರೆವ ‘ಇವರು ಮೂರ್ತಿ’

-ಮಂಜುನಾಥ್ ಚಾಂದ್

ಇವರು ಮೂರ್ತಿ 4

ಒಂದು ತಮಾಷಿ ಹೇಳ್ತೀನಿ ಕೇಳಿ…
ಇನ್ನೊಂದು ತಮಾಷಿ ಸಂಗತಿ ಹೇಳ್ತೀನಿ ನಿಮಗೆ; ನಂಗೆ ಟ್ರಿಗ್ನಾಮೇಟರಿ, ಅಲ್ಜಿಬ್ರಾ ಜೊತೆಗೆ ಕೆಮೆಸ್ಟ್ರೀ ಕೂಡ ಅರಗಿಸಿಕೊಳ್ಳಲು ಆಗುತ್ತಿರಲಿಲ್ಲ. ಪರೀಕ್ಷೆ ಕೂಡ ಬಂತು. ಪ್ರೊಮೋಷನ್ ಕೂಡ ಸಿಗಬೇಕಲ್ಲ? ಪರೀಕ್ಷೆ ಹಿಂದಿನ ದಿನ ಕೆಮೆಸ್ಟ್ರೀ ಪ್ರೊಫೆಸರ್ ಮನೆಗೆ ಹೋದೆ. ಆವಾಗ ನಾನು ಕಾರ್ಯಕ್ರಮಗಳನ್ನು ಮಾಡಿ ಫೇಮಸ್ ಆಗಿದ್ದೆನಲ್ಲ, ಬನ್ನಿ ಬನ್ನಿ ಕೃಷ್ಣಮೂರ್ತಿ ಎಂದು ಕರೆದು ಮಾತಾಡಿಸಿದರು ಪ್ರೋಫೆಸರ್ ಸಾಹೇಬರು.

ಈ ಟ್ರಿಗ್ನಾಮೇಟರಿ, ಅಲ್ಜಿಬ್ರಾ ಜೊತೆ ಕೆಮೆಸ್ಟ್ರೀ ಕೂಡ ಅರ್ಥವಾಗದು ನನಗೆ ಎಂದೆ. ನಾಳೆ ಎಗ್ಸಾಂ ಇದೆ, ಇವತ್ತು ಬಂದಿದ್ದೀರಲ್ಲಾ, ಏನು ಮಾಡ್ಲಿಕಾಗತ್ತೆ ಹೇಳಿ? ಅಂದರು. ಏನೂ ಇಲ್ಲ ನೀವು ಇದರಿಂದ ನನ್ನ ಪಾರು ಮಾಡಬೇಕಾದರೆ ನಾಳಿನ ಎಗ್ಸಾಂನ ಕ್ವಶ್ಚನ್ ಎಲ್ಲ ಕೊಟ್ಟುಬಿಡಿ ಅಂದೆ. ಅದಕ್ಕೆ ಅಯ್ಯೋ ಅದ್ಹಾಗೆ ಆಗತ್ತೆ? ಅಂದ್ರು. ನಾನು, ಈ ಫೋಟೋಗ್ರಫಿಗೂ ಕೆಮೆಸ್ಟ್ರೀಗೂ ಏನು ಸಂಬಂಧ? ಕಲ್ತು ಏನು ಪ್ರಯೋಜನ ಅಂತೆಲ್ಲ ವಾದ ಮಾಡಿದೆ. ‘ನೀನು ನನ್ನನ್ನಆಕ್ವರ್ಡ್ ಪೊಸಿಶನ್ನಲ್ಲಿ ಸಿಕ್ಕಿ ಹಾಕ್ಸಿತ್ತಿದ್ದಿಯಾ’ ಅಂದ್ರು. ನಿಮಗೆಂಥ ಆಕ್ವರ್ಡ್, ನನಗೆ ಆಗಿರೋದು ಆಕ್ವರ್ಡ್ ಅಂದೆ. ಅವರು ನನ್ನನ್ನು ಮನೆಯೊಳಗೆ ಕರಕೊಂಡು ಹೋಗಿ ನಾಳೆ ಪರೀಕ್ಷೆಗೆ ಬರುವ ಎಲ್ಲ ಪ್ರಶ್ನೆಗಳನ್ನು ಕೊಟ್ಟರು!!

ಆದ್ರೆ ನಂಗೆ ಉತ್ತರಗಳು ಬರಬೇಕಲ್ಲ? ನಾನು ಕೂಡ್ಲೆ ರಾತ್ರಿ ಬಿಎಸ್ಸಿ ಓದ್ತಾ ಇರೋ ನನ್ನ ಫ್ರೆಂಡ್ ಬಳಿ ಹೋಗಿ ಎಲ್ಲ ಪ್ರಶ್ನೆಗಳಿಗೆ ಆನ್ಸರ್ ಬರೆದುಕೊಂಡು ಬಂದು ಬೆಳಗಿನ ಜಾವ ಎರಡು ಗಂಟೆ ತನಕ ಆನ್ಸರ್ಗಳನ್ನು ಪದ್ಯದ ರೀತಿಯಲ್ಲಿ ಉರು ಹೊಡೆದೆ. ಇನ್ನು ನನ್ನ ಕೆಲವು ಕ್ಲೋಸ್ ಫ್ರೆಂಡ್ಸ್ ಗಳನ್ನು ಕರೆದು, ಬಡ್ಡಿ ಮಕ್ಕಳ್ರಾ ನೋಡ್ಕೊಳ್ಳಿ ಇದು ಕ್ವಶ್ಚನ್ ಪೇಪರ್ ಅಂತ ಅವರಿಗೂ ತೋರಿಸಿ ಹೆಲ್ಪ್ ಮಾಡಿದ್ದೆ. ಹೀಗೆ ಮಾಡಿ ಫಸ್ಟ್ ಈಯರ್ ಪಾಸ್ ಮಾಡ್ಕೊಂಡೆ.

ಇಂಗ್ಲಿಷ್ ಸಿನೆಮಾ ಅಂದ್ರೆ ಪ್ರಾಣ…

ಶಾಲೆಗೆ ಹೋಗೋವಾಗ ತುಂಬಾ ಫಿಲಮ್ ನೋಡ್ತಾ ಇದ್ದೆ. ಅವುಗಳನ್ನು ನೋಡಿ ನೋಡಿಯೇ ಈ ಸಿನೆಮಾ ರಂಗದತ್ತ ಆಕರ್ಷಿತನಾಗಿದ್ದೆ. ಕನ್ನಡ ಸಿನೆಮಾಗಳ ಬಗ್ಗೆ ಅಷ್ಟೊಂದು ನೆನಪಿಲ್ಲ. ಆಗ ಯಾರ್ಯಾರೋ ನಾಯಕರುಗಳಿದ್ದರು. ಆದರೆ, ನನ್ನ ಹೆಚ್ಚಿನ ಆಕರ್ಷಣೆ ಅಂತ ಇದ್ದಿದ್ದು ಇಂಗ್ಲಿಷ್ ಸಿನೆಮಾಗಳತ್ತ. ಜಾನಿ ರೇಸ್ಮುಲ್ಲರ್ ಅಂತ ಒಬ್ಬರು ಟಾರ್ಜಾನ್ ರೋಲ್ ಮಾಡ್ತಾ ಇದ್ದರು. ಆಗಿನ ಕಾಲದಲ್ಲಿ ಹೀ ವಾಸ್ ದಿ ಫಸ್ಟ್ ಟಾರ್ಜಾನ್. ನಮ್ಮ ಏಜ್ನಲ್ಲಿ ಟಾರ್ಜಾನ್ ಥರದ ಆ್ಯಕ್ಷನ್ ಸಿನೆಮಾಗಳು ಬರುತ್ತಿದ್ದವು. ಎಷ್ಟೋ ಜನ ವರ್ಲ್ಡ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಚಾಂಪಿಯನ್ ಆದ ಅಥ್ಲೀಟ್ ಗಳು ಇದರಲ್ಲಿ ಮೇಜರ್ ರೋಲ್ ಮಾಡ್ತಾ ಇದ್ದರು. ಮತ್ತೆ ಹಾರ್ಸ್ ರೈಡಿಂಗ್, ಕೌಬಾಯ್ ಫಿಲ್ಮ್ ಗಳನ್ನೇ ನಾನು ಜಾಸ್ತಿ ನೋಡ್ತಿದ್ದೆ.

ಸಿನೆಮಾದಲ್ಲಿ ನಾಯಕನಾಗಲಾಗಲೀ, ಯಾವುದೇ ಪಾತ್ರ ಮಾಡಲು ಸಾಧ್ಯವಾಗದೇ ಇದ್ದುದರಿಂದ ಟೆಕ್ನಿಕಲ್ ಸೈಡ್ ಹೊರಟು ಹೋಗಿದ್ದೆ. ಈ ಮೋಹಕ್ಕೆ ಬಿದ್ದೇ ನಾನು ಕದ್ದು ಮುಚ್ಚಿ ಬಾಂಬೆಗೆ ಹೋರಟು ಬಿಟ್ಟಿದ್ದೆ. ಅಲ್ಲಿನ ಸ್ಟುಡಿಯೋಗೆ ಹೋದರೆ ನನ್ನ ಗೇಟ್ ಒಳಗೂ ಸೇರಿಸುತ್ತಿರಲಿಲ್ಲ. ನಾನು ಹಾಫ್ ಪ್ಯಾಂಟ್, ಪೈಜಾಮಾ ಹಾಕ್ಕೊಂಡಿದ್ರೆ ಯಾರು ಬಿಡ್ತಾರೆ ನನ್ನ? ಆವಾಗಿನ್ನೂ ನಾನು ಎಸ್ಸೆಸ್ಸೆಲ್ಸಿ ಮಾಡಿರಲಿಲ್ಲ. ಮತ್ತೆ ವಾಪಾಸು ಬಂದು ಫೋಟೋಗ್ರಫಿ ಕೋರ್ಸ್ ಮಾಡಿದೆ ಆ ಮಾತು ಬೇರೆ.

ಮುಂದುವರೆಯುವುದು……

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: